Sunday, December 29, 2013

ಮಲಾನಿ ಬಾಲಿವುಡ್‌ನಲ್ಲಿ ಹೊಸ ಕಹಾನಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸಂದೀಪ್ ಮಲಾನಿ ಬಾಲಿವುಡ್ ಅಂಗಳದಲ್ಲಿ ಸೈಲೆಂಟ್ ವರ್ಕ್‌ರ್ ಎಂದೇ ಕರೆಸಿಕೊಂಡವರು. ಬಾಲಿವುಡ್ ಅಂಗಳದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಸದಾ ಕಾಲ ಬ್ಯುಸಿಯಾಗಿರುವ ಮಂಗಳೂರು ಮೂಲದ ಸಂದೀಪ್ ಮಲಾನಿ ಈಗ ಹೊಸ ಕಹಾನಿಯೊಂದನ್ನು ರೆಡಿ ಮಾಡಿದ್ದಾರೆ. ಅದೇನಪ್ಪಾ ಅಂದರೆ ಅತ್ತ ಕಮರ್ಷಿಯಲ್ ಆಂಗಲ್‌ನಲ್ಲೂ ಇಲ್ಲದ ಇತ್ತ ಆರ್ಟ್ ಕೆಟಗರಿಗೂ ಸೇರದಂತಹ ಮೂರು ಕತೆಗಳನ್ನು ಇಟ್ಟುಕೊಂಡು ಮೂರು ಚಿತ್ರಗಳನ್ನು ಮಾಡಲು ಭರ್ಜರಿ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.
‘ಐ ಲವ್ ಹೃತಿಕ್’ ಎನ್ನುವ ಚಿತ್ರದಲ್ಲಿ ಬಾಲಕನ ಮುಗ್ದ ಜಗತ್ತಿನ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸುವ ಯೋಜನೆ ಮಲಾನಿ ತಲೆಗೆ ಬಂದಿದೆ. ಇದರ ಜತೆಯಲ್ಲಿ ‘ಓ ಮೈ ಡಾಗ್’ ಅನ್ಯ ಕೋಮಿನ ಯುವಕ -ಯುವತಿಯ ಪ್ರಣಯ ಕತೆಯನ್ನು ಚಿತ್ರದ ಮೂಲಕ ಹೊರತರುವ ಕೆಲಸ ಕೂಡ ಮಲಾನಿ ಕೈಗೆತ್ತಿಕೊಂಡಿದ್ದಾರೆ. ಹಾಹಾ.. ಹ್ಹೀ ಹ್ಹೀ ಎನ್ನುವ ಹಾಸ್ಯ ಚಿತ್ರ ಮಲಾನಿ ಬಾಣಲೆಯಲ್ಲಿ ಸಿದ್ಧವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ಈ ಎಲ್ಲ ಚಿತ್ರಗಳು ಚಿತ್ರೀಕರಣಗೊಂಡು ತೆರೆಗೆ ತರುವ ಕೆಲಸ ಮಲಾನಿಯಿಂದ ನಡೆಯಲಿದೆ. ಈ ಮೂರು ಚಿತ್ರಗಳನ್ನು ಮಲಾನಿ ತಮ್ಮ ಹೋಮ್ ಬ್ಯಾನರ್ ಮಲಾನಿ ಟಾಕೀಸ್ ಮೂಲಕ ಹೊರ ತರುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ಆಚರಣೆಗಾಗಿ ತಮ್ಮ ಕುಟುಂಬದ ಸಮೇತರಾಗಿ ಮಂಗಳೂರಿನ ಮನೆಗೆ ಬಂದಿದ್ದಾಗ ನಿರ್ದೇಶಕ ಕಮ್ ಕತೆಗಾರ ಮಲಾನಿ ಲವಲವಿಕೆಯ ಜತೆಯಲ್ಲಿ ತಮ್ಮ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡರು. ೨೦೧೩ ನನ್ನ ಪಾಲಿಗೆ ವಿಶೇಷವಾಗಿತ್ತು. ೯ ಸಂಗೀತ ಪ್ರದಾನವಾದ ಡಾಕ್ಯುಮೆಂಟರಿಗಳನ್ನು ಸಿದ್ಧಪಡಿಸಿದ್ದೆ. ಇದರ ಜತೆಯಲ್ಲಿ ಬಾಲಿವುಡ್ ಚಿತ್ರರಂಗದ ದಿಗ್ಗಜರಾದ ಯಶ್‌ರಾಜ್ ಅವರ ನೆನಪಿಗಾಗಿ ‘ಯಶ್‌ರಾಜ್ ಹೀರೋಯಿನ್ಸ್ ದೇ ಜಾಯೆಂಗೆ’ ಹಾಗೂ ಬಾಲಿವುಡ್ ನಟಿ ಶ್ರೀದೇವಿಯ ೫೦ನೇ ಹುಟ್ಟುಹಬ್ಬಕ್ಕಾಗಿ ಶ್ರೀದೇವಿಯ ಬಾಲಿವುಡ್ ಪ್ರಯಾಣ ಕುರಿತಾದ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಡಾಕ್ಯುಮೆಂಟರಿಗಳನ್ನು ಸಿದ್ಧ ಪಡಿಸಿದ್ದೇನೆ ಎಂದರು. ೧೦೦ರ ಸಿನಿಮಾಕ್ಕೆ ಎರಡು ಡಾಕ್ಯುಮೆಂಟರಿ: ಭಾರತೀಯ ಸಿನಿಮಾ ರಂಗ ೧೦೦ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಎರಡು ಸಂಗೀತ ಡಾಕ್ಯುಮೆಂಟರಿಗಳಾದ ‘ಫಿಲ್ಮ್‌ಮಲಾನಿ’ ಹಾಗೂ ‘ಮಲಾನಿಯೀಸ್ ಚಿತ್ರಹಾರ್’ ೫ ಗಂಟೆಗಳ ಸಂಗೀತ ಕಲೆಕ್ಷನ್‌ಗಳನ್ನು ಸಂದೀಪ್ ಮಲಾನಿ ಹೊರ ತಂದಿದ್ದಾರೆ. ಇದರ ಜತೆಯಲ್ಲಿ ಕೊಂಕಣಿ ಹಾಗೂ ತುಳು ಎರಡು ಭಾಷೆಗಳನ್ನು ಒಂದೇ ಚಿತ್ರದಲ್ಲಿ ಜೋಡಿಸಿಕೊಂಡು ತುಳು ಚಿತ್ರವೊಂದನ್ನು ಮಾಡುತ್ತಿದ್ದಾರೆ. ೨೦೧೪ರ ಕೊನೆ ಭಾಗದಲ್ಲಿ ಈ ಚಿತ್ರವನ್ನು ಕೋಸ್ಟಲ್‌ವುಡ್ ಮಾರುಕಟ್ಟೆಯಲ್ಲಿ ಬಿಡುವ ಕುರಿತು ಮಲಾನಿ ಚಿಂತನೆ ಮಾಡುತ್ತಿದ್ದಾರೆ. ಮಲಾನಿ ದಿಡೀರ್ ಸಿನಿಮಾ ಎಂಟ್ರಿ: ರೋಮನ್ ಕೆಥೋಲಿಕ್ ಕುಟುಂಬದಲ್ಲಿ ೧೯೭೧ರಲ್ಲಿ ಮುಂಬೈನಲ್ಲಿ ಜನಿಸಿದ ಸಂದೀಪ್ ಮಲಾನಿ ಬೆಳದದ್ದು ಮಾತ್ರ ನಮ್ಮ ನಾಡಿನ ಕಡಲ ಕಿನಾರೆ ಮಂಗಳೂರಿನಲ್ಲಿ. ತಂದೆ ಸಿನಿಮಾ ಹಂಚಿಕೆದಾರರಾಗಿದ್ದ ಕಾರಣ ಸದಾ ಮನೆಯಲ್ಲಿ ಸಿನಿಮಾಗಳ ಕುರಿತು ಚರ್ಚೆ ನಡೆಯುತ್ತಿತ್ತು. ಅಂಥಹಾ ಚರ್ಚೆಗಳೇ ಸಂದೀಪ್ ಮಲಾನಿಯನ್ನು ಇಂದು ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಮುಟ್ಟಿಸಿ ಮುನ್ನಡೆಸಲು ಕಾರಣವಾಯಿತು. ಬಾಲ್ಯದಿಂದ ಹಿಡಿದು ತರುಣಾವಸ್ತೆ ತಲುಪುವ ತನಕವೂ ಸಂದೀಪ್ ಚಿತ್ರದಲ್ಲಿ ಚಲನಚಿತ್ರಗಳೇ ತುಂಬಿ ತುಳುಕಿದ ಪರಿಣಾಮ ಮುಂದೆಯೂ ಸಿನಿಮಾ ಹುಚ್ಚು ಹಿಡಿದು ನಿರ್ದೇಶಕನಾಗುವ ಹಂತಕ್ಕೆ ಬಂದು ತಲುಪಿತು ! ಓದಿದ್ದು ಒಂದು ಆಗಿದ್ದು ಇನ್ನೊಂದು: ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಂಗ ಪೂರೈಸಿದ ಸಂದೀಪ್ ಪತ್ರಿಕೋದ್ಯಮದತ್ತ ಒಲವು ತೋರಿ ಅಭ್ಯಾಸ ಮಾಡಿದರು. ಮಂಗಳೂರಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದರು. ಹುಡುಗಾಟದಿಂದಲೇ ಪಾಶ್ಚಾತ್ಯ ನೃತ್ಯದಲ್ಲೂ ಸಾಧನೆ ಮಾಡಿದ್ದ ಇವರು ಎರಿಕ್ ತಂಡದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ನಂತರ ಬೆಂಗಳೂರಿಗೆ ಬಂದು ಆಂಗ್ಲ ದೈನಿಕವೊಂದರಲ್ಲಿ ಸ್ವಲ್ಪಕಾಲ ಪತ್ರಕರ್ತರಾದ ಇವರು ಕ್ರಮೇಣ ಕನ್ನಡ ಚಿತ್ರಗಳಿಗೆ ಕತೆ ಬರೆಯಲು ಇಳಿದರು. ಒಂದು ಹಂತದಲ್ಲಿ ಪೂರ್ಣವಾಗಿ ಚಿತ್ರರಂಗದತ್ತ ವಾಲಿದ ಸಂದೀಪ್ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾದರು. ಇದು ಸಂದೀಪ್ ಮಲಾನಿ ಎನ್ನ್ನುವ ಕ್ರಿಯೇಟಿವ್ ನಿರ್ದೇಶಕನ ಬ್ಯಾಕ್ ಗ್ರೌಂಡ್ ಸ್ಟೋರಿ... ............

Saturday, December 28, 2013

ಮದುವೆಯಾಗುತ್ತಿದ್ದೇನೆ ಮರೆಯದೇ ಬನ್ನಿ

ಹೊಸ ವರ್ಷ ಓಡೋಡಿ ಬರುತ್ತಿದೆ. ಗೋಡೆಯಲ್ಲಿ ತೂಗಿಸಿಟ್ಟ ಹಳೆಯ ಕ್ಯಾಲೆಂಡರ್ ವೊಂದು ಕಸದ ಬುಟ್ಟಿ ಸೇರುತ್ತಿದ್ದಂತೆಯೇ ಹೊಸ ಕ್ಯಾಲೆಂಡರ್ ಜನವರಿ ತಿಂಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಿಬಿಟ್ಟಿದೆ. ನನ್ನ ಪಾಲಿಗೆ ಜನವರಿ ಎಂದಾಕ್ಷಣ ಒಂದು ಹೊಸ ಹುರುಪು, ಉಲ್ಲಾಸ ಜತೆಗೆ ಇನ್ನಷ್ಟು ದುಡಿಯಬೇಕು ಎನ್ನುವ ಚಟ ಗೊತ್ತಿಲ್ಲದೇ ನನ್ನೋಳಗೆ ಗಟ್ಟಿಯಾಗುತ್ತದೆ. ಇದು ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಆದರೆ ಈ ವರ್ಷ ಅದರಲ್ಲೂ 2014 ಜನವರಿ 12 ನನ್ನ ಪಾಲಿಗಂತೂ ವಿಶೇಷ ದಿನ. ಕಾರಣ ಇಷ್ಟೇ ಅಂದೇ ನಾನು ಮದುವೆಯಾಗುತ್ತಿದ್ದೇನೆ.
ತುಂಬಾನೇ ಸರಳ ಹಾಗೂ ನನ್ನ ಪತ್ರಿಕೋದ್ಯಮ ವೃತ್ತಿ, ಭಾವನೆ, ಕುಟುಂಬದ ಎಲ್ಲರನ್ನು ಅಪ್ಪಿಕೊಳ್ಳಲು ಮುಂದೆ ಬರುತ್ತಿರುವ ನನ್ನ ಹುಡುಗಿಯ ಕೈ ಹಿಡಿಯುತ್ತಿದ್ದೇನೆ. ಅದರಲ್ಲೂ ನಾನು ಅತೀ ಹೆಚ್ಚುವ ಅಭಿಮಾನದಿಂದ ನೋಡುವ ನನ್ನ ಮಾದರಿ ವ್ಯಕ್ತಿ ಸ್ವಾಮಿ ವಿವೇಕಾನಂದ ಅವರ ಹುಟ್ಟುಹಬ್ಬದ ದಿನವೇ ನನ್ನ ಮದುವೆ ನಡೆಯುತ್ತಿದೆ. ನಾನಾ ಊರುಗಳಲ್ಲಿ ತುಂಬಿರುವ ನನ್ನ ಪ್ರೀತಿಯ ಗೆಳೆಯರಿಗೆ ಮದುವೆಯ ಆಮಂತ್ರಣವನ್ನು ನೀಡಬೇಕು ಎನ್ನೋದು ನನ್ನ ಹೆಬ್ಬಯಕೆಯಾಗಿತ್ತು. ಆದರೆ ಮದುವೆ, ವೃತ್ತಿ ಕೆಲಸದ ಒತ್ತಡ ಜತೆಗೆ ಸಮಯದ ಅಭಾವ ನನ್ನನ್ನು ಬಹಳವಾಗಿ ಕಾಡುತ್ತಿದೆ. ಈ ಎಲ್ಲ ಕಾರಣಗಳಿಂದ ಯಾಕೋ ಏನೋ ಜನವರಿ 11ರೊಳಗೆ ನಿಮ್ಮ ಬಳಿಗೆ ನನ್ನ ಮದುವೆ ಆಮಂತ್ರಣ ಪತ್ರ ತಲುಪದೇ ಇರಬಹುದು. ಆದರೆ ಇದೇ ಕಾರಣ ಇಟ್ಟುಕೊಂಡು ನಾನು ಆಮಂತ್ರಣ ಪತ್ರ ನೀಡಿಲ್ಲ ಎಂದು ಬೇಸರಿಸಬೇಡಿ. ತುಂಬಾ ಹತ್ತಿರ ಇದ್ದ ಹುಡುಗ ಮದುವೆಗೇ ಹೇಳಿಯೇ ಇಲ್ಲ ಮಾರಾಯ್ರೆ ಎನ್ನಬೇಡಿ. ನನ್ನ ಹಾಗೂ ನನ್ನ ಪ್ರೀತಿಯ ಹುಡುಗಿಯ ಬದುಕಿನಲ್ಲಿ ಇದೊಂದು ದೊಡ್ಡ ಸಂಭ್ರಮ. ಮದುವೆಗೆ ಹೇಳದೇ ಮರೆತು ಹೋಗಿರುವ ಗೆಳೆಯರಿಗೆ ಹಾಗೂ ಹೇಳಿಕೂಡ ಮರೆದು ಬಿಡುವ ಗೆಳೆಯರಿಗೆ ಇದೇ ಮದುವೆಯ ಆಮಂತ್ರಣ ಪತ್ರ ಎಂದು ತಿಳಿದುಕೊಂಡು ನಮ್ಮಿಬ್ಬರನ್ನು ಪ್ರೀತಿಯಿಂದ ಹರಸಲು ಬನ್ನಿ...
ಅಂದಹಾಗೆ ಜನವರಿ ತಿಂಗಳ ಮೊದಲ ಎರಡು ವಾರ ನನ್ನ ಬದುಕಿನಲ್ಲಿ ಸಂಭ್ರಮದ ಕ್ಷಣಗಳಿಂದಲೇ ತುಂಬಿದೆ. ಜನವರಿ 5ರಂದು ನನ್ನ ಹಾಗೂ ನನ್ನ ಹುಡುಗಿಯ ನಿಶ್ಚಿತಾರ್ಥ, ಜನವರಿ 10ರಂದು ರೋಸ್ ಅರ್ಥಾತ್ ಮದರಂಗಿ ಕಾರ್ಯಕ್ರಮ ಹಾಗೂ ಜನವರಿ 12ರಂದು ಮದುವೆಯ ಸುವರ್ಣ ಕ್ಷಣ. ಈ ಎಲ್ಲ ಕಾರ್ಯಕ್ರಮಗಳಲ್ಲಿ ತಾವು ಬರಬೇಕು. ಅದರಲ್ಲೂ ಮೂರರಲ್ಲಿ ಒಂದು ಕಾರ್ಯಕ್ರಮದಲ್ಲಾದರೂ ಭಾಗವಹಿಸಲೇ ಬೇಕು ಎನ್ನುವುದು ನನ್ನ ವಿನಂತಿ. ಪ್ರೀತಿ ಇಟ್ಟುಕೊಂಡು ಮದುವೆಗೆ ಬನ್ನಿ... ನಿಮ್ಮ ಮನೆಯ ಹುಡುಗ ಸ್ಟೀವನ್ ರೇಗೊ, ದಾರಂದಕುಕ್ಕು

Monday, December 16, 2013

ಕರಾವಳಿಯಲ್ಲಿ ಕ್ರಿಸ್ ಮಸ್ ‘ಕುಸ್ವಾರ್’

* ಸ್ಟೀವನ್ ರೇಗೊ, ದಾರಂದಕುಕ್ಕು
ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಕ್ರಿಸ್‌ಮಸ್ ಹಬ್ಬ್ಬದ ಸಡಗರ ಗಟ್ಟಿಯಾಗುತ್ತದೆ. ಗಡಗಡ ನಡುಗಿಸುವ ಚಳಿಯೊಂದಿಗೇ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಹಬ್ಬಕ್ಕೆ ಕೆಲ ದಿನಗಳ ಮುನ್ನವೇ ಅಲ್ಲಲ್ಲಿ ಶುರುವಾಗುವ ಕೇಕ್ ಮಿಕ್ಸಿಂಗ್‌ನ ಮೋಜೂ ಹಬ್ಬಕ್ಕೆ ಮುನ್ನುಡಿಯಾಗುತ್ತದೆ. ಈಗಾಗಲೇ ಎಲ್ಲೆಲ್ಲೂ ಸಾಂತಾಕ್ಲಾಸ್ ವೇಷಧಾರಿಗಳ ಸಿದ್ಧತೆಯೂ ಭರದಿಂದಲೇ ನಡೆದಿದೆ. ಕ್ರಿಸ್‌ಮಸ್ ಟ್ರೀ ಜತೆಗೆ ನಕ್ಷತ್ರಾಕಾರದ ಆಕಾಶ ಬುಟ್ಟಿಗಳ ಮಾರಾಟ, ದೇವಲೋಕದ ಸೃಷ್ಟಿಗೆ ಬೇಕಿರುವ ನಕ್ಷತ್ರಗಳ ಮಾರಾಟದ ಭರಾಟೆ ಕೂಡ ಜೋರು. ದೇವಕನ್ಯೆಯರು, ಮಾತೆ ಮೇರಿ, ಬಾಲ ಏಸು ಇಲ್ಲದೇ ಹಬ್ಬ ಪೂರ್ಣಗೊಳ್ಳುವುದೇ ಇಲ್ಲ... ಈ ಕೊರತೆ ನೀಗಿಸಲೆಂದೇ ಪ್ರತಿ ಮನೆಯಲ್ಲೂ ಗೋದಲಿಗಳ ಸೃಷ್ಟಿಯಾಗುತ್ತದೆ. ಆದರೆ ಕರಾವಳಿಯಲ್ಲಿ ಮಾತ್ರ ಇವೆಲ್ಲಕ್ಕಿಂತ ಕೊಂಚ ಭಿನ್ನವಾದ ಕ್ರಿಸ್‌ಮಸ್ ಆಚರಣೆ ನಡೆಯುತ್ತದೆ. ಕರಾವಳಿಯಲ್ಲಿ ಕ್ರಿಸ್‌ಮಸ್ ಎಂದಾಕ್ಷಣ ಕುಸ್ವಾರ್(ತಿಂಡಿ ತಿನಸು)ಗಳ ಮಾತು ಬರುತ್ತದೆ. ಇಲ್ಲಿ ಕೇಕ್‌ಗಳಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಆದರೆ ಕುಸ್ವಾ ರ್‌ಗಳಿಗಂತೂ ಬೇಡಿಕೆ ಇದ್ದೇ ಇದೆ. ಕರಾವಳಿಯ ಪಕ್ಕಾ ಕಥೋಲಿಕ್ ಬಂಧುಗಳು ಕುಸ್ವಾ ರ್ ಇಲ್ಲದೇ ಕ್ರಿಸ್ ಮಸ್ ಹಬ್ಬವನ್ನು ಸರಿಯಾಗಿ ಆಚರಣೆಯೇ ಮಾಡೋದಿಲ್ಲ. ಇಂತಹ ವಿಶಿಷ್ಟ ಬೆಳವಣಿಗೆ ದೇಶ- ವಿದೇಶದ ಯಾವುದೇ ಮೂಲೆಯಲ್ಲೂ ಕಾಣ ಸಿಗೋದಿಲ್ಲ. ಕುಟುಂಬದ ಸದಸ್ಯರು ಜತೆಗೂಡಿಕೊಂಡು ಗುಳಿಯೊ, ಕಿಡಿಯೊ, ಕುಲ್‌ಕುಲ್, ಗಜ್ಜೆಯಿ, ಅಕ್ಕಿ ಲಾಡು, ತುಕ್‌ಡಿ, ಚಕ್ಕುಲಿ, ಖಾರಕಡ್ಡಿ ಹೀಗೆ ಹತ್ತಾರು ಐಟಂಗಳು ಕರಾವಳಿಯ ಕ್ರಿಸ್‌ಮಸ್ ಕುಸ್ವಾರ್ ಪಟ್ಟಿಯಲ್ಲಿ ಜಾಗ ಪಡೆದುಕೊಳ್ಳುತ್ತದೆ. ಆಧುನಿಕ ಬದುಕಿನ ಒದ್ದಾಟದಲ್ಲಿ ಕುಸ್ವಾರ್ ಕಳೆಗುಂದಿದೆ: ಕ್ಯಾಲೆಂಡರ್ ಪುಟದಲ್ಲಿ ನವೆಂಬರ್ ತಿಂಗಳು ಕಳೆದು ಡಿಸೆಂಬರ್ ಬಂದಾಕ್ಷಣ ಕ್ರಿಸ್‌ಮಸ್ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಾ ಬರುತ್ತದೆ. ಮುಖ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿಯೇ ಕುಸ್ವಾರ್ ಗಳ ಕಚ್ಚಾ ಸಾಮಗ್ರಿಗಳು ಬಂದು ಮನೆಯ ಮೂಲೆಯಲ್ಲಿ ಬಿದ್ದು ಬಿಡುತ್ತದೆ. ನಂತರ ಡಿಸೆಂಬರ್ ೨೦ ದಾಟುತ್ತಿದ್ದಂತೆ ಕುಸ್ವಾರ್ ತಯಾರಿಯಲ್ಲಿ ಎಲ್ಲರೂ ಜತೆಗೂಡುತ್ತಾರೆ. ಆಧುನಿಕ ಕಾಲದಲ್ಲಿ ಕೆಲಸದ ಒತ್ತಡ ಹಾಗೂ ಸಮಯದ ಅಭಾವಗಳು ಎರಡು ಕೂಡ ಕಾಡುತ್ತಿರುವುದರಿಂದ ಇಂತಹ ಕುಸ್ವಾರ್ ತಿಂಡಿಗಳನ್ನು ಮನೆಯ ಸದಸ್ಯರು ಕೂಡಿಕೊಂಡು ಮಾಡುವುದಕ್ಕಿಂತ ಹೆಚ್ಚಾಗಿ ಬೇಕರಿಗಳಿಗೆ ಮೊರೆ ಹೋಗುತ್ತಾರೆ. ಕರಾವಳಿಯ ಖ್ಯಾತ ಬೇಕರಿಗಳು ಈ ತಿಂಡಿ ತಿನಸುಗಳನ್ನು ಮಾರಾಟ ಮಾಡುತ್ತಾ ಬರುತ್ತಿದೆ.
ಕುಸ್ವಾರ್ ಮೂಲತಃ ಗೋವಾ ರಾಜ್ಯದಿಂದ ಬಂದ ಪದ್ದತಿಗಳಲ್ಲಿ ಒಂದು ಎನ್ನುವುದು ಕರಾವಳಿಯ ಬಹುತೇಕ ಕಥೋಲಿಕ್ ಬಂಧುಗಳು ನಂಬಿಕೊಂಡು ಬದುಕುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಗೋವಾದಿಂದ ಕರಾವಳಿ ಕಡೆಗೆ ಹರಿದು ಬಂದ ಕ್ರೈಸ್ತರು ಅಲ್ಲಿಂದ ಕೆಲವೊಂದು ಸಂಪ್ರದಾಯ, ಆಚರಣೆ, ಆಹಾರ ಪದ್ಧತಿಗಳನ್ನು ತಂದರು ಎನ್ನುತ್ತಾರೆ ಕೊಂಕಣಿ ಪ್ರಚಾರ ಸಂಚಾಲನ ಸಮಿತಿಯ ಕಾರ್‍ಯದರ್ಶಿ ವಿತೋರಿ ಕಾರ್ಕಳ ಅವರು. ಕುಸ್ವಾ ರ್ ತಯಾರಿಯಲ್ಲಿ ಎಲ್ಲರೂ ಜತೆಗೂಡುವ ಮೂಲಕ ಕುಟುಂಬದ ಸದಸ್ಯರ ಏಕತೆಯ ಸಂಕೇತ ಇಮ್ಮಡಿಗೊಳ್ಳುತ್ತದೆ. ಮನೆಮಂದಿಯೆಲ್ಲಾ ತಯಾರಿಸಿದ ’ಕುಸ್ವಾರ್’ ಕ್ರಿಸ್‌ಮಸ್‌ನ ಪ್ರೀತಿಯ ಸಂಕೇತವಾಗಿ ನೆರೆಮನೆಯ ಬಾಂಧವರಿಗೆ, ಜಾತಿ ಮತ ಭೇದವಿಲ್ಲದೆ ವಿತರಿಸುತ್ತಾರೆ. ಈ ಸಂಪ್ರದಾಯ ಇಂದಿಗೂ ಕ್ರೈಸ್ತಬಾಂದವರಲ್ಲಿ ಚಾಲ್ತಿಯಲ್ಲಿದೆ ಎನ್ನೋದು ಕ್ರಿಸ್ ಮಸ್ ಸಮಯದಲ್ಲಿ ಖುಷಿ ಕೊಡುವ ವಿಷ್ಯಾ.

Tuesday, December 10, 2013

ತುಳು ನಾಟಕಕ್ಕೆ ಬಂತು ಸಿನಿಮಾದ ಮೆರಗು

ಸ್ಟೀವನ್ ರೇಗೊ, ದಾರಂದಕುಕ್ಕು
ಕರಾವಳಿಯ ಕೋಸ್ಟಲ್‌ವುಡ್ ಮತ್ತೇ ಚಿಗುರಿಕೊಂಡಿದೆ. ಈ ವರ್ಷ ಒಂದೆರಡು ಸಿನಿಮಾಗಳು ಥಿಯೇಟರ್‌ಗಳಿಗೆ ಲಗ್ಗೆ ಇಟ್ಟರೆ ಉಳಿದಂತೆ ೪೦ಕ್ಕೂ ಅಧಿಕ ಸಿನಿಮಾಗಳು ಸಿನಿಮಾ ಲ್ಯಾಂಡ್ ನೋಂದಣಿ ಪಡೆದುಕೊಂಡು ಚಿತ್ರೀಕರಣಕ್ಕೆ ದಿನ ನಿಗದಿ ಮಾಡಿಕೊಳ್ಳುತ್ತಿದೆ. ಕೋಸ್ಟಲ್‌ವುಡ್ ನ ಇತಿಹಾಸದಲ್ಲಿಯೇ ಇದೊಂದು ಭರ್ಜರಿಯಾದ ಫಸಲು ಎನ್ನುವ ವಿಚಾರದಲ್ಲಿ ಯಾವುದೇ ಗೊಂದಲ ಉಳಿಯುವುದಿಲ್ಲ. ಕೋಸ್ಟಲ್ ವುಡ್‌ನಲ್ಲಿ ಹೊಸ ನಾಯಕರು, ಹೊಸ ನಾಯಕಿಯರು, ಹೊಸ ನಿರ್ದೇಶಕರ ಜತೆಗೆ ಹೊಸ ನಿರ್ಮಾಪಕರು ತಮ್ಮ ಅದೃಷ್ಟ ಪರೀಕ್ಷೆಯಾಟದಲ್ಲಿ ಗೆಲ್ಲುತ್ತಾರಾ ಎನ್ನುವ ಪ್ರಶ್ನೆಯೊಂದು ಎದುರುಗೊಂಡಿದೆ. ಈಗ ಕೋಸ್ಟಲ್‌ವುಡ್‌ನಲ್ಲಿ ಹೊಸ ಸಿನಿಮಾಗಳಿಗೆ ಏನೂ ಬರವಿಲ್ಲ. ಆದರೆ ಈಗ ನಿಜಕ್ಕೂ ಇರೋದು ಚಿತ್ರಕತೆಯ ವಿಚಾರದಲ್ಲಿ ಸಿಕ್ಕಾಪಟ್ಟೆ ಪೈಪೋಟಿ ಲಕ್ಷಣಗಳು ಕಾಣಿಸಿಕೊಂಡಿದೆ. ತುಳು ಚಿತ್ರರಂಗದ ಇತಿಹಾಸದಲ್ಲಿ ಪುಟ್ಟ ಕತೆಯನ್ನು ಇಟ್ಟುಕೊಂಡು ಅದನ್ನು ಚಿತ್ರಕ್ಕೆ ಬೇಕಾದಂತೆ ಪೋಣಿಸಿಕೊಂಡು ಚಿತ್ರ ಮಾಡುವ ಕಾಲವೊಂದು ಗಟ್ಟಿಯಾಗಿತ್ತು. ಈಗ ತುಳು ಸಿನಿಮಾದಲ್ಲಿ ನಾಟಕದ ಕತೆಗಳೇ ಮೂಲ ಬಂಡವಾಳ ಅದರ ಜತೆಗೆ ಚಿತ್ರಕ್ಕೆ ಬೇಕಾದ ಸಾಮಗ್ರಿಗಳನ್ನು ಒಟ್ಟು ಸೇರಿಸುವ ಪರಂಪರೆ ಹುಟ್ಟಿಕೊಂಡಿದೆ. ತುಳು ರಂಗಭೂಮಿಯಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡ ನಾಟಕಗಳು ಸಿನಿಮಾಗಳಾಗಿ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಅಂದಹಾಗೆ ಒಂದಲ್ಲ ಎರಡಲ್ಲ ಬರೋಬರಿ ೨೫ ವರ್ಷಕ್ಕಿಂತ ಹಳೆಯ ನಾಟಕವೊಂದು ಸಿನಿಮಾಕ್ಕೆ ಅಣಿಯಾಗುವ ಯೋಜನೆಯೊಂದು ರೂಪುಗೊಂಡಿದೆ. ಕರಾವಳಿಯ ಹಿರಿಯ ನಾಟಕ ತಂಡ: ಕರಾವಳಿಯಲ್ಲಿ ೧೯೭೪ರಲ್ಲಿ ನಾಟಕಗಳನ್ನು ಕಮರ್ಷಿಯಲ್ ಆಂಗಲ್‌ಗೆ ತಂದುಕೊಟ್ಟ ಹಿರಿಯ ನಾಟಕ ತಂಡ ಎ. ಗಂಗಾಧರ್ ನೇತೃತ್ವದ ಚಿತ್ರಕಲಾ ಆರ್ಟ್ಸ್, ಮಂಗಳೂರು ತನ್ನ ಬೇಡಿಕೆಯ ನಾಟಕವಾದ ‘ಒರಿಯನ್ ತೂಂಡ ಒರಿಗಾಪುಜಿ’ಯನ್ನು ಬೆಳ್ಳಿ ತೆರೆಗೆ ಇಳಿಸುತ್ತಿದ್ದಾರೆ. ೮೦ ಹಾಗೂ ೯೦ರ ದಶಕದಲ್ಲಿ ನೂರಾರು ಪ್ರದರ್ಶನಗಳನ್ನು ಕಾಣುತ್ತಾ ಕರಾವಳಿಯ ರಂಗಭೂಮಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ನಾಟಕದಿಂದಾಗಿ ಕರಾವಳಿಯ ಖ್ಯಾತ ಕಲಾವಿದರಾದ ಮಾಧವ ಶಕ್ತಿ ನಗರ, ರೋಹಿದಾಸ್ ಕದ್ರಿ, ಸರೋಜಿನಿ ಶೆಟ್ಟಿ, ನವೀನ್ ಡಿ ಪಡೀಲ್ ಎನ್ನುವ ಅಪ್ಪಟ ಕಲಾವಿದರನ್ನು ಕರಾವಳಿ ರಂಗಭೂಮಿಗೆ ನೀಡಿತ್ತು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ಧಗೊಳ್ಳುತ್ತಿದೆ. ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಸೇರಿದಂತೆ ಕನ್ನಡದ ಪ್ರಜ್ಯು ಪೂವಯ್ಯ,ರೇಖಾದಾಸ್, ಭವ್ಯಾ ಕರಾವಳಿಯ ರಂಗಭೂಮಿ ಕಲಾವಿದರಾದ ಚೇತನ್ ರೈ ಮಾಣಿ, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಗಂಗಾಧರ್ ಶೆಟ್ಟಿ, ಸಾಯಿ ಕೃಷ್ಣ ಇದ್ದಾರೆ. ಸಂಗೀತದಲ್ಲಿ ವಿ. ಮನೋಹರ್, ಕ್ಯಾಮೆರಾದಲ್ಲಿ ನಾಗೇಶ್ ಆಚಾರ್ಯ ಉಡುಪಿ, ಸಹ ನಿರ್ದೇಶಕರಾಗಿ ರಾಮದಾಸ್ ಸಸಿಹಿತ್ಲು, ರಂಜೀತ್ ಸುವರ್ಣ ಇದ್ದಾರೆ. ನಿರ್ಮಾಪಕರಾಗಿ ಬಿ. ಅಶೋಕ್ ಕುಮಾರ್ ಹಾಗೂ ಎ. ಗಂಗಾಧರ್ ಶೆಟ್ಟಿ ವಹಿಸಿದ್ದಾರೆ. ಕನ್ನಡದ ನಿರ್ದೇಶಕ ಹ.ಸೂ.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಮುಹೂರ್ತ: ಡಿ.೧೧ರಂದು ಮಂಗಳೂರಿನ ಶ್ರೀಮಂಗಳಾದೇವಿಯಲ್ಲಿ ಬೆಳಗ್ಗೆ ೧೦ಕ್ಕೆ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಚಿವ ಬಿ. ರಮಾನಾಥ ರೈ, ಯು.ಟಿ. ಖಾದರ್, ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಮಾನಾಥ ಹೆಗ್ಡೆ, ಆನಂದ್ ಕೆ, ಬಂಟರ ಯಾನೆ ನಾಡವರ ಮಾತೃ ಸಂಘದ ಅಜಿತ್ ಕುಮಾರ್ ಮಾಲಾಡಿ, ಡಾ. ಶಿವಶರಣ್ ಶೆಟ್ಟಿ, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿರುವರು. (vijyakarnataka daily published dis news on: 12.12.2013)

