ಕೆರೆಗಳನ್ನು ನಮಗೆ ಬೇಕಾದಂತೆ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇದ್ದ ಕೆರೆಗಳನ್ನು ಬಲಿ ಕೊಡುವ ಬದಲು ಅದನ್ನು ಜೋಪಾನವಾಗಿ ಉಳಿಸಿಬೆಳೆಸಬೇಕು. ಕಟ್ಟಡ ನಿರ್ಮಾಣ, ಬಸ್ ನಿಲ್ದಾಣ ಎಂಬ ಆಧುನಿಕ ಪ್ರಪಂಚದ ಕಾಮಗಾರಿಯಿಂದ ಕೆರೆಗಳು ಮರೆಯಾಗುತ್ತಿದೆ. ಬೆಂಗಳೂರಿನ ಪತ್ರಕರ್ತರಿಬ್ಬರು ‘ಕೆರೆಮರೆ’ಯ ಕತೆಯನ್ನು ಕಟ್ಟಿಕೊಟ್ಟಿದ್ದಾರೆ .
ಒಂದು ಕಾಲದಲ್ಲಿ ಬೆಂಗಳೂರಿಗೆ ನಾವಿಲ್ಲದಿದ್ದರೆ ನಡೆಯುತ್ತಿರಲಿಲ್ಲ. ನಾವೇನು ಸ್ವತಃ ಇಲ್ಲಿ ಹುಟ್ಟಿ ಬಂದವರೂ ಆಗಿರಲಿಲ್ಲ. ನಮ್ಮಲ್ಲಿ ಹೆಚ್ಚಿನವರನ್ನು ನಿಮ್ಮವರೇ ಸೃಷ್ಟಿ ಮಾಡಿದ್ದರು. ಕೆಲವರು ಬಲ್ಲರು. ಕೇವಲ ಕೆಲವರು ಭವಿಷ್ಯದ ಬಗ್ಗೆ ಕಾಳಜಿ ಇದ್ದವರು. ಆದರೀಗ ನಾವಿಲ್ಲದಿದ್ದರೂ ಬದುಕಬಲ್ಲೆವೆಂದು ಬೆಂಗಳೂರು ನಗರ ಹೇಳಿದಂತಿದೆ ಎಂದು ಹವ್ಯಾಸಿ ಪತ್ರಕರ್ತ ಬಡೆಕ್ಕಿಲ ಕೃಷ್ಣ ಪ್ರದೀಪ ಕೆರೆಗಳ ಬಗ್ಗೆ ಲೇಖನೊಂದನ್ನು ಬರೆಯುತ್ತಾರೆ.
ಈ ಬರವಣಿಗೆ ಬರೀ ಬರಹಕ್ಕೆ ಸೀಮಿತವಾಗಿಲ್ಲ. ಬಡೆಕ್ಕಿಲ ವಿದ್ ರತ್ನಾಕರ್ ಎಂಬ ಸ್ನೇಹಿತನ ಜತೆಗೂಡಿ ಒಂದು ಸಾಕ್ಷ್ಯಚಿತ್ರದ ರೂಪು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ತೆರೆ ಮರೆಗೆ ಸರಿಯುತ್ತಿರುವ ಕೆರೆಗಳ ಕುರಿತು ಹತ್ತು ನಿಮಿಷಗಳ ‘ತಪ್ಪಿನಿಂದಾಗಿ ಸಿಕ್ಕ ಶಾಪವೇ ಸತ್ಯ ಎಂಬ ಸಾಕ್ಷ್ಯಾಚಿತ್ರ ರೆಡಿಯಾಗಿದೆ. ಇನ್ಪೋಸೀಸ್‌ನ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ನಡೆಸುತ್ತಿರುವ ಎನ್‌ಜಿಒ ಸಂಸ್ಥೆ ‘ಇಂಡಿಯಾ ವಾಟರ್ ಪೊರ್ಟಲ್’ ಅವರು ನಡೆಸಿದ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಕ್ಷ್ಯಾಚಿತ್ರ ಎಂಬ ಪ್ರಶಸ್ತಿಯನ್ನು ಇದು ಪಡೆದುಕೊಂಡಿದೆ. ದೇಶದ ನಾನಾ ಕಡೆಗಳಿಂದ ಬಂದ ೪೦ಕ್ಕೂ ಅಕ ಸಾಕ್ಷ್ಯಾಚಿತ್ರಗಳ ನಡುವೆ ಈ ಯುವಕರ ಥೀಮ್ ಎಲ್ಲರನ್ನು ಬೀಟ್ ಮಾಡಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಕೆರೆಗೆ ಬಂದ ಯುವಕರು:
ಅಂದಹಾಗೆ ಬಡೆಕ್ಕಿಲ ಕೃಷ್ಣ ಪ್ರದೀಪ, ಈ ಹೆಸರು ಮಾಧ್ಯಮದಲ್ಲಿ ಇದ್ದವರಿಗೆ ತೀರಾ ಕಾಮನ್. ಮುದ್ರಣ, ಎಲೆಕ್ಟ್ರಾನಿಕ್, ರೇಡಿಯೋ ಜಾಕಿ ಹೀಗೆ ಬಡೆಕ್ಕಿಲ ಮಾಧ್ಯಮದಲ್ಲಿ ಮಾಡದ ಕೆಲಸ ಸಧ್ಯಕ್ಕೆ ಯಾವುದು ಇಲ್ಲ. ತುಂಬಾ ಪ್ರತಿಭಾವಂತ ಎಂಬ ಕಾರಣದಿಂದ ಯಾವ ಮಾಧ್ಯಮದಲ್ಲೂ ಫುಲ್ ಟೈಮ್ ನಿಂತು ಕೆಲಸ ಮಾಡಿಲ್ಲ. ಎಲ್ಲ ಕಡೆನೂ ಫ್ರಿಲಾನ್ಸ್ ಮಾಡುತ್ತಾ ಬೆಂಗಳೂರಿನಲ್ಲಿ ಬದುಕುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಈಗ ಸುವರ್ಣ ವಾಹಿನಿಯಲ್ಲಿ ಬರುವ ಬಹುತೇಕ ಕಾರ್‍ಯಕ್ರಮದಲ್ಲಿ ‘ಬಡೆಕ್ಕಿಲ’ ವಾಯ್ಸ್ ಪದೇ ಪದೇ ಕೇಳಿಸುತ್ತಾ ಇರುತ್ತದೆ.
ಇಂತಹ ಪ್ರತಿಭಾವಂತನ ಜತೆಯಲ್ಲಿ ನಿಶಾಂತ್ ರತ್ನಾಕರ್ ಸೇರಿಕೊಂಡಿದ್ದಾರೆ. ನಿಶಾಂತ್ ರತ್ನಾಕರ್ ಮಾಹಿತಿ ವಿಜ್ಞಾನದಲ್ಲಿ ಪದವಿ ಮುಗಿಸಿಕೊಂಡು ತನಗೂ ಮಾಡಿದ ಪದವಿಗೂ ಸಂಬಂಧ ಇಲ್ಲ ಅಂತಾ ಹೇಳಿ ಪತ್ರಿಕೋದ್ಯಮ ರಂಗಕ್ಕೆ ಎಂಟ್ರಿ ಹೊಡೆದವರು. ‘ಬೆಂಗಳೂರು ಮಿರರ್’ನಿಂದ ಥಟ್ ಅಂತಾ ‘ಡಿಎನ್‌ಎ ’ಪತ್ರಿಕೆಗೆ ಜಂಪ್ ಆಗಿ ಈಗ ಪತ್ರಿಕೆಯ ಚೀಫ್ ಫೋಟೋ ಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಸೇರಿ ಬೆಂಗಳೂರಿನ ಕೆರೆಗಳ ಕುರಿತು ಸಿರೀಯಸ್ ಆಗಿ ವರ್ಕ್ ಮಾಡಿ ಸಖತ್ ಮಾಹಿತಿ ನೀಡುವ ಪುಟ್ಟ ಸಾಕ್ಷ್ಯಾಚಿತ್ರ ಗೂಗಲ್‌ನ ‘ಯೂ ಟ್ಯೂಬ್’ನಲ್ಲಿ ಹಾಕಿಬಿಟ್ಟಿದ್ದಾರೆ.
