
ಸಿನ್ಮಾಗಳ ಮೇಲೆ ಸಿನ್ಮಾ ನಿರ್ದೇಶಕರು ಶೋಭನಾರ ಕಾಲ್‌ಶೀಟ್‌ಗಾಗಿ ದುಂಬಾಲು ಬಿದ್ದಾಗಲೂ ಬಹಳಷ್ಟು ಚ್ಯುಸಿಯಾಗಿ ಚಿತ್ರಗಳನ್ನು ಆಯ್ಕೆಮಾಡಿಕೊಂಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡವರು. ಅದು ದಕ್ಷಿಣ ಭಾರತದ ಖ್ಯಾತ ನಟಿ ಶೋಭನಾ ಮೇಡಂರ ತಾಕತ್ತು. ಗಟ್ಟಿಯಾಗಿ ಹೇಳುವುದಾದರೆ ಅದೊಂದು ನಾಟ್ಯ ಕ್ಷೇತ್ರದ ಅಮೂಲ್ಯ ಆಸ್ತಿ.
ಅದು ಬರಿಯ ಹೆಸರಲ್ಲ. ಹಿರಿತೆರೆಯಲ್ಲಿ ನೋಡಿ ಮರೆತು ಬಿಡುವ ಮುಖನೂ ಅಲ್ಲ. ಬಣ್ಣದ ಲೋಕದಲ್ಲಿ ಚಾನ್ಸ್ ಇಲ್ಲ ಎಂದು ಮೂಲೆಗೆ ಸೇರಿ ಬಿಡುವ ನಾಯಕಿಯರನ್ನು ಬಹಳಷ್ಟು ಕಾಣಬಹುದು. ಆದರೆ ದಕ್ಷಿಣ ಭಾರತದ ನಾಯಕಿಯರ ರ್‍ಯಾಕಿಂಗ್ ಪಟ್ಟಿಯಲ್ಲಿ ನಟಿ ಶೋಭನಾ ನಂಬರ್ ವನ್ ಇದ್ದಾಗಲೇ ಭರತನಾಟ್ಯದ ಮೇಲೆ ಮನಸು ಮಾಡಿದವರು. ಸಿನ್ಮಾಗಳ ಮೇಲೆ ಸಿನ್ಮಾ ನಿರ್ದೇಶಕರು ಅವರ ಕಾಲ್‌ಶೀಟ್‌ಗಾಗಿ ದುಂಬಾಲು ಬಿದ್ದಾಗಲೂ ಬಹಳಷ್ಟು ಚ್ಯುಸಿಯಾಗಿ ಚಿತ್ರಗಳನ್ನು ಆಯ್ಕೆಮಾಡಿಕೊಂಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡವರು. ಅದು ದಕ್ಷಿಣ ಭಾರತದ ಖ್ಯಾತ ನಟಿ ಶೋಭನಾ ಮೇಡಂರ ತಾಕತ್ತು. ಗಟ್ಟಿಯಾಗಿ ಹೇಳುವುದಾದರೆ ಅದೊಂದು ನಾಟ್ಯ ಕ್ಷೇತ್ರದ ಅಮೂಲ್ಯ ಆಸ್ತಿ.
ಸ್ಯಾಂಡಲ್‌ವುಡ್‌ನಲ್ಲಿ ಬಂದ ‘ಆಪ್ತಮಿತ್ರ’ ಸಿನಿಮಾ ಯಾರಿಗೆ ಗೊತ್ತಿಲ್ಲ . ನಾಗವಲ್ಲಿಯಾಗಿ ಸೌಂದರ್ಯ ನಟಿಸಿದ ಈ ಚಿತ್ರದ ಮೂಲ ಮಲಯಾಳಂನ ‘ಮಣಿಚಿತ್ರತ್ತಾಳ್’. ಫಾಝಿಲ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಇಡೀ ಚಿತ್ರರಂಗವೇ ಅಚ್ಚರಿಪಡುವಂತೆ ನಟಿಸಿದ್ದು ಶೋಭನಾ. ನೃತ್ಯವೇ ಈ ಚಿತ್ರದ ಹೈಲೇಟ್ ವಿಚಾರವಾಗಿತ್ತು. ಅಂದಹಾಗೆ ನೃತ್ಯದಲ್ಲಿ ಶೋಭನಾ ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆ.
