Wednesday, April 27, 2011

ಕಾಲಿವುಡ್ನಲ್ಲಿ ಬೇಸಿಗೆ ಧಮಾಕಾ





ವಿಶ್ವಕಪ್ ಮುಗಿಯುತ್ತಿದ್ದಂತೆ ಟ್ವೆಂಟಿ೨೦ ಕ್ರಿಕೆಟ್ ಆರಂಭವಾಗಿದೆ. ಆದರೆ ಐಪಿಎಲ್ ಬಗ್ಗೆ ತಮಿಳುಚಿತ್ರೋದ್ಯಮಕ್ಕೆ ಹೆಚ್ಚಿನ ಭೀತಿಯಿದ್ದಂತಿಲ್ಲ. ಹಾಗಾಗಿ ಬೇಸಿಗೆಗೆ ತೆರೆಕಾಣಲು ಪ್ರಮುಖ ಸಿನಿಮಾಗಳುಸಿಂಗಾರಗೊಳ್ಳುತ್ತಿವೆ. ವರ್ಲ್ಡ್ಕಪ್ನಿಂದ ಕಾಲಿವುಡ್ಗೆ ದೊಡ್ಡಮಟ್ಟದ ಹಾನಿಯಂತೂ ಆಗಿದೆ. ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಸುಮಾರು ೨೫ ಚಿತ್ರಗಳು ತೆರೆಕಂಡಿದ್ದವು. ಇವುಗಳಲ್ಲಿ ಬಂಡವಾಳ ವಾಪಸಾಗಿರುವುದು ಎರಡು ಚಿತ್ರಗಳಿಗಷ್ಟೇ. ಸಿಂಗಲ್ ಸ್ಕ್ರೀನ್ಗಳಲ್ಲಿ (ಥಿಯೇಟರ್) ಶೇ.೧೫ರಿಂದ ೨೫ ರಷ್ಟು ಕಲೆಕ್ಷನ್ ಆಗಿದೆ. ಚೆನ್ನೈನ ಮಲ್ಟಿಪ್ಲೆಕ್ಸ್ಗಳ ಗಳಿಕೆ ಪರವಾಗಿಲ್ಲ. ಅಲ್ಲಿ ಶೇ.೫೦ರಷ್ಟು ಖುರ್ಚಿಗಳು ಭರ್ತಿಯಾಗಿದ್ದವಂತೆ. ಅಲ್ಲಿನ ಸಿನಿಮಾ ಪಂಡಿತರ ಪ್ರಕಾರ ಚಿತ್ರಗಳ ನೀರಸ ಗಳಿಕೆಗೆ ಕ್ರಿಕೆಟ್ ಒಂದೇ ಕಾರಣವಲ್ಲ. ಶಾಲಾ ಪರೀಕ್ಷೆಗಳ ಭೀತಿಯನ್ನೂ
ಎದುರಿಸಬೇಕಾಗಿತ್ತು. ಅದಕ್ಕಿಂತ ಹೆಚ್ಚಾಗಿ ಸಿನಿಮಾಗಳ ಕಳಪೆ ವಸ್ತು, ಗುಣಮಟ್ಟ ಕೂಡ ಪ್ರಮುಖ ಕಾರಣ. ‘ಜನರು ಇಂದು ತಾವು ನೋಡಬೇಕಾದ ಸಿನಿಮಾಗಳ ಆಯ್ಕೆಯಲ್ಲಿ ಅತಿಯಾದ ಎಚ್ಚರಿಕೆ ವಹಿಸುತ್ತಿದ್ದಾರೆ. ಕಳೆದೆರಡು ತಿಂಗಳಲ್ಲಿ ತೆರೆಕಂಡ ಚಿತ್ರಗಳ ಗುಣಮಟ್ಟ ಶೋಚನೀಯವಾಗಿತ್ತು’ ಎಂದು ವಿಶ್ಲೇಷಕರುವಾದ ಮಂಡಿಸುತ್ತಾರೆ.
ಬೇಸಿಗೆ ಸೀಸನ್ನ ಮೊದಲ ಚಿತ್ರವಾಗಿ ‘ಮಾಪಿಳ್ಳೈ’ ತೆರೆಕಂಡಿತ್ತು. ಧನುಷ್ ಮತ್ತು ಹನ್ಸಿಕಾ ಮೋಟ್ವಾನಿ ಅಭಿನಯದ ಈ ಚಿತ್ರ ಗೆಲುವಿನ ಹಾದಿಯಲ್ಲಿದೆ. ೧೯೮೯ರಲ್ಲಿ ಇದೇ ಶೀರ್ಷಿಕೆಯಡಿ ತೆರೆಕಂಡ ರಜನೀಕಾಂತ್ರ ಸೂಪರ್ಹಿಟ್ ಚಿತ್ರದ ರಿಮೇಕಿದು. ‘ಬೇಸಿಗೆಗೆ ಅತ್ಯಂತ ಸೂಕ್ತ ಚಿತ್ರವಿದು. ಕಾಮಿಡಿ, ಆಕ್ಷನ್, ಮ್ಯೂಸಿಕಲ್ ಪ್ಯಾಕೇಜ್ನ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕುಟುಂಬದ ಎಲ್ಲರಿಗೂ ಇಷ್ಟವಾಗುವ ಕಥಾವಸ್ತು’ ಎನ್ನುತ್ತಾರೆ ಧನುಷ್. ಇನ್ನು ಕೆ.ವಿ.ಆನಂದ್ ನಿರ್ದೇಶನದಲ್ಲಿ ಜೀವಾ ನಟಿಸಿರುವ ‘ಕೋ’ ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಅದ್ದೂರಿ ವೆಚ್ಚದಲ್ಲಿ ನಿರ್ಮಿಸಿರುವ ರಾಜಕೀಯ ಥ್ರಿಲ್ಲರ್ ಇದು. ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜನೆ ಚಿತ್ರದ ಹೈಲೈಟ್. ದೊಡ್ಡ ಪ್ರಯೋಗಗಳ ಮಧ್ಯೆ ಗಮನ ಸೆಳೆದಿರುವ ಸಿನಿಮಾ - ಅಝ್ಗರ್ಸಮಿಯಿನ್ ಕುಥಿರೈ. ಇಳೆಯರಾಜಾ ಸಂಗೀತ ಸಂಯೋಜನೆಯ ಚಿತ್ರದ ಬಗ್ಗೆ ಉದ್ಯಮದಲ್ಲಿ ಒಳ್ಳೆಯ ‘ಟಾಕ್’ ಇದೆ. ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ಗಳು ಸಿನಿರಸಿಕರಲ್ಲಿ ಕುತೂಹಲ ಕೆರಳಿಸಿವೆ. ಪ್ರಾಥಮಿಕ ಮಾಹಿತಿ ಹೇಳುವಂತೆ ಇದೊಂದು ‘ಅಸಾಂಪ್ರದಾಯಕ ಲವ್ಸ್ಟೋರಿ’. ‘ಮೈನಾ’, ‘ಕಲವಾಣಿ’ ಚಿತ್ರಗಳಂತೆ ಇದು ಕೂಡ ಉದ್ಯಮದಲ್ಲಿ ಸಂಚಲನ ಉಂಟುಮಾಡುವ ನಿರೀಕ್ಷೆಯಿದೆ. ಡ್ಯಾನ್ಸ್ ಮಾಸ್ಟರ್ ಪ್ರಭುದೇವಾ ನಿರ್ದೇಶನದ ರೊಮ್ಯಾಂಟಿಕ್
ಸಿನಿಮಾ ‘ಎಂಗಿಯಂ ಕಾದಲ್’ ಮತ್ತೊಂದು ಭರವಸೆಯ ಚಿತ್ರ. ಜಯಂ ರವಿ ಮತ್ತು ಹನ್ಸಿಕಾ ಅಭಿನಯದ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಥಿಯೇಟರ್ಗೆ ಬರಲಿದೆ. ಹ್ಯಾರಿಸ್ ಸಂಯೋಜನೆಯ ಸಂಗೀತ ಕ್ಲಿಕ್ಕಾಗಿರುವುದು ಚಿತ್ರಕ್ಕೆ ಶ್ರೀರಕ್ಷೆ. ‘ಕುಟುಂಬದ ಎಲ್ಲರಿಗೂ ಮನರಂಜನೆ ಒದಗಿಸುವಂಥ ಪ್ರಯೋಗ. ಅದಕ್ಕಿಂತ ಹೆಚ್ಚಿನದಾಗಿ ಪ್ರೇಕ್ಷಕರನ್ನು ಹಿಡಿದಿಡುವಂಥ ಕಥಾಹಂದರವಿದೆ’ ಎನ್ನುತ್ತಾರೆ ಪ್ರಭು.