ತುಳು ಚಿತ್ರದಲ್ಲಿ ಸುಂದರನಾಥ್ ಕುಸುರಿ

ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದ ‘ಬಂಗಾರ ಪಟ್ಲೇರ್’ ಚಿತ್ರದ ಸುಂದರ ಕ್ಯಾಮೆರಾ ವರ್ಕ್ ಕುಸುರಿ ಕೆಲಸದಲ್ಲಿ ಸಂದರನಾಥ್ ಸುವರ್ಣ ಅವರ ಕೈಚಳಕವಿತ್ತು ಎನ್ನುತ್ತಾರೆ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ರಿಚರ್ಡ್ ಕ್ಯಾಸ್ಟಲಿನೋ. ೧೯೯೩ರಲ್ಲಿ ೧೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಂಗಾರ ಪಟ್ಲೇರ್ ಸಿನಿಮಾದ ಪ್ರತಿಯೊಂದು ದೃಶ್ಯಗಳಲ್ಲೂ ಸುವರ್ಣ ಕೈಚಳಕವಿದೆ. ಮುಖ್ಯವಾಗಿ ತುಳು ಸಂಸ್ಕೃತಿಯನ್ನು ಚಿತ್ರದಲ್ಲಿ ತುಂಬುವಲ್ಲಿ ಯಶಸ್ವಿಯಾಗಿದ್ದರು ಸುವರ್ಣ. ಮಂಗಳೂರಿನ ಖ್ಯಾತ ಸಾಹಿತಿ ನಾರಾಯಣ ಶೆಟ್ಟಿ ಅವರ ‘ಸತ್ಯ ಬತ್ತಲೆ’ ಎನ್ನುವ ನಾಟಕ ಆಧರಿಸಿ ಕಟ್ಟಿದ ಸಿನಿಮಾದ ಪ್ರಧಾನ ಆಧಾರ ಸ್ತಂಭವೇ ಸುವರ್ಣರು. ಯಾಕೆಂದರೆ ಆ ತಂಡದಲ್ಲಿ ಹೆಸರು ಸಂಪಾದಿಸಿದ ಸಾಧಕ ಅವರೊಬ್ಬರೇ. ಸಂಭಾಷಣೆಯಲ್ಲಿ ದುಡಿದ ರಾಮಣ್ಣ ರೈ, ಹಿನ್ನೆಲೆ ಸಂಗೀತ ನೀಡಿದ ಚರಣ್‌ಕುಮಾರ್, ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ ರಿಚರ್ಡ್ ಕ್ಯಾಸ್ಟಲಿನೋ ಎಲ್ಲರಿಗೂ ಸುವರ್ಣ ಪ್ರೋತ್ಸಾಹದ ಚಿಲುಮೆಯಾಗಿದ್ದರು ಎನ್ನುತ್ತಾರೆ ‘ಬಂಗಾರ್ ಪಟ್ಲೇರ್’ ಚಿತ್ರದ ಕಲಾ ನಿರ್ದೇಶಕ ತಮ್ಮ ಲಕ್ಷಣ. ‘ಬಂಗಾರ್ ಪಟ್ಲೇರ್’ ಚಿತ್ರದ ದೃಶ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ೧೯೯೨-೯೩ರ ಸಾಲಿನಲ್ಲಿ ರಾಜ್ಯ ಸರಕಾರದಿಂದ ವಿಶೇಷ ಪ್ರಾಂತೀಯ ಭಾಷಾ ಚಲನಚಿತ್ರ ಪ್ರಶಸ್ತಿಗೆ ಭಾಜನವಾದ ನಂತರ ಬಂಗಾರ್ ಪಟ್ಲೇರ್ ಚಿತ್ರವನ್ನು ಕೋಲ್ಕೊತ್ತಾದಲ್ಲಿ ಈ ಸಮಯದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಮಾರ್ಕೆಟಿಂಗ್ ವಿಭಾಗದಲ್ಲಿ ಆಯ್ಕೆಯಾದಾಗ ಚಿತ್ರವನ್ನು ಅದರ ದೃಶ್ಯ, ಕತೆ ಹಾಗೂ ಸಂಗೀತವನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ರಶಸ್ತಿ ನೀಡುವ ಜ್ಯೂರಿ ಸ್ಥಳೀಯ ವಸ್ತು ಗಳನ್ನು ಹೇಗೆ ಬಳಸಿ ಕೊಂಡು ಚಿತ್ರ ಮಾಡ ಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುವ ಮಾತನ್ನು ಆಡಿತ್ತು ಎನ್ನುತ್ತಾರೆ ಕ್ಯಾಸ್ಟಲಿನೋ. ‘ಬಂಗಾರ್ ಪಟ್ಲೇರ್’ ಚಿತ್ರ ಕೋಸ್ಟಲ್‌ವುಡ್‌ನಲ್ಲಿ ಹಿಟ್ ಆದ ಕೂಡಲೇ ರಿಚರ್ಡ್ ಹಾಗೂ ಸುಂದರನಾಥ್ ಸುವರ್ಣ ಮತ್ತೆ ಜತೆಗೂಡಿದರು. ೧೯೯೩ರ ಸೆ.೮ರಂದು ಒಂದೇ ದಿನ ಇಪ್ಪತ್ತಮೂರುವರೆ ಗಂಟೆ ಅವಧಿಯಲ್ಲಿ ಚಿತ್ರೀಕರಣ ಮಾಡುವ ಯೋಜನೆಯ ಹಿಂದೆ ಇದ್ದವರು ಸುಂದರ್‌ನಾಥ್ ಸುವರ್ಣ. ಚಿತ್ರದ ಕತೆಯನ್ನು ರಿಚರ್ಡ್ ಸುವರ್ಣರಿಗೆ ಹೇಳುವಾಗ ಅವರು ಒಂದೇ ದಿನದಲ್ಲಿ ಶೂಟಿಂಗ್ ಮಾಡಿ ಮುಗಿಸೋಣ ಎನ್ನುವ ಒಂದು ಐಡಿಯಾ ಕೊಟ್ಟಿದ್ದರು. ರಿಚರ್ಡ್ ಕೂಡ ಆರಂಭದಲ್ಲಿ ಹಿಂದೆ ಮುಂದೆ ಅಲೋ ಚನೆ ಮಾಡಿದರು. ಆದರೆ ಸುಂದರ್‌ನಾಥ್ ಸುವರ್ಣ ನಾನಿದ್ದೇನೆ ಎಲ್ಲವನ್ನು ಮಾಡಿ ಮುಗಿಸಬಹುದು. ತುಳು ಚಿತ್ರದಲ್ಲಿ ಇದೊಂದು ಹೊಸ ದಾಖಲೆಯಾಗುತ್ತದೆ. ಚಿತ್ರ ಆರಂಭಕ್ಕೆ ಮೊದಲು ಸುವರ್ಣ ಅವರು ಚಿತ್ರದ ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇಡೀ ಚಿತ್ರದ ಫ್ರೇಮ್ ಟು ಫ್ರೇಮ್‌ನಲ್ಲಿ ಸುವರ್ಣ ಅವರ ಕೆಲಸ ಕಾಣುತ್ತದೆ. ಅದಕ್ಕೂ ಮಿಗಿಲಾಗಿ ಹಿರಿಯ ಸಾಹಿತಿ ಶಿವರಾಮ ಕಾರಂತ ಅವರನ್ನು ಸೆಪ್ಟೆಂಬರ್ ೮ರಲ್ಲಿ ಟೇಕ್ ಮೇಲೆ ಟೇಕ್ ತೆಗೆದುಕೊಂಡು ಕಾರಂತರನ್ನು ಇಳಿ ವಯಸ್ಸಿನಲ್ಲಿ ದುಪ್ಪಟ್ಟು ಕೆಲಸ ಮಾಡುವಂತೆ ಮಾಡಿದ್ದರು ಎನ್ನುತ್ತಾರೆ ಚಿತ್ರದ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು. ತುಳು ರಂಗಭೂಮಿಯಲ್ಲಿ ಇರುವ ಮಂದಿಯನ್ನು ಹುಡುಕಿಕೊಂಡು ಅವಕಾಶ ನೀಡುತ್ತಿದ್ದರು. ಅದರಲ್ಲೂ ಆರಂಭ, ನೀ ನಮ್ಮ ದೈವ,ಟೈಗರ್ ಗಂಡು, ಕಿಲಾಡಿ ತಾತ ಚಿತ್ರ ಸೇರಿದಂತೆ ಅವರು ನಿರ್ದೇಶನ ಮಾಡಿದ ಚಿತ್ರಗಳಲ್ಲಿ ತುಳುವರಿಗೆ ಅವಕಾಶ ಕೊಡುತ್ತಾ ಬಂದಿದ್ದರು. ವಿಟ್ಲ ಮನೋಹರ್ ಅವರನ್ನು ತಮ್ಮ ಎಲ್ಲ ಚಿತ್ರದ ಸಂಗೀತದಲ್ಲಿ ಬಳಸಿಕೊಂಡು ಕನ್ನಡದ ನಟ ಕಾಶೀನಾಥ್‌ರಿಗೆ ಪರಿಚಯ ಮಾಡಿಕೊಟ್ಟು ‘ಅನುಭವ’ದಲ್ಲಿ ಕೆಲಸ ಸಿಗುವಂತೆ ನೋಡಿಕೊಂಡರು. ತಮ್ಮ ಇಬ್ಬರು ಸಹೋದರಾದ ನವೀನ್, ಪ್ರದೀಪ್ ಇಬ್ಬರನ್ನು ತಮ್ಮ ಜತೆಯಲ್ಲಿಯೇ ಕ್ಯಾಮೆರಾ ಕೆಲಸ ಕಲಿಸಿ ಕನ್ನಡ ಸಿನಿಮಾದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದಾರೆ ಎನ್ನುತ್ತಾರೆ ಅವರ ಜತೆಯಲ್ಲಿ ಐದಾರು ಚಿತ್ರದಲ್ಲಿ ದುಡಿದ ತಮ್ಮ ಲಕ್ಷ್ಮಣ ಅವರು. .... ‘ನನಗೆ ಆರೋಗ್ಯ ಹದಗೆಟ್ಟಿದೆ ಎನ್ನುವ ವಿಚಾರ ತಿಳಿದ ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ನನ್ನನ್ನು ನೋಡಲು ಬಂದಿದ್ದರು. ಕೈಯಲ್ಲಿ ಒಂದೆರಡು ಚಿತ್ರಗಳಿವೆ ಅದನ್ನು ಅದಷ್ಟೂ ಬೇಗ ಮುಗಿಸಿದ ನಂತರ ತುಳುವಿನಲ್ಲೊಂದು ಸಿನಿಮಾ ಮಾಡಬೇಕು ಎನ್ನುವ ಕನಸ್ಸು ಕಂಡಿದ್ದರು. ೧೯೯೩ರ ಬಂಗಾರ್ ಪಟ್ಲೇರ್ ಹಾಗೂ ಸೆಪ್ಟೆಂಬರ್ ೮ ನನ್ನೆರಡು ತುಳು ಚಿತ್ರ ಬಿಟ್ಟರೆ ಉಳಿದ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಇನ್ನೂ ತುಳು ಚಿತ್ರಕ್ಕೆ ನಾನೇ ಬರುತ್ತೇನೆ ಎನ್ನುತ್ತಿದ್ದರು. ರಿಚರ್ಡ್ ಕ್ಯಾಸ್ಟಲಿನೋ, ಚಿತ್ರ ನಿರ್ದೇಶಕ (vijaykarnataka daily published on 11.12.2014)

ಇದು ಹೊಸ ಬ್ಯುಸಿನೆಸ್: ಬಾಡಿಗೆಗೆ ಇದೆ ಎಲೆಕ್ಟ್ರಾನಿಕ್ ಗೂಡ್ಸ್

ಸ್ಟೀವನ್ ರೇಗೊ, ದಾರಂದಕುಕ್ಕು
ರಾಜ್ಯದ ನಗರಗಳು ಸಖತ್ ಆಗಿ ಬೆಳೆಯುತ್ತಿದೆ. ಇಂತಹ ಬೆಳೆಯುವ ನಗರದಲ್ಲಿ ಒಂದು ಸೆಂಟ್ಸ್ ಜಾಗಕ್ಕೂ ಲಕ್ಷದ ಲೆಕ್ಕಚಾರ. ಶ್ರೀಸಾಮಾನ್ಯನಿಗೆ ಕಾಸು ಕೂಡಿಟ್ಟುಕೊಂಡು ಮನೆ ಕಟ್ಟುವ ಅಲೋಚನೆಯಂತೂ ಬಂದು ಬಿಟ್ಟರೆ ದಿನದ ಜಮೀನು ರೇಟು ಷೇರು ಪೇಟೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಲಗ್ಗೆ ಹಾಕುತ್ತಾ ಓಡುತ್ತಿರುತ್ತದೆ. ಇದಕ್ಕಿಂತ ಬಾಡಿಗೆ ಮನೆಯೇ ಲೇಸು ಎನ್ನುವ ಸ್ಥಿತಿಗೆ ಶ್ರೀಸಾಮಾನ್ಯ ತಲುಪಿ ಬಿಡುತ್ತಾನೆ. ಆದರೂ ಇಲ್ಲೊಂದು ಎಡವಟ್ಟು ಬಾಡಿಗೆ ಮನೆ ಎಂದರೆ ಬರೀ ಒಂದು ವರ್ಷದ ಒಪ್ಪಂದ. ಜಾಸ್ತಿ ಸಮಯ ಬಾಡಿಗೆ ಮನೆಯಲ್ಲಿ ಉಳಿಯುವ ಖಯಾಲಿಗೆ ಬಾಡಿಗೆ ಮನೆಯ ಮಾಲೀಕನೇ ಬ್ರೇಕ್ ಹಾಕಿ ಬಿಡುತ್ತಾನೆ. ಒಂದು ವರ್ಷದ ಅವಧಿಯಲ್ಲಿ ಅವನು ಬಾಡಿಗೆ ಮನೆಗೆ ತರುವ ಮಂಚ, ಫ್ರಿಡ್ಜ್, ಟಿವಿ, ಎಸಿ, ಹೀಟರ್, ಗ್ಯಾಸ್ ಕನೆಕ್ಷನ್ ಹೀಗೆ ಹತ್ತಾರು ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಮುಟ್ಟಿಸಲು ಸಾವಿರಾರು ಖರ್ಚು ಮಾಡುತ್ತಾನೆ. ಇದರ ಜತೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳು ತುಂಬಾ ಜೋಪಾನ ಅಂತೂ ಇಂತೂ ಬಾಡಿಗೆ ಮನೆ ಮುಟ್ಟಿದಾಗ ಕೆಟ್ಟು ಹೋದರೆ ಮತ್ತೆ ಖರ್ಚು. ಹೀಗೆ ಹತ್ತಾರು ಇಂತಹ ಜಂಜಾಟದಲ್ಲಿ ಬಾಡಿಗೆ ಮನೆಯಲ್ಲಿ ಬದುಕು ಕಟ್ಟುವ ಲಕ್ಷಾಂತರ ಮಂದಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನಪ್ಪಾ ಅಂದರೆ ಬಾಡಿಗೆಗೆ ಸಿಗುತ್ತೆ ಎಲೆಕ್ಟ್ರಾನಿಕ್ ಗೂಡ್ಸ್. ಇದು ರಾಜ್ಯದ ಮಟ್ಟಿಗೆ ಹೊಸ ಬ್ಯುಸಿನೆಸ್. ಆದರೆ ದೇಶದ ಕೆಲವೊಂದು ನಗರದಲ್ಲಿ ಇದು ಚಾಲ್ತಿಗೆ ಬಂದು ವರ್ಷಗಳೇ ಸಂದಿದೆ. ಮೆಟ್ರೋ ನಗರದಲ್ಲಿ ಬದುಕು ಕಟ್ಟುವ ಮಂದಿಗಂತೂ ಈ ವ್ಯಾಪಾರದ ಗುಟ್ಟು ಗೊತ್ತೇ ಇದೆ. ಇದರಲ್ಲಿಯೇ ಬದುಕು ಕಟ್ಟುತ್ತಾ ಸಮಾಜದ ಚೌಕಟ್ಟಿನಲ್ಲಿ ತಾವು ಕೂಡ ಶ್ರೀಮಂತರು ಎನ್ನುವ ಮುದ್ರೆ ಬೀಳುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಹೊಸದಾಗಿ ನೀವು ಮದುವೆಯಾಗುತ್ತೀರಿ ಅಥವಾ ನಿಮ್ಮ ಉದ್ಯೋಗದಿಂದ ಬರುವ ವರಮಾನ ಕೂಡ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಮನೆಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳುವುದು ತೀರಾ ಕಷ್ಟ. ಆದರೂ ಇಂತಹ ಸಾಮಗ್ರಿಗಳು ಮನೆಗೆ ತೀರಾನೇ ಅವಶ್ಯಕ ಎನ್ನಿಸಿಬಿಡುತ್ತದೆ. ಇಂತಹ ಸಮಯದಲ್ಲಿ ಮುಂದೆ ಬರುವವರೇ ಈ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕರು. ಎಲೆಕ್ಟ್ರಾನಿಕ್ ಗೂಡ್ಸ್ ವ್ಯಾಪಾರ ಹೇಗೆ: ನಗರ ಪ್ರದೇಶಕ್ಕೆ ನೆಲೆ ನಿಲ್ಲಲು ಬರುವ ಸತಿಪತಿಗಳಿಗೆ ಮುಖ್ಯವಾಗಿ ಬೇಕಾಗಿರುವುದು ಮಲಗಲು ಮಂಚ, ಆಹಾರ ಪದಾರ್ಥಗಳನ್ನು ಜೋಪಾನವಾಗಿಡಲು ಫ್ರಿಡ್ಜ್(ಶೀತಲಯಂತ್ರ), ಬೋರ್ ಅನ್ನಿಸಿದಾಗ ನೋಡಲು ಟಿವಿ, ಅಡುಗೆ ಮಾಡಲು ಬೇಕಾದ ಸ್ಟೌವ್, ಸ್ನಾನ ಮಾಡಲು ಬೇಕಾದ ಹೀಟರ್ ವ್ಯವಸ್ಥೆ ಹೀಗೆ ಹತ್ತಾರು ವಸ್ತಗಳು ದೈನಂದಿನ ಬದುಕಿನಲ್ಲಿ ತೀರಾ ಅಗತ್ಯ ಅನ್ನಿಸಿ ಬಿಡುತ್ತದೆ. ಈ ಸಮಯದಲ್ಲಿ ಇಂತಹ ವಸ್ತುಗಳನ್ನು ಬಾಡಿಗೆಗೆ ಕೊಡುವ ಮಂದಿ ಸಿಗುತ್ತಾರೆ. ವರ್ಷದ ಆಧಾರದಲ್ಲಿ ಇಂತಹ ವಸ್ತುಗಳಿಗೆ ತಿಂಗಳ ಲೆಕ್ಕಚಾರದಲ್ಲಿ (ಉದಾ: ಮಂಚಕ್ಕೆ 100ರಿಂದ 200 ರೂಪಾಯಿ) ಒಪ್ಪಂದ ಪತ್ರವನ್ನು ಸಿದ್ಧ ಪಡಿಸಲಾಗುತ್ತದೆ. ಬಾಡಿಗೆ ಮನೆಯ ಕರಾರು ಒಂದೇ ವರ್ಷದ ಅವಧಿಯಲ್ಲಿರುವುದರಿಂದ ಎಲೆಕ್ಟ್ರಾನಿಕ್ ಗೂಡ್ಸ್ ಗಳಲ್ಲಿ ವರ್ಷದ ಲೆಕ್ಕಚಾರಕ್ಕೆ ಇಳಿಯಲಾಗುತ್ತದೆ. ಈ ಸಮಯದಲ್ಲಿ ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹಾನಿಯಾದರೇ ಯಾರು ಬಾಡಿಗೆಗೆ ಪಡೆದುಕೊಂಡಿರುತ್ತಾನೋ ಅವನೇ ನಷ್ಟ ಭರಿಸಬೇಕಾಗುತ್ತದೆ. ಜತೆಗೆ ಬಾಡಿಗೆದಾರ ಯಾವ ಮನೆಯಲ್ಲಿ ವಾಸವಾಗಿರುತ್ತಾನೋ ಅಲ್ಲಿಗೆ ಈ ಸಾಮಗ್ರಿಗಳನ್ನು ತಂದು ಕೊಡುವ ಜವಾಬ್ದಾರಿ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕನಾಗಿರುತ್ತದೆ. ಸಾಮಗ್ರಿಗಳು ಎಲ್ಲಿಂದ ಅಂತೀರಾ: ಅಷ್ಟಕ್ಕೂ ಈ ಸಾಮಗ್ರಿಗಳು ಎಲ್ಲಿಂದ ಬರುತ್ತದೆ ಎನ್ನುವ ಕುತೂಹಲ ಮೊಳಕೆಯೊಡೆಯುವುದು ಸರ್ವೆ ಸಾಮಾನ್ಯ. ಆದರೆ ಕೆಲವು ಮೂಲಗಳ ಪ್ರಕಾರ ನಗರದಲ್ಲಿ ದುಡಿಯುವ ಐಟಿ, ಬಿಟಿ ಸೆಂಟರ್ ಉದ್ಯೋಗಿಗಳು ತಾವು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವಲಸೆ ಹೋದಾಗ ಈ ಸಾಮಗ್ರಿಗಳನ್ನು ಮತ್ತೊಂದು ಊರಿಗೆ ಸಾಗಾಟ ಮಾಡಲು ಕಷ್ಟ. ಈ ಸಮಯದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಮತ್ತೊಂದು ಊರಿಗೆ ಗಂಟುಮೂಟೆ ಕಟ್ಟುತ್ತಾರೆ. ಇದೇ ಸಮಯದಲ್ಲಿ ಮನೆ ಹುಡುಕುವ ಬ್ರೋಕರ್ ಗಳು ಇದನ್ನು ಖರೀದಿ ಮಾಡಿಕೊಂಡು ಇಂತಹ ಸಾಮಗ್ರಿಗಳ ಬಾಡಿಗೆ ದಂಧೆಗೆ ಇಳಿಯುತ್ತಾರೆ. ಇದೇ ರೀತಿಯಲ್ಲಿ ಕೆಲವೊಂದು ಬ್ರೋಕರ್ ಗಳು ತಾವೇ ಸಾಮಗ್ರಿಗಳನ್ನು ಖರೀದಿಸಿಕೊಂಡು ಬಾಡಿಗೆಗೆ ನೀಡುತ್ತಾರೆ. ಒಂದೆರಡು ವರ್ಷ ಮುಗಿಯುತ್ತಾ ಹೋದಂತೆ ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹಾಕಿದ ಬಂಡವಾಳ ವಾಪಾಸು ಬಂದು ಮುಟ್ಟುತ್ತದೆ. ಮತ್ತೆ ಉಳಿದ ಹಣ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಮಾಲೀಕನ ಕೀಸೆ ಸೇರಿಕೊಳ್ಳುತ್ತದೆ. ಇದು ಹೊಸ ಬ್ಯುಸಿನೆಸ್ ನ ಮುನ್ನುಡಿ ಅಧ್ಯಾಯ. ... ಕೋಟ್ ಕಾರ್ನರ್ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಾಡಿಗೆಗೆ ಕೊಡುವ ಸಿಸ್ಟಂ ಇತ್ತೀಚೆಗೆ ಎಲ್ಲ ಊರುಗಳಲ್ಲಿಯೂ ಆರಂಭವಾಗಿದೆ. ಹೊಸದಾಗಿ ಬದುಕು ಕಟ್ಟುವವರಿಗೆ ದೊಡ್ಡ ಮಾದರಿಯಲ್ಲಿ ಬದುಕು ಕಟ್ಟಲು ಸಾಧ್ಯವಿಲ್ಲ. ಅವರ ವರಮಾನ ಜತೆಗೆ ಆರ್ಥಿಕ ಲೆಕ್ಕಚಾರಗಳು ಕೂಡ ಉಲ್ಟಾ- ಪಲ್ಟಾ ಹೊಡೆಯುವ ಸಾಧ್ಯತೆಗಳು ಜಾಸ್ತಿಯಾಗಿರುತ್ತದೆ. ಇಂತಹ ಸಮಯದಲ್ಲಿ ಬಾಡಿಗೆಗೆ ಸಿಗುವ ಎಲೆಕ್ಟ್ರಾನಿಕ್ ಸಾಮಗ್ರಿಗಳಿಂದ ತೃಪ್ತಿ ಹೊಂದಬಹುದು. ಪ್ರಸಾದ್, ಮಂಗಳೂರು ಕಳೆದ ಐದಾರು ವರ್ಷಗಳಿಂದ ಿಂತಹ ಬಾಡಿಗೆ ಕೊಡುವ ದಂಧೆಯಲ್ಲಿ ಇರುವವರು. (vijaykarnataka namma karvali article on 11.12.2014)

Saturday, December 7, 2013

ಪುತ್ತೂರಿನಲ್ಲಿ ರಂಗೇರಿಸಲು ಸಿದ್ಧವಾದ ಹ್ಹಾ..ಶೋ

ಸ್ಟೀವನ್ ರೇಗೊ, ದಾರಂದಕುಕ್ಕು
ಕಿವಿಗೆ ಅಪ್ಪಳಿಸಿ ಪ್ರೇಕ್ಷಕರನ್ನು ಕುಣಿಯಲು ಅಣಿ ಮಾಡುವಂತಹ ಸಂಗೀತ. ಬಹಳ ಹೊತ್ತಿನಿಂದ ಸಂಗೀತ ಕೇಳಿ ಬೋರ್ ಆಗುತ್ತಾ ತಕ್ಷಣ ಹಾಸ್ಯದ ಟಾನಿಕ್. ಇದು ಕೂಡ ಸಾಕು ಅನ್ನಿಸುತ್ತಾ ಸ್ಯಾಂಡಲ್ ವುಡ್ ಚಿತ್ರ ತಾರೆಗಳ ಮಸ್ತಿ, ಮಾತು, ಡೈಲಾಗ್ಸ್ ಡೆಲಿವರಿ ಎಲ್ಲಕ್ಕೂ ಮಿಗಿಲಾಗಿ ದೇಶದ ನಾನಾ ಸ್ಟೇಜ್ ಶೋಗಳಲ್ಲಿ ಮಿಂಚಿದ ಖ್ಯಾತ ಹಿನ್ನೆಲೆ ಗಾಯಕ- ಗಾಯಕಿಯರ ಸಂಗೀತದ ಜೋಶ್, ಬಾಲಿವುಡ್ ರೇಂಜ್ ನ ಹಾಸ್ಯ ಕಲಾವಿದರು, ಸ್ಟಂಟ್ ಸೀನ್ ಗಳು ಎಲ್ಲರೂ ಬಂದು ಬೀಳುವುದು ಈ ಬಾರಿ ಪುತ್ತೂರಿನ ಕೆಮ್ಮಿಂಜೆಯ ದೇವಳದ ಗದ್ದೆಗೆ ಎನ್ನೋದು ಮರೆಯಬೇಡಿ. ಹೌದು. ಇದು “ಹ್ಹಾ.. ಶೋ’ ಯಾವಾಗಲೂ ತಮ್ಮ ಕಾರ್ಯಕ್ರಮಗಳ ಮೂಲಕ ತಾವು ಭಿನ್ನ ಎನ್ನುವ ಟ್ಯಾಗ್ ಲೈನ್ ಹೊತ್ತಿಕೊಂಡಿರುವ ರಾಜ್ಯದ ಖ್ಯಾತ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಹಾಗೂ ತನ್ನದೇ ಕೂಲ್ ಹಾಗೂ ಹಾಟ್ ಐಡಿಯಾಗಳ ‘ಟೈಮ್ ಆಂಡ್ ಟೈಡ್’ ಪ್ರಾಯೋಜಕತ್ವದಲ್ಲಿ ಡಿ.೮ರಂದು ಸಂಜೆ 6.30ಕ್ಕೆ ಪುತ್ತೂರಿನ ಕೆಮ್ಮಿಂಜೆಯ ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ದೇವಳದ ವಾರ್ಷಿಕ ಜಾತ್ರೆ ಹಾಗೂ ಷಷ್ಠಿಯ ಪ್ರಯುಕ್ತ ‘ಹ್ಹಾ.. ಶೋ’ವಿನೂತನ ಮಾದರಿಯ ಮೆಗಾ ಶೋ ನಡೆಯಲಿದೆ. ಕರಾವಳಿಯ ಪ್ರಸಿದ್ಧ ದೇವಳಗಳ ಸಾಲಿನಲ್ಲಿ ನಿಲುಕಾಡುವ ಕೆಮ್ಮಿಂಜೆ ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಳದ ಷಷ್ಠಿಯಲ್ಲಿ ಪ್ರತಿ ವರ್ಷನೂ ಲಕ್ಷಾಂತರ ಭಕ್ತರು ಬಂದು ಸೇರುತ್ತಾರೆ. ಅದರಲ್ಲೂ ಮುಖ್ಯವಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಊರುಗಳಿಂದ ಭಕ್ತರು ದೇವರ ದರ್ಶನ ಪಡೆಯಲು ತುದಿ ಕಾಲಲ್ಲಿ ನಿಂತು ಬಿಡುತ್ತಾರೆ. ಇದೇ ಸಮಯದಲ್ಲಿ ಟೈಮ್ ಆ್ಯಂಡ್ ಟೈಡ್ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಮೆಗಾ ಮ್ಯೂಸಿಕಲ್ ಶೋವೊಂದಕ್ಕೆ ಅಡಿಪಾಯ ಹಾಕಿದೆ. ‘ಹ್ಹಾ.. ಶೋ’ವಿನೂತನ ಪ್ರಯತ್ನ: ಬಾಲಿವುಡ್ ಸಂಗೀತ ಅಂಗಳದಲ್ಲಿ ಸದಾ ಕಾಲ ಬ್ಯುಸಿಯಾಗಿರುವ ಹಿನ್ನೆಲೆ ಗಾಯಕಿ ಹೈದರಾಬಾದ್ ಮೂಲದ ಭಾರ್ಗವಿ ಪಿಳ್ಳೈ ‘ಹ್ಹಾ.. ಶೋ’ನ ಮುಖ್ಯ ಆಕರ್ಷಣೆಯಲ್ಲೊಬ್ಬರು. ಸಂಗೀತ ದಿಗ್ಗಜರಲ್ಲಿ ಒಬ್ಬರಾದ ಎ. ಆರ್. ರೆಹಮಾನ್ ಅವರ ಗರಡಿಯಲ್ಲಿರುವ ಭಾರ್ಗವಿ ದೇಶದ ನಾನಾ ಭಾಷೆಗಳಲ್ಲಿ ಬಂದಿರುವ ಸಿನಿಮಾ ಹಾಡುಗಳಿಗೆ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ದೇಶದ ಖ್ಯಾತ ಸಂಗೀತ ಸ್ಟೇಜ್ ಶೋ ಗಳಲ್ಲಿ ಲೀಡ್ ಸಿಂಗರ್ ಆಗಿರುವ ಭಾರ್ಗವಿ ಇದೇ ಮೊದಲ ಬಾರಿಗೆ ಪುತ್ತೂರಿನ ಕೆಮ್ಮಿಂಜೆಯ ದೇವರ ಗದ್ದೆಯಲ್ಲಿ ನಡೆಯುವ ಸಂಗೀತ ಮಹೋತ್ಸವದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಲಾಮರ್ ಜತೆಗೆ ಡ್ಯಾನ್ಸಿಂಗ್ ನಲ್ಲೂ ಕಿಕ್ ಕೊಡುವ ಭಾರ್ಗವಿ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಅನುಮಾನವೇ ಇಲ್ಲ.
ಇದರ ಜತೆಯಲ್ಲಿ ಮುಂಬಯಿ ಮೂಲದ ಕಾಮೆಡಿ ಕಾ ಬಾದ್ ಷಾ ಎಂದೇ ಕರೆಸಿಕೊಳ್ಳುವ ವಿನೋದ್ ಕುಮಾರ್ ಮತ್ತೊಂದು ಆಕರ್ಷಣೆಯ ಕೇಂದ್ರ ಬಿಂದು. ಹಾಸ್ಯ ಕಲಾವಿದನಾಗಿ ಮಿಂಚಿರುವ ಜತೆಗೆ 1,500ಕ್ಕೂ ಅಧಿಕ ಸ್ಟೇಜ್ ಶೋಗಳನ್ನು ನೀಡಿರುವ ಖ್ಯಾತಿ ಇದೆ. ಹಿಂದಿಯ ಖ್ಯಾತ ಖಾಸಗಿ ವಾಹಿನಿಗಳಾದ ಸ್ಟಾರ್, ಸಹಾರಾ, ಕಲರ್ಸ್, ಸಬ್, ಎನ್ ಡಿ ಟಿವಿ ಇಮ್ಯಾಜೀನ್, ಝೂಮ್, ಝೀ ಇತ್ಯಾದಿಗಳಲ್ಲಿ ನಡೆಯುವ ಹಾಸ್ಯ ಕಾರ್ಯಕ್ರಮಗಳಲ್ಲಿ ಮಿಂಚಿರುವ ಪ್ರತಿಭೆ. ಬಾಲಿವುಡ್ ಜತೆಗೆ ತಮಿಳು, ಕನ್ನಡ, ತೆಲುಗು, ಇಂಗ್ಲೀಷ್ ನೊಂದಿಗೆ ಸಖತ್ ಹೋಲ್ಡ್ ಇಟ್ಟುಕೊಂಡಿರುವ ಬೆಂಗಳೂರಿನ ಅವಿನಾಶ್ ಚಬ್ಬಿ, ದೇಶ- ವಿದೇಶದ ಖ್ಯಾತ ಕ್ಲಾಸಿಕಲ್ ಮ್ಯೂಸಿಕ್ ಕಲಾವಿದ ಗಣೇಶ್ ಪಾಟೀಲ್ ಅವರ ಸಂಗೀತ ಪ್ರೇಕ್ಷಕರನ್ನು ನಿಂತಲ್ಲೇ ಕುಣಿಸಿ ಬಿಡುತ್ತದೆ. ಇವುಗಳ ಜತೆಗೆ ಸ್ಯಾಂಡಲ್ ವುಡ್ ನಗರಿಯ ಸಿನಿ ತಾರೆಯರ ಮೋಡಿ ಮಾತುಗಳು, ಡೈಲಾಗ್ ಡೆಲಿವರಿಗಳು, ಕ್ಯಾಲಿಕಟ್ ಮೂಲದ ಪ್ರತಿಜಾನ್ ಎನ್ ಆರ್ ಅವರ ವಿಶೇಷ ಸೌಂಡ್ ಮ್ಯಾಜಿಕ್ ಸ್ಪೆಶಲ್ ಟ್ರೀಟ್ ಕೂಡ ಕಾಣ ಸಿಗಲಿದೆ. ಬೆಂಕಿ ಜತೆಗೆ ಸರಸಾಟದಲ್ಲಿಯೇ ದಾಖಲೆ ಬರೆದ ವಿಶ್ವ ದಾಖಲೆಯ ಚೆನ್ನೈ ಮೂಲದ ತಿರಿಲ್ ವೀರಾ ಅವರ ಕುತೂಹಲದ ತುದಿ ಘಟ್ಟದಲ್ಲಿ ನಿಲ್ಲಿಸಿ ಬಿಡುವ ಬೆಂಕಿ ಜತೆಗಿನ ಸಾಹಸ ಕಲೆಗಳು, ಜಿಲ್ಲೆಯ ಹಾಗೂ ರಾಜ್ಯದ ಹೆಸರಾಂತ ಸಂಗೀತ ಕಲಾವಿದರು ‘ಹ್ಹಾ.. ಶೋ’ ನಲ್ಲಿ ಮೋಡಿ ಮಾಡುತ್ತಾರೆ. ಇದರ ಜತೆಯಲ್ಲಿ ಬೆಂಗಳೂರು ಮೂಲದ ವಿಶಿಷ್ಟ ಲೈಟಿಂಗ್ಸ್ ಸಿಸ್ಟಂ, ವೇದಿಕೆ ಸಜ್ಜು ಹಾಗೂ ಮಂಗಳೂರಿನ ಖ್ಯಾತ ಡ್ಯಾನ್ಸ್ ತಂಡ ಬಾಯ್ ಝೋನ್ ಹಾಗೂ ಓಶಿಯನ್ ಕಿಡ್ಸ್ ತಂಡಗಳ ವಿಶಿಷ್ಟವಾದ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಲಿದೆ. ಮಂಗಳೂರು ಸ್ಪಂದನ ಪ್ರಾಡಕ್ಷನ್ ಹೌಸ್ ನಿಂದ ವಿಶಿಷ್ಟ ಮಾದರಿಯ ಬೆಳಕಿನಾಟಗಳು ಕೂಡ ಕಾಣ ಸಿಗಲಿದೆ. ರಾಜ್ಯದ ನಂಬರ್ ವನ್ ಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಹಾಗೂ ಟೈಮ್ಸ್ ಸಂಸ್ಥೆಯ ಹೆಮ್ಮೆಯ ರೇಡಿಯೋ ವಾಹಿನಿ ರೇಡಿಯೋ ಮಿರ್ಚಿ ಕಾರ್ಯಕ್ರಮದ ಮಾಧ್ಯಮ ಪ್ರಾಯೋಜಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದರ ಜತೆಯಲ್ಲಿ ರಾಜ್ಯದ ಪ್ರಮುಖ ಸ್ಯಾಟಲೈಟ್ ಟಿವಿ ವಾಹಿನಿಗಳಲ್ಲಿ ಈ ಕಾರ್ಯಕ್ರಮದ ಪ್ರಸಾರ ಕೂಡ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಬರಲು ಇಚ್ಚಿಸುವವರು ಸಹಾಯವಾಣಿಯ ನೆರವುವನ್ನು ಪಡೆಯಬಹುದು ಎಂದು ಟೈಮ್ ಆ್ಯಂಡ್ ಟೈಡ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಪುತ್ತೂರಿನಲ್ಲೇ ಇದು ವಿಶಿಷ್ಟ ಆಟ: ‘ಹ್ಹಾ.. ಶೋ’ಮೆಗಾ ಮ್ಯೂಸಿಕಲ್ ಕಾರ್ಯಕ್ರಮದಲ್ಲಿ ಬರೋಬರಿ 50 ಸಾವಿರಕ್ಕೂ ಅಧಿಕ ಮಂದಿ ಜಮಾಯಿಸುವ ಅಂದಾಜು ಇಟ್ಟುಕೊಳ್ಳಲಾಗಿದೆ. ಮುಕ್ತ ಪ್ರವೇಶದ ಜತೆಯಲ್ಲಿ ಕುಳಿತುಕೊಳ್ಳಲು ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಐಪಿ ಪಾಸ್ ಗಳನ್ನು ಹೊಂದಿರುವವರಿಗೆ ವಿಶೇಷ ಆಸನದ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ದೊಡ್ಡ ಕಾರ್ಯಕ್ರಮ ಇರುವ ಕಾರಣ ವಿಶೇಷ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಟೈಮ್ ಆ್ಯಂಡ್ ಟೈಡ್ ಮಾಲೀಕ ಸುರೇಶ್ ರಾವ್ ಕೊಕ್ಕಡ ತಿಳಿಸಿದ್ದಾರೆ.

