Tuesday, March 25, 2014

ಕೋಸ್ಟಲ್‌ವುಡ್‌ನಲ್ಲಿ ರಾಥೋಡ್ ಹಾಡು

* ಸ್ಟೀವನ್ ರೇಗೊ, ದಾರಂದಕುಕ್ಕು ಪಕ್ಕಾ ಲೋಕಲ್ ಆಗಿ ಯೋಚನೆ ಮಾಡುತ್ತಿದ್ದ ಕರಾವಳಿಯ ಸಿನಿಮಾ ನಿರ್ದೇಶಕರು ಈಗ ಬಾಲಿವುಡ್ ರೇಂಜ್‌ಗೆ ಏರಿದ್ದಾರೆ. ಹೊಸ ಯೋಚನೆಗಳ ಜತೆಗೆ ಸಂಗೀತ ಕ್ಷೇತ್ರದಲ್ಲೂ ಗಂಭೀರವಾಗಿ ಕೆಲಸ ಮಾಡುವ ಪರಂಪರೆ ಕೋಸ್ಟಲ್‌ವುಡ್‌ನಲ್ಲಿ ಮೊಳಕೆಯೊಡೆಯುತ್ತಿದೆ. ಇತ್ತೀಚಿನ ಒಂದಷ್ಟು ತುಳು ಚಿತ್ರಗಳ ಹಾಡುಗಳನ್ನು ಕೇಳಿ, ಅಲ್ಲಿರುವ ಧ್ವನಿ ಬಾಲಿವುಡ್ ಗಾಯಕರದು. ಉದಿತ್ ನಾರಾಯಣ್, ಕೈಲಾಶ್ ಕೇರ್, ಆಲಿಖಾನ್, ಸಿದ್ಧಾರ್ಥ್ ಮಹದೇವನ್, ಸೋನು ನಿಗಮ್, ವಿನೋದ್ ರಾಥೋಡ್.. ಹೀಗೆ ಬಾಲಿವುಡ್ ಸಿಂಗರ್ಸ್ ಬಾಯಲ್ಲಿ ಪಕ್ಕಾ ತುಳು ಹಾಡುಗಳನ್ನು ಹಾಡಿಸುತ್ತಿದ್ದಾರೆ.
ತುಳು ಚಿತ್ರರಂಗದ ವ್ಯಾಪ್ತಿ ಸೀಮಿತ.ದಕ್ಷಿಣ ಕನ್ನಡದ ಗಡಿ ದಾಟಿದರೆ ಮಾರುಕಟ್ಟೆ ಇಲ್ಲ ಎಂಬ ಮಾತಿದೆ. ಕರಾವಳಿಯಲ್ಲಿ ತುಳು ನಾಟಕಗಳು ಪ್ರೇಕ್ಷಕರನ್ನು ಸೆಳೆಯುವಷ್ಟು ಇಂದಿಗೂ ತುಳು ಚಿತ್ರಗಳು ಸೆಳೆಯುತ್ತಿಲ್ಲ. ಆದರೂ ಬಾಲಿವುಡ್ ಗಾಯಕರಾ? ಎಂಬ ಪ್ರಶ್ನೆ ಬರುತ್ತದೆ. ಆದರೆ, ಜನರನ್ನು ಸೆಳೆಯಬೇಕಾದರೆ ಏನಾದರೂ ಹೊಸತನ ನೀಡಬೇಕು, ಫ್ರೆಶ್‌ನೆಸ್ ಇರಬೇಕು ಎಂಬುದು ಇಲ್ಲಿನ ನಿರ್ದೇಶಕರ ಮಾತು. ಈಗ ಇಂತಹ ಸರದಿಯಲ್ಲಿ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ವಿನೋದ್ ರಾಥೋಡ್ ಬಂದು ಸೇರಿದ್ದಾರೆ. ಅಂದಹಾಗೆ ಕೋಸ್ಟಲ್‌ವುಡ್‌ನ ‘ಮುಳ್ಳ ಬೇಲಿ’( ಮುಳ್ಳಿನ ಬೇಲಿ)ಯಲ್ಲಿ ವಿನೋದ್ ಎರಡು ಹಾಡುಗಳನ್ನು ಹಾಡಿದ್ದಾರೆ. ಲಕ್ಷಗಟ್ಟಲೆ ತೂಗುವ ಹಿನ್ನೆಲೆ ಗಾಯಕ ವಿನೋದ್ ರಾಥೋಡ್ ತುಳು ಚಿತ್ರದಲ್ಲಿ ಹಾಡಲು ಹೇಗೆ ಒಪ್ಪಿಕೊಂಡರು ಎನ್ನುವುದು ಸೋಜಿಗ ವಿಷ್ಯಾವಾಗಿ ಮುಂದೆ ನಿಂತಿದೆ. ಈ ಕುರಿತು ಚಿತ್ರದ ನಿರ್ದೇಶಕ ಶರತ್‌ಚಂದ್ರ ಕುಮಾರ್ ಕದ್ರಿಯವರಲ್ಲಿ ಕೇಳಿದರೆ ಹೇಳುವುದು ಹೀಗೆ: ಒಬ್ಬ ದೊಡ್ಡ ಹಿನ್ನೆಲೆಗಾಯಕ ತೀರಾ ಸೀಮಿತ ಮಾರುಕಟ್ಟೆ ಹೊಂದಿರುವ ತುಳು ಚಿತ್ರದಲ್ಲಿ ಹಾಡಲು ಒಪ್ಪಿಕೊಂಡಿರುವುದು ಒಂದು ಮ್ಯಾಜಿಕ್ ಎನ್ನಬಹುದು. ಚಿತ್ರದಲ್ಲಿ ಐದು ಹಾಡುಗಳಿವೆ. ಅದರಲ್ಲಿ ಎರಡು ಹಾಡುಗಳಿಗೆ ನೀವು ಹಾಡಬೇಕು ಎಂದು ವಿನಂತಿ ಮಾಡಿಕೊಂಡೇ ಒಂದ್ ಸಲ ಯೋಚನೆ ಮಾಡಿ ‘ಯೆಸ್’ ಅಂದುಬಿಟ್ಟರು. ನೀವು ನನ್ನ ಅಜ್ಜನ ಹಾಗೆ ಕಾಣುತ್ತೀರಿ. ಅದಕ್ಕೂ ಮುಖ್ಯವಾಗಿ ಪ್ರಾದೇಶಿಕ ಭಾಷೆಯ ಚಿತ್ರವೊಂದರಲ್ಲಿ ಹಾಡುವುದು ಎಂದರೆ ನನಗೂ ಖುಷಿ ಎಂದು ಬಿಟ್ಟರು. ಚಿತ್ರದ ಟೈಟಲ್ ಹಾಡು ‘ಮುಳ್ಳಬೇಲಿ’ಯಂತೂ ವಿನೋದ್‌ಗೆ ಅತೀ ಇಷ್ಟವಾಯಿತು. ತುಳು ಭಾಷೆಯಲ್ಲಿರುವ ಹಾಡಿನ ಸಾಹಿತ್ಯವನ್ನು ಕೇಳಿ ಖುಷಿಯಾದರು ಎನ್ನುತ್ತಾರೆ ಶರತ್ ಚಂದ್ರ ಕುಮಾರ್ ಕದ್ರಿ. ಅಂದಹಾಗೆ ಚಿತ್ರದ ಸಂಗೀತ ನಿರ್ದೇಶಕರು ಕೂಡ ಮುಂಬಯಿಯ ಹಿರಿಯ ಸಂಗೀತ ನಿರ್ದೇಶಕ ಜಿತಿನ್ ಶ್ಯಾಮ್ ಕೊಟ್ಟಿದ್ದಾರೆ. ರಾಥೋಡ್ ಜತೆಗೆ ಸಂದೀಪ್ ದಾತೆ, ಬೊಬ್ಬಿ ದತ್ತಾ, ಸುದಕ್ಷಿಣ ದೀಕ್ಷಿತ್, ವಾಯ್ಸ್ ಆಪ್ ಕರ್ನಾಟಕದ ವಿನ್ನರ್ ಡಾ. ನಿತಿನ್ ಆಚಾರ್ಯ, ಪುತ್ತೂರಿನ ಕವಿತಾ ಗೋಶಲ್ ಹಾಡಿದ್ದಾರೆ. ಇದರಲ್ಲಿ ಮುಂಬಯಿಯ ಖ್ಯಾತ ರಿರ್ಕಾಡಿಸ್ಟ್ ಅಮೊಂಗ್ ಡೇನಿಯಲ್ ಅವರ ಸಂಗೀತ ಪರಿಕರಣಗಳ ಸಂಯೋಜನೆ ‘ಮುಳ್ಳ ಬೇಲಿ’ಚಿತ್ರದ ಹಾಡುಗಳಿಗೆ ಹೊಸ ಟಚ್ ಸಿಕ್ಕಿದೆ. ಅಂದಹಾಗೆ ಬಾಲಿವುಡ್ ಗಾಯಕರಿಂದ ಹಾಡಿಸುವುದು ಕೂಡಾ ದುಬಾರಿ. ಇಲ್ಲಿಂದ ಮುಂಬಯಿಗೆ ಹೋಗಿ ಲಕ್ಷಗಟ್ಟಲೆ ಕೊಟ್ಟು ಹಾಡಿಸಬೇಕು. ಕನ್ನಡಕ್ಕಾದರೆ ಓಕೆ, ಮಾರುಕಟ್ಟೆ ಸ್ವಲ್ಪ ಮಟ್ಟಿಗಾದರೂ ದೊಡ್ಡದು, ಸೆಟಲೈಟ್ ರೈಟ್ಸ್ ಕೂಡ ಸಿಗುತ್ತದೆ. ಆದರೆ ತುಳು ಚಿತ್ರರಂಗಕ್ಕೆ ಬಜೆಟ್ ಹೊರೆಯಾಗುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಸಿನಿಮಾದಲ್ಲಿ ಹೊಸತನವಿದ್ದರೆ ಹಾಡು ಹಿಟ್ ಆದರೆ, ಸಿನಿಮಾ ಹಿಟ್ ಆದರೆ ಬಜೆಟ್ ತನ್ನಿಂತಾನೇ ಬರುತ್ತದೆ ಎಂಬುದು ಇಲ್ಲಿನ ನಿರ್ದೇಶಕರ ಮಾತು. ಈ ಎಲ್ಲ ವಿಷ್ಯಾಗಳನ್ನು ನೋಡುತ್ತಾ ಹೋದಂತೆ ತುಳು ಚಿತ್ರರಂಗ ಅಪ್‌ಡೇಟ್ ಆಗುತ್ತಿದೆ ಅನ್ನೋದೇ ಡಬ್ಬಲ್ ಖುಷಿಯಾಗುತ್ತದೆ.

