Tuesday, March 11, 2014

ಡಿಪ್ಸ್ ಜಾಗಕ್ಕೆ ಪಿಂಕಿ ಮಧುರ್ ಕೈಯಲ್ಲಿ ಮೇಡಂ ಜೀ !

* ಸ್ಟೀವನ್ ರೇಗೊ, ದಾರಂದಕುಕ್ಕು ಬಾಲಿವುಡ್‌ನ ರಿಯಾಲಿಟಿ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಮಧುರ್ ಭಂಡಾರ್‌ಕರ್ ಮತ್ತೆ ಎದ್ದು ನಿಂತಿದ್ದಾರೆ. ವಾಸ್ತವ ಕತೆಗಳನ್ನು ತನ್ನ ಚಿತ್ರದಲ್ಲಿ ತುರುಕಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದ ಮಧುರ್ ಈ ಬಾರಿ ತನ್ನ ಕ್ಯಾಂಪ್ ನೊಳಗೆ ಫ್ಯಾಶನ್ ಹುಡುಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಬಿಟ್ಟಿದ್ದಾರೆ.
ಅಂದಹಾಗೆ ಈ ಹಿಂದೆ ರೂಪದರ್ಶಿಯೊಬ್ಬರ ವಾಸ್ತವ ಕತೆಯನ್ನು ಹೆಕ್ಕಿಕೊಂಡು ಚಿತ್ರ ಮಾಡುತ್ತಾರೆ ಎನ್ನುವ ಗುಸುಗುಸು ಇತ್ತು. ಅದಕ್ಕಾಗಿ ಚಿತ್ರಕ್ಕೆ ‘ಕ್ಯಾಲೆಂಡರ್ ಗಲ್ ’ ಎನ್ನುವ ಹೆಸರನ್ನು ಕೂಡ ನೋಂದಣಿ ಮಾಡಿಕೊಂಡಿದ್ದರು. ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಿಕೊಂಡು ಚಿತ್ರದ ಕತೆಯಲ್ಲಿಯೇ ಬ್ಯುಸಿಯಾಗಿ ಉಳಿದು ಹೋಗಿದ್ದರು. ಆದರೆ ಡಿಪ್ಸ್ ಬ್ಯುಸಿ ಶೆಡ್ಯುಲ್‌ಗಳಿಂದ ಕುಗ್ಗಿ ಹೋಗಿರುವ ಮಧುರ್ ಹೊಸ ಕತೆಯೊಂದನ್ನು ಹುಟ್ಟುಹಾಕಿ ಡಿಪ್ಸ್ ಬದಲಿಗೆ ಪಿಂಕಿಯನ್ನು ತನ್ನ ಹೊಸ ಚಿತ್ರದ ನಾಯಕಿಯಾಗಿ ಬುಕ್ ಮಾಡಿದ್ದಾರೆ. ಚಿತ್ರದ ಹೆಸರು ‘ಮೇಡಂಜೀ’ ನಾಯಕಿ ಕರೀನಾ ಕಪೂರ್ ಅವರನ್ನು ಇಟ್ಟುಕೊಂಡು ಬಂದ ‘ಹೀರೋಯಿನ್’ ಚಿತ್ರ ಬಾಕ್ಸಾಫೀಸ್ ನಲ್ಲಿ ಹೆಚ್ಚಿನ ಗಳಿಕೆ ಕೂಡಿ ಹಾಕಲು ವಿಫಲವಾಗಿತ್ತು. ಈ ಬಳಿಕ ಡಿಪ್ಸ್ ಹಾಕಿಕೊಂಡು ‘ಕ್ಯಾಲೆಂಡರ್ ಗಲ್ ’ ಚಿತ್ರದ ಮೂಲಕ ದೊಡ್ಡ ಎಂಟ್ರಿ ಕೊಡುತ್ತೇನೆ ಎಂದು ಮಧುರ್ ಹೇಳಿಕೊಂಡಿದ್ದರು.
