
ಎರಡು ಓಡುವ ಕುದುರೆಗಳನ್ನು ಒಂದೇ ಗೂಟಕ್ಕೆ ಕಟ್ಟುವ ಯತ್ನ ತುಂಬಾ ಈಸಿ ಅಲ್ಲ ಬಿಡಿ. ಅಂತಹ ಒಂದು ದೊಡ್ಡ ಸಾಹಸ ಕೆಲಸಕ್ಕೆ ಟಾಲಿವುಡ್ ಹಾಗೂ ಕಾಲಿವುಡ್ ರೆಡಿಯಾಗಿದೆ. ತಮಿಳಿನಲ್ಲಿ ಸ್ಟಾರ್ ನಟರಾದ ಚಿಯನ್ ವಿಕ್ರಂ ಹಾಗೂ ಸೂರ್ಯ ಜತೆಯಾಗಿ ನಟಿಸುವ ಚಿತ್ರವೊಂದಕ್ಕೆ ಸ್ಕೆಚ್ ಮಾಡಲಾಗಿದೆ. ಅದೇ ಮಾದರಿಯಲ್ಲಿ ಟಾಲಿವುಡ್‌ನಲ್ಲಿ ಚಿಯನ್ ವಿಕ್ರಂ ಜತೆಯಾಗಿ ತೆಲುಗಿನ ನಟ ಮಹೇಶ್ ಬಾಬು ತೊಡೆ ತಟ್ಟಲಿದ್ದಾರೆ. ಇದೊಂದು ಭರ್ಜರಿ ಹಿಸ್ಟೋರಿಕಲ್ ಬೇಸ್ಡ್ ಸಿನ್ಮಾ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಸನ್ ಮೂವೀಸ್ ಚಿತ್ರಕ್ಕೆ ಹಣ ಸುರಿಯುತ್ತಿದ್ದಾರೆ.
‘ಪೊನ್ನಿಯಾನಿ ಸೆಲ್ವಂ’ ಎನ್ನುವ ಐತಿಹಾಸಿಕ ಕಾದಂಬರಿಯನ್ನು ಮೂಲವಾಗಿ ಇಟ್ಟುಕೊಂಡು ಚೋಳ ಹಾಗೂ ಪಲ್ಲವ ರಾಜಮನೆತನಗಳನ್ನು ಚಿತ್ರದಲ್ಲಿ ತೋರಿಸುವ ಪ್ಲ್ಯಾನ್ ನಡೆಯುತ್ತಿದೆ. ಇದರಲ್ಲಿ ಚಿಯನ್ ವಿಕ್ರಂ ರಾಜ ರಾಜ ಚೋಳ ಹಾಗೂ ಸೂರ್ಯ ಪಲ್ಲವರ ಅರಸನಾದರೆ ಇತ್ತಕಡೆ ತೆಲುಗಿನಲ್ಲಿ ಮಹೇಶ್ ಬಾಬು ಪಲ್ಲವ ರಾಜನಾಗುವ ಸಾಧ್ಯತೆ ಇದೆ. ಎಲ್ಲ ಲೆಕ್ಕಚಾರಗಳು ಇದೇ ಮಾದರಿಯಲ್ಲಿ ಮುಂದುವರಿದರೆ ಸನ್ ಮೂವೀಸ್‌ನಡಿಯಲ್ಲಿ ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಈ ಚಿತ್ರವನ್ನು ಡೈರೆಕ್ಟ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಚಿತ್ರಕತೆ ಹಾಗೂ ಸಂಭಾಷಣೆ ಬರೆಯಲು ಖ್ಯಾತ ಚಿತ್ರಕತೆಗಾರ ಜಯ ಮೋಹನ್‌ಗೆ ಸನ್ ಮೂವೀಸ್ ಕಡೆಯಿಂದ ೨ ಕೋಟಿ ರೂ. ಸಂದಾಯವಾಗಿದೆ.
