Wednesday, December 4, 2013
ಕುಡ್ಲದ ಫ್ಯಾಶನ್ ಪರೇಡ್‌ನಲ್ಲಿ ಪುಟಾಣಿಗಳ ಮಿಂಚು
ಸ್ಟೀವನ್ ರೇಗೊ, ದಾರಂದಕುಕ್ಕು
ಮಿರಿಮಿರಿ ಮಿನುಗುವ ಬೆಳಕು ಜತೆಗಿಷ್ಟು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ರ‍್ಯಾಂಪ್ ಮೇಲೆ ನಡೆದಾಡುವ ಎಳೆಯ ವಯಸ್ಸಿನ ಮೊಡಲ್‌ಗಳು. ಇದು ಕುಡ್ಲದ ಫ್ಯಾಶನ್ ಪರೇಡ್‌ಗೆ ಹೊಸ ಮುನ್ನುಡಿ.
ಹೌದು. ಕುಡ್ಲದಲ್ಲಿ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ತೀರಾ ಹೊಸತು. ಅದರಲ್ಲೂ ಫ್ಯಾಶನ್ ಎಂದಾಕ್ಷಣವೇ ಕಣ್ಣು ಕೆಂಪಾಗೆ ಮಾಡಿಕೊಂಡು ನೋಡುವ ದುನಿಯಾದಲ್ಲಿ ಎಳೆಯ ಮೊಡಲ್‌ಗಳು ಹೊಸ ರಂಗು ಮೂಡಿಸಿದರು. ಅಂದಹಾಗೆ ಫ್ಯಾಶನ್ ಎನ್ನುವ ರಂಗೀನ್ ದುನಿಯಾದಲ್ಲಿ ಬ್ಯಾರಿಕೇಡ್‌ಗಳೇ ಇಲ್ಲ. ಅದರಲ್ಲೂ ಕೇವಲ ಯುವಕ -ಯುವತಿಯರಿಗೆ ಮಾತ್ರ ಈ ಫೀಲ್ಡ್ ಸಖತ್ ಕಿಕ್ ಕೊಡುತ್ತದೆ ಎನ್ನುವ ಮಾತು ಓಡಾಡುತ್ತಿತ್ತು. ಆದರೆ ಕುಡ್ಲದ ಫ್ಯಾಶನ್ ವರ್ಲ್ಡ್‌ನ ದಾಖಲೆಯಲ್ಲಿ ಮತ್ತೊಂದು ಗರಿ ಮೂಡಿಬಂತು. ಬರೀ ಯುವಕ- ಯುವತಿಯರ ಕಣ್ಮನ ಸೆಳೆಯುವ ಕ್ಯಾಟ್‌ವಾಕ್‌ಗಳನ್ನು ನೋಡಿ ಬೇಸತ್ತು ಕೂತ ಕಣ್ಣುಗಳಿಗೆ ಹಬ್ಬದೂಟ ಭಾನುವಾರ ಮಂಗಳೂರಿನ ಪ್ರಸಿದ್ಧ ಗೇಟ್ ವೇಯಲ್ಲಿ ಇತ್ತು.
ರಾಜ್ಯದ ಖ್ಯಾತ ಮೊಡೆಲಿಂಗ್ ಟ್ರೈನಿಂಗ್ ಸೆಂಟರ್ ‘ಫ್ಯಾಶನ್ ಎಬಿಸಿಡಿ‘ ಪ್ರಾಯೋಜಕತ್ವದಲ್ಲಿ ೬ರಿಂದ ೧೦ ಹಾಗೂ ೧೦ ರಿಂದ ೧೫ ವಯಸ್ಸಿನ ಎರಡು ಕೆಟಗರಿಯ ಮಕ್ಕಳು ಬಣ್ಣದ ಮಿರುಗುವ ಸ್ಟೇಜ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿದರು. ಇಂತಹ ರ‍್ಯಾಂಪ್‌ವಾಕ್ ನಲ್ಲಿ ಫ್ಯಾಶನ್ ಎಬಿಸಿಡಿಯ ತರಬೇತುದಾರರು ಈ ಪುಟಾಣಿ ಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನ, ಮಾತನಾಡುವ ಕಲೆ, ಪ್ರೇಕ್ಷಕರನ್ನು ಸೆಳೆಯುವ ತಾಕತ್ತು, ಮೈಕ್ ಹಾಗೂ ರ‍್ಯಾಂಪ್ ಮೇಲೆ ನಡೆಯುವ ಕುರಿತು ತರಬೇತಿಯನ್ನು ನೀಡಿ ಹೊಸ ಫ್ಯಾಶನ್ ಲೋಕಕ್ಕೆ ಎಳೆಯ ಮೊಡೆಲ್ ಪರಿಚಯ ಮಾಡಿದರು.
