
ಇದು ಈಗ ಹೊತ್ತಿ ಉರಿಯುತ್ತಿರುವ ಐಪಿಎಲ್‌ನ ಕೊಚ್ಚಿ ತಂಡದ ಬಿಸಿ ಬಿಸಿ ಮಾತು. ಲೋಕಸಭೆ- ರಾಜ್ಯಸಭೆಯಲ್ಲಿ ವಿವಾದ ಎಬ್ಬಿಸುತ್ತಿರುವ ಕೊಚ್ಚಿ ತಂಡದ ಸಿಕ್ರೇಟ್ ಮಾತು. ಮುಂದಿನ ಐ ಪಿ ಎಲ್ ಸರಣಿಯಲ್ಲಿ ಬಾಲಿವುಡ್ ನಟಿ ಆಸೀನ್ ಕೊಚ್ಚಿ ತಂಡದ ಪರವಾಗಿ ಕಣಕ್ಕೆ ಇಳಿಯಲಿದ್ದಾರೆ. ಕೊಚ್ಚಿ ತಂಡದ ಸದಸ್ಯರ ಜತೆಯಲ್ಲಿ ಅವರು ಕುಣಿಯಲಿದ್ದಾರೆ.
ಬಾಲಿವುಡ್ ಈಗ ಕ್ರಿಕೆಟ್‌ನಲ್ಲಿ ತೇಲುತ್ತಿದೆ. ಇದು ಐಪಿ ಎಲ್ ಟಿ-೨೦ಯನ್ನು ನೋಡುತ್ತಾ ಇದ್ದಾಗ ಪ್ರೇಕ್ಷಕರ ಮುಂದೆ ನಿಲ್ಲುವ ಸತ್ಯ. ಆದರೆ ಬರುವ ಐ ಪಿ ಎಲ್ ಕ್ರಿಕೆಟ್ ರಣ ರಂಗ ಮತ್ತಷ್ಟೂ ಕಾವೇರಲಿದೆ. ಇಟ್‌ಮೀನ್ಸ್ ಐ ಪಿ ಎಲ್ ತಂಡಗಳ ಸಂಖ್ಯೆಯಲ್ಲಿ ಈಗ ದಿಢೀರ್ ಬೆಳವಣಿಗೆಗಳು ಕಾಣಿಸಿಕೊಂಡಿದೆ. ೮ ತಂಡಗಳ ಜಾಗದಲ್ಲಿ ಈಗ ಮತ್ತೆರಡು ತಂಡಗಳು ಬಂದು ಸೇರಿಕೊಂಡಿದೆ. ಕೇರಳಿಗರ ಕೊಚ್ಚಿ ಹಾಗೂ ಪುಣೆ ಬರುವ ಐ ಪಿ ಎಲ್‌ನಲ್ಲಿ ದೊಡ್ಡ ಸದ್ದು ಮಾಡಲಿದೆ ಎನ್ನೋದು ಐ ಪಿ ಎಲ್ ಮೂಲಗಳಿಂದ ಬಂದ ಮಾತು. ಈಗಾಗಲೇ ಕೇರಳಿಗರ ಕೊಚ್ಚಿ ತಂಡ ವಿವಾದಗಳ ಮೇಲೆ ನಡೆದಾಡುತ್ತಿದೆ. ದಿನಕ್ಕೊಂದು ಹೊಸ ವಿವಾದದಲ್ಲಿರುವ ಕೊಚ್ಚಿಗೆ ಈಗ ಬಾಲಿವುಡ್ ನಟಿ ಆಸೀನ್ ಬ್ರಾಂಡ್ ಅಂಬಾಸೀಡರ್ ಆಗಲಿದ್ದಾರೆ ಎಂಬ ಸುದ್ದಿ ಮುಂಬಯಿಯ ಪಡಸಾಲೆಯಿಂದ ರವಾನೆಯಾಗಿದೆ.