Monday, March 24, 2014

ಕೊಚಾಡಿಯನ್‌ನಲ್ಲಿ ‘ಮಂಗಳೂರು’ ಸ್ಟೋರಿ ! exclusive in regobalcony

* ಸ್ಟೀವನ್ ರೇಗೊ, ದಾರಂದಕುಕ್ಕು ‘ಕೊಚಾಡಿಯನ್’ ಈಗ ಭಾರತೀಯ ಸಿನಿಮಾರಂಗವೇ ಎದುರು ನೋಡುತ್ತಿದೆ. ಈ ಚಿತ್ರದ ಉದ್ದಕ್ಕೂ ೩ಡಿಯನ್ನು ಆಳವಡಿಸಿಕೊಂಡಿರುವ ಕಾರಣ ಭಾರತೀಯ ಚಿತ್ರರಂಗದಲ್ಲಿಯೇ ಇದೊಂದು ವಿಶಿಷ್ಟ ಪ್ರಯೋಗ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ. ಅದಕ್ಕೂ ಮಿಗಿಲಾಗಿ ಚಿತ್ರರಂಗದ ಸೂಪರ್‌ಸ್ಟಾರ್ ರಜನೀಕಾಂತ್ ಇಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲ ಸಲವಾಗಿರುವ ಕಾರಣ ನಿರೀಕ್ಷೆಯ ಪೊಟ್ಟಣ ಬಿಚ್ಚಿಕೊಂಡಿದೆ. ಅಂದಹಾಗೆ ‘ಕೊಚಾಡಿಯನ್’ ಸಿನಿಮಾ
ವೇ ಒಂದು ಐತಿಹಾಸಿಕ ಸ್ಟೋರಿ ಲೈನ್ ಸಿನಿಮಾ. ಇದರ ಆರಂಭ ತಮಿಳುನಾಡಿನ ಪಾಂಡ್ಯ ದೊರೆಯಾದ ಕೊಚಾಡಿಯನ್ ರಣಧೀರನ್ ಎಂಬವನಿಂದ ಚಿತ್ರದ ಕತೆ ಶುರುವಾಗುತ್ತದೆ. ಈತ ತಮಿಳುನಾಡಿನಲ್ಲಿ ಆಳ್ವಿಕೆ ನಡೆಸುತ್ತಾ ಕೇರಳ ಹಾಗೂ ತಂಜವೂರು ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿಕೊಂಡು ಬರುತ್ತಿದ್ದ ಚೇರ ಹಾಗೂ ಚೋಳ ರಾಜಮನೆತನ ರಾಜರನ್ನು ಗೆದ್ದುಕೊಂಡು ಮೆರೆದಾಡುತ್ತಿದ್ದ. ಅದರಲ್ಲೂ ಪಾಂಡ್ಯ ರಾಜಮನೆತನ ರಣಧೀರನ್ ಸಮಯದಲ್ಲಿ ಉತ್ತುಂಗಕ್ಕೆ ತಲುಪಿತ್ತು. ಇಂತಹ ಒಂದು ರಾಜಮನೆತನದ ದೊರೆ ರಣಧೀರನ್ ಕತೆಯೇ ‘ಕೊಚಾಡಿಯನ್’ ಚಿತ್ರಕ್ಕೆ ಮೂಲ ಬಂಡವಾಳ ಎನ್ನಲಾಗುತ್ತಿದೆ. ಆದರೆ ಈ ಕುರಿತು ರಜನೀಕಾಂತ್ ಪುತ್ರಿ ನಿರ್ದೇಶಕಿ ಸೌಂದರ್ಯ, ಚಿತ್ರದ ಕತೆಗಾರ ಕೆ.ಎಸ್.ರವಿಕುಮಾರ್ ರಣಧೀರನ್ ಕತೆಗೂ ಚಿತ್ರದ ಕತೆಗೂ ಸಂಬಂಧವಿಲ್ಲ. ಆದರೆ ಚಿತ್ರದ ಓಟದಲ್ಲಿ ಪಾಂಡ್ಯ ಮನೆತನದ ವಿಷ್ಯಾವಂತೂ ಬಂದು ಹೋಗುತ್ತದೆ ಎಂದು ಈ ಹಿಂದೆ ತಮಿಳುನಾಡಿನಲ್ಲಿ ಚಿತ್ರದ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಕೊಚಾಡಿಯನ್‌ನಲ್ಲಿ ಮಂಗಳಪುರಂ: ‘ಕೊಚಾಡಿಯನ್’ ಸಿನಿಮಾದಲ್ಲಿ ‘ಮಂಗಳಪುರಂ’ ಎಂದರೆ ಈಗೀನ ಮಂಗಳೂರಿನ ಕತೆ ಅಡಕವಾಗಿದೆ. ಮಂಗಳೂರು ಪಟ್ಟಣವನ್ನು ಈ ಹಿಂದೆ ಮಂಗಳಪುರಂ ಎಂದೇ ಕರೆಯಲಾಗುತ್ತಿತ್ತು.‘ಮಂಗಳಪುರಂ’ ಎನ್ನುವ ಹೆಸರನ್ನು ಕೂಡ ಪಾಂಡ್ಯ ದೊರೆಯಾದ ಚೆಟ್ಟಯೇನ್ ಇಟ್ಟಿದ್ದರು. ಇದೇ ನಗರವನ್ನು ಮುಖ್ಯ ಪಟ್ಟಣವಾಗಿ ಪಾಂಡ್ಯ ಮನೆತನದ ಅಧೀನದಲ್ಲಿ ಉಳಿದಿತ್ತು. ಇವನ ನಂತರ ಬಂದ ಪಾಂಡ್ಯ ದೊರೆಗಳು ಕೂಡ ‘ಮಂಗಳಪುರಂ’ವನ್ನು ಮುಖ್ಯ ಪಟ್ಟಣವಾಗಿ ಇಟ್ಟುಕೊಂಡೇ ಆಳ್ವಿಕೆ ನಡೆಸಿದರು. ಕೊಂಚಾಡಿಯನ್ ರಣಧೀರನ್‌ಗೂ ಈ ಪಟ್ಟಣ ಅತೀಯಾಗಿ ಇಷ್ಟವಾಯಿತು.ಬಹುತೇಕ ಸಮಯವನ್ನು ‘ಮಂಗಳಪುರಂ’ನಲ್ಲಿಯೇ ಕಳೆಯುತ್ತಿದ್ದ ಎಂದು ಇತಿಹಾಸದ ಪುಟಗಳು ಹೇಳುತ್ತಿದೆ. ಕೊಚಾಡಿಯನ್ ಸಿನಿಮಾದ ಆರಂಭದ ದೃಶ್ಯಗಳು ಕೂಡ ‘ಮಂಗಳಪುರಂ’ನಿಂದಲೇ ಆರಂಭವಾಗುತ್ತದೆ ಎನ್ನುವ ಚಿತ್ರತಂಡದ ಮಾತು. ಅದಕ್ಕೂ ಮುಖ್ಯವಾಗಿ ಮಂಗಳಪುರಂ ಉಳಿವಿನ ಹೋರಾಟದಲ್ಲಿ ಕೊಚಾಡಿಯನ್ ರಣಧೀರನ್ ತೋರಿಸುವ ಸಾಮರ್ಥ್ಯ ಕೂಡ ಮಂಗಳೂರು ಕತೆಯ ಮಹತ್ವವನ್ನು ಚಿತ್ರದಲ್ಲಿ ಒತ್ತಿ ಹೇಳುತ್ತಿದೆ. ಟೋಟಲಿ ಭಾರತೀಯ ಚಿತ್ರರಂಗದಲ್ಲಿಯೇ ವಿಭಿನ್ನ ೩ಡಿ ಹಾಗೂ ಖರ್ಚುವೆಚ್ಚದ ದೃಷ್ಟಿಯಿಂದ ಕೊಚಾಡಿಯನ್ ಸಿನಿಮಾವಂತೂ ಶುರುವಾಗುವ ಹಂತದಿಂದ ಹಿಡಿದು ಕೊನೆಗೆ ಥಿಯೇಟರ್‌ನ ಬಾಗಿಲು ಬಡಿಯುವ ತನಕನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ. ಅದಕ್ಕೂ ಮುಖ್ಯವಾಗಿ ರಜನೀಕಾಂತ್ ಅಭಿಮಾನಿಗಳಲ್ಲೂ ಚಿತ್ರದ ಕುರಿತು ಹವಾವೊಂದು ಸೃಷ್ಟಿಯಾಗಿದೆ.