Wednesday, December 4, 2013

ಪದವಿ ಶಿಕ್ಷಣದಲ್ಲಿ ಕೊಂಕಣಿಗೆ ರಾಜಮರ್ಯಾದೆ

* ಸ್ಟೀವನ್ ರೇಗೊ, ದಾರಂದಕುಕ್ಕು
ಕೊಂಕಣಿ ಭಾಷೆ ಈಗ ಮತ್ತೊಂದು ಸಲ ಸದ್ದು ಮಾಡಿದೆ. ಬರೀ ಸಾಹಿತ್ಯ, ಆಡು ಭಾಷೆಯಲ್ಲಿಯೇ ಗಟ್ಟಿಯಾಗಿ ಬೆಳೆಯುತ್ತಿರುವ ಕೊಂಕಣಿ ಈಗ ಪದವಿ ಶಿಕ್ಷಣ ರಂಗದಲ್ಲಿ ಭರ್ಜರಿ ಎಂಟ್ರಿ ಪಡೆದುಕೊಂಡಿದೆ. ರಾಜ್ಯ ಸರಕಾರ ಈ ಹಿಂದೆ ಅಂದರೆ ೨೦೦೭ರಿಂದ ರಾಜ್ಯದ ಶಾಲೆಗಳಲ್ಲಿ ೬ನೇ ತರಗತಿಯಿಂದ ತೃತೀಯ ಐಚ್ಛಿಕ ಭಾಷೆಯಾಗಿ ಕೊಂಕಣಿಯನ್ನು ಕಲಿಯಲು ಅವಕಾಶ ಮಾಡಿ ಕೊಟ್ಟಿತ್ತು. ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯ ಸಾವಿರಾರು ಮಕ್ಕಳು ಕೊಂಕಣಿಯನ್ನು ಕಲಿತರು. ಕಳೆದ ಮೂರು ವರ್ಷಗಳಿಂದ ೧೦ನೇ ತರಗತಿಯ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಕೊಂಕಣಿಗೆ ಆದ್ಯತೆ ನೀಡಿದ್ದಾರೆ. ಈಗ ಮತ್ತೊಂದು ಹೆಜ್ಜೆಯಾಗಿ ಮಂಗಳೂರು ವಿವಿಯ ಅಡಿಯಲ್ಲಿ ಕಾರ‍್ಯ ನಿರ್ವಹಣೆ ಮಾಡುತ್ತಿರುವ ಮಂಗಳೂರಿನ ರೊಜಾರಿಯೊ, ನಂತೂರಿನ ಪಾದುವಾ ಮತ್ತು ಐಕಳದ ಪೊಂಪೈ ಕಾಲೇಜಿನ ಮುಖ್ಯಸ್ಥರು ತಮ್ಮ ಕಾಲೇಜುಗಳಲ್ಲಿರುವ ಪದವಿ ಶಿಕ್ಷಣದಲ್ಲಿ ಕೊಂಕಣಿಯನ್ನು ಸೇರಿಸಿಕೊಳ್ಳುತ್ತಿದ್ದಾರೆ. ಪದವಿ ಹಂತದಲ್ಲಿ ದ್ವಿತೀಯ ಭಾಷೆಯಾಗಿ ಕೊಂಕಣಿ ಕಲಿಕೆಗೆ ಈಗಾಗಲೇ ಅವಕಾಶವಿದ್ದು, ಮಂಗಳೂರಿನ ಸಂತ. ಅಲೋಶಿಯಸ್ ಕಾಲೇಜಿನಲ್ಲಿ ಕಳೆದ ೨೦ ವರ್ಷಗಳಿಂದ ಕೊಂಕಣಿಯನ್ನು ಕಲಿಸುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಆದೇಶದ ಪ್ರಕಾರ ಅಲೋಶಿಯಸ್ ಕಾಲೇಜಿನಲ್ಲಿ ಈಗ ಇರುವ ಕೊಂಕಣಿ ಪಠ್ಯಗಳ ಆಧಾರದಲ್ಲಿಯೇ ಈ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ ನಾಲ್ಕು ಸೆಮಿಸ್ಟರ್‌ಗಳಾಗಿ ಬಿ.ಎ., ಬಿ.ಕಾಂ, ಬಿ.ಎಸ್ಸಿ. ಇತ್ಯಾದಿ ವಿಭಾಗಗಳಲ್ಲಿ ಕೊಂಕಣಿಯನ್ನು ಕಲಿಯಲು ಸಿಗಲಿದೆ. ಕೊಂಕಣಿ ಭಾಷೆಗೊಂದು ಹೊಸ ಮುನ್ನುಡಿ: ಮಂಗಳೂರು ವಿವಿಯ ಅಧೀನದಲ್ಲಿರುವ ಕಾಲೇಜುಗಳಲ್ಲಿ ಕೊಂಕಣಿಯನ್ನು ದ್ವಿತೀಯ ಭಾಷೆಯಾಗಿ ಕಲಿಸಲು ಮೂರು ಕಾಲೇಜುಗಳು ಮುಂದೆ ಬಂದಿದೆ. ಇನ್ನೂ ಒಂದೆರಡು ಕಾಲೇಜುಗಳು ಮುಂದೆ ಬರುವ ಸಾಧ್ಯತೆ ಇದೆ. ಮುಖ್ಯವಾಗಿ ೨೦೧೪-೧೫ರ ನೂತನ ಶೈಕ್ಷಣಿಕ ವರ್ಷದಲ್ಲಿ ಈ ಕೊಂಕಣಿ ಭಾಷೆಯನ್ನು ಕಲಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎನ್ನುತ್ತಾರೆ ಕೊಂಕಣಿ ಪ್ರಚಾರ್ ಸಂಚಾಲನದ ಪ್ರಮುಖರಲ್ಲಿ ಒಬ್ಬರಾದ ವಿಕ್ಟರ್ ಕಾರ್ಕಳ ಅವರು. ಕೊಂಕಣಿ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಇಂತಹ ಪ್ರಯತ್ನಗಳು ಅಗತ್ಯವಾಗಿ ನಡೆಯಬೇಕು. ಕರಾವಳಿಯ ಇತರ ಭಾಷೆಗಳಿಗೂ ಇದು ವಿಸ್ತಾರಗೊಂಡು ಮುಂದುವರಿದರೆ ಉತ್ತಮ ಎನ್ನುತ್ತಾರೆ ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೋನ್ ಕ್ಲೇರಾನ್ಸ್ ಮಿರಾಂದಾ ಅವರು. ಈಗಾಗಲೇ ಮಂಗಳೂರು ವಿವಿಗೆ ಈ ವಿಚಾರದಲ್ಲಿ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಈ ಬಳಿಕ ವಿವಿಯ ತಂಡವೊಂದು ಕಾಲೇಜಿಗೆ ಬಂದು ತನಿಖೆ ನಡೆಸಿದ ನಂತರ ಅನುಮತಿ ನೀಡುತ್ತದೆ. ಬರುವ ವರ್ಷದಿಂದ ಕೊಂಕಣಿಯನ್ನು ಕಲಿಸಲು ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಅವರು. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣದಲ್ಲಂತೂ ಕೊಂಕಣಿಯನ್ನು ಕಲಿಸಲು ಯಾವುದೇ ಅಡ್ಡಿ ಆತಂಕಗಳು ಬರುತ್ತಿಲ್ಲ. ಆದರೆ ಈಗ ಸರಕಾರಿ ಆದೇಶವಿಲ್ಲದ ಕಾರಣ ಪಿಯುಸಿಯಲ್ಲಿ ಕೊಂಕಣಿ ಕಲಿಕೆಗೆ ಅವಕಾಶವಿಲ್ಲ. ಸರಕಾರವು ಕೂಡಲೇ ಆದೇಶ ಹೊರಡಿಸಿ ಕೊಂಕಣಿ ಕಲಿಕೆಯನ್ನು ಸಂಪೂರ್ಣಗೊಳಿಸಲು ಅನುವು ಮಾಡಿಕೊಡಬೇಕು ಎನ್ನುತ್ತಾರೆ ಪ್ರಚಾರ ಸಂಚಾಲನದ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ ಅವರು. ಕೊಂಕಣಿ ಕಲಿಸುವವರು ಯಾರು: ಕೊಂಕಣಿ ಭಾಷೆಯನ್ನು ಪದವಿಯಲ್ಲಿ ಕಲಿಸಲು ಯಾವುದೇ ದೊಡ್ಡ ಆತಂಕಗಳು ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಕೊಂಕಣಿ ಭಾಷೆಯಲ್ಲಿ ಕರ್ನಾಟಕದ ಯಾವುದೇ ವಿವಿಗಳು ಪದವಿ ಆರಂಭಿಸಿಲ್ಲ. ಪದವಿಯಲ್ಲಿ ಸ್ನಾತಕೋತ್ತರ ಪದವಿ ಮಾಡಿದವರಿಗೆ ಮಣೆ ಇರುವ ಕಾರಣ ಕೊಂಕಣಿ ಭಾಷೆಯನ್ನು ಕಲಿಸಲು ತೊಡಕು ಉಂಟಾಗುವ ಸಾಧ್ಯತೆಗಳು ಇವೆ ಎನ್ನುವುದು ಮಾತು. ಆದರೆ ಕೊಂಕಣಿ ಪ್ರಚಾರ ಸಂಚಾಲನ ಮುಖ್ಯಸ್ಥರು ಹೇಳುವ ಮಾತು ಹೀಗೆ: ಕೊಂಕಣಿ ಮಾತೃ ಭಾಷೆಯನ್ನು ಹೊಂದಿರುವವರು ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ ಸಾಕು. ಅವರು ಕೊಂಕಣಿ ಭಾಷೆ ಕಲಿಸಲು ಯೋಗ್ಯರಾಗುತ್ತಾರೆ. ಇದೇ ರೀತಿ ಕೊಂಕಣಿ ಭಾಷೆ ಮುಂದೆ ಸಾಗಿ ಸ್ನಾತಕೋತ್ತರ ಹಂತಕ್ಕೆ ಮುಟ್ಟುತ್ತದೆ ಎನ್ನುವುದು ಅವರ ಅಭಿಮತ. ( vijyakaranataka daily published dis article on 4.12.2013)

ಕುಡ್ಲದ ಫ್ಯಾಶನ್ ಪರೇಡ್‌ನಲ್ಲಿ ಪುಟಾಣಿಗಳ ಮಿಂಚು

ಸ್ಟೀವನ್ ರೇಗೊ, ದಾರಂದಕುಕ್ಕು
ಮಿರಿಮಿರಿ ಮಿನುಗುವ ಬೆಳಕು ಜತೆಗಿಷ್ಟು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ರ‍್ಯಾಂಪ್ ಮೇಲೆ ನಡೆದಾಡುವ ಎಳೆಯ ವಯಸ್ಸಿನ ಮೊಡಲ್‌ಗಳು. ಇದು ಕುಡ್ಲದ ಫ್ಯಾಶನ್ ಪರೇಡ್‌ಗೆ ಹೊಸ ಮುನ್ನುಡಿ. ಹೌದು. ಕುಡ್ಲದಲ್ಲಿ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ತೀರಾ ಹೊಸತು. ಅದರಲ್ಲೂ ಫ್ಯಾಶನ್ ಎಂದಾಕ್ಷಣವೇ ಕಣ್ಣು ಕೆಂಪಾಗೆ ಮಾಡಿಕೊಂಡು ನೋಡುವ ದುನಿಯಾದಲ್ಲಿ ಎಳೆಯ ಮೊಡಲ್‌ಗಳು ಹೊಸ ರಂಗು ಮೂಡಿಸಿದರು. ಅಂದಹಾಗೆ ಫ್ಯಾಶನ್ ಎನ್ನುವ ರಂಗೀನ್ ದುನಿಯಾದಲ್ಲಿ ಬ್ಯಾರಿಕೇಡ್‌ಗಳೇ ಇಲ್ಲ. ಅದರಲ್ಲೂ ಕೇವಲ ಯುವಕ -ಯುವತಿಯರಿಗೆ ಮಾತ್ರ ಈ ಫೀಲ್ಡ್ ಸಖತ್ ಕಿಕ್ ಕೊಡುತ್ತದೆ ಎನ್ನುವ ಮಾತು ಓಡಾಡುತ್ತಿತ್ತು. ಆದರೆ ಕುಡ್ಲದ ಫ್ಯಾಶನ್ ವರ್ಲ್ಡ್‌ನ ದಾಖಲೆಯಲ್ಲಿ ಮತ್ತೊಂದು ಗರಿ ಮೂಡಿಬಂತು. ಬರೀ ಯುವಕ- ಯುವತಿಯರ ಕಣ್ಮನ ಸೆಳೆಯುವ ಕ್ಯಾಟ್‌ವಾಕ್‌ಗಳನ್ನು ನೋಡಿ ಬೇಸತ್ತು ಕೂತ ಕಣ್ಣುಗಳಿಗೆ ಹಬ್ಬದೂಟ ಭಾನುವಾರ ಮಂಗಳೂರಿನ ಪ್ರಸಿದ್ಧ ಗೇಟ್ ವೇಯಲ್ಲಿ ಇತ್ತು. ರಾಜ್ಯದ ಖ್ಯಾತ ಮೊಡೆಲಿಂಗ್ ಟ್ರೈನಿಂಗ್ ಸೆಂಟರ್ ‘ಫ್ಯಾಶನ್ ಎಬಿಸಿಡಿ‘ ಪ್ರಾಯೋಜಕತ್ವದಲ್ಲಿ ೬ರಿಂದ ೧೦ ಹಾಗೂ ೧೦ ರಿಂದ ೧೫ ವಯಸ್ಸಿನ ಎರಡು ಕೆಟಗರಿಯ ಮಕ್ಕಳು ಬಣ್ಣದ ಮಿರುಗುವ ಸ್ಟೇಜ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿದರು. ಇಂತಹ ರ‍್ಯಾಂಪ್‌ವಾಕ್ ನಲ್ಲಿ ಫ್ಯಾಶನ್ ಎಬಿಸಿಡಿಯ ತರಬೇತುದಾರರು ಈ ಪುಟಾಣಿ ಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನ, ಮಾತನಾಡುವ ಕಲೆ, ಪ್ರೇಕ್ಷಕರನ್ನು ಸೆಳೆಯುವ ತಾಕತ್ತು, ಮೈಕ್ ಹಾಗೂ ರ‍್ಯಾಂಪ್ ಮೇಲೆ ನಡೆಯುವ ಕುರಿತು ತರಬೇತಿಯನ್ನು ನೀಡಿ ಹೊಸ ಫ್ಯಾಶನ್ ಲೋಕಕ್ಕೆ ಎಳೆಯ ಮೊಡೆಲ್ ಪರಿಚಯ ಮಾಡಿದರು. ಗೆದ್ದವರಿಗೆ ಭರ್ಜರಿ ಬಹುಮಾನ: ಇಲ್ಲಿ ಗೆದ್ದು ಬಂದವರಿಗೆ ದೇಶದ ಪ್ರತಿಷ್ಠಿತ ಪುಟಾಣಿಗಳ ಫ್ಯಾಶನ್ ರ‍್ಯಾಂಪ್ ಶೋಗಳಲ್ಲಿ ಒಂದಾದ ’ಗ್ಲ್ಯಾಡ್‌ರ‍್ಯಾಗ್ಸ್‘ ಲಿಟಲ್ ಮಿಸ್ ಹಾಗೂ ಮಾಸ್ಟರ್ ಇಂಡಿಯ ಸ್ಪರ್ಧೆಗೆ ನೇರ ಪ್ರವೇಶ ಪಡೆದಿದ್ದಾರೆ. ಇಲ್ಲಿ ಆಯ್ಕೆಯಾದ ಮಿಸ್ಸಿ ಆಂಡ್ ಮಾಸ್ಟರ್ ಮಂಗಳೂರು ವಿಜೇತ ಹಾಗೂ ರನ್ನರ್ ಆಪ್‌ಗಳಿಗೆ ದೇಶದ ನಾನಾ ಕಡೆ ೨ ದಿನ ಪ್ರವಾಸ ಮಾಡುವ ಜತೆಗೆ ಮೊಡೆಲಿಂಗ್‌ನಲ್ಲಿ ಅವಕಾಶ ಲಭ್ಯವಾಗಿದೆ. ‘ಇಂತಹ ಕಲ್ಪನೆ ತೀರಾ ಹೊಸತು. ಮಂಗಳೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪುಟಾಣಿಗಳಿಗೆ ಸೀಮಿತವಾದ ರ‍್ಯಾಂಪ್ ಶೋಗಳಿಲ್ಲ. ಮಕ್ಕಳು ಎಂದಾಕ್ಷಣ ಅವರಲ್ಲಿ ತುಂಟಾಟ ಇದ್ದೇ ಇರುತ್ತದೆ. ಅವರನ್ನು ನಿಭಾಯಿಸಿಕೊಂಡು ಪ್ರೀತಿಯಿಂದ ಹೇಳಿಕೊಟ್ಟು ರ‍್ಯಾಂಪ್‌ವಾಕ್ ಮಾಡುವ ಕೆಲಸ ತರಬೇತುದಾರರಿಗೆ ತೀರಾ ಕಷ್ಟ. ಆದರೂ ಇದೊಂದು ವಿಭಿನ್ನ ಪ್ರಯೋಗ ಖ್ಯಾತ ಫ್ಯಾಶನ್ ಕೋರಿಯೋಗ್ರಾಫರ್ ಸಮೀರ್ ಖಾನ್ ಮಾತು. ದೇಶದ ನಾನಾ ಕಡೆಗಳಲ್ಲಿ ನಡೆಯುವ ಫ್ಯಾಶನ್ ವೀಕ್‌ಗಳಿಗೆ ನಾನು ಹೋಗಿದ್ದೇನೆ. ಆದರೆ ಮಕ್ಕಳಿಗಾಗಿ ನಡೆಯುವ ಫ್ಯಾಶನ್ ವೀಕ್ ತೀರಾ ಕಡಿಮೆ. ಭಾರತದಲ್ಲಿ ತೀರಾ ವಿರಳವಾಗಿ ನಡೆಯುತ್ತಿರುತ್ತದೆ. ಅದನ್ನು ಮಂಗಳೂರಿನಲ್ಲೂ ಮಾಡಬೇಕು. ಇಲ್ಲಿಯ ಪುಟಾಣಿ ಮಕ್ಕಳಲ್ಲಿ ಫ್ಯಾಶನ್ ಕ್ರೇಜ್ ಹುಟ್ಟು ಹಾಕಬೇಕು ಎನ್ನುವ ಉದ್ದೇಶದಿಂದಲೇ ನಾವು ಈ ಮಿಸ್ಸಿ ಆಂಡ್ ಮಾಸ್ಟರ್ ಮಂಗಳೂರು ಬ್ಯೂಟಿ ಕಾನ್ಟೆಸ್ಟ್ ಫಾರ್ ಕಿಡ್ಸ್ ೨೦೧೩ ಎನ್ನುವ ಟ್ಯಾಗ್‌ಲೈನ್‌ನಲ್ಲಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇತರ ಜಿಲ್ಲೆ, ರಾಜ್ಯಗಳ ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನುವ ಅಲೋಚನೆ ಇದೆ ಎನ್ನುತ್ತಾರೆ ಫ್ಯಾಶನ್ ಎಬಿಸಿಡಿಯ ಮುಖ್ಯ ಸ್ಥೆ ಅನುಪಮ ಸುವರ್ಣ ಅವರ ಮಾತು. ಕುಡ್ಲದಲ್ಲಿ ಭರ್ಜರಿ ೧೫೦ ಮೊಡಲ್‌ಗಳು: ನಗರದ ಎಂಪಾರ್‌ಮಾಲ್‌ನಲ್ಲಿ ನಡೆದ ಆಡಿಷನ್‌ನಲ್ಲಿ ಮಂಗಳೂರು, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ೧೫೦ಕ್ಕಿಂತಲೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ ೧೮ ಮೊಡೆಲ್‌ಗಳನ್ನು ಆಯ್ಕೆ ಮಾಡಿಕೊಂಡು ರ‍್ಯಾಂಪ್ ಮೇಲೆ ನಡೆಯುವ ಅವಕಾಶ ಪಡೆದುಕೊಂಡರು. ಮಿಸ್ಸಿ ಮಂಗಳೂರು ಆಗಿ ವಿನ್ಸಿಟಾ ಡಾಯಸ್, ಫಸ್ಟ್ ರನ್ನರ್ ಆಪ್ ಆಗಿ ದೀಕ್ಷಿತಾ ಕರ್ಕೆರಾ, ಸೆಕೆಂಡ್ ರನ್ನರ್ ಆಪ್ ಆಗಿ ಅಕಾಂಕ್ಷಾ ಹಾಗೂ ಕೆಟಗರಿ೧ನಲ್ಲಿ ಮಿಸ್ಸಿ ಮಂಗಳೂರು ಜೂನಿಯರ್ ವಿಭಾಗದಲ್ಲಿ ಅದ್ವಿಕಾ ಶೆಟ್ಟಿ, ಫಸ್ಟ್ ರನ್ನರ್ ಆಪ್ ಶ್ರೇಯಾ ಡಾಯಸ್ ಹಾಗೂ ಸೆಕೆಂಡ್ ರನ್ನರ್ ಆಪ್ ಆಗಿ ರೀತೂ ನೊರೊನ್ಹಾ. ಬಾಲಕರ ವಿಭಾಗದಲ್ಲಿ ಮಾಸ್ಟರ್ ಮಂಗಳೂರು ಆಗಿ ಕುನಾಲ್ ಶಾನೇ, ಫಸ್ಟ್ ರನ್ನರ್ ಆಪ್ ಆಗಿ ಅಹಾನ್ ಆಳ್ವ ಹಾಗೂ ಸೆಕೆಂಡ್ ರನ್ನರ್ ಆಪ್ ನಿಹಾಲ್ ಕಿರಣ್ ಬಹುಮಾನ ಗೆದ್ದುಕೊಂಡರು. (vijyakarnataka daily mangalore ediition namma karavali published dis article on 5.12.2013)

Saturday, November 30, 2013

ನೇತ್ರಾವತಿ ಹೋರಾಟಕ್ಕೆ ವಿನೂತನ ಜಾಗೃತಿಯಾಟ

* ಸ್ಟೀವನ್ ರೇಗೊ, ದಾರಂದಕುಕ್ಕು ನೇತ್ರಾವತಿ ಇದು ಕರಾವಳಿಯ ಜೀವನದಿ. ಈ ನದಿಯನ್ನು ನಂಬಿಕೊಂಡು ಅದೆಷ್ಟೋ ಮಂದಿ ಬದುಕು ಕಟ್ಟುತ್ತಿದ್ದಾರೆ ಎನ್ನುವುದು ನೇತ್ರಾವತಿ ನೀರು ಕುಡಿದ ಮಂದಿಗಂತೂ ಗೊತ್ತೇ ಇದೆ. ಎತ್ತಿನಹೊಳೆ ಸೇರಿದಂತೆ ನದಿ ತಿರುಗಿಸುವ ಯೋಜನೆಗಳ ಮೂಲಕ ಇಂತಹ ನೇತ್ರಾವತಿಯನ್ನು ಕಟ್ಟಿ ಹಾಕುವಂತಹ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ನೇತ್ರಾವತಿ ನದಿಯ ಹರಿವು ಜತೆಗೆ ಅದರ ಉಳಿವು ಎಷ್ಟು ಅಗತ್ಯ ಎನ್ನುವ ಕುರಿತು ಜಿಲ್ಲೆಯ ನಾನಾ ವ್ಯಂಗ್ಯ ಚಿತ್ರಕಾರರಿಂದ ನೇತ್ರಾವತಿ ಉಳಿಸಿ ವ್ಯಂಗ್ಯಚಿತ್ರ ಪ್ರದರ್ಶನದ ಮೂಲಕ ಶ್ರೀಸಾಮಾನ್ಯನಿಗೆ ಜಾಗೃತಿ ಬೀಜ ಬಿತ್ತುವ ವಿನೂತನ ಜಾಗೃತಿಯಾಟ ಮಂಗಳೂರಿನ ಆರ್ಕಿಡ್ ಗ್ಯಾಲರಿಯಲ್ಲಿ ಡಿ.೨ ರಿಂದ ೪ರ ವರೆಗೆ ನಡೆಯಲಿದೆ. ಕರಾವಳಿ ಯುವ ಸಿಂಚನ, ವನ್ಯ ಚಾರಣ ಬಳಗ ಹಾಗೂ ಆರ್ಕಿಡ್ ಗ್ಯಾಲರಿ ಜತೆ ಸೇರಿಕೊಂಡು ಅಪರೂಪದ ನದಿ ಉಳಿಸುವ ಜಾಗೃತಿಯಾಟಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಈ ಹಿಂದೆ ಕದ್ರಿ ಪಾರ್ಕ್ ಸೇರಿದಂತೆ ಪಣಂಬೂರು ಬೀಚ್ ನಲ್ಲಿ ಅಂಚೆ ಕಾರ್ಡ್‌ಗಳಲ್ಲಿ ನೇತ್ರಾವದಿ ನದಿ ತಿರುವಿನ ವಿರುದ್ಧ ವಿನೂತನ ಸಹಿ ಚಳವಳಿಯ ಮೂಲಕ ಜಾಗೃತಿ ಅಭಿಯಾನ ಮಾಡಿತ್ತು. ಇವುಗಳ ಜತೆಗೆ ಉಜಿರೆ, ಚಾರ್ಮಾಡಿ, ಕಕ್ಕಿಂಜೆ, ಬೆಳ್ತಂಗಡಿ, ಮಡಂತ್ಯಾರ್‌ಗಳಲ್ಲಿ ನಡೆಸಿದ ಜನಜಾಗೃತಿ, ಮಂಗಳೂರಿನಲ್ಲಿ ನಡೆಸಿದ ಜಾಥಾ, ಜಿಲ್ಲೆಯ ನಾನಾ ಶಾಲಾ- ಕಾಲೇಜುಗಳಲ್ಲಿ ನಡೆಸಿದ ನದಿ ತಿರುವಿನ ಕುರಿತಾದ ಉಪನ್ಯಾಸ ಕಾರ‍್ಯಕ್ರಮದ ಮೂಲಕ ಜಿಲ್ಲೆಯ ಜೀವನದಿ ನೇತ್ರಾವತಿಯ ಉಳಿವಿಗಾಗಿ ಮಾಡಿದ ಸಾಹಸಗಳು ಅಪಾರ ಜಾಗೃತಿಗೆ ಪ್ರೇರಣೆಯಾಗಿತ್ತು. ಎಚ್ಚರಿಕೆಯ ಕರೆಗಂಟೆ: ನೇತ್ರಾವತಿ ನದಿ ತಿರುವು ಯೋಜನೆ ಅಥವಾ ಎತ್ತಿನ ಹೊಳೆ ಯೋಜನೆಯಿಂದ ನೇತ್ರಾವತಿ ನದಿಗೆ ಯಾವ ರೀತಿಯಲ್ಲಿ ಪೆಟ್ಟು ಬೀಳಲಿದೆ. ಜಿಲ್ಲೆಯ ರಾಜಕೀಯ ಪಟುಗಳು ಯಾವ ರೀತಿಯಲ್ಲಿ ನೇತ್ರಾವತಿ ನದಿಯನ್ನು ಬಣ್ಣಿಸುತ್ತಿದ್ದಾರೆ. ಶ್ರೀಸಾಮಾನ್ಯ ನದಿಯನ್ನು ನೋಡುವ ರೀತಿ, ನದಿ ತಿರುಗಿಸುವ ಕೆಲಸದಿಂದ ಜಿಲ್ಲೆಯ ಜನರಿಗೆ ಬೀಳುವ ಪೆಟ್ಟು ಇತ್ಯಾದಿಗಳನ್ನು ವ್ಯಂಗ್ಯ ಚಿತ್ರಗಳಲ್ಲಿ ಜೋಡಿಸಲಾಗಿದೆ. ಈ ವ್ಯಂಗ್ಯ ಚಿತ್ರಗಳಲ್ಲಿ ಹಾಸ್ಯದ ಜತೆಗೆಯಲ್ಲಿಯೇ ವಿಡಂಬನೆ ಇದ್ದರೂ ಗಂಭೀರವಾದ ಯೋಚನೆಗಳಿವೆ, ಎಚ್ಚರಿಕೆಯಿದೆ, ಜಾಗೃತಿ ಹಾಗೂ ಪ್ರಜ್ಞೆ ಮೂಡಿಸುವಂತಹ ಚಿಂತನೆಗಳಿಂದ ತುಂಬಿ ಹೋಗಿದೆ. ಶ್ರೀಸಾಮಾನ್ಯನಿಗೆ ಅರ್ಥವಾಗದ ವಿಚಾರಗಳನ್ನು ಇಂದಿನ ವ್ಯವಸ್ಥೆ ಯಾವ ರೀತಿಯಲ್ಲಿ ತೂಗು ಹಾಕುತ್ತಿದೆ ಎನ್ನುವ ವಿಚಾರಗಳಿಗೆ ವ್ಯಂಗ್ಯದ ಮೂಲಕ ಉತ್ತರ ನೀಡಲಾಗಿದೆ. ನದಿ ಉಳಿಸಲು ಕಾರ್ಟೂನ್ ಟಚ್ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದರಾದ ಜಾನ್ ಚಂದ್ರನ್, ಯತಿ ಸಿದ್ಧಕಟ್ಟೆ, ಜೀವನ್, ಹರಿಣಿ, ಅಮೃತ್ ವಿಟ್ಲ, ಸತೀಶ್ ಆಚಾರ್ಯ, ದಿನೇಶ್ ಕುಕ್ಕುಜಡ್ಕ ಮೊದಲಾದವರು ಸೇರಿಕೊಂಡು ನೇತ್ರಾವತಿ ನದಿ ಉಳಿವು, ಎತ್ತಿನ ಹೊಳೆ ಹಾಗೂ ನದಿ ತಿರುಗಿಸುವ ಯತ್ನ ದ ವಿರುದ್ಧ ಜಾಗೃತಿ ಹುಟ್ಟು ಹಾಕುವ ವಿನೂತನ ಮಾದರಿ ಕಾರ್ಟೂನ್‌ಗಳನ್ನು ತಮ್ಮ ಬತ್ತಲಿಕೆಯಿಂದ ಹರಿಯಬಿಟ್ಟಿದ್ದಾರೆ. ಡಿ. ೨ರಂದು ಈ ವ್ಯಂಗ್ಯ ಚಿತ್ರ ಪ್ರದರ್ಶನದ ಜತೆಯಲ್ಲಿ ಉಪನ್ಯಾಸ ಕಾರ‍್ಯಕ್ರಮಗಳು ನಡೆಯಲಿದೆ. ನೇತ್ರಾವತಿ ನದಿ ತಿರುವು ಹೋರಾಟ ಸಮಿತಿಯ ಡಾ. ನಿರಂಜನ್ ರೈ ವಿಶೇಷ ಉಪನ್ಯಾಸ ನೀಡಲಿದ್ದಾರೆ. ..... (mangalore vijyakarnakta daily supliment namma karvali my article published on dec 1, 2013)

Friday, November 29, 2013

ಹಣವೆಂಬ ಮಾಯ ಜಿಂಕೆಯ ಬೆನ್ನೇರಿದವರು....

