

ಈಟ್ ಜಸ್ಟ್ ಮಿರಾಕಲ್. ನಾನು ಬ್ಲಾಗ್‌ಆರಂಭಿಸಿ ಕೆಲವೇ ದಿನಗಳಾಗಿವೆ. ಆದರೆ ನಿಮ್ಮಿಂದ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಅಭೂತಪೂರ್ವ. ಇಷ್ಟೊಂದು ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಿಮ್ಮ ಈ ಪ್ರೀತಿಗೆ ಏನೆನ್ನಬೇಕೋ ಗೊತ್ತಿಲ್ಲ. ದಿನಕ್ಕೆ ನೂರಾರು ಮಂದಿ ನನ್ನ ಬ್ಲಾಗ್ ವಿಸಿಟ್ ಮಾಡುತ್ತಾರೆ. ಅಲ್ಲಿನ ವಿಷಯನ್ನು ಓದಿ ಪ್ರೀತಿಯಿಂದ ಕಮೆಂಟ್ ಮಾಡುತ್ತಿದ್ದಾರೆ. ತಪ್ಪಿದ್ದರೆ ‘ಹಾಗಲ್ಲ, ಹೀಗೆ’ ಎಂದು ತಿಳಿ ಹೇಳುತ್ತಾರೆ. ನೂರಾರು ಎಸ್‌ಎಂಎಸ್‌ಗಳು ನನ್ನ ಇನ್‌ಬಾಕ್ಸ್ ತುಂಬಿಸಿವೆ. ಸಾಧ್ಯವಾದಷ್ಟು ಪ್ರತಿಕ್ರಿಯಿಸಿದ್ದೇನೆ. ಈಗ ಬ್ಲಾಗ್‌ಗೆ ಬಂದು ಹೋದವರ ಸಂಖ್ಯೆ ೧೦೦೦ದ ಗಡಿ ದಾಟಿ ನಿಂತಿದೆ. ಒಂದು ಖುಷಿಯ ವಿಷ್ಯಾ ಏನಪ್ಪಾ ಅಂದರೆ ಬ್ಲಾಗ್ ಪ್ರಿಯರ ಸಂಖ್ಯೆ ಇನ್ನೂ ಕೂಡ ಇಳಿಮುಖವಾಗಿಲ್ಲ. ಬಾಲ್ಕನಿಗೆ ಬಂದು ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗುತ್ತಿದೆ.
ಫ್ಲ್ಯಾಶ್‌ಬ್ಯಾಕ್ ಮಾರಾಯ್ರೆ:
ಬ್ಲಾಗ್ ಆರಂಭಿಸಬೇಕೆಂಬ ಯಾವುದೇ ಒಂದು ಖಚಿತ ಉದ್ದೇಶ ನನಗಿರಲಿಲ್ಲ. ನನ್ನ ಅಚ್ಚುಮೆಚ್ಚಿನ ಹಾಗೂ ಕನ್ನಡಿಗರ ಸಮಸ್ತ ಹೆಮ್ಮೆಯ ದಿನಪತ್ರಿಕೆ ವಿಜಯ ಕರ್ನಾಟಕದ ಪುಟ್ಟ ಕೂಸು ಲವಲವಿಕೆಯಲ್ಲಿ ಬರುತ್ತಿದ್ದ ನನ್ನ ನೂರಾರು ಲೇಖನಗಳು ಎಲ್ಲಿಯೋ ಕಳೆದು ಹೋಗುತ್ತಿದ್ದವು.. ನಿಮ್ಮ ಲೇಖನಗಳನ್ನು ಮತ್ತೊಂದು ಸಾರಿ ಓದಬೇಕು, ನನಗೆ ಪತ್ರಿಕೆ ಸಿಕ್ಕಿಲ್ಲ ಲೇಖನವನ್ನು ಎಲ್ಲಿ ಓದಬಹುದು ಮೊದಲಾದ ನಾನಾ ಸಮಸ್ಯೆಗಳಿಂದ ಕೂಡಿದ ದೂರವಾಣಿ ಕರೆಗಳು,ನನ್ನ ಎಲ್ಲ ಲೇಖನಗಳನ್ನು ಒಟ್ಟು ಸೇರಿಸಬೇಕೆಂಬ ಪುಟ್ಟ ಆಸೆಯ ಪ್ರತಿಫಲವೇ ಈ ರೇಗೊ ಬಾಲ್ಕನಿ ಎನ್ನುವ ಬ್ಲಾಗ್ ನಿಮ್ಮ ಮುಂದೆ ಬಂದು ನಿಂತಿದೆ.
ಕಳೆದ ಒಂದೂವರೆ ವರ್ಷದಿಂದ ನಾನು ಲವಲವಿಕೆಯಲ್ಲಿ ಬರೆದ ಎಲ್ಲ ಲೇಖನಗಳನ್ನು ಈ ಬ್ಲಾಗ್‌ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಅದನ್ನು ಬಹಳಷ್ಟು ಜನ ಖುಷಿಯಿಂದ ಓದುತ್ತಿದ್ದಾರೆ. ಅದರಲ್ಲೂ ಬ್ಲಾಗ್‌ನ ಡಿಸೈನಿಂಗ್ ವರ್ಕ್ ಮಾಡಿದ ಆಂಟೋ, ಟೆಕ್ನಿಕಲಿ ಮಾತು ಕಳಿಸಿಕೊಟ್ಟ ಜಿ.ಕೆ.ಹೆಗಡೆ, ಬ್ಲಾಗ್‌ನ ಕಲ್ಪನೆ ಐಡಿಯಾ ಕೊಟ್ಟ ಸುನೀಲ್, ಬ್ಲಾಗ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ನನ್ನ ಬಾಸ್ ಕುಮಾರನಾಥ್, ಸಾವಿರ ಕ್ಲಿಕ್ ಆಯಿತು ಎಂದು ಖುಷಿಯಿಂದ ಕಾರ್ಟೂನ್ ಕಳುಹಿಸಿ ಕೊಟ್ಟ ನನ್ನ ಹಿರಿಯ ಗೆಳೆಯ ಪ್ರಕಾಶ್ ಶೆಟ್ಟಿ, ಪ್ರತಿ ಆಪ್‌ಡೇಟ್‌ನಲ್ಲೂ ಕಾಮೆಂಟ್ ಕೊಡುವ ರವಿ, ಬ್ಲಾಗ್‌ನ್ನು ಒಂದು ತಿಂಗಳಲ್ಲಿಯೇ ನಿಲ್ಲಿಸಬೇಡ ಎಂದು ಸಲಹೆ ನೀಡಿದ ಕನ್ನಡ ಓದಲು ಗೊತ್ತಿಲ್ಲದ ಕೇರಳದ ಹುಡುಗಿ ನಿರಂಜಾಲಿ ವರ್ಮಾ,ನನ್ನನ್ನು ಬೆಳೆಸಿದ ವಿಜಯಕರ್ನಾಟಕದ ಲವಲವಿಕೆಯ ತಂಡ, ಪ್ರತಿ ಹೆಜ್ಜೆಯಲ್ಲೂ ಸಾಥ್ ಕೊಡುವ ನನ್ನ ಓದುಗ ವರ್ಗಕ್ಕೊಂದು ಗ್ರೇಟ್ ಥ್ಯಾಂಕ್ಸ್.
ಇಂತೀ ನಿಮ್ಮವ
ಸ್ಟೀವನ್ ರೇಗೊ, ದಾರಂದಕುಕ್ಕು.
No comments:
Post a Comment