Saturday, March 19, 2011

ಕೊಂಕಣಿ ಬ್ಯಾಂಡ್ ‘ಮೈಲ್‌ಸ್ಟೋನ್’


ಕೊಂಕಣಿ ಸಂಗೀತ ಕ್ಷೇತ್ರದಲ್ಲೂ ಹೊಸ ಹೊಸ ಬಗೆಯ ಮ್ಯಾಜಿಕ್‌ಗಳು ನಿಧಾನವಾಗಿ ನಡೆಯುತ್ತಾ ಸಾಗುತ್ತಿದೆ ಎಂಬುವುದಕ್ಕೆ ತಾಜಾ ಸಾಕ್ಷಿ ಇಲ್ಲಿದೆ. ನಾಲ್ವರು ಯುವಕರು ಈಗ ‘ಮೈಲ್‌ಸ್ಟೋನ್’ ಕಟ್ಟಿದ್ದಾರೆ. ಬನ್ನಿ ಏನ್ ವಿಷ್ಯಾ ಅಂತಾ ಕೇಳೋಣ..


ಕರಾವಳಿಯಲ್ಲಿ ಕೊಂಕಣಿ ಸಂಗೀತ ಎಂದಾಗ ಹುಚ್ಚೆದ್ದು ಕುಣಿಯುವ ಕೊಂಕಣಿ ಸಂಗೀತ ಪ್ರೇಮಿಗಳಿದ್ದಾರೆ. ಗೋವಾದ ಸ್ಟೈಲ್ ಜತೆಯಲ್ಲಿ ಕರಾವಳಿಯ ಥಡ್‌ಕಾ ಬಿದ್ದಾಗ ಡಿಫರೆಂಟ್ ಕೊಂಕಣಿ ಸಂಗೀತ ಲೋಕ ತೆರೆದು ಕೂರುತ್ತೆ. ಕೊಂಕಣಿ ಸಂಗೀತ ಕ್ಷೇತ್ರದಲ್ಲೂ ಹೊಸ ಹೊಸ ಬಗೆಯ ಮ್ಯಾಜಿಕ್‌ಗಳು ನಿಧಾನವಾಗಿ ನಡೆಯುತ್ತಾ ಸಾಗುತ್ತಿದೆ ಎನ್ನುವುದಕ್ಕೆ ತಾಜಾ ತಾಜಾ ಸಾಕ್ಷಿ ಮೈಲ್‌ಸ್ಟೋನ್( ಮೈಲಿಗಲ್ಲು). ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಒಂದು ಗಡಿ ರೇಖೆ ಇದೆ. ಮುಂಬಯಿ, ಗೋವಾ, ಗಲ್ಪ್ ಆಂಡ್ ಕರಾವಳಿಯ ಕೊಂಕಣಿ ಪ್ರೇಮಿಗಳು ಬಿಟ್ಟರೆ ಅದಕ್ಕೆ ಬದುಕಲು ಬೇರೆ ದಾರಿಯಿಲ್ಲ. ಈ ಊರುಗಳಲ್ಲಿ ದುಡಿಯುವ ಕೊಂಕಣಿ ಪ್ರೇಮಿಗಳು ಬಹಳಷ್ಟು ಕೊಂಕಣಿ ಸಂಗೀತ ಕಲಾವಿದರನ್ನು ಬೆಳೆಸಿದ್ದಾರೆ ಎಂಬ ಮಾತು ನೂರಕ್ಕೆ ಇನ್ನೂರು ಶೇಕಡಾದಷ್ಟು ಸತ್ಯ.
ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ನೂರಾರು ಸಿಡಿ, ಡಿವಿಡಿಗಳು ಪ್ರತಿ ವರ್ಷ ಬೆಳಕು ಕಾಣುತ್ತಿದೆ. ಹೊಸ ಗಾಯಕ- ಗಾಯಕಿಯರು ಹುಟ್ಟುತ್ತಾ ಸಾಗುತ್ತಿದ್ದಾರೆ. ಅವರಿಗಾಗಿ ಹೊಸ ಹೊಸ ವೇದಿಕೆಗಳು, ಮಾಂಡ್ ಸೊಭಾಣ್‌ನಂತಹ ಸಂಸ್ಥೆಗಳು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಈ ಎಲ್ಲ ವಿಚಾರಗಳ ಮಧ್ಯೆ ‘ಮೈಲ್‌ಸ್ಟೋನ್ ’ ಸಂಗೀತ ಬ್ಯಾಂಡ್ ಕೊಂಚ ಡಿಫರೆಂಟ್ ಲುಕ್‌ನಲ್ಲಿದೆ. ನಾಲ್ವರು ಯುವಕರ ತಂಡ ಕೊಂಕಣಿಯ ಎರಡನೇಯ ಸಂಗೀತ ಬ್ಯಾಂಡ್ ಕಟ್ಟಿದ್ದಾರೆ. ಸ್ವರಚಿತ ಕೊಂಕಣಿ ಹಾಡುಗಳನ್ನು ಮಾತ್ರ ಈ ತಂಡ ಹಾಡುತ್ತಿದೆ. ಕೊಂಕಣಿ ಫ್ಲೇವರ್ ಇದ್ದ ಕಾರಣ ಮೈಲ್ ಸ್ಟೋನ್ ಕೊಂಕಣಿ ಪ್ರೇಮಿಗಳಿಗೆ ಬಹಳ ಇಷ್ಟವಾಗುತ್ತಾರೆ. ತಮ್ಮದೇ ಹಾಡುಗಳ ಮೂಲಕ ಹೊಸ ಕ್ರೇಜ್‌ಗೂ ನಾಂದಿ ಹಾಡುತ್ತಿದ್ದಾರೆ.
ಎಲ್ಲಕ್ಕೂ ಮುಖ್ಯ ಕೊಂಕಣಿಯಲ್ಲಿ ಬ್ಯಾಂಡ್ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ ಬಿಡಿ. ‘ಬಂಡವಾಳ ಇಲ್ಲ, ಕೇಳುಗರಿಲ್ಲ, ಬೆಳೆಯುವವರಿಗೆ ಸರಿಯಾದ ವೇದಿಕೆಗಳಿಲ್ಲ ಮೊದಲಾದ ‘ಇಲ್ಲ’ಗಳ ನಡುವೆ ಮೈಲ್‌ಸ್ಟೋನ್ ನಿಜಕ್ಕೂ ಒಂದು ಮೈಲಿಗಲ್ಲು. ಬ್ಯಾಂಡ್‌ನ ಬ್ಯಾಕ್‌ಬೋನ್ ಕೇವಿನ್ ಮಿಸ್ಕಿತ್ ಒಬ್ಬ ಒಳ್ಳೆಯ ಯುವ ಕೊಂಕಣಿ ಹಾಡುಗಾರ ಈಗಾಗಲೇ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಎರಡು- ಮೂರು ಆಲ್ಬಂಗಳ ಮೂಲಕ ಕರಾವಳಿಯಲ್ಲಿ ತನ್ನದೇ ಖಾತೆ ತೆರೆದವರು. ಇವರಿಗೆ ಸಾಥ್ ನೀಡಲು ಅಲೋಷಿಯಸ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಸಂಜಯ್ ರಾಡ್ರಿಗಸ್, ಬಿಸಿಎ ವಿದ್ಯಾರ್ಥಿ ಪ್ಲೋಯಿಡ್ ಪಿರೇರಾ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿಯುತ್ತಿರುವ ಅಶ್ವಿನ್ ಸಿಕ್ವೇರಾ ಹಾಗೂ ಜೋಯೆಲ್ ಮಿಲಾನ್ ಇದ್ದಾರೆ. ಎಲ್ಲರೂ ಟ್ವಿಂಟಿ ಪ್ಲಸ್‌ನ ಆಸುಪಾಸಿನವರು. ಇವರಿಗೆ ಕೊಂಕಣಿ ಸಂಗೀತ, ಕಲ್ಚರ್ ಎಂದಾಗ ಏನೋ ಒಂದು ಥರದ ಆಂಟಾಜ್‌ಮೆಂಟ್. ಅಂದಹಾಗೆ ಹೊಸ ಬ್ಯಾಂಡ್‌ಗೆ ಬೆನ್ನು ತಟ್ಟಿ ಹೇಳಿ. ವಿ ವಿಶ್ ಯೂ ಬೆಸ್ಟ್ ಆಫ್ ಲಕ್.
ಸಂಪರ್ಕಕ್ಕೆ ಬನ್ನಿ: kevinmisquith@rediffmail.com,9964667653,9590777303