ಸೌದಿಯಲ್ಲಿ ನಿಜಕ್ಕೂ ಭಾರ ತೀಯರಿಗೆ ಅದರಲ್ಲೂ ನೆರೆಯ ರಾಜ್ಯವಾದ ಕೇರಳ ಹಾಗೂ ಕರಾವಳಿಯ ಮಂದಿಗೆ ತೊಂದರೆಯಾಗಿದೆಯಾ..? ಇಲ್ಲಿಂದ ಹಣ ಗಳಿಸಲು ಹೋದವರು ಅಲ್ಲಿ ಹೇಗೆ ಬದುಕುತ್ತಿದ್ದಾರೆ... ನಿತಾಕತ್ ಕಾನೂನಿನಿಂದ ಏನೆಲ್ಲ ಆಗಿದೆ ಎನ್ನುವ ವರದಿ ಇಲ್ಲಿದೆ... " ಸ್ಟೀವನ್ ರೇಗೊ, ದಾರಂದಕುಕ್ಕು.
ಗಲ್ಫ್ ಎನ್ನುವ ಒಂದು ಪದವನ್ನು ನೆಚ್ಚಿಕೊಂಡಿರುವ ಅದೆಷ್ಟೋ ಕುಟುಂಬಗಳು ನಮ್ಮ ಕರಾವಳಿ ಮತ್ತು ನೆರೆಯ ಕೇರಳ ರಾಜ್ಯದಲ್ಲಿವೆ. ಕನಸಿನ ಗುಚ್ಛವನ್ನು ತೆಗೆದುಕೊಂಡು "ಮಾನ ಹತ್ತಿದವರು ಅದೆಷ್ಟೋ ಜನ . ಮನೆಯ ಸಾಲ ,ತಂಗಿಯ ಮದುವೆ, ತಮ್ಮನ "ದ್ಯಾಬ್ಯಾಸ "ಗೆ ಹಲವು ಸಮಸ್ಯೆ ಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಹೊರಟ ಲಕ್ಷಾಂತರ ಜನ ನಮ್ಮ ಕಣ್ಣ ಮುಂದೆ ಇದ್ದಾರೆ . ಕೆಲವರಿಗೆ ಗಲ್ಫ್ ಸ್ವರ್ಗವಾದರೆ ಇನ್ನು ಕೆಲವರಿಗೆ ನರಕ ದ ದಾರಿಯನ್ನು ತೋರಿಸಿದೆ . ಪ್ರಸ್ತುತ ಸೌದಿ ಅರೇಬಿಯದಲ್ಲಿ ಬಂದಿರುವ ನಿತಾಕಾತ್ ( ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಸ್ವದೇಶೀಕರಣ ) ಕಾನೂನಿನ ಬಗ್ಗೆ ಕರಾವಳಿಯ ಜನರಿಗೆ ಬಹಳಷ್ಟು ಗೊಂದಲಗಳಿವೆ. ಗಲ್ಫ್ ಕನಸು ಹೊತ್ತು ಹೊರಡುವ ಅನೇಕರ ಮನಸ್ಸಿಗೆ ನಿತಾಕಾತ್ ಕಾನೂನು ಕಣ್ಣ ಮುಂದೆ ಬರುವುದು ಸುಳ್ಳಲ್ಲ . ಆದರೆ ಈ ನಿತಾಕತ್ ಕಾನೂನು ಏನು ಅನ್ನೋದನ್ನ ಸರಿಯಾಗಿ ಅರ್ಥುಸಿಕೊಂಡರೆ ಸೌದಿ ಸರಕಾರ ಮಾಡಿರುವ ಈ ಕಾನೂನು ಸರಿ ಎಂದೆನಿಸುತ್ತದೆ . ಸೌದಿಯಲ್ಲಿ ಅದೆಷ್ಟೋ ಜನ ಹಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದು ಸೌದಿ ಸರಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಅದರಲ್ಲೂ ಇತಿಯೋಪಿಯಾ, ನೈಜಿರಿಯಾದ ಜನ ಅಕ್ರಮವಾಗಿ ಸೌದಿ ಯಲ್ಲಿ ನೆಲೆಸಿದ್ದರು . ಹೊಸ ಕಾನೂನಿನ ಪ್ರಕಾರ ಅಕ್ರಮವಾಗಿ ನೆಲೆಸಿರುವ ಕಾ"ಕರು ತಮ್ಮ ಕೆಲಸವನ್ನ ಹಾಗೂ ಸೌದಿಯಲ್ಲಿ ತನ್ನ ಇರು"ಕೆಯನ್ನು ಸಕ್ರಮ ಗೊಳಿಸುವಂತೆ ಸೌದಿ ಸರಕಾರ ಸೂಚಿಸಿತ್ತು. ಅದಕ್ಕಾಗಿ ಬಹಳಷ್ಟು ಕಾಲಾವಕಾಶಗಳನ್ನು ನೀಡಿತ್ತು ಅನೇಕ ಮಂದಿ ಅದರ ಸದುಪಯೋಗ ಪಡೆದುಕೊಂಡು ತಮ್ಮ ಕೆಲಸವನ್ನು ಹಾಗೂ ಸೌದಿಯಲ್ಲಿ ನೆಲೆಸಲು ಕಾನೂನು ಪ್ರಕಾರ ಏನೆಲ್ಲಾ ಬೇಕು ಅದನ್ನೆಲ್ಲ ಸರಿ ಪಡಿಸಿಕೊಂಡಿದ್ದರು . ಸೌದಿ ಸರಕಾರ ಸುಮಾರು ೯ ತಿಂಗಳು ಕಾಲಾವಕಾಶ ನೀಡಿತ್ತು. ಆ ಅವಧಿ ನವೆಂಬರ್ ೪ಕ್ಕೆ ಕೊನೆಗೊಂಡಿದ್ದು, ಅದರ ನಂತರ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಬಂಧಿಸಿ ಶಿಕ್ಷೆ ನೀಡಲು ಸೌದಿ ಸರಕಾರ ಮುಂದಾಗಿದೆ . ಭಾರತೀಯರ ಬಗ್ಗೆ ಮೃದು ಧೋರಣೆ: ಭಾರತೀಯರ ಬಗ್ಗೆ ಮೃದು ಧೋರಣೆ - ಸೌದಿ ಸರಕಾರದ ಟಾರ್ಗೆಟ್ ನೇರವಾಗಿ ಇತಿಯೋಪಿಯಾ ,ನೈಜೀರಿಯಾ, ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಿಯರ ಮೇಲೆ . ಇತಿಯೋಪಿಯಾ ಜನರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ . ಜೊತೆಗೆ ಅಕ್ರಮವಾಗಿ ಇಕಾಮ ಇಲ್ಲದೆ (Sಚಿuಜi ಖe*iಜeಟಿಛಿe Iಆ) ನೆಲೆಸಿರುವ ಯಾವುದೇ ರಾಷ್ಟ್ರದ ಜನರನ್ನ ಹುಡುಕಿ ದೇಶದಿಂದ ಹೊರದಬ್ಬುವ ಕೆಲಸವನ್ನ ಸೌದಿ ಪೊಲೀಸರು ಮಾಡುತ್ತಿದ್ದಾರೆ . ಸೌದಿ ಸರಕಾರ ವೃತ್ತಿಪರ(ಠಿಡಿoಜಿe**ioಟಿಚಿಟ ಛಿhಚಿಟಿg ) ಬದಲಾವಣೆ ಗೆ ಇನ್ನು ಅವಕಾಶ ನೀಡಿದೆ .ಮೊದಲೆಲ್ಲ ಹೇಗಿತ್ತು ಅಂದ್ರೆ ಆತನ ವೃತ್ತಿಪರ(ಠಿಡಿoಜಿe**ioಟಿಚಿಟ )ಒಂದಾದರೆ ಆತ ಕೆಲಸ ಮಾಡುತ್ತಿರುವುದು ಬೇರೆ ಯಾವುದೋ ಅದಕ್ಕೆ ಸೌದಿ ಸರಕಾರದ ಹೊಸ ಕಾನೂನು ಅಂತ್ಯ ಹಾಡಿದೆ. ಇಕಾಮ ದಲ್ಲಿ (Sಚಿuಜi ಖe*iಜeಟಿಛಿe Iಆ) ಯಾವ ವೃತ್ತಿಪರ(ಠಿಡಿoಜಿe**ioಟಿಚಿಟ )ಇದೆಯೋ ಆತ ಅದೇ ಕೆಲಸವನ್ನು ಮಾಡಬೇಕು . ಸೌದಿ ನಿತಾಕತ್ ಕಾನೂನು ಸೌದಿ ಅರೇಬಿಯಾಕ್ಕೆ ಒಂದು ಗೌರವವನ್ನು ತಂದುಕೊಟ್ಟಿದೆ. ಸೌದಿಯಲ್ಲಿ ಇನ್ನೂ ಒಂದು ವರ್ಷದೊಳಗಡೆ ಕಾನೂನು ಬದ್ಧವಾಗಿ ನೆಲೆಸಿರುವ ಕಾ"ಕರನ್ನು ನೋಡಬಹುದು . ನಿತಾಕತ್ ಕಾನೂನು ವರ್ಸಸ್ ಕರಾವಳಿ ಮಂದಿ: ನಿತಾಕತ್ ಕಾನೂನಿನಿಂದಾಗಿ ಸೌದಿಯಲ್ಲಿ ದುಡಿಯುವ ಅನೇಕ ಕರಾವಳಿ ಕುಟುಂಬಗಳಿಗೆ ಹೇಳಿಕೊಳ್ಳುವಂತ ದೊಡ್ಡ ಸಮಸ್ಯೆಗಳು ಉದ್ಭವವಾಗಿಲ್ಲ. ಕಾರಣ ಇಷ್ಟೇ ಕರಾವಳಿಗರು ತಮ್ಮ ಅಕ್ರಮ ವಲಸೆಯನ್ನು ಈಗಾಗಲೇ ಸೌದಿ ಸರಕಾರ ನೀಡಿರುವ ಡೆಡ್‌ಲೈನ್ ಒಳಗಡೆ ಸಕ್ರಮ ಮಾಡಿಕೊಂಡಿದ್ದಾರೆ. ಭಾರತೀಯ ಕುರಿತು ಸೌದಿ ಸರಕಾರಕ್ಕೊಂದು ಮೃದು ಧೋರಣೆ ಈಗಾಗಲೇ ಜಾಗೃತವಾಗಿದೆ. ಈ ಕಾರಣದಿಂದಾಗಿ ಕೇರಳ ಹಾಗೂ ಕರಾವಳಿಂದ ಬಂದವರನ್ನು "ಶೇಷವಾಗಿ ತಪಾಸಣೆ ಮಾಡುವುದನ್ನು ಸೌದಿ ಸರಕಾರ ಕಡಿಮೆ ಮಾಡುತ್ತಿದೆ. ಸೌದಿಯ ರಾಜಧಾನಿ ರಿಯಾದ್‌ನಲ್ಲಂತೂ "ಶೇಷವಾಗಿ ಭಾರತೀಯರು ಅದರಲ್ಲೂ ಕೇರಳಿಗರಿಂದ ಹಾಗೂ ಕರಾವಳಿಗರಿಂದ ತುಂಬಿ ಹೋಗಿದೆ. ಇಲ್ಲಿನ ಪ್ರತಿಯೊಂದು ದುಕೂನುಗಳಲ್ಲಿ ಕಣ್ಣಿಟ್ಟುಕೊಂಡು ನೋಡಿದರೂ ಅಲ್ಲಿ ಭಾರತೀಯನೊಬ್ಬ ಕಾಣ ಸಿಗುತ್ತಾನೆ. ತನ್ನ ಪಾಡಿಗೆ ದುಡಿದು ಊರಿನಲ್ಲಿರುವ ತನ್ನ ಕುಟುಂಬವನ್ನು ನೆಮ್ಮದಿಯ ಬದುಕು ಕೊಡುವತ್ತಾ ಗಮನ ಇಟ್ಟುಕೊಂಡಿರುವ ಇವರು ಪ್ರಾಮಾಣಿಕತೆಯ ಬದುಕು ಕಚ್ಚಿಕೊಂಡವರು. ಆದರೆ ನೈಜೀರಿಯಾ ಸೇರಿದಂತೆ "ಶ್ವದ ಗರೀಬೀ ರಾಷ್ಟ್ರಗಳಲ್ಲಿರುವ ಮಂದಿ ದರೋಡೆ, ಸುಲಿಗೆ "ಗೆ ನಾನಾ ಅಕ್ರಮಗಳಲ್ಲಿ ತೊಡಗಿರುವುದರಿಂದ ಸೌದಿ ರಾಷ್ಟ್ರಕ್ಕೆ ಇವರನ್ನು "ಡಿದಿಟ್ಟುಕೊಳ್ಳುವುದು ಒಂದು ದೊಡ್ಡ ತಲೆ ನೋವಾಗಿತ್ತು. ಇದೇ ಕಾರಣದಿಂದ ನಿತಾಕತ್ ಕಾನೂನು ತರುವ ಮೂಲಕ ಅವರನ್ನು ದೇಶದಿಂದ ಹೊರ ಹಾಕುವ ಕೆಲಸ ನಡೆಯುತ್ತಿದೆ ಎನ್ನೋದು ಸೌದಿಯಲ್ಲಿ ದುಡಿಯುತ್ತಿರುವ ಪುತ್ತೂರು ಮೂಲದ ಪ್ರಶಾಂತ್ "ನೇಜಸ್ ಅವರ ಮಾತು. ಕಟ್ಟ ಕಡೆಯ ಪ್ರಯತ್ನ: ನವೆಂಬರ್ ೪ ನಿತಾಕತ್ ಕಾನೂನು ಮೂಲಕ ಅಂತಿಮ ಗಡುವಾಗಿದ್ದರೂ ಕೂಡ ಜನವರಿಯಲ್ಲಿ ಸೌದಿ ಸರಕಾರ "ಶೇಷ ಪರೀಕ್ಷೆಯೊಂದನ್ನು ಕೇವಲ ಶಿಕ್ಷಕರಿಗೆ "ಸಲಿಟ್ಟಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮತ್ತೆ ಸೌದಿಯಲ್ಲಿ ಉಳಿಯುವ ಅವಕಾಶ ಲಭ್ಯವಾಗುತ್ತದೆ. ಈಗಾಗಲೇ ಸೌದಿಯ ಬಹಳಷ್ಟು ಕಡೆಗಳಲ್ಲಿ ನಡೆಯುವ ಶಿಕ್ಷಣದಲ್ಲಿ ಭಾರತೀಯರು ಅದರಲ್ಲೂ ಕೇರಳ, ಕರಾವಳಿಯ ಶಿಕ್ಷಕಿಯರು ದುಡಿಯುತ್ತಿದ್ದಾರೆ. ಆದರೆ ಅವರು ತಮ್ಮ ಪತಿಯಂದಿರ "ಸಾದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಕಾರಣದಿಂದ ಅವರನ್ನು ಸೌದಿ ಸರಕಾರದ ಅಧೀನದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಂದ ಕಿತ್ತು ಹಾಕಲಾಗಿದ್ದು, ಜನವರಿಯಲ್ಲಿ ಪರೀಕ್ಷೆ ಬರೆಯುವ ಮೂಲಕ ಮತ್ತೆ ಸೌದಿಯಲ್ಲಿ ಉಳಿಯುವಂತೆ ಅವಕಾಶವನ್ನು ತೆರೆದಿದೆ ಎನ್ನುತ್ತಾರೆ ಸೌದಿಯಲ್ಲಿ ದುಡಿಯುತ್ತಿರುವ ಮಂಗಳೂರು ಮೂಲದ ಗೀತಾ ಶೆಟ್ಟಿ. ನಿತಾಕತ್ ಕಾನೂನು "ರುದ್ಧವಾಗಿ ಬದುಕು ಕಟ್ಟುತ್ತಿರುವ ಅಕ್ರಮ ವಲಸಿಗರಿಗೆ ೧೦ ವರ್ಷಗಳ ಕಾಲ ಸೌದಿ ದೇಶಕ್ಕೆ ಮರು ಪ್ರವೇಶ"ಲ್ಲ. ಜತೆಗೆ ೨ ವರ್ಷಗಳ ಕಾಲ ಸೆರೆಮನೆ ಶಿಕ್ಷೆಯನ್ನು "ಧಿಸಲಾಗುತ್ತದೆ. ಬರೀ ನಿತಾಕತ್ ಕಾನೂನು ಮಾತ್ರ ಸೌದಿಯಲ್ಲಿ ಕಟ್ಟು ನಿಟ್ಟಾಗಿ ಇಲ್ಲಿನ ಉಳಿದ ಎಲ್ಲ ಕಾನೂನುಗಳು ತೀರಾ ಕಟ್ಟುನಿಟ್ಟಿನಿಂದ ಕೂಡಿರುತ್ತದೆ ಎನ್ನುತ್ತಾರೆ ರಿಯಾದ್ ಸೆಂಟ್ರಲ್ ಪೊಲೀಸ್ ಅಧಿಕಾರಿ ಶರೀಫ್ ಖಾಲಿದ್ ಮೂಸಾ ಅವರು. ಕೋಟ್ಸ್........ *"ಸೌದಿ ಅರೇಬಿಯಾದ ಸರಕಾರ ಅಲ್ಲಿನ ನಿರುದ್ಯೋಗಿ ಯುವಜನತೆಯ ಪರವಾಗಿ ನಿಂತು ಯೋಚನೆ ಮಾಡಿರೋದು ಒಳ್ಳೆಯ ಬೆಳವಣಿಗೆ. ಆದರೆ ಬಿಲಿಯನ್ ಸಂಖ್ಯೆಯಲ್ಲಿ ಸೌದಿಯಲ್ಲಿ ದುಡಿಯುತ್ತಿರುವ ಭಾರತೀಯರಿಗಂತೂ ಸಂಕಷ್ಟವೇ ಸರಿ. -ಪ್ರಶಾಂತ್ ಮೂಲತ ಃ ಪುತ್ತೂರಿನ ಸೇಡಿಯಾಪು"ನವರು. ಈಗ ಸೌದಿಯ ಜಿದ್ದಾದಲ್ಲಿ ಕೆಲಸ ಮಾಡುತ್ತಿದ್ದಾರೆ. ............. *ಸೌದಿ ಅರೇಬಿಯಾದಲ್ಲಿರುವ ಕಂಪನಿಗಳಲ್ಲಿ ಶೇ.೩೦ರಷ್ಟು ಸೌದಿ ಉದ್ಯೋಗಿಗಳನ್ನು ದುಡಿಸಿಕೊಳ್ಳಬೇಕು ಎನ್ನುವ ನಿಯಮ ಇಟ್ಟುಕೊಂಡಿದೆ. ಈ ಕಾನೂನು ಈ "ಂದೆ ಕೂಡ ಚಾಲ್ತಿಯಲ್ಲಿತ್ತು. ಆದರೆ ಅದರ ಬಳಕೆ ನಡೆದಿರೋದು ಈಗ ಮಾತ್ರ. ಶೇ.೩೦ಕ್ಕಿಂತ ಕಡಿಮೆ ಸೌದಿ ಕೆಲಸಗಾರರನ್ನು ಹೊಂದಿರುವ ಕಂಪನಿಯ ಪರವಾನಿಗಿ ಹಾಗೂ ಮನೆಯ ಪರವಾನಗಿ( ಇಕ್ಮಾ) ರದ್ದು ಮಾಡುವ ಸಾಧ್ಯತೆ ಇದೆ. ಆದರೆ ನನ್ನ ಕಂಪನಿಯಲ್ಲಿ ಈಗಾಗಲೇ ೧೦೦೦ಕ್ಕಿಂತ ಅಧಿಕ ಸೌದಿ ಮ"ಳೆಯರು ಹಾಗೂ ೪೦೦೦ಕ್ಕಿಂತ ಅಧಿಕ ಸೌದಿ ಪುರುಷರು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕಂಪನಿಯ ಜತೆಗೆ ನಾವು ಕೂಡ ಸುರಕ್ಷಿತವಾಗಿದ್ದೇವೆ. -ರ"ಶ್ ಜೈನ್ ಮೂಲತ ಃ ಪುತ್ತೂರು ಕೋಡಿಂಬಾಡಿಯವರು. ಈಗ ಸೌದಿಯಲ್ಲಿ ಮಾಲ್ ಮ್ಯಾನೇಜರ್ ಆಗಿ ದುಡಿಯುತ್ತಿದ್ದಾರೆ. .............. * ಸೌದಿಯಲ್ಲಿ ಬಹಳಷ್ಟು ಮಂದಿ ಕರಾವಳಿ ಸೇರಿದಂತೆ ಕೇರಳಿಗರ ಸಂಖ್ಯೆ ಜಾಸ್ತಿ ಇದೆ. ಕೇರಳದಲ್ಲಿ ಸೌದಿಂದ ಬಂದವರೇ ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಸೌದಿಯ ಹಣ ಇಲ್ಲದೇ ಕೇರಳವೇ ಸುಮ್ಮನೆ ಎನ್ನುವ ಸ್ಥಿತಿ ಇದೆ. ಇಂತಹ ಸಮಯದಲ್ಲಿ ಸೌದಿಯ ಈ ಕಾನೂನು ಭಾರತದ ಅದರಲ್ಲೂ ಕೇರಳವನ್ನು ಅಲುಗಾಡಿಸಿ ಬಿಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಸೌದಿಯ ಯುವಜನತೆ ಶಿಕ್ಷಿತರಾಗಿದ್ದರೂ ಕೂಡ ನಿರುದ್ಯೋಗಿಗಳಾಗಿದ್ದಾರೆ. ಈ ಕಾನೂನು ಸೌದಿಯ ಪ್ರಕಾರ ಸರಿಯಾಗಿದೆ. - ನಿತಿನ್ ರೈ ಕುಕ್ಕುವಳ್ಳಿ ಪುತ್ತೂರು ಕುಕ್ಕುವಳ್ಳಿ ನಿವಾಸಿ. ಪ್ರಸ್ತುತ ಸೌದಿಯಲ್ಲಿ ದುಡಿಯುತ್ತಿದ್ದಾರೆ. .............. ಸೌದಿಯಲ್ಲಿ ಕರ್ನಾಟಕದವರು ಸುರಕ್ಷಿತ ಸೌದಿ ಅರೇಬಿಯಾದಲ್ಲಿರುವ ಹೊಸ ಉದ್ಯೋಗ ನೀತಿಂದ ಕರ್ನಾಟಕದ ಜನ ದಿಗಿಲು ಬೀಳಬೇಕಾದ ಅಗತ್ಯ"ಲ್ಲ. ಯಾಕೆಂದರೆ ಇತರ ವಲಸಿಗರಿಗೆ ಹೋಲಿಸಿದರೆ ಕರ್ನಾಟಕ ನೌಕರರು ಹೆಚ್ಚು ಪರಿಶ್ರ"ಗಳು, ಪ್ರಾಮಾಣಿಕರು ಮತ್ತು ಪರಿಣಿತರು. ಅಕ್ರಮ ವಲಸಿಗರ ಪಟ್ಟಿಯಲ್ಲಿ ಅಥವಾ ಸೌದಿ ಜೈಲುಗಳಲ್ಲಿ ಇದುವರೆಗೆ ರಾಜ್ಯದ ಯಾವುದೇ ಕಾ"ಕರ ಹೆಸರು ಕಂಡು ಬಂದಿಲ್ಲ. ಸೌದಿಯ ಹೊಸ ಕಾನೂನಿನಿಂದ ಅಕ್ರಮ ಪ್ರವೇಶಿಸುವವರಿಗೆ ಮಾತ್ರ ತೊಂದರೆ. ಕಾನೂನುಬದ್ಧವಾದ ಅಧಿಕೃತ ದಾಖಲೆ ಪತ್ರಗಳೊಂದಿಗೆ ಹೋಗುವವರಿಗೆ ಏನೂ ತೊಂದರೆಲ್ಲ. ಯಾವುದೇ "ಸಾ ದೊರೆತರೂ ಅದರ ಪ್ರತಿಯನ್ನು ರಾಯಭಾರಿ ಕಚೇರಿಗೆ ಮುಂಚಿತವಾಗಿ ಕಳು"ಸಿ ಸತ್ಯಾಸತ್ಯತೆ ಪರಿಶೀಲಿಸಿಕೊಂಡರೆ ಯಾರಿಗೂ ಅಪಾಯ"ರುವುದಿಲ್ಲ. ಜಿಲ್ಲಾಡಳಿತೆಗಳು ಪಾಸ್‌ಪೋರ್ಟ್ ಮೇಲೆ ನಿಗಾ ಇರಿಸುವಂತೆ "ಸಾ ಏಜೆಂಟರನ್ನು ಕಾನೂನಿನ "ಡಿತಕ್ಕೆ ತರಬೇಕು. ಸೌದಿಯಲ್ಲಿ ಅಕ್ರಮ ವಲಸಿಗರ ಪ್ರಮಾಣ ಶೇ.೫ರ‍್ಟದೆ ಎಂದು ಗುರುತಿಸಲಾಗಿದೆ. ಇದುವರೆಗೆ ಪತ್ತೆಯಾದ ಶೇ.ಒಂದರಷ್ಟು ಮಾತ್ರ. ಇದರಲ್ಲಿ ಕರ್ನಾಟಕದವರಾರೂ ಇಲ್ಲ. ಸೆರೆ ಸಿಕ್ಕುವ ವಲಸಿಗರ ರಾಜ್ಯದ ಬಗ್ಗೆ ತಿಳಕೊಂಡು ರಾಯಭಾರ ಕಚೇರಿ ಆಯಾಯ ರಾಜ್ಯಕ್ಕೆ ಮಾ"ತಿ ಕಳು"ಸುತ್ತಿದೆ. ........................ ( vijyanext 29.11.2013 my lead article)

Tuesday, November 26, 2013

ಬರಲಿದೆ ತ್ರಿ ಭಾಷಾ ಕೊಂಕಣಿ ಶಬ್ದಕೋಶ

ಸ್ಟೀವನ್ ರೇಗೊ, ದಾರಂದಕುಕ್ಕು ಕೊಂಕಣಿ ಭಾಷಾ ಲೋಕದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ. ಇಂಗ್ಲೀಷ್-ಕನ್ನಡ-ಕೊಂಕಣಿ ಭಾಷಾ ಸಂವಹನ ಸಂಪರ್ಕದಲ್ಲಿ ದೂರಗಾಮಿ ಕ್ರಾಂತಿಯ ನಿರೀಕ್ಷೆ. ಮೂರು ಭಾಷೆಗಳ ಶಬ್ದಕೋಶ ತಯಾರಿಸುವ ಹೆಜ್ಜೆ. ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಆಧುನಿಕ ಸ್ವರೂಪದ ಅರ್ಥಕೋಶಗಳು ಬೆಳೆಯುವಲ್ಲಿ ಕ್ರೈಸ್ತ ಮಿಷನರಿಗಳು ತಮ್ಮದೇ ಉದ್ದೇಶಕ್ಕಾಗಿ ಪ್ರಥಮ ಹೆಜ್ಜೆ ಇಟ್ಟಿದ್ದು, ಇಂದು ಆ ಭಾಷೆಗಳ ಅಭಿವೃದ್ಧಿಯಾಗುವಲ್ಲಿ ಅಂತಹ ಅರ್ಥಕೋಶಗಳು ಪ್ರಮುಖ ಪಾತ್ರ ವಹಿಸಿವೆ. ಕರಾವಳಿ ಕರ್ನಾಟಕದಲ್ಲಿ ತುಳು, ಕನ್ನಡ, ಕೊಂಕಣಿ, ಕುಂದಗನ್ನಡ ಹಾಗೂ ಬ್ಯಾರಿ ಭಾಷೆಗಳು ಪ್ರಚಲಿತದಲ್ಲಿವೆ. ಈ ಪೈಕಿ ಕನ್ನಡ ಹಾಗೂ ಕೊಂಕಣಿ ಸಂವಿಧಾನದ ೮ನೇ ಪರಿಚ್ಛೇದದಲ್ಲಿರುವ ರಾಷ್ಟ್ರೀಯ ಭಾಷೆಗಳಾಗಿವೆ. ಇವೆರಡೂ ಭಾಷೆಗಳಲ್ಲಿ ಹಲವಾರು ಅರ್ಥಕೋಶಗಳು ಬೆಳೆದು ಬಂದಿವೆ. ಅದಾಗ್ಯೂ ದೊಡ್ಡ ಮಟ್ಟಿನಲ್ಲಿ ಕನ್ನಡ-ಕೊಂಕಣಿ ಕೊಡುಕೊಳು ನಡೆದು ಬಂದಿಲ್ಲ. ಇದಕ್ಕೆ ಕೊಂಕಣಿ ಹಾಗೂ ಕನ್ನಡ ಭಾಷೆಗಳೆರಡನ್ನು ಏಕ ಕಾಲದಲ್ಲಿ ತಿಳಿಯಲು ಪೂರಕವಾಗುವ ಅರ್ಥಕೋಶ ಇನ್ನೂ ಬಾರದಿರುವುದು ಒಂದು ಕಾರಣವಾಗಿರಬಹುದು ಎನ್ನುವುದು ಶಬ್ದಕೋಶದ ತಯಾರಿಯಲ್ಲಿರುವ ಪ್ರೊ. ಸ್ಟೀವನ್ ಕ್ವಾಡ್ರಸ್ ಅವರ ಮಾತು. ಭರದ ಸಿದ್ಧತೆ: ಮಂಗಳೂರಿನ ಪಥದರ್ಶಿನಿ ಸೇವಾ ಟ್ರಸ್ಟ್ ಒಂದು ನೋಂದಾಯಿತ ಸಾರ್ವಜನಿಕ ಸೇವಾ ಸಂಘಟನೆಯಾಗಿದ್ದು , ಭಾರತ ಸರಕಾರದಿಂದ ಮಾನ್ಯತೆ ಹೊಂದಿದೆ. ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನದ ವ್ಯವಸ್ಥೆ ಮಾಡುವುದು ಇದರ ಮೂಲ ಉದ್ದೇಶವಾಗಿದ್ದು ಈಗಾಗಲೇ ‘ಮಾರ್ಗ’ ಹಾಗೂ ‘ಯಶಸ್ಸ್’ ಎಂಬ ಎರಡು ವೃತ್ತಿ ಮಾರ್ಗದರ್ಶನ ಪುಸ್ತಕಗಳನ್ನು ಈ ಟ್ರಸ್ಟ್‌ನ ವತಿಯಿಂದ ಹೊರಡಿಸಲಾಗುತ್ತಿದೆ. ಇದರ ಅಡಿಯಲ್ಲಿ ಈ ಕೊಂಕಣಿ ತ್ರಿ ಭಾಷಾ ಶಬ್ದಕೋಶವೊಂದು ಸಿದ್ಧವಾಗುತ್ತಿದೆ. ನಾಡಿನ ಖ್ಯಾತ ಭಾಷಾ ವಿದ್ವಾಂಸರಗಳಲ್ಲಿ ಒಬ್ಬರಾದ ಫಾ.ಬೇಸಿಲ್ ವಾಸ್ ಹಾಗೂ ಪ್ರಾಧ್ಯಾಪಕ ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಅವರು ಕಳೆದ ಹಲವು ವರ್ಷಗಳಿಂದ ಸಿದ್ದಪಡಿಸುತ್ತಿದ್ದ ಈ ಇಂಗ್ಲೀಷ್-ಕನ್ನಡ-ಕೊಂಕಣಿ ಅರ್ಥಕೋಶ ಈಗ ಅಂತಿಮ ಹಂತ ತಲುಪಿದ್ದು ಫೆಬ್ರವರಿ ೨೦೧೪ರ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ೫೦ ಸಾವಿರ ಪದಗಳು ಕೊಂಕಣಿ ಭಾಷಾ ಲೋಕದಲ್ಲಿ ವಿಶಿಷ್ಟ ಪ್ರಯತ್ನವಾದ ಈ ತ್ರಿಭಾಷಾ ಕೊಂಕಣಿ ಶಬ್ದಕೋಶದಲ್ಲಿ ಸುಮಾರು ೫೦,೦೦೦ ಇಂಗ್ಲೀಷ್ ಶಬ್ದಗಳಿಗೆ ಕನ್ನಡ ಹಾಗೂ ಕೊಂಕಣಿಯಲ್ಲಿ ಅರ್ಥ ಸಾಮ್ಯ ಪದಗಳು ಸಿಗಲಿವೆ. ಸುಮಾರು ೧೫೦೦ ಪುಟಗಳಲ್ಲಿ ಈ ಪುಸ್ತಕ ಬರಲಿದೆ. ಮುಖ್ಯವಾಗಿ ಇಂಗ್ಲೀಷ್- ಕೊಂಕಣಿ- ಕನ್ನಡ ಮೂರು ಭಾಷೆಗಳಲ್ಲಿ ಇರುವ ಕಾರಣ ಮೂರು ಭಾಷೆಗಳ ಶಬ್ದ ಭಂಡಾರಕ್ಕೆ ದೊಡ್ಡ ಕೊಡುಗೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ. ತ್ರಿ ಭಾಷೆಯಲ್ಲಿ ಇಂತಹ ಒಂದು ದೊಡ್ಡ ಪ್ರಯತ್ನ ಮಾಡಬೇಕು ಅಂದುಕೊಂಡಿದ್ದೆ. ಈಗ ಇದು ನನಸ್ಸಾಗುತ್ತಿದೆ. ಶಬ್ದಕೋಶದ ಬಹುತೇಕ ಕೆಲಸಗಳು ಕೊನೆಗೊಂಡಿದೆ. ಮುಖಪುಟ ಹಾಗೂ ಇನ್ನೂ ಕೆಲವು ಪುಟಗಳು ಬಾಕಿ ಉಳಿದಿದೆ. ಇದೊಂದು ಭಾಷಾ ಲೋಕಕ್ಕೆ ಅಪೂರ್ವ ಕೊಡುಗೆಯಾಗಲಿದೆ. -ಪ್ರೊ.ಸ್ಟೀವನ್ ಕ್ವಾಡ್ರಸ್, ಪೆರ್ಮುದೆ

Sunday, November 24, 2013

ಕೂದಲು ಇಲ್ಲದ ಮಂದಿಗೆ ಟ್ಯಾಟೋ ಹೇರ್

ಸ್ಟೀವನ್ ರೇಗೊ, ದಾರಂದಕುಕ್ಕು
ತಲೆ ಮೇಲೆ ಕೂದಲೇ ಇಲ್ಲದೇ ಬೋಳು ತಲೆಯ ಸಮಸ್ಯೆಯಿಂದ ಬಳಲುವವರ ದುಗುಡ ಆ ದೇವರಿಗೆ ಪ್ರೀತಿ. ಬೋಳು ತಲೆಯಿಂದ ಮುಕ್ತಿ ಪಡೆಯಬೇಕಾ..? ಎನ್ನುವ ಹತ್ತಾರು ಜಾಹೀರಾತುಗಳು ದಿನನಿತ್ಯ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಆದರೆ ಮಂಗಳೂರಿನ ಯುವಕರ ಟ್ಯಾಟೋ ತಂಡವೊಂದು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ತಲೆ ಮೇಲೆ ಕೂದಲು ಬೆಳೆಸುವ ಕೆಲಸದಲ್ಲಿ ತಲ್ಲೀನವಾಗಿದೆ. ಇದು ಯಾವುದೇ ಔಷಧಿ ಅಥವಾ ಇತರ ತಂತ್ರಗಾರಿಕೆಯ ಬದಲಾಗಿ ಬರೀ ಟ್ಯಾಟೋ ಸಾಧನಗಳನ್ನು ಆಯ್ಕೆ ಮಾಡಿಕೊಂಡು ಬೋಳು ತಲೆಯಲ್ಲಿ ಕೂದಲು ಬೆಳೆಸಲಾಗುತ್ತದೆ. ಹೇರ್ ಟ್ಯಾಟೂ ಟ್ರೀಟ್‌ಮೆಂಟ್: ಟ್ಯಾಟೂ ಲೋಕದಲ್ಲಿ ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಪ್ರಯತ್ನ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಕಾರಣ ಅತೀ ಸೂಕ್ಷ್ಮಾತೀತ ಕೆಲಸ ಹಾಗೂ ಹೆಚ್ಚು ಸಮಯ, ತಾಳ್ಮೆಯ ಅಗತ್ಯತೆ ಬೇಕಾಗುತ್ತದೆ. ತಲೆಯ ಭಾಗವಾಗಿರುವುದರಿಂದ ಇಲ್ಲಿ ಕುಶಲ ಟ್ಯಾಟೂ ಕಲಾವಿದರಿಗೆ ಮಾತ್ರ ಅವಕಾಶ ನೀಡಬೇಕಾಗುತ್ತದೆ. ದೇಹದ ಕೈ, ಕಾಲು ಅಥವಾ ಇತರ ಭಾಗಗಳಲ್ಲಿ ಟ್ಯಾಟೂ ರಚನೆಗೆ ಹೆಚ್ಚಿನ ಕಾಳಜಿಯ ಅಗತ್ಯತೆ ಇರೋದಿಲ್ಲ. ಉಳಿದ ಭಾಗಕ್ಕಿಂತ ತಲೆಯ ಭಾಗದಲ್ಲಿ ಸೂಕ್ಷ್ಮ( ತೆಳು)ವಾದ ಚರ್ಮ ಇರುವುದರಿಂದ ಅಲ್ಲಿ ಹೆಚ್ಚು ಬಲ ಪ್ರಯೋಗಕ್ಕೆ ಅವಕಾಶವೇ ಇಲ್ಲ. ಎಲ್ಲಕ್ಕೂ ಮುಖ್ಯವಾಗಿ ಲಕ್ಷಾಂತರ ಚುಕ್ಕಿಗಳನ್ನು ಕೂದಲಿನಂತೆ ಬೆಳೆಸುವುದರಿಂದ ಹೆಚ್ಚು ಸಮಯ ಹಾಗೂ ಎರಡರಿಂದ ಮೂರು ಮಂದಿಯ ಟ್ಯಾಟೂ ಕೆಲಸಗಾರರ ಅಗತ್ಯತೆ ಇರುತ್ತದೆ ಎನ್ನುವುದು ಮಂಗಳೂರಿನ ಟ್ರೈಬಲ್ ಟ್ಯಾಟೂವಿನ ಮುಖ್ಯಸ್ಥ ನಾಗೇಶ್ ಪುತ್ತೂರು ಅವರ ಮಾತು. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ತೀರಾ ಇತ್ತೀಚೆಗೆ ಹೇರ್ ಟ್ಯಾಟೂ ರಚನೆ ಮಾಡಿದ್ದೇವೆ. ಇಡೀ ಒಂದು ದಿನ ಬೇಕಾಗಿತ್ತು. ಮೂರು ಮಂದಿಯ ತಂಡ ರಚನೆ ಮಾಡಿದ್ದೇವು. ಅದರಲ್ಲೂ ಮುಖ್ಯವಾಗಿ ತಲೆಯ ಭಾಗವಾಗಿರುವುದರಿಂದ ಸೂಕ್ಷ್ಮ ಕೆಲಸ ಇತ್ತು. ಟ್ಯಾಟೂ ಸೂಜಿಗಳಿಂದ ಬಹಳ ಜೋಪಾನವಾಗಿ ಅಂತರಗಳನ್ನು ಇಟ್ಟುಕೊಂಡು ಚುಕ್ಕಿ ರಚನೆ ಮಾಡಿದೇವು. ಮೂರು ದಿನಗಳ ನಂತರ ಹೇರ್ ಟ್ಯಾಟೂ ಮಾಡಿಸಿಕೊಂಡವರು ನಮ್ಮ ಮುಂದೆ ಬಂದು ನಿಂತಾಗ ನಮಗೆ ಆಶ್ಚರ್ಯ ಎದುರಾಗಿತ್ತು ಎನ್ನುತ್ತಾರೆ ಟ್ಯಾಟೂ ರಚನೆಗಾರ ಮೋನಿಶ್ ಶೆಟ್ಟಿ. ಹೊಸ ಟ್ಯಾಟೂಗೆ ಹೊಸ ತಂತ್ರಜ್ಞಾನ ಪ್ಲಸ್: ಈಗಾಗಲೇ ಹುಡುಗಿಯರ ಕಣ್ಣಿನ ಹುಬ್ಬುಗಳನ್ನು ಟ್ಯಾಟೂ ಮೂಲಕ ಮಾಡಿದ್ದೇವೆ. ಅದು ಯಶಸ್ವಿ ಕೂಡ ಆಗಿತ್ತು. ಈ ಬಳಿಕ ಟ್ಯಾಟೂಗಳಲ್ಲಿ ೩ ಡಿ ಎಫೆಕ್ಟ್ ಗಳನ್ನು ಕೊಡಲು ಶುರು ಮಾಡಿದೇವು ಎಲ್ಲವೂ ಸಕ್ಸಸ್. ಈಗ ತಲೆಯಲ್ಲಿ ಕೂದಲು ಬೆಳೆಸುವ ಕೆಲಸದಲ್ಲಿ ಗೆದ್ದು ಬಂದಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ಟ್ಯಾಟೂ ರಚನೆಗಾರ ಪ್ರದೀಪ್. ಕಳೆದ ಐದಾರು ವರ್ಷಗಳಿಂದ ಟ್ರೈಬಲ್ ಟ್ಯಾಟೂ ಮೂಲಕ ಮಂಗಳೂರಿನಲ್ಲಿ ಈ ಯುವಕರು ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಅದರಲ್ಲೂ ಮುಖ್ಯವಾಗಿ ಆನಿಮೇಷನ್ ವರ್ಲ್ಡ್ ಹಾಗೂ ೩ ಡಿಗಳಲ್ಲಿ ಹೆಚ್ಚು ಪಳಗಿರುವ ಈ ಯುವಕರು ತಮ್ಮ ಟ್ಯಾಟೂಗಳಲ್ಲಿ ವಿಭ್ನಿನತೆ ಮೂಡಿಸುವಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಟೋಟಲಿ ಟ್ಯಾಟೂ ರಚನೆಯ ಯುವಕರ ತಂಡವೊಂದು ಕೂದಲು ಬೆಳೆಸುವ ಕೆಲಸ ಮೂಲಕ ಬಹಳಷ್ಟು ಮಂದಿಗೆ ನೆರವಾಗುತ್ತಿದ್ದಾರೆ ಎನ್ನುವ ಮಾತು ಮಾತ್ರ ಖುಷಿ ಕೊಡುತ್ತದೆ. ( vk main front page article published on 24.11.2013)