ಬಣ್ಣದ ಬದುಕು:
೧೮ನೇ ವಯಸ್ಸಿನಲ್ಲಿ ಮೊದಲ ಬಾರಿ ಶೋಭನಾ ಕ್ಯಾಮರಾ ಫೇಸ್ ಮಾಡಿದ್ದಳು. ನಂತರ ‘ಕನಮಾರಾಯತು’ನಲ್ಲಿ ಮಮ್ಮುಟ್ಟಿಗೆ ನಾಯಕಿ. ತೆಲುಗಿನ ಜನಪ್ರಿಯ ನಟ ನಾಗಾರ್ಜುನ ಮೊದಲ ಬಾರಿ ನಾಯಕನಾದ ‘ವಿಕ್ರಮ್’ ಚಿತ್ರಕ್ಕೆ ನಾಯಕಿಯಾಗಿ ಸಿಕ್ಕಿದ್ದು ಇದೇ ಶೋಭನಾ. ಫಾಜಿಲ್ ಅವರ ‘ಮಣಿಚಿತ್ರತ್ತಾಳ್’ಗೆ ೧೯೯೪ರಲ್ಲಿ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟರೆ ರೇವತಿ ಅವರ ‘ಮಿತ್ರ್ ಮೈ ಫ್ರೆಂಡ್ ’೨೦೦೩ರಲ್ಲಿ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಗೌರವ ತಂದಿತು. ೨೦೦೬ರಲ್ಲಿ ಪದ್ಮಶ್ರೀ ಗೌರವವೂ ಒಲಿದು ಬಂತು. ಸಿನಿಮಾ ರಂಗದಲ್ಲಿ ಇಷ್ಟೊಂದು ಜನಪ್ರಿಯತೆ ಇದ್ದರೂ ಅದೆಲ್ಲವನ್ನೂ ಪಕ್ಕದಲ್ಲಿಟ್ಟು ಶೋಭನಾ ಬೆನ್ನು ಹತ್ತಿದ್ದು ನೃತ್ಯವನ್ನು. ನೃತ್ಯದಲ್ಲಿ ಪ್ರಖ್ಯಾತರಾದ ತೃವಾಂಕೂರ್ ಸಹೋದರಿಯರಾದ ಲಲಿತಾ, ಪದ್ಮಿನಿ ಮತ್ತು ರಾಗಿಣಿ ಅವರ ಸೊಸೆ ಶೋಭನಾ. ಭರತನಾಟ್ಯದ ದಂತಕಥೆಗಳಾದ ಚಿತ್ರ ವಿಶ್ವೇಶ್ವರನ್ ಮತ್ತು ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆ.
ನಿರ್ದೇಶಕ ಮಣಿರತ್ನಂರ ಪ್ರಖ್ಯಾತ ಸ್ಟೇಜ್ ಶೋ ‘ನೆಹ್ರೂ ಇಂಡ್ರು, ನಾಳೈ’ಯಲ್ಲಿ ಪಾಲ್ಗೊಂಡಿದ್ದರು. ಶೋಭನಾ ೧೯೯೪ರಲ್ಲಿ ಚೆನ್ನೈಯಲ್ಲಿ ‘ಕಲಾರ್ಪಣ’ ಎನ್ನುವ ನಾಟ್ಯ ಶಾಲೆಯನ್ನು ಆರಂಭ ಮಾಡಿದರು. ಅಲ್ಲಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಜಗತ್ತಿನಾದ್ಯಂತ ನೃತ್ಯ ಪ್ರದರ್ಶನ ನೀಡಿದ್ದಾರೆ. ಪ್ರತಿಭಾವಂತ ಕಲಾವಿದರನ್ನು ಬೆಳಕಿಗೆ ತರುವುದು, ಅಶಕ್ತ ಕಲಾವಿದರಿಗೆ ನೆರವಾಗುವುದು ಮತ್ತು ಪರಿಸರ ರಕ್ಷಣೆಗೆ ಪ್ರೋತ್ಸಾಹ ಇದು ಅವರ ಶಾಲೆಯ ಮುಖ್ಯ ಉದ್ದೇಶ.
