
‘ಪಾನಿ’ ಎಂಬ ಅನ್ ರಿಲೀಸ್ಡ್ ಹಾಲಿವುಡ್ ಚಿತ್ರ. ಬಿಜಾಪುರದ ನೀರಿನ ಸಮಸ್ಯೆಯನ್ನು ವರ್ಲ್ಡ್ ಕ್ಲಾಸ್ ಪ್ರೇಕ್ಷಕರ ಮುಂದೆ ತರಲಿದೆ. ಭಾರತೀಯ ಮೂಲದ ಹಾಲಿವುಡ್ ನಿರ್ದೇಶಕ ಶೇಖರ್ ಕಪೂರ್ ಪಾನಿಯನ್ನು ಜಾಗತಿಕ ಮಟ್ಟದಲ್ಲಿ ತೆರೆಗೆ ತರುವ ಮಹಾರಥಿಯಂತೆ... ಹೆಚ್ಚಿನ ಮಾಹಿತಿಗೆ ಕೆಳಗಡೆ ಓದಿ...
ಭಾರತೀಯ ಮೂಲದ ಹಾಲಿವುಡ್ ಫೇಮ್ ನಿರ್ದೇಶಕ ಶೇಖರ್ ಕಪೂರ್ ‘ಪಾನಿ’ ಮೇಲೊಂದು ಸಿನ್ಮಾ ಮಾಡಲು ಎಲ್ಲ ರೀತಿಯಲ್ಲೂ ರೆಡಿಯಾಗಿದ್ದಾರೆ. ಅಂದಾಹಾಗೆ ‘ಪಾನಿ’ ಎಂದರೆ ‘ಎಚ್‌ಟು ಒ’ ಅಂತಾ ಗೊತ್ತಾಯಿತು ಅಲ್ವಾ ಮಾರಾಯ್ರೆ.. ಈ ‘ಪಾನಿ’ಗೂ ನಮ್ಮ ಬಿಜಾಪುರಕ್ಕೂ ಬಹಳ ಹತ್ತಿರದ ನಂಟಿದೆ ಎಂಬ ವಿಚಾರ ಬಹಳಷ್ಟು ಮಂದಿಗೆ ಗೊತ್ತಿರಲು ಸಾಧ್ಯವಿಲ್ಲ. ‘ಪಾನಿ’ಯ ನಿರ್ದೇಶಕ ಶೇಖರ್ ಕಪೂರ್ ಈ ಚಿತ್ರವನ್ನು ಹಾಲಿವುಡ್ ಮಟ್ಟದಲ್ಲಿ ತೋರಿಸಲು ಕತೆ ಆಯ್ಕೆ ಮಾಡಿದ್ದು ನೀರಿನ ಸಮಸ್ಯೆಯಿಂದ ಕೆಂಗೆಟ್ಟು ಹೋಗುತ್ತಿರುವ ನಮ್ಮ ರಾಜ್ಯದ ಬಿಜಾಪುರವನ್ನು !! ಕನ್ನಡದ ವಾಹಿನಿಯೊಂದು ಬಿಜಾಪುರದ ನೀರಿನ ಸಮಸ್ಯೆಯನ್ನು ಪದೇ ಪದೇ ತೋರಿಸುತ್ತಿದ್ದಾಗ ಶೇಖರ್ ಕಪೂರ್ ಪಾನಿಯ ಕುರಿತು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಿನ್ಮಾ ಮಾಡಿದರೆ ಹೇಗೆ ಎಂದು ತಲೆಯನ್ನು ಕೆರೆದುಕೊಂಡರಂತೆ..! ತಕ್ಷಣ ಹೊಳೆದದ್ದು ಪಾನಿ ಚಿತ್ರ ಎಂದು ಖುದ್ದು ಶೇಖರ್ ತನ್ನ ಬ್ಲಾಗಿನಲ್ಲಿ ಬರೆದಿದ್ದಾರೆ.
ಏನ್ ಹೇಳ್ತಾರೆ ಶೇಖರ್...