Friday, July 26, 2013

ಭಟ್ಟರದು ಹರಿದು ಹೋದ ಪೋಸ್ಟರ್ ಕತೆ

ಈಗ ಕಾಲ ಬದಲಾಗುತ್ತಿದೆ. ಎಲ್ಲ ಕೆಲಸಕ್ಕೂ ಮೆಷಿನ್‌ಗಳು ಬಂದು ಬಿಟ್ಟಿದೆ. ಆದರೆ ನನ್ನ ಕೆಲಸಕ್ಕಂತೂ ಯಾವುದೇ ಯಂತ್ರಗಳು ಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದು ನಿಂತರೆ ಕೂಡ ಅವರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಮಾರಾಯ್ರೆ. ಅಂದಹಾಗೆ ನನ್ನ ವೃತ್ತಿ ಉರೂರು ಸುತ್ತಾಡಿಕೊಂಡು ಸಿನಿಮಾಗಳ ಪೋಸ್ಟರ್‌ಗಳನ್ನು ಅಂಟಿಸುವುದು. ಯಾವ ಗೋಡೆಯಲ್ಲಿ ಯಾವ ಮಾದರಿಯ ಪೋಸ್ಟರ್, ಹೇಗೆ ಅಂಟಿಸಿದರೆ ಜನರು ಗುರುತಿಸುತ್ತಾರೆ ಮೊದಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಈ ಕಾ
ರಣದಿಂದ ಕಳೆದ ೪೦ ವರ್ಷಗಳಿಂದ ಇದೇ ನನ್ನ ಹೊಟ್ಟೆ ತುಂಬಿಸುವ ವೃತ್ತಿ. ಅದನ್ನು ಬಿಟ್ಟರೆ ನನಗೆ ಬೇರೆ ಕೆಲಸ ಗೊತ್ತಿಲ್ಲ. ಅಂದಹಾಗೆ ನನ್ನೂರು ಮಂಗಳೂರು. ಹೆತ್ತವರು ಪ್ರೀತಿಯಿಂದ ಬಾಲ್ಯದಲ್ಲಿ ಕರೆಯುತ್ತಿದ್ದ ಹೆಸರು ‘ವೆಂಕು ’ ಮತ್ತೆ ಶಾಲೆಗೆ ಬಂದಾಗ ಅಲ್ಲಿನ ರಿಜಿಸ್ಟ್ರಾರ್‌ನಲ್ಲಿ ಕಾಣಿಸಿಕೊಂಡದ್ದು ಬಿ. ವೆಂಕಟೇಶ್ ಭಟ್ಟ . ಆದರೆ ಈ ಎರಡು ಹೆಸರುಗಳು ಈಗ ಉಳಿದಿಲ್ಲ. ಈಗ ಉಳಿದಿರೋದು ಪೋಸ್ಟರ್ ಭಟ್ಟರು. ಇದೇ ಹೆಸರಿನಲ್ಲೇ ಎಲ್ಲರೂ ಕರೆಯುವುದು. ನನ್ನ ಬದುಕಿನ ಮೊದಲ ಸೋಲು ಕಾಣಿಸಿಕೊಂಡಿದ್ದು ಬಾಲ್ಯದಲ್ಲಿ...ಅದರಲ್ಲೂ ನಾನು ನಾಲ್ಕನೇ ತರಗತಿಯಲ್ಲಿರುವಾಗ ವಿದ್ಯಾರ್ಥಿಯೊಬ್ಬನ ಹೆತ್ತವರು ಹಣ ಕೊಟ್ಟರು ಎನ್ನುವ ಕಾರಣಕ್ಕೆ ನನ್ನನ್ನು ಫೇಲ್ ಮಾಡಿ ಅವನನ್ನು ಪಾಸ್ ಮಾಡಿದ್ರು.. ನನ್ನನ್ನು ಅದೇ ತರಗತಿಯಲ್ಲಿ ಕುಳ್ಳರಿಸಿದರು. ಈ ಕುರಿತು ಯಾರು ಕೂಡ ಕೇಳಿಲ್ಲ. ನಾನಾ ತೀರಾ ಬಡ ಕುಟುಂಬದಿಂದ ಬಂದವ ಆದರೂ ನನ್ನ ತಂದೆಯಂತೂ ಸಿಕ್ಕಾಪಟ್ಟೆ ಸ್ವಾಭಿಮಾನಿ. ಈ ವಿಚಾರ ಅವರಿಗೆ ತಿಳಿಯುತ್ತಿದ್ದಂತೆ ಅಲ್ಲಿಂದ ಬಿಡಿಸಿ ಮತ್ತೊಂದು ಶಾಲೆಗೆ ಭರ್ತಿ ಮಾಡಿದರು. ಅಲ್ಲೂ ನಾನು ಬಡವ ಎನ್ನುವ ಕಾರಣಕ್ಕೆ ಕಿರುಕುಳ ಆರಂಭವಾಯಿತು. ಹೀಗೇ ಮತ್ತೊಂದು ಶಾಲೆಗೆ ಭರ್ತಿಯಾದೆ. ಆದರೆ ಏಳರ ಘಟ್ಟ ಏರುತ್ತಿದ್ದಂತೆ ಫೇಲ್ ಆಗಿ ಹೋದೆ. ಇದು ನನ್ನ ಸೋಲಿನ ಮೊದಲ ಅಧ್ಯಾಯ ಎನ್ನುವುದು ನನಗೆ ತಿಳಿಯದೇ ಹೋದೆ. ನನ್ನ ತಂದೆಗೆ ಐವರು ಮಕ್ಕಳು ತಮ್ಮ ಪಾಡಿಗೆ ಕಲಿತು ಈಗ ಮಂಗಳೂರಿನ ಅಸುಪಾಸಿನಲ್ಲಿ ಬದುಕು ಕಟ್ಟುತ್ತಿದ್ದಾರೆ. ಆದರೆ ನಾನು ಕಲಿಯದೇ ತಂದೆ ಜತೆಯಲ್ಲಿ ಸೇರಿಕೊಂಡೆ. ಅಂದಹಾಗೆ ಅವರೇನು ದೊಡ್ಡ ವೃತ್ತಿಯಲ್ಲಿ ಇರಲಿಲ್ಲ. ಊರೂರು ಸುತ್ತಾಡಿಕೊಂಡು ಅಡುಗೆ ಭಟ್ಟರ ಕೆಲಸ ಮಾಡುತ್ತಿದ್ದರು. ನಾನು ಶಾಲೆ ಬಿಟ್ಟಾಗ ಮಂಗಳೂರಿನ ಬಂದರಿನ ಹತ್ತಿರ ಪುಟ್ಟ ಹೋಟೆಲ್ ತೆರೆದರು. ನಾನು ಅಲ್ಲಿಯೇ ಸೇರಿಕೊಂಡೆ. ಕೆಲವು ಸಮಯ ಹೋಟೆಲ್ ವಹಿವಾಟು ಸಾಧಾರಣ ಮಟ್ಟಿಗೆ ನಡೆಯುತ್ತಿತ್ತು. ಆದರೆ ಹೋಟೆಲ್ ವ್ಯವಹಾರದಲ್ಲಿ ನಮಗೆ ಸಾಕಷ್ಟು ಅನುಭವ ಇರಲಿಲ್ಲ. ಕಾರ್ಮಿಕರೇ ನಮ್ಮನ್ನು ಬೀದಿಗೆ ತಂದರು. ತಂದೆ ಮತ್ತೆ ಅಡುಗೆ ಭಟ್ಟರಾಗಿ ಊರೂರು ಪ್ರಯಾಣ ಮಾಡುತ್ತಿದ್ದರು. ನಾನು ಹನುಮಂತನಂತೆ ಅವರ ಹಿಂದೆ ಬಿದ್ದೆ. ಅವರ ಜತೆಯಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡು ಮುಂದೆ ಬಂದೆ. ಕೆಲವೊಂದು ಸಲ ನನ್ನನ್ನು ಬಾಡಿಗೆ ರೂಂನಲ್ಲಿ ಬಿಟ್ಟು ಹೋಗುತ್ತಿದ್ದರು. ರೂಂನಲ್ಲೂ ತಿನ್ನಲು ಅನ್ನವೊಂದೇ ಇರುತ್ತಿತ್ತು. ಆದರೆ ಅದಕ್ಕೆ ಬೇಕಾದ ಪದಾರ್ಥವಂತೂ ಇರಲಿಲ್ಲ. ಗೆಳೆಯನೊಬ್ಬ ಕಡಿಮೆ ಬೆಲೆಗೆ ಒಣಮೀನು ಬರುತ್ತೆ.. ಒಳ್ಳೆಯ ಭರ್ಜರಿ ಊಟ ಮಾಡಬಹುದು ಎನ್ನುವ ಸಲಹೆಯನ್ನು ಕೊಡುತ್ತಿದ್ದ. ಒಣ ಮೀನು ತಂದು ಬೆಂಕಿಯಲ್ಲಿ ಸುಟ್ಟುಕೊಂಡು ತಿನ್ನುತ್ತಿದ್ದೆ. ಇಲ್ಲಿಂದಲೇ ನಾನು ಮಾಂಸ, ಮೀನು ಎಲ್ಲವನ್ನು ತಿನ್ನಲು ಆರಂಭ ಮಾಡಿದೆ. ಈ ವಿಚಾರಗಳು ಮನೆಯವರಿಗೆ ತಿಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ ತಂದೆ ನಮ್ಮನ್ನು ಬಿಟ್ಟು ಹೋದರು. ನನಗೆ ಕುಟುಂಬ ನಿರ್ವಹಣೆ ಮಾಡಲು ಕೆಲಸಕ್ಕೆ ಹೋಗಲೇ ಬೇಕಿತ್ತು. ನಾನು ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಹತ್ತಿರ ಇರುವ ಜನಸೇವಾ ಸಂಘಕ್ಕೆ ತಿಂಗಳಿಗೆ ೬೫ ರೂಪಾಯಿಯಂತೆ ಸಂಬಳಕ್ಕಾಗಿ ಕೆಲಸಕ್ಕೆ ನಿಂತು ಬಿಟ್ಟೆ. ಅಲ್ಲಿ ರಸಗೊಬ್ಬರ ಕೃಷಿಕರಿಗೆ ಕೊಡುವ ಕೆಲಸ. ತುಂಬಾ ಸಮಯ ಉಳಿಕೆಯಾಗುತ್ತಿತ್ತು. ಇದೇ ಸಮಯದಲ್ಲಿ ಪಕ್ಕದಲ್ಲಿದ್ದ ರಾಮಕಾಂತಿ ಥಿಯೇಟರ್‌ನಲ್ಲಿ ಲಾಡು ಮಾರಾಟ ಮಾಡುತ್ತಿದ್ದೆ. ಥಿಯೇಟರ್ ಮಾಲೀಕರು ನನ್ನ ಕೆಲಸ ಹತ್ತಿರದಿಂದ ನೋಡಿದ್ದರು. ಕೆಲವೊಂದು ಸಲ ಟಿಕೇಟ್ ಗೇಟ್ ಕೀಪರ್ ರಜೆ ಹಾಕುತ್ತಿದ್ದಾಗ ನನ್ನನ್ನು ನೇಮಕ ಮಾಡುತ್ತಿದ್ದರು. ಈ ಹಿಂದೆ ಗೇಟ್ ಕೀಪರ್ ನಿಂತವರೇ ಸಿನಿಮಾಗಳ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದರು. ಇದೇ ರಾಮಕಾಂತಿ ಥಿಯೇಟರ್‌ನಲ್ಲಿದ್ದ ಗೇಟ್ ಕೀಪರ್ ರತ್ನಾಕರ ಶೆಟ್ಟಿ ನನಗೆ ಪೋಸ್ಟರ್ ಅಂಟಿಸುವ ಕೆಲಸಕ್ಕೆ ಬರಲು ಹೇಳಿದರು. ಆಗ ನನಗೆ ಹದಿನೆಂಟರ ಹರೆಯ ಜನಸಂಘದ ಕೆಲಸ ಜತೆಯಲ್ಲಿ ಲಾಡು ಮಾರಾಟ ಮಾಡಿ ಉಳಿದ ಸಮಯದಲ್ಲಿ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದೆ. ಈ ವಿಚಾರ ಬೇರೆ ಥಿಯೇಟರ್‌ನ ಮಾಲೀಕರಿಗೆ ತಿಳಿಯಿತು. ಅವರು ತಮ್ಮ ಥಿಯೇಟರ್‌ಗಳ ಪೋಸ್ಟರ್ ಅಂಟಿಸುವ ಕೆಲಸವನ್ನು ನನಗೆ ಕೊಟ್ಟರು. ಹೀಗೆ ಒಂದೆರಡು ವರ್ಷದಲ್ಲಿ ಮಂಗಳೂರಿನ ೯ಕ್ಕೂ ಅಧಿಕ ಸಿನಿಮಾ ಥಿಯೇಟರ್‌ಗಳ ಪೋಸ್ಟರ್ ಅಂಟಿಸುವ ಕೆಲಸ ನನಗೆ ಬಂತು. ಈ ಹಿಂದೆ ಸಿನಿಮಾ ಪೋಸ್ಟರ್‌ಗಳು ಚೆನ್ನೈ ಹಾಗೂ ಬೆಂಗಳೂರಿನಿಂದ ಸಿನಿಮಾ ವಿತರಕರ ಮೂಲಕ ಪ್ರತಿ ಭಾನುವಾರ ಮಂಗಳೂರು ಬಂದು ಸೇರುತ್ತಿತ್ತು. ಒಂದೆರಡು ಸಾವಿರ ಸಿನಿಮಾ ಪೋಸ್ಟರ್‌ಗಳನ್ನು ಸೈಕಲ್‌ನ ಹಿಂಬದಿಯ ಕೇರಿಯರ್‌ನಲ್ಲಿ ಇಟ್ಟುಕೊಂಡು ಬೆಳಗ್ಗಿನ ಜಾವ ಮೂರರಿಂದ ರಾತ್ರಿ ಹತ್ತರ ತನಕ ನಿರಂತರ ಸೈಕಲ್‌ನಲ್ಲಿ ೨೫೦ರಿಂದ ೩೦೦ ಕಿ.ಮೀ ಪ್ರಯಾಣ ಮಾಡುತ್ತಿದ್ದೆ. ದೇಹ ತಣಿದಾಗ ಎಲ್ಲಿ ಜಾಗ ಸಿಗುತ್ತೋ ಅಲ್ಲಿಯೇ ಮಲಗಿ ಹೋಗುತ್ತಿದ್ದೆ. ಯಾರೋ ಬಂದು ಎಬ್ಬಿಸಿದಾಗ ಎಚ್ಚರಗೊಂಡು ಮತ್ತೆ ಸೈಕಲ್ ಏರಿ ಹೋಗುತ್ತಿದ್ದೆ. ಹೀಗೆ ಪ್ರತಿ ಸೋಮವಾರದಿಂದ ಗುರುವಾರ ತನಕ ಪೋಸ್ಟರ್ ಅಂಟಿಸುತ್ತಾ ಶುಕ್ರವಾರ ಮಂಗಳೂರು ಮುಟ್ಟುತ್ತಿದ್ದೆ. ಹೀಗೆ ನೂರಾರು ಕಿ.ಮೀ ಸೈಕಲ್ ಪ್ರಯಾಣದಿಂದ ದೇಹ ತೀರಾ ದಣಿಯುತ್ತಿತ್ತು. ಊಟವಂತೂ ಸೇರುತ್ತಿರಲಿಲ್ಲ. ದೇಹದ ನೋವು ಮರೆಯಲು ಕುಡಿಯಲು ಆರಂಭ ಮಾಡಿದೆ. ನೈಂಟಿ ಹಾಕಿಯೇ ಸೈಕಲ್ ಏರುತ್ತಿದ್ದೆ. ಅಂದಹಾಗೆ ಪೋಸ್ಟರ್ ಅಂಟಿಸುವ ಕಾಯಕದಿಂದ ದೊಡ್ಡ ಮೊತ್ತವೇನೂ ಬರುತ್ತಿರಲಿಲ್ಲ. ಆದರೆ ಕುಟುಂಬ ನಿರ್ವಹಣೆ ಆಗಿ ಹೋಗುತ್ತಿತ್ತು. ನನ್ನ ಕುಡಿತದಿಂದ ಬಂದ ಹಣವೆಲ್ಲ ಶರಾಬು ಅಂಗಡಿ ಸೇರುತ್ತಿತ್ತು. ಒಂದು ಪೋಸ್ಟರ್‌ಗೆ ೧೨ ಪೈಸೆಯಿಂದ ಆರಂಭವಾಗಿ ಈಗ ಒಂದು ರೂಪಾಯಿಗೆ ಬಂದು ನಿಂತಿದೆ. ಆದರೂ ಮೈಲುತುತ್ತು, ರತಲ್ ಪೌಡರ್, ಮೈದಾ ಅವುಗಳನ್ನು ಒಟ್ಟಿಗೆ ಸೇರಿಸಲು ಬೇಕಾದ ಬೆಂಕಿ ಹೊತ್ತಿಸಲು ಕಟ್ಟಿಗೆ ಎಲ್ಲವೂ ಸೇರಿದಾಗ ಲಾಭವೇ ಇಲ್ಲ. ಆದರೂ ಅದೊಂದು ವೃತ್ತಿ. ಅರೆಹೊಟ್ಟೆಯನ್ನಾದರೂ ತುಂಬಿಸಿ ಬಿಡುತ್ತದೆ ಎನ್ನುವ ಧೈರ್ಯದಿಂದ ಕಳೆದ ೪೦ ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಈ ಪೋಸ್ಟರ್ ವೃತ್ತಿಯಲ್ಲಿ ನನಗೆ ಬಹಳಷ್ಟು ಕಹಿ ಘಟನೆಗಳು ಬಂದು ಹೋಗಿದೆ. ಒ ಂದು ಬಾರಿ ವಾರವಿಡೀ ಕರಾವಳಿಯನ್ನು ಸುತ್ತಾಡಿಕೊಂಡು ಪೋಸ್ಟರ್ ಅಂಟಿಸಿದೆ. ಆದರೆ ಶುಕ್ರವಾರ ಈ ಸಿನಿಮಾದ ಬದಲು ಬೇರೆ ಸಿನಿಮಾ ಹಾಕಿದ್ರು.. ನನಗಂತೂ ಹಣ ಬಂತು. ಆದರೆ ನನ್ನ ಕೆಲಸ ಹಾಳಾಗಿ ಹೋಗಿತ್ತು. ಕೆಲವೊಂದು ಮಂದಿ ತಮ್ಮ ಗೋಡೆಗಳಿಗೆ ಪೋಸ್ಟರ್ ಅಂಟಿಸಬಾರದು ಎನ್ನುವ ಕಾರಣಕ್ಕೆ ಗೋಡೆಯಲ್ಲಿ ಮೊಳೆ ಬಡಿದು ಬಿಡುತ್ತಿದ್ದರು. ಬೆಳಗ್ಗಿನ ಜಾವದ ಮಂಪರು ಕಣ್ಣಿನಲ್ಲಿ ಪೋಸ್ಟರ್ ಅಂಟಿಸಲು ಹೋದಾಗ ಮೊಳೆ ಕೈಗೆ ತಗುಲಿ ರಕ್ತ ಹರಿದ ಘಟನೆಗಳು ಬೇಕಾದಷ್ಟಿವೆ. ಮೈಲುತುತ್ತು, ಮೈದಾ, ರತಲ್ ಪೌಡರ್‌ನಿಂದ ಈ ರಕ್ತ ಮರೆಯಾಗುತ್ತಿತ್ತು. ಈ ವೃತ್ತಿಯಲ್ಲಿ ನಾಲ್ಕೈದು ಸಲ ಏಣಿಯಲ್ಲಿ ಏರಿ ಪೋಸ್ಟರ್ ಅಂಟಿಸುತ್ತಿದ್ದಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದೇನೆ. ಒಂದಲ್ಸವಂತೂ ೧೮ ಅಡಿಯಿಂದ ಕೆಳಗೆ ಬಿದ್ದು ಬಿಟ್ಟೆ. ಏನಾಯಿತು ಎನ್ನೋದು ನನಗೂ ಅರಿವಿಗೆ ಬಂದಿರಲಿಲ್ಲ. ಸೀದಾ ಸೈಕಲ್ ಏರಿಕೊಂಡು ಶರಾಬು ಅಂಗಡಿಗೆ ಹೋಗಿ ನೈಂಟಿ ಏರಿಸಿ ಮನೆಗೆ ಹೋದೆ. ಆದರೆ ನೋವು ಜಾಸ್ತಿಯಾಯಿತು. ೧೦೮ಕ್ಕೆ ಕರೆ ಮಾಡಿ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಾದೆ. ಈ ಸಂದರ್ಭದಲ್ಲಂತೂ ಯಾವ ಥಿಯೇಟರ್ ಮಾಲೀಕನೂ ನನ್ನ ನೆರವಿಗೆ ಬರಲಿಲ್ಲ. ಕೆಲವು ಥಿಯೇಟರ್ ಮಾಲೀಕರು ಅಂಟಿಸಿದ ಪೋಸ್ಟರ್‌ಗಳಿಗೆ ಹಣ ಕೊಡದೇ ಮೋಸ ಮಾಡಿದ್ರು.. ಮತ್ತೊಂದೆಡೆ ನನ್ನ ತಾಯಿ ಕೈ ಬಿಟ್ಟು ಹೋದರು. ನನಗೆ ಮದುವೆಯಾಯಿತು. ನಾಲ್ಕು ಮಕ್ಕಳಾದರು. ನಂಬಿಕೆ ಇಟ್ಟು ಮಾಡಿದ ಸಿನಿಮಾ ಪೋಸ್ಟರ್‌ಗಳಿಂದ ನನ್ನ ಬದುಕು ಸೀದಾ ಆಗಲೇ ಇಲ್ಲ. ಇದ್ದ ಬದುಕು ಮೂರಾಬಟ್ಟೆಯಾಗಿ ಮೂಲೆಗೆ ಬಿತ್ತು. ಅದಕ್ಕೆ ಈಗ ಅದನ್ನು ಬಿಟ್ಟು ಬೇರೆ ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ಮಾಡುತ್ತಿದ್ದೇನೆ. ಮಗನೊಬ್ಬ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈಗಲೂ ಕೆಲವೊಂದು ಸಿನಿಮಾ ನಿರ್ಮಾಪಕರೇ ಬಂದು ಪೋಸ್ಟರ್ ಅಂಟಿಸಿ ಎಂದಾಗ ಎದ್ದು ಹೋಗುತ್ತೇನೆ. ಸುಣ್ಣ ಬಳಿದ ಶುಭ್ರ ಗೋಡೆಗಳು ಪೋಸ್ಟರ್‌ಗಾಗಿ ಕಾದು ಕೂತಿದೆ ಎನ್ನುವ ಭ್ರಮೆಯಲ್ಲಿಯೇ ಪೋಸ್ಟರ್ ಅಂಟಿಸಿಕೊಂಡು ಬರುತ್ತೇನೆ. ಅಲ್ಲಿ ಹುಟ್ಟಿದ ಹಣ ಮತ್ತೆ ಶರಾಬು ಅಂಗಡಿ ಸೇರಿ ಬಿಡುತ್ತದೆ. ಹೀಗೆ ಬದುಕು ನನ್ನ ಬದುಕು ಹರಿದ ಪೋಸ್ಟರ್‌ನಂತೆ ಯಾವಾಗಲೂ ಕಣ್ಣಿಗೆ ಬಡಿಯುತ್ತದೆ. ..... ಮಾತು : ವೆಂಕಟೇಶ ಭಟ್ಟ ನಿರೂಪಣೆ: ಸ್ಟೀವನ್ ರೇಗೊ, ದಾರಂದಕುಕ್ಕು (ಇದು ವಿಜಯ ಕರ್ನಾಟಕದ ಹೆಮ್ಮೆಯ ಅಂಕಣವಾದ ‘ಬದುಕು ಜಟಕಾ ಬಂಡಿ’ಯಲ್ಲಿ ೨೫.೦೭.೨೦೧೩ ಪ್ರಕಟವಾದ ಲೇಖನ)

Monday, June 17, 2013

ಫ್ಯಾಶನ್ ಖಾನ್ ಸಮೀರ್ ಖಾನ್

* ಸ್ಟೀವನ್ ರೇಗೊ ಇದು ತೀರಾ ಹಳ್ಳಿ ಏರಿಯಾ..ಪುತ್ತೂರು ಸಿಟಿಯಿಂದ ಬರೋಬರಿ 9 ಕಿ.ಮೀ. ದೂರದಲ್ಲಿದ್ದರೂ ಇಲ್ಲಿಗೆ ಇಂದಿಗೂ ಏಳೆಂಟು ಖಾಸಗಿ ಬಸ್‌ಗಳಲ್ಲೇ ಮೈ ಮುರಿದುಕೊಂಡು ಬರುವ ಜನರಿದ್ದಾರೆ. ಮೊಬೈಲ್ ಎನ್ನುವ ಮಾಂತ್ರಿಕ ಕೂಡ ಇಲ್ಲಿಗೆ ಬಂದಾಗ ಮೌನವಾಗಿ ಬಿಡುತ್ತಾನೆ. ಎಲ್ಲಕ್ಕೂ ಮುಖ್ಯವಾಗಿ ಕೃಷಿ, ತೋಟಗಾರಿಕೆಯ ನಡುವೆ ದಿನ ಕಳೆದು ಬಿಡುವ ಕೃಷಿಕರೇ ಈ ಊರಿನ ಗತ್ತಿನ ವಿಷಯ. ಅಂದಹಾಗೆ ಇದು ಪುತ್ತೂರಿನಿಂದ ಪಾಣಾಜೆ ಕಡೆ ಸಾಗುವ ಬುಲೇರಿಕಟ್ಟೆ ಎನ್ನುವ ಹಳ್ಳಿಯ ಮಾತು. ಇದೇ ತೋಟ, ಗದ್ದೆಯಲ್ಲಿ ಓಡಾಡಿಕೊಂಡು ಸರಕಾರಿ ಶಾಲೆಯಲ್ಲಿ ಓದಿದ ಇದೇ ಊರಿನ ಹುಡುಗನೊಬ್ಬ ಫ್ಯಾಶನ್ ಲೋಕದಲ್ಲಿ ದೊಡ್ಡ ಬ್ರಾಂಡ್ ಎಂದರೆ ಯಾರಾದರೂ ನಂಬಲು ಸಾಧ್ಯವಿಲ್ಲ. ಹತ್ತನೇ ತರಗತಿ ನೇಮ್ ಪ್ಲೇಟ್ ನೋಡಿದಾಕ್ಷಣ ಶಿಕ್ಷಣಕ್ಕೆ ಗುಡ್‌ಬಾಯ್ ಹೇಳಿ ಬೆಂಗಳೂರಿಗೆ ಓಡಿಬಂದ ಹುಡುಗನೊಬ್ಬ ಈಗ ಫ್ಯಾಶನ್ ಲೋಕದಲ್ಲಿ ಗುರುವಾಗಿ ಹೊರಬಂದಿದ್ದಾನೆ. ಇದು ಸಮೀರ್ ಖಾನ್ ಎನ್ನುವ ಫ್ಯಾಶನ್ ಕೊರಿಯೋಗ್ರಾಫರ್ ಫ್ಲಾಶ್‌ಬ್ಯಾಕ್. ಬುಲೇರಿಕಟ್ಟೆ ಎನ್ನುವ ಹಳ್ಳಿ ಶಾಲೆಯ ಕೋಣೆಯ ಬೆಂಚಿನಲ್ಲಿ ಕೂತು ಫಸ್ಟ್ ಕ್ಲಾಸ್ ರಿಸಲ್ಟ್ ತರುತ್ತಿದ್ದ ಹುಡುಗನಿಗೆ ಫ್ಯಾಶನ್ ಲೋಕದಲ್ಲಿ ಏನೋ ಸಾಧಿಸಬೇಕೆನ್ನುವ ಕಿಚ್ಚಿತ್ತು. ಬೆಂಗಳೂರಿಗೆ ಬಂದವರೇ ಹೋಟೆಲೊಂದರಲ್ಲಿ ವೃತ್ತಿ ಹಿಡಿದರು. ಅಲ್ಲಿಗೆ ಬರುತ್ತಿದ್ದ ಫ್ಯಾಶನ್ ಲೋಕದವರ ಟಚ್‌ನಿಂದಾಗಿ ಆಗಾಗ ರ‌್ಯಾಂಪ್‌ವಾಕ್, ಪ್ರಾಡಕ್ಟ್‌ಗಾಗಿ ಮೊಡೆಲಿಂಗ್ ಮಾಡುತ್ತಾ ಫ್ಯಾಶನ್ ಲೋಕದ ಬಾಗಿಲುಬಡಿದರು. ಇದು ಫ್ಯಾಶನ್ ಲೋಕದಲ್ಲಿ ಸಮೀರ್ ಖಾನ್ ಎಂಟ್ರಿಯಾದ ಪುಟ್ಟ ಕತೆ. ಎರಡು ಮೂರು ವರ್ಷ ಫ್ಯಾಶನ್ ಲೋಕದಲ್ಲಿ ಮೊಡೆಲ್ ಆಗಿ ಗುರುತಿಸಿಕೊಂಡ ಸಮೀರ್ ಈ ನಂತರ ನಡೆದದ್ದೇ ಹಾದಿ ಎನ್ನುವ ಕತೆಯಾಯಿತು. 2004ರಲ್ಲಿ ಫ್ಯಾಶನ್ ಲೋಕದಲ್ಲಿ ರಾರಾಜಿಸುವ ಮೊಡೆಲ್‌ಗಳನ್ನು ಬೆಳೆಸುವ 'ಎಲೈಟ್ ಮೊಡೆಲ್ ಫ್ಲಾಟ್' ಎನ್ನುವ ಕಂಪನಿಯೊಂದನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿದ ಸಮೀರ್ ಈ ಮೂಲಕ ಸರಿಸುಮಾರು 400ಕ್ಕೂ ಅಧಿಕ ಫ್ಯಾಶನ್ ಶೋಗಳಿಗೆ ಫ್ಯಾಶನ್ ಕೊರಿಯೋಗ್ರಾಫರ್, ಗ್ರೂಮರ್ ಆಗಿ ಕೆಲಸ ಮಾಡಿದರು. 1000ಕ್ಕೂ ಅಧಿಕ ಮೊಡೆಲ್‌ಗಳಿಗೆ ತರಬೇತಿ ಕೊಟ್ಟು ಫ್ಯಾಶನ್ ಲೋಕದಲ್ಲಿ ಬಿಂದಾಸ್ ರ‌್ಯಾಂಪ್‌ವಾಕ್‌ಗೆ ಇಳಿಸಿಬಿಟ್ಟರು. ಈ ಬಳಿಕ ದೇಶದ ಖ್ಯಾತ ಫ್ಯಾಶನ್ ಶೋಗಳಾದ ಮಿಸ್ ಕ್ವೀನ್ ಆಫ್ ಇಂಡಿಯಾ, ಮಿಸ್ ಸೌತ್ ಇಂಡಿಯಾ ಮೊದಲಾದವುಗಳಲ್ಲಿ ಸಮೀರ್ ಹೆಸರು ನಿಲುಕಾಡುತ್ತದೆ. ಹೊಸ ಮೊಡೆಲ್‌ಗಳಿಗೆ ರ‌್ಯಾಂಪ್ ಮೇಲೆ ನಡೆಯುವುದು, ಫೋಕಸಿಂಗ್, ಅವರ ವರ್ತನೆ, ಮಾತನಾಡುವ ಕಲೆ, ಕ್ಯಾಮಾರಾ ಎಕ್ಸ್‌ಪ್ರೆಶನ್, ಮೈಕ್ ಹಿಡಿಯುವ ರೀತಿ, ಪಾರ್ಟಿ ಬಿಹೇವಿಯರ್ ಹೀಗೆ ನಾನಾ ವಿಚಾರಗಳಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುತ್ತದೆ. ಇದು ಮಾಡೆಲ್‌ಗಳಿಗೆ ಆ ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಕೊಡುವ ಬಗೆ. ಆದರೆ ಈ ಎಲ್ಲ ಕೆಲಸಗಳ ನಡುವೆ ಸಮೀರ್ ಎನ್ನುವ ಫ್ಯಾಶನ್ ಕಲಾವಿದ ಎಲ್ಲೋ ಮರೆಯಾಗುತ್ತಾರೆ. ಆತನ ಫ್ಯಾಶನ್ ಲೋಕದ ತರಬೇತಿಗಳು ಎಲ್ಲರ ಗಮನ ಸೆಳೆಯುತ್ತಾ ಹೋದರು ಸಮೀರ್ ಮಾತ್ರ ವೇದಿಕೆಯ ಹಿಂದೆ ಉಳಿದು ಬಿಡುತ್ತಾರೆ. 'ಫ್ಯಾಶನ್ ಎನ್ನೋದು ನನ್ನ ಆತ್ಮ. ಅಲ್ಲಿನ ಸಣ್ಣ ಪುಟ್ಟ ತಪ್ಪುಗಳು ನನ್ನನ್ನು ಕುಗ್ಗಿಸಿ ಬಿಡುತ್ತದೆ. ಎಲ್ಲವೂ ಪರ್‌ಫೆಕ್ಟ್ ಆಗಬೇಕೆಂದರೆ ತರಬೇತಿ ಪರ್‌ಫೆಕ್ಟ್ ಆಗಿರಬೇಕು. ಅದಕ್ಕೆ ತಕ್ಕಂತೆ ರ‌್ಯಾಂಪ್ ಮೇಲೆ ಕೂಡ ಅದನ್ನೇ ಬಯಸುತ್ತೇನೆ' - ಸಮೀರ್ ಖಾನ್, ಫ್ಯಾಶನ್ ಕೊರಿಯೋಗ್ರಾಫರ್ vk lvk published dis article on 18.06.2013)

Saturday, June 8, 2013

ತೆಪ್ಪದಲ್ಲಿ ‘ಮೌನ’ವಾದ ಬದುಕು !

ಇವರು ಮರಾಠಿ ಜನಾಂಗದವರು. ಕೂಳೂರಿನಲ್ಲಿ ಹರಿಯುತ್ತಿರುವ ಗುರುಪುರ ನದಿಯೇ ಇವರ ಪಾಲಿಗೆ ಮೂಲ ಬಂಡವಾಳ. ಈ ಹರಿಯುವ ನದಿಯಲ್ಲಿರುವ ಮೀನುಗಳೇ ಇವರಿಗೆ ಆದಾಯ. ತೆಪ್ಪವೇ ಇವರಿಗೆ ಬದುಕುವ ಊರು ಗೋಲು. * ಸ್ಟೀವನ್ ರೇಗೊ, ದಾರಂದಕುಕ್ಕು ತೆಪ್ಪ ಇವರ ಪಾಲಿಗೆ ನದಿ ದಾಟುವ ಸಾಧನವಲ್ಲ. ಅದೊಂದು ಬದುಕು ಕೊಡುವ ದೇವರು. ವರ್ಷವಿಡೀ ಈ ತೆಪ್ಪದಲ್ಲಿಯೇ ಕಾಲ ಕಳೆಯುತ್ತಾ ಇರುವ ಇವರಿಗೆ ತೆಪ್ಪ, ನೀರು, ಮೀನು ಈ ಮೂರು ವಿಚಾರಗಳಲ್ಲಿಯೇ ಬದುಕಿನ ಲೆಕ್ಕಚಾರಗಳು ನಡೆಯುತ್ತದೆ. ಇದರಲ್ಲಿ ಒಂದು ಕೂಡ ಕಡಿಮೆಯಾದರು ಬದುಕು ಮೂರಾಬಟ್ಟೆಯಾಗಿ ಹೋಗುತ್ತದೆ. ಇದೇ ಕಾರಣದಿಂದ ಕಳೆದ ೩೦-೪೦ ವರ್ಷಗಳಿಂದ ತೆಪ್ಪವನ್ನು ಬಿಟ್ಟು ಅವರು ಬದುಕೇ ಕಂಡಿಲ್ಲ. ಅಜ್ಜ, ಮಗ, ಮೊಮ್ಮಗ ಎನ್ನುವ ಸರಣಿಮಾಲಿಕೆಯೊಳಗೆ ಇವರದು ನದಿಯನ್ನು ನಂಬಿಕೊಂಡು ಕಾಲ ಕಳೆಯುವ ಪರಂಪರೆ. ಅಂದಹಾಗೆ ಇವರು ಮರಾಠಿ ಜನಾಂಗದವರು. ಕೂಳೂರಿನಲ್ಲಿ ಹರಿಯುತ್ತಿರುವ ಗುರುಪುರ ನದಿಯೇ ಇವರ ಪಾಲಿಗೆ ಮೂಲ ಬಂಡವಾಳ. ಈ ಹರಿಯುವ ನದಿಯಲ್ಲಿರುವ ಮೀನುಗಳೇ ಇವರಿಗೆ ಆದಾಯ. ತೆಪ್ಪವೇ ಇವರಿಗೆ ಬದುಕುವ ಊರು ಗೋಲು. ಇವರು ಮೂಲತಃ ಚಿಕ್ಕಮಗಳೂರಿನ ಕಡೂರಿನಿಂದ ಮಂಗಳೂರಿಗೆ ವಲಸೆ ಬಂದವರು. ಅಲ್ಲಿಯ ಸಣ್ಣಪುಟ್ಟ ಕೃಷಿ ಭೂಮಿಯನ್ನು ಬಿಟ್ಟು ಇವರು ಗುರುಪುರದ ನದಿ ನೀರನ್ನು ನೆಚ್ಚಿಕೊಂಡರು. ಇಲ್ಲಿಯ ನೀರು ಇವರ ಕೈ ಬಿಡಲಿಲ್ಲ. ಬದುಕು ರೂಪಿಸಿ ಹಾಕಿತು ಎನ್ನುವುದು ಮರಾಠಿ ಜನಾಂಗದವರ ಅನುಭವದ ಮಾತು. ಮರಾಠವಾಡದಲ್ಲಿ ಶಿವಾಜಿ ಆಳ್ವಿಕೆಯಲ್ಲಿ ನಮ್ಮ ಪೂರ್ವಿಕರು ಮಹಾರಾಷ್ಟ್ರದಿಂದ ಚಿಕ್ಕಮಗಳೂರು ಕಡೆಗೆ ಬಂದರು. ಮರಾಠವಾಡದ ಕಾರಣ ಮರಾಠಿ ನಮ್ಮ ಜನಾಂಗದ ಮಾತೃಭಾಷೆಯಾಗಿ ಉಳಿದು ಹೋಯಿತು. ೩೦-೪೦ ವರ್ಷಗಳಿಂದ ಮಂಗಳೂರಿನಲ್ಲೇ ಬದುಕುತ್ತಿದ್ದೇವೆ. ಆಗಾಗ ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದೇವು. ಆದರೆ ಕಳೆದ ೨೦ ವರ್ಷಗಳಿಂದ ನಾವು ಇಲ್ಲಿಯೇ ವಾಸವಾಗಿದ್ದೇವೆ ಎನ್ನುತ್ತಾರೆ ಮರಾಠಿ ಜನಾಂಗದ ಪಕೀರಪ್ಪ. ಭದ್ರಾವತಿಯ ತೆಪ್ಪ, ಕುಡ್ಲದ ಬಲೆ : ಮರಾಠಿ ಜನಾಂಗದ ಕರಿಸ್ವಾಮಿ ಹೇಳುವ ಮಾತು ಹೀಗೆ : ನಮಗೆ ಬೇಕಾದ ತೆಪ್ಪಗಳು ಇಲ್ಲಿ ಎಲ್ಲೂ ಸಿಗೋಲ್ಲ. ಕುಡ್ಲದಲ್ಲಿ ಬಹಳಷ್ಟು ಕಡೆ ಹುಡುಕಾಡಿದೇವು.. ಆದರೆ ತೆಪ್ಪ ಬದಲು ಬೋಟ್ ಮಾಡಿ ಕೋಡ್ತೀವಿ ಅಂತಾ ಹೇಳುತ್ತಾರೆ. ಇದು ನಮ್ಮ ವೃತ್ತಿಗೆ ಸರಿ ಆಗೋದಿಲ್ಲ. ಇದರಿಂದ ಭದ್ರಾವತಿಯಿಂದ ನಾಲ್ಕೈದು ಸಾವಿರ ರೂ. ಕೊಟ್ಟು ತೆಪ್ಪ ತರುತ್ತೇವೆ. ಮೂರು ಸಾವಿರ ರೂ ಕೊಟ್ಟು ಇಲ್ಲಿಯೇ ಬಲೆ ಸಿದ್ಧ ಪಡಿಸುತ್ತೇವೆ. ಜನಾಂಗದ ಅಣ್ಣಯ್ಯ ಹೇಳುವಂತೆ: ಈ ಮೀನು ವ್ಯಾಪಾರದಲ್ಲಿ ಕೆಲವೊಂದು ಸಲ ಲಾಭ ಬಂದರೆ ಬಹಳಷ್ಟು ಸಲ ನಷ್ಟವೇ ಬಂದು ಹೋಗುತ್ತದೆ. ನೀರಿನ ಹರಿವಿನ ಅಂದಾಜು ಲೆಕ್ಕಚಾರದಲ್ಲಿ ಮೀನುಗಾರಿಕೆಗೆ ಇಳಿಯಬೇಕು. ಒಂದೊಂದು ಬಾರಿ ಎರಡು- ಮೂರು ಸಾವಿರ ಬಂದರೆ ಇನ್ನು ಕೆಲವು ಸಲ ಐನೂರು ರೂ. ಮೀನುಗಳಲ್ಲಿ ತೃಪ್ತಿ ಕಾಣಬೇಕು. ಎಲ್ಲವೂ ಮಲ್ಲಮ್ಮ ದೇವಿಯನ್ನು ನಂಬಿಕೊಂಡು ಮೀನುಗಾರಿಕೆಗೆ ಇಳಿಯುತ್ತೇವೆ. ಹತ್ತಿರದ ಮಾರುಕಟ್ಟೆಯಲ್ಲಿ ನದಿ ಮೀನುಗಳಿಗೆ ಬಾರಿ ಡಿಮ್ಯಾಂಡ್ ಇರುತ್ತದೆ. ಹೆಚ್ಚಾಗಿ ತೇಡೆ ಮೀನು, ಬೆರಕ್ಕೆ ಮೀನುಗಳೇ ಜಾಸ್ತಿ ಬಂದು ಬೀಳುತ್ತದೆ. ತೆಪ್ಪದವರಿಗೆ ಸವಲತ್ತುಗಳು ಗಗನ ಕುಸುಮ : ಮಳೆ, ಬಿಸಿಲು, ಚಳಿ ಈ ಮೂರು ಕಾಲದಲ್ಲೂ ಮೀನುಗಾರಿಕೆಯಂತೂ ನಿಲ್ಲಿಸೋದೇ ಇಲ್ಲ. ಎಷ್ಟೇ ಜೋರಾಗಿ ಮಳೆ ಬಂದರೂ ತೆಪ್ಪ ನದಿಗೆ ಬಿಟ್ಟು ಮೀನು ಹಿಡಿಯುತ್ತೇವೆ. ಎಲ್ಲವೂ ದೇವರ ಮೇಲೆ ಭಾರ. ಬದುಕು ಕೊಡುವವನು ಅವನು... ಬದುಕು ಕಿತ್ತುಕೊಳ್ಳೋವವನು ಅವನು...ಎನ್ನುವ ಮಾತಿನಲ್ಲೇ ನಮಗೆ ನಂಬಿಕೆ ಎನ್ನುತ್ತಾರೆ ಪಕೀರಪ್ಪ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಈ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಶಾಲೆಗೆ ಹೋದವರು ಬಹಳ ಕಡಿಮೆ. ಎಲ್ಲರೂ ಎರಡು- ಮೂರು ತರಗತಿಯಲ್ಲೇ ಶಾಲೆ ಬಿಟ್ಟು ಮೀನು ಹಿಡಿಯುವ ಕಸಬಿಗೆ ಅಂಟಿಕೊಂಡರು ಎನ್ನುವುದು ಕರಿಸ್ವಾಮಿಯ ಮಾತು. ರೇಷನ್ ಕಾರ್ಡ್, ಮತದಾನದ ಹಕ್ಕು ಹೀಗೆ ಸರಕಾರದಿಂದ ಸಿಗುವ ಯಾವುದೇ ಸವಲತ್ತುಗಳು ಇವರನ್ನು ಹರಸಿಕೊಂಡು ಬಂದಿಲ್ಲ. ನಾವು ಇದ್ದೇವೆ ಎನ್ನುವುದಕ್ಕೂ ನಮ್ಮ ಬಳಿಯಲ್ಲಿ ದಾಖಲೆಗಳೇ ಇಲ್ಲ. ಆದ್ರೂ ನಾವು ಬೇಡಿಕೊಂಡು ಎಲ್ಲಿಗೂ ಹೋಗೋದಿಲ್ಲ. ನಮಗೆ ದೇವರು ದುಡಿಯಲು ಶಕ್ತಿ ಕೊಟ್ಟಿದ್ದಾನೆ. ಇದೇ ನಮಗೆ ದೊಡ್ಡ ಕೊಡುಗೆ ಎಂದು ಬಿಡುತ್ತಾರೆ ಪಕೀರಪ್ಪ. ಟೋಟಲಿ ತೆಪ್ಪದಲ್ಲಿ ಅರಳುವ ಇವರ ಬದುಕು ಒಂದು ರೋಚಕತೆ ನಡುವೆ ನೋಡುಗರನ್ನು ಮೌನಕ್ಕೆ ಶರಣು ಹೊಡೆಯುವಂತೆ ಮಾಡಿ ಬಿಡುತ್ತದೆ. ಎಲ್ಲಕ್ಕೂ ಸರಕಾರವೇ ಮಾಡಬೇಕು ಎನ್ನುವ ಮಾತಿನಲ್ಲೇ ಬದುಕುವ ಸಮಾಜಕ್ಕೆ ಈ ಮೀನುಗಾರರು ಭಿನ್ನತೆಯ ಪಾಠ ಹೇಳಿಕೊಡುತ್ತಾರೆ. ಸಿನಿಮಾ ಅಂದ್ರೆ ಪಂಚಪ್ರಾಣ: ಕನ್ನಡ, ಹಿಂದಿ ಸಿನಿಮಾಗಳೆಂದರೆ ನಮ್ಮವರಿಗೆ ಪಂಚಪ್ರಾಣ. ಮನೆಯಲ್ಲಂತೂ ಟಿವಿ ಇಲ್ಲ ಎಲ್ಲವೂ ಎಫ್‌ಎಂಗಳಿಗೆ ಮೊರೆ ಹೋಗುತ್ತೇವೆ. ದಿನಕ್ಕೆರಡು ಬಾರಿ ನದಿಗೆ ಇಳಿದರೆ ಉಳಿದ ಸಮಯ ಎಲ್ಲವೂ ನಮಗೆ ಫ್ರಿಯಾಗಿ ಹಾಡು ಕೇಳುತ್ತಾ ಬದುಕು ದೂಡುತ್ತೇವೆ. ಪೋಸ್ಟರ್‌ಗಳನ್ನು ನೋಡುತ್ತಾ ಸಿನಿಮಾಗಳನ್ನು ಆಯ್ಕೆ ಮಾಡುವ ನಾವು ಶಿವರಾಜ್ ಕುಮಾರ್ ನಟಿಸಿದ ಗಡಿಬಿಡಿ ಅಳಿಯದಲ್ಲಿ ನಟಿಸಿದ್ದೇವೆ ಎನ್ನುತ್ತಾರೆ ಪಕೀರಪ್ಪ. (vk nammkaravali published dis story on 9.06.2013) ................