ಕೇವಿನ್ ಮಲ್ಟಿ ಟ್ಯಾಲೆಂಟರ್ !
ಮಂಗಳೂರಿನಲ್ಲಿ ಕಂಪ್ಯೂಟರ್ ಸೇಲ್ಸ್ ಆಂಡ್ ಸರ್ವಿಸಿಂಗ್ ಕೆಲಸ ಮಾಡುತ್ತಿರುವ ಕೇವಿನ್ ಮಿಸ್ಕಿತ್ ಮೂಲತಃ ಸುರತ್ಕಲ್‌ನವರು. ಸಂಗೀತದ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಬಂದ ಮಲ್ಟಿ ಟ್ಯಾಲೆಂಟ್ ಹುಡುಗ. ಒಳ್ಳೆಯ ಕೊಂಕಣಿ ಹಾಡುಗಾರ ಜತೆಗೆ ರಾಗ ಸಂಯೋಜಕ, ಸಾಹಿತ್ಯದಲ್ಲೂ ಕೈಯಾಡಿಸಿದ ಪ್ರತಿಭಾವಂತ. ನಾಲ್ಕು ವರ್ಷದಲ್ಲಿ ರುಪ್ಣೆಂ( ಮುಖ), ತುಜೀ ಯಾದ್( ನಿನ್ನ ನೆನಪು) ಹಾಗೂ ಹೀ ಜಿಣಿ( ಈ ಬದುಕು) ಎಂಬ ಕೊಂಕಣಿ ಸಂಗೀತ ಆಲ್ಬಂಗಳನ್ನು ಕೊಟ್ಟಿದ್ದಾರೆ. ಎಲ್ಲವೂ ಈಗ ಸೋಲ್ಡ್ ಔಟ್. ಈಗಲೂ ಕೊಂಕಣಿಗರ ಮದುವೆ ಕಾರ್‍ಯಕ್ರಮಗಳಲ್ಲಿ ಹಾಡುಗಾರರು ಇವರ ಹಾಡುಗಳನ್ನೇ ಜಾಸ್ತಿಯಾಗಿ ಹಾಡುತ್ತಾರೆ. ಕೇಳುಗರು ಕೂಡ ಅದನ್ನೇ ಬಯಸುತ್ತಾರೆ. ಇದು ನಿಜಕ್ಕೂ ಸಂಗೀತಗಾರನಿಗೆ ಸಲ್ಲುವ ಕೀರ್ತಿ.

ಮೈಲ್‌ಸ್ಟೋನ್ ಡಿಫರೆಂಟ್ !
‘ನಿಜಕ್ಕೂ ‘ಮೈಲ್‌ಸ್ಟೋನ್’ ಎಂಬ ಹೆಸರು ಥಟ್ ಅಂತಾ ಬಂತು. ಅದನ್ನೇ ತೆಗೆದುಕೊಂಡು ಬ್ಯಾಂಡ್‌ಗೆ ಇಟ್ಟುಕೊಂಡೇವು, ಕೊಂಚ ಹೊಸತು ಅನ್ನಿಸಿತು. ನಾವೆಲ್ಲರೂ ಕೊಂಕಣಿ ಸಂಗೀತದಲ್ಲಿ ಏನಾದರೂ ಮಾಡಬೇಕು ಎಂಬ ಕನಸು ಕಂಡವರು. ಈ ಹೆಸರೇ ನಮ್ಮ ಬ್ಯಾಂಡ್‌ಗೆ ಸೂಕ್ತ ಅನ್ನಿಸಿ ಹೋಯಿತು ಎನ್ನುತ್ತಾರೆ ಬ್ಯಾಂಡ್‌ನ ಕೇವಿನ್ ಮಿಸ್ಕಿತ್.
ಈ ಬ್ಯಾಂಡ್‌ನಲ್ಲಿ ನಮ್ಮದೇ ರಚಿತ ಕೊಂಕಣಿ ಹಾಡುಗಳ ಜತೆಯಲ್ಲಿ ಪಾಪ್, ರಾಕ್, ಡಿಸ್ಕೋ, ಜಾನಪದ, ಫ್ಯೂಶನ್, ಬೈಲಾ ಸಾಂಗ್‌ಗಳನ್ನು ಜಾಸ್ತಿಯಾಗಿ ಬಳಸಿಕೊಳ್ಳುತ್ತೇವೆ. ಕೊಂಕಣಿಯ ಮೊದಲ ಬ್ಯಾಂಡ್ ಪಿಯೇಗಾ.. ಪಿಯೇಗಾ ಇತ್ತು. ಅದರಲ್ಲಿ ಎಲ್ಲರೂ ಪ್ರತಿಭಾವಂತರೇ ಆಗಿದ್ದರು. ಆದರೆ ನಮ್ಮಲ್ಲಿ ಎಲ್ಲರೂ ಹೊಸಬರು. ಇನ್ನಷ್ಟೂ ಬೆಳೆಯಬೇಕು ಎಂದುಕೊಂಡು ಬಂದವರು ಜಾಸ್ತಿ ಇದ್ದಾರೆ ಎನ್ನೋದು ಕೇವಿನ್‌ರ ಮಾತು.

No comments:

Post a Comment