Saturday, March 19, 2011

‘ನಂದಿನಿ’ ಎಂಬ ದೂದ್ ಕಾ ಪೇಡಾ


ಬಾಲಿವುಡ್‌ನ ‘ಪಾಂಡವು’,‘ಪ್ಲ್ಯಾಟ್ ಪಾರಂ’ ಸ್ಯಾಂಡಲ್‌ವುಡ್‌ನ ‘ಸಮರ’, ‘ಬಾ ನಲ್ಲೆ ಮಧು ಚಂದ್ರಕೆ’ ಕೊಂಕಣಿಯ‘ ಭೊಗ್ಸಾಣೆ’ಯ ನಟಿ ನಂದಿನಿ ಎಲ್ಲಿ ಹೋದರು ಎಂದು ಭೂತಗನ್ನಡಿಯಲ್ಲಿ ಹುಡುಕಾಡಿದಾಗ ಕೆನಡಾದ ಐಷಾರಾಮಿ ಮನೆಯೊಂದರಲ್ಲಿ ಮುಂಬಯಿಯ ಲೋಖನ್‌ವಾಲಾದ ಹುಡುಗನೊಂದಿಗೆ ಲೀವಿಂಗ್ ರಿಲೇಷನ್ ಶಿಪ್‌ನಲ್ಲಿ ಸ್ವರ್ಗ ಸುಖ ಕಾಣುತ್ತಿದ್ದಾರೆ ಎಂದು ನಂದಿನಿ ಫೇಸ್ ಬುಕ್‌ನಲ್ಲಿ ಖುಲ್ಲಂ ಖುಲ್ಲಾ ಹೇಳಿಕೊಂಡಿದ್ದಾರೆ.