Monday, June 3, 2013

ತುಳು ಫಿಲಂಗೆ ರಮೇಶ್‌

ಸ್ಟೀವನ್ ರೇಗೊ ವರ್ಷದಲ್ಲಿ ಒಂದೆರಡು ಚಿತ್ರಗಳಿಗೆ ಸುಮ್ಮನಾಗುತ್ತಿದ್ದ ಕೋಸ್ಟಲ್‌ವುಡ್‌ನಲ್ಲಿ ಈಗ ಭರ್ಜರಿ ಫಸಲಿನ ಕಾಲ ಬಂದಿದೆ. ಮತ್ತೊಂದೆಡೆ ತುಳು ಚಿತ್ರದಲ್ಲಿ ನಟಿಸಲು ಸ್ಯಾಂಡಲ್‌ವುಡ್ ನಟ, ನಟಿಯರು ಮುಂದೆ ಬರುತ್ತಿರುವುದು ಕೋಸ್ಟಲ್‌ವುಡ್ ಮಾರುಕಟ್ಟೆ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ 'ನಿರೆಲ್'( ನೆರಳು) ಚಿತ್ರದಲ್ಲಿ ಪಂಚಭಾಷೆ ನಟ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ಪ್ರಬುದ್ಧ ನಟನೆ ಮೂಲಕ ಖ್ಯಾತಿಗಳಿಸಿರುವ ರಮೇಶ್ ಅರವಿಂದ್‌ಗೆ ಇದು ಮೊದಲ ತುಳು ಚಿತ್ರ. ತುಳು ಭಾಷೆಯಲ್ಲೂ ಇದೊಂದು ಉತ್ತಮ ಪ್ರಯೋಗ ಎನ್ನುತ್ತಿದೆ ಚಿತ್ರತಂಡ. ನಿರೆಲ್ ಚಿತ್ರದ ಬಹುಭಾಗ ಚಿತ್ರೀಕರಣಗೊಳ್ಳುತ್ತಿರುವುದು ವಿದೇಶದ ರಮಣೀಯ ತಾಣಗಳಲ್ಲಿ. ಈ ಕಾರಣದಿಂದ ತುಳುವಿನ ಮೊದಲ ಹಾಗೂ ಭರ್ಜರಿ ವೆಚ್ಚದ ಚಿತ್ರ ಎನ್ನುವ ಹಣೆಪಟ್ಟಿ ಈ ಚಿತ್ರಕ್ಕೆ ದೊರಕಿದೆ. ಬಹುತೇಕ ಚಿತ್ರೀಕರಣ ದುಬೈನಲ್ಲಿ ನಡೆಯಲಿದೆ. ಮಂಗಳೂರಿನ ಬಜಪೆಯ ರಂಜಿತ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ದುಬಾಯಿಯಲ್ಲಿ ಕೆಲಸ ಮಾಡುತ್ತಿರುವ ರಂಜಿತ್ ಪಾಲಿಗೆ ಇದು ಮೊದಲ ಚಿತ್ರ. ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಶೋಧನ್ ಪ್ರಸಾದ್ ವಹಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶನದ ಹೊಣೆಯನ್ನು ಅಭಿಷೇಕ್ ಹಾಗೂ ಚಿತ್ರದಲ್ಲಿ ಮಂಗಳೂರು ಮೂಲದ ರೂಪದರ್ಶಿ ರಿಯಾ ಡಿಸೋಜ, ದೀಪ್ತಿ, ಅನೂಪ್, ವರುಣ್ ಶೆಟ್ಟಿ ಅಭಿನಯಿಸಲಿದ್ದಾರೆ. ಚಿತ್ರ ಈ ವರ್ಷದ ಕೊನೆ ಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನೋದು ಚಿತ್ರತಂಡದ ಮಾತು. 'ನಿರೆಲ್ ಚಿತ್ರದಲ್ಲಿ ನನ್ನ ಪಾತ್ರ ಕುರಿತು ಹೇಳುವುದಕ್ಕಿಂತ ಹೆಚ್ಚಾಗಿ ಚಿತ್ರತಂಡದ ಕುರಿತು ಹೇಳುವುದು ಬಹಳಷ್ಟಿದೆ. ಎಲ್ಲರೂ ಯುವಕರು ಅದಕ್ಕೂ ಹೆಚ್ಚಾಗಿ ವಾರವಿಡೀ ವಿದೇಶದಲ್ಲಿ ದುಡಿದು ರಜೆಯ ದಿನ ಚಿತ್ರೀಕರಣಕ್ಕೆ ಇಳಿಯುತ್ತಾರೆ. ಚಿತ್ರದಲ್ಲಿ ನಾನು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ತುಳು ಭಾಷೆ ಬರೋದಿಲ್ಲ. ಆದ್ರೂ ಡೈಲಾಗ್‌ಗಳನ್ನು ಕೊಟ್ಟಿದ್ದಾರೆ. ಚಿತ್ರದ ನಾಯಕನಿಗೆ ನೆರವಾಗುವ ಪಾತ್ರ ನನಗೆ ಬಹಳ ಇಷ್ಟವಾಯಿತು. ಈ ಕಾರಣದಿಂದ ಚಿತ್ರ ಮಾಡಲು ಒಪ್ಪಿಕೊಂಡೆ' ಎನ್ನುತ್ತಾರೆ ರಮೇಶ್ ಅರವಿಂದ್. ರಮೇಶ್ ಅರವಿಂದ್ ಇನ್ನಷ್ಟೂ ತುಳು ಚಿತ್ರಗಳಲ್ಲಿ ನಟಿಸಲು ಇಷ್ಟಪಟ್ಟಿದ್ದಾರಂತೆ. ಆದರೆ ಅವರಿಗೆ ಒಪ್ಪುವಂತಹ ಸಬ್ಜೆಕ್ಟ್ ಇರಲೇಬೇಕು. ಅದಕ್ಕೂ ಮುಖ್ಯವಾಗಿ ಚಿತ್ರದಲ್ಲಿ ಅವರಿಗೆ ಲಾಯಕ್ಕಾದ ಪಾತ್ರ ಬೇಕು. ಅದೇ ಅವರ ಕರಾರು. ಸದ್ಯಕ್ಕೆ 'ಮಂಗನ ಕೈಯಲ್ಲಿ ಮಾಣಿಕ್ಯ' ಹಾಗೂ ತಮಿಳಿನಲ್ಲಿ 'ಮಚ್ಚಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲೂ ಇನ್ನೆರಡು ಚಿತ್ರಗಳು ಇವೆಯಂತೆ. 'ಇದು ನನಗೆ ಹೊಸ ಅನುಭವ. ಹೊಸ ಭಾಷೆ, ಸಂಸ್ಕೃತಿಯನ್ನು ಅರಿಯುವುದು ನನಗೆ ಇಷ್ಟವಾಗಿರುವುದರಿಂದ ನಿರೆಲ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಚಿತ್ರದಲ್ಲಿ ಸಣ್ಣ ಪಾತ್ರ. ಅದಕ್ಕೂ ಮುಖ್ಯವಾಗಿ ಇಷ್ಟವಾಗುವ ಪಾತ್ರ' -ರಮೇಶ್ ಅರವಿಂದ್ vk lvk published dis ariticle on 4.05.2013

Sunday, May 19, 2013

ರಾಕಿಂಗ್ ಕುಡ್ಲದಲ್ಲಿ ಮಿಂಚಿದ ಫ್ಯಾಶನ್ ಪರೇಡ್ !

* ಸ್ಟೀವನ್ ರೇಗೊ, ದಾರಂದಕುಕ್ಕು ಕುಡ್ಲದಲ್ಲಿ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ಒಂದು ಗಟ್ಟಿತನದ ಮಾತು. ಟೋಟಲಿ ಸೂಕ್ಷ್ಮ ಕೇಂದ್ರಗಳಲ್ಲಿ ಒಂದು ಎಂದು ಪರಿಗಣಿಸುವ ಕುಡ್ಲದ ಸಿಟಿ ಲೈಫ್‌ನಲ್ಲಿ ಯುವಕ-ಯುವತಿಯರ ಕಣ್ಮನ ಸೆಳೆಯುವ ಬೆಳಕಿನಲ್ಲಿ ರ‍್ಯಾಂಪ್‌ವಾಕ್ ಮಾಡಿಕೊಂಡು ಕಂಗೋಳಿಸಿದ್ದು.. ನಿಮ್ಗೆ ಗೊತ್ತಾ..?.. ಹೌದು ಇದು ಮಿಸ್ ಮಂಗಳೂರು ಆಂಡ್ ಮಿಸ್ಟರ್ ಮಂಗಳೂರು ಎನ್ನುವ ವಿನೂತನ ಸ್ಪರ್ಧೆಯ ಒಂದು ರಂಗೀನ್ ನೋಟದ ಮಾತು. ಮಂಗಳೂರಿನ ಉಳ್ಳಾಲದಲ್ಲಿರುವ ಸಮ್ಮರ್ ಸ್ಯಾಂಡ್‌ನಲ್ಲಿ ಸಿದ್ಧಗೊಂಡಿದ್ದ ಭವ್ಯ ವೇದಿಕೆಯ ಮೇಲೆ ೧೫ ಮೊಡೆಲ್‌ಗಳು ರ‍್ಯಾಂಪ್‌ವಾಕ್‌ನಲ್ಲಿ ಕಂಗೋಳಿಸಿದರು. ಮತ್ತೊಂದೆಡೆ ಯುವಕರು ಕೂಡ ತಮ್ಮ ಸೌಂದರ್ಯವನ್ನು ಬಿಚ್ಚಿಡಲು ರ‍್ಯಾಂಪ್‌ವಾಕ್‌ನ ಆಸರೆಗೆ ಮೊರೆ ಹೋದರು. ಮಿರಿಮಿರಿ ಮಿನುಗುವ ಬಣ್ಣದ ದೀಪಗಳು ಇಡೀ ವೇದಿಕೆಯನ್ನು ರಾಕಿಂಗ್ ಮಾಡಿ ಹಾಕಿತ್ತು. ವೆಸ್ಟರ್ನ್ ಹಾಗೂ ಶಾಸ್ತ್ರೀಯ ಸಂಗೀತದ ಹದವಾದ ಮಿಶ್ರಣದಲ್ಲಿ ಮೂಡು ಬರುತ್ತಿದ್ದ ಹಾಡುಗಳ ತಾಳಕ್ಕೆ ಮೊಡೆಲ್‌ಗಳು ಕ್ಯಾಟ್‌ವಾಕ್ ಭಿನ್ನ ಲೋಕದ ಪ್ರಯಾಣದಲ್ಲಿ ಸಾಥ್ ಕೊಡುವಂತಿತ್ತು. ರ‍್ಯಾಂಪ್‌ವಾಕರ್‌ಗಳ ಮೋಹಕ ನಡೆಗೆ ದಂಗಾಗಿ ವೇದಿಕೆಯ ಕೆಳಗೆ ಕೂತ ಪ್ರೇಕ್ಷಕರು ಟೋಟಲಿ ಬೋಲ್ಡ್ ಆಗಿ ಉಳಿದು ಹೋದರು. ಸದಾ ಕಾಲ ಹೊಸ ಹವಾ ಸೃಷ್ಟಿ ಮಾಡಿಕೊಂಡು ಮುನ್ನುಗ್ಗುತ್ತಿರುವ ಕುಡ್ಲದಲ್ಲಿ ಇದೇ ಮೊದಲ ಬಾರಿಗೆ ಮಿಸ್ ಮಂಗಳೂರು, ಮಿಸ್ಟರ್ ಮಂಗಳೂರು ಎನ್ನುವ ವಿನೂತನ ಸ್ಪರ್ಧೆ ಕಡಲತಡಿಯ ಫ್ಯಾಶನ್ ಪ್ರಿಯರ ಹೃದಯಕ್ಕೆ ಲಗ್ಗೆ ಹಾಕಿತ್ತು. ಎಲ್ಲಿಯ ಮೊಡೆಲ್‌ಗಳು ಅಂತೀರಾ: ಮಂಗಳೂರು ಅದರಲ್ಲೂ ತುಳುನಾಡಿನಲ್ಲಿ ಹುಟ್ಟಿ ನಂತರ ದೇಶ- ವಿದೇಶದಲ್ಲಿರುವ ನಾನಾ ಸುಂದರ ಯುವಕ-ಯುವತಿಯರನ್ನು ಒಂದು ಅಂರ್ತಜಾಲ ತಾಣದ ಮೂಲಕ ಬರೆ ಸೆಳೆದು ಅಲ್ಲಿ ಮತದಾನ ಮಾಡಿ ಅಲ್ಲಿ ಗೆದ್ದು ಬಂದ ೧೫ ಮೊಡೆಲ್‌ಗಳನ್ನು ಫೈನಲ್‌ಗೆ ಆಯ್ಕೆ ಮಾಡಿಕೊಂಡು ಅಲ್ಲಿ ರ‍್ಯಾಂಪ್‌ವಾಕ್ ಜತೆಗೆ ಪ್ರಶ್ನೆ- ಉತ್ತರಗಳ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿತ್ತು. ಮಂಗಳೂರು ಮೂಲದ ಡ್ರೀಮ್ ಕ್ರಾಪ್ಟ್ ಹಾಗೂ ಮುಂಬಯಿ ಇವೆಂಟ್ ಮ್ಯಾನೇಜರ್ ತಂಡ ಔರಾ ಸಿನಿ ವೇಸ್ತಾ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಇಲ್ಲಿ ಗೆದ್ದು ಬಂದ ಮಿಸ್ ಮಂಗಳೂರು ವಿನ್ನರ‍್ಸ್ ಗಳಿಗೆ ವಿದೇಶ ಪ್ರಯಾಣ, ಸಿನಿಮಾದಲ್ಲಿ ನಟನೆ ಹಾಗೂ ಬ್ರಾಂಡ್ ಅಂಬಾಸೀಡರ್ ಆಗುವ ಅವಕಾಶ ಲಭ್ಯವಾಗಲಿದೆ. ಇದರ ಜತೆಯಲ್ಲಿ ಸೌತ್ ಮಿಸ್ ಇಂಡಿಯಾ-೨೦೧೪ಗೆ ನೇರ ಪ್ರವೇಶ ಸಿಗಲಿದೆ. ರನ್ನರ‍್ಸ್‌ಗಳಿಗೆ ದೇಶ ನಾನಾ ರಾಜ್ಯಗಳಿಗೆ ಪ್ರವಾಸದ ಅವಕಾಶ ಸಿಗಲಿದೆ. ಕೋಟ್ ಕಾರ್ನರ್: ‘ಕುಡ್ಲದಲ್ಲಿ ಇಂತಹ ಸ್ಪರ್ಧೆ ಮಾಡೋದು ಅಷ್ಟೊಂದು ಸುಲಭದ ಮಾತು ಆಗಿರಲಿಲ್ಲ. ಇಲ್ಲಿ ಇಂತಹ ಸ್ಪರ್ಧೆಯ ಮೂಲಕ ಸೌಂದರ್ಯ ಲೋಕದ ಅನಾವರಣ ಮಾಡುವ ಕೆಲಸ ನಡೆದಿದೆ. ಕರಾವಳಿ ಬರೀ ಆಚಾರ- ವಿಚಾರಗಳ ಜತೆಗೆ ಸೌಂದರ್ಯ ಸ್ಪರ್ಧೆಗಳಿಗೂ ಮನ್ನಣೆ ಸಿಗಬೇಕು’ ಚರಣ್ ಸುವರ್ಣ ಮಿಸ್ ಮಂಗಳೂರು ಆಯೋಜಕರು ... ಕೋಟ್ ಕಾರ್ನರ್ ‘ಮಿಸ್ ಮಂಗಳೂರಿಗೆ ಈ ಬಾರಿ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಮಿಸ್ ಮಂಗಳೂರಿಗೆ ಸರಿಸುಮಾರು ೨೭೦ಕ್ಕೂ ಅಧಿಕ ಎಂಟ್ರಿಗಳು ಬಂದಿತ್ತು. ಮಿಸ್ಟರ್ ಮಂಗಳೂರಿಗೆ ೭೦ ಎಂಟ್ರಿ ಬಂದಿತ್ತು. ಅದರಲ್ಲಿ ಆಯ್ಕೆ ಮಾಡೋದು ಸುಲಭದ ವಿಚಾರವಲ್ಲ. ಅದಕ್ಕಾಗಿಯೇ ವಿಶೇಷ ತಜ್ಞರ ತಂಡವನ್ನೇ ತೀರ್ಪುಗಾರರಾಗಿ ಆಯ್ಕೆ ಮಾಡಿಕೊಂಡಿದ್ದೇವು. ಎಂಟ್ರಿಗಳಲ್ಲಿ ಕರಾವಳಿ ಮೂಲದ ಬೆಂಗಳೂರು, ಮೈಸೂರು, ಮುಂಬಯಿಯಿಂದ ಸ್ಫರ್ಧಿಗಳು ಕಾಣಿಸಿಕೊಂಡಿದ್ದು ವಿಶೇಷ’ - ಮುಖ್ಯಸ್ಥರು, ಡ್ರೀಮ್ ಕ್ರಾಪ್ಟ್ ಮಂಗಳೂರು. ಸೌಂದರ್ಯ ಸ್ಪರ್ಧೆಯ ವಿನ್ನರ‍್ಸ್ ಮಿಸ್ಟರ್ ಮಂಗಳೂರು ಕಿರೀಟ: ಶೈನಿ ಶೆಟ್ಟಿ, ಮಂಗಳೂರು ಮಿಸ್ ಮಂಗಳೂರು ಕಿರೀಟ: ಅದಿತಿ ಶೆಟ್ಟಿ, ಮುಂಬಯಿ ಸೆಲೆಬ್ರಿಟಿ ಗೆಸ್ಟ್ ಆಪಿರೀಯನ್ಸ್ ಶಿವಾಸ್ ಮುಂಬಯಿಯ ಶಿವರಾಮ್ ಭಂಡಾರಿ ಫ್ಯಾಶನ್ ಕೊರಿಯೋಗ್ರಾಫರ್ ಸಮೀರ್ ಖಾನ್ ಮಿಸ್ ಸೌತ್ ಇಂಡಿಯಾದ ಹೆಡ್ ಅಜಿತ್ ರವಿ

Sunday, April 21, 2013

ಪೂಜಾ ಗುಪ್ತಾ ಹೊಸ ರಂಗು !

* ಸ್ಟೀವನ್ ರೇಗೊ, ದಾರಂದಕುಕ್ಕು ಪಕ್ಕಾ ವೆಜ್ ಹುಡುಗಿ ಆದರೂ ಹಾಟ್‌ನೆಸ್ ಎನ್ನುವ ಮಂತ್ರ ಅವಳನ್ನು ನೋಡಿದಾಗ ಪಠಿಸಿ ಹೋಗುತ್ತದೆ. ತೆಳ್ಳಗೆ ಬೆಳ್ಳಗೆ ಇರುವ ಈ ಬಳುಕಿನ ಬಳ್ಳಿಯ ಹೆಸರೇ ಪೂಜಾ ಗುಪ್ತಾ. ಬಾಲಿವುಡ್ ಪಡಸಾಲೆಯಲ್ಲಿ ಹೊಸ ಎಂಟ್ರಿ ಎನ್ನುವುದಾದರೆ ಅದು ಟೋಟಲಿ ತಪ್ಪು. ಕೋರಿಯೋಗ್ರಾಫರ್ ರೆಮೋ ಡಿ ಸೋಜರ 'ಫಾಲ್ತೂ' ಸಿನಿಮಾದಲ್ಲಿ ಪೂಜಾ ಚಾನ್ಸ್ ಗಿಟ್ಟಿಸಿಕೊಂಡು ಗೆದ್ದು ಬಂದಿದ್ದಳು. ಇದೇ ಪೂಜಾ ನಾನ್ ವೆಜ್ ಎಂದಿಗೂ ಮುಟ್ಟುವುದೇ ಇಲ್ಲ ಎಂದುಕೊಂಡು ಪೇಟಾ ಇಂಡಿಯಾದ ಲೋಗೋ ಅಂಟಿಸಿಕೊಂಡಿದ್ದಳು. ಅಂದಹಾಗೆ 2007ರಲ್ಲಿ ಪೂಜಾ ಎಕ್ಸ್ ಮಿಸ್ ಇಂಡಿಯಾ ಯೂನಿವರ್ಸ್ ಎನ್ನುವ ಕಿರೀಟ ಹೊತ್ತುಕೊಂಡು ಮೆರದಾಕೆ ಅದರಲ್ಲೂ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 9 ಸ್ಥಾನದಲ್ಲಿ ಕೂತು ಬೆರಗು ಮೂಡಿಸಿದ್ದಳು. ಪೂಜಾ ದಿಲ್ಲಿಯ ಗಲ್ಲಿಯಲ್ಲಿ ಓದಿದ್ದು, ಬೆಳೆದಿದ್ದು. ಆದರೆ ರ‌್ಯಾಂಪ್ ಮೇಲೆ ಓಡಿದ್ದು ಮಾತ್ರ ಮುಂಬಯಿ ಎನ್ನುವ ಬಣ್ಣದ ನಗರಿಯಲ್ಲಿ. ಜರ್ಮನಿಯಲ್ಲಿ ಭಾರತೀಯ ಪ್ರವಾಸೋದ್ಯಮ ರಾಯಬಾರಿ ಸೇರಿದಂತೆ ಏಡ್ಸ್ ಕುರಿತಾಗಿ ಜಾಗೃತಿ ಹುಟ್ಟುಹಾಕುವ ಕೆಲಸದಲ್ಲೂ ಪೂಜಾ ಸಿಕ್ಕಾಪಟ್ಟೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಂಡು ಸ್ವತಂತ್ರವಾಗಿ ಬದುಕಬೇಕು ಎನ್ನುವ ವಾದದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪೂಜಾ ಗುಪ್ತಾ, ಮಾರ್ಶಲ್ ಆರ್ಟ್ಸ್ ಕಲೆಯನ್ನು ಜಪಾನಿನಿಂದ ಕಲಿತುಕೊಂಡು ಬಂದಿದ್ದಾರೆ. ಮಾರ್ಶಲ್ ಆರ್ಟ್ಸ್ ಗೆ ಸಂಬಂಧಪಟ್ಟ ಬಹುತೇಕ ಪಂದ್ಯಾಟಗಳಲ್ಲಿ ಪ್ರಶಸ್ತಿ ಗೆದ್ದು ಬಂದಿರುವ ಪೂಜಾಳ ಮನೆಯ ತುಂಬಾ ಗೆದ್ದುಕೊಂಡಿರುವ ಪ್ರಶಸ್ತಿಗಳ ಸಾಲೇ ಕೂತಿದೆ. ಈಗ ಪೂಜಾ ಬಟ್ಟಲಿನಲ್ಲಿ ಎರಡು ಚಿತ್ರಗಳಿವೆ. ಒಂದು ಗೋ ಗೋ ಗೋವಾ ಹಾಗೂ ಸುಸೈ ಗಣೇಶನ್ ಅವರ ಶಾರ್ಟ್‌ಕಟ್ ರೋಮಿಯೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎರಡು ಚಿತ್ರಗಳು ಇದೇ ತಿಂಗಳಲ್ಲಿ ಥಿಯೇಟರ್‌ಗೆ ಬಡಿಯುವ ಸಾಧ್ಯತೆ ಇದೆ. ಸೈಫ್, ನೀಲ್ ನಿತಿನ್ ಪೂಜಾರ ಬೆಸ್ಟ್ ಫ್ರೆಂಡ್ಸ್: ಗೋ ಗೋ ಗೋವಾ ಸಿನಿಮಾದಲ್ಲಿ ಒಟ್ಟಾದ ಪೂಜಾ ಹಾಗೂ ಸೈಫ್ ತುಂಬಾನೇ ಕ್ಲೋಸ್ ಫ್ರೆಂಡ್ಸ್. ಸೈಫ್ ಕುರಿತು ಪೂಜಾ ಹೇಳುವುದಿಷ್ಟು: ತುಂಬಾನೇ ನೇರವಾಗಿ ಮಾತಿಗೆ ಇಳಿಯುವ ಸೈಫ್ ಪಾತ್ರದಲ್ಲೂ ಅಷ್ಟೇ ಆಳವಾಗಿ ನುಗ್ಗಿ ಬಿಡುತ್ತಾರೆ. ಗೋ ಗೋ ಗೋವಾದಲ್ಲಿ ನಮ್ಮಿಬ್ಬರ ಕೆಮೆಸ್ಟ್ರಿ ತುಂಬಾನೇ ಚೆನ್ನಾಗಿ ವರ್ಕ್ ಆಗಿದೆ ಎನ್ನೋದು ಚಿತ್ರದ ಪ್ರೋಮೋಗಳನ್ನು ನೋಡಿದ ಪ್ರೇಕ್ಷಕರು ಹೇಳುವ ಮಾತು ಎನ್ನುತ್ತಾರೆ ಪೂಜಾ. ಶಾರ್ಟ್‌ಕಟ್ ನಲ್ಲೂ ನೀಲ್ ನಿತಿನ್ ಮುಕೇಶ್ ತುಂಬಾ ಒಳ್ಳೆಯ ಗೆಳೆಯ. ನಟನೆ ಕುರಿತು ನನಗೆ ಆಗಾಗ ಟಿಪ್ಸ್ ಕೊಡುತ್ತಾ ಇರುತ್ತಾರೆ. ಚಿತ್ರವನ್ನು ಕೀನ್ಯಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಮಾಸಾಮೀರಾದಲ್ಲಿ 45 ಡಿಗ್ರಿ ಉಷ್ಣಾಂಶ ಇತ್ತು. ಚಿತ್ರ ಕಾಡಿನ ನಡುವೆ ನಡೆಯುತ್ತಿತ್ತು. ಅಲ್ಲಿ ಯಾವುದೇ ಏರ್‌ಕಂಡೀಷನ್, ತಂಪು ನೀರು ಇರಲೇ ಇರಲಿಲ್ಲ. ನಾಲ್ಕು ದಿನಗಳ ಕಾಲ ಈ ಚಿತ್ರೀಕರಣದಲ್ಲಿ ನನಗೆ ಹಾಗೂ ನೀಲ್‌ಗೆ ಸನ್ ಬ್ರನ್ಸ್ ಉಂಟಾಗಿತ್ತು. ಇಲ್ಲಿ ನಾವಿಬ್ಬರೂ ಕಲಿತುಕೊಂಡ ಪಾಠ ಇಷ್ಟೇ: ನಾವು ಸಣ್ಣ ಪುಟ್ಟ ವಿಚಾರಗಳಿಗೆ ಸೋತು ಕೂರದೆ ಸವಾಲಿನ ರೀತಿಯಲ್ಲಿ ಸ್ವೀಕರಿಸಿಕೊಂಡು ಮುನ್ನಡೆಯಬೇಕು. ಆಗ ಮಾತ್ರ ನಾವು ಬಲಿಷ್ಠರಾಗಲು ಸಾಧ್ಯ ವಾಗುತ್ತದೆ. ಪೂಜಾ ಇಷ್ಟ- ಕಷ್ಟ ಏನ್ ಗೊತ್ತಾ..? ಪೂಜಾ ಗುಪ್ತಾಳಿಗೆ ಮೊಬೈಲ್ ಬಿಟ್ಟು ಬದುಕೋದು ತುಂಬಾನೇ ಕಷ್ಟವಂತೆ. ಯಾವ ಕಡೆ ಹೋದರೂ ಕೂಡ ಪೂಜಾಳ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಯಾವುದೇ ಕೆಲಸಗಳು ಇಲ್ಲದೇ ಇದ್ದಾಗ ಪೂಜಾ ಗುಪ್ತಾ ಪೈಟಿಂಗ್ ಮಾಡುತ್ತಾರೆ. ಅವರ ಪೇಂಟಿಂಗ್‌ಗಳ ಪ್ರದರ್ಶನ ಕೂಡ ದಿಲ್ಲಿಯಲ್ಲಿ ನಡೆದಿತ್ತು. ಟ್ರಾವೆಲಿಂಗ್, ಕುದರೆ ಸವಾರಿ, ಯೋಗ, ಕತೆ ಬರೆಯೋದು ಪೂಜಾಳಿಗೆ ಇಷ್ಟ. ಬಾಲಿವುಡ್ ನಲ್ಲಿ ಪೂಜಾ ಇಷ್ಟ ಪಡುವ ಹುಡುಗ ಅರ್ಜುನ್ ರಾಂಪಾಲ್. ಅರ್ಜುನ್ ಮೊಡೆಲಿಂಗ್ ದುನಿಯಾದಿಂದ ಬಂದವರು ಅವರನ್ನೇ ರೋಲ್ ಮಾಡೆಲ್ ರೀತಿಯಲ್ಲಿಯೇ ತೆಗೆದುಕೊಂಡು ಮುಂದೆ ಹೋಗುತ್ತಿದ್ದಾರೆ. ' ಪೂಜಾ ಗುಪ್ತಾ ತುಂಬಾ ಪ್ರತಿಭಾವಂತ ಹುಡುಗಿ. ಶಾರ್ಟ್‌ಕಟ್ ರೋಮಿಯೋನಲ್ಲಿ ಅವಳಿಗೆ ಹೇಳಿ ಮಾಡಿಸಿ ಪಾತ್ರವೊಂದಿದೆ. ಮೋಸ, ಅಪ್ರಾಮಾಣಿಕತೆಯ ನಡುವೆ ನಡೆಯುವ ಕತೆಯಲ್ಲಿ ಪೂಜಾ ಪಾತ್ರಕ್ಕೆ ತಕ್ಕ ಹುಡುಗಿಯಾಗಿದ್ದಾರೆ. ಗ್ಲಾಮರ್ ಜತೆಯಲ್ಲಿ ನಟನೆಗೂ ಪೂಜಾ ನ್ಯಾಯ ಒದಗಿಸಿದ್ದಾಳೆ. ಈ ಕಾರಣದಿಂದ ಶಾರ್ಟ್ ಕಟ್ ರೋಮಿಯೋ ತಮಿಳಿಗೂ ತಂದರೂ ಅಲ್ಲಿ ಅವಳೇ ನಾಯಕಿಯಾಗುತ್ತಾಳೆ. -ಸುಸೈ ಗಣೇಶನ್ ಖ್ಯಾತ ತಮಿಳು ಚಿತ್ರ ನಿರ್ದೇಶಕ ಹಾಗೂ ಶಾರ್ಟ್‌ಕಟ್ ರೋಮಿಯೋ ನಿರ್ದೇಶಕ (vk lvk ublished dis aricle)

