Wednesday, April 27, 2011

ಕುಡ್ಲದಲ್ಲಿ ರಾಕ್ ಆನ್ ಮದಿರೆ ನಾಡಿನ ಪಾಪ್ ದೊರೆ



ಕೈಗೆ ಮೈಕ್ ವಿದ್ ಗಿಟಾರ್ ಕೊಟ್ಟು ಬಿಟ್ಟ್ರೆ ಸಾಕು ಸ್ಟೇಜ್ನಲ್ಲಿಯೇ ರಾಕ್,ಪಾಪ್, ಇಂಡಿಯನ್ ಫ್ಯೂಶನ್ ಎಲ್ಲವೂ ಬಂದು ಬಿಡುತ್ತದೆ. ಯೆಸ್. ಇದು ಮದಿರೆಯ ನಾಡಿನ ಕುವರ ಭಾರತೀಯ ಪಾಪ್ ಲೋಕದ ದೊರೆ ರೆಮೋ ಫೆರ್ನಾಂಡೀಸ್ರ ಇಂಟರ್ ಡಕ್ಷನ್ ಮಾರ್ಕ್.

ಅಸುಪಾಸು ಆರವತ್ತು.. ಆದರೂ ಸಂಗೀತದ ಹುಚ್ಚು ಒಂಚೂರು ಕಡಿಮೆಯಾಗಿಲ್ಲ. ಮುಖದಲ್ಲಿ ಸಣ್ಣಗೆ ನೆರಿಗೆಯ ಲಕ್ಷಣಗಳು ಕಾಣಿಸಿಕೊಂಡಿದ್ದರೂ ಕೂಡಾ ವಾಯ್ಸ್ನಲ್ಲಿ ಕೊಂಚನೂ ವೇರಿಯೇಶನ್ ಬಂದಿಲ್ಲ. ಕೈಗೆ ಮೈಕ್ ವಿದ್ ಗಿಟಾರ್ ಕೊಟ್ಟು ಬಿಟ್ಟ್ರೆ ಸಾಕು ಸ್ಟೇಜ್ನಲ್ಲಿಯೇ ರಾಕ್, ಪಾಪ್, ಇಂಡಿಯನ್ ಫ್ಯೂಶನ್ ಎಲ್ಲವೂ ಬಂದು ಬಿಡುತ್ತದೆ. ಯೆಸ್. ಇದು ಮದಿರೆಯ ನಾಡಿನ ಕುವರ ಭಾರತೀಯ ಪಾಪ್ ಲೋಕದ ದೊರೆ ರೆಮೋ ಫೆರ್ನಾಂಡೀಸ್ರ ಇಂಟರ್ಡಕ್ಷನ್ ಮಾರ್ಕ್. ಅಂದಹಾಗೆ ರೆಮೋ ಫೆರ್ನಾಂಡೀಸ್ ಮಂಗಳೂರಿನ ಶಕ್ತಿನಗರದಲ್ಲಿ ನಡೆಯುತ್ತಿರುವ ಮೊದಲ ವಿಶ್ವ ಕೊಂಕಣಿ ಸಾಂಸ್ಕೃತಿಕ ಮಹಾ ಸಮ್ಮೇಳನದಲ್ಲಿ ಕಾಣಿಸಿಕೊಂಡಿದ್ದರು. ಬರೀ ಕಾಣಿಸಿಕೊಂಡಿದ್ದು ಮಾತ್ರವಲ್ಲ ತಮ್ಮ ಹಳೆಯ ಟ್ಯೂನ್ಗೆ ಶರಣಾಗಿ ನೆರೆದಿದ್ದ ಎಲ್ಲ ಪ್ರೇಕ್ಷಕ ವರ್ಗದ ಹಾರ್ಟ್ ಬೀಟ್ನ್ನು ಸಾವಿರ ಮೆಗಾವಾಟ್ಸ್ ಬಲ್ಬ್ ಥರ ಹೊತ್ತಿಸಿ ಹೊರಟರು.