ಗೆದ್ದವರಿಗೆ ಭರ್ಜರಿ ಬಹುಮಾನ:
ಇಲ್ಲಿ ಗೆದ್ದು ಬಂದವರಿಗೆ ದೇಶದ ಪ್ರತಿಷ್ಠಿತ ಪುಟಾಣಿಗಳ ಫ್ಯಾಶನ್ ರ‍್ಯಾಂಪ್ ಶೋಗಳಲ್ಲಿ ಒಂದಾದ ’ಗ್ಲ್ಯಾಡ್‌ರ‍್ಯಾಗ್ಸ್‘ ಲಿಟಲ್ ಮಿಸ್ ಹಾಗೂ ಮಾಸ್ಟರ್ ಇಂಡಿಯ ಸ್ಪರ್ಧೆಗೆ ನೇರ ಪ್ರವೇಶ ಪಡೆದಿದ್ದಾರೆ. ಇಲ್ಲಿ ಆಯ್ಕೆಯಾದ ಮಿಸ್ಸಿ ಆಂಡ್ ಮಾಸ್ಟರ್ ಮಂಗಳೂರು ವಿಜೇತ ಹಾಗೂ ರನ್ನರ್ ಆಪ್‌ಗಳಿಗೆ ದೇಶದ ನಾನಾ ಕಡೆ ೨ ದಿನ ಪ್ರವಾಸ ಮಾಡುವ ಜತೆಗೆ ಮೊಡೆಲಿಂಗ್‌ನಲ್ಲಿ ಅವಕಾಶ ಲಭ್ಯವಾಗಿದೆ.
‘ಇಂತಹ ಕಲ್ಪನೆ ತೀರಾ ಹೊಸತು. ಮಂಗಳೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪುಟಾಣಿಗಳಿಗೆ ಸೀಮಿತವಾದ ರ‍್ಯಾಂಪ್ ಶೋಗಳಿಲ್ಲ. ಮಕ್ಕಳು ಎಂದಾಕ್ಷಣ ಅವರಲ್ಲಿ ತುಂಟಾಟ ಇದ್ದೇ ಇರುತ್ತದೆ. ಅವರನ್ನು ನಿಭಾಯಿಸಿಕೊಂಡು ಪ್ರೀತಿಯಿಂದ ಹೇಳಿಕೊಟ್ಟು ರ‍್ಯಾಂಪ್‌ವಾಕ್ ಮಾಡುವ ಕೆಲಸ ತರಬೇತುದಾರರಿಗೆ ತೀರಾ ಕಷ್ಟ. ಆದರೂ ಇದೊಂದು ವಿಭಿನ್ನ ಪ್ರಯೋಗ ಖ್ಯಾತ ಫ್ಯಾಶನ್ ಕೋರಿಯೋಗ್ರಾಫರ್ ಸಮೀರ್ ಖಾನ್ ಮಾತು.
