
ಕೋ- ಸ್ಟಾರ್ ಜತೆ ಫ್ರೆಂಡ್ಲಿಯಾಗಿ ಮೂವ್ ಆದ್ರೆ ಅದಕ್ಕೆ ಆಫೇರ್ ಅಂತಾರಾ.. ಎರಡು ಮೂರು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಮಾತ್ರಕ್ಕೆ ನನಗೂ ದರ್ಶನ್‌ಗೂ ಆಫೇರ್ ಇದೆ ಎನ್ನೋದು ಬರೀ ಸುಳ್ಳು ಎಂದ್ರು ನಿಖಿತಾ... ಓವರ್ ಟು ನಿಖಿತಾ...
ಪ್ರಶ್ನೆಗೆ ಸೀದಾ ಉತ್ತರ ಕೊಡಲು ನಿಖಿತಾ ಮುಂದಾದರೂ ‘ಸೆಟ್‌ನಲ್ಲಿ ಎಲ್ಲರ ಜತೆಯಲ್ಲೂ ಫ್ರೀಯಾಗಿ ಮೂವ್ ಆಗುತ್ತೇನೆ. ಜಾಲಿಯಾಗಿ ಕೆಲಸ ಮಾಡೋದು ನನ್ನ ಪ್ಲಸ್ ಪಾಯಿಂಟ್. ಈ ರೀತಿಯಲ್ಲಿದ್ದಾಗ ನನಗೆ ಬೇರೆಯವರ ಜತೆಯಲ್ಲಿ ಆಫೇರ್ ಇದೆ ಅನ್ನೋದು ಸರಿಯಲ್ಲ. ಇತ್ತೀಚೆಗಷ್ಟೇ ನನ್ನ ತಂದೆ ವಿವಶರಾದರು. ಇಂತಹ ಟೈಮ್‌ನಲ್ಲಿ ಈ ರೀತಿಯ ಗಾಸಿಪ್ ನನಗೆ ಬಹಳ ದುಃಖ ಕೊಟ್ಟಿದೆ ಎಂದರು.
ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಿ ಚಿತ್ರಗಳಲ್ಲಿ ಈಗಾಗಲೇ ನಟಿಸಿ ಬಂದಿರುವ ನಿಖಿತಾಗೆ ಇದೇ ಮೊದಲ ಬಾರಿ ಇಂತಹ ಒಂದು ರೂಮರ್ ಕಿವಿ ಬಂದು ಬಿದ್ದಿದೆಯಂತೆ. ಈ ಹಿಂದೆನೂ ದರ್ಶನ್ ಹಾಗೂ ರಕ್ಷಿತಾ ಜತೆ ಆಫೇರ್ ಇದೆ ಎನ್ನುವ ಮಾತಿತ್ತು. ಅದೆಲ್ಲ ಸುಳ್ಳು ಎನ್ನುವ ಮಾತು ಎಲ್ಲರಿಗೂ ನಂತರ ಅರಿವಿಗೆ ಬಂತು. ಅದೇ ರೀತಿ ನನ್ನ ಕತೆನೂ... ಎಂದು ಬಿಟ್ಟ್ರು ನಿಖಿತಾ ಮೇಡಂ.
‘ಯೋಧ’, ಪ್ರಿನ್ಸ್ ಹಾಗೂ ಇತ್ತೀಚೆಗೆ ಚಿತ್ರೀಕರಣವಾಗುತ್ತಿರುವ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ನದಲ್ಲೂ ದರ್ಶನ್‌ಗೆ ನಾಯಕಿಯಾಗಿ ನಿಖಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಜತೆಗೆ ನಮ್ಮಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗುತ್ತದೆ ಅಂತ ಮಾಧ್ಯಮವೊಂದರಲ್ಲಿ ನಿಖಿತಾ ಹೇಳಿಕೊಂಡಿದ್ದರು. ಈ ಕೆಮೆಸ್ಟ್ರಿ ವರ್ಕ್ ಔಟ್ ಈಗ ಆಫೇರ್ ಆಗಿ ತಿರುಗಿ ಬಂದಿದೆ ಎನ್ನುವುದು ನಿಖಿತಾರ ಮಾತು.
ನಿರ್ದೇಶಕ ನಾಗಣ್ಣರಿಗೆ ದರ್ಶನ್ ನಿಖಿತಾ ‘ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ತನ್ನ ನಾಯಕಿಯಾಗಿ ಅಭಿನಯಿಸಲಿ ಎಂದು ರೆಕಮೆಂಡ್ ಮಾಡಿದ್ರಂತೆ ಎಂದು ಕೇಳಿದ್ರೆ... ಇದೆಲ್ಲ ನಂಬಬೇಡಿ. ‘ದುಬೈಬಾಬು’ ಚಿತ್ರದ ಅಭಿನಯ ನೋಡಿ ನಾಗಣ್ಣ ನನಗೆ ಸಂಗೊಳ್ಳಿ ರಾಯಣ್ಣದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು ಎನ್ನುತ್ತಾರೆ ನಿಖಿತಾ.
ಅಂದಹಾಗೆ ಸಧ್ಯಕ್ಕೆ ನಿಖಿತಾ ನಿರ್ದೇಶಕ ಓಂ ಪ್ರಕಾಶ್ ಅವರ ‘ಕಾಟನ್‌ಪೇಟೆ’ಯಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತಿದೆ. ಆದರೆ ನಿಖಿತಾ ಈ ವಿಚಾರದಲ್ಲಿ ಏನೂ ಹೇಳ್ತಿಲ್ಲ...ಉಳಿದಂತೆ ಈ ವರ್ಷ ಮದುವೆಗೆ ಹುಡುಗ ಹುಡುಕಿ ಮುಂದಿನ ವರ್ಷದಲ್ಲಿ ಮದುವೆಯಾಗುವ ಪ್ಲ್ಯಾನ್‌ವೊಂದನ್ನು ನಿಖಿತಾ ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಆದರೆ ನಿಖಿತಾರಿಗೆ ಇನ್ನೂ ಕೂಡ ಅಂತಹ ಹುಡುಗರು ಸಿಕ್ಕಿಲ್ಲ ಎನ್ನುವುದು ಗಮನಿಸಿಬೇಕಾದ ವಿಷ್ಯಾ.
ಚಿತ್ರ : ಸುಧಾಕರ ಎರ್ಮಾಳ್
No comments:
Post a Comment