ಬಸ್ ನಿಲ್ದಾಣಕ್ಕೆ ಕೆರೆ ಮಾಯ:
ದಿನವೊಂದಕ್ಕೆ ಲಕ್ಷಾಂತರ ಮಂದಿ ಬಂದು ಸೇರುವ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಅಥವಾ ಕೆಂಪೇಗೌಡ ಬಸ್ ನಿಲ್ದಾಣ ಎಲ್ಲರಿಗೂ ಗೊತ್ತಿದೆ. ಈ ಬಸ್ ನಿಲ್ದಾಣದ ಜಾಗದಲ್ಲಿ ಸುಂದರವಾದ ಕೆರೆ ಇತ್ತು ಎನ್ನೋದು ಇಂದಿನ ಯುವಪೀಳಿಗೆಗೆ ಗೊತ್ತೇ ಇಲ್ಲ. ಈ ಬಸ್ ನಿಲ್ದಾಣದ ಜಾಗದಲ್ಲಿ ಖ್ಯಾತ ‘ಧರ್ಮಮ್‌ಬೂದಿ’ ಕೆರೆಯಿತ್ತು ಎನ್ನೋದು ಬೆಂಗಳೂರಿನ ಹಿರಿ ತಲೆಗಳಿಗೆ ಮಾತ್ರ ಗೊತ್ತು. ಇಂತಹ ಕೆರೆಯ ಕುರಿತು ಈ ಸಾಕ್ಷ್ಯಾಚಿತ್ರದಲ್ಲಿ ಹೇಳಲಾಗಿದೆ. ಇಬ್ಬರು ಪ್ರತಿಭಾವಂತರು ಎಂಬ ಕಾರಣಕ್ಕೆ ಸಾಕ್ಷ್ಯಾಚಿತ್ರದಲ್ಲಿ ಆಧುನಿಕ ಪ್ರಪಂಚದ ಹೊಳಪಿದೆ. ಭಾಷೆಯಲ್ಲೂ ಕೊಂಚ ಭಿನ್ನತೆ ಕಾಣಿಸಿಕೊಂಡಿದೆ.
ಐತಿಹಾಸಿಕ ಪಾಯಿಂಟ್ ಆಫ್‌ವೀವ್‌ನಿಂದ ಎಸ್.ಕೆ. ಅರುಣಿ, ಪರಿಸರದ ಕಾಳಜಿಯಿಂದ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ, ವೈಜ್ಞಾನಿಕವಾಗಿ ಟಿ.ವಿ ರಾಮಚಂದ್ರ ಅವರು ಸಾಕ್ಷ್ಯಾಚಿತ್ರದಲ್ಲಿ ಮಾತುಗಳನ್ನಾಡಿದ್ದಾರೆ. ಜತೆಗೆ ಈ ಹಿಂದೆ ಬೆಂಗಳೂರಿನಲ್ಲಿದ್ದ ಕೆರೆಗಳು ಯಾವ ರೀತಿ ನಗರ ಬೆಳೆಯುತ್ತಿದ್ದಂತೆ ವಿನಾಶದ ಹಾದಿಯಲ್ಲಿ ಸಾಗಿದವು. ಬೆಂಗಳೂರಿನಲ್ಲಿ ಮುಂದೆ ಕೆರೆಗಳೇ ಇಲ್ಲದೇ ಇದ್ದಾಗ ಪರಿಸ್ಥಿತಿ ಯಾವ ಹಂತಕ್ಕೆ ಮುಟ್ಟಿ ನಿಲ್ಲುತ್ತದೆ ಎನ್ನುವ ಮುಂದುವರಿದ ಕಾಳಜಿ ಇಲ್ಲಿ ಸುಂದರವಾಗಿ ಚಿತ್ರೀತವಾಗಿದೆ.
ಸಿಂಫಲ್ ಕ್ಯಾಮೆರಾ ವರ್ಕ್:
ಇಡೀ ಸಾಕ್ಷ್ಯಾಚಿತ್ರವನ್ನು ಕ್ಯಾನಾನ್ ಮಾರ್ಕ್೧೧ ಡಿಎಸ್‌ಎಲ್ ಆರ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದರಲ್ಲಿರುವ ಎಚ್‌ಡಿ ಗುಣಮಟ್ಟ ಸಾಕ್ಷ್ಯಾಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇಂತಹ ಕ್ಯಾಮೆರಾ ಬಳಕೆ ಇತ್ತೀಚಿನ ಸಾಕ್ಷ್ಯಾಚಿತ್ರದಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದೆ. ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಗುಣಮಟ್ಟದ ಡಾಕ್ಯುಮೆಂಟರಿ ನೀಡಲು ಇಂತಹ ಕ್ಯಾಮೆರಾ ಬಹಳಷ್ಟು ಸಹಾಯ ಮಾಡಿದೆ. ೧೦ ನಿಮಿಷದವರೆಗೂ ನಿರಂತರವಾಗಿ ಚಿತ್ರೀಕರಣ ಮಾಡುವ ಸಾಮರ್ಥ್ಯವನ್ನು ಈ ಕ್ಯಾಮೆರಾ ಹೊಂದಿದೆ ಎನ್ನುತ್ತಾರೆ ಬಡೆಕ್ಕಿಲ ಕೃಷ್ಣ ಪ್ರದೀಪ.
