
‘ಹಿಸ್’ ಚಿತ್ರದಲ್ಲಿ ನಾಗಿಣಿಯಾಗಿ ಹರಿದಾಡಿದ ಮಲ್ಲಿಕಾರಿಗೆ ಈಗ ನಾಗದೋಷ ಕಾಡುತ್ತಿದೆಯಂತೆ ! ಈ ದೋಷ ಪರಿಹಾರದ ಮಾರ್ಗವಾಗಿ ‘ಸರ್ಪ ಸಂಸ್ಕಾರ’ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಲ್ಲಿಕಾ ಶೆರವಾತ್ ಬರುತ್ತಿದ್ದಾಳೆ ಎನ್ನೋದು ಲವಲವಿಕೆಗೆ ಸಿಕ್ಕಿದ ನ್ಯೂಸ್...
ಸೆಕ್ಸಿ ತಾರೆ ಮಲ್ಲಿಕಾರ ಬಹುನಿರೀಕ್ಷಿತ ಹಾಲಿವುಡ್ ಚಿತ್ರ ‘ ಹಿಸ್’ ಪರದೆಯ ಮ್ಯಾಲೆ ಭರ್ಜರಿಯಾಗಿ ಹರಿದಾಡುತ್ತಿದೆ. ಆಂಗ್ಲ ಭಾಷೆಯ ಜತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲದಲ್ಲಿ ತೆರೆಕಂಡ ‘ಹಿಸ್ ’ ಮಲ್ಲಿಕಾರ ಬಣ್ಣದ ಕೆರಿಯರ್‌ಗೆ ಹೊಸ ಟ್ವೀಸ್ಟ್ ಕೊಟ್ಟಿದೆ. ‘ಹಿಸ್’ ತೆರೆ ಕಾಣುತ್ತಿದ್ದಂತೆ ಹಾಲಿವುಡ್‌ನ ಎರಡು ಚಿತ್ರಗಳು ಮಲ್ಲಿಕಾರ ಜೋಳಿಗೆಗೆ ಬಂದು ಬಿದ್ದಿದೆ. ‘ಹಿಸ್’ನ ತೆರೆ ಮೇಲಿನ ಓಡಾಟ ಮಲ್ಲಿಕಾರಿಗೆ ಖುಶಿ ಕೊಟ್ಟರೂ ಅಷ್ಟೇ ಹೆದರಿಕೆ ಹುಟ್ಟಿಸಿದೆ ಎನ್ನೋದು ಅವರ ಆಪ್ತ ವಲಯದ ಮಾತು. ‘ಹಿಸ್’ ಚಿತ್ರದಲ್ಲಿ ಮಲ್ಲಿಕಾರದ್ದು ನಾಗಿಣಿ ಪಾತ್ರ. ಅದರಲ್ಲೂ ಬಾಲಿವುಡ್ ಈ ಹಿಂದೆ ನೋಡಿರದ ಹಾಗೂ ಮಾಡಿರದ ಹೈ- ಕ್ಲಾಸ್ ನಾಗಿಣಿಯಾಗಿ ಮಲ್ಲಿಕಾ ಚಿತ್ರದ ತುಂಬಾ ಹರಿದಾಡಿ ಬಿಡುತ್ತಾರೆ.