ರೆಮೋ ಸಂಗೀತಕ್ಕೊಂದು ಚುಂಬಕ ಶಕ್ತಿ ಇದೆ. ಅದಕ್ಕಿಂತಲೂ ಭಿನ್ನವಾಗಿ ರೆಮೋ ಸಂಗೀತ, ಸಾಹಿತ್ಯ, ಹಾಡುಗಾರಿಕೆಯಲ್ಲಿ ನಾನಾ ದೇಶಗಳ ಭಿನ್ನ ಸಮಾಜದ ಮಜಲು, ಸಂಸ್ಕೃತಿ, ಶೈಲಿಗಳ ಟಚ್ ಆಫ್ ಇರೋದಂತೂ ಗ್ಯಾರಂಟಿ. ಮದಿರೆಯ ನಾಡು( ಗೋವಾ)ದ ಪೋರ್ಚುಗೀಸ್ ಮ್ಯೂಸಿಕ್ ಶೈಲಿಯ ಜತೆಗೆ ಹಿಂದೂಸ್ತಾನಿ ಸಂಗೀತದ ಹೊಳಪು ಕಂಡರೆ ಅದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ೮೦ ಹಾಗೂ ೯೦ರ ದಶಕದಲ್ಲಿ ಬಾಲಿವುಡ್ನಲ್ಲಿ ಡಿಸ್ಕೋ ಮ್ಯೂಸಿಕ್ಗೆ ಹೊಸ ದಿಶೆ ತೋರಿಸಿದ ಖ್ಯಾತಿಯಂತೂ ರೆಮೋ ಬಗಲಲ್ಲಿ ಮುದುಡಿ ಕುಳಿತು ಬಿಟ್ಟಿದೆ. ಮಧ್ಯಮ ವರ್ಗದ ಸಾಮಾಜಿಕ- ರಾಜಕೀಯ ಹಸಿವು, ತೊಳಲಾಟಗಳ ಮೇಲೆ ಕಣ್ಣು ಹಾಕಿ ಸಾಹಿತ್ಯ ಬರೆಯುವ ರೆಮೋ ಯುವಜನತೆಯ ನಾಡಿಮಿಡಿತವನ್ನು ಸರಿಯಾಗಿ ಬಲ್ಲವರು. ಇಂಗ್ಲೀಷ್ , ಫ್ರೆಂಚ್, ಹಿಂದಿ, ಪೋರ್ಚ್ಗೀಸ್ ಜತೆಗೆ ಕೊಂಕಣಿಯಲ್ಲೂ ಬರೆಯುವ ಹಾಡುವ ತಾಕತ್ತು ಇರುವ ಏಕೈಕ ಸಂಗೀತಗಾರ ಎನ್ನುವ ಹೆಸರಿಗೂ ಭಾಜನರಾಗಿದ್ದಾರೆ.
ಮಿಡಲ್ ಕ್ಲಾಸ್ ಭಾರತೀಯ ಯುವಜನತೆ ಬೇಗನೆ ಆಕರ್ಷಿತವಾಗುವ ಆಂಗ್ಲ ಭಾಷೆಯಲ್ಲಿ ಹೆಚ್ಚು ಹಾಡುಗಳನ್ನು ಬರೆಯುವ ರೆಮೋ ಬಾಲಿವುಡ್ನಲ್ಲಿ ೧೯೮೭ರಲ್ಲಿ ಬಿಡುಗಡೆಯಾದ ‘ಜ್ವಾಲಾ’ದ ಟೈಟಲ್ ಸಾಂಗ್ನಿಂದ ಸಿನಿಮಾ ಲ್ಯಾಂಡ್ಗೆ ಡೈರೆಕ್ಟ್ ಎಂಟ್ರಿ ಪಡೆದವರು. ನಂತರ ಬಂದ ಬಾಂಬೆ ಸಿನಿಮಾದ ‘ಹಮ್ಮಾ ಹಮ್ಮಾ ’ಹಾಡು. ಅಜಯ್ ದೇವಗನ್ ಹಾಗೂ ಕಾಜೋಲ್ ಅಭಿನಯದ ‘ಪ್ಯಾರ್ ತೋ ಹೋ ನಾಯಿ ತಾ’ದ ಟೈಟಲ್ ಸಾಂಗ್ ಹಾಗೂ ‘ಕಾಮೋಶಿ’ ಸಂಗೀತ ಸಂಯೋಜನೆಯ ನಂತರ ಬಾಲಿವುಡ್ನಲ್ಲಿ ಹಾಡುವುದನ್ನು, ಬರೆಯುವುದನ್ನು, ಸಂಗೀತ ಸಂಯೋಜನೆ ಮಾಡುವುದನ್ನು ಕಡಿಮೆ ಮಾಡಿದರು.
