Tuesday, March 4, 2014
ಡಿಪ್ಸ್ ಕೋಲಾಕ್ಕೆ ೬ ಕೋಟಿ !
* ಸ್ಟೀವನ್ ರೇಗೊ, ದಾರಂದಕುಕ್ಕು
ಯೆಸ್. ದೀಪಿಕಾ ಪಡುಕೋಣೆ ಬಾಲಿವುಡ್ ಅಂಗಳದಲ್ಲಿ ಗೆಲ್ಲುವ ಕುದುರೆ ಎನ್ನುವ ವಿಚಾರದಲ್ಲಿ ಈಗ ಯಾವುದೇ ಸಂದೇಹ ಉಳಿದಿಲ್ಲ. ಯಾಕ್ ಅಂತೀರಾ.. ಕಳೆದ ವರ್ಷದ ಬಹು ದೊಡ್ಡ ಹಿಟ್ ಚಿತ್ರಗಳ ಸಕ್ಸಸ್ ರೇಟ್ ಹಿಂದೆ ದೀಪಿಕಾ ಪಡುಕೋಣೆಯ ಕರಾಮತ್ತು ನಡೆದಿದೆ. ಡಿಪ್ಸ್ ಕಾಣಿಸಿಕೊಂಡ ಎಲ್ಲ ಚಿತ್ರಗಳು ಬಾಕ್ಸಾಫೀಸ್‌ನ ಗಲ್ಲಾ ಪೆಟ್ಟಿಗೆಯಲ್ಲಿ ಹೆಸರು ಉಳಿಸಿಕೊಂಡಿತ್ತು.
ಅದಕ್ಕೂ ಮಿಗಿಲಾಗಿ ಈ ಚಿತ್ರಗಳ ಯಶಸ್ವಿನಿಂದಲೂ ಡಿಪ್ಸ್ ಈ ವರ್ಷದ ಬಹುತೇಕ ಚಿತ್ರಗಳಿಗೆ ಬುಕ್ ಆಗಿರುವ ವಿಷ್ಯಾ ಹೊರ ಬರುತ್ತಿದ್ದಂತೆ ಜಾಹೀರಾತು ಕಂಪನಿಗಳು ಡಿಪ್ಸ್ ಮೇಲೆ ಹಣ ಹೂಡಲು ಮುಂದೆ ಬಂದಿದೆ ಎನ್ನುವ ಸುದ್ದಿ ಹೊರ ಬಂದಿದೆ. ಕಳೆದ ವರ್ಷದ ಹಿಟ್ ಚಿತ್ರಗಳಾದ ‘ಯೇ ಜವಾನಿ ಯೇ ದಿವಾನಿ’ ರೇಸ್ -೨, ‘ಚೆನ್ನೈ ಎಕ್ಸ್‌ಪ್ರೆಸ್’ ಹಾಗೂ ‘ಗೋಲಿಯೋಂಕೀ ರಾಸ್ ಲೀಲಾ ರಾಮ್ ಲೀಲಾ’ ಡಿಪ್ಸ್ ಹಿಟ್ ಲೀಸ್ಟ್‌ನಲ್ಲಿ ಸೇರಿಕೊಂಡಿದೆ. ಈ ಕಾರಣದಿಂದ ಡಿಪ್ಸ್ ಕಳೆದ ವರ್ಷದ ೧೦೦ ಕೋಟಿ ಗಳಿಕೆಯ ಚಿತ್ರಗಳಿಂದ ಈ ವರ್ಷನೂ ತನ್ನ ಛಾಪು ಬಾಲಿವುಡ್ ಅಂಗಳದಲ್ಲಿ ಗಟ್ಟಿ ಮಾಡಿಕೊಂಡಿದ್ದಾರೆ.
