
ದೇಶದಲ್ಲಿ ಕ್ರಿಕೆಟ್ ಬಿಟ್ಟು ಉಳಿದ ಕ್ರೀಡೆಗಳು ಉಸಿರಾಡುತ್ತದೆ ಅಂತಾ ಬಹಳ ಮಂದಿಗೆ ತೋರಿಸುವ ಯತ್ನ ಚಿತ್ರ ನಿರ್ದೇಶಕ ಟಿಂಗ್‌ಮಾನ್‌ಸೋ ದೌಲಿಯಾ ಮಾಡಲು ಹೋಗಿದ್ದು ಬಹಳ ಹಳೆಯ ಹಿಸ್ಟರಿ. ಈಗ ಅವರು ಓಡುವ ಚಿತ್ರವೊಂದನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.
ಬಾಲಿವುಡ್‌ನ ಬುದ್ದಿವಂತ ನಿರ್ದೇಶಕರು ‘ಲಗಾನ್’ ಮೂಲಕ ಕ್ರಿಕೆಟ್‌ನ್ನು ಟಚ್ ಮಾಡಿದರು. ‘ಚಕ್ ದೇ ಇಂಡಿಯಾ’ ಮೂಲಕ ಸೈಡ್‌ಗೆ ಹೋಗಿದ್ದ ಮಹಿಳೆಯರ ‘ಹಾಕಿ’ಗೂ ಬಲ ಕೊಟ್ಟರು. ಈಗ ಅಥ್ಲೀಟ್ ಕ್ಷೇತ್ರದಲ್ಲೂ ಸಿನ್ಮಾ ಒಂದು ಸೈಲೆಂಟ್ ಆಗಿ ಬರುತ್ತಿದೆ. ಅಂದಹಾಗೆ ಕಳೆದ ಎರಡು ವರ್ಷಗಳಿಂದ ಈ ಸಿನ್ಮಾ ತಯಾರಿ ಯಾರಿಗೂ ಗೊತ್ತಿಲ್ಲದೇ ನಡೆಯುತ್ತಿತ್ತು. ಭಾರತೀಯ ಅಥ್ಲೀಟ್ ರಂಗದಲ್ಲಿ ಇದೊಂದು ಬಹಳ ಗಂಭೀರವಾದ ಚಿತ್ರವಾಗಲಿದೆ. ಜತೆಗೆ ಅಥ್ಲೀಟ್‌ನಲ್ಲಿ ಯಾಕೆ ಭಾರತದ ಹಿಂದೆ ಉಳಿದುಕೊಂಡಿದೆ ಎಂಬುವುದರ ರಹಸ್ಯವನ್ನು ಭೇದಿಸುವ ಪ್ರಯತ್ನ ಇದಾಗಲಿದೆ ಎನ್ನೋದು ಚಿತ್ರದ ನಿರ್ದೇಶಕ ಟಿಂಗ್‌ಮಾನ್‌ಸೋ ದೌಲಿಯಾ ಅವರ ಬಲವಾದ ನಂಬಿಕೆ.
ಅಂದಹಾಗೆ ‘ಪಾನ್ ಸಿಂಗ್ ತೋಮರ್’ ಅಂತಾ ಚಿತ್ರದ ಹೆಸರು. ಇಲ್ಲಿ ಒಬ್ಬ ಸೈನಿಕ ತನ್ನ ವೃತ್ತಿಗೆ ಸೈನ್ ಔಟ್ ಕೊಟ್ಟು ನಂತರ ಅಥ್ಲೀಟ್ ರಂಗವನ್ನು ಪ್ರವೇಶ ಮಾಡುವುದು ಇಡೀ ಚಿತ್ರದ ಮುಖ್ಯ ಬೇಸ್ ಪಾಯಿಂಟ್. ಖ್ಯಾತ ನಟ ಇರ್ಫಾನ್ ಖಾನ್ ಈ ಸೈನಿಕ ಹಾಗೂ ಅಥ್ಲೀಟ್ ಇಬ್ಬರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಧ್ಯಪ್ರದೇಶದ ಸಣ್ಣ ಹಳ್ಳಿಯಲ್ಲಿ ಬೆಳೆದು ಏಳು ವರ್ಷಗಳಿಂದ ನಿರಂತರವಾಗಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಪಾನ್ ಸಿಂಗ್ ತೋಮರ್ ಎಂಬ ಕ್ರೀಡಾಪಟುವಿನ ಮೇಲೆ ಈ ಚಿತ್ರ ಬರಲಿದೆ. ಈಗಲೂ ಭಾರತದ ಅಥ್ಲೀಟ್ ರಂಗದಲ್ಲಿ ಪಾನ್‌ಸಿಂಗ್ ತೋಮರ್‌ರ ಸಾಧನೆ ಮುಟ್ಟಲು ಕೂಡ ಸಾಧ್ಯವಾಗಿಲ್ಲವಂತೆ..!!
ಅಥ್ಲೀಟ್‌ನಿಂದ ಪಾನ್ ಸಿಂಗ್ ತೋಮರ್ ಭಾರತದ ಸೈನ್ಯಕ್ಕೆ ಸೆಲೆಕ್ಟ್ ಆಗುತ್ತಾನೆ. ಅಲ್ಲಿಂದ ನಿವೃತ್ತಿಯಾಗುತ್ತಾ ತನ್ನ ಊರಿಗೆ ಮರಳುತ್ತಾನೆ. ಅಲ್ಲಿನ ಅನ್ಯಾಯವನ್ನು ಗಮನಿಸುತ್ತಾ ಪಾನ್‌ಸಿಂಗ್ ಚಂಬಲ್ ಕಣಿವೆ ದರೋಡೆಕೋರರ ಜತೆಯಲ್ಲಿ ಸೇರಿಕೊಳ್ಳುತ್ತಾನೆ. ಮುಂದೆ ಪೊಲೀಸ್ ಶೂಟ್ ಔಟ್‌ನಲ್ಲಿ ಕೊನೆಯುಸಿರು ಎಳೆಯುತ್ತಾನೆ. ಇದು ಪಾನ್ ಸಿಂಗ್ ತೋಮರ್‌ನ ಟೂ ಒರಿಜಿನಾಲ್ ಸ್ಟೋರಿ ಈಗ ಚಿತ್ರದ ಮೂಲಕ ಬೆಳ್ಳಿ ತೆರೆಗೂ ಅಪ್ಪಳಿಸಲಿದೆ. ಈ ಚಿತ್ರವನ್ನು ಬಾಲಿವುಡ್‌ನ ಬಿಗ್ ಬ್ಯಾನರ್ ಯುಟಿವಿ ಪಿಕ್ಚರ್ ತೆರೆಗೆ ತರುವ ಸಾಹಸ ಮಾಡುತ್ತಿದೆ.
ನಿರ್ದೇಶಕನ ಕಣ್ಣಿನಿಂದ..
ಭಾರತದಲ್ಲಿ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳ ಜತೆಯಲ್ಲಿ ಅಥ್ಲೀಟ್ ಕ್ಷೇತ್ರನೂ ಇದೆ ಅಂತಾ ಗೊತ್ತಾಗುತ್ತಿಲ್ಲ. ಅಥ್ಲೀಟ್ ಕ್ಷೇತ್ರದಲ್ಲಿ ಇಂದಿಗೂ ಯಾವುದೇ ಬದಲಾವಣೆಗಳು ಆಗಿಲ್ಲ. ನಾವು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಯಾಕೆ ಹೊಡೆಯುತ್ತಿಲ್ಲ ಎಂದರೆ ಈ ಕ್ಷೇತ್ರದಲ್ಲಿ ನಮ್ಮ ಕಳಪೆ ಗುಣಮಟ್ಟ. ಈ ವಿಚಾರದ ಜತೆಯಲ್ಲಿ ಪಾನ್ ಸಿಂಗ್ ತೋಮರ್ ಎಂಬ ಕ್ರೀಡಾಪಟುವನ್ನು ಹೈಲೇಟ್ ಮಾಡುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ಟಿಂಗ್‌ಮಾನ್‌ಸೋ ದೌಲಿಯಾ ಹೇಳುತ್ತಾರೆ.
ಈ ಚಿತ್ರ ಬಹಳಷ್ಟು ಜನರಿಗೆ ಪ್ರೇರಣೆ ನೀಡಲಿದೆ. ಭಾರತೀಯ ಸಿನಿಮಾ ರಂಗದಲ್ಲಿ ಬಂದ ಕ್ರೀಡಾ ಚಿತ್ರಗಳಿಗಿಂತ ಸಂಪೂರ್ಣ ಭಿನ್ನವಾದ ಕತೆಯನ್ನು ಹೊಂದಿದೆ. ಅಥ್ಲೀಟ್‌ಗಳಿಗೆ ಇಲ್ಲೊಂದು ಒಳ್ಳೆಯ ಮೆಸೇಜ್ ಕೂಡ ಇಟ್ಟಿರುವುದು ನಿಜಕ್ಕೂ ಸಕ್ಸಸ್ ಪಾಯಿಂಟ್ ರೀಚ್ ಆಗುತ್ತದೆ ಎನ್ನುವ ನಂಬಿಕೆ ನನ್ನದು ಎನ್ನುವುದು ನಿರ್ದೇಶಕರ ಮಾತು.
ಈ ಚಿತ್ರವನ್ನು ಉತ್ತರಖಂಡದ ಕಾಡುಗಳಲ್ಲಿ ಹಾಗೂ ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿ ಶೂಟ್ ಮಾಡಿದ್ದೇವೆ. ೨೦೦೮ರ ಡಿಸೆಂಬರ್‌ನಲ್ಲಿ ಚಿತ್ರವನ್ನು ಆರಂಭ ಮಾಡಿಕೊಂಡಿದ್ದೇವು, ಆಗಸ್ಟ್ ತಿಂಗಳ ಅಂತ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಕುರಿತು ಮಾತುಕತೆ ನಡೆದಿದೆ. ಖ್ಯಾತ ದೂರ ಓಟಗಾರ ಹಾಗೂ ನ್ಯಾಷನಲ್ ಅಥ್ಲೀಟ್ ಕೋಚ್ ಸತ್ಪಾಲ್ ಸಿಂಗ್ ಇರ್ಫಾನ್ ಖಾನ್‌ರಿಗೆ ಓಡುವ ಕುರಿತು ತರಬೇತಿ ನೀಡಿದ್ದಾರೆ. ಎರಡು ಮೂರು ದೃಶ್ಯಗಳಲ್ಲಿ ಸಿಂಗ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಚಂಬಲ್ ಕಣಿವೆಯಲ್ಲಿ ಶೂಟ್ ಆದ ಇದು ಸೆಕೆಂಡ್ ಚಿತ್ರ ಅಂತ ನೆನಪಿರಲಿ. ಮೊದಲ ಚಿತ್ರ ಶೇಖರ್ ಕಪೂರ್‌ರ ‘ಬ್ಯಾಂಡಿಟ್ ಕ್ವೀನ್’ ಬಾಕ್ಸಾಫೀಸ್‌ನಲ್ಲಿ ಹಣದ ಮಳೆಯನ್ನು ತಂದಿತ್ತು.
No comments:
Post a Comment