
ಬಾಲಿವುಡ್‌ನ ಪಡಸಾಲೆಲ್ಲೊಂದು ಬಿಗ್‌ಸುದ್ದಿ ಗರಿಬಿಚ್ಚಿ ಕೂತಿದೆ. ಏನಪ್ಪಾ ವಿಷ್ಯಾ ಅಂದ್ರೆ ಅಮಿತಾಭ್ ಬಚ್ಚನ್, ಶಾರುಕ್ ಖಾನ್, ಸಲ್ಮಾನ್ ಖಾನ್ ಇವರ ಸಾಲಿನಲ್ಲಿ ಈಗ ‘ಡಬ್ಬೂ ’ಹೃತಿಕ್ ರೋಷನ್ ಬಂದು ನಿಂತಿದ್ದಾರೆ. ಅಂದಹಾಗೆ ‘ಡಬ್ಬೂ ’ ಎಂದರೆ ಹೃತಿಕ್‌ರ ನಿಕ್ ನೇಮ್. ಇಷ್ಟರವರೆಗೆ ಬರೀ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ‘ಡಬ್ಬೂ’ನ ತಲೆ ಇನ್ನೂ ಮುಂದೆ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತದೆ. ಖಾಸಗಿ ಚಾನೆಲ್‌ವೊಂದು ದೊಡ್ಡ ಮಟ್ಟದ ಡ್ಯಾನ್ಸ್ ರಿಯಾಲಿಟಿ ಶೋವನ್ನು ಕಿರುತೆರೆಗೆ ತರುವ ಕೆಲಸ ಮಾಡುತ್ತಿದೆ. ಇದರಲ್ಲಿ ಡಬ್ಬೂ ‘ಜಡ್ಜ್’ರ ಸ್ಥಾನದಲ್ಲಿ ಕೂರಿಸುವ ಕೆಲಸವನ್ನು ಈ ಚಾನೆಲ್ ಈಗಾಗಲೇ ಮಾಡಿದೆ.
ಅದಕ್ಕಾಗಿ ಹೃತಿಕ್ ಪಡೆಯುವ ಸಂಭಾವಣೆ ಪ್ರತಿಯೊಂದು ಎಪಿಸೋಡ್‌ಗೆ ಭರ್ಜರಿ ೨ ಕೋಟಿ ರೂ. ಚಾನೆಲ್‌ನಿಂದ ಸುಲಿಗೆ ಮಾಡಲಿದ್ದಾರೆ ಎನ್ನೋದು ಚಾನೆಲ್‌ನಿಂದ ಬಂದ ಗುಪ್ತ ಮಾಹಿತಿ. ಈ ಕೋಟಿ ವಿಷ್ಯಾವನ್ನು ಖುದ್ದು ‘ಡಬ್ಬೂ’ನೂ ಹೌದೆಂದು ಇತ್ತೀಚೆಗೆ ಶೋನ ಕುರಿತು ಮುಂಬಯಿಯಲ್ಲಿ ಕರೆಸಿದ್ದ ಪ್ರೆಸ್‌ಮೀಟ್‌ನಲ್ಲಿ ಹೇಳಿಕೊಂಡಿದ್ದಾನೆ. ‘ಈ ರಿಯಾಲಿಟಿ ಶೋನಲ್ಲಿ ನಾನು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅದಕ್ಕಾಗಿ ರಿಯಾಲಿಟಿ ಶೋನ ನಿರ್ಮಾಪಕರು ದೊಡ್ಡ ಮೊತ್ತವನ್ನು ಆಫರ್ ಮಾಡಿದ್ದಾರೆ. ನನಗೂ ಈ ಮೊತ್ತ ತೃಪ್ತಿ ತಂದಿದೆ ’ಎಂದು ಹೃತಿಕ್ ಮಾಧ್ಯಮಗಳ ಮುಂದೆ ಹಣದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಕಳೆದ ವರ್ಷವನ್ನು ಗಣನೆಗೆ ತೆಗೆದುಕೊಂಡು ಮಾತನಾಡುವುದಾದರೆ ಹೃತಿಕ್ ರೋಷನ್ ಬಾಕ್ಸಾಫೀಸ್‌ನಲ್ಲಿ ಅಷ್ಟೊಂದು ಸಾಮರ್ಥ್ಯ ತೋರಿಸಲು