Friday, April 19, 2013

ಕಿನಾರೆ ಮನ: ಬಾರ್ನಾ ಇನ್‌ ಗೋವಾ

* ಸ್ಟೀವನ್ ರೇಗೊ, ದಾರಂದಕುಕ್ಕು ಅಮಲಿನ ಕಡಲಿನಲ್ಲಿ ತೇಲಿಸಿ ಬಿಡುವ ಸೌಂದರ್ಯದ ಗಣಿ. ತುಟಿ ಅಂಚಿನಲ್ಲಿ ಮಿಂಚಿ ಮರೆಯಾಗುವ ನಗು. ದುಂಡುಮೊಗದಲ್ಲಿ ತುಂಬಿದ ಸೌಮ್ಯತೆ. ಯಾರನ್ನೋ ಹುಡುಕುತ್ತಿರುವ ದುಂಡು ಬಟ್ಟಲಿನ ನಯನಗಳು; ಎಲ್ಲವೂ ಜತೆಯಾಗಿ ಸೇರಿಕೊಂಡರೆ, ಆಕೆಯೇ ರಮ್ಯಾ ಬಾರ್ನಾ. ಗ್ಲಾಮರ್ ಲೋಕದ ಬಳುಕಿನ ಜತೆಗೆ ಆ್ಯಕ್ಟಿಂಗ್‌ನ ಪಾಠಗಳನ್ನು ಸರಿಯಾಗಿ ಕಲಿತುಕೊಂಡು ನಟಿಸಲು ಬಂದ ರಮ್ಯಾ ಬಾರ್ನಾ ಬರೀ ಕನ್ನಡ ಸಿನಿಮಾಗಳಿಗೆ ಸೀಮಿತವಾದ ಹುಡುಗಿಯಲ್ಲ ಅನ್ನೋದು ಕರಾವಳಿಗರ ಮಾತು. ಕಾರಣ ತುಳುವಿನಲ್ಲಿ ಭರ್ಜರಿಯಾಗಿ ಓಡಿದ ಚಿತ್ರ 'ಒರಿಯರ್ದೊರಿ ಅಸಲ್'ನ ಪ್ರೀತಿಯ ರೋಲ್‌ನಲ್ಲಿ ರಮ್ಯಾ ಬಾರ್ನಾ ಕಾಣಿಸಿಕೊಂಡಿದ್ದು ತುಳುವರಿಗೆ ತುಂಬಾನೇ ಲೈಕ್ ಆಗಿದೆ. ಜತೆಗೆ ಚಿತ್ರದ ಪಾತ್ರ ಸಿಕ್ಕಾಪಟ್ಟೆ ಕ್ಲಿಕ್ ಆಗಿದೆ. ಮದಿರೆ ಗ್ರಾಮದ ಅನುಭವ: ಇಂತಹ ರಮ್ಯಾ ಬಾರ್ನಾಗೆ ಗೋವಾ ಇಷ್ಟದ ಟೂರಿಂಗ್ ಸ್ಪಾಟ್. ವರ್ಷದಲ್ಲಿ ಒಂದೆರಡು ಬಾರಿ ಗೋವಾದ ಬೀಚ್‌ನ ಮರಳಿನಲ್ಲಿ ಹೊರಳಾಡಿಕೊಂಡು ಬರಲೇ ಬೇಕು. ವರ್ಷದ ಆರಂಭದ ತಿಂಗಳಲ್ಲಿ ಒಂದ್ ಸಾರಿ ಹೋದರೆ ಮತ್ತೊಂದು ಸಲ ವರ್ಷದ ಕೊನೆಯ ಭಾಗದಲ್ಲಿ ಗೋವಾದ ಪ್ರಮುಖ ಬೀಚ್‌ಗಳಿಗೆ ರೌಂಡ್ ಹಾಕಿಕೊಂಡು ಬರುತ್ತಾರೆ. ಈ ಬಾರಿ ಗೋವಾದ ಪಣಜಿಯಲ್ಲಿರುವ ಅಂಜುಮ್ ಬೀಚ್‌ನಲ್ಲಿ ರಮ್ಯಾ ಬಾರ್ನಾ ಠಿಕಾಣಿ ಹೂಡಿದ್ದರು. ಗದಗದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದ ರಮ್ಯಾ ತಮ್ಮ ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆ ಆಯ್ಕೆ ಮಾಡಿಕೊಂಡದ್ದು ಅಂಜುಮ್ ಬೀಚ್‌ನ್ನು. ಇಲ್ಲಿಯ ಸೂರ್ಯಾಸ್ತಮಾನದ ದೃಶ್ಯವನ್ನು ರಮ್ಯಾ ವರ್ಣನೆ ಮಾಡಿದ್ದು ಹೀಗೆ 'ಗೋವಾ ನನಗೆ ಸಿಕ್ಕಾಪಟ್ಟೆ ಇಷ್ಟ. ಅದರಲ್ಲೂ ಬೀಚ್‌ನಲ್ಲಿ ನಿಂತು ಸಂಜೆ ಸೂರ್ಯಾಸ್ತಮಾನದ ಆಟಗಳು ಇನ್ನೂ ಚೆನ್ನಾಗಿ ಇರುತ್ತೆ. ಸೂರ್ಯ ಬೀಚ್‌ನ ಕೊನೆಯಲ್ಲಿ ಎಲ್ಲೋ ಬಿದ್ದು ಹೋಗುತ್ತಿದ್ದಾನೆಂಬ ಭಾಸವಾಗುತ್ತದೆ ಎನ್ನುತ್ತಾರೆ. 'ಈ ಬಾರಿ ಎರಡ್ಮೂರು ದಿನ ಮಾತ್ರ ಗೋವಾದಲ್ಲಿ ಉಳಿಯುವ ಅವಕಾಶ ಬಂತು. ಉಳಿದಂತೆ ಯಾವಾಗಲೂ ಒಂದು ವಾರವಾದರೂ ನಿಂತು ಬರುತ್ತೇನೆ. ಇಲ್ಲಿನ ಸೀ ಫುಡ್ಡಂತೂ ರಿಯಲಿ ಸೂಪರ್ ಆಗಿರುತ್ತದೆ. ಮಂಗಳೂರು ಬಿಟ್ಟರೆ ನನಗೆ ಸೀ ಫುಡ್ ರುಚಿ ಹತ್ತಿಸಿದ ಊರು ಗೋವಾ. ಇಲ್ಲಿನ ಮಸಾಲೆಯಲ್ಲಿ ಹುರಿದ ಸಿಗಡಿ ಮೀನು ಬೊಂಬಾಟ್ ಟೇಸ್ಟ್. ಬೆಂಗಳೂರಿಗೆ ಬಂದ ನಂತರವೂ ಈ ಮೀನಿನ ಅಡುಗೆ ಮಾಡಲು ಪ್ರಯತ್ನಿಸಿ ಸೋತು ಹೋದೆ. ಗೋವಾದ ಸೀಫುಡ್ ಟೇಸ್ಟ್ ಅಲ್ಲಿಗೆ ಮಾತ್ರ ಮೀಸಲು' ಎನ್ನುತ್ತಾರೆ ರಮ್ಯಾ. ಗೋವಾ ಬಿಟ್ಟರೆ ರಮ್ಯಾರಿಗೆ ರಾಜಸ್ತಾನ ಇಷ್ಟವಾದ ಟೂರಿಂಗ್ ಸ್ಪಾಟ್. ರಾಜ್ಯದಲ್ಲಿ ಕೂರ್ಗ್‌ನ ಕಾಫಿ ತೋಟಗಳ ನಡುವೆ ಇರೋದು ಕೂಡ ಬಹಳ ಇಷ್ಟ. ರಾಜಸ್ತಾನದಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಆಗಾಗ ಭೇಟಿ ಕೊಟ್ಟು ಬರುವುದು ಇದೆ. ವಿದೇಶದಲ್ಲಿ ದುಬಾಯಿ, ಹಾಂಕಾಂಗ್ ಮೆಚ್ಚಿನ ತಾಣಗಳ ಲೀಸ್ಟ್‌ನಲ್ಲಿದೆ. ಸಿನಿಮಾ ಚಿತ್ರೀಕರಣ ಇಲ್ಲದೇ ಇದ್ದಾಗ ಟೂರಿಂಗ್ ಸ್ಪಾಟ್‌ಗಳನ್ನು ಹುಡುಕುವುದು ರಮ್ಯಾ ಖಯಾಲಿ. 'ಚಿತ್ರೀಕರಣದ ಒತ್ತಡಗಳ ನಡುವೆ ಕೊಂಚ ಸಮಯ ಫ್ಯಾಮಿಲಿ, ಫ್ರೆಂಡ್ಸ್‌ಗಳ ಜತೆಯಲ್ಲಿ ಕಳೆಯುವುದು ಒಳ್ಳೆಯದು' ಅಂತಾರೆ. ಸಿನಿಮಾಗ್ರಫಿ ರಮ್ಯಾ ಬಾರ್ನಾ ಸದ್ಯಕ್ಕೆ 'ನಟೋರಿಯಸ್' ಸಿನಿಮಾ ಮುಗಿಸಿದ್ದಾಗಿದೆ. ಇನ್ನೂ ರಾಜಕಾರಣಿ ಜಮೀರ್ ಆಹ್ಮದ್ ಪುತ್ರನ ಜತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರಾವಳಿಯ ಕೋಸ್ಟಲ್‌ವುಡ್‌ನಲ್ಲಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್‌ರ ಹೊಸ ಚಿತ್ರ ಮದಿಮೆ ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಈ ವರ್ಷ ಇನ್ನೆರಡು ಸಿನಿಮಾಗಳಿಗೆ ಬುಕ್ ಆಗಿದ್ದಾರೆ. ಟೋಟಲಿ ಬಿಝಿ ಸಿನಿಮಾ ಲೈಫ್‌ನಲ್ಲಿ ರಮ್ಯಾ ಬಾರ್ನಾ ಟೂರ್ ಸ್ಪಾಟ್‌ಗಳಿಗೂ ಸಮಯ ಮೀಸಲಿಡುತ್ತಾರೆ. ಚಿಟ್ ಚಾಟ್ ಗ್ಲಾಮರ್ ಹಾಗೂ ಎಕ್ಸ್‌ಪೋಸಿಂಗ್ ಎರಡು ತುಂಬಾನೇ ಭಿನ್ನ ಸಬ್ಜೆಕ್ಟ್. ಗ್ಲಾಮರ್ ಎನ್ನೋದು ಪ್ರತಿಯೊಬ್ಬ ಸಿನಿಮಾ ನಟಿಗೆ ಇರಬೇಕಾದ ಆಭರಣ. ರಮ್ಯಾ ಬಾರ್ನಾ ಎರಡರಲ್ಲಿ ಯಾವ ಸೈಡ್ ನಿಲ್ಲುತ್ತಾರೆ ಎಂದರೆ ರಮ್ಯಾ ಹೀಗೇಳುತ್ತಾರೆ. ಪಾತ್ರಗಳೇ ಎಕ್ಸಪೋಸ್ ಬಯಸಿದಾಗ ಖಂಡಿತವಾಗಿಯೂ ಆ ನಿಟ್ಟಿನಲ್ಲಿ ಯೋಚನೆ ಮಾಡುತ್ತೇನೆ. ಆದರೆ ಅನಗತ್ಯ ಎಕ್ಸ್‌ಪೋಸಿಂಗ್ ನನಗೆ ಇಷ್ಟವಿಲ್ಲ. ಪಾತ್ರದ ಬೇಡಿಕೆಗೆ ತಕ್ಕಂತೆ ಎಕ್ಸ್‌ಪೋಸಿಂಗ್ ಇರಬೇಕು. ಐಟಂ ಸಾಂಗ್‌ನಲ್ಲಿ ಕುಣಿಯುವ ನಾಯಕಿ ಗ್ಲಾಮರಸ್ ಆಗಿ ಕಂಡರೆ ಸಾಲದು. ಎಕ್ಸ್‌ಪೋಸ್ ಮಾಡಬೇಕು ಎಂದು ಐಟಂ ಸಾಂಗ್ ಬಯಸುತ್ತದೆ. ಬಿಡುವಾದಾಗ ಫ್ರೆಂಡ್ಸ್‌ಗಳ ಜತೆಯಲ್ಲಿ ಶಾಪಿಂಗ್ ಮಾಡುತ್ತೇನೆ. ಗೆಳೆಯರ ಜತೆಗೆ ಸಿನಿಮಾ ನೋಡುತ್ತೇನೆ. ತುಂಬಾನೇ ಫ್ರೀ ಟೈಮ್ ಇತ್ತು ಅಂದ್ರೆ ಹೆತ್ತವರ, ಗೆಳೆಯರ ಜತೆಯಲ್ಲಿ ಲಾಂಗ್ ಟೂರ್‌ಗೆ ಹೋಗಿ ಬರುತ್ತೇನೆ. ಕಾಲೇಜ್‌ನಲ್ಲಿದ್ದಾಗ ಹೆಚ್ಚು ಕಾದಂಬರಿಗಳನ್ನು ಓದುತ್ತಿದ್ದೆ ಆದರೆ ಈಗ ಓದಲು ಟೈಮ್ ಸಿಕ್ತಿಲ್ಲ . - ರಮ್ಯಾ ಬಾರ್ನಾ (vk lvk pblished dis article on 20.04.2013)

Tuesday, April 9, 2013

ಮಣಿಕಂಠಿಹಾರದಲ್ಲಿ ಲಜ್ಜೋ

* ಸ್ಟೀವನ್ ರೇಗೊ, ದಾರಂದಕುಕ್ಕು ಮಣಿರತ್ನಂ ಮತ್ತೆ ಎದ್ದು ನಿರ್ದೇಶಕನ ಕುರ್ಚಿಯ ಮೇಲೆ ಕೂತಿದ್ದಾರೆ. ಅವರ ಹಿಂದಿನ ಚಿತ್ರ 'ಕಡಲ್' ಹೊಸಬರ ಜತೆಯಲ್ಲಿ ಹಳೆ ಮುಖಗಳನ್ನು ಇಟ್ಟುಕೊಂಡು ಹೊಸ ಕ್ರಾಂತಿ ಮಾಡಲು ಹೋಗಿ ಸೋಲು- ಗೆಲುವಿನ ತಕ್ಕಡಿಯಲ್ಲಿ ಬರೋಬರಿ ತೂಗಿಕೊಂಡಿದ್ದರು. ಅದಕ್ಕೂ ಮಿಗಿಲಾಗಿ 'ರಾವಣ್' ಕಹಿ ಸೋಲಿನ ನಡುವೆ ಕೂಡ 'ಕಡಲ್'ನಲ್ಲಿ ಏನಾದರೂ ಗೆಲುವು ಸಿಗುತ್ತಾ ಎಂದು ಕಾದು ಕೂತಿದ್ದ ಮಣಿರತ್ನಂ, 'ಕಡಲ್'ನಲ್ಲೂ ನಿರಾಶೆಯನ್ನು ಕಟ್ಟಿಕೊಂಡು ಮುನ್ನಡೆಯಬೇಕಾಯಿತು. ಆದರೂ ನಿರ್ದೇಶಕ ಮಣಿರತ್ನಂ ಸೋಲಿನಲ್ಲೂ ಎದ್ದು ನಿಲ್ಲುತ್ತಾರೆ. ಮತ್ತೆ ಓಡಿ ಗೆದ್ದು ಬರುತ್ತಾರೆ ಎನ್ನುವ ನಂಬಿಕೆಯ ಪೊಟ್ಟಣವನ್ನು ಹಿಡಿದುಕೊಂಡು ಸಿನಿಮಾ ನಿರ್ಮಾಪಕರು ಕಾದು ಕೂತಿದ್ದಾರೆ. ಅಂದಹಾಗೆ ನಿರ್ದೇಶಕ ಮಣಿರತ್ನಂಗಾಗಿ ಕಾದು ಕೂತವರಿಗೆ ಖುಷ್ ಖಬ್ರಿ.. ಮಣಿ ಮತ್ತೆ ಚಿತ್ರ ನಿರ್ದೇಶನಕ್ಕೆ ಇಳಿಯಲಿದ್ದಾರೆ. ಈ ಬಾರಿಯ ಸಿನಿಮಾ ಭಾರತ ಹಾಗೂ ಪಾಕಿಸ್ತಾನದ ನಡುವಿನ ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ಮಾಡುತ್ತಿದ್ದಾರೆ. ಮಣಿರತ್ನಂ ಎಂದಾಕ್ಷಣ ಅವರ ಚಿತ್ರಗಳಲ್ಲಿ ಕೋಮು ಸೂಕ್ಷ್ಮ ಎಳೆಗಳಿಗೆ ಜಾಸ್ತಿ ಮಹತ್ವ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಇಡೀ ಎರಡು ಗಂಟೆಯ ಸಿನಿಮಾವನ್ನು ಭರ್ಜರಿಯಾಗಿ ಮುನ್ನಡೆಸುತ್ತಾರೆ. ಈಗ 'ಲಜ್ಜೋ' ಸಿನಿಮಾ ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ಮಣಿ ಪ್ರೇಕ್ಷಕರ ಮುಂದೆ ತರಲು ಪ್ರಯತ್ನ ಪಡುತ್ತಿದ್ದಾರೆ. ರಾಜಸ್ಥಾನದ ಪುಟ್ಟ ಗ್ರಾಮವೊಂದರಲ್ಲಿ ಮಣಿಯ ಕ್ಯಾಮೆರಾಗಳು ಓಡಾಡಲಿದೆ. ಮಣಿಯ 'ಲಜ್ಜೋ'ದಲ್ಲಿ ಏನ್ ಉಂಟು: ನಿರ್ದೇಶಕ ಮಣಿರತ್ನಂ ಹಾಗೂ ನಿರ್ಮಾಪಕ ಬಾಬಿ ಬೇಡಿ ಜತೆಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರ 'ಲಜ್ಜೋ'ದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಕರೀನಾ ಕಪೂರ್ ನಟಿಸುತ್ತಿದ್ದಾರೆ. ಅಂದಹಾಗೆ ಆಮೀರ್ 'ಧೂಮ್3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕರೀನಾ ಸೈಫ್ ಮದುವೆಯಾದ ನಂತರ ಯಾವುದೇ ಚಿತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ. ಇಬ್ಬರು ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳೋದು ಕೂಡ ಕಷ್ಟ ಎನ್ನುವ ಮಾತುಗಳೇ ಬಹಳ ವರ್ಷಗಳಿಂದ ಓಡಾಡುತ್ತಿತ್ತು. ಆದರೆ ಈ ಎಲ್ಲ ಮಾತುಗಳಿಗೆ ಕೊನೆಗೂ ಬ್ರೇಕ್ ಸಿಕ್ಕಿದೆ. ಆಮೀರ್ ಅವರು ಧೂಮ್ -3 ನಂತರ ಮಣಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕರೀನಾ ಕೂಡ ಮದುವೆಯ ನಂತರ ದೊಡ್ಡ ಬ್ರೇಕ್‌ಗಾಗಿ ಮಣಿ ಚಿತ್ರಕ್ಕೆ ಓಕೆ ಎಂದಿದ್ದಾಳೆ. ಚಿತ್ರಕ್ಕೆ ಇಳಯರಾಜ ಸಂಗೀತ ನೀಡುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿಸಿಕೊಂಡಿತ್ತು. ಆದರೆ ಸುಹಾಸಿನಿ ಮಣಿರತ್ನಂ ಅವರು ಮಾಧ್ಯಮಗಳ ಮುಂದೆ ಬಂದು ಮಣಿಯ ಮುಂದಿನ ಚಿತ್ರಕ್ಕೆ ಎ. ಆರ್. ರೆಹಮಾನ್ ಅವರೇ ಸಂಗೀತ ನೀಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಹಿರಿಯ ಚಿತ್ರ ಸಾಹಿತಿ ಗುಲ್ಜಾರ್ ಸಾಹಿತ್ಯ ಬರೆದಿದ್ದಾರೆ. ಪಿ.ಸಿ. ಶ್ರೀರಾಮ್ ಛಾಯಾಗ್ರಹಣ ಮಾಡಿದ್ದಾರೆ. ಇಸ್ಮಾತ್ ಚುಗತೀ ಅವರ ಸಣ್ಣ ಕತೆಯನ್ನು ಆಧರಿಸಿಕೊಂಡು 'ಲಜ್ಜೋ' ಮೂಡಿಬರುತ್ತಿದೆ. ಕರೀನಾ ಕಪೂರ್ 'ಲಜ್ಜೋ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಆಮೀರ್ ಜತೆಗೆ ಮತ್ತೊಂದು ನಟ ಕೂಡ ಸೇರ್ಪಡೆಯಾಗಲಿದ್ದಾರೆ. ಆದರೆ ಅವರನ್ನು ಚಿತ್ರ ಆರಂಭದ ನಂತರವೇ ಫೈನಲ್ ಮಾಡುವ ಕುರಿತು ಚಿತ್ರ ತಂಡ ಯೋಚನೆ ಮಾಡುತ್ತಿದೆ. 2005ರಿಂದ ಈ ಚಿತ್ರವನ್ನು ಮಾಡಬೇಕು ಎಂದುಕೊಂಡು ಮಣಿರತ್ನಂ ಸುತ್ತಾಡುತ್ತಿದ್ದರು. ಚಿತ್ರದ ಕತೆಯಲ್ಲಿ ಬದಲಾವಣೆ ಹಾಗೂ ನಾಯಕ, ನಾಯಕಿಯರ ಹುಡುಕಾಟ, ಆಮೀರ್, ಕರೀನಾ ಡೇಟ್ ಕ್ಲ್ಯಾಶ್ ಎಲ್ಲವೂ ಸೇರಿಕೊಂಡು ಚಿತ್ರವನ್ನು 2013ರ ಕಾಲ ಘಟ್ಟಕ್ಕೆ ತಂದು ನಿಲ್ಲಿಸಿದೆ. ಈ ಹಿಂದೆ ಷೇಕ್ಸ್ ಪಿಯರ್ ಕತೆಯನ್ನು ಆಧರಿಸಿಕೊಂಡು ಬಂದಿರುವ 'ಓಂಕಾರ' ನಂತರ ಉರ್ದು ಸಾಹಿತಿ ಇಸ್ಮಾತ್ ಚುಗತೀ ಅವರ ಸಣ್ಣ ಕತೆಯನ್ನು ಇಟ್ಟುಕೊಂಡು ಬರುತ್ತಿರುವ ಸಿನಿಮಾ 'ಲಜ್ಜೋ' ನಿರೀಕ್ಷೆ ಹುಟ್ಟಿಸಿದೆ. ಮಣಿರತ್ನಂ ಮೊದಲ ಬಾರಿಗೆ ಹಾಸ್ಯ ಕತೆಯನ್ನು ಚಿತ್ರವಾಗಿರುಸುತ್ತಿರೋದು ಇದೇ ಮೊದಲು ಅದರಲ್ಲೂ ಆಮೀರ್ ಜತೆ ಮಣಿಯ ಕಾಂಬೀನೇಷನ್ ವರ್ಕ್ ಔಟ್ ಆಗುತ್ತಾ ಎನ್ನುವ ಉತ್ತರಕ್ಕೆ ಚಿತ್ರ ಬಿಡುಗಡೆ ತನಕವೂ ಕಾಯಬೇಕು. ಕೋಟ್ ಕೋರ್ನರ್ 'ಯುವ ಸಿನಿಮಾ ನಂತರ ಮಣಿ ಜತೆ ಇದು ಎರಡನೇ ಸಿನಿಮಾ. ನನಗೆ ಕತೆ ತುಂಬಾ ಹಿಡಿಸಿದೆ. ಚಿತ್ರಕ್ಕೆ ನಾನು ಸಹಿ ಮಾಡಿದ್ದೇನೆ. ರಾಜಸ್ಥಾನದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಮಣಿ ಒಳ್ಳೆಯ ಪ್ರತಿಭಾವಂತ ನಿರ್ದೇಶಕ ಎನ್ನುವುದರಲ್ಲಿ ನನಗೆ ಯಾವುದೇ ಸಂದೇಹ ಇಲ್ಲ. - ಕರೀನಾ ಕಪೂರ್ (vk lvk published dis article on 10.04.2013)

Monday, April 8, 2013

ಪೂಜಾ ಸಾಲ್ವಿ ಸಿನಿಮಾ ಡ್ರೀಮ್‌

* ಸ್ಟೀವನ್ ರೇಗೊ ಬಾಲಿವುಡ್ ಅಂಗಳದಲ್ಲಿ ಹೊಸ ಹುಡುಗಿಯರು ಕಣ್ಣು ಬಿಡುತ್ತಿದ್ದಾರೆ. ಅದರಲ್ಲೂ ಬಿ- ಟೌನ್‌ನಲ್ಲಿ 20 ಪ್ಲಸ್ ಹುಡುಗಿಯರನ್ನೇ ನಾಯಕರು ಚೂಸ್ ಮಾಡುತ್ತಿರೋದು ಈ ಹೊಸಬರ ಟ್ರೆಂಡಿಗೆ ಮೂಲ ಕಾರಣ. ಈಗ ಲೇಟೆಸ್ಟ್ ಬಾಲಿವುಡ್ ಎಂಟ್ರಿಯಲ್ಲಿ ಪೂಜಾ ಸಾಲ್ವಿ ಎನ್ನುವ ಮರಾಠಿ ಹುಡುಗಿ ರ‌್ಯಾಂಪ್‌ನಿಂದ ಇಳಿದು ಬಿ-ಟೌನ್‌ನಲ್ಲಿ ಚಮಕ್ ತೋರಿಸಲು ರೆಡಿಯಾಗಿದ್ದಾರೆ. 'ವಿಕ್ಕಿ ಡೋನರ್' ಖ್ಯಾತಿಯ ನಟ ಆಯುಷ್ಮಾನ್ ಹಾಗೂ ಕುನಾಲ್ ರಾಯ್ ಕಪೂರ್ ಜತೆಯಾಗಿ ನಟಿಸುತ್ತಿರುವ ರಮೇಶ್ ಸಿಪ್ಪಿಯ ನಿರ್ದೇಶನದ 'ನೌಟಂಕಿ ಸಾಲಾ'ದ ಲೀಡ್ ರೋಲ್‌ನಲ್ಲಿ ಬಳುಕುತ್ತಿರುವ ಹುಡುಗಿ ಪೂಜಾ ಸಾಲ್ವಿ ಫ್ಯಾಶನ್ ಲೋಕದ ಕೊಡುಗೆ ಎನ್ನುವುದು ಉಲ್ಲೇಖಿಸಲ್ಪಡುವ ವಿಷ್ಯಾ. ಪೂಜಾ ಸಾಲ್ವಿ ಹುಟ್ಟಿದ್ದು ಓದಿದ್ದು ಎಲ್ಲವೂ ಗುಜರಾತಿನ ಪಠಾಣವಾಡಿಯಲ್ಲಿ. ಪೂಜಾ ಪಕ್ಕಾ ಸಂಪ್ರದಾಯಗಳ ಮಡುವಿನಲ್ಲಿ ಬಿದ್ದುಕೊಂಡಿರುವ ಮನೆತನದ ಹುಡುಗಿಯಾಗಿರುವುದರಿಂದ ಆರಂಭದಲ್ಲಿ ಪೂಜಾ ಗ್ರಹಗತಿ ಅಷ್ಟೊಂದು ಚೆನ್ನಾಗಿ ಇರಲಿಲ್ಲ ಎನ್ನೋದು ಅವರ ಆಪ್ತರ ನುಡಿ. ಮನೆಯ ಕಟ್ಟು ನಿಟ್ಟಿನ ನಿಯಮಗಳ ನಡುವೆಯಲ್ಲಿ ಪೂಜಾ ಇಷ್ಟಪಟ್ಟಿದ್ದು ಮಾತ್ರ ಫ್ಯಾಶನ್ ಲೋಕದ ಮಿರಿಮಿರಿ ಮಿನುಗುವ ಬೆಳಕು ಹಾಗೂ ರ‌್ಯಾಂಪ್. ಪೂಜಾ ಓದುತ್ತಿದ್ದಂತೆ ಲವಲವಿಕೆಯ ಓಡಾಟ, ನೋಡಲು ಕೂಡ ಸುಂದರವಾಗಿದ್ದರಿಂದ ಕಾಲೇಜಿನ ಆರಂಭದಲ್ಲಿಯೇ ರ‌್ಯಾಂಪ್ ಮೇಲೆ ಅದೃಷ್ಟದಾಟ ನೋಡಿ ಬಂದವಳು. ಇದೇ ಕಾರಣದಿಂದ ಮಾಡೆಲಿಂಗ್ ದುನಿಯಾ ಸುಲಭದಲ್ಲಿಯೇ ಪೂಜಾರ ಕೈ ತುತ್ತಾಯಿತು. ಫ್ಯಾಷನ್ ದುನಿಯಾದ ಪೂಜಾ ಪೂಜಾ ಸಾಲ್ವಿಗೆ ಈಗ ಭರ್ತಿ 25. ರ‌್ಯಾಂಪ್‌ನಲ್ಲಿ ಸದಾ ಓಡಾಡುವ ಈ ಚಿಗರೆ ಸಿನ್ಮಾ ಲೋಕದಲ್ಲಿ ಕಣ್ಣು ಬಿಡುವ ಮುಂಚೆ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡವಳು. ಕ್ಯಾಡ್‌ಬರಿಯಂತಿರುವ ಪೂಜಾ ಆರಂಭದಲ್ಲಿ ಇದೇ ಕಂಪನಿಯ ಜಾಹೀರಾತಿನ ಮೂಲಕ ಕ್ಲಿಕ್ ಆಗಿ ನಂತರ ಜ್ಯುವೆಲ್ಲರಿ ಜಾಹೀರಾತಿನ ವರೆಗೂ ಮೈಮಾಟ ಪ್ರದರ್ಶನದಲ್ಲಿ ನಿಂತು ಹೋದಳು. ಇದೇ ಜಾಹೀರಾತಿನಿಂದ ಖುಷಿಗೊಂಡ ಖ್ಯಾತ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ರಮೇಶ್ ಸಿಪ್ಪಿ ಇವಳೇ ತನ್ನ ಮುಂದಿನ ಸಿನ್ಮಾ ಹೀರೋಯಿನ್ ಎಂದು ಬುಕ್ ಮಾಡಿದ್ದ ವಿಷ್ಯಾ ಈಗ ನೌಟಂಕಿ ಸಾಲಾ ಸಿನ್ಮಾ ಮೂಲಕ ಸುದ್ದಿ ಹೊರಬಂದಿದೆ. ಆಂಗ್ಲ ಸಿನಿಮಾದ ಕತೆಯನ್ನು ಆಧರಿಸಿಕೊಂಡು ಬಂದಿರುವ 'ನೌಟಂಕಿ ಸಾಲಾ' ಸಿನ್ಮಾ ಪೂಜಾಳ ಪಾಲಿಗೆ ಭರ್ಜರಿ ಅವಕಾಶ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಬಿಗ್ ಸಿಪ್ಪಿ ಪ್ರೊಡಕ್ಷನ್ ಹೌಸ್‌ನಡಿ ನಾಯಕಿಯಾಗಿ ಪೂಜಾ ಲಾಂಚ್ ಆಗುತ್ತಿರೋದು ಹೆಮ್ಮೆ ವಿಷ್ಯಾ ಎಂದು ಟ್ವಿಟ್ಟರ್ ಲೋಕದಲ್ಲಿ ಪೂಜಾ ಈಗಾಗಲೇ ಸಂದೇಶ ರವಾನಿಸಿಬಿಟ್ಟಿದ್ದಾಳೆ. ಇದೇ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿ ಕೂತಿರುವ ಚಿತ್ರದ ಹಾಡುಗಳು, ಪ್ರೋಮೋಗಳು ಈಗಾಗಲೇ ಯುವ ಗಲ್ಲಿಯಲ್ಲಿ ಹೊಸ ಹವಾ ಕ್ರಿಯೇಟ್ ಮಾಡಿ ಹೋಗಿದೆ. ಪೂಜಾರ ಮುದ್ದಾದ ತುಟಿಯಂಚಿನಲ್ಲಿರುವ ರಾಣಿ ಜೇನಿನ ಸವಿಯುಂಡ ಆಯುಷ್ಮಾನ್‌ನ ದೃಶ್ಯಗಳು ಈಗಾಗಲೇ ಯುವಕರ ಮೊಬೈಲ್ ತುಂಬಾ ತುಂಬಿ ಹೋಗಿದೆ. ಟೋಟಲಿ ಸಿನ್ಮಾ ನಿರೀಕ್ಷೆ ಹುಟ್ಟಿಸಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿದಿಲ್ಲ. ಪೂಜಾ ಡಯಟ್ ಸೂತ್ರ ರ‌್ಯಾಂಪ್ ಮೇಲೆ ಸದಾ ಕಾಲ ಬಳಕುವಂತಹ ದೇಹವನ್ನು ನಿಭಾಯಿಸುವ ಕಲೆ ಗೊತ್ತಿರುವ ಪೂಜಾ ಸಾಲ್ವಿಗೆ ಡಯಟ್ ಕುರಿತು ಹೆಚ್ಚಿನ ಒಲವು. ಬೆಳಗ್ಗೆ ಬೇಗ ಎದ್ದು ಜಾಗಿಂಗ್, ವರ್ಕೌಟ್‌ನ ಮೂಲಕವೇ ಪೂಜಾ ದೇಹದಂಡನೆಗೆ ಒಳಗಾಗುತ್ತಾರೆ. ತರಕಾರಿಯಲ್ಲಿಯೇ ಹೆಚ್ಚು ಆಸಕ್ತಿ ಇರುವ ಪೂಜಾ ಸಾಲ್ವಿಗೆ ಹಣ್ಣು ಹಾಗೂ ಸಲಾಡ್ ಕಂಡರೆ ಹೆಚ್ಚು ಇಷ್ಟ. ಇಂತಹ ಫುಡ್ ಲಿಸ್ಟ್‌ನಿಂದಾಗಿಯೇ ಸದಾ ಕಾಲ ಲವಲವಿಕೆಯ ಓಡಾಟ, ಫ್ರೆಶ್‌ನೆಸ್ ತುಂಬಿಸಿಕೊಳ್ಳಲು ಆಕ್ಸಿಜನ್‌ನಂತೆ ಕೆಲಸ ಮಾಡುತ್ತದೆ ಎನ್ನೋದು ಪೂಜಾರ ಸಾಲ್ವಿಯ ಮಾತು. ವಾರ್ಡ್‌ರೋಬ್ ಕೆಂಪು ಬಣ್ಣದ ಬಟ್ಟೆಗಳನ್ನೇ ಹೆಚ್ಚು ಆಶ್ರಯಿಸಿರುವ ಪೂಜಾರ ವಾರ್ಡ್ ರೋಬ್‌ನಲ್ಲಿ ಸಮ್ಮರ್, ವಿಂಟರ್, ರೈನಿ ಸೀಸನ್‌ಗಾಗಿಯೇ ವಿಶಿಷ್ಟ ಬಗೆಯ ಸ್ಕರ್ಟ್ಸ್, ಫ್ರಾಕ್ಸ್, ಫಾರ್ಮಲ್ಸ್, ಐ ಪೋಸಸ್ ಇದ್ದೇ ಇರುತ್ತದೆ. ಜತೆಯಲ್ಲಿ ಆಕ್ಸೆಸರೀಸ್‌ನಲ್ಲೂ ಭಿನ್ನತೆ ಬಯಸುವ ಪೂಜಾ ಸಾಲ್ವಿಗೆ ಗೆಜೆಟ್ ಲೋಕದಲ್ಲಿ ವಿಶಿಷ್ಟ ಆಸಕ್ತಿ ಇದೆ. ಇದೇ ಕಾರಣದಿಂದ ಗೆಜೆಟ್ ಲೋಕದ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಗೆಜೆಟ್ ದುಕಾನ್‌ಗಳಿಗೆ ಪದೇ ಪದೇ ಭೇಟಿ ಕೊಡುತ್ತಾ ದಿನ ಕಳೆಯುತ್ತಾರೆ. *** ಪೂಜಾ ಲೈಫ್‌ಸ್ಟೈಲ್ * ಟ್ರಾವೆಲ್, ರೀಡಿಂಗ್ ನಲ್ಲೂ ಪೂಜಾ ಸಾಲ್ವಿಗೆ ಅಪಾರ ಆಸಕ್ತಿ. * ವಿದೇಶ ಪ್ರವಾಸ ಹೆಚ್ಚು. ಆಸೀಸ್, ಸ್ವಿಜ್‌ಲ್ಯಾಂಡ್‌ನಲ್ಲಿ ಬಹಳ ಹೊತ್ತು ಕಾಲ ಕಳೆಯಬೇಕು ಎಂಬ ಕನಸಿದೆ. * ಸಮಯ ಸಿಕ್ಕಾಗ ಆಂಗ್ಲ ಭಾಷೆಯ ಕಾದಂಬರಿ ಓದುವ ಹವ್ಯಾಸ. *** ಬಾಲಿವುಡ್‌ನಲ್ಲಿ ಬಿಗ್ ಸಿಪ್ಪಿ ಪ್ರೊಡಕ್ಷನ್ ಹೌಸ್‌ನಡಿ ನಾಯಕಿಯಾಗಿ ನಾನು ಲಾಂಚ್ ಆಗುತ್ತಿರೋದು ಹೆಮ್ಮೆಯ ವಿಷಯ -ಪೂಜಾ ಸಾಲ್ವಿ ( dis article was published on 9.04.2013 in vk lvk magzine)

Saturday, April 6, 2013

ಕ್ಲಾಸ್-ಮಾಸ್‌ಗಳ ಕೊಂಡಿ ‘ಪರದೇಶಿ’

ಸ್ಟೀವನ್ ರೇಗೊ, ದಾರಂದಕುಕ್ಕು ಕಾಲಿವುಡ್ ಸಿನಿಮಾ ಕ್ಷೇತ್ರವೇ ಹಾಗೆ, ಪ್ರಯೋಗಗಳ ಮೇಲೆ ಪ್ರಯೋಗ ನಡೆಯುತ್ತಾ ಇರುತ್ತದೆ. ಇಲ್ಲಿನ ಪ್ರೇಕ್ಷಕ ವರ್ಗ ಸಿನಿಮಾವನ್ನು ಕ್ಲಾಸ್ ಹಾಗೂ ಮಾಸ್ ಎಂದುಕೊಳ್ಳದೆ, ಎರಡನ್ನೂ ಜತೆಯಾಗಿ ನೋಡಿ ಸಕ್ಸಸ್ ಎನ್ನುವ ಟ್ಯಾಗ್‌ಲೈನ್ ಜೋಡಿಸಿಕೊಟ್ಟವರು. ಇದೇ ಕಾರಣದಿಂದ 'ಮೈ ಅಟೋಗ್ರಾಫ್'ನ ನಿರ್ದೇಶಕ ಚೇರನ್ ಇರಬಹುದು, 'ಸುಬ್ರಹ್ಮಣ್ಯಪುರಂ' ಕೊಟ್ಟ ಶಶಿಕುಮಾರ್ ಇರಬಹುದು, ಭಿನ್ನವಾಗಿ ಸಿನಿಮಾ ಮಾಡುವ ನಿರ್ದೇಶಕ ಬಾಲಾ ಇರಬಹುದು- ಎಲ್ಲರನ್ನೂ ಕಾಲಿವುಡ್ ಸಿನಿಮಾ ಕ್ಷೇತ್ರ ಬೆಳೆಸಿಕೊಂಡು ಬಂದಿದೆ. ಇತ್ತೀಚೆಗೆ ತೆರೆಕಂಡ ಬಾಲಾ ಅವರ 'ಪರದೇಶಿ' ಚಿತ್ರವಂತೂ ಕ್ಲಾಸ್ ಮತ್ತು ಮಾಸ್ ಜತೆಯಾಗಿ ಕೂತು ನೋಡಬಹುದಾದ ಚಿತ್ರ. ಬಾಲಾ ಅವರ ನಿರ್ದೇಶನ ಇದಕ್ಕೆ ಒಂದು ಕಾರಣವಾದರೆ, ಮತ್ತೊಂದು ಕಡೆ ಚಿತ್ರದ ಕತೆಯೇ ಸಂಪೂರ್ಣ ಭಿನ್ನವಾಗಿರುವುದು. ಬಾಲಾ ಅವರ ಚಿತ್ರಗಳೇ ಹಾಗೆ, ಯಾರೂ ತುಳಿಯದ ಹಾದಿಯಲ್ಲಿ ನಡೆಯುವುದೇ ಅವರ ಶೈಲಿ. ಹೆಚ್ಚು ಕಮರ್ಷಿಯಲ್ ಅಂಶಗಳಿಲ್ಲದಿದ್ದರೂ ಪ್ರಬುದ್ಧ ಚಿತ್ರಗಳನ್ನು ನೀಡಿ ಛಾಪು ಮೂಡಿಸಿರುವ ಅವರ ಇತ್ತೀಚಿನ ಚಿತ್ರ 'ಪರದೇಶಿ'ಯೂ ಇದೇ ಸಾಲಿಗೆ ಸೇರುತ್ತದೆ. ಕನ್ನಡದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ ಅಥರ್ವ ಈ ಚಿತ್ರದ ನಾಯಕ. ಅಪ್ಪ ಮುರಳಿಯಂತೆಯೇ ತಮಿಳು ತನ್ನ ವೃತ್ತಿ ಜೀವನ ರೂಪಿಸಿಕೊಳ್ಳಲು ಅಥರ್ವನಿಗೆ ಒಳ್ಳೆಯ ವೇದಿಕೆ ಸಿಕ್ಕಿದೆ. ಧನ್ಸಿಕಾ ನಾಯಕಿಯಾಗಿದ್ದರೆ, ಜನಪ್ರಿಯ ನಟಿ ವೇದಿಕಾ ಕೂಡ ತಾರಾಗಣದಲ್ಲಿದ್ದಾರೆ. ಹೊಸಬರನ್ನು ಹಾಕಿಕೊಂಡು ಚಾರಿತ್ರಿಕ ಚಿತ್ರ ನಿರ್ದೇಶಿಸಿರುವ ಬಾಲಾ ಅವರ ಧೈರ್ಯವನ್ನು ಮೆಚ್ಚಲೇಬೇಕು. 1969ರಲ್ಲಿ ಪಾಲ್ ಹ್ಯಾರಿಸ್ ಡೇನಿಯಲ್ ಬರೆದ ಕಾದಂಬರಿ 'ರೆಡ್ ಟೀ'ಯ ತಮಿಳು ಅನುವಾದ 'ಎರಿಯುಂ ಪನಿಕಾಡು'ವನ್ನು ಆಧರಿಸಿ ಬಂದಿರುವ ಚಿತ್ರವಿದು. ಬ್ರಿಟೀಷರ ಕಾಲದಲ್ಲಿ ಟೀ ಎಸ್ಟೇಟುಗಳಲ್ಲಿ ಜೀತದಾಳುಗಳಾಗಿ ಬದುಕುತ್ತಿದ್ದವರನ್ನು ಕುರಿತ ಸಿನಿಮಾ ಇದು. ಸಿನಿಮಾದಲ್ಲಿರುವ 200ಕ್ಕೂ ಅಧಿಕ ನಟರಿಗೆ ಕೂದಲು ಕತ್ತರಿಸಲು ಬಿಡದೆ, ಮತ್ತೊಂದೆಡೆ ಅಥರ್ವನ ಹತ್ತು ಕಿಲೋ ತೂಕವಿಳಿಸಿ, ಬೋಳು ಮಂಡೆಯನ್ನೇ ಇಟ್ಟುಕೊಳ್ಳಬೇಕೆಂದು ತಾಕೀತು ಮಾಡಿ, ಕ್ಲೈಮ್ಯಾಕ್ಸ್ ಸೀನಿಗಾಗಿ ಪ್ರಮುಖ ಸ್ತ್ರೀ ಪಾತ್ರ ಧನ್ಸಿಕಾಳನ್ನು ಆರು ದಿನಗಳಷ್ಟು ಕಾಲ ಉಪವಾಸವಿರಿಸಿದಂತಹವರು ಬಾಲಾ. ಚಿತ್ರಗಳೆಂದರೆ ಬಣ್ಣದ ಮಿಶ್ರಣಗಳ ಜತೆಯಲ್ಲಿ ರಂಜನೆಯ ಕಂಪು ಎನ್ನುವುದು ಸಾಮಾನ್ಯ ಗ್ರಹಿಕೆ. ಆದರೆ 'ಪರದೇಶಿ' ಹೀಗಿಲ್ಲ. ಸಿನಿಮಾ ಒಂದು ವಿಚಿತ್ರ ಬಣ್ಣದೊಂದಿಗೆ ತೆರೆದುಕೊಳ್ಳುವುದಲ್ಲದೆ, ಇಡೀ ಸಿನಿಮಾದಲ್ಲಿ ಅದೇ ರೀತಿಯನ್ನು ಉಳಿಸಿಕೊಂಡು, ಹೇಳುತ್ತಿರುವುದು ಮನರಂಜನೆಯ ಕತೆಯಲ್ಲ ಎಂಬ ಎಚ್ಚರವನ್ನು ನಮ್ಮಲ್ಲಿ ಉಳಿಸುತ್ತದೆ. *** ಅವನೊಬ್ಬ ಅಂಡಲೆಯುವ ಆಸಾಮಿ. ಅವನಿಗೂ ಅಮ್ಮ ಹಾಗೂ ಇಷ್ಟಪಡುವ ಹೆಣ್ಣೊಬ್ಬಳು ಇರುತ್ತಾಳೆ, ಬಡತನವಾದರೂ ದುಃಖವಿಲ್ಲದ ಜೀವನ. ಹೆಣ್ಣು ಬಂದಮೇಲೆ ದುಡಿಮೆಯು ಬೇಕೇಬೇಕಲ್ಲ, ದುಡಿದರೂ ಅವನ ಊರಿನ ಜನ ಇವನು ಕೂಲಿ ಕೊಡಲು ಅರ್ಹನಲ್ಲ ಎಂದು ತಿಳಿಯುತ್ತಾರೆ. ಹೀಗಿರುವಾಗ ಅಲ್ಲೊಬ್ಬ ಟೀ ತೋಟದ ಯಜಮಾನನ ಆಗಮನವಾಗುತ್ತದೆ, ಎಲ್ಲರಿಗೂ ಮುಂಗಡ ಹಣ ಕೊಡುತ್ತೇನೆ, ಇರಲು ಮನೆ ಕೊಡುತ್ತೇನೆ, ವರ್ಷ ಕಳೆದಂತೆ ಮನೆಗೆ ವಾಪಾಸ್ಸಾಗಬಹುದು ಎಂದೆಲ್ಲ ನಂಬಿಸುತ್ತಾನೆ. ಕಿಂದರಿ ಜೋಗಿಯ ಸೆಳೆತಕ್ಕೆ ಸಿಲುಕಿದವರಂತೆ ಊರಿಗೆ ಊರೇ ಅವನ ಹಿಂದೆ ಹೊರಡುತ್ತದೆ. ನಲವತ್ತೆಂಟು ದಿನಗಳ ಕಾಲ್ನಡಿಗೆಯ ದಾರಿಯಲ್ಲಿ ಕೈಲಾಗದವರನ್ನು ಅಲ್ಲೇ ಸಾಯಲು ಬಿಟ್ಟು, ಬಸವಳಿದ ಉಳಿದ ಜನರನ್ನು ತಂದು ತನ್ನ ಟೀ ತೋಟದಲ್ಲಿ ಕೆಲಸಕ್ಕಿಟ್ಟುಕೊಂಡ ಯಜಮಾನ ಅವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಾನೆ. ಮದುವೆಯಾಗದೇ ಬಸಿರಾದ ತನ್ನ ಗೆಳತಿಯನ್ನೇ ನೆನೆಸುತ್ತಾ ತಪ್ಪಿಸಿಕೊಳ್ಳಲು ಯತ್ನಿಸುವ ನಾಯಕನ ಕಾಲಿನ ನರ ಕತ್ತರಿಸಿ ಊನಗೊಳಿಸಲಾಗುತ್ತದೆ, ಹೊಸದಾಗಿ ಮದುವೆಯಾದ ಗಂಡನನ್ನು ಬಿಟ್ಟಿರಲಾರೆ ಎಂದು ಅವನ ಜೊತೆಯೇ ಹೊರಡುವ ಪುಟ್ಟ ಹೆಂಡತಿ, ಬ್ರಿಟೀಷ್ ಅಧಿಕಾರಿಯೊಬ್ಬನ ಕಾಮದಾಸೆ ತೀರಿಸಬೇಕಾಗುತ್ತದೆ. ಅಲ್ಲಾಗಲೇ ಉಳಿದುಕೊಂಡಿರುವವರ, ಅಮಾಯಕ ಜನರನ್ನು ಮತಾಂತರ ಮಾಡಬಂದವರ ಕತೆಯೂ ಸೇರಿ ಸಿನಿಮಾ ಮುಂದೆ ದಾರುಣ ಅಂತ್ಯವನ್ನೇ ಹೊಂದಿದೆ. 'ಎರಿಯುಂ ಪನಿಕಾಡು' ಕಾದಂಬರಿ ಓದಿದವರಿಗೆ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಡಲು ವಿಫಲ ಅನ್ನಿಸಬಿಡಬಹುದು. ಆದರೆ ಬಾಲರ ನಿರ್ದೇಶನ ಚಿತ್ರದಲ್ಲಿ ಸರಿಯಾಗಿ ಕೆಲಸ ಮಾಡಿದೆ. ಸಿನಿಮಾದ ಮೊದಲ ಭಾಗದಲ್ಲಿ ಒಂದು ಊರಿನ ಕತೆಯನ್ನು ಹೇಳುತ್ತಾ, ಉತ್ತರಾರ್ಧದಲ್ಲಿ ಎಲ್ಲವನ್ನೂ ಅವಸರದಲ್ಲಿ ಮುಗಿಸಿದಂತೆ ಕಾಣುತ್ತದೆ, ನಿಜ. ಆದರೆ ಬಡತನವಿದ್ದರೂ ಖುಷಿಯಾಗಿದ್ದ ಜನರ ಸ್ಥಿತಿ ಹಣದಾಸೆಗೆ ಬಲಿಯಾದ ಮೇಲೆ ಹೇಗೆ ದಾರುಣವಾಗುತ್ತದೆ, ಸ್ಥಳೀಯರ ಸಂಕುಚಿತ ಮನೋಭಾವ ಹೇಗೆ ಪರಕೀಯರನ್ನು ಉತ್ತಮವೆನಿಸುವಂತೆ ಮಾಡುತ್ತದೆ, ಜೀವನ ಮಟ್ಟ ಸುಧಾರಿಸಿಕೊಳ್ಳುವ ಹಂಬಲ ಹೇಗೆ ಇಡೀ ಊರಿನ ಸಂಪ್ರದಾಯಕ್ಕೆ ಅದರ ಪರಿವರ್ತನೆಗೆ ಕಾರಣವಾಗುತ್ತದೆ ಎಂಬುದನ್ನು ಅನಾವರಣಗೊಳಿಸಲಾಗಿದೆ. ಹಾಡೊಂದರಲ್ಲಿ ಬರುವ ವಸಾಹತುಶಾಹಿಯ ವಿಡಂಬನೆ, ದಿವ್ಯ ವಿಷಾದದ ನಡುವೆಯೂ ನಗೆಯುಕ್ಕಿಸುವ ಸಂಭಾಷಣೆ ಮನ ಕಲಕುತ್ತವೆ. ಕಥಾನಾಯಕ ಎಲ್ಲವನ್ನೂ ಮೆಟ್ಟಿ ಊರಿಗೆ ತೆರಳುತ್ತಾನೆ, ಕುಟುಂಬವನ್ನು ಸೇರುತ್ತಾನೆ ಎಂದುಕೊಳ್ಳುವಾಗಲೇ, ಯಾತನಾ ಶಿಬಿರಕ್ಕೆ ಆತನ ಹೆಂಡತಿ ಕಾಲಿಡುತ್ತಾಳೆ. ಇದರೊಂದಿಗೆ ಚಿತ್ರ ಮುಗಿಯುತ್ತದೆ. ಜೊತೆಗೆ ಗಾಂಧಿ ಎಂಬ ಶಕ್ತಿ ದೇಶಕ್ಕೆ ಏಕೆ ಬೇಕಿತ್ತು ಎಂಬುದನ್ನು ಪರೋಕ್ಷವಾಗಿ ಈ ಸಿನಿಮಾ ಸೂಚಿಸುತ್ತದೆ. ಈ ಕಾರಣಕ್ಕಾದರೂ ಪರದೇಶಿಯನ್ನು ನೋಡಬೇಕು.