ಲೋಕಸಭೆ- ರಾಜ್ಯಸಭೆಯಲ್ಲಿ ಕೊಚ್ಚಿ ತಂಡ ಎಬ್ಬಿಸಿದ ಕ್ರೇಜ್(ವಿವಾದ)ಗಳ ನಡುವೆ ಕೊಚ್ಚಿ ತನ್ನ ತಂಡಕ್ಕೆ ರಾಯಭಾರಿಯನ್ನು ಹುಡುಕಿ ತೆಗೆದುಕೊಂಡಿದೆ ಎಂಬ ಸುದ್ದಿ ಈಗ ಬಹಿರಂಗವಾಗಿದೆ. ಅದರಲ್ಲೂ ಕೇರಳದ ಬಗ್ಗೆ ಬಾಲಿವುಡ್‌ನಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದ ಆಸೀನ್ ತಮ್ಮ ತಂಡದ ಬ್ರಾಂಡ್ ಎಂದು ಕೊಚ್ಚಿ ತಂಡದ ಮಾಧ್ಯಮ ಪ್ರತಿನಿ ಮನೋಜ್ ಮಾಧವನ್ ತಿಳಿಸಿದ್ದಾರೆ. ಈಗಾಗಲೇ ಆಸೀನ್ ರಾಯಭಾರಿತ್ವಕ್ಕೆ ಒಪ್ಪಿಕೊಂಡಿದ್ದಾಳೆ ಎಂದು ಅವರು ಹೇಳಿಕೊಂಡಿದ್ದಾರೆ. ಮುಂದಿನ ಐ ಪಿ ಎಲ್ ಆರಂಭಕ್ಕೂ ಮೊದಲು ಆಸೀನ್ ತಂಡದ ಸದಸ್ಯರಿಗೆ ಹುರುಪು ತುಂಬಲು ಬರುತ್ತಾರೆ ಎಂದು ಆಸೀನ್ ತಂದೆ ಜೋಸಫ್ ತೊಟ್ಟುಮೊಕ್ಕಲ್ ಮಾತುಗಳ ಮೂಲಕ ತಲೆಯಾಡಿಸಿದ್ದಾರೆ.
‘ಆಸೀನ್ ಮೂಲತಃ ಕೇರಳದ ಹುಡುಗಿ. ಮಲೆಯಾಳ ಚಿತ್ರರಂಗದಿಂದ ಆರಂಭವಾದ ನಟನಾ ವೃತ್ತಿ ಈಗ ಬಾಲಿವುಡ್ ಮಟ್ಟಕ್ಕೂ ಬೆಳೆದು ನಿಂತಿದೆ. ಈ ಬ್ರಾಂಡ್ ಅಂಬಾಸೀಡರ್ ಸ್ಪರ್ಧೆಯಲ್ಲಿ ನಟಿ ವಿದ್ಯಾ ಬಾಲನ್ ಕೂಡ ಇದ್ದರು. ಆದರೆ ಈ ರಾಯಭಾರಿತ್ವಕ್ಕೆ ಅವರು ನಾಟ್ ಓಕೆ ಎಂದ ಮೇಲೆ ಈ ಅವಕಾಶ ಆಸೀನ್ ಪಾಲಿಗೆ ಬಂದಿದೆ. ಆಸೀನ್ ಯೂತ್ ಮೊಡೆಲ್ ಆಗಿ ಯುವಜನತೆಯ ಮನ ಗೆದ್ದಿದ್ದಾರೆ ’ ಎಂದು ಮನೋಜ್ ಗುಟ್ಟಾಗಿ ತಿಳಿಸಿದ್ದಾರೆ. ಮುಂದಿನ ಐಪಿಎಲ್ ಆರಂಭದಲ್ಲಿ ಹೊಸ ಕೊಚ್ಚಿ ತಂಡದ ಜತೆಯಲ್ಲಿ ಆಸೀನ್ ಕೂಡ ತಮ್ಮ ತಂಡಕ್ಕೆ ಬ್ಯಾಟಿಂಗ್ ಮಾಡುತ್ತಾರೆ. ಅವರ ಆಟದ ಪರಿ ನೋಡಬೇಕಾದರೆ ಮುಂದಿನ ವರ್ಷ ಕ್ರಿಕೆಟ್ ಗ್ಯಾಲರಿ ಬುಕ್ ಮಾಡಿಬಿಡಿ.