ನಿರ್ದೇಶಕ ಶೇಖರ್ ಕಪೂರ್ ಬ್ಲಾಗಿನಲ್ಲಿ ಏನು ಹೇಳಿಕೊಂಡಿದ್ದಾರೆ ಅಂದ್ರೆ: ‘ನಾನು ಇಂದು ಕನ್ನಡದ ವಾಹಿನಿಯೊಂದರಲ್ಲಿ ಬಿಜಾಪುರದ ಹಳ್ಳಿಯೊಂದು ನೀರಿನ ಸಮಸ್ಯೆಯಿಂದ ಕೆಂಗೆಟ್ಟು ಜನರು ಪ್ರತಿಭಟನೆಗೆ ಮುಂದಾಗಿರುವ ದೃಶ್ಯವನ್ನು ಕಂಡೆ. ನೀರಿಗಾಗಿ ಅವರು ಸ್ಥಳೀಯ ನೀರು ಸರಬರಾಜು ಸಂಸ್ಥೆಗೆ ದಾಳಿ ನಡೆಸಿದರು. ಆದರೆ ನೀರು ಸರಬರಾಜು ಮಾಡುತ್ತಿದ್ದ ಅಕಾರಿಗಳು ನೀರನ್ನು ಟ್ಯಾಂಕ್‌ನಲ್ಲಿ ಭದ್ರವಾಗಿ ಇಟ್ಟುಕೊಂಡು ಅದನ್ನು ಸ್ಥಳೀಯ ರಾಜಕೀಯ ಮುಖಂಡರಿಗೆ ಹಾಗೂ ಪ್ರಭಾವಿ ಉದ್ಯಮಿಗಳಿಗೆ ಮಾತ್ರ ಸರಬರಾಜು ಮಾಡುತ್ತಿರುವ ಅಂಶ ಬೆಳಕಿಗೆ ಬಂತು. ನೀರು ಎಲ್ಲರಿಗೂ ಬೇಕಾದದ್ದು ಮಾತ್ರವಲ್ಲ ಅದು ಎಲ್ಲರ ಹಕ್ಕು. ಈ ಹಕ್ಕಿನ ಕುರಿತು ಚಿತ್ರ ಮಾಡಲು ನಾನು ನಿರ್ಧಾರ ತೆಗೆದುಕೊಂಡೆ.. ರಾಜಕೀಯ ಮುಖಂಡರ ಪ್ರಭಾವ ಬಳಸಿ ನಿಮ್ಮ ಟ್ಯಾಪ್‌ನಲ್ಲೂ ನೀರು ಬರಲು ಒತ್ತಡ ಏರಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಮುಂದೆ ಬರಬಹುದು. ಇದೇ ನನ್ನ ಚಿತ್ರ ‘ಪಾನಿ’ಯ ಮುಖ್ಯ ತಿರುಳು. ಕಳೆದ ೧೨ ವರ್ಷಗಳಿಂದ ಇಂತಹ ಕತೆಗಾಗಿ ಹುಡುಕಾಟ ಮಾಡುತ್ತಿದ್ದೆ.. ಎಲ್ಲರೂ ಫ್ಯಾಂಟಸಿ ಚಿತ್ರಗಳನ್ನು ನಿರ್ಮಾಣ ಮಾಡಿ ಹಣ ದೋಚುತ್ತಾರೆ. ಆದರೆ ಎಲ್ಲರೂ ಸಮಸ್ಯೆಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಇಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅಗತ್ಯತೆ ಇದೆ. ಅದೇ ಪಾನಿಯ ಸಮ್ಮರಿ’
ಪಾನಿಯಲ್ಲಿ ಹೃತಿಕ್:
ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮಹಾತ್ವಕಾಂಕ್ಷೆಯ ಚಿತ್ರ ‘ಕೈಟ್’ ಈ ತಿಂಗಳಲ್ಲಿ ಬಾನಾಡಿಯಂತೆ ಹಾರಾಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೈಟ್‌ನಲ್ಲಿ ನಟಿಸಿರುವ ವಿದೇಶಿ ರೂಪದರ್ಶಿ ಬಾರ್ಬರಾ ಮೋರಿಯಂತಹ ಬಿಳಿ ತೊಗಲಿನ ಹುಡುಗಿ ‘ಪಾನಿ’ಯಲ್ಲೂ ಇದ್ದ್ದಾರೆ. ಹಾಲಿವುಡ್ ನಟಿ ಕ್ರಿಸ್ಟಿನ್ ಸ್ಟಿವಾರ್ಟ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಾಲಿವುಡ್‌ನಲ್ಲಿ ಭರ್ಜರಿಯಾಗಿ ಗಲ್ಲಾ ಪೆಟ್ಟಿಗೆ ದೋಚಿದ ‘ಟ್ವಿಲೈಟ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಾಯಕಿ ಕ್ರಿಸ್ಟಿನ್ ಚಿತ್ರದ ಕತೆ ನೋಡಿ ಒಪ್ಪಿಕೊಂಡಿದ್ದಾರೆ. ‘ಪಾನಿ’ ಆಂಗ್ಲ ಭಾಷೆಯಲ್ಲಿ ಬಿಡುಗಡೆ ಕಂಡ ನಂತರ ಅದನ್ನು ಭಾರತೀಯ ಭಾಷೆಗಳಿಗೆ ಡಬ್ಬಿಂಗ್ ಮಾಡುವ ಯೋಜನೆ ಕೂಡ ಇದೆ ಎಂದು ನಿರ್ದೇಶಕ ಶೇಖರ್ ಕಪೂರ್ ಹೇಳಿಕೊಂಡಿದ್ದಾರೆ.
‘ಪಾನಿ’ಯಲ್ಲಿ ಯಾವುದೇ ನಾಯಕ ನಾಯಕಿಗಿಂತ ಹೆಚ್ಚಾಗಿ ನೀರಿನ ಮಹತ್ವದ ಕುರಿತು ಜಾಗೃತಿಯನ್ನು ಹುಟ್ಟಿಸುವ ಕೆಲಸ ಮಾತ್ರ ನಡೆಯುತ್ತದೆ. ಈಗಾಗಲೇ ಚಿತ್ರದ ಶೂಟಿಂಗ್ ಕಾರ್‍ಯಗಳು ಆರಂಭಗೊಂಡಿದ್ದು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ತರುವ ಕುರಿತು ಪ್ಲಾನ್‌ಗಳನ್ನು ಮಾಡಲಾಗುತ್ತದೆ ಎಂದು ಶೇಖರ್ ಹೇಳಿಕೊಂಡಿದ್ದಾರೆ.
ಪಾನಿ ಯಾಕೆ ಡಿಫರೆಂಟ್:
ಚಿತ್ರ ಹೇಳುವಂತೆ ‘ಪಾನಿ’ಯ ಕುರಿತು ಜಾಗೃತಿ ಹುಟ್ಟು ಹಾಕುವ ಜತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ ಬರುವುದರಿಂದ ‘ಪಾನಿ’ಗೆ ಇನ್ನಷ್ಟು ಕಿಮ್ಮತ್ತು ಬರಲಿದೆ. ಬಾಲಿವುಡ್‌ನ ಸೂಪರ್ ಹೀರೋ ಹೃತಿಕ್ ರೋಷನ್ ಹಾಗೂ ಹಾಲಿವುಡ್ ನಟಿ ಕ್ರಿಸ್ಟಿನ್ ಮೊದಲ ಬಾರಿಗೆ ಜತೆಯಾಗುತ್ತಿದ್ದಾರೆ. ಶೇಖರ್ ಕಪೂರ್ ಬಹಳ ವರ್ಷಗಳ ನಂತರ ಬಾಲಿವುಡ್ ಹಾಗೂ ಹಾಲಿವುಡ್ ಶೈಲಿಗಳನ್ನು ಮಿಕ್ಸಿಂಗ್ ಮಾಡುತ್ತಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಾಜ್ಯದ ಬಿಜಾಪುರದ ನೀರಿನ ಸಮಸ್ಯೆ ಹಾಲಿವುಡ್ ಮಟ್ಟದಲ್ಲಿ ಕಾಣಿಸಿಕೊಳ್ಳಲಿದೆ ಅದು ವಿಶೇಷ ಅಲ್ವಾ...?
No comments:
Post a Comment