ತನ್ನ ನೆಚ್ಚಿನ ಕ್ಷೇತ್ರ ಆಲ್ಬಂ ಜಗತ್ತಿನತ್ತ ಮುಖ ಮಾಡಿ ಮಲಗಿದರು. ತನ್ನ ಆಸಕ್ತಿಯ ಗಿಟಾರ್ ಜತೆಜತೆಗೆ ಸಿತಾರ್ ಹಾಗೂ ಕೊಳಲು ಕೂಡ ಅಧ್ಯಯನ ಮಾಡಿ ನುಡಿಸುವುದರಲ್ಲಿ ರೆಮೋ ಯಾವಾಗಲೂ ತಲ್ಲೀನ. ತನ್ನ ಆಲ್ಬಂಗಳಾದ ‘ಗೋವನ್ ಕ್ರೇಜಿ’ ‘ಓಲ್ಡ್ ಗೋವನ್ ಗೋಲ್ಡ್’ ಮಾದಕ ವ್ಯಸನದ ವಿರೋಧದ ‘ಪ್ಯಾಕ್ ದ್ಯಾಟ್ ಸ್ನ್ಮಾಕ್’ ಅತೀ ಹೆಚ್ಚು ಬೇಡಿಕೆ ಕುದುರಿಸಿದ ಆಲ್ಬಂ ‘ ಬಾಂಬೆ ಸಿಟಿ’ ಸುರಕ್ಷಿತ ಲೈಂಗಿಕತೆಯ ಕುರಿತು ಜಾಗೃತಿ ಹುಟ್ಟು ಹಾಕಿದ ಆಲ್ಬಂ ‘ಎವರಿ ವನ್ ವಾಂಟ್ಸ್ ಟು’, ೨೦೦೦ರಲ್ಲಿ ಹಿಂದಿಯಲ್ಲಿ ಬಿಡುಗಡೆಯಾದ ಪಾಪ್ ಆಲ್ಬಂ ‘ಓ ಮೇರಿ ಮುನ್ನಿ’ ರೆಮೋ ರ ಸೂಪರ್ ಹಿಟ್ ಪಟ್ಟಿಯಲ್ಲಿ ಸೇರಿಕೊಂಡಿದೆ. ಈಗಲೂ ವಿಶ್ವದಾದ್ಯಂತ ಹಲವಾರು ಮ್ಯೂಸಿಕ್ ನೈಟ್ಗಳು, ಸ್ಟೇಜ್ ಪ್ರೋಗ್ರಾಂಗಳಿಂದ ನಿರಂತರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾರೆ.