ಅವಳು ಮುಖಕ್ಕೆ ಬಣ್ಣ ಹಚ್ಚಿ ಕೊಳ್ಳದೇ ಬರೋಬರಿ ಹದಿನೈದು ವರ್ಷಕ್ಕಿಂತ ಜಾಸ್ತಿಯಾಗಿರಬಹುದು ಮಾರಾಯ್ರೆ. ಈಗ ಆಕ್ಟಿಂಗ್ ಎಂದಾಗ ಮುಖ ಸಿಂಡರಿಸಿಕೊಳ್ಳುತ್ತಾಳೆ. ಅಪರೂಪಕ್ಕೊಮ್ಮೆ ಕಾಲ್ ಮಾಡುತ್ತಿದ್ದಳು. ತುಂಬಾನೇ ಸಾಫ್ಟ್ ಹುಡುಗಿ. ಮನೆ- ಕುಟುಂಬ ಅಂತಾಲೇ ಬಡಬಡಿಸುತ್ತಿದ್ದಳು. ಆಕ್ಟಿಂಗ್ ಕೂಡ ಅಷ್ಟೇ ಪ್ರೀತಿಯಿಂದ ಮಾಡುತ್ತಿದ್ದಳು. ಒಳ್ಳೆಯ ಪ್ರತಿಭಾವಂತೆ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ. ಆದ್ರೂ ಕಳೆದ ಕೆಲವು ವರ್ಷಗಳಿಂದ ಟಚ್‌ನಲ್ಲಿ ಇಲ್ಲ ಸಾರ್ ಎಂದು ನಿರ್ದೇಶಕ ರಿಚ್ಚಿ ಲವಲವಿಕೆಗೆ ನಗುತ್ತಾ ಹೇಳುತ್ತಿದ್ದರು.
ಕರಾವಳಿಯ ಕೊಂಕಣಿ ಪ್ಲಸ್ ತುಳುವಿನಲ್ಲಿ ರಿಚರ್ಡ್ ಕ್ಯಾಸ್ಟೋಲಿನೋ ಹೆಸರು ಬಹಳ ಓಡುತ್ತಿದೆ. ಎರಡು- ಮೂರು ವರ್ಷಕ್ಕೊಂದು ಬಾರಿ ಊರಿಗೆ ಜಾತ್ರೆ ಬಂತು ಎನ್ನುವ ರೀತಿಯಲ್ಲಿ ರಿಚ್ಚಿ ಸಿನ್ಮಾ ತೆಗೆಯೋದು ಗ್ಯಾರಂಟಿ ಬಿಡಿ ಅಂತಾ ಕಂಕನಾಡಿಯ ಕೋಸ್ತಾ ಹೋಟೆಲ್‌ನಲ್ಲಿ ಚಿಕನ್ ಮೆಲ್ಲುತ್ತಾ ಮಾತನಾಡುವವರು ಬೇಕಾದಷ್ಟು ಮಂದಿ ಸಿಗ್ತಾರೆ ಬಿಡಿ. ಅಂದಹಾಗೆ ರಿಚ್ಚಿ ನಿರ್ದೇಶನದ ಕರ್ನಾಟಕ ಸರಕಾರದ ಪ್ರಾದೇಶಿಕ ಚಿತ್ರ ಎಂದು ಪ್ರಶಸ್ತಿ ಪಡೆದ ಕೊಂಕಣಿಯ ‘ಭೊಗ್ಸಾಣೆ’ ಚಿತ್ರವೇ ಈ ನಟಿಯ ಕೊನೆಯ ಚಿತ್ರ. ಅಲ್ಲಿಂದ ನಟಿಯ ಸಿನ್ಮಾ ಪುಟಗಳು ಮುಗಿದು ಹೋಗುತ್ತದೆ.
ಅವಳು ನಂದಿನಿ ಸಿಂಗ್ ಎಲ್ಲರೂ ಕರೆಯುವುದು ನಂದಿನಿ ಅಂತಾ. ಮೂಲತಃ ಸಿಂದಿ ಬೆಡಗಿ. ಹಾಲಿನಂತಹ ವೈಟ್ ಆಂಡ್ ವೈಟ್ ಬ್ವೂಟಿ. ದೂದ್ ಕಾ ಪೇಡಾ ಇದ್ದ ಹಾಗೆ ಮಾರಾಯ್ರೆ. ಡಯಟ್‌ಗೆ ಬೀಳದಿದ್ದರೂ ನಂದಿನಿದ್ದು ಸ್ಲೀಮ್ ಬಾಡಿ ಎನ್ನೋದು ಬಹಳಷ್ಟು ಪ್ರೇಕ್ಷಕರ ಮಾತು. ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್‌ರ ‘ಬಾ ನಲ್ಲೆ ಮಧು ಚಂದ್ರಕೆ’ ಸಿನ್ಮಾದ ನಾಯಕಿಯಾಗಿದ್ದು ಕೂಡ ಕನ್ನಡ ಪ್ರೇಕ್ಷಕರು ಮರೆತಿರಲು ಸಾಧ್ಯವಿಲ್ಲ. ೧೯೯೩ರಲ್ಲಿ ಬಿಡುಗಡೆಯಾದ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿತ್ತು. ‘ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ ಬಂದಾಳೋ.... ’ ಎಂಬ ಜನಪ್ರಿಯ ಹಾಡು ಈಗಲೂ ಸಂಗೀತ ಪ್ರೇಮಿಗಳಿಗೆ ಹೊಸ ಲೋಕವನ್ನು ತೋರಿಸುವಂತಿದೆ.
ನಂದಿನಿಗೆ ಈ ಚಿತ್ರ ದೊಡ್ಡ ಬ್ರೇಕ್ ನೀಡಿತ್ತು ನಿಜ.
ಅಲ್ಲಿಂದ ನಂದಿನಿ ಬಾಲಿವುಡ್‌ಗೂ ಹೋಗಿ ಅಕ್ಷಯ್ ಕುಮಾರ್ ಜತೆಯಲ್ಲಿ ‘ಪಾಂಡವು’, ’ಪ್ಲ್ಯಾಟ್ ಪಾರಂ’ ಚಿತ್ರದಲ್ಲೂ ನಟಿಸಿ ಬಂದಿದ್ದರು. ಕನ್ನಡದ ‘ಸಮರ’ದಲ್ಲೂ ಕ್ಲಬ್ ಸಾಂಗ್‌ನಲ್ಲಿ ಕುಣಿದ ನಂದಿನಿ ಪ್ರಪಾತಕ್ಕೆ ಇಳಿಯುತ್ತಾ ಸಾಗಿದ್ದು ಮಾತ್ರ ಯಾರಿಗೂ ಗೊತ್ತೇ ಆಗಿಲ್ಲ ಬಿಡಿ. ನಂದಿನಿ ಎಲ್ಲಿ ಹೋದರು ಎಂದು ಭೂತಗನ್ನಡಿಯಲ್ಲಿ ಹುಡುಕಾಡಿದಾಗ ಕೆನಡಾದ ಐಷಾರಾಮಿ ಮನೆಯೊಂದರಲ್ಲಿ ಮುಂಬಯಿಯ ಲೋಖನ್‌ವಾಲಾದ ಹುಡುಗನೊಂದಿಗೆ ಲೀವಿಂಗ್ ರಿಲೇಷನ್ ಶಿಪ್‌ನಲ್ಲಿ ಸ್ವರ್ಗ ಸುಖ ಕಾಣುತ್ತಿದ್ದಾರೆ ಎನ್ನುವ ಶಾಕಿಂಗ್ ನ್ಯೂಸ್ ಲವಲವಿಕೆಗೆ ಬಡಿಯಿತು. ಇಂತಹ ಸಂಬಂಧ ತಪ್ಪಲ್ಲ ಕಣ್ರಿ ಅಂತಾ ಸರಕಾರವೇ ಕಾನೂನಿನ ಮೂಲಕ ಹೇಳಿಕೊಂಡು ತಿರುಗಾಡುತ್ತಿರುವಾಗ ಈ ಸಂಬಂಧಗಳನ್ನು ಕೆದಕುವುದು ಸರಿಯಲ್ಲ. ಸಿನ್ಮಾ ಲ್ಯಾಂಡ್‌ನಲ್ಲಿ ಇರುವವರಿಗೆ ಇದೆಲ್ಲ ಕಾಮನ್ ವಿಚಾರ ಬಿಟ್ಟು ಬಿಡಿ. ಬಹಳ ವರ್ಷಗಳಿಂದ ‘ಕರಿಮಣಿ’ ಸರ ಕಟ್ಟಿ ಕೊಳ್ಳದೇ ನಂದಿನಿ ಬದುಕು ನಡೆಸೋದು ರಿಯಾಲಿ ಗ್ರೇಟ್ ಮಾರಾಯ್ರೆ. ಫೇಸ್ ಬುಕ್‌ನಲ್ಲಿ ನಂದಿನಿ ಈ ಎಲ್ಲ ಸಿಕ್ರೇಟ್ ವಿಚಾರಗಳನ್ನು ಬಿಚ್ಚಿಟ್ಟಿರೋದು ಮಾತ್ರ ಅವರ ‘ಎದೆಗಾರಿಕೆ’ ಯನ್ನು ತೋರಿಸುತ್ತಿದೆ.
.....
ಚಿತ್ರ: ಸುನೀಲ್ ದಾರಂದಕುಕ್ಕು
...........


No comments:

Post a Comment