Thursday, March 24, 2011

ಬಾಲಿವುಡ್ ‘ಅ ’ಸಾಮಿ


ಬಾಲಿವುಡ್ ಇರಲಿ ಯಾವುದೇ ವುಡ್‌ಗಳಿರಲಿ ಅದ್ನಾನ್ ಸಾಮಿ ಸಂಗೀತ ಪ್ರೇಮಿಗಳನ್ನು ಎಂದಿಗೂ ಕೈಕೊಟ್ಟಿಲ್ಲ. ತನ್ನ ಆಲ್ಬಂಗಳಲ್ಲಿ ವಿರಹ ತುಂಬಿದ ಗೀತೆಗಳನ್ನು ಸುರಿಸಿ ಭಗ್ನ ಪ್ರೇಮಿಗಳಿಗೆ ಧೈರ್ಯ ತುಂಬಿದ್ದು ಇದೇ ಅದ್ನಾನ್ ಸಾಮಿ ಈಗ ನಾಲ್ಕನೇ ಮದುವೆಯಾಗಿರೋದು ಗೊತ್ತಾ..?

ಲಿಫ್ಟ್ ಮಾಡಲು ಸಾಧ್ಯವಿಲ್ಲದೇ ಒದ್ದಾಡುವ ಟನ್‌ಗಟ್ಟಲೆ ತೂಗುವ ದೇಹ. ರಾಗಿ ಮುದ್ದೆಯನ್ನು ಬೀಟ್ ಮಾಡಿ ಬಿಡುವ ಮುದ್ದು ಮುದ್ದಾದ ಮೊಗ. ಹುಡುಗಿಯರು ಫೀದಾ ಆಗುವ ನಗು. ಭಗ್ನ ಪ್ರೇಮಿಗಳನ್ನು ತಣ್ಣನೆ ಮಾಡಿಬಿಡುವಂತಹ ವಾಯ್ಸ್ ಇದು ಬಾಲಿವುಡ್ ಸಿಂಗರ್ ಅದ್ನಾನ್ ಸಾಮಿ ಜಸ್ಟ್ ಇಂಟರ್‌ಡಕ್ಷನ್. ಬಾಲಿವುಡ್ ಇರಲಿ ಯಾವುದೇ ವುಡ್‌ಗಳಿರಲಿ ಅದ್ನಾನ್ ಸಾಮಿ ಸಂಗೀತ ಪ್ರೇಮಿಗಳನ್ನು ಎಂದಿಗೂ ಕೈಕೊಟ್ಟಿಲ್ಲ. ತನ್ನ ಆಲ್ಬಂಗಳಲ್ಲಿ ವಿರಹ ತುಂಬಿದ ಗೀತೆಗಳನ್ನು ಸುರಿಸಿ ಭಗ್ನ ಪ್ರೇಮಿಗಳಿಗೆ ಧೈರ್ಯ ತುಂಬಿದ್ದು ಇದೇ ಅದ್ನಾನ್ ಸಾಮಿ ಎಂದರೆ ಅದು ಹೆಚ್ಚುಗಾರಿಕೆಯ ಮಾತಲ್ಲ.
ಅದ್ನಾನ್ ನಿಜಕ್ಕೂ ಭಾರತದವನೇನಲ್ಲ. ಆದರೆ ಭಾರತದ ಸಂಗೀತ ಪ್ರೇಮಿಗಳು ಆತನಿಗೆ ಪ್ರೀತಿಯನ್ನು ತುಂಬಿ ತುಂಬಿಕೊಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಹುಟ್ಟಿದ ಭಾರತದಲ್ಲಿ ವಾಸಿಸುತ್ತಿದ್ದ ತಂದೆ ಮತ್ತು ಭಾರತೀಯ ಮುಸ್ಲಿಂ ತಾಯಿಗೆ ಲಂಡನ್‌ನಲ್ಲಿ ಹುಟ್ಟಿದ ಮಗ ಅದ್ನಾನ್ ಸಾಮಿ. ಅದಕ್ಕಿಂತಲೂ ಹೆಚ್ಚಾಗಿ ಅದ್ನಾನ್ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ಮಾತ್ರ ವಿವಾಹ ಹಾಗೂ ಡೈವೋರ್ಸ್‌ನಿಂದ ಎಂದರೆ ಅದು ತಪ್ಪಾಗಲಾರದು. ಇತ್ತೀಚೆಗಷ್ಟೇ ಆತನ ಮೂರನೇ ಪತ್ನಿ ಸಬಾಹ್ ಗಲಾಧರಿಗೆ ಸೋಡಾ ಚೀಟಿ ಕೊಟ್ಟು ಕೆಲವೇ ಟೈಮ್ ಮುಗಿದಿದೆ. ಈಗ ಮತ್ತೊಂದು ಹುಡುಗಿಯನ್ನು ಬಲೆಗೆ ಹಾಕಿಕೊಂಡಿದ್ದಾನೆ.