ಆದರೆ ‘ಮೇಡಂಜೀ’ ಮೂಲಕ ಬಾಲಿವುಡ್ ಅಂಗಳದಲ್ಲಿ ಲಕ್ ನೋಡಲು ಮತ್ತೆ ಬರುತ್ತಿದ್ದಾರೆ. ನಿರ್ದೇಶಕ ಮಧುರ್ ಭಂಡಾರ್ ಕರ್. ಈಗಾಗಲೇ ‘ಟ್ರಾಫಿಕ್ ಸಿಗ್ನಲ್’, ‘ಪೇಜ್-೩’ ಹಾಗೂ ‘ಚಾಂದಿನಿ ಬಾರ್’ ಮಹಿಳಾ ಪ್ರದಾನ ಸಿನಿಮಾಗಳನ್ನು ಕೊಟ್ಟ ಮಧುರ್ ಹೊಸ ಪ್ರಯತ್ನ ಬಾಲಿವುಡ್ ದುನಿಯಾ ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ಎನ್ನೋದು ಕಾದು ನೋಡಬೇಕು. ಪಿಂಕಿಗೊಂದು ಬೆಸ್ಟ್ ಅವಕಾಶ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಅಂಗಳದಲ್ಲಿ ‘ಗುಂಡೇ’ ಚಿತ್ರದ ಮೂಲಕ ಹೊಸ ಭರವಸೆಯನ್ನು ಹುಟ್ಟುಹಾಕಿರುವ ಜತೆಯಲ್ಲಿ ಕ್ರೀಡಾಪಟು ಮೇರಿ ಕೋಮ್ ಅವರ ಮೇಲೊಂದು ಚಿತ್ರದಲ್ಲಿ ಪಿಂಕಿ ನಟಿಸುತ್ತಿದ್ದಾರೆ. ಜೋಯಾ ಅಕ್ತರ್ ನಿರ್ದೇಶನದ ‘ದಿಲ್ ದಡಕನ್ ದೋ’ ದಲ್ಲೂ ನಟಿಸುತ್ತಿದ್ದಾರೆ. ಮೇಡಂಜೀ ಮುಖ್ಯವಾಗಿ ಇದು ರಾಜಕೀಯ ನಾಯಕಿಯೊಬ್ಬರ ಕತೆಯನ್ನು ಹೊಂದಿದೆ ಎನ್ನುವುದು ಚಿತ್ರ ತಂಡದ ಗುಪ್ತ ಮಾಹಿತಿ. ಐಟಂ ಹುಡುಗಿಯೊಬ್ಬಳು ರಾಜಕಾರಣಿಯಾದ ಕತೆಯನ್ನು ಇಟ್ಟುಕೊಂಡು ಚಿತ್ರ ಬರುತ್ತಿದೆ ಎನ್ನಲಾಗಿದೆ. ಮುಖ್ಯವಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆತ್ಮಕತೆಯನ್ನು ಚಿತ್ರದಲ್ಲಿ ತುರುಕಿಸಲಾಗುತ್ತದೆ ಎನ್ನುವುದು ಮಧುರ್ ಅವರ ಆಪ್ತ ಮೂಲಗಳು ಹೇಳುವ ಮಾತು. ಮಧುರ್ ಅವರ ಫ್ಯಾಶನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಪಿಂಕಿಗೆ ‘ಮೇಡಂಜೀ’ ಚಿತ್ರ ಕೂಡ ದೊಡ್ಡ ಸಕ್ಸಸ್ ತಂದು ಕೊಡುತ್ತದೆಯೇ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿದೆ. ಈ ಹಿಂದೆ ಫ್ಯಾಶನ್ ಚಿತ್ರದ ನಟನೆಗಾಗಿ ಪಿಂಕಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ದಕ್ಕಿತ್ತು. ಎಲ್ಲವೂ ಚಿತ್ರ ಬಂದ ನಂತರವಷ್ಟೇ ಹೇಳಬೇಕು. ...

No comments:

Post a Comment