ರೆಮೋ ಹೇಳಿದ ಗಿಟಾರ್ ಕತೆ:
ರೆಮೋಗೆ ಅದು ಮೂರರ ವಯಸ್ಸು , ತಂದೆ ಬೆನಾರ್ಡೋ ಜತೆಯಲ್ಲಿ ಒಂದ್ ದಿನ ಪಣಜಿಯಲ್ಲಿ ಶಾಫಿಂಗ್ ಹೋಗುತ್ತಿದ್ದಾಗ ಗಿಟಾರ್ ಥಟ್ ಅಂತಾ ಕಣ್ಣಿಗೆ ಬಿದ್ದು ಬಿಟ್ಟಿತು. ನಾನು ತಂದೆಯನ್ನು ಗಿಟಾರ್ ತೆಗೆದುಕೊಡಿ ಎಂದು ಕೇಳಿಕೊಂಡಾಗ ಅವರು ತಕ್ಷಣ ತೆಗೆದುಕೊಡಲಿಲ್ಲ. ಮಗನ ಹಟ ಜಾಸ್ತಿಯಾಯಿತು. ಕೊನೆಗೆ ತಂದೆ ಶರಣಾಗಿ ಗಿಟಾರ್ ತೆಗೆಸಿ ಕೊಟ್ರು. ಆದರೆ ಅದನ್ನು ಯಾವ ರೀತಿ ನುಡಿಸುವುದು ಅಂತಾ ಅರ್ಥ ಆಗುತ್ತಿರಲಿಲ್ಲ. ತಂದೆ ಒಳ್ಳೆಯ ಗಿಟಾರಿಸ್ಟ್ ಆಗಿದ್ದರು. ಅವರನ್ನು ಹೋಗಿ ಕೇಳುವುದು ಎಂದರೆ ಒಂಥಾರ ಮುಜುಗರದ ವಿಚಾರವಾಯಿತು. ಕೊನೆಗೆ ತಾಯಿ ಲೂಯಿಸಾ ಫೆರ್ನಾಂಡೀಸ್ ಮೂಲಕ ತಂದೆಯಿಂದ ಗಿಟಾರ್ ಪಾಠ ಆರಂಭವಾಯಿತು. ಅಂದಿನಿಂದ ದಿನಾಲೂ ಗಿಟಾರ್ ಕುರಿತು ತಂದೆಯಿಂದ ಒಂದೊಂದು ವಿಚಾರಗಳು ಹೊರ ಬರುತ್ತಿದ್ದವು. ಅಲ್ಲಿಂದ ಗಿಟಾರ್ ಕುರಿತು ರೆಮೋರ ಆಸಕ್ತಿಗಳು ನಿಧಾನವಾಗಿ ಯಾರಿಗೂ ತಿಳಿಯದಂತೆ ಮನಸ್ಸಿನೊಳಗೆ ಜಾಗ ಪಡೆದುಕೊಂಡಿತು. ಈಗ ವಿದ್ ಔಟ್ ಗಿಟಾರ್ ರೆಮೋ ನೋ ಮೋರ್ ಎಂದೇ ಹೇಳಿ ಬಿಡಬಹುದು ಎಂದರು ಪಾಪ್ ಗಾಯಕ ರೆಮೋ ಫೆರ್ನಾಂಡೀಸ್.
ಬೀಟ್-೪ ರಾಕ್ ಬ್ಯಾಂಡ್:ರೆಮೋಗೆ ಆಗ ೮ರ ಅಸುಪಾಸಿನ ವಯಸ್ಸು. ಇದೇ ಟೈಮ್ನಲ್ಲಿ ರೆಮೋರ ಕಸೀನ್ ಬ್ರದರ್ ರೆಕ್ಸ್ ಫೆರ್ನಾಂಡೀಸ್ ಪುಣೆಯಲ್ಲಿ ಓದುತ್ತಿದ್ದರು. ಅವರು ಇವರಿಗಿಂತ ೧೨ ವರ್ಷ ಹಿರಿಯ. ಇಬ್ಬರಿಗೂ ಒಂದೇ ಗೀಳು ಸಂಗೀತಕ್ಕೆ ಪಾಶ್ಚಿಮಾತ್ಯ ಟಚ್ ನೀಡಬೇಕು ಎನ್ನೋದು ಅವರ ಹೆಗ್ಗುರಿ. ಅದಕ್ಕಿಂತಲೂ ಮೊದಲಿನ ಕತೆ ಇಲ್ಲಿದೆ. ಬಾಲ್ಯದಲ್ಲಿದ್ದ ಗಿಟಾರ್ ಪ್ರೀತಿ ರೆಮೋರನ್ನು ಶಾಲೆಯಲ್ಲೂ ಬಿಟ್ಟಿರಲಿಲ್ಲ. ‘ರಾಕ್ ಅರೌಂಡ್ ದೀ ಕ್ಲಾಕ್ ’ ಎನ್ನುವ ಪುಟ್ಟ ಗಿಟಾರ್ ತಂಡವನ್ನು ಕಟ್ಟಿಕೊಂಡು ಬಂದರು. ಆಗ ಅವರ ಜತೆಗಿದ್ದ ಗೆಳೆಯರು ಸಾಥ್ ನೀಡುತ್ತಿದ್ದರು. ಅಲೆಕ್ಸಾಂಡರ್ ರೊಸಾರಿಯೋ, ರೆಕ್ಸ್ ಫೆರ್ನಾಂಡೀಸ್, ನಾನ್ಡೀನೋ ಲೋಬೋಟ್ಟೋ ಫೆರಿಯಾ, ಕ್ಯಾಟಿನೋ ದೇ ಅಬ್ರೋ ಸೇರಿಕೊಂಡು ಬೀಟ್-೪ ಎನ್ನುವ ಸ್ಕೂಲ್ ಬ್ಯಾಂಡ್ವೊಂದನ್ನು ಕಟ್ಟಿಕೊಂಡರು.
