
ಇದು ಸಿಕ್ರೇಟ್ ಕ್ರಿಕೆಟ್ ಪಂದ್ಯಾಟ. ಎರಡು ಹೃದಯಗಳ ನಡುವಿನ ಪಂದ್ಯಾಟ.. ಟೀಮ್ ಇಂಡಿಯಾ ಸ್ಪಿನ್ನರ್ ಭಜ್ಜಿಯ ಅವರ ದೂಸ್ರಾ ಬೌಲಿಂಗ್‌ಗೆ ಬಾಲಿವುಡ್ ನಟಿ ಗೀತಾ ಬಾಸ್ರಾ ಔಟ್ ಆಗಿದ್ದಾರೆ. ಆದರೆ ನಿರ್ಧಾರ ಥರ್ಟ್ ಅಂಪಾಯರಿಂಗ್‌ನಲ್ಲಿ ಬಾಕಿ ಉಳಿದಿದೆ..
ಭಾರತದ ಖ್ಯಾತ ಸ್ಪಿನ್ನರ್ ಹರಭಜನ್ ಸಿಂಗ್‌ರ ದೂಸ್ರಾ ಬೌಲಿಂಗ್ ಮೋಡಿಗೆ ಬಾಲಿವುಡ್ ನಟಿ ಗೀತಾ ಬಾಸ್ರಾ ತನ್ನ ವಿಕೆಟ್‌ನ್ನು ಕಳೆದುಕೊಂಡಿದ್ದಾರೆ. ಅಂದಾಹಾಗೆ ಇವರ ನಡುವೆ ಯಾವಾಗ ಕ್ರಿಕೆಟ್ ನಡೆಯಿತು ಎಂದು ಪ್ರಶ್ನೆ ಕೇಳ ಬೇಡಿ. ಕಾರಣ ಇದೊಂದು ಸಿಕ್ರೇಟ್ ಪಂದ್ಯಾಟ. ಇಬ್ಬರ ಹೃದಯಗಳ ನಡುವೆ ಈ ಪಂದ್ಯಾಟ ನಡೆದಿದ್ದು.. ಯಾವಾಗ ಅಂತೀರಾ...? ಕಳೆದ ಐದು ತಿಂಗಳುಗಳಿಂದ ಈ ಪಂದ್ಯಾಟ ನಡೆಯುತ್ತಾ ಇತ್ತು. ಆದರೆ ಪಂದ್ಯಾಟದ ಫಲಿತಾಂಶಗಳು ಈಗ ಹೊರ ಬರುತ್ತಿದೆ.
ಸಾರ್ವಜನಿಕ ಪಾರ್ಟಿಗಳಲ್ಲಿ.. ಪಾರ್ಕ್... ಹೀಗೆ ಇಬ್ಬರಿಗೂ ಹತ್ತಿರವಾದ ಸ್ಥಳಗಳಲ್ಲಿ ಅವರು ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ಇಬ್ಬರ ಅಭಿಮಾನಿಗಳು ತದೇಕ ಚಿತ್ತದಿಂದ ಈ ಪಂದ್ಯಾಟದ ಕಾಮೆಂಟರಿ ಮಾತ್ರ ಕೇಳಲು ಆರ್ಹರಾಗಿದ್ದಾರೆ ಎಂದು ಒಂದು ವಲಯ ಹೇಳಿಕೊಳ್ಳುತ್ತಿದೆ. ‘ಪಂಜಾಬ್ ಕಾ ಪುತ್ತರ್’ಭಜ್ಜಿಯ ಮನೆಗೆ ಗೀತಾ ಎರಡು ದಿನಗಳ ಮೊದಲು ದಿಢೀರ್ ಎಂದು ಭೇಟಿ ಕೊಟ್ಟಿದ್ದಾರೆ. ಇದು ಬರೀ ಕ್ಯಾಸುವಲ್ ಭೇಟಿ ಅಂತಾ ನೀವು ತಿಳಿದುಕೊಳ್ಳಬೇಡಿ. ಭಜ್ಜಿಯ ಹೆತ್ತವರ ಜತೆಯಲ್ಲಿ ತುಂಬಾ ಹೊತ್ತು ಗೀತಾ ಮಾತನಾಡಿಕೊಂಡು ಖುಷಿಯಿಂದ ಹೊರ ಬಂದಿದ್ದಾರೆ ಎಂಬ ಸೂಚನೆಯೊಂದು ಅವರ ಆಪ್ತರ ವಲಯ ಹೇಳಿದೆ.