Friday, March 21, 2014

ಬಾಲಿವುಡ್ ನಾಯಕಿಯರು ಈಗ ನಿರ್ಮಾಪಕಿಯರು

* ಸ್ಟೀವನ್ ರೇಗೊ, ದಾರಂದಕುಕ್ಕು ಬಾಲಿವುಡ್ ಪಡಸಾಲೆಯ ವಿಷ್ಯಾನೇ ಹಾಗೇ ಅಲ್ಲಿ ಬಣ್ಣದಾಟವಿದೆ ಅದಕ್ಕೂ ಮಿಗಿಲಾಗಿ ದುಡ್ಡು ಪ್ಲಸ್ ಗೌರವ ಜತೆಗೆ ಸಿಕ್ಕಿಕೊಂಡಿರುತ್ತದೆ. ಇವೆಲ್ಲಗಳನ್ನು ಜತೆಯಾಗಿ ನೋಡಿದಾಗ ಯಾರು ಕೂಡ ಬಣ್ಣದ ಲೋಕಕ್ಕೆ ಎಂಟ್ರಿಯಾಗಲು ಬಯಸುತ್ತಾರೆ. ಇಲ್ಲಿ ಬಂದ ನಂತರ ತಮ್ಮ ಫಿಲ್ಮೋಗ್ರಾಫಿಯ ಮೂಲಕ ಒಂದು ಹಂತಕ್ಕೆ ತಲುಪಿ ನಂತರ ಅಲ್ಲಿಂದ ಒಂದೊಂದು ಮೆಟ್ಟಿಲು ಕೆಳಗೆ ಜಾರುತ್ತಾರೆ. ಕೊನೆಗೆ ಅತ್ತ ಸಿನಿಮಾನೂ ಇಲ್ಲ ಇತ್ತ ಕಡೆಯಲ್ಲೂ ಗ್ಲಾಮರ್ ಕೂಡ ಉಳಿಯದೇ ಹೋದಾಗ ಬಣ್ಣದ ಬದುಕಿನ ನಂಟು ಬಿಡಲು ಸಾಧ್ಯವಾಗದೇ ಕೊನೆಗೆ ಬಾಲಿವುಡ್‌ನಲ್ಲಿ ಹೊಸ ರೋಲ್‌ನಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಾರೆ. ಅದುವೇ ನಿರ್ಮಾಪಕಿಯರು. ಅಂದಹಾಗೆ ಈಗ ಬಾಲಿವುಡ್ ಅಂಗಳದಲ್ಲಿ ಸಿನಿಮಾ ನಟಿಯರು ಚಿತ್ರದ ನಿರ್ಮಾಣದ ನೊಗ ಹೊತ್ತ ಪ್ರಕರಣಗಳು ಒಂದೊಂದಾಗಿ ಹೊರಬೀಳುತ್ತಿದೆ. ಅದು ಯಾರು ಅಂತೀರಾ ಇಲ್ಲಿದೆ ನಟಿಯರು ಬದಲಾಗಿ ನಿರ್ಮಾಪಕಿಯಾದವರ ಕತೆ..
* ಗ್ಲಾಮರ್ ಗೊಂಬೆ ಶಿಲ್ಪಾ ಶೆಟ್ಟಿ : ಶಿಲ್ಪಾ ಶೆಟ್ಟಿ ಮೂಲತಃ ಕರಾವಳಿಯ ಬಂಟರ ಹುಡುಗಿ. ಅದರಲ್ಲೂ ಬಾಲಿವುಡ್‌ನಲ್ಲಿ ನಟಿಯಾಗಿ ನಂತರ ಫಿಟ್ನೆಸ್ ಎಕ್ಸ್‌ಪರ್ಟ್ ಸೇರಿದಂತೆ ಉದ್ಯಮ ರಂಗದಲ್ಲೂ ಶಿಲ್ಪಾ ಕೆಲಸ ಮಾಡಿದ್ದಾರೆ. ಕ್ರಿಕೆಟ್ ಹೆಣ್ಣು ಮಕ್ಕಳಿಗೆ ತಕ್ಕದಲ್ಲ ಎನ್ನುವ ಮಾತಿಗೆ ವಿರುದ್ಧವಾಗಿ ತಾನೇ ಐಪಿಎಲ್ ತಂಡವೊಂದನ್ನು ಖರೀದಿ ಮಾಡಿ ಯಶಸ್ವಿಯಾಗಿ ತಂಡದ ಬಲ ಹೆಚ್ಚಿಸುತ್ತಿದ್ದಾರೆ. ಈಗ ಬಾಲಿವುಡ್‌ನಲ್ಲಿ ನಿರ್ಮಾಪಕರಾಗಿ ಸೌಂಡ್ ಮಾಡಲು ಹೊರಟಿದ್ದಾರೆ.ಆಂದಹಾಗೆ ಮಾ.೨೮ಕ್ಕೆ ತೆರೆಗೆ ಬರಲು ಹವಣಿಸುತ್ತಿರುವ ‘ಡಿಸ್ಕ್ಯೂನ್’ ನಿರ್ಮಾಪಕರಾಗಿ ಶಿಲ್ಪಾ ಶೆಟ್ಟಿ ಹಾಗೂ ಸುನೀಲ್ ಲೂಲು ಕಾರ‍್ಯ ನಿರ್ವಹಿಸಿದ್ದಾರೆ. ಬಹಳ ದಿನಗಳ ನಂತರ ಹರ್ಮನ್ ಬೇವಾಜಾ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಹರ್ಮನ್ ಜತೆಗೆ ಐಟಂ ಸಾಂಗ್‌ವೊಂದರಲ್ಲಿ ಕುಣಿದಿದ್ದಾರೆ. ನಾಯಕಿಯಾಗಿ ಹೊಸ ಹುಡುಗಿ ಅಯೇಷಾ ಖುರುನಾ ಚಿತ್ರದಲ್ಲಿ ನಟಿಸಿದ್ದಾರೆ. ಸನ್ನಿ ಡಿಯೋಲ್ ಅವರ ಆಕ್ಷನ್ ಕೂಡ ಚಿತ್ರದಲ್ಲಿ ಕಾಣಸಿಗಲಿದೆ. ಟೋಟಲಿ ಸಿನಿಮಾದ ಕುರಿತು ಶಿಲ್ಪಾ ಶೆಟ್ಟಿ ಹೇಳುವ ಮಾತು ಹೀಗಿದೆ: ಭೂಗತ ಜಗತ್ತಿನಲ್ಲಿ ಮಸಾಲೆ ಹಾಗೂ ಮನರಂಜನೆಯನ್ನು ನೀಡುವ ಪ್ರಯತ್ನ ಈ ಚಿತ್ರದಲ್ಲಿ ಸಾಗಿದೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದೆ. ಭಟ್ಟರ ಹುಡುಗಿ ಪೂಜಾ ಭಟ್: ಬಾಲಿವುಡ್ ಅಂಗಳಲ್ಲಿ ‘ಡ್ಯಾಡಿ’, ‘ದಿಲ್ ಹೈ ಕೀ ಮಾನ್‌ತಾ ನಹೀಂ’, ‘ಝಕಂ’ ಚಿತ್ರದ ಮೂಲಕ ಹೊರ ಬಂದ ಪ್ರತಿಭೆ ಪೂಜಾ ಭಟ್. ಮೂಲತಃ ನಿರ್ದೇಶಕ ಹಾಗೂ ನಿರ್ಮಾಪಕರ ಮನೆತನದಿಂದ ಬಂದ ಪೂಜಾ ಭಟ್ ಆರಂಭದಲ್ಲಿ ಸಿನಿಮಾದಲ್ಲಿ ನಟಿಯಾಗಿಯೇ ಗುರುತಿಸಿಕೊಂಡವರು ಒಂದು ಹಂತದವರೆಗೂ ನಟಿಯಾಗಿ ನಂತರ ತಮ್ಮ ಕ್ಷೇತ್ರವನ್ನು ನಿರ್ಮಾಣ, ನಿರ್ದೇಶನದತ್ತ ಕಣ್ಣು ನೆಟ್ಟವರು. ೯೭ರಲ್ಲಿ ‘ತಾಮನ್ನಾ’ಕ್ಕೆ ನಿರ್ಮಾಪಕರಾಗಿ ಮಾತ್ರ ಕೆಲಸ ಮಾಡದೇ ಅದರಲ್ಲೂ ಬಣ್ಣ ಹಚ್ಚಿದರು. ಈ ನಂತರ ತಮ್ಮದೇ ಬ್ಯಾನರ್ ಫಿಶ್‌ಐ ನೆಟ್‌ವರ್ಕ್ ಮೂಲಕ ೧೦ಕ್ಕೂ ಅಧಿಕ ಸಿನಿಮಾಗಳನ್ನು ಬಾಲಿವುಡ್‌ನ ಅಂಗಳಕ್ಕೆ ತಂದರು. ಅದರಲ್ಲಿ ‘ದುಸ್ಮಾನ್’, ‘ಝಕಂ’ ಜಿಸ್ಮ್, ಜಿಸ್ಮ್-೨ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಬೋಲ್ಡ್ ಬ್ಯೂಟಿ ಅಮೀಷಾ ಪಟೇಲ್: ಹೃತಿಕ್ ರೋಷನ್ ಅಭಿನಯದ ‘ಕಹೋ ನಾ ಪ್ಯಾರ್ ಹೈ’ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ ನಂತರ ಗದ್ದರ್‌ನಲ್ಲಿ ಪಕ್ಕಾ ಗ್ರಾಮೀಣ ಭಾರತದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡ ಅಮೀಷಾ ಪಟೇಲ್ ನಂತರ ದಿನಗಳಲ್ಲಿ ಯಾವುದೇ ಮ್ಯಾಜಿಕ್ ಮಾಡಲು ವಿಫಲರಾದರು. ಅವರು ನಟಿಸಿದ ‘ಹಮ್ರಾಝ್’, ‘ಹನಿಮೂನ್ ಟ್ರಾವೆಲ್ಸ್’ ಚಿತ್ರಗಳು ತಕ್ಕಮಟ್ಟಿನ ಯಶಸ್ಸು ಕಟ್ಟಿಕೊಟ್ಟಿತ್ತು. ಈಗ ‘ದೇಸಿ ಮ್ಯಾಜಿಕ್’ ಚಿತ್ರವೊಂದನ್ನು ಅಮೀಷಾ ಪಟೇಲ್ ನಿರ್ಮಾಪಕರಾಗುತ್ತಿದ್ದಾರೆ. ಜಾಹೇದ್ ಖಾನ್, ಶಾಹಿಲ್ ಶ್ರಾಫ್, ಅಮೀಷಾ ಪಟೇಲ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೂಪದರ್ಶಿಯ ಅವತಾರ ದಿಯಾ ಮಿರ್ಜಾ: ಬಾಲಿವುಡ್ ಅಂಗಳಕ್ಕೆ ಬರುವುದಕ್ಕೂ ಮೊದಲು ರೂಪದರ್ಶಿಯಾಗಿ ಮಿಂಚಿ ನಂತರ ನಟನಾ ಕ್ಷೇತ್ರಕ್ಕೆ ಬಂದು ಬಿದ್ದು ಹೋದ ಹುಡುಗಿ ದಿಯಾ ಮಿರ್ಜಾ. ‘ಹೇ ಬೇಬಿ’, ‘ಶೂಟೌಟ್ ಎಟ್ ಲೋಖನ್‌ವಾಲಾ’ ‘ಪರಿಣಿತಾ’ ಹಾಗೂ ‘ಹನಿಮೂನ್ ಟ್ರಾವೆಲ್ಸ್’ ಚಿತ್ರಗಳಲ್ಲಿ ಸೆಕೆಂಡ್ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ತೆರೆ ಮರೆಗೆ ಸರಿದ ದಿಯಾ ಮಿರ್ಜಾ ಈಗ ನಟ ಜಾಹೇದ್ ಖಾನ್ ಜತೆಗೂಡಿ ‘ಬೋರ್ನ್ ಫ್ರಿ’ ಎನ್ನುವ ಪ್ರಾಡಕ್ಷನ್ ಹೌಸ್‌ವೊಂದನ್ನು ತೆರೆದಿದ್ದಾರೆ. ೨೦೧೧ರಲ್ಲಿ ಈ ಬ್ಯಾನರ್‌ಯಡಿಯಲ್ಲಿ ಲವ್, ಬ್ರೇಕ್ ಆಫ್ಸ್, ಜೀಂದಿಗಿಯಲ್ಲಿ ಇಬ್ಬರು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.ಚಿತ್ರ ಹೇಳಿಕೊಳ್ಳುವಂತೆ ಯಶಸ್ವಿಯಾಗಿಲ್ಲ. ಈ ಬಳಿಕ ವಿದ್ಯಾ ಬಾಲನ್ ನಟಿಸುತ್ತಿರುವ ‘ಬಾಬಿ ಜಾಸೂಸ್’ ಚಿತ್ರಕ್ಕೆ ಹಣ ಸುರಿದಿದ್ದಾರೆ. ಚೆಲ್ಲು ಹುಡುಗಿ ಪ್ರೀತಿ ಝಿಂಟಾ: ಬಾಲಿವುಡ್ ನಟಿಯಾಗಿ ಕಮ್ ರೂಪದರ್ಶಿಯಾಗಿ ಕೂಡ ಪ್ರೀತಿ ಸಕ್ಸಸ್ ಕಂಡಿದ್ದಾರೆ. ಅದರಲ್ಲೂ ‘ಸೋಲ್ಜರ್’, ‘ಕಲ್ ಹೋ ನಾ ಹೋ’ ಚಿತ್ರಗಳು ಪ್ರೀತಿಗೆ ಹೆಸರು ಹಾಗೂ ಹಣ ಎಲ್ಲವೂ ಕೊಟ್ಟಿತ್ತು. ಇದರ ಜತೆಗೆ ಮಾಜಿ ಪ್ರಿಯಕರ ನೆಸ್ ವಾಡಿಯಾ ಜತೆಗೂಡಿ ಐಪಿಎಲ್ ಕ್ರಿಕೆಟ್ ತಂಡವೊಂದನ್ನು ಖರೀದಿ ಮಾಡಿ ನಡೆಸುತ್ತಿದ್ದಾರೆ. ೨೦೧೩ರಲ್ಲಿ ತೆರೆಗೆ ಬಂದ ‘ಈಷ್ಕ್ ಇನ್ ಫ್ಯಾರಿಸ್’ನಲ್ಲಿ ನಟಿಸುವ ಜತೆಗೆ ಚಿತ್ರಕ್ಕೆ ಬಂಡವಾಳ ತಂದು ಸುರಿದವರು ಕೂಡ ಪ್ರೀತಿ ಝಿಂಟಾ ಎನ್ನುವುದು ಗಮನಿಸಬೇಕಾದ ವಿಷ್ಯಾ. ವಿಶ್ವ ಸುಂದರಿ ಲಾರಾದತ್ತ: ವಿಶ್ವ ಸುಂದರಿ ಕಿರೀಟಧಾರೀಣಿ ಲಾರಾದತ್ತ ಸೌಂದರ್ಯದ ಮೂಲಕವೇ ಬಾಲಿವುಡ್ ಅಂಗಳಕ್ಕೆ ಜಿಗಿದ ನಟಿ. ಟೆನಿಸ್ ತಾರೆ ಮಹೇಶ್ ಭೂಪತಿಯನ್ನು ಒಲಿಸಿಕೊಂಡಿರುವ ಲಾರಾದತ್ತ ‘ನೋ ಎಂಟ್ರಿ’ ಹಾಗೂ ‘ಪಾರ್ಟನರ್’ ಚಿತ್ರದಿಂದ ಸಾಕಷ್ಟು ಹೆಸರು ಬೆಳೆಸಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಚಲೋ ದಿಲ್ಲಿ’ಯಲ್ಲಿ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಮನೀಷಾ ಕೊಯಿರಾಲಾ: ‘ಸೌದಾಗಾರ್’ ಹಾಗೂ ‘ಬಾಂಬೇ’ ಚಿತ್ರದ ಮೂಲಕ ಮನೀಷಾ ಕೊಯಿರಾಲಾ ಎನ್ನುವ ನೇಪಾಳಿ ಬೆಡಗಿ ಬಾಲಿವುಡ್ ಅಂಗಳದಲ್ಲಿ ಸುದ್ದಿ ಮಾಡಿದಳು. ೨೦೦೪ರಲ್ಲಿ ತೆರೆಗೆ ಬಂದ ‘ಪೈಸಾ ವಸೂಲ್’ ಚಿತ್ರಕ್ಕೆ ಮನೀಷಾ ಕೊಯಿರಾಲಾ ಹಣ ಸುರಿದಿದ್ದಾರೆ. ಆದರೆ ಚಿತ್ರ ಮಾತ್ರ ಯಶಸ್ಸು ಕಾಣಲೇ ಇಲ್ಲ. ಹರ್ಷಿತಾ ಭಟ್: ಶಾರೂಕ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ‘ಅಶೋಕ’ದಲ್ಲಿ ಕಾಣಿಸಿಕೊಂಡ ಹರ್ಷಿತಾ ಭಟ್ ೨೦೧೧ರಲ್ಲಿ ‘ಶಕಲ್ ಪೇ ಮತ್ ಜಾ’ವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ನಿರ್ದೇಶನ ಮಾಡಿದ್ದು ಖ್ಯಾತ ನಿರ್ದೇಶಕ ಶುಭಾ ಮುಖರ್ಜಿ. ಟೋಟಲಿ ಹಾಸ್ಯ ಚಿತ್ರವಾದರೂ ಬಾಕ್ಸಾಫೀಸ್‌ನಲ್ಲಿ ಕಮಾಲ್ ತೋರಿಸಲು ವಿಫಲವಾಯಿತು. ಸುಶ್ಮಿತಾ ಸೇನ್: ೨೦೦೭ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಸುಶ್ಮಿತಾ ಸೇನ್ ಇಂಗ್ಲೀಷ್ ಚಿತ್ರ ‘ಝಾನ್ಸಿ ಕೀ ರಾಣಿ’ಗೆ ಹಣ ಸುರಿದು ನಿರ್ಮಾಪಕರಾದರು. ಆದರೆ ಚಿತ್ರವಂತೂ ಬಾಕ್ಸಾಫೀಸ್‌ನಲ್ಲಿ ಸೋತು ಹೋಯಿತು. ಈ ಬಳಿಕ ಸುಶ್ಮಿತಾ ಸೇನ್ ನಿರ್ಮಾಣ ಕ್ಷೇತ್ರಕ್ಕೆ ಕಾಲೇ ಇಟ್ಟಿಲ್ಲ. ಗೆದ್ದು ಬಂದ ಜೂಹೀ ಚಾವ್ಲಾ: ಬಾಲಿವುಡ್ ನಟಿ ಜೂಹೀ ಚಾವ್ಲಾ ತಮ್ಮ ನಟನೆಯ ಮೂಲಕ ಸಾಕಷ್ಟು ಹೆಸರುಗಳಿಸಿಕೊಳ್ಳುವುದರ ಜತೆಗೆ ನಿರ್ಮಾಣ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಉಳಿಸಿಕೊಂಡಿದ್ದಾರೆ. ಬಾಲಿವುಡ್ ನಟ ಶಾರೂಕ್ ಖಾನ್, ನಿರ್ದೇಶಕ ಅಜೀಜ್ ಮಿರ್ಜಾ ಅವರನ್ನು ಒಳಗೊಂಡ ‘ಡ್ರೀಮ್ಸ್ ಅಲ್‌ಮಿಟೇಟ್’ ಎನ್ನುವ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಈ ಸಂಸ್ಥೆಯ ಅಡಿಯಲ್ಲಿ ಬಂದ ‘ಪಿರ್ ಬೀ ದಿಲ್ ಹಿಂದೂಸ್ತಾನಿ’ ಚಿತ್ರವನ್ನು ತೆರೆಗೆ ತಂದರು. ಈ ಚಿತ್ರದಲ್ಲಿ ಶಾರೂಕ್ ಹಾಗೂ ಜೂಹೀ ಇಬ್ಬರು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಜತೆಯಲ್ಲಿ ಶಾರೂಕ್ ಜತೆಗೂಡಿ ಐಪಿಎಲ್ ತಂಡವೊಂದನ್ನು ಖರೀದಿ ಮಾಡಿದ್ದಾರೆ.