ಗೋವಾ ತುಂಬಾ ಸುತ್ತಾಡಿಕೊಂಡು ಹಲವಾರು ಗಿಟಾರ್ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಈ ಗಿಟಾರ್ ಆಸಕ್ತಿಗಳ ಜತೆಯಲ್ಲಿಯೇ ಮುಂಬಯಿಯಲ್ಲಿ ಆರ್ಕಿಟೆಕ್ ಪದವಿ ಪಡೆದುಕೊಂಡರು. ಆದರೂ ಸಂಗೀತ, ಗಿಟಾರ್ ಮೇಲಿದ್ದ ಭಕ್ತಿ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ. ತರಗತಿಗಳಿಗೆ ಬಂಕ್ ಮಾಡಿ ಲೆಕ್ಚರ್ಗಳಿಗೆ ಕೈ ಕೊಟ್ಟು ಗಿಟಾರ್ ನುಡಿಸುವ ಮತ್ತಷ್ಟೂ ತಂತ್ರಗಳನ್ನು ಕರಗತಮಾಡಿಕೊಳ್ಳುತ್ತಿದ್ದರಂತೆ. ಟೈಮ್ ಸಿಕ್ಕಾಗ ಹಾಡುಗಳನ್ನು ಬರೆಯುತ್ತಿದ್ದರು. ಜತೆಗೆ ಸೋಲೋ ಸಿಂಗಿಂಗ್ ಮಾಡುತ್ತಿದ್ದರು. ಕೆಲವೊಂದು ಸಲ ತನ್ನ ಹಾಡಿನ ಹುಚ್ಚು ಕಡಿಮೆ ಮಾಡಿಕೊಳ್ಳಲು ಸಿಕ್ಕ ಸಿಕ್ಕ ಬ್ಯಾಂಡ್ಗಳಲ್ಲಿ ಹಾಡುತ್ತಿದ್ದರು. ಅಂದಿನ ಕಾಲದಲ್ಲಿ ಫೇಮಸ್ ಬ್ಯಾಂಡ್ ಆಗಿದ್ದ ಬಶೀರ್ ಶೇಕ್ ಅವರ ‘ದೀ ಸವೇಜಸ್’ನಲ್ಲೂ ಡಿಕೊಂಡು ಬಂದಿದ್ದೇನೆ ಎನ್ನುತ್ತಾರೆ ರೆಮೋ. ಸಂಗೀತದ ವಿಚಾರದಲ್ಲಿ ಉದಾರತೆ ಮರೆದು ನಿಂತರೂ ಕೂಡಾ ಎಲ್ಲರೊಂದಿಗೆ ಬೆರೆತು ಮಾತನಾಡುವ ವಿಚಾರದಲ್ಲಿ ಬಹಳ ಚೌಕ್ಕಾಸಿ ಮಾಡುವ ರೆಮೋ ಲವಲವಿಕೆಯ ಫಾಸ್ಟ್ ಕ್ವಶನ್ಗಳಿಗೆ ಥಟ್ ಅಂತಾ ಅನ್ಸರ್ ಕೊಟ್ಟಿದ್ದು ಹೀಗಿದೆ ನೋಡಿ...