ಶೋಭನಾ ಅವರ ಮಾಯಾ ರಾವಣ-ಜಾಗತಿಕ ಮತ್ತು ಭಾರತೀಯ ಸಂಗೀತದ ಅಪೂರ್ವ ಮಿಶ್ರಣ ಹೊಂದಿರುವ ದೃಶ್ಯಕಾವ್ಯರೂಪಕ. ಎರಡೂವರೆ ವರ್ಷದಲ್ಲಿ ೫೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಸಂಗೀತ ಮತ್ತು ನೃತ್ಯದ ಮೂಲಕ ಪ್ರಕಟಗೊಳ್ಳುವ ಈ ವೈಭವದಲ್ಲಿ ರಾವಣನ ಪಾತ್ರ ಶೋಭನಾ ಅವರದ್ದು. ಈ ಕಥಾನಕದ ಇಂಗ್ಲಿಷ್ ವಿವರಣೆಯನ್ನು ನಾಸಿರುದ್ದೀನ್ ಷಾ, ಜಾಕಿ ಶ್ರಾಫ್, ಮಿಲಿಂದ್ ಸೋಮನ್, ಸುಹಾಸಿನಿ, ರೇವತಿ, ರೋಹಿಣಿ, ಟಬು, ಸಮೀರ್ ಸೋನಿ ಮತ್ತು ಮೋಹನ್‌ಲಾಲ್ ಧ್ವನಿ ನೀಡಿದ್ದಾರೆ. ಇಂತಹ ಶೋಭನಾ ಇತ್ತೀಚೆಗೆ ಮಿಜಾರಿನ ಎಡಪದವಿನಲ್ಲಿ ನಡೆದ ಭೂತನಾಥೇಶ್ವರ ಕ್ರೀಡೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ನೃತ್ಯ ಪ್ರದರ್ಶನದ ನಂತರ ಲವಲವಿಕೆಯ ಜತೆಯಲ್ಲಿ ಶೋಭನಾ ಚಿಟ್ ಚಾಟ್ ಮಾಡಿದ್ದಾರೆ. ಓವರ್ ಟು ಶೋಭನಾ.
* ಶೋಭನಾ ಪದದ ಅರ್ಥವೇನು?
- ಶೋಭನಾ ಎನ್ನುವುದು ದೇವಿ ಪಾರ್ವತಿಯ ಮತ್ತೊಂದು ಹೆಸರು. ಮನೆಗೆ ಶೋಭೆ ತರುವ ಹುಡುಗಿ ಶೋಭನಾ ಎನ್ನಬಹುದು.
* ಸಿನ್ಮಾ ಮತ್ತು ಭರತನಾಟ್ಯ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡ್ತೀರಾ..?
-- ಒಂದ್ ಕಾಲದಲ್ಲಿ ಎರಡು ನನ್ನ ಕಣ್ಣಾಗಿತ್ತು. ಈಗ ಸಿನ್ಮಾ ಕಡಿಮೆ ಮಾಡಿದ್ದೇನೆ. ನೃತ್ಯಕ್ಕೆ ಜಾಸ್ತಿ ಮಹತ್ವ ಬಂದಿದೆ.
* ‘ಮಣಿಚಿತ್ರತ್ತಾಳ್’ ನಂತರ ‘ನಾಗವಲ್ಲಿ’ಯ ಪಾತ್ರ ಮಾಡಿಲ್ಲ ಯಾಕೆ?
-ನನಗೆ ತುಂಬಾ ಇಷ್ಟವಾದ ಪಾತ್ರ ‘ನಾಗವಲ್ಲಿ’ . ನಂತರ ಬೇರೆ ಭಾಷೆಯಲ್ಲಿ ಬಂದ ಚಿತ್ರದ ನಿರ್ದೇಶಕರು ನನಗೆ ಆಫರ್ ಕೊಟ್ಟಿರಲಿಲ್ಲ. ಕೊಟ್ಟಿದ್ದಾರೆ ನಂತರ ನಾಗವಲ್ಲಿಯಾಗುತ್ತಿದ್ದೆ.
* ನಾಗವಲ್ಲಿಯ ಪಾತ್ರ ತುಂಬಾನೇ ಡೇಂಜರಸ್ ಅಂತೆ ?
- ನಾಗವಲ್ಲಿ ಸಿನ್ಮಾದ ಒಂದು ಪಾತ್ರವಷ್ಟೇ. ಉಳಿದ ಯಾವುದೇ ವಿಚಾರ ನನಗೆ ಗೊತ್ತಿಲ್ಲ. ಕೆಲವರಿಗೆ ಅದೊಂದು ಡೇಂಜರಸ್ ಪಾತ್ರ ಅನ್ನಿಸಿರಬಹುದು. ನನಗೆ ಅದು ಚಾಲೇಂಜಿಂಗ್ ಪಾತ್ರ ಅನ್ನಿಸಿತ್ತು.