ಧೋನಿಯಾಟದಲ್ಲಿ ರಾಜಪೂತ್ ಮಿಂಚು

*ಸ್ಟೀವನ್ ರೇಗೊ, ದಾರಂದಕುಕ್ಕು ಮಹೇಂದ್ರ ಸಿಂಗ್ ಧೋನಿ ಇದು ಭಾರತೀಯ ಕ್ರಿಕೆಟ್‌ನಲ್ಲಿ ಸದಾ ಕಾಲ ಮಿಂಚುವ ಹೆಸರು. ಶಾರ್ಟ್ ಆಂಡ್ ಸ್ವೀಟಾಗಿ ಯಾವ ರೀತಿಯಲ್ಲೂ ಧೋನಿಯನ್ನು ಲೆಕ್ಕಹಾಕಿದರೂ ಕೂಡ ಆತನ ಮಿಂಚುವ ಬ್ಯಾಟಿಂಗ್, ಎದೆಗುಂದದ ಧೈರ್ಯವಂತಿಕೆ ಹಾಗೂ ಪದೇ ಪದೇ ಬದಲಾಗುತ್ತಿರುವ ಹೇರ್ ಸ್ಟೈಲ್‌ಗಳಿಂದಲೇ ಕ್ರಿಕೆಟ್ ರಂಗದಲ್ಲಿ ಅಳ್ವಿಕೆ ಮಾಡುತ್ತಿರುವ ಹೆಸರು. ಈಗ ಧೋನಿಯ ಕತೆಯನ್ನು ಇಟ್ಟುಕೊಂಡು ಸಿನಿಮಾವೊಂದು ಬಾಲಿವುಡ್ ಅಂಗಳದಲ್ಲಿ ಮೂಡಲಿದೆ.
ಅಂದಹಾಗೆ ಈಗಾಗಲೇ ದೇಶದ ನಾನಾ ಭಾಷೆಗಳಲ್ಲಿ ಧೋನಿಯ ಬಗ್ಗೆ ಸಿನಿಮಾಗಳನ್ನು ಥಿಯೇಟರ್‌ಗಳಿಗೆ ಬಿಡಲಾಗಿದೆ. ಎಲ್ಲವೂ ಅವರೇಜ್ ಕಲೆಕ್ಷನ್‌ಗಳಿಂದ ಸುದ್ದಿಯಾಗಿತ್ತು. ಅದರಲ್ಲೂ ತೀರಾ ಕುತೂಹಲವನ್ನು ಹುಟ್ಟುಹಾಕಿದ ಕನ್ನಡಿಗ ಪ್ರಕಾಶ್ ರಾಜ್( ರೈ) ಅವರ ನಿರ್ಮಾಣದ ತಮಿಳಿನ ‘ಧೋನಿ’ಯಂತೂ ಪುಟ್ಟ ಪೋರನೊಬ್ಬ ಕ್ರಿಕೆಟಿಗನಾಗಬೇಕು ಎಂದು ಬಯಸುವ ಕತೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೆಲ್ಲವೂ ಧೋನಿಯ ಹೆಸರು ಹಾಗೂ ಆತನ ಕ್ರಿಕೆಟ್ ಬಗ್ಗೆ ಮಾತ್ರ ಹೆಣೆಯಲಾದ ಕತೆಗಳಿಂದ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಈಗ ಬರುತ್ತಿರುವ ಚಿತ್ರವಂತೂ ಧೋನಿಯ ಆತ್ಮಕತೆಯನ್ನೇ ಸಿನಿಮಾ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ರಾಂಚಿಯಿಂದ ಹಿಡಿದು ಇಂದು ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಿಂಚಿದ ಎಲ್ಲ ವಿಚಾರಗಳು ಸಿನಿಮಾದಲ್ಲಿ ದಾಖಲಾಗುತ್ತದೆ. ಇದು ಬಾಲಿವುಡ್ ಪಡಸಾಲೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಾಗಿರುವ ಕಾರಣದಿಂದ ಮಸಾಲೆ, ಗ್ಲಾಮರ್ ಹಾಗೂ ಮನರಂಜನೆಯೂ ಇರಲಿದೆ. ಬಾಲಿವುಡ್ ನಿರ್ದೇಶಕ ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ನೀರಜ್ ಪಾಂಡೆ ಪ್ರತಿಭಾವಂತ ನಿರ್ದೇಶಕ. ಈ ಹಿಂದೆ ‘ವೆಡ್‌ನೆಸ್ ಡೇ’ ಚಿತ್ರ ತರುವ ಮೂಲಕ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡಿದ್ದರು. ಈ ಬಳಿಕ ಸ್ಪೆಶಲ್-೨೬,ವನ್ನು ಕೂಡ ನಿರ್ದೇಶನ ಮಾಡಿದ್ದರು. ಇದು ದೇಶದ ಭ್ರಷ್ಟಾಚಾರದ ಕುರಿತಾದ ಸಿನಿಮಾವಾಗಿತ್ತು. ಇದರ ಜತೆಗೆ ನೀರಜ್ ನಿರ್ಮಾಪಕರಾಗಿ ‘ದೀ ರಾಯಲ್ ಬೆಂಗಾಲ್ ಟೈಗರ್’ ಹಾಗೂ ‘ಟೋಟಲ್ ಸೀಯಾಪ್ಪ’ದಲ್ಲೂ ಕೆಲಸ ಮಾಡಿದ್ದಾರೆ. ಬಾಲಿವುಡ್‌ಗೆ ದಕ್ಕಿದ ರಾಜ್‌ಪೂತ್: ಸುಶಾಂತ್ ಸಿಂಗ್ ರಾಜಪೂತ್ ಈ ಹೆಸರು ಕೇಳಿದಾಕ್ಷಣ ಬಾಲಿವುಡ್‌ನ ಬಿಗ್ ಹಿಟ್ ಚಿತ್ರಗಳ ಲೀಸ್ಟ್‌ನಲ್ಲಿರುವ ‘ಕೈ ಪೋಚೆಂ’ ಸಿನಿಮಾ ಎದುರು ನಿಂತು ಬಿಡುತ್ತದೆ. ಆರಂಭದ ಚಿತ್ರದಲ್ಲಿಯೇ ಸುಶಾಂತ್ ಭರ್ಜರಿ ಹಿಟ್ ಚಿತ್ರ ಕೊಡುವ ಜತೆಗೆ ದೊಡ್ಡ ಬ್ಯಾನರ್‌ನ ಚಿತ್ರಗಳ ನಾಯಕನಾಗಿಯೂ ಬುಕ್ ಆಗಿದ್ದರು. ಯಶ್ ರಾಜ್ ಬ್ಯಾನರ್‌ನ ‘ಶುದ್ಧ್ ದೇಸಿ ರೋಮ್ಯಾನ್ಸ್’ ಜತೆಗೆ ಆಮೀರ್ ಖಾನ್ ಬ್ಯಾನರ್‌ನಲ್ಲಿ ಬರುತ್ತಿರುವ ‘ಪೀಕೆ’ಯಲ್ಲೂ ಸುಶಾಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ನೀರಜ್ ಪಾಂಡೆ ನಿರ್ದೇಶನದ ಧೋನಿ ಆತ್ಮಕತೆ ಆಧಾರಿತ ಚಿತ್ರಕ್ಕೆ ರಾಜ್‌ಪೂತ್ ಒಪ್ಪಿಗೆ ನೀಡಿದ್ದಾರೆ. ಚಿತ್ರಕ್ಕಾಗಿ ರಾಜ್‌ಪೂತ್ ಈಗಾಗಲೇ ಧೋನಿಯ ಜೆರ್ಸಿ, ಮ್ಯಾನರಿಸಂ, ಧೋನಿಯ ಆಟಗಳ ಕ್ಲಿಪ್ಪಿಂಗ್, ಸಂದರ್ಶನಗಳನ್ನು ನೋಡುತ್ತಿದ್ದಾರೆ.
ಸುಶಾಂತ್ ಕ್ರಿಕೆಟಿಗ ಧೋನಿ ಬರುವ ನ್ಯೂಜಿಲ್ಯಾಂಡ್ ಸರಣಿಗೂ ಮೊದಲು ಭೇಟಿ ಮಾಡಿ ಅವರ ಜತೆಯಲ್ಲಿ ತನ್ನ ಚಿತ್ರದ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ ಎನ್ನುವ ಮಾತು ಕೂಡ ಬಾಲಿವುಡ್ ಅಂಗಳದಲ್ಲಿ ಓಡುತ್ತಿದೆ. ಇದರ ಜತೆಗೆ ಧೋನಿ ಪತ್ನಿ ಸಾಕ್ಷಿ ಕೂಡ ಈ ಚಿತ್ರದಲ್ಲಿ ಚಿತ್ರೀಸುವ ಇರಾದೆ ಚಿತ್ರದ ನಿರ್ದೇಶಕರಿಗೆ ಇದೆ. ಈ ಕಾರಣದಿಂದ ಸಾಕ್ಷಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಇಲ್ಲವೇ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡುವ ಕುರಿತು ಸಿನಿಮಾ ನಿರ್ದೇಶಕರು ಯೋಚನೆ ಮಾಡುತ್ತಿದ್ದಾರೆ ಎನ್ನುವ ಮಾತಿದೆ. ೨೦೧೫ರ ಹೊತ್ತಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. ಇದಕ್ಕೆ ಬಹುಮುಖ್ಯ ಕಾರಣ ಧೋನಿಯ ದೇಹ ರಚನೆ. ಇದಕ್ಕಾಗಿ ಸುಶಾಂತ್ ಧೋನಿಯಂತೆ ದೇಹ ರಚನೆಗಾಗಿ ಕಸರತ್ತು ಮಾಡಲಿದ್ದಾರೆ. ಬಹುಕೋಟಿ ವೆಚ್ಚದ ಈ ಸಿನಿಮಾ ದೇಶ ಹಾಗೂ ವಿದೇಶ ಎರಡರಲ್ಲೂ ಚಿತ್ರೀಕರಣ ನಡೆಯಲಿದೆ.