ಖ್ಯಾತ ಕೋಲಾ ಕಂಪನಿ ತನ್ನ ಜಾಹೀರಾತುಗಳಿಗಾಗಿ ಡಿಪ್ಸ್ ಬ್ರಾಂಡ್ ಅಂಬಾಸೀಡರ್ ಆಗಿ ಬುಕ್ ಮಾಡಿದೆ. ಅಂದಹಾಗೆ ಈ ಜಾಹೀರಾತುಗಳಿಗಾಗಿ ಡಿಪ್ಸ್ ಪಡೆಯುತ್ತಿರುವ ಸಂಭಾವನೆ ಬರೀ ೬ ಕೋಟಿ ರೂಪಾಯಿಗಳು ಎನ್ನುವುದು ಸ್ವಾರಸ್ಯಕರವಾದ ವಿಷ್ಯಾ. ಈಗಾಗಲೇ ಡಿಪ್ಸ್ ಸಿನಿಮಾಗಳ ಮೂಲಕ ಹಣ ಬಾಚುತ್ತಿರುವಂತೆ ಮತ್ತೊಂದು ಕಡೆಯಲ್ಲಿ ಡಿಪ್ಸ್ ಜಾಹೀರಾತಿನಿಂದಲೂ ಹಣ ಬಾಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಕಾರ್ಪೊರೇಟ್ ಪ್ರಾಡಕ್ಟ್‌ಗಳಾದ ಲಕ್ಸ್, ನೆಸ್‌ಕೆಫೇಗಳಲ್ಲಿ ಡಿಪ್ಸ್ ಕಾಣಿಸಿಕೊಂಡಿದ್ದರು.
ಈಗ ಕೋಲಾ ಕಂಪನಿಗಳ ನಾನಾ ವೈರೆಟಿ ಬ್ರಾಂಡ್‌ಗಳಲ್ಲೂ ಡಿಪ್ಸ್ ರಾರಾಜಿಸಲಿದ್ದಾರೆ. ಕೋಲಾದ ಒಂದು ವರ್ಷದ ಅವಧಿಯಲ್ಲಿ ಸಿದ್ಧವಾಗುವ ಎಲ್ಲ ಕೋಲಾ ಬ್ರಾಂಡ್‌ಗಳಲ್ಲಿ ಡಿಪ್ಸ್ ಕಾಣಿಸಿಕೊಳ್ಳಬೇಕು ಎನ್ನುವುದು ಕಂಪನಿಯ ಷರತ್ತುಗಳಲ್ಲಿ ಒಂದಾಗಿದೆ. ಅಂದಹಾಗೆ ಕಳೆದ ಎಂಟು ವರ್ಷಗಳಿಂದ ಕೋಲಾ ಕಂಪನಿಗೆ ಐಶ್ವರ್ಯ ರೈ ನಂತರ ಯಾರು ಕೂಡ ಬ್ರಾಂಡ್ ಅಂಬಾಸೀಡರ್‌ಗಳಾಗಿ ಇರಲಿಲ್ಲ. ಈಗ ಕೋಲಾ ಕಂಪನಿ ಡಿಪ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಐಶ್‌ಗೂ ಟಾಂಗ್ ಕೊಟ್ಟಿದ್ದಾರೆ.
ಟೋಟಲಿ ಡಿಪ್ಸ್ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಜತೆಗೆ ಜಾಹೀರಾತು ಕಂಪನಿಗಳಿಂದಲೂ ಬಾಚುತ್ತಿರುವ ಶುಭ ಘಳಿಗೆ ಎಷ್ಟು ದಿನಗಳವರೆಗೆ ಮುಂದುವರಿಯುತ್ತದೆ ಎನ್ನೋದು ಒಂದು ಯಕ್ಷ ಪ್ರಶ್ನೆಯಾದರೂ. ಸಧ್ಯಕ್ಕಂತೂ ಬಾಲಿವುಡ್ ಪಡಸಾಲೆಯಲ್ಲಿ ಡಿಪ್ಸ್ ಹಿಂದೆ ಹಾಕುವ ಧೈರ್ಯವಂತ ನಟಿಯರು ಸಿಗುತ್ತಿಲ್ಲ ಎನ್ನುವ ಕೊರಗು ಕೂಡ ಇದೆ. ಒಂದು ವರ್ಷದ ಮಟ್ಟಿಗೆ ಡಿಪ್ಸ್ ಬಾಲಿವುಡ್ ವಿದ್ ಜಾಹೀರಾತುಗಳಲ್ಲಿಯೇ ಬ್ಯುಸಿಯಾಗಿರುತ್ತಾರೆ ಎನ್ನುವ ಮಾತು ಮಾತ್ರ ದಿಟವಾಗಿದೆ.
Subscribe to:
Post Comments (Atom)
No comments:
Post a Comment