Tuesday, March 18, 2014

ಬೊಂಬಯಿ ಮಿಠಾಯಿಗೆ ರಾಜಸ್ತಾನಿ ಹುಡುಗಿ !

* ಸ್ಟೀವನ್ ರೇಗೊ, ದಾರಂದಕುಕ್ಕು ದಿಶಾ ಪಾಂಡೇ ಬೇಸಿಕಲಿ ರಾಜಸ್ತಾನಿ ಬೆಡಗಿ. ಅದಕ್ಕೂ ಮುಖ್ಯವಾಗಿ ತಮಿಳು ಹಾಗೂ ತೆಲುಗು ಎರಡು ಭಾಷೆಯ ಸಿನಿಮಾಗಳಲ್ಲೂ ಒಂದೇ ರೀತಿಯ ಖದರ್ ಬೆಳೆಸಿಕೊಂಡ ಹುಡುಗಿ ಈಗ ಸ್ಯಾಂಡಲ್‌ವುಡ್ ಸಿನಿಮಾಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಈ ಹಿಂದೆ ಕನ್ನಡದ ಚಿತ್ರ ‘ಶ್ರೀಮತಿ ಜಯಲಲಿತಾ’ ಸಿನಿಮಾಕ್ಕೆ ನಾಯಕಿಯಾಗಿ ಬುಕ್ ಆಗಿರುವ ದಿಶಾ ಪಾಂಡೇ ಸ್ಯಾಂಡಲ್‌ವುಡ್‌ನ ಮತ್ತೊಂದು ಚಿತ್ರಕ್ಕೂ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಚಿತ್ರದ ಹೆಸರು ಬೊಂಬಾಯಿ ಮಿಠಾಯಿ ಇದನ್ನು ನಿರ್ದೇಶನ ಮಾಡುತ್ತಿರುವವರು ಚಂದ್ರಮೋಹನ್. ಇದರಲ್ಲಿ ಇಬ್ಬರು ನಾಯಕರು ವಿಕ್ರಂ ಹಾಗೂ ನಿರಂಜನ್ ಎನ್ನುವುದು ಸಧ್ಯಕ್ಕೆ ಚಿತ್ರ ತಂಡ ಬಿಟ್ಟುಕೊಂಡಿರುವ ಮಾಹಿತಿ. ಚಿತ್ರದಲ್ಲಿ ಒಬ್ಬ ನಾಯಕಿ ಹಾಗೂ ಇಬ್ಬರು ನಾಯಕರು ಎಂದಾಗಲೇ ಚಿತ್ರ ಪ್ರೇಮಕತೆಯನ್ನು ಒಳಗೊಂಡಿದೆ ಎಂಬ ವಿಚಾರವನ್ನು ಅರ್ಥಮಾಡಿಕೊಳ್ಳಬೇಕು.
ಚಿತ್ರದಲ್ಲಿ ‘ಟು ವೇ ಲವ್’ ಮುಖ್ಯವಾಗಿ ಕಾಣಸಿಗಲಿದೆ. ಅಂದಹಾಗೆ ದಿಶಾ ಪಾಂಡೆ ತನ್ನ ಚಿತ್ರದ ಬಗ್ಗೆ ಹೇಳುವ ಮಾತು ಹೀಗಿದೆ: ಚಿತ್ರದಲ್ಲಿ ನನ್ನ ಪಾತ್ರ ಅದಿತಿ. ಅವಳು ಉತ್ತರ ಭಾರತದಿಂದ ಹೆತ್ತವರ ಜತೆಗೆ ಬೆಂಗಳೂರಿಗೆ ಬರುತ್ತಾಳೆ. ಮುಖ್ಯವಾಗಿ ಅವಳಿಗೆ ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಕುತೂಹಲವಿರುತ್ತದೆ. ಇದೇ ಆಸಕ್ತಿಯನ್ನು ಬೆಳೆಸಿಕೊಂಡ ಹುಡುಗರ ಪರಿಚಯವಾಗುತ್ತದೆ. ಚಿತ್ರದಲ್ಲಿ ಹಾಸ್ಯ, ಪ್ರೇಮ, ಮನರಂಜನೆ ಎಲ್ಲವೂ ಸಿಗಲಿದೆ ಎನ್ನುವುದು ಅವರು ಮಾತು. ಚಿತ್ರದ ಬಹುತೇಕ ಚಿತ್ರೀಕರಣ ರಾಜ್ಯದಲ್ಲಿಯೇ ನಡೆಯಲಿದೆ ಎನ್ನುವುದು ಚಿತ್ರತಂಡ ಬಿಚ್ಚಿಡುವ ಮಾತು. ತಮಿಳು ಹಾಗೂ ತೆಲುಗು ಎರಡು ಸಿನಿಮಾ ಕ್ಷೇತ್ರದಲ್ಲೂ ಸಾಣೇ ನಡೆಯುತ್ತಿರುವ ಬೆಡಗಿ ದಿಶಾ ಪಾಂಡೆ ಕನ್ನಡಕ್ಕೆ ಯಾಕೆ ಬಂದಳು ಅಂತಾ ಕೇಳಿದ್ರೆ ಅವಳು ಹೇಳುವ ಮಾತು ಹೀಗಿದೆ: ನನಗೆ ಐತಿಹಾಸಿಕ ಸ್ಥಳಗಳನ್ನು ಸುತ್ತಾಟ ಮಾಡಬೇಕು ಎನ್ನುವ ಬಯಕೆ ಬಹಳಷ್ಟಿತ್ತು. ಆದರೆ ಚಿತ್ರಗಳ ನಿರಂತರ ಶೂಟಿಂಗ್‌ನಿಂದಾಗಿ ಯಾವುದಕ್ಕೂ ಪುರುಸೊತ್ತು ಇಲ್ಲದೇ ಹೋಯಿತು. ಈಗ ಇಂತಹ ವಿಚಾರದ ಮೇಲೆ ಸಿನಿಮಾವೊಂದು ಸಿದ್ಧವಾಗುತ್ತಿದೆ ಎಂದಾಗ ನಾನು ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡೆ. ಚಿತ್ರದಲ್ಲೂ ನನಗೆ ಬಹಳಷ್ಟು ಅವಕಾಶವಿದೆ ಎನ್ನುತ್ತಾರೆ ಅವರು. ಟೋಟಲಿ ತಮಿಳು, ತೆಲುಗು ಎರಡು ಭಾಷೆಗಳನ್ನು ಕಲಿತುಬಂದಿರುವ ದಿಶಾ ಪಾಂಡೆ ಈಗ ಕನ್ನಡ ಕಲಿಯಲು ಆರಂಭಮಾಡಿದ್ದಾರೆ. ಚಿತ್ರಕ್ಕೆ ಅವರೇ ಧ್ವನಿಯಾಗುತ್ತಾರೆ ಎನ್ನುವುದು ಚಿತ್ರ ತಂಡದ ಮಾತು. ಅದಕ್ಕೂ ಮುಖ್ಯವಾಗಿ ‘ಬೊಂಬಾಯಿ ಮಿಠಾಯಿ’ ಸಿನಿಮಾನೂ ಈ ವರ್ಷದ ಕೊನೆಭಾಗದಲ್ಲಿ ತೆರೆಗೆ ಅಪ್ಪಳಿಸಲಿದೆ ಅಲ್ಲಿಯವರೆಗೂ ಕನ್ನಡದ ಸಿನಿ ಪ್ರೇಕ್ಷಕರು ಕಾಯಲೇಬೇಕು.

No comments:

Post a Comment