ಟೂ ಸಿಕ್ರೇಟ್ ಮ್ಯಾಟರ್:
ಐಪಿ ಎಲ್‌ನಲ್ಲಿ ಕೊಚ್ಚಿ ತಂಡ ಈಗಾಗಲೇ ಬಹಳಷ್ಟು ಪ್ರಚಾರವನ್ನು ಪಡೆದುಕೊಂಡಿದೆ. ಆರಂಭದಲ್ಲಿ ಕೊಚ್ಚಿ ತಂಡದ ಬಿಡ್ಡಿಂಗ್‌ನಿಂದ ಹಿಡಿದು ಇಂದಿನವರೆಗೂ ಅದು ಮಾಡುತ್ತಿರುವುದು ಗರಂ ಸುದ್ದಿಯೇ ಆಗಿ ಹೋಗಿದೆ. ಮಲಯಾಳ ಚಿತ್ರರಂಗದ ಸೂಪರ್ ಸ್ಟಾರ್ ನಟ ಮೋಹನ್ ಲಾಲ್(ಲಾಲೆಟಾ), ಬಾಲಿವುಡ್ ನಿರ್ದೇಶಕ ಪ್ರಿಯದರ್ಶನ್ ( ಪ್ರಿಯಾನ್ ) ಕೂಡ ಕೊಚ್ಚಿ ಬ್ರಾಂಡ್ ಅಂಬಾಸೀಡರ್‌ಗಳು. ಇದರ ಹಿಂದೆ ಈ ಇಬ್ಬರು ಕೊಚ್ಚಿ ಟೀಮ್‌ಗಾಗಿ ಹಣ ಹೂಡಿದ್ದಾರೆ. ಈಗಾಗಲೇ ಕೊಚ್ಚಿ ಟೀಮ್‌ಗೆ ‘ಸಿಟಿ ಕ್ರಿಕೆಟರ್‍ಸ್’ ಎಂದು ನಾಮಕರಣವನ್ನು ಗುಪ್ತವಾಗಿ ಮಾಡಲಾಗಿದೆ . ಇವರಿಬ್ಬರೂ ಬಾಲ್ಯದಲ್ಲಿ ಲೋಕಲ್ ತಂಡದ ಜತೆಯಲ್ಲಿ ಕ್ರಿಕೆಟ್ ಆಡುತ್ತಿದ್ದವರು. ಪ್ರಿಯಾನ್ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದರೆ, ಲಾಲೆಟಾ ಆಲ್ ರೌಂಟರ್ ಆಟಗಾರನಂತೆ. ಕ್ರಿಕೆಟ್‌ನ ಒಡನಾಟವಿದ್ದ ಕೇರಳದ ಮಹಮ್ಮದ್ ನಿಯಾಜ್, ಮಹಮ್ಮದ್ ಶಾನೌತ್, ರೋಹನ್ ಪ್ರೇಮ್, ಪಿ.ಪ್ರಶಾಂತ್ ಮತ್ತು ಸಂಜು ವಿ. ಸ್ಯಾಮ್‌ಸನ್ ಶಾರುಕ್ ಖಾನ್‌ರ ಕೊಲ್ಕತ್ತಾ ನೈಟ್ ರೈಡರ್‍ಸ್ ತಂಡದಲ್ಲಿ ಜಾಗ ಪಡೆಯಲು ಪ್ರಿಯಾನ್ ಬಹಳ ಮಟ್ಟಿಗೆ ಕಾರಣವಾಗಿದ್ದರು ಎಂದು ಗುಟ್ಟಾಗಿ ತಿಳಿದು ಬಂದ ವಿಚಾರ.
No comments:
Post a Comment