ಮೇ ತಿಂಗಳ ದೊಡ್ಡ ಸಿನಿಮಾ - ವಾನಂ. ಸಿಂಬು ನಟಿಸಿರುವ ಈ ಚಿತ್ರ ತೆಲುಗು ಸೂಪರ್ಹಿಟ್ ‘ವೇದಂ’ ರಿಮೇಕ್. ಬಾಲಾ ನಿರ್ದೇಶನದ ‘ಅವನ್ ಇವನ್’ ಚಿತ್ರವನ್ನೂ ಕಡೆಗಣಿಸುವಂತಿಲ್ಲ.ಆರ್ಯ ಮತ್ತು ವಿಶಾಲ್ ಇಲ್ಲಿ ಅಪರೂಪದ ಪಾತ್ರಗಳಲ್ಲಿ
ನಟಿಸಿದ್ದಾರೆ. ದೊಡ್ಡ ಸಿನಿಮಾಗಳೊಂದಿಗೆ ಭಿನ್ನ ಕಥಾವಸ್ತು ಹೊಂದಿರುವ ಯುವ ನಿರ್ದೇಶಕರೂ ಸ್ಪರ್ಧೆಯಲ್ಲಿದ್ದಾರೆ. ಸೆಮಿಫೈನಲ್ ಹಂತದಲ್ಲಿ ಐಪಿಎಲ್ ಕ್ರಿಕೆಟ್ ಕೂಡ ಸಿನಿಮಾಗೆ ಪೈಪೋಟಿ ನೀಡಲಿದೆ. ಆಗ ಗಟ್ಟಿ ಕಥೆ, ನಿರೂಪಣೆಯ ಚಿತ್ರಗಳಷ್ಟೇ
ಥಿಯೇಟರ್ನಲ್ಲಿ ಉಳಿಯುವುದು.

ಕ್ಲಿಕ್ ಆಗುತ್ತಾ ದೈವ ತಿರುಮಗನ್
ಈ ಬೇಸಿಗೆಯ ಭರವಸೆಯ ಚಿತ್ರಗಳಲ್ಲಿ ‘ದೈವ ತಿರುಮಗನ್’ ಪ್ರಮುಖವಾದುದು. ವಿಕ್ರಂ ಅಭಿನಯದ ಚಿತ್ರ ಮೇ ತಿಂಗಳಿನಲ್ಲಿ ತೆರೆಕಾಣಲಿದೆ. ‘ಮದ್ರಾಸಿಪಟ್ಟಣಂ’ (೨೦೧೦) ಖ್ಯಾತಿಯ ಎ.ಎಲ್.ವಿಜಯ್ ನಿರ್ದೇಶನದ ಪ್ರಯೋಗ. ಚಿತ್ರಕ್ಕೆ ಸಂಬಂ ಸಿದ ಎಲ್ಲಾ ಮಾಹಿತಿಯನ್ನೂ ಗೌಪ್ಯವಾಗಿಡಲಾಗಿತ್ತು. ಚಿತ್ರದ ಶೀರ್ಷಿಕೆ ಅಂತಿಮವಾಗಿದ್ದು ಕೂಡ ತೀರಾ ಇತ್ತೀಚೆಗೆ. ದೈವ ಮಗನ್, ಪಿತಾ, ಚೆಲ್ಲಂ, ಅಪ್ಪ.. ಹೀಗೆ ಏಳೆಂಟು ಶೀರ್ಷಿಕೆಗಳ ಪೈಕಿ ಅಂತಿಮವಾಗಿ ‘ದೈವ ತಿರುಮಗನ್’ ಆಯ್ಕೆಯಾಗಿದೆ. ನಿರ್ದೇಶಕ ವಿಜಯ್ ತಮ್ಮ ಚಿತ್ರದ ಕುರಿತಾಗಿ ಹೇಳುವುದು ಹೀಗೆ - ‘ವಿಕ್ರಂಪಾತ್ರದ ಹೆಸರು ಕೃಷ್ಣ. ಅವನು ದೇವರ ಮಗ. ಪ್ರೀತಿಯಿಂದ ಎಲ್ಲರೂ ‘ಚೆಲ್ಲ ಕುಟ್ಟಿಕೃಷ್ಣನ್’ ಎಂದೇ ಕರೆಯುತ್ತಾರೆ. ದೈಹಿಕಬೆಳವಣಿಗೆ ಸಮರ್ಪಕವಾಗಿದ್ದರೂ, ಮಾನಸಿ
ಕವಾಗಿ ಆತನಿನ್ನೂ ೫ ವರ್ಷದ ಬಾಲಕ. ಕಪಟ, ಮೋಸ ಅರಿಯದ ಮುಗ್ದ ಮನಸ್ಸಿನ ಕೃಷ್ಣ ದೇವರೊಂದಿಗೂ ಸಂಭಾಷಿಸುತ್ತಾನೆ’ ಜಿ.ವಿ.ಪ್ರಕಾಶ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ನಾಯಕ ವಿಕ್ರಂ ಹಾಡೊಂದಕ್ಕೆ ದನಿಯಾಗಿದ್ದಾರೆ. ಇದು ತಮ್ಮ ವೃತ್ತಿ ಜೀವನಕ್ಕೊಂದು ತಿರುವು ನೀಡಲಿ ದೆ ಎಂದು ವಿಕ್ರಂ ಹೇಳಿಕೊಳ್ಳುತ್ತಾರೆ. ‘ಚಿತ್ರತಂಡದ ಸೂಕ್ತ ನೆರವು ಇದ್ದುದರಿಂದ ಇಂಥದ್ದೊಂದು ಪಾತ್ರ ನಿರ್ವಹಿಸಲು ಸಾಧ್ಯವಾಯ್ತು. ಹಿರಿಯ ನಟ ಭಾಸ್ಕರ್ ಶ್ರೇಷ್ಠ ಅಭಿನಯ ನೀಡಿದ್ದಾರೆ. ನಾಯಕಿಯರಾದ
ಅನುಷ್ಕಾ ಮತ್ತು ಅಮಲಾ ಪೌಲ್ರಿಗೆ ಚಿತ್ರ ಹೊಸದೊಂದು ಇಮೇಜು ಸೃಷ್ಟಿಸಲಿದೆ’ ಎನ್ನುವುದು ವಿಕ್ರಂ ಅಭಿಪ್ರಾಯ. ಹಿಂದೆ ‘ಪಿತಾಮಗನ್’ನಲ್ಲಿ ವಿಶಿಷ್ಠ ಪಾತ್ರ ನಿಭಾಯಿಸಿ ಸೈ ಎನಿಸಿಕೊಂಡವರು ವಿಕ್ರಂ. ಈಗ ಅವರ ಅಭಿಮಾನಿಗಳು ‘ದೈವ
ತಿರುಮಗನ್’ ಎದುರು ನೋಡುತ್ತಿದ್ದಾರೆ.

No comments:

Post a Comment