ವಿಫಲರಾಗಿದ್ದಾರೆ. ಬಹಳ ನಿರೀಕ್ಷೆ ಹೊತ್ತುಕೊಂಡು ಬಂದ ತಂದೆ ರಾಕೇಶ್ ರೋಷನ್ ನಿರ್ಮಾಣದ ಅನುರಾಗ್ ಕಶ್ಯಫ್ ನಿರ್ದೇಶನದ ‘ಕೈಟ್ಸ್’ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿ ಸದ್ದು ಮಾಡಿತು. ಬಾನಿನೆತ್ತರಕ್ಕೆ ಹಾರುತ್ತೆ ಅಂತಾ ಹೇಳಿಕೊಳ್ಳುತ್ತಿದ್ದ ಹೃತಿಕ್ ಕೂಡ ಚಿತ್ರದ ವೇಗ ನೋಡಿ ಸಪ್ಪೆಯಾಗುತ್ತಾ ಹೋದ. ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಸಾಹೇಬ್ರು ‘ಗುಶಾರೀಸ್’ಹೃತಿಕ್‌ರ ಕೈಗೆ ಇಟ್ಟಿದ್ದರೂ, ಚಿತ್ರ ಬಹಳ ದೊಡ್ಡ ಸದ್ದೇ ಸೃಷ್ಟಿಸದೇ ಮತ್ತೆ ಹೃತಿಕ್‌ರ ನಟನೆ ಕೇರಿಯರ್ ಮಗುಚಿ ಬಿತ್ತು. ಈ ಎಲ್ಲ ಸೋಲುಗಳು ಹೃತಿಕ್‌ರನ್ನು ಗಟ್ಟಿಮಾಡಿದೆ. ಅದೇ ಈಗ ರಿಯಾಲಿಟಿ ಶೋನಲ್ಲಿ ಸಾಮರ್ಥ್ಯ ಪ್ರದರ್ಶನಕ್ಕೆ ಹೃತಿಕ್ ರೋಷನ್‌ರಿಗೆ ಅವಕಾಶ ನೀಡಿದೆ. ದೊಡ್ಡ ದೊಡ್ಡ ಚಿತ್ರಗಳ ಸೋಲಿನ ನಂತರ ದೊಡ್ಡ ಯಶಸ್ಸು ಕಾದು ಕುಳಿತಿರುತ್ತದೆ ಎನ್ನೋದು ಹೃತಿಕ್‌ರ ಮಾತು. ಅದು ನಿಜನೂ ಅಲ್ವಾ...?
ಶಮ್ಮಿ ಪ್ರಿಯ ಡಬ್ಬೂ:
‘ಕಹೋ ನಾ ಫ್ಯಾರ್ ಹೇ’ ನಿಂದ ಹಿಡಿದು ‘ಗುಜಾರೀಶ್’ವರೆಗೆ ನೃತ್ಯಕ್ಕೆ ಜಾಸ್ತಿ ಒತ್ತು ನೀಡುವ ಹೃತಿಕ್ ಬಾಲಿವುಡ್‌ನಟ ಶಮ್ಮಿ ಕಪೂರ್‌ರ ಪಕ್ಕಾ ಅಭಿಮಾನಿ. ಅದರಲ್ಲೂ ಶಮ್ಮಿ ಕಪೂರ್‌ರ ನೃತ್ಯ ಎಂದರೆ ಹೃತಿಕ್‌ಗೆ ಪಂಚಪ್ರಾಣ. ಶಮ್ಮಿ ಕಪೂರ್ ನೃತ್ಯ ಲೋಕದ ಅದೇವತೆ. ಅವರ ನರನಾಡಿಗಳಲ್ಲಿ ನೃತ್ಯದ ಬಗ್ಗೆ ಒಲವಿದೆ. ಅವರ ನೃತ್ಯ ನೋಡಿ ನಾನು ಬಹಳಷ್ಟು ಕಲಿಯುತ್ತೇನೆ. ಅವರ ಡ್ಯಾನ್ಸ್ ಸ್ಟೆಫ್‌ಗಳು ನನ್ನ ಡ್ಯಾನ್ಸ್‌ಗಳಿಗೆ ಪಾಠ ಇದ್ದಂತೆ. ನನ್ನ ಪ್ರಕಾರ ಡ್ಯಾನ್ಸರ್ ಎಂದರೆ ಅದು ಶಮ್ಮಿ ಕಪೂರ್ ಮಾತ್ರ ಎನ್ನುವುದು ಶಮ್ಮಿಯ ಕುರಿತು ಹೃತಿಕ್ ಮೆಚ್ಚುನುಡಿ.
chennagide
ReplyDeleteRamgopal