ಚಿತ್ರ ತಮಿಳು, ತೆಲುಗು ಸೇರಿದಂತೆ ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ. ಸನ್ ಮೂವೀಸ್‌ನಲ್ಲಿ ತಯಾರಾಗುತ್ತಿರುವ ರಜನಿಕಾಂತ್, ಕಮಲ್ ಜತೆಗಿನ ಚಿತ್ರದ ನಂತರ ಈ ಚಿತ್ರಕ್ಕೆ ಶೂಟಿಂಗ್ ಕೆಲಸಗಳು ಆರಂಭಗೊಳ್ಳಲಿದೆ. ನಿರ್ಮಾಣ ಸಂಸ್ಥೆಯ ಲೆಕ್ಕಚಾರದ ಪ್ರಕಾರ ದಕ್ಷಿಣ ಭಾರತದಲ್ಲಿಯೇ ಅತ್ಯಕ ಹಣ ಚೆಲ್ಲಿ ಮಾಡುವ ಸಿನ್ಮಾ ಇದಾಗಲಿದೆಯಂತೆ. ಅದರಲ್ಲೂ ಮಲ್ಟಿ ಸ್ಟಾರ್‌ಗಳನ್ನು ಜತೆಗೆ ಸೇರಿಸಿಕೊಂಡು ನಟರಿಗೆ ಸರಿಯಾದ ನ್ಯಾಯ ನೀಡಲು ಮಣಿರತ್ನಂಗೆ ಮಾತ್ರ ಸಾಧ್ಯ. ಈ ಹಿಂದೆ ವಿಕ್ರಂ ಹಾಗೂ ಸೂರ್ಯ ಇಬ್ಬರು ಮಣಿ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ ಮತ್ತೊಬ್ಬ ನಿರ್ದೇಶಕ ಬಾಲರ ‘ ಪಿತಾಮಗನ್’ನಲ್ಲೂ ವಿಕ್ರಂ ಹಾಗೂ ಸೂರ್ಯ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದರು.
ಐತಿಹಾಸಿಕ ಹಾಗೂ ಮಹಾಕಾವ್ಯಗಳನ್ನು ಬೇಸ್ಡ್ ಆಗಿ ಇಟ್ಟುಕೊಂಡು ಸಿನ್ಮಾ ಮಾಡಿ ಸಮಾಜಕ್ಕೆ ಒಂದು ಮೆಸೇಜ್ ಪಾಸ್ ಮಾಡುವುದರಲ್ಲಿ ನಿರ್ದೇಶಕ ಮಣಿರತ್ನಂ ಈಗಾಗಲೇ ತನ್ನ ಚಿತ್ರಗಳ ಮೂಲಕ ಫ್ರೂವ್ ಮಾಡಿದ್ದಾರೆ. ಆಧುನಿಕ ತಮಿಳಿನ ಸಾಹಿತ್ಯ ಲೋಕದ ಮಹಾನ್ ಗ್ರಂಥ ಎಂದೇ ಕರೆಯಲಾಗು ‘ಪೊನ್ನಿಯಾನಿ ಸೆಲ್ವಂ’ ಚಿತ್ರ ರೂಪಕ್ಕೆ ಇಳಿಯುತ್ತಿರುವ ಮಣಿರತ್ನಂ ವೃತ್ತಿ ಬದುಕಿಗೆ ಮತ್ತೊಂದು ಸವಾಲು ಎನ್ನಲು ಅಡ್ಡಿಯಿಲ್ಲ. ‘ರಾವಣನ್’ ಚಿತ್ರದ ಸೋಲಿನ ನಂತರ ದೊಡ್ಡ ಮಟ್ಟದ ಬ್ರೇಕ್‌ಗಾಗಿ ಮಣಿ ಕಾದು ನಿಂತಿದ್ದಾರೆ. ಈ ಚಿತ್ರ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡುತ್ತಾ ಕಾದು ನೋಡಬೇಕು.
No comments:
Post a Comment