Friday, April 5, 2013

ಕ್ರೈಸ್ತರಲ್ಲಿ ಹಿಂದುಳಿದ ರಾಜಕೀಯ ಪ್ರಜ್ಞೆ

* ಸ್ಟೀವನ್ ರೇಗೊ, ದಾರಂದಕುಕ್ಕು ಕ್ರೈಸ್ತ ಸಮುದಾಯ ರಾಜ್ಯದಲ್ಲಿರುವ ಇತರ ಸಮುದಾಯಗಳಿಗೆ ಹೋಲಿಕೆ ಮಾಡಿ ನೋಡಿದರೆ ಆಧುನಿಕತೆಗೆ ಮುಖ ಮಾಡಿ ರುವ ಸಮುದಾಯ. ಶಿಕ್ಷಣ, ಸಮಾಜ ಸೇವೆ, ಉದ್ಯಮ, ಬ್ಯಾಕಿಂಗ್, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರ ದಲ್ಲೂ ಕ್ರೈಸ್ತರು ನೇರ ವಾಗಿ ತೊಡಗಿಸಿ ಕೊಂಡಿದ್ದಾರೆ. ಸ್ವ ಸಾಮರ್ಥ್ಯದ ಮೂಲಕವೇ ಏನಾದರೂ ಸಾಧಿಸಬೇಕೇನ್ನುವ ಕಿಚ್ಚು ಇರುವುದರಿಂದಲೇ ಕ್ರೈಸ್ತ ಸಮುದಾಯದ ಬಹುತೇಕ ಮಂದಿ ವಿದೇಶದಲ್ಲಿ ನಾನಾ ವೃತ್ತಿಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಕಂಪನಿಗಳನ್ನು ಸ್ಥಾಪಿಸಿ ಕೊಂಡಿರುವ ಉದಾಹರಣೆಗಳು ಸಾಕಷ್ಟು ಇವೆ. ರಾಜ್ಯದಲ್ಲಿ ರುವ ಮತದಾರರಲ್ಲಿ ಶೇ. 4.5ರಷ್ಟು ಕ್ರೈಸ್ತ ಸಮುದಾಯದ ಮತದಾ ರರಿ ದ್ದಾರೆ. ಕ್ರೈಸ್ತ ಸಮುದಾಯದಲ್ಲಿ ಆರ್‌ಸಿ(ರೋಮನ್ ಕ್ಯಾಥೋ ಲಿಕ್)ರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಪ್ರೊಟೆಸ್ಟೆಂಟ್, ಫೆಲೋಶಿಪ್ ಗ್ರೂಪ್ಸ್ , ಪೆಂತೆಕೋಸ್ತ್, ಇವೆಂಜಿಕಲ್ಸ್, ಮಲಯಂಕರ, ನ್ಯೂ ಲೈಫ್, ಸಿರಿಯನ್ ಕ್ರೈಸ್ತ ಸಮುದಾಯ ಗಳನ್ನು ಹೊಂದಿದ್ದಾರೆ. ಕರಾವಳಿ ಕ್ರೈಸ್ತ ಸಮುದಾಯ ಪೋರ್ಚ್‌ಗೀ ಸರ ಮೂಲಗಳಿಂದ ಬಂದವರು ಎನ್ನಲಾಗುತ್ತದೆ. ಇದರ ಜತೆಯಲ್ಲಿ ತಮಿಳು ಕ್ರೈಸ್ತರು ಬೆಂಗಳೂರು, ಮೈಸೂರು ಕಡೆಗಳಲ್ಲಿ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಇವರ ಮೂಲ ಮದ್ರಾಸ್ ಪ್ರಾಂತ್ಯ. ಇನ್ನುಳಿದಂತೆ ಕೇರಳದಿಂದ ಬಂದ ಕ್ರೈಸ್ತರು ಮಲಯಂಕರ, ಸಿರಿಯನ್ ಕ್ರೈಸ್ತರು ಮುಖ್ಯವಾಗಿ ಮಲಯಾಳಂ ಭಾಷೆಯೇ ಅವರಲ್ಲಿ ಪ್ರಮುಖವಾಗಿರುತ್ತದೆ. ಅದರಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರ ಗೋಡು, ಕಾರವಾರ ಪ್ರದೇಶಗಳಲ್ಲಿ ಜಾಸ್ತಿ ಸಂಖ್ಯೆ ಯಲ್ಲಿರುವ ಕ್ರೈಸ್ತ ಸಮುದಾಯ ರಾಜ್ಯದ ಎಲ್ಲ ಜಿಲ್ಲೆ ಗಳಲ್ಲೂ ಅಲ್ಪ ಪ್ರಮಾಣದಲ್ಲಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 4 ಲಕ್ಷದಷ್ಟೂ ಕ್ರೈಸ್ತ ಮತದಾರರಿದ್ದಾರೆ. ಮಂಗಳೂರು ದಕ್ಷಿಣ ಹಾಗೂ ಮೂಲ್ಕಿ- ಮೂಡು ಬಿದರೆ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ದ್ದಾರೆ. ಬೆಂಗಳೂರಿನ ಸರ್ವಜ್ಞ ನಗರ, ಸಿ.ವಿ.ರಾಮನ್ ನಗರದಲ್ಲಿ ಅತಿ ಹೆಚ್ಚು ಕ್ರೈಸ್ತ ಸಮುದಾಯದ ಮತದಾರರಿದ್ದಾರೆ. ಇವುಗಳ ಜತೆ ಯಲ್ಲಿ ಯಶವಂತಪುರ, ಶಿವಾಜಿ ನಗರ ದಲ್ಲೂ ಅವರ ಸಂಖ್ಯೆ ಹೆಚ್ಚಿದೆ. ಕ್ರೈಸ್ತ ಧರ್ಮ ಗುರುಗಳಿಂದ ಧರ್ಮ ಜಾಗೃತಿಗಾಗಿ ಆರಂಭ ಮಾಡಿದ ಪತ್ರಿಕೆ 'ಮಂಗ ಳೂರು ಸಮಾಚಾರ'ದ ಮೂಲಕ ಇಡೀ ಕನ್ನಡ ಪತ್ರಿಕೋದ್ಯಮ ಬೆಳೆಯಲು ಸಾಧ್ಯವಾಗಿದೆ. ರಾಜ್ಯದ ನಾನಾ ಕಡೆಗಳಲ್ಲಿ ನೂರಾರು ವರ್ಷಗಳಿಂದ ಈ ಸಮು ದಾಯದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಕಾಣಸಿಗುತ್ತದೆ. ಇನ್ನುಳಿ ದಂತೆ ಬ್ಯಾಕಿಂಗ್, ಕೃಷಿ, ಕೈಗಾರಿಕೆಯಲ್ಲೂ ಕ್ರೈಸ್ತ ಸಮುದಾಯ ಭದ್ರ ಛಾಪು ಹಾಕಿದೆ. ಕ್ರೈಸ್ತ ಸಮುದಾಯದಲ್ಲಿ ಶಿಕ್ಷಣದ ಮಟ್ಟ ಹೆಚ್ಚಿನ ಪ್ರಮಾಣದಲ್ಲಿದ್ದರೂ ರಾಜಕಾರಣದಲ್ಲಿ ತೀರಾ ಹೆಚ್ಚಿನ ಆಸಕ್ತಿ ಕಾಣಿಸುವುದಿಲ್ಲ. ಆದರೂ ದೇಶದ ರಾಜಕಾರಣದಲ್ಲಿ ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡುವಲ್ಲಿ ಈ ಸಮುದಾಯ ಶಕ್ತವಾಗಿದೆ. ಒರಿಸ್ಸಾ ಎಂಪಿ ಆಗಿದ್ದವರು ಈಗ ಜಾರ್ಖಂಡ್‌ನಿಂದ ಎಂಪಿಯಾ ಗಿರುವ ಮೇಬಲ್ ಫರ್ನಾಂಡಿಸ್, ಜಾರ್ಖಂಡ್ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಿ ನಂತರ ರಾಜ್ಯ ಸಭೆಯ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್, ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ ನಂತರ ಗೃಹ ಸಚಿವರಾಗಿ ದುಡಿದ ಜಾರ್ಜ್ ಫರ್ನಾಂಡಿಸ್ ಕೂಡ ಕ್ರೈಸ್ತ ಸಮುದಾಯದಲ್ಲಿ ಗುರುತಿಸಿಕೊಂಡವರು. ದೇವರಾಜ ಅರಸ್ ಸರಕಾರದಲ್ಲಿ ಚಿಕ್ಕಮಗಳೂರಿನ ಈವಾ ವಾಸ್ ಮಂತ್ರಿಯಾಗಿದ್ದರು. ಎಸ್.ಎಂ. ಕೃಷ್ಣ ಮಂತ್ರಿಮಂಡಲದಲ್ಲಿ ಟಿ. ಜಾನ್ ಅಬಕಾರಿ ಸಚಿವರಾಗಿದ್ದರು. ಸ್ವತಂತ್ರ ಪಾರ್ಟಿಯಿಂದ ಜೆ.ಎಂ. ಲೋಬೋ ಪ್ರಭು ಎಂಪಿಯಾಗಿದ್ದರು. ಮಂಗಳೂರಿನ ಬ್ಲೇಸಿ ಯಸ್ ಡಿಸೋಜ ಅವರು ವೀರೇಂದ್ರ ಪಾಟೀಲ್ ಮಂತ್ರಿಮಂಡಲ ದಲ್ಲಿ ಕಾನೂನು ಸಚಿವರಾಗಿದ್ದರು. ಈ ಬಳಿಕ ಎಸ್.ಎಂ. ಕೃಷ್ಣ ಸರಕಾ ರ ದಲ್ಲಿ ಕಾರ್ಮಿಕ ಸಚಿವರಾಗಿ ಕಾರ‌್ಯನಿರ್ವಹಿಸಿದ್ದರು. ಮಂಗಳೂ ರಿ ನಿಂದ 1972ರಲ್ಲಿ ಅಡ್ಡಿ ಸಲ್ಡಾನಾ ಮೊದಲ ಬಾರಿಗೆ ಕ್ರೈಸ್ತ ಸಮುದಾಯದಿಂದ ಗೆದ್ದು ಬಂದ ಮೊದಲ ಮಹಿಳೆಯಾಗಿದ್ದರು. ಕುಂದಾಪುರದಲ್ಲಿ ವಿನ್ನಿಫ್ರೆಡ್ ಫರ್ನಾಂಡಿಸ್ ಎರಡು ಬಾರಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಹಿಳೆಯೊಬ್ಬರು ದಾಖಲೆ ಬರೆದರು. ಮಂಗಳೂರು ಕ್ಷೇತ್ರದಿಂದ ಗೆದ್ದು ಬಂದಿದ್ದ ಪಿ.ಎಫ್. ರಾಡ್ರಿಗಸ್ ದೇವರಾಜ ಅರಸ್ ಮಂತ್ರಿಮಂಡಲದಲ್ಲಿ ಸಚಿವರಾಗಿ ದ್ದರು. ಮೈಕಲ್ ಫರ್ನಾಂಡೀಸ್ ಚುನಾವಣೆಯಲ್ಲಿ ನಿಂತು ಎಂಎಲ್‌ಎ ಆಗಿದ್ದರು. 1983 ಇವರಲ್ಲಿ ಮೈಕಲ್ ಅವರ ಸಹೋದರ ಬೆಂಗಳೂರು ನಗರ ಪಾಲಿಕೆಯಲ್ಲಿ ಮೇಯರ್ ಲಾರೆನ್ಸ್ ಫರ್ನಾಂಡಿಸ್ ಮೇಯರ್ ಆಗಿದ್ದರು. ರಾಜ್ಯದಲ್ಲಿರುವ ನಾನಾ ನಗರಸಭೆ, ಪಂಚಾಯಿತಿಗಳಲ್ಲೂ ಕ್ರೈಸ್ತ ಸಮುದಾಯದವರು ಗೆಲ್ಲುವ ಮೂಲಕ ತಾವೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ ಎಂದು ತೋರಿಸುವ ಪ್ರಯತ್ನಗಳು ಕೆಲವೊಮ್ಮೆ ನಡೆದಿದೆ. ----- ಕ್ರೈಸ್ತ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಒಂದು ಹಂತದ ವರೆಗೆ ಬೆಳೆದಿದೆ. ಅವರಲ್ಲಿ ನಿರ್ದಿಷ್ಟ ರಾಜಕೀಯ ಗುರಿಯ ಕುರಿತಾಗಿ ಸಾಕಷ್ಟು ಗೊಂದಲವಿದೆ. ಚರ್ಚ್ ಮಟ್ಟದಲ್ಲಿರುವ ಯುವ ಸಂಘಟನೆಯಾದ ಐವೈಸಿಎಂಗಳಲ್ಲಿ ರಾಜಕೀಯ ಪ್ರಜ್ಞೆ, ನಾಯಕತ್ವ ಬೆಳೆಸುವ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಲ್ಲೂ ಏಕತೆಯ ಮಂತ್ರವಿಲ್ಲ. ಆರ್ಥಿಕವಾಗಿ ಬಲಿಷ್ಟರಾಗುತ್ತಾ ಹೋಗಿ ರಾಜಕೀಯವಾಗಿ ಹಿಂದುಳಿಯುವ ಪರಂಪರೆ ಈಗ ಕ್ರೈಸ್ತ ಸಮುದಾಯದಲ್ಲಿ ಕಾಣಿಸಿಕೊಂಡಿದೆ. * ಹೆನ್ರಿ ಮೆಂಡೋನ್ಸಾ, ಉಪನ್ಯಾಸಕ (vk daily published dis article on 6.04.2013) more if need info http://vijaykarnataka.indiatimes.com/articleshow/19403100.cms

comunity vote bank-vk election desk1

(vk main eddition publishe dis article on 6.04.2013)

ಟೂರ್ ಟು ಥಾಯ್ಲೆಂಡ್: ಟಾಲಿವುಡ್‌ನಲ್ಲಿ ‘ಚರಣ’ ಗೀತೆ

* ಸ್ಟೀವನ್ ರೇಗೊ, ದಾರಂದಕುಕ್ಕು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಯ ಮನೆಯಲ್ಲಿ ಈಗ ಜಾಕ್ ರೂಸೆಲ್ ಸ್ವಾತಂತ್ರ್ಯವಾಗಿ ಮನೆ ತುಂಬಾ ಓಡಾಡುತ್ತಿದ್ದಾನೆ. ಚಿರಂಜೀವಿಯ ಸೊಸೆ ಉಪಾಸನಾ ಜತೆಯಲ್ಲಂತೂ ಜಾಕ್ ರೂಸೆಲ್‌ಗೆ ಒಂಚೂರು ಪ್ರೀತಿ ಜಾಸ್ತಿ. ಕಾರಣ ಇಷ್ಟೇ ...ಥಾಯ್ಲೆಂಡ್‌ನಿಂದ ಜಾಕ್ ರೂಸೆಲ್‌ನನ್ನು ಹೊತ್ತು ತಂದದ್ದು ಕೂಡ ಉಪಾಸನಾ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಉಪಾಸನಾ ಪತಿ ನಟ ರಾಮ್‌ಚರಣ್ ತೇಜಾರ ಹುಟ್ಟು ಹಬ್ಬಕ್ಕೆ ಈ ವಿಶೇಷ ನಾಯಿ ಜಾಕ್ ರೂಸೆಲ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಮ್‌ಚರಣ್ ತೇಜಾ ಹಾಗೂ ಉಪಾಸನಾ ಜತೆಯಾಗಿ ವಿದೇಶದ ಯಾವುದೇ ಟೂರ್ ಹೋದರೂ ಕೂಡ ಅಲ್ಲಿಂದ ಯಾವುದಾದರೂ ನಾಯಿ ಮರಿಯನ್ನು ತರುವುದು ವಾಡಿಕೆ. ಒಂದು ಬಾರಿ ರಾಮ್‌ಚರಣ್ ತೇಜಾ ಉಪಾಸನಾಕ್ಕೆ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿದರೆ ಮತ್ತೊಂದು ಸಲ ರಾಮ್‌ಚರಣ್ ನೀಡುವುದು ಮಾಮೂಲಿ ವಿಷ್ಯಾ. ಇದೇ ಕಾರಣದಿಂದ ಚಿರಂಜೀವಿ ಮನೆಯಲ್ಲಿ ಐದಕ್ಕೂ ಅಧಿಕ ವಿಶೇಷ ವಿದೇಶಿ ತಳಿಯ ನಾಯಿ ಮರಿಗಳಿಗೆ ಜಾಗವಿದೆ. ಅದರಲ್ಲೂ ರಾಮ್‌ಗೆ ಇತ್ತೀಚೆಗೆ ನೀಡಿದ ವಿದೇಶಿ ತಳಿಯ ಜಾಕ್ ರೂಸೆಲ್ ಈಗ ಚಿರು ಮನೆಯಲ್ಲಿ ವಿಶೇಷ ಅತಿಥಿ ಸ್ಥಾನದಲ್ಲಿ ಬಂದು ಕೂತಿದ್ದಾನೆ. ಕಳೆದ ಬಾರಿ ಕುದುರೆ ಬಂತು ಕಳೆದ ಬಾರಿ ರಾಮ್‌ಚರಣ್ ತೇಜಾ ಉಪಸನಾ ಬರ್ತ್‌ಡೇಗೆ ಬಿಳಿ ಬಣ್ಣದ ಕುದುರೆಯನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ಹಾಲೆಂಡ್‌ನಿಂದ ತರಿಸಲಾಗಿತ್ತು. ರಾಮ್ ಚರಣ್ ಚಿತ್ರವೊಂದರ ಚಿತ್ರೀಕರಣಕ್ಕೆ ಹಾಲೆಂಡ್‌ಗೆ ಹೋಗಿದ್ದಾಗ ಅಲ್ಲಿ ಬಿಳಿ ಬಣ್ಣದ ಕುದುರೆ ಚರಣ್‌ರಿಗೆ ಬಹಳ ಇಷ್ಟವಾಯಿತು. ಚಿತ್ರದ ಚಿತ್ರೀಕರಣ ಮುಗಿದ ನಂತರ ಚಿತ್ರತಂಡದ ಜತೆಗೆ ಈ ಬಿಳಿ ಕುದುರೆಯನ್ನು ಕೂಡ ತರಿಸಿಕೊಳ್ಳಲಾಯಿತು. ರಾಮ್‌ಚರಣ್ ತೇಜಾ ಚಿತ್ರಗಳ ಶೂಟಿಂಗ್ ಕಾರ‌್ಯದಲ್ಲಿ ಬ್ಯುಸಿಯಾಗಿದ್ದಾಗ ಪತ್ನಿ ಉಪಾಸನಾ ವಿದೇಶಿ ದೇಶಗಳಲ್ಲಿರುವ ವಿಶಿಷ್ಟ ತಾಣಗಳನ್ನು ಗುರುತು ಹಾಕುತ್ತಾರೆ. ತೇಜಾ ಚಿತ್ರದ ಚಿತ್ರೀಕರಣ ಮುಗಿಸಿದ ನಂತರ ಈ ವಿಶಿಷ್ಟ ಪ್ರವಾಸಿ ಸ್ಥಳಗಳಿಗೆ ಪತ್ನಿ ಜತೆಯಲ್ಲಿ ಸುತ್ತಾಟ ಮಾಡುತ್ತಾರೆ. ಅಲ್ಲಿ ಸಿಗುವ ವಿಶಿಷ್ಟ ವಸ್ತುಗಳ ಜತೆಯಲ್ಲಿ ಪ್ರಾಣಿಗಳನ್ನು ಕೂಡ ಮನೆಗೆ ತರುವ ಸಂಪ್ರದಾಯವನ್ನು ಇಬ್ಬರು ಬೆಳೆಸಿಕೊಂಡಿದ್ದಾರೆ. ರಾಮ್‌ಚರಣ್‌ತೇಜಾ ಉಪಾಸನಾ ಅವರನ್ನು ಮದುವೆಯಾಗುವ ಮುಂಚೆನೇ ಇಬ್ಬರು ಒಳ್ಳೆಯ ಗೆಳೆಯರು ಸುತ್ತಾಡುವುದರಲ್ಲಿಯೇ ಅವರಿಬ್ಬರು ಜತೆಯಾದರು ಎನ್ನುತ್ತಾರೆ ಅವರ ಕುಟುಂಬದ ಮೂಲ. ಆದರೆ ಮದುವೆಯಾದ ನಂತರವಂತೂ ತಿಂಗಳಲ್ಲಿ ಒಂದು ವಾರ ಬರೀ ಕುಟುಂಬ, ಪತ್ನಿಯ ಜತೆಯಲ್ಲಿ ಸುತ್ತಾಟಕ್ಕೆ ಮೀಸಲಿಡುತ್ತಾರೆ. ಇತರ ನಟರ ಪತ್ನಿಯಂತೆ ಪತಿಯ ಜತೆಯಲ್ಲಿ ವಿದೇಶ ಚಿತ್ರೀಕರಣದಲ್ಲಿ ಉಪಾಸನಾ ಹೋಗುವುದು ತೀರಾ ಕಡಿಮೆ. ಹೈದರಾಬಾದ್‌ನಲ್ಲಿಯೇ ಉಳಿದುಕೊಂಡು ಟೂರಿಂಗ್ ಸ್ಪಾಟ್‌ಗಳ ಹುಡುಕಾಟದಲ್ಲಿ ತಲ್ಲೀನರಾಗಿರುತ್ತಾರೆ. ಸುರೇಖಾ ಉಪಾಸನಾಳಿಗೆ ಗೈಡ್ ಮೆಗಾಸ್ಟಾರ್ ಚಿರಂಜೀವಿ ಅವರ ಪತ್ನಿ ಸುರೇಖಾ ಉಪಾಸನಾಳ ಗೈಡ್ ಎನ್ನುತ್ತಾರೆ ರಾಮ್ ಚರಣ್‌ತೇಜಾ. ನಟ ಎಂದಾಕ್ಷಣ ಮನೆಯಲ್ಲಿ ಪತ್ನಿಯ ಜತೆಯಲ್ಲಿ ಕಾಲ ಕಳೆಯುವುದಕ್ಕಿಂತ ಹೆಚ್ಚಾಗಿ ಚಿತ್ರಗಳ ಚಿತ್ರೀಕರಣದಲ್ಲಿ ತುಂಬಾನೇ ಬ್ಯುಸಿ ಇರುತ್ತಾರೆ. ಇದು ನನ್ನ ಅಪ್ಪ ಚಿರಂಜೀವಿಯನ್ನು ಕಟ್ಟಿಕೊಂಡು ಬದುಕುತ್ತಿರುವ ತಾಯಿ ಸುರೇಖಾ ಆವರಿಗೆ ಚೆನ್ನಾಗಿ ಗೊತ್ತು. ಅವರೇ ಉಪಾಸನಾಳಿಗೆ ಗೈಡ್ ಆಗಿ ನೋಡಿಕೊಳ್ಳುತ್ತಿದ್ದಾರೆ. ಅವರಿಂದಲೇ ಟೂರಿಂಗ್ ಪ್ಲೇಸ್‌ಗಳ ಬಗ್ಗೆ ತಿಳಿ ಹೇಳುತ್ತಾರೆ. ವಿದೇಶದಲ್ಲಿ ಯಾವ ಕಡೆ ಯಾವುದಿದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು ಎನ್ನುತ್ತಾರೆ ರಾಮ್ ಚರಣ್. ಟೋಟಲಿ ರಾಮ್‌ಚರಣ್ ತೇಜಾ ಹಾಗೂ ಉಪಾಸನಾಳ ಟೂರಿಂಗ್ ಅನುಭವಗಳಿಗಿಂತ ಹೆಚ್ಚಾಗಿ ಅವರ ಪ್ರಾಣಿಗಳ ಕುರಿತು ಬೆಳೆಸುವ ಪ್ರೀತಿಯೇ ಜಾಸ್ತಿ ಚರ್ಚೆಗೆ ಬರುತ್ತದೆ ಎನ್ನೋದು ವಿಶೇಷ. (vk lvk published dis article on 6.04.2013)

Monday, April 1, 2013

ಕುಡ್ಲದ ಹುಡುಗಿಗೆ ಸಿದ್ದಾರ್ಥ ಕ್ಲೀನ್‌ ಬೋಲ್ಡ್‌ !

* ಸ್ಟೀವನ್ ರೇಗೊ ದಾರಂದಕುಕ್ಕು ಆದರೆ ಹರ್ಷಿತಾ ಶೆಟ್ಟಿಯಂತೂ ಸಿನ್ಮಾ ಲ್ಯಾಂಡ್ ಪಕ್ಕಾ ನ್ಯೂ ಕಮರ್ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ. ಅಂದಹಾಗೆ ಹರ್ಷಿತಾ ಶೆಟ್ಟಿ , ಬೇಸಿಕಲಿ ಮಂಗಳೂರಿನ ಹುಡುಗಿ. ಕೋಸ್ಟಲ್ ವುಡ್‌ನಲ್ಲಿ ಭರ್ಜರಿ ವೆಚ್ಚದಲ್ಲಿ ತಯಾರಾಗಿ ಈ ವರ್ಷ ಸಕ್ಸಸ್ ರೇಟ್ ದಾಖಲಿಸಿಕೊಂಡಿರುವ ನಾಟಕಕಾರ ದೇವದಾಸ್ ಕಾಪಿಕಾಡ್ ಅವರ ನಾಟಕ ಆಧರಿತ ಚಿತ್ರ 'ತೆಲಿಕೆದ ಬೊಳ್ಳಿ'ಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡ ಹುಡುಗಿಯೇ ಈ ಹರ್ಷಿತಾ ಶೆಟ್ಟಿ. ಮಂಗಳೂರು ಮೂಲದ ಮುಂಬಯಿಯಲ್ಲಿಯೇ ಜಾಸ್ತಿ ಹೊತ್ತು ಕಳೆಯುತ್ತಿರುವ ಹರ್ಷಿತಾ ಶೆಟ್ಟಿ, ಕಾರ್ಪೊರೇಟ್ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ಅದರಲ್ಲೂ ಮುಖ್ಯವಾಗಿ ಮೊದಲ ಚಿತ್ರ ತೆಲಿಕೆದ ಬೊಳ್ಳಿಯಲ್ಲಿ ತೀರಾ ಸಾಮಾನ್ಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡು ನಂತರ ಇಡೀ ಚಿತ್ರದ ಮೂಲ ಬಂಡವಾಳ ಎನ್ನುವಂತೆ ಓಡಾಡಿಕೊಂಡು ತುಳು ಸಿನಿಮಾ ಪ್ರಿಯರಿಗೆ ಹತ್ತಿರವಾದ ಹರ್ಷಿತಾ ಶೆಟ್ಟಿಯು ಈಗ ಕೋಲಿವುಡ್ ಚಿತ್ರದ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಸಿದ್ದಾರ್ಥ್ ಕೇಳಿದ ಹುಡುಗಿ: ಟಾಲಿವುಡ್ ನಟ ಸಿದ್ದಾರ್ಥ್‌ಗೆ ಇದು ದೊಡ್ಡ ಚಿತ್ರವೇ ಸರಿ. ಕಾರಣ ಸಿದ್ದಾರ್ಥ್‌ಗೆ ಈ ಹಿಂದಿನ ಎರಡು ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಅದರಲ್ಲೂ ಚಿತ್ರದ ನಾಯಕಿರ ಕುರಿತು ಸದಾ ಗಾಸಿಪ್‌ಗಳಲ್ಲಿ ಮುಳುಗಿ ಬರುತ್ತಿರುವ ಸಿದ್ದಾರ್ಥ್ ಈ ಬಾರಿ ಹೊಸ ನಾಯಕಿಯನ್ನು ಪರಿಚಯ ಮಾಡಬೇಕು ಎಂದು ನಿರ್ದೇಶಕ ಮಣಿಮಾರನ್ ಅವರಲ್ಲಿ ಹೇಳಿದ್ದರು. ಇದೇ ಕಾರಣದಿಂದ ಹರ್ಷಿತಾ ಶೆಟ್ಟಿ ಆಯ್ಕೆಯಾದರು ಎನ್ನುತ್ತದೆ ಚಿತ್ರದ ತಂಡ. ಅದರಲ್ಲೂ ಹರ್ಷಿತಾರ ಸ್ಕ್ರೀನ್ ಟೆಸ್ಟ್‌ನಲ್ಲಿ ಮಾಡಿದ ಸಾಧನೆ ಈ ಚಿತ್ರದ ಕತೆಗೆ ಅವರೇ ಸರಿಯಾದ ಆಯ್ಕೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಮಣಿಮಾರನ್. ತಮಿಳಿನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ವೆಟ್ರಿ ಮಾರನ್ ಅವರ ಸಹಾಯಕರಾಗಿ ದುಡಿದ ಮಣಿಮಾರನ್‌ಗೆ ಇದು ಹೊಸ ಪ್ರಯತ್ನ. ತನ್ನ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವುದರಿಂದ ವೆಟ್ರಿ ಮಾರನ್ ಚಿತ್ರಕ್ಕೆ ಅದ್ಭುತವಾದ ಕತೆ ಹೆಣೆದುಕೊಟ್ಟಿದ್ದಾರೆ. ಜತೆಯಲ್ಲಿ ಎ.ಆರ್. ರೆಹಮಾನ್ ಅವರ ಅಳಿಯ ಜಿ.ವಿ. ಪ್ರಕಾಶ್ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಿದ್ದಾರೆ. ಉದಯಂ ಉದಯಿಸಿದ ಪರಿ: 2004ರಲ್ಲಿ ಬಾಲು ಮಹೇಂದ್ರ ಅವರ ಸಿನಿಮಾಕ್ಕೆ ವೆಟ್ರಿ ಮಾರನ್ ಕತೆ ಹೆಣೆದುಕೊಟ್ಟಿದ್ದರು. ಈ ಚಿತ್ರದಲ್ಲಿ ಧನುಷ್ ನಾಯಕನಾಗಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ನಿರ್ಮಾಣವಾಗಲಿಲ್ಲ. ಆ ಬಳಿಕ ಈ ಚಿತ್ರ ಎರಡು ಬಾರಿ ನಿರ್ಮಾಣ ಮಾಡಲು ಕೋಲಿವುಡ್ ಸಿನ್ಮಾ ಇಂಡಸ್ಟ್ರಿ ಎದ್ದು ನಿಂತು ಮತ್ತೆ ಅಲ್ಲಿಯೇ ಮಲಗಿ ಹೋಯಿತು. ಆನಂತರ 2012ರಲ್ಲಿ ವೆಟ್ರಿ ಮಾರನ್ ಮತ್ತೆ ಸಿನ್ಮಾ ಮಾಡಲು ಅಣಿಯಾದರು. ಈ ಚಿತ್ರವನ್ನು ಉದಂಯಂ ಎನ್‌ಎಚ್ 4 ಎಂದು ಹೆಸರಿಡಲಾಗಿದೆ. ಕಿಶೋರ್, ಕೆ.ಕೆ. ಮೆನನ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಕನ್ನಡದ ರಮ್ಯಾ ಕೂಡ ಇದರ ಒಂದು ಪಾತ್ರದಲ್ಲಿ ಕಾಣಸಿಗಲಿದ್ದಾರೆ. ತಮಿಳಿನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ ದಯಾನಿಧಿ ಹಾಗೂ ವೆಟ್ರಿ ಮಾರನ್ ಜತೆಯಾಗಿ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಉಳಿದಂತೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿಯೇ ಚಿತ್ರ ಬಿಡುಗಡೆಯ ಕನಸು ಕಾಣುತ್ತಿದೆ ಚಿತ್ರ ತಂಡ. (vk lvk published dis article on: 2.04.2013)