Tuesday, March 18, 2014

ಬೊಂಬಯಿ ಮಿಠಾಯಿಗೆ ರಾಜಸ್ತಾನಿ ಹುಡುಗಿ !

* ಸ್ಟೀವನ್ ರೇಗೊ, ದಾರಂದಕುಕ್ಕು ದಿಶಾ ಪಾಂಡೇ ಬೇಸಿಕಲಿ ರಾಜಸ್ತಾನಿ ಬೆಡಗಿ. ಅದಕ್ಕೂ ಮುಖ್ಯವಾಗಿ ತಮಿಳು ಹಾಗೂ ತೆಲುಗು ಎರಡು ಭಾಷೆಯ ಸಿನಿಮಾಗಳಲ್ಲೂ ಒಂದೇ ರೀತಿಯ ಖದರ್ ಬೆಳೆಸಿಕೊಂಡ ಹುಡುಗಿ ಈಗ ಸ್ಯಾಂಡಲ್‌ವುಡ್ ಸಿನಿಮಾಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಈ ಹಿಂದೆ ಕನ್ನಡದ ಚಿತ್ರ ‘ಶ್ರೀಮತಿ ಜಯಲಲಿತಾ’ ಸಿನಿಮಾಕ್ಕೆ ನಾಯಕಿಯಾಗಿ ಬುಕ್ ಆಗಿರುವ ದಿಶಾ ಪಾಂಡೇ ಸ್ಯಾಂಡಲ್‌ವುಡ್‌ನ ಮತ್ತೊಂದು ಚಿತ್ರಕ್ಕೂ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಚಿತ್ರದ ಹೆಸರು ಬೊಂಬಾಯಿ ಮಿಠಾಯಿ ಇದನ್ನು ನಿರ್ದೇಶನ ಮಾಡುತ್ತಿರುವವರು ಚಂದ್ರಮೋಹನ್. ಇದರಲ್ಲಿ ಇಬ್ಬರು ನಾಯಕರು ವಿಕ್ರಂ ಹಾಗೂ ನಿರಂಜನ್ ಎನ್ನುವುದು ಸಧ್ಯಕ್ಕೆ ಚಿತ್ರ ತಂಡ ಬಿಟ್ಟುಕೊಂಡಿರುವ ಮಾಹಿತಿ. ಚಿತ್ರದಲ್ಲಿ ಒಬ್ಬ ನಾಯಕಿ ಹಾಗೂ ಇಬ್ಬರು ನಾಯಕರು ಎಂದಾಗಲೇ ಚಿತ್ರ ಪ್ರೇಮಕತೆಯನ್ನು ಒಳಗೊಂಡಿದೆ ಎಂಬ ವಿಚಾರವನ್ನು ಅರ್ಥಮಾಡಿಕೊಳ್ಳಬೇಕು.
ಚಿತ್ರದಲ್ಲಿ ‘ಟು ವೇ ಲವ್’ ಮುಖ್ಯವಾಗಿ ಕಾಣಸಿಗಲಿದೆ. ಅಂದಹಾಗೆ ದಿಶಾ ಪಾಂಡೆ ತನ್ನ ಚಿತ್ರದ ಬಗ್ಗೆ ಹೇಳುವ ಮಾತು ಹೀಗಿದೆ: ಚಿತ್ರದಲ್ಲಿ ನನ್ನ ಪಾತ್ರ ಅದಿತಿ. ಅವಳು ಉತ್ತರ ಭಾರತದಿಂದ ಹೆತ್ತವರ ಜತೆಗೆ ಬೆಂಗಳೂರಿಗೆ ಬರುತ್ತಾಳೆ. ಮುಖ್ಯವಾಗಿ ಅವಳಿಗೆ ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಕುತೂಹಲವಿರುತ್ತದೆ. ಇದೇ ಆಸಕ್ತಿಯನ್ನು ಬೆಳೆಸಿಕೊಂಡ ಹುಡುಗರ ಪರಿಚಯವಾಗುತ್ತದೆ. ಚಿತ್ರದಲ್ಲಿ ಹಾಸ್ಯ, ಪ್ರೇಮ, ಮನರಂಜನೆ ಎಲ್ಲವೂ ಸಿಗಲಿದೆ ಎನ್ನುವುದು ಅವರು ಮಾತು. ಚಿತ್ರದ ಬಹುತೇಕ ಚಿತ್ರೀಕರಣ ರಾಜ್ಯದಲ್ಲಿಯೇ ನಡೆಯಲಿದೆ ಎನ್ನುವುದು ಚಿತ್ರತಂಡ ಬಿಚ್ಚಿಡುವ ಮಾತು. ತಮಿಳು ಹಾಗೂ ತೆಲುಗು ಎರಡು ಸಿನಿಮಾ ಕ್ಷೇತ್ರದಲ್ಲೂ ಸಾಣೇ ನಡೆಯುತ್ತಿರುವ ಬೆಡಗಿ ದಿಶಾ ಪಾಂಡೆ ಕನ್ನಡಕ್ಕೆ ಯಾಕೆ ಬಂದಳು ಅಂತಾ ಕೇಳಿದ್ರೆ ಅವಳು ಹೇಳುವ ಮಾತು ಹೀಗಿದೆ: ನನಗೆ ಐತಿಹಾಸಿಕ ಸ್ಥಳಗಳನ್ನು ಸುತ್ತಾಟ ಮಾಡಬೇಕು ಎನ್ನುವ ಬಯಕೆ ಬಹಳಷ್ಟಿತ್ತು. ಆದರೆ ಚಿತ್ರಗಳ ನಿರಂತರ ಶೂಟಿಂಗ್‌ನಿಂದಾಗಿ ಯಾವುದಕ್ಕೂ ಪುರುಸೊತ್ತು ಇಲ್ಲದೇ ಹೋಯಿತು. ಈಗ ಇಂತಹ ವಿಚಾರದ ಮೇಲೆ ಸಿನಿಮಾವೊಂದು ಸಿದ್ಧವಾಗುತ್ತಿದೆ ಎಂದಾಗ ನಾನು ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡೆ. ಚಿತ್ರದಲ್ಲೂ ನನಗೆ ಬಹಳಷ್ಟು ಅವಕಾಶವಿದೆ ಎನ್ನುತ್ತಾರೆ ಅವರು. ಟೋಟಲಿ ತಮಿಳು, ತೆಲುಗು ಎರಡು ಭಾಷೆಗಳನ್ನು ಕಲಿತುಬಂದಿರುವ ದಿಶಾ ಪಾಂಡೆ ಈಗ ಕನ್ನಡ ಕಲಿಯಲು ಆರಂಭಮಾಡಿದ್ದಾರೆ. ಚಿತ್ರಕ್ಕೆ ಅವರೇ ಧ್ವನಿಯಾಗುತ್ತಾರೆ ಎನ್ನುವುದು ಚಿತ್ರ ತಂಡದ ಮಾತು. ಅದಕ್ಕೂ ಮುಖ್ಯವಾಗಿ ‘ಬೊಂಬಾಯಿ ಮಿಠಾಯಿ’ ಸಿನಿಮಾನೂ ಈ ವರ್ಷದ ಕೊನೆಭಾಗದಲ್ಲಿ ತೆರೆಗೆ ಅಪ್ಪಳಿಸಲಿದೆ ಅಲ್ಲಿಯವರೆಗೂ ಕನ್ನಡದ ಸಿನಿ ಪ್ರೇಕ್ಷಕರು ಕಾಯಲೇಬೇಕು.