* ನೀವು ಮೊದಲು ಹಾಡಿದ ಹಾಡು ಯಾವುದು?
- ಫ್ರೆಂಚ್ ಭಾಷೆಯಲ್ಲಿ ‘ಮೀಯಾ ಮಝೀದಾ ಕ್ಯೂರಿದಾ’ ಹಾಡು. ಇದರ ಅರ್ಥ ‘ಮೈ ಡಾರ್ಲಿಂಗ್ ಮದರ್’ ಇದನ್ನು ನಾನು ನನ್ನ ಐದನೇ ಹರೆಯದಲ್ಲಿ ಹಾಡಿದೆ. ಮೊದಲ ಬಾರಿಗೆ ಕ್ಲಬ್ ನ್ಯಾಷನಲ್ ಸ್ಟೇಜ್ನಲ್ಲಿ ಹಾಡಿದೆ. ಈ ಹಾಡು ತುಂಬಾ ಭಾವನಾತ್ಮಕವಾಗಿತ್ತು. ಈ ಕಾರಣಕ್ಕಾಗಿ ನನ್ನ ‘ಓಲ್ಡ್ ಗೋವನ್ ಗೋಲ್ಡ್’ ಆಲ್ಬಂಗೂ ಈ ಹಾಡು ಹಾಕಿದ್ದೇನೆ.
* ನಿಮ್ಮ ನೆಚ್ಚಿನ ಹಾಡುಗಾರರು ಯಾರು?
-ಓಹೋ...ತುಂಬಾ ಜನ ಇದ್ದಾರೆ ಬಿಡಿ. ಆದರೆ ಹಾಡುವವರು ಸಾಹಿತ್ಯ ಬರೆದು ಸಂಯೋಜಿಸಿ ಹಾಡಿದರೆ ಮಾತ್ರ ನನಗೆ ಖುಶಿ. ಈ ಮೂಲಕ ಅವರ ಹಾಡಿಗೆ ಆಳವಾದ ಅರ್ಥಕಂಡುಕೊಳ್ಳಲು ಸಾಧ್ಯವಿದೆ. ಯಾರದೋ ಸಾಹಿತ್ಯಕ್ಕೆ ಬೇರೆಯವರು ಹಾಡಿದರೆ ಏನಿದೆ ಅರ್ಥ.
* ಮಂಗಳೂರು ಕುರಿತು ನಿಮ್ಮ ಅಭಿಪ್ರಾಯ?
- ವಾವ್.. ವಂಡರ್ಫುಲ್ ಮ್ಯಂಗಲೂರ್ ಆಂಡ್ ಪೀಪಲ್ಸ್ ಐ ಲವ್ ದೆಮ್. ಇಲ್ಲಿಗೆ ನನ್ನದು ಎರಡನೇ ಭೇಟಿ. ಕರಾವಳಿಯ ಹಸಿರನ್ನು ಹತ್ತಿರದಿಂದ ನೋಡಬೇಕೆನ್ನುವುದು ನನ್ನ ಕನಸು. ಆದರೆ ಸರಿಯಾದ ಟೈಮ್ ಸಿಕ್ಕಿಲ್ಲ. ನನ್ನನ್ನು ಮ್ಯಂಗಲೂರ್ ಮತ್ತೊಂದು ಸಾರಿ ಕರೆದರೆ ಒಂದು ವೀಕ್ ಇಲ್ಲಿಯೇ ಉಳಿಯುತ್ತೇನೆ.
* ಆರವತ್ತರಲ್ಲೂ ಆರೊ ಗ್ಯದ ಗುಟ್ಟು ಏನು?
