Thursday, March 13, 2014
ಕನ್ನಡ ಚಿತ್ರಕ್ಕೆ ಬಾಲಿವುಡ್ ಟಚ್ ಕಬೀರ್‌ನಲ್ಲಿ ಇಸ್ಮಾಯಿಲ್ ದರ್ಬಾರ್
* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಖತ್ ಖುಷಿ ಮೂಡ್‌ನಲ್ಲಿದೆ. ಯಾಕ್ ಅಂತೀರಾ..ಬಾಲಿವುಡ್ ಅಂಗಳದಲ್ಲಿ ಮೆರೆದ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಈಗ ಕನ್ನಡ ಚಿತ್ರವೊಂದಕ್ಕೆ ಸಂಗೀತ ನಿರ್ದೇಶಕರಾಗಿ ಬುಕ್ ಆಗಿದ್ದಾರೆ. ಅಂದಹಾಗೆ ಸ್ಯಾಂಡಲ್‌ವುಡ್ ನಲ್ಲಿ ಇಸ್ಮಾಯಿಲ್ ದರ್ಬಾರ್ ಸಂಗೀತ ನಿರ್ದೇಶನ ಮಾಡುತ್ತಿರುವ ಚಿತ್ರ ಯಾವುದು ಎಂದರೆ ತೀರಾ ಇತ್ತೀಚೆಗೆ ಬಿಗ್ ಬಿ ಅಮಿತಾ‘ ಬಚ್ಚನ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತು ಹರಿದಾಡಿದ ಸಿನಿಮಾ ‘ಕಬೀರ್’ಗಾಗಿ ಇಸ್ಮಾಯಿಲ್ ದರ್ಬಾರ್ ಟ್ಯೂನ್ ಜೋಡಿಸುತ್ತಿದ್ದಾರೆ.
ಈಗಾಗಲೇ ‘ಕಬೀರ್’ ಚಿತ್ರದ ನಿರ್ದೇಶಕ ನರೇಂದ್ರ ಬಾಬು ಅವರು ಇಸ್ಮಾಯಿಲ್ ದರ್ಬಾರ್ ಅವರನ್ನು ಸಂಪರ್ಕ ಸಾಸಿಕೊಂಡು ಚಿತ್ರಕ್ಕೆ ಸಂಗೀತ ನೀಡುವಂತೆ ಕೇಳಿಕೊಂಡಿದ್ದಾರೆ ಎನ್ನುವ ಮಾತಿದೆ. ಇದಕ್ಕೆ ತಕ್ಕಂತೆ ಇಸ್ಮಾಯಿಲ್ ದರ್ಬಾರ್ ಕೂಡ ಸಂಗೀತ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ‘ಕಬೀರ್’ ಚಿತ್ರ ಸಾಕಷ್ಟು ನಿರೀಕ್ಷೆಗಳ ಮಹಾಪೂರವನ್ನೇ ಹುಟ್ಟುಹಾಕಿದೆ.
ಒಂದೆಡೆ ಬಿಗ್ ಬಿ ಅಮಿತಾ‘ ಬಚ್ಚನ್ ಕಬೀರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ
ಕನ್ನಡದ ಮೇಷ್ಟ್ರು ಎಂದೇ ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಸಿನಿಮಾ ‘ಅಮೃತ‘ರೆ’ಯಲ್ಲಿ ಬಿಗ್ ಬಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆ ಇದು ಸಂತ. ಕಬೀರ್‌ದಾಸ್ ಮೇಲೆ ಮೂಡಿಬರುತ್ತಿರುವ ಸಿನಿಮಾ ಇದಾಗಿದೆ. ಕಬೀರ್ ಪಾತ್ರದಲ್ಲಿ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಂಡರೆ ಕಬೀರ್‌ರ ಗುರು ರಮಾನಂದ ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಚಿತ್ರೀಕರಣ ಜುಲೈ- ಆಗಸ್ಟ್ ತಿಂಗಳಲ್ಲಿ ಆರಂ‘ವಾಗಲಿದೆ. ಚಿತ್ರದ ಸಂಗೀತದಲ್ಲಿ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಅವರ ಟಚ್ ಇರಲಿದೆ. ಇಸ್ಮಾಯಿಲ್ ಯುಗಾದಿ ಸಮಯದಲ್ಲಿ ಈ ಚಿತ್ರದ ಹಾಡುಗಳಿಗೆ ಟ್ಯೂನ್ ಕೊಡಲಿದ್ದಾರೆ ಎನ್ನುವುದು ಚಿತ್ರತಂಡದ ಮಾಹಿತಿ. ಹಿಂದಿಯ ಖ್ಯಾತ ರಂಗ‘ಮಿಯ ನಾಟಕವಾದ ಬಹೀರ್ ಕರ್ ಬಜಾರ್ ಮೇ’ಯ ಆವತರಣಿಕೆಯಾಗಿದೆ ಎನ್ನುವ ಮಾತು ಕೂಡ ಗಾಂನಗರದಲ್ಲಿ ಓಡಾಡುತ್ತಿದೆ. ಎಲ್ಲಕ್ಕೂ ಮುಖ್ಯವಾಗಿ ಪ್ರಾದೇಶಿಕ ‘ಷೆಗಳ ಸಿನಿಮಾಗಳಲ್ಲಿ ಈ ಇಬ್ಬರು ಬಾಲಿವುಡ್ ಪಡಸಾಲೆಯ ದಿಗ್ಗಜರು ಕಾಣಿಸಿಕೊಳ್ಳಲು ಒಪ್ಪಿಕೊಳ್ಳುತ್ತಿರುವುದು ಹೆಮ್ಮೆಯ ವಿಷ್ಯಾ. ಇವರಿಂದ ‘ಕಬೀರ್’ ಚಿತ್ರದ ಕುರಿತು ಪ್ರೇಕ್ಷಕರ ನಿರೀಕ್ಷೆಯ ಪೊಟ್ಟಣವಂತೂ ಬಿಚ್ಚಿಕೊಂಡಿದೆ.
Subscribe to:
Post Comments (Atom)
No comments:
Post a Comment