ಅಪಘಾನಿಸ್ತಾನದಲ್ಲಿ ಹುಟ್ಟಿ ಲಂಡನ್‌ನ ಪ್ರಜೆ ಎನ್ನಿಸಿಕೊಂಡಿರುವ ರೋಯಾ ಫೈರ್‌ಬೀ ಅದ್ನಾನ್ ಸಾಮಿಯ ಲೇಟೆಸ್ಟ್ ಪತ್ನಿ ಎನ್ನಿಸಿಕೊಂಡಿದ್ದಾರೆ. ಅಮೆರಿಕದ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುವ ರೋಯಾ ಹಾಗೂ ಅದ್ನಾನ್ ಕೆಲವು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಪ್ರಾಜೆಕ್ಟ್ ವರ್ಕ್‌ಗಾಗಿ ಭಾರತಕ್ಕೆ ಭೇಟಿ ನೀಡಿದ ರೋಯಾ ಅದ್ನಾನ್ ಸಾಮಿಯ ಸಂಗೀತಕ್ಕೆ ಮರಳಾಗಿ ಹೋಗಿದ್ದಳು. ಅಲ್ಲಿಯೇ ಇಬ್ಬರ ನಡುವೆ ಪ್ರೀತಿ ಚಿಗುರಿ ನಿಂತು ವಿವಾಹದಲ್ಲಿ ಅಂತ್ಯ ಕಂಡಿದ್ದು ಮಾತ್ರ ಖುಶಿಯ ವಿಚಾರ ಅನ್ನಿ. ಈ ಮೂಲಕ ಅದ್ನಾನ್ ನಾಲ್ಕನೇ ಪತ್ನಿಯ ಪತಿಯಾಗಿರೋದು ಮಾತ್ರ ವಿಶೇಷ .
ಸಾಮಿಯ ಮ್ಯಾರೇಜ್ ಕತೆ:
ಮೊದಲ ಪತ್ನಿಯ ವಿವರಗಳಂತೂ ಖುದ್ದು ಅದ್ನಾನ್‌ಗೆ ಗೊತ್ತಿರಲು ಸಾಧ್ಯವಿಲ್ಲ. ಎಲ್ಲಿದ್ದಾಳೋ... ಹೇಗಿದ್ದಾಳೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಂದಹಾಗೆ ಸಾಮಿಯ ಎರಡನೇ ಪತ್ನಿ ಝೇಬಾ ಭಕ್ತಿಯಾರ್. ಝೇಬಾಗೆ ೧೯೯೭ರಲ್ಲಿ ಡೈವೋರ್ಸ್ ಕೊಟ್ಟ ನಂತರ ದುಬಾಯಿ ಮೂಲದ ಸಬಾಹ್ ಗಲಾಧರಿ ಜತೆ ಪ್ರೀತಿ ಹುಟ್ಟಿಕೊಂಡು ವಿವಾಹದಲ್ಲಿ ಅಂತ್ಯ ಕಂಡಿತ್ತು. ಆಕೆಗೂ ಅದು ಮೊದಲ ಮದುವೆಯಲ್ಲ ! ಈ ಮೊದಲೇ ಅವಳು ಎರಡು ಗಂಡಂದಿರ ಮುದ್ದಿನ ಪತ್ನಿಯಾಗಿದ್ದವಳು..!!
ಅಂತೂ ಇಂತೂ ೧೦ ವರ್ಷಗಳ ಕಾಲ ಸಂಸಾರದಲ್ಲಿ ಸಾರ ಇಲ್ಲ ಎಂದುಕೊಂಡು ಅದ್ನಾನ್- ಸಬಾಹ್ ಬೇರೆ ಬೇರೆ ಆಗಿ ಹೋದರು. ಆದರೆ ನಂತರ ಮತ್ತೊಂದು ಸಾರಿ ಜತೆಯಾದರು. ಮತ್ತೆ ಬೇರೆ ಬೇರೆಯಾದರು. ಇವೆಲ್ಲದರ ನಡುವೆ ಅದ್ನಾನ್ ಸಾಮಿ ಬಾಟಲಿಗಳಿಗೆ ಜೋತು ಬಿದ್ದ, ಅದರ ಸುತ್ತಮುತ್ತ ನರಳಾಡಿದ, ಬಾಲಿವುಡ್ ನಟಿ ಅಮಿಷಾ ಪಟೇಲ್ ಜತೆಗೂ ಲಿಂಕ್ ಇದೆ ಎನ್ನುವ ಗಾಸಿಪ್‌ಗಳು ಎರ್ರಾಬಿರ್ರಿ ಹರಿದಾಡಿಕೊಂಡವು. ಕೊನೆಗೂ ಅದ್ನಾನ್‌ಗೆ ಹೊಸ ಲೈಫ್ ಕೊಟ್ಟದ್ದು ಮಾತ್ರ ರೋಯಾ. ಅವಳಿಂದಾಗಿ ಅದ್ನಾನ್ ಬಾಟಲಿ ನೋಡಿ ಮಲಗಿಲ್ಲ. ಬಾಲಿವುಡ್‌ನಲ್ಲೂ ಆತನ ಸಂಗೀತಕ್ಕೆ ಈಗ ಕಿಮ್ಮತ್ತು ಬರಲಾರಂಭವಾಗಿದೆ. ಬೇರೆ ಸಂಗೀತ ನಿರ್ದೇಶಕರ ಕೈಕೆಳಗೆ ಹಾಡುವುದಕ್ಕೂ ರೆಡಿಯಾಗಿದ್ದಾನೆ. ಅದೆಲ್ಲ ಬಿಟ್ಟು ಬಿಡಿ ಸಾಮಿಯ ಮದುವೆ ಕತೆ ಇಲ್ಲಿಗೆ ಮುಗಿದು ಹೋಗುತ್ತಾ ಎನ್ನುವುದು ಡಾಲರ್ ಪ್ರಶ್ನೆ.

No comments:

Post a Comment