
೨೮ ವರ್ಷಗಳ ತಪಸ್ಸು ಈಗ ಮುಗಿದಿದೆ. ಅಂತೂ ಇಂತೂ ಭಾರತ ವಿಶ್ವ ವಿಜೇತವಾಗಿ ಮೂಡಿ ಬಂದಿದೆ. ಧೋನಿ ಪಡೆ ಮುಂಬಯಿಯ ವಾಂಖೆಡೆ ಮೈದಾನದಲ್ಲಿ ಮಾಡಿದ ಕ್ರಾಂತಿ ಮಾತ್ರ ವರ್ಣಿಸಲು ಅಸಾಧ್ಯ. ಆದರೂ ವಿಶ್ವ ಕ್ರಿಕೆಟ್ ದುನಿಯಾದಲ್ಲಿ ನಾವು ನಂಬರ್ ವನ್ ಪಟ್ಟಕ್ಕೆ ಬಂದು ನಿಂತಿದ್ದೇವೆ. ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಇದಾಗಿದ್ದು , ಮುಂಬರುವ ವಿಶ್ವಕಪ್‌ನಲ್ಲಿ ಸಿಡಿಲಮರಿಯ ಅಬ್ಬರದ ಹೊಡೆತಗಳಿಲ್ಲ ಎನ್ನುವುದು ಕೂಡ ಈಗ ಗ್ಯಾರಂಟಿಯಾಗಿದೆ. ವಿಶ್ವಕಪ್ ಫೈನಲ್ ತುಂಬಾನೇ ರೋಚಕ ವಿಜಯಲಕ್ಷ್ಮೀ ಯಾರಿಗೆ ಒಳಿದು ಬಿಡುತ್ತಾಳೆ ಎನ್ನುವ ಕುತೂಹಲ ಕ್ರಿಕೆಟ್ ಪ್ರೇಮಿಗಳಾದ ಎಲ್ಲರಿಗೂ ಇರುತ್ತದೆ. ಅದರಲ್ಲೂ ಭಾರತ-ಶ್ರೀಲಂಕಾದ ಮ್ಯಾಚ್ ತುಂಬಾನೇ ರೋಚಕ. ಭಾರತದ ಆರಂಭಿಕ ಆಟಗಾರರಾದ ಸೆಹೆವಾಗ್ ಹಾಗೂ ಸಚಿನ್‌ರ ವಿಕೆಟ್ ಬೇಗನೆ ಉರುಳಿ ಹೋಗಿದ್ದು, ಇನ್ನೇನೂ ವಿಶ್ವಕಪ್ ಶ್ರೀಲಂಕಾದ ಪಾಲಾಯಿತು ಎನ್ನುವಷ್ಟರಲ್ಲಿ ಗಂಭೀರ್ ಹಾಗೂ ವಿರಾಟ್‌ನ ಮಧ್ಯಮ ಕ್ರಮಾಂಕಿತ ಆಟ. ಧೋನಿಯ ಜವಾಬ್ದಾರಿಯುತ ಆಟ ಮತ್ತೆ ಭಾರತ ಗೆಲ್ಲುವ ಕಿರಣ ಮೂಡಿಸಿದ್ದು ಎಲ್ಲವೂ ಹಾಸಿಗೆ ಮೇಲೆ ಮಲಗಿ ಕೊಂಡಿದ್ದ ಭಾರತೀಯರ ಕನಸ್ಸು ನನಸ್ಸಾಯಿತು. ಶ್ರೀಲಂಕಾ ಗೆದ್ದು ಬಿಡುತ್ತದೆ ಎನ್ನುವ ಭ್ರಮೆಯಲ್ಲಿದ್ದಾಗ ನನ್ನ ಇಮೇಲ್‌ಗೆ ನನ್ನ ಹಿರಿಯ ಗೆಳೆಯ ಹಾಗೂ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ‘ಇಲ್ಲ ಮಾರಾಯ್ರೆ ಕಪ್ ನಮಗೆ ಬರುತ್ತದೆ. ನೋಡು ನಿಮಗೊಂದು ಕಾರ್ಟೂನ್ ಕಳುಹಿಸುತ್ತೇನೆ’ ಎಂದು ವಿಶ್ವಕಪ್ ಎತ್ತುವ ಕಾರ್ಟೂನ್ ಕಳುಹಿಸಿಕೊಟ್ಟಿದ್ದಾರೆ. ಅದು ಕೂಡ ಭಾರತದ ಪ್ರಮುಖ ಎರಡು ವಿಕೆಟ್‌ಗಳು ಉರುಳಿ ಹೋದ ನಂತರ ನಿಜಕ್ಕೂ ಪ್ರಕಾಶ್ ನಿನ್ನೆ ಮಟ್ಟಿಗೆ ಜ್ಯೋತಿಷಿ ಆಗಿ ಹೋದರು. ಕಾರ್ಟೂನ್ ನೋಡಿ ಎಂಜಾಯ್ ಮಾಡಿ ಬಿಡಿ.
* ಸ್ಟೀವನ್ ರೇಗೊ, ದಾರಂದಕುಕ್ಕು
No comments:
Post a Comment