- ನಮ್ಮದು ಗೋವಾನ್ ಶೈಲಿ. ಜಾಸ್ತಿ ಏನನ್ನೂ ತಿನ್ನುವುದಿಲ್ಲ. ಒಂದು ಲೆಕ್ಕದಲ್ಲಿ ಡಯಟ್ ಎನ್ನಬಹುದು. ಯೋಗ, ವ್ಯಾಯಾಮಕ್ಕೆ ನನ್ನ ದೇಹ ಒಗ್ಗಿ ಹೋಗಿದೆ.
* ಟೈಮ್ ಸಿಕ್ಕಾಗ ಏನ್ ಮಾಡ್ತೀರಾ?
ಕೆಲವೊಂದು ಪುಸ್ತಕಗಳನ್ನು ಓದುತ್ತೇನೆ. ಹಿಂದಿ,ಇಂಗ್ಲೀಷ್, ಫ್ರೆಂಚ್ ಸಿನ್ಮಾಗಳನ್ನು ನೋಡುತ್ತೇನೆ. ಡ್ರಾಯಿಂಗ್, ಬರವಣಿಗೆ, ಪೋಟೋ ಶಾಪ್, ವಿಡಿಯೋ ಎಡಿಟಿಂಗ್, ಸಾಫ್ಟ್ವೇರ್ಗಳಲ್ಲಿ ಕೊಂಚ ಕೈಯಾಡಿಸುತ್ತೇನೆ. ವಾಕಿಂಗ್, ಡ್ರೈವಿಂಗ್ ಎಂದರೂ ನನಗೆ ತುಂಬಾ ಇಷ್ಟ.
* ಮುಂದಿನ ಯೋಜನೆ ಅಥವಾ ಅಲ್ಬಂ ಯಾವುದು?
- ಈಗಷ್ಟೇ ಒಂದು ಗೋವಾ ಭಾಷೆಯ ಚಿತ್ರವೊಂದಕ್ಕೆ ಸಂಗೀತ ನೀಡಿದ್ದೇನೆ. ಯುರೋಪ್ನಲ್ಲಿ ಒಂದು ತಿಂಗಳ ಶೋ ಮಾಡಿ ವಾಪಾಸು ಬಂದಿದ್ದೇನೆ. ಸದ್ಯಕ್ಕೆ ಕೊಂಚ ಬ್ರೇಕ್. ಇದರ ನಡುವೆ ಹೊಸದಾಗಿ ಒಂದು ಆಲ್ಬಂ ತರುವ ಕುರಿತು ಯೋಚನೆ ಮಾಡುತ್ತಿದ್ದೇನೆ.
* ನಿಮ್ಮ ಇಬ್ಬರು ಮಕ್ಕಳು ನಿಮ್ಮ ಕ್ಷೇತ್ರಕ್ಕೆ ಬರುತ್ತಾರಾ..?
- ನೋಡಬೇಕು ಇಬ್ಬರಿಗೂ ಆಸಕ್ತಿ ಇದೆ. ಅವರನ್ನು ಲಾಂಚ್ ಮಾಡುವ ಕುರಿತು ಯೋಚನೆ ಮಾಡುತ್ತೇನೆ.
* ನಿಮ್ಮ ಹೇರ್ ಸ್ಟೈಲ್ ಹಾಗೂ ಕೂದಲಿನ ಬಣ್ಣ ಪದೇ ಪದೇ ಚೇಂಜ್ ಆಗುತ್ತಿದೆ ಅಲ್ವಾ..?
- ಕಮಾನ್ ಜರ್ನಲಿಷ್ಟ್.... ಚಿಲ್ ಔಟ್.. ರಿಲ್ಯಾಕ್ಸ್... ಈ ಟೈಮ್ಗೆ ತಕ್ಕಂತೆ ಚೇಂಚ್ ಆಗುತ್ತಿದ್ದೇನೆ. ಬದಲಾವಣೆ ಯಾವತ್ತಿಗೂ ಒಳ್ಳೆಯದು. ಬದಲಾವಣೆಗೆ ವಯಸ್ಸು ಇದೆಯಾ..?

No comments:

Post a Comment