ಸಧ್ಯಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಸಾಕ್ಷ್ಯಾಚಿತ್ರ ಬಂದಿದೆ. ಮುಂದಿನ ದಿನಗಳಲ್ಲಿ ಅದನ್ನು ಕನ್ನಡದಲ್ಲೂ ತರುವ ಕೆಲಸ ನಡೆಯುತ್ತಿದೆ. ಈ ಸಾಕ್ಷ್ಯಾಚಿತ್ರದ ‘ಡಿವಿಡಿ’ ತರುವ ಮೂಲಕ ಬೆಂಗಳೂರಿನ ವಿವಿಧ ಶಾಲೆ, ಕಾಲೇಜು, ಲೈಬ್ರೆರಿ ಹಾಗೂ ಕಾರ್ಪೊರೇಟ್ ಕಾರ್‍ಯಕ್ರಮಗಳಲ್ಲಿ ಪ್ರದರ್ಶನ ಮಾಡುವ ಇರಾದೆನೂ ಇದೆ ಎನ್ನುತ್ತಾರೆ ಬಡೆಕ್ಕಿಲ. ಈ ಸಾಕ್ಷ್ಯಾಚಿತ್ರದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ಕಳುಹಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ. ಬೆಂಗಳೂರಿನ ಕೆರೆಗಳನ್ನು ಕೊಂದು ಅದರ ಮೇಲೆ ಕಟ್ಟಡ ಕಟ್ಟುವ ನಮ್ಮವರ ಹುಚ್ಚಾಟ ನಿಲ್ಲಬೇಕು. ಜಲಕೊಯ್ಲು, ಕೆರೆ ಉಳಿಸುವ ಸಂಸ್ಕೃತಿ ನಮ್ಮಲ್ಲಿ ಅರಳಿ ನಿಲ್ಲಬೇಕು ಎನ್ನುವುದು ನಮ್ಮ ಉದ್ದೇಶ ಎನ್ನುತ್ತಾರೆ ಬಡೆಕ್ಕಿಲ.
ಕೆರೆಗಳನ್ನು ನಮಗೆ ಬೇಕಾದಂತೆ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇದ್ದ ಕೆರೆಗಳನ್ನು ಬಲಿ ಕೊಡುವ ಬದಲು ಅದನ್ನು ಜೋಪಾನವಾಗಿ ಉಳಿಸಿಬೆಳೆಸಬೇಕು. ಕಟ್ಟಡ ನಿರ್ಮಾಣ, ಬಸ್ ನಿಲ್ದಾಣ ಎಂಬ ಆಧುನಿಕ ಪ್ರಪಂಚದ ಕಾಮಗಾರಿಯಿಂದ ಕೆರೆಗಳು ಸಾಯುತ್ತಿದೆ. ಕೆರೆಗಳೇ ಇಲ್ಲದೇ ಹೋದರೆ ಬೆಂಗಳೂರಿನಲ್ಲಿ ಮಳೆಯೇ ಒಂದು ವರ್ಷ ಬರದೇ ಹೋದರೆ ಮುಂದಿನ ಸ್ಥಿತಿ ಏನಾಗಬಹುದು ಎಂಬ ಸಂದೇಶ ಇಡೀ ಸಾಕ್ಷ್ಯಾಚಿತ್ರ ನೋಡಿದ ನಂತರ ಶ್ರೀಸಾಮಾನ್ಯನಿಗೂ ಅನ್ನಿಸಿಬಿಡುತ್ತದೆ. ಹೆಚ್ಚಿನ ಮಾಹಿತಿಗೆ ನೋಡಿ ಹಾಗೂ ಸಂಪೂರ್ಣ ಸಾಕ್ಷ್ಯಾಚಿತ್ರಕ್ಕೆ ಕ್ಲಿಕ್ ಮಾಡಿ
badekkila.blogspot.com (English) and badekkila.wordpress.com (Kannada) $ÂbñÜÅPæR QÉP… ÊÜÞw www.youtube.com/watch?v=sh8OQ0C14Yc
No comments:
Post a Comment