ನಾಗಿಣಿ ಪಾತ್ರ ಮಾಡಿದವರಿಗೆ ನಾಗನ ದೋಷ ಬಂದು ಬಿಡುತ್ತದೆ ಎನ್ನೋದು ಮಲ್ಲಿಕಾರಿಗೆ ಈಗ ಭಯ ಕಾಡುತ್ತಿದೆ. ಈ ದೋಷದ ಪರಿಹಾರಕ್ಕೆ ತಿರುವಂತಪುರದ ರಾಣಿ ಲಕ್ಷ್ಮೀಬಾಯಿ ಮಲ್ಲಿಕಾರಿಗೆ ನಾಗನ ಆರಾಧಕ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ. ಇತ್ತೀಚೆಗಷ್ಟೇ ರಾಣಿ ಲಕ್ಷ್ಮೀ ಬಾಯಿ ಸಲಹೆ ಮೇರೆಗೆ ಮಲ್ಲಿಕಾ ಶೆರವಾತ್ ಕೇರಳದ ಪ್ರಸಿದ್ಧ ನಾಗ ಆರಾಧಕ ಕ್ಷೇತ್ರ ಶ್ರೀ ನಾಗಾರಾಜ ದೇವಸ್ಥಾನಕ್ಕೆ ಬಂದಿದ್ದರು. ಅವರ ಜತೆಯಲ್ಲಿ ಹಿಸ್ ಟೀಮ್ ಲೀಡರ್ ಜೆನ್ನಿಫರ್ ಲಿಂಚ್, ಚಿತ್ರದ ನಿರ್ಮಾಪಕರು ಹಾಗೂ ತಾಂತ್ರಿಕ ತಂಡ ಕೂಡ ಇತ್ತು. ಅದಕ್ಕಾಗಿ ನಾಗನ ಪೂಜೆ ಮಾಡುವ ದೇವಸ್ಥಾನಗಳಿಗೆ ಭೇಟಿ ಕೊಡುವ ಯೋಜನೆಯೊಂದನ್ನು ಮಲ್ಲಿಕಾ ಶೆರವಾತ್ ತಯಾರಿಸಿದ್ದಾರೆ. ಅದರಲ್ಲಿ ಕರಾವಳಿಯ ನಾಗನ ಆರಾಧಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನದಲ್ಲಿದೆ.
ಮಲ್ಲಿಕಾ ಶೆರವಾತ್ ತನ್ನ ಮುಂದಿನ ಹಾಲಿವುಡ್ ಪ್ರಾಜೆಕ್ಟ್‌ಗಳ ಜತೆಯಲ್ಲಿ ಬಾಲಿವುಡ್‌ನ ದಮಾಲ್-೨ ಚಿತ್ರೀಕರಣದ ಡೇಟ್ಸ್‌ಗಳು ಕ್ಲ್ಯಾಷ್ ಆಗುತ್ತಿರುವುದರಿಂದ ಬಿಡುವು ಮಾಡಿಕೊಂಡು ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ದಿಢೀರ್ ಭೇಟಿ ಕೊಟ್ಟು ‘ಸರ್ಪ ಸಂಸ್ಕಾರ’ ಪೂಜಾವಿಯಲ್ಲಿ ಭಾಗವಹಿಸಲಿದ್ದಾರೆ. ಇವರ ಜತೆಗೆ ತಿರುವಂತಪುರದ ರಾಣಿ ಲಕ್ಷ್ಮೀ ಬಾಯಿ, ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋವಿಂದ ಮೆನನ್, ನಿರ್ದೇಶಕಿ ಜೆನ್ನಿಫರ್ ಲಿಂಚ್ ಕೂಡ ಬರುವ ಸಾಧ್ಯತೆಗಳಿವೆ ಎಂದು ಮಲ್ಲಿಕಾರ ಆಪ್ತ ವಲಯದ ಮೂಲವೊಂದು ತಿಳಿಸಿದೆ. ಈಗಾಗಲೇ ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಾಲಿವುಡ್- ಸ್ಯಾಂಡಲ್‌ವುಡ್ ನಟ- ನಟಿಯರ, ರಾಜಕಾರಣಿಗಳ, ಕ್ರೀಡಾಪಟುಗಳ ಮೆಚ್ಚಿನ ಧಾರ್ಮಿಕ ಕ್ಷೇತ್ರವಾಗಿ ಬದಲಾಗಿದೆ. ಈ ದೇವಸ್ಥಾನಕ್ಕೆ ತಿಂಗಳಿಗೆ ಒಬ್ಬರಂತೆ ಸೆಲೆಬ್ರಿಟಿಗಳು ಮಾಧ್ಯಮಗಳ ಕಣ್ಣು ತಪ್ಪಿಸಿಕೊಂಡು ಬಂದು ಹೋಗುತ್ತಾರೆ. ಈಗ ಮಲ್ಲಿಕಾರ ಸರದಿ ಬಂದಿದೆ. ಕರಾವಳಿಗೆ ಮಲ್ಲಿಕಾ ಯಾವ ಡ್ರೆಸ್‌ನಲ್ಲಿ ಬರುತ್ತಾರೆ ಎನ್ನೋದು ಕಾದು ನೋಡಬೇಕು.
No comments:
Post a Comment