Monday, March 17, 2014

ಬಾಲಿವುಡ್ ಬಿಟ್ಟ ಹುಡುಗ ನೀಲ್

* ಸ್ಟೀವನ್ ರೇಗೊ,ದಾರಂದಕುಕ್ಕು ನೀಲ್ ನಿತಿನ್ ಮುಕೇಶ್ ಎಂದಾಗ ನತದೃಷ್ಟ ಎನ್ನುವ ಮಾತು ಗೊತ್ತಿಲ್ಲದೇ ಪ್ರೇಕ್ಷಕರ ಮನದಲ್ಲಿ ಅರಳಿಬಿಡುತ್ತದೆ. ಇದು ನೀಲ್ ನಟಿಸಿದ ಫಿಲ್ಮೋಗ್ರಾಫಿ ನೋಡಿದ ಎಲ್ಲರೂ ಹೇಳುವ ಮಾತು. ಒಂದಲ್ಲ ಎರಡಲ್ಲ ಬರೋಬರಿ ೧೧ ಬಾಲಿವುಡ್ ಚಿತ್ರಗಳಲ್ಲಿ ನೀಲ್ ನಟಿಸಿದ್ದಾರೆ. ಆದರೆ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್ ರೆಕಾರ್ಡ್ ಮುರಿಯುವ ಮಾತೇ ಆಡಿಲ್ಲ.
ಅದಕ್ಕೂ ಮುಖ್ಯವಾಗಿ ಸಾಮಾನ್ಯ ಕಲೆಕ್ಷನ್ ಕಂಡು ಥಿಯೇಟರ್‌ನಿಂದಲೇ ಡುಮ್ಕಿ ಹೊಡೆದಿದೆ. ಈ ಎಲ್ಲ ವಿಚಾರಗಳಿಂದ ನೀಲ್ ನಿತಿನ್ ಮುಕೇಶ್ ಸಧ್ಯಕ್ಕೆ ಬಾಲಿವುಡ್ ಬಿಟ್ಟು ಕಾಲಿವುಡ್ ಸಿನಿಮಾ ರಂಗದಲ್ಲೇ ಠಿಕಾಣಿ ಹೂಡುತ್ತಾರೆ ಎನ್ನುವ ಗುಸುಗುಸು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಲು ಆರಂಭವಾಗಿದೆ. ಇವುಗಳ ಜತೆಯಲ್ಲಿ ನೀಲ್ ನಿತಿನ್ ಮುಕೇಶ್ ಅವರ ಬತ್ತಳಿಕೆಯಲ್ಲಿ ಬಾಲಿವುಡ್‌ನ ಎರಡು ಚಿತ್ರಗಳಿವೆ. ಆದರೆ ಅದು ಪಕ್ಕಾ ಸಿನಿಮಾಗಳಲ್ಲ. ಅಂದರೆ ಕಳೆದ ಎರಡು ವರ್ಷಗಳಿಂದ ಹೆಸರು ಮಾತ್ರ ಬುಕ್ಕಿಂಗ್ ನಡೆದಿದೆ. ಉಳಿದಂತೆ ಸಿನಿಮಾದ ಕೆಲಸ ಕಾರ‍್ಯಗಳು ಆರಂಭವೇ ಆಗಿಲ್ಲ. ಈ ಕಾರಣದಿಂದ ಈ ಎರಡು ಚಿತ್ರಗಳನ್ನು ಬಿಟ್ಟು ನೀಲ್ ಬಗ್ಗೆ ಮಾತಿಗಿಳಿದರೆ ಹುಟ್ಟುವ ಪ್ರಶ್ನೆ ನೀಲ್ ಈಗ ನಿರುದ್ಯೋಗಿ ! ಆದರೂ ಈಗ ಕಾಲಿವುಡ್‌ನಿಂದ ಅವಕಾಶವೊಂದು ಬಡಿದಿದೆ. ಚಿತ್ರನೂ ದೊಡ್ಡ ಬ್ಯಾನರ್‌ನಡಿಯಲ್ಲಿ ಸಿದ್ಧವಾಗುತ್ತಿದೆ. ಈ ಎಲ್ಲ ಕಾರಣಗಳಿಂದ ನೀಲ್ ಕಾಲಿವುಡ್ ಅಂಗಳದಲ್ಲಿಯೇ ತನ್ನ ಆಟ ಮುಂದುವರಿಸುತ್ತಾರೆ ಎನ್ನುವುದು ಗುಲ್ಲು. ಕಾಲಿವುಡ್ ಮೇಲೆ ನೀಲ್ ಕಣ್ಣು: ತೀರಾ ಇತ್ತೀಚೆಗೆ ಕಾಲಿವುಡ್ ಅಂಗಳದ ಖ್ಯಾತ ನಿರ್ದೇಶಕ ಎ.ಆರ್.ಮುರುಗದಾಸ್ ತಮ್ಮ ಹೆಸರಿಡದ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ನೀಲ್ ನಿತಿನ್ ಮುಕೇಶ್‌ರನ್ನು ಬುಕ್ ಮಾಡಿದ್ದಾರೆ. ಅಂದಹಾಗೆ ಇದು ನೀಲ್ ಕಾಲಿವುಡ್‌ನಿಂದ ಬಂದ ಎರಡನೇ ಆಫರ್ ಎನ್ನುವುದು ಗಮನಿಸಬೇಕಾದ ವಿಷ್ಯಾ. ಈ ಹಿಂದೆ ಚಿತ್ರ ನಿರ್ದೇಶಕ ಸುಸೈ ಗಣೇಶ್ ಅವರ ‘ಶಾರ್ಟ್ ಕಟ್ ರೋಮಿಯೋ’ ಹಿಂದಿಯಲ್ಲಿ ಬಂದಿತ್ತು. ಆದರೆ ಚಿತ್ರದ ನಿರ್ದೇಶಕ ಸುಸೈ ಗಣೇಶ್ ಪಕ್ಕಾ ಕಾಲಿವುಡ್ ಇಂಡಸ್ಟ್ರಿಯ ಜನ. ಅದಕ್ಕೂ ಮುಖ್ಯವಾಗಿ ಈ ಚಿತ್ರ ತಮಿಳುನಾಡಿನಲ್ಲೂ ಓಡಿತ್ತು. ಆದರೆ ಬಾಲಿವುಡ್ ಅಂಗಳದಲ್ಲಿ ಸುದ್ದಿ ಮಾಡಲು ವಿಫಲವಾಯಿತು. ಈ ಬಳಿಕ ನೀಲ್ ನಟಿಸಿದ ಯಾವುದೇ ಚಿತ್ರಗಳು ಬಾಲಿವುಡ್ ಅಂಗಳದಲ್ಲಿ ಬಂದೇ ಇಲ್ಲ. ಅದಕ್ಕೂ ಮುಖ್ಯವಾಗಿ ಕಾಲಿವುಡ್ ಪಡಸಾಲೆಯಲ್ಲೇ ನೀಲ್ ನಿತಿನ್ ಓಡಾಡಿಕೊಂಡಿರುವುದನ್ನು ಗಮನಿಸಿದ ಮುರುಗದಾಸ್ ತಮ್ಮ ಮುಂದಿನ ಚಿತ್ರಕ್ಕೆ ನೀಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಹಿಂದೆ ನಟ ವಿಜಯ್ ಅವರನ್ನು ಹಾಕಿಕೊಂಡು ಮಾಡಿದ ‘ತೂಫಾಕಿ’ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡಿತ್ತು. ಈಗ ಮುರುಗದಾಸ್ ವಿಜಯ್ ಯನ್ನು ನಾಯಕನಾಗಿ ನೀಲ್ ನಿತಿನ್ ಮುಕೇಶ್ ರನ್ನು ವಿಲನ್ ಆಗಿ ಚಿತ್ರದಲ್ಲಿ ತೋರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ವರ್ಷದ ಕೊನೆ ಭಾಗದಲ್ಲಿ ಚಿತ್ರ ಹೊರಬರುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ. ಅದಕ್ಕೂ ಮಿಗಿಲಾಗಿ ನೀಲ್ ನಿತಿನ್ ಕಾಲಿವುಡ್‌ನಲ್ಲೇ ತಮ್ಮ ಮುಂದಿನ ಚಿತ್ರ ಬದುಕು ಕಳೆಯುತ್ತಾರಾ ಎನ್ನುವುದು ಕಾದು ನೋಡಬೇಕು.