*‘ಮಾಯಾ ರಾವಣ್’ ಕಲ್ಪನೆ ಹೇಗೆ ಬಂತು ?
- ಬಾಲ್ಯದಲ್ಲಿ ರಾಮಾಯಣದ ಬಗ್ಗೆ ಬಹಳ ಕುತೂಹಲ. ಜತೆಗೆ ರಾವಣ ಪಾತ್ರ ಕೂಡ ರಾಮನಿಗಿಂತ ಜಾಸ್ತಿ ಇಷ್ಟವಾಗುತ್ತಿತ್ತು. ನೃತ್ಯದಲ್ಲಿ ರಾಮಾಯಣ ಭಾಗವನ್ನು ಪಡಿಮೂಡಿಸಿದರೆ ಹೇಗೆ ಎನ್ನುವ ಯೋಚನೆಯ ಮುಂದೆ ‘ಮಾಯಾ ರಾವಣ್ ’ ಹುಟ್ಟಿಕೊಂಡಿತ್ತು. ಬಾಲಿವುಡ್‌ನ ಬಹಳ ಸ್ನೇಹಿತರು ಈ ಕಲ್ಪನೆಗೆ ಸಾಥ್ ನೀಡಿದ್ದಾರೆ.
* ಕರಾವಳಿ ಜನ, ಸಂಸ್ಕೃತಿ, ಕಲೆ ಹೇಗೆನ್ನಿಸಿತು ?
- ಇದು ಕರಾವಳಿ ತೀರದ ಊರಿಗೆ ಎರಡನೇ ಭೇಟಿ. ನಾನು ಮಲಯಾಳಿ ಕರಾವಳಿ ನನ್ನ ಮನೆ ಇದ್ದಾಗೆ. ಇಲ್ಲಿನ ಜನ, ಸಂಸ್ಕೃತಿ, ಕಲೆ ಇಷ್ಟವಾಯಿತು. ಅವಕಾಶ ಕೊಟ್ಟರೆ ಮತ್ತೊಂದು ಬಾರಿ ಬರುತ್ತೇನೆ.
* ‘ಕಲಾರ್ಪಣ’ ಸಂಸ್ಥೆಯ ಬಗ್ಗೆ ಏನೂ ಹೇಳುತ್ತೀರಿ?
- ಅದು ನನ್ನ ಮತ್ತೊಂದು ಕನಸ್ಸು. ಈಗಾಗಲೇ ನಾನಾ ರಾಜ್ಯಗಳ ೯೦ ವಿದ್ಯಾರ್ಥಿಗಳು ‘ಕಲಾರ್ಪಣ’ ಸಂಸ್ಥೆಯ ಅಡಿಯಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ. ಬಹಳಷ್ಟು ಕಡೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಎಲ್ಲರೂ ಬಹಳ ಶ್ರೀಮಂತರಲ್ಲ. ಆದರೆ ಒಳ್ಳೆಯ ಪ್ರತಿಭಾವಂತರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಳಕಿಗೆ ತರೋದು ನನ್ನ ಹಾಗೂ ಸಂಸ್ಥೆಯ ಮುಖ್ಯ ಉದ್ದೇಶ.
* ಚಿತ್ರ ನಾಯಕಿಯರು ನಿವೃತ್ತಿಯ ನಂತರ ಜಾಸ್ತಿ ಭರತನಾಟ್ಯಕ್ಕೆ ಬರುತ್ತಾರಲ್ಲ?
- ಹಾಗೇನೂ ಇಲ್ಲ. ಕೆಲವರು ಇರಬಹುದು. ಕ್ಲಾಸಿಕಲ್ ನೃತ್ಯ ಬಹಳಷ್ಟು ನಾಯಕಿಯರ ಬದುಕು ರೂಪಿಸಿದೆ. ನಿವೃತ್ತಿಯ ನಂತರ ನಾಯಕಿಯರು ಭರತನಾಟ್ಯವನ್ನು ವೃತ್ತಿಯಾಗಿ ಪರಿಗಣಿಸಿರಬಹುದು.
No comments:
Post a Comment