ಜಲಂಧರ್‌ನಲ್ಲಿ ಇತ್ತೀಚೆಗೆ ಭಜ್ಜಿಯ ಸಹೋದರಿ ಸಂದೀಪ್ ಕೌರ್ ಅವರ ವಿವಾಹ ಸಮಾರಂಭದಲ್ಲಿ ಗೀತಾ ಬಾಸ್ರಾ ತುಂಬಾ ಮುತುವರ್ಜಿ ವಹಿಸಿಕೊಂಡು ಮದುವೆ ಮನೆಯಲ್ಲಿ ಓಡಾಡುತ್ತಿದ್ದರು. ಭಜ್ಜಿಯ ಕುಟುಂಬದ ಸದಸ್ಯೆಯಂತೆ ಮದುವೆಗೆ ಬರುವ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದ ರೀತಿ ಗೀತಾರ ಮುಂದಿನ ಹೆಜ್ಜೆಯ ಸೂಚನೆ ನೀಡಿತ್ತು. ಇತ್ತೀಚೆಗೆ ಮುಂಬಯಿ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯಾಟಗಳು ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿ ಕೂತ ಗೀತಾರ ನೋಟ ಭಜ್ಜಿಯ ಬೌಲಿಂಗ್ ಮೇಲೆ ಇತ್ತು. ಟಿವಿ ವಾಹಿನಿಗಳು ಪದೇ ಪದೇ ಗೀತಾರನ್ನು ತೋರಿಸುತ್ತಿದ್ದಾಗ ಭಜ್ಜಿಯ ದೂಸ್ರಾದಲ್ಲೂ ಈ ಹೊಳಪು ಕಾಣಿಸಿಕೊಳ್ಳುತ್ತಿತ್ತು.
ಈ ಕುರಿತು ಗೀತಾರಲ್ಲಿ ಮಾಧ್ಯಮಗಳು ಪ್ರಶ್ನೆ ಎತ್ತಿದಾಗ ಮುಂಬಯಿ ಇಂಡಿಯನ್ಸ್ ಮಾಲೀಕರಾದ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಆಹ್ವಾನದ ಮೇರೆಗೆ ತಾನು ಮುಂಬಯಿ ಟೀಮ್‌ನ್ನು ಚಿಯರ್ ಮಾಡಲು ಬಂದಿದ್ದೆ ಎಂದು ಹೇಳಿಕೆ ನೀಡಿದ್ದರು. ಗೀತಾ ತನ್ನ ಹಾಗೂ ಭಜ್ಜಿರ ಸಂಬಂಧವನ್ನು ಅಲ್ಲಗೆಳೆಯುತ್ತಾ ತಾವಿಬ್ಬರೂ ಗುಡ್ ಫ್ರೆಂಡ್ಸ್.. ಉಳಿದಂತೆ ನಟನಾ ವೃತ್ತಿಯ ಕುರಿತು ತಾನು ಸಿರೀಯಸ್ ಆಗಿದ್ದೇನೆ ಎಂದು ನಗುತ್ತಾ ಉತ್ತರಿಸಿದ್ದರು. ಅವರು ನಿಜಕ್ಕೂ ಯಾವುದರಲ್ಲಿ ಸಿರೀಯಸ್ ಆಗಿದ್ದಾರೆ ಎಂಬ ಡಾಲರ್ ಪ್ರಶ್ನೆ ಮಾತ್ರ ಅಭಿಮಾನಿಗಳನ್ನು ಎದುರುಗೊಂಡಿದೆ.
No comments:
Post a Comment