ದೇಶದ ನಾನಾ ಕಡೆಗಳಲ್ಲಿ ನಡೆಯುವ ಫ್ಯಾಶನ್ ವೀಕ್‌ಗಳಿಗೆ ನಾನು ಹೋಗಿದ್ದೇನೆ. ಆದರೆ ಮಕ್ಕಳಿಗಾಗಿ ನಡೆಯುವ ಫ್ಯಾಶನ್ ವೀಕ್ ತೀರಾ ಕಡಿಮೆ. ಭಾರತದಲ್ಲಿ ತೀರಾ ವಿರಳವಾಗಿ ನಡೆಯುತ್ತಿರುತ್ತದೆ. ಅದನ್ನು ಮಂಗಳೂರಿನಲ್ಲೂ ಮಾಡಬೇಕು. ಇಲ್ಲಿಯ ಪುಟಾಣಿ ಮಕ್ಕಳಲ್ಲಿ ಫ್ಯಾಶನ್ ಕ್ರೇಜ್ ಹುಟ್ಟು ಹಾಕಬೇಕು ಎನ್ನುವ ಉದ್ದೇಶದಿಂದಲೇ ನಾವು ಈ ಮಿಸ್ಸಿ ಆಂಡ್ ಮಾಸ್ಟರ್ ಮಂಗಳೂರು ಬ್ಯೂಟಿ ಕಾನ್ಟೆಸ್ಟ್ ಫಾರ್ ಕಿಡ್ಸ್ ೨೦೧೩ ಎನ್ನುವ ಟ್ಯಾಗ್‌ಲೈನ್‌ನಲ್ಲಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇತರ ಜಿಲ್ಲೆ, ರಾಜ್ಯಗಳ ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನುವ ಅಲೋಚನೆ ಇದೆ ಎನ್ನುತ್ತಾರೆ ಫ್ಯಾಶನ್ ಎಬಿಸಿಡಿಯ ಮುಖ್ಯ ಸ್ಥೆ ಅನುಪಮ ಸುವರ್ಣ ಅವರ ಮಾತು.
ಕುಡ್ಲದಲ್ಲಿ ಭರ್ಜರಿ ೧೫೦ ಮೊಡಲ್‌ಗಳು:
ನಗರದ ಎಂಪಾರ್‌ಮಾಲ್‌ನಲ್ಲಿ ನಡೆದ ಆಡಿಷನ್‌ನಲ್ಲಿ ಮಂಗಳೂರು, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ೧೫೦ಕ್ಕಿಂತಲೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ ೧೮ ಮೊಡೆಲ್‌ಗಳನ್ನು ಆಯ್ಕೆ ಮಾಡಿಕೊಂಡು ರ‍್ಯಾಂಪ್ ಮೇಲೆ ನಡೆಯುವ ಅವಕಾಶ ಪಡೆದುಕೊಂಡರು. ಮಿಸ್ಸಿ ಮಂಗಳೂರು ಆಗಿ ವಿನ್ಸಿಟಾ ಡಾಯಸ್, ಫಸ್ಟ್ ರನ್ನರ್ ಆಪ್ ಆಗಿ ದೀಕ್ಷಿತಾ ಕರ್ಕೆರಾ, ಸೆಕೆಂಡ್ ರನ್ನರ್ ಆಪ್ ಆಗಿ ಅಕಾಂಕ್ಷಾ ಹಾಗೂ ಕೆಟಗರಿ೧ನಲ್ಲಿ ಮಿಸ್ಸಿ ಮಂಗಳೂರು ಜೂನಿಯರ್ ವಿಭಾಗದಲ್ಲಿ ಅದ್ವಿಕಾ ಶೆಟ್ಟಿ, ಫಸ್ಟ್ ರನ್ನರ್ ಆಪ್ ಶ್ರೇಯಾ ಡಾಯಸ್ ಹಾಗೂ ಸೆಕೆಂಡ್ ರನ್ನರ್ ಆಪ್ ಆಗಿ ರೀತೂ ನೊರೊನ್ಹಾ. ಬಾಲಕರ ವಿಭಾಗದಲ್ಲಿ ಮಾಸ್ಟರ್ ಮಂಗಳೂರು ಆಗಿ ಕುನಾಲ್ ಶಾನೇ, ಫಸ್ಟ್ ರನ್ನರ್ ಆಪ್ ಆಗಿ ಅಹಾನ್ ಆಳ್ವ ಹಾಗೂ ಸೆಕೆಂಡ್ ರನ್ನರ್ ಆಪ್ ನಿಹಾಲ್ ಕಿರಣ್ ಬಹುಮಾನ ಗೆದ್ದುಕೊಂಡರು.
(vijyakarnataka daily mangalore ediition namma karavali published dis article on 5.12.2013)
Subscribe to:
Post Comments (Atom)
No comments:
Post a Comment