ಕನ್ನಡದಲ್ಲಿ ‘ನವ್ಯಾ’ ದೃಶ್ಯಂ

* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಿನಿಮಾ ಅಡ್ಡಾದಲ್ಲಿ ಮಲಯಾಳಂ ಬೆಡಗಿ ನವ್ಯಾ ನಾಯರ್ ಎಂಟ್ರಿ ಕೊಡುತ್ತಿದ್ದಾರೆ. ಮಲಯಾಳಂ ಸಿನಿಮಾ ‘ದೃಶ್ಯಂ’ ಈಗಾಗಲೇ ಕಲೆಕ್ಷನ್ ವಿಚಾರದಲ್ಲಿ ಬಾಕ್ಸಾಫೀಸ್ ಗಲ್ಲಾ ಪೆಟ್ಟಿಗೆಯನ್ನು ದೋಚಿಕೊಂಡಿತ್ತು. ಇದೇ ಸಿನಿಮಾವನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಸೆಟ್ಟೇರಿಸುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ. ಅಂದಹಾಗೆ ಕನ್ನಡದ ದೃಶ್ಯಂಗಾಗಿ ನವ್ಯಾ ನಾಯರ್ ಬುಕ್ ಆಗಿದ್ದಾರೆ ಎನೋದು ಗಾಂಧಿನಗರದಲ್ಲಿ ಹರಡಿಕೊಂಡಿರುವ ಮಾತು. ಮಲಯಾಳಂನ ದೃಶ್ಯಂನಲ್ಲಿ ನಟಿ ಮೀನಾ ಮಾಡಿದ ಪಾತ್ರವನ್ನು ಕನ್ನಡದಲ್ಲಿ ನವ್ಯಾ ಮಾಡುತ್ತಿದ್ದಾರೆ. ಈ ಕುರಿತು ನವ್ಯಾ ಹೇಳುವ ಮಾತು ಹೀಗಿದೆ: ಈ ಪಾತ್ರದ ಕುರಿತು ನನಗೆ ಅಪಾರ ನಿರೀಕ್ಷೆ ಇದೆ. ಆದರೆ ನನ್ನ ಪುತ್ರನಿಗೆ ಈಗ ಮೂರರ ಹರೆಯ. ಅವನ ಭವಿಷ್ಯದ ದೃಷ್ಟಿಯಿಂದ ಹತ್ತಿರ ಇರೋದು ನನ್ನ ಕರ್ತವ್ಯ. ಈ ಕಾರಣದಿಂದಲೇ ನಾನು ಎಲ್ಲ ಚಿತ್ರಗಳನ್ನು ಕೈ ಬಿಟಟೆ. ಆದರೆ ದೃಶ್ಯಂನ ಮೀನಾರ ಪಾತ್ರ ಮಾತ್ರ ನನಗೆ ಬಹಳ ಹಿಡಿಸಿತು. ಈ ಕಾರಣದಿಂದ ಚಿತ್ರ ಮಾಡುತ್ತಿದ್ದೇನೆ. ಮಲಯಾಳಂನಲ್ಲಿ ಬಂದಿರುವ ದೃಶ್ಯಂವನ್ನು ನಾನು ನೋಡಿದ್ದೇನೆ. ಚಿತ್ರ ತುಂಬಾನೇ ಅದ್ಬುತವಾಗಿದೆ. ಅದಕ್ಕೂ ಮಿಗಿಲಾಗಿ ಚಿತ್ರದಲ್ಲಿರುವ ಸಂದೇಶ ಎಲ್ಲವೂ ಬಹಳಷ್ಟು ಹಿಡಿಸಿಬಿಟ್ಟಿದೆ. ನಾನು ಖಂಡಿತವಾಗಿಯೂ ನನ್ನ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡಬಲ್ಲೇ ಎನ್ನುವ ಧೈರ್ಯವಿದೆ ಎನ್ನುವುದು ನವ್ಯಾ ನಾಯರ್ ಮಾತು. ಖ್ಯಾತ ನಿರ್ದೇಶಕ ಪಿ. ವಾಸು ಈ ಚಿತ್ರವನ್ನು ಹೊರತರುತ್ತಿದ್ದಾರೆ. ನಟ ವಿ. ರವಿಚಂದ್ರನ್ ಮಲಯಾಳಂನ ಮೋಹನ್‌ಲಾಲ್ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಮಾಡುತ್ತಿದ್ದಾರೆ. ಕನ್ನಡ ನನಗೇನು ಹೊಸದಾದ ಸಿನಿಮಾ ಇಂಡಸ್ಟ್ರಿ ಅಲ್ಲ. ಕನ್ನಡದ ಸಿನಿಮಾಗಳನ್ನು ನೋಡಿದ್ದೇನೆ ಹಾಗೂ ಸ್ಯಾಂಡಲ್‌ವುಡ್ ಸಿನಿಮಾ ನಟ, ನಟಿಯರ ಜತೆಗೂ ನನಗೆ ಸ್ನೇಹವಿದೆ.ಟೋಟಲಿ ಈ ಬಾರಿಯಂತೂ ದೊಡ್ಡ ತಂಡದ ಜತೆಗೆ ಮಾಡುತ್ತಿದ್ದೇನೆ ಎನ್ನೋದು ಮಾತ್ರ ಕೊಂಚ ಭಯ ಹುಟ್ಟಿಸುತ್ತಿದೆ ಎನ್ನುತ್ತಾರೆ ನವ್ಯಾ ನಾಯರ್. ಮದುವೆಯಾಗಿ ಮಗುವಾದ ನಂತರ ನವ್ಯಾ ಸಿನಿಮಾ ಇಂಡಸ್ಟ್ರಿಯಿಂದ ಕೊಂಚ ದೂರವೇ ಉಳಿದು ಬಿಟ್ಟಿದ್ದರು. ಮಲಯಾಳಂ ಚಿತ್ರ ‘ನಮ್ಮದು ವೀಡು’ ಬಳಿಕ ಕನ್ನಡದಲ್ಲಿ ನವ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ನವ್ಯಾ ಹೇಳುವಂತೆ ‘ ಈ ಹಿಂದೆ ಸಿನಿಮಾ ನನ್ನ ಬದುಕಿನ ಒಂದು ಭಾಗವಾಗಿತ್ತು. ಆದರೆ ಈಗ ಅದೊಂದು ಹವ್ಯಾಸವಾಗಿ ಹೋಗಿದೆ. ಅಂದಹಾಗೆ ನವ್ಯಾ ನಾಯರ್ ಮಗುವಾದ ನಂತರ ಮನೆಯಲ್ಲಿ ಕೂತು ಏನೂ ಮಾಡುತ್ತಿದ್ದರು ಎನ್ನುವ ಕುತೂಹಲ ಬಹಳಷ್ಟು ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ನಿಜಕ್ಕೂ ನವ್ಯಾ ತಮ್ಮ ಸಿನಿ ಬದುಕಿನ ಕುರಿತಾಗಿ ಒಂದು ಕೃತಿಯನ್ನು ಹೊರತರುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅವರ ಆಪ್ತ ಮೂಲದ ಮಾತು. ಮಗುವಿನ ಹಾರೈಕೆಯಲ್ಲಿ ಮಗ್ನರಾಗಿರುವ ನವ್ಯಾ ತಮ್ಮದೇ ಬ್ಲಾಗ್ ಹಾಗೂ ಸೋಶಿಯಲ್ ನೆಟ್‌ವರ್ಕ್ ಸೈಟ್‌ಗಳ ಮೂಲಕ ಅಭಿಮಾನಿಗಳನ್ನು ಹಿಡಿದುಕೊಳ್ಳುವ ಕೆಲಸವನ್ನಂತೂ ಮಾಡುತ್ತಾ ಬರುತ್ತಿದ್ದಾರೆ. ಟೋಟಲಿ ನವ್ಯಾ ನಾಯರ್ ಇರುವ ದೃಶ್ಯಂ ಬಿಡುಗಡೆಯ ಮೊದಲೇ ನಿರೀಕ್ಷೆಯ ಪೊಟ್ಟಣವನ್ನು ಬಿಚ್ಚಿಕೊಟ್ಟಿದೆ.

Saturday, March 15, 2014

ತುಳುನಾಡಿನ ‘ದುಡಿ ನಲಿಕೆ’ಗೆ ಒಲಿದ ಅದೃಷ್ಟ ಸಾರಂಗಕ್ಕೆ ಒಲಿದು ಬಂತು ರಾಷ್ಟ್ರಪ್ರಶಸ್ತಿ

* ಸ್ಟೀವನ್ ರೇಗೊ, ದಾರಂದಕುಕ್ಕು ತುಳುನಾಡಿನ ಅಳಿವಿನ ಅಂಚಿನಲ್ಲಿರುವ ‘ದುಡಿ ನಲಿಕೆ’ ಕುಣಿತ ಈ ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಮಂಗಳೂರು ಸಂತ. ಅಲೋಶಿಯಸ್ ಕಾಲೇಜಿನ ಸಮುದಾಯ ಬಾನುಲಿ ‘ಸಾರಂಗ’ ತಂಡ ಈ ದುಡಿ ಕುಣಿತವನ್ನು ರಾಷ್ಟ್ರಮಟ್ಟಕ್ಕೆ ಸಾಗಿಸಿ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಡುಪಿ, ದ.ಕ.ಜಿಲ್ಲೆಯ ವಿಶಿಷ್ಟ ಜಾನಪದ ಕಲೆಯಾದ ‘ದುಡಿ ನಲಿಕೆ’ ಕುಣಿತ ಈಗ ಅಪರೂಪವಾಗಿದೆ. ಕರಾವಳಿಯ ಒಂದು ಬುಡಕಟ್ಟು ಜನಾಂಗ ಮಾತ್ರ ಈ ಕುಣಿತವನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ನಡೆಸುತ್ತಿದೆ. ವಿಶೇಷವಾಗಿ ದುಡಿಯನ್ನು ಬಡಿದು ಪುರುಷರು ಹಾಗೂ ಮಹಿಳೆಯರು ಕುಣಿಯುತ್ತಾ ಹಾಡುವುದು ಇದರ ವೈಶಿಷ್ಟ್ಯತೆಗಳಲ್ಲಿ ಒಂದಾಗಿದೆ. ಇಂತಹ ಕಲೆಯನ್ನು ಸಾರಂಗದ ಸಿಬ್ಬಂದಿ ಕಡಬದ ತಿಮ್ಮಪ್ಪರು ರೆಕಾರ್ಡ್ ಮಾಡಿಕೊಂಡು ಸಾರಂಗ ಸಮುದಾಯ ಬಾನುಲಿಯಲ್ಲಿ ೨ ಗಂಟೆಗಳ ಕಾಲ ಪ್ರಸಾರ ಮಾಡಿದ್ದರು. ಅದರಲ್ಲೂ ಮುಖ್ಯವಾಗಿ ರಾಷ್ಟ್ರಮಟ್ಟದ ಸಮುದಾಯ ಬಾನುಲಿ ಕೇಂದ್ರಗಳಿಗೆ ಪ್ರತಿ ವರ್ಷ ಹಮ್ಮಿಕೊಳ್ಳುತ್ತಿರುವ ಸ್ಪರ್ಧೆಯ ಸ್ಥಳೀಯ ಕಲೆಯ ಉತ್ತೇಜನ ವಿಭಾಗದಲ್ಲಿ ಈ ‘ದುಡಿ ಕುಣಿತ’ಕ್ಕೆ ಮೂರನೇ ಸ್ಥಾನ ಲಭ್ಯವಾಗಿದೆ. ಇದು ಕರ್ನಾಟಕದ ೧೦ ಸಮುದಾಯ ಬಾನುಲಿಗಳ ನಡುವೆ ಸಾರಂಗ ರಾಜ್ಯದ ಮೊದಲ ಸಮುದಾಯ ಬಾನುಲಿ ಕೇಂದ್ರವಾಗಿದೆ. ೨೦೧೨ರಲ್ಲಿ ಸಾರಂಗ ಸಮುದಾಯ ಬಾನುಲಿ ಏಡ್ಸ್ ಕುರಿತಾಗಿ ಬ್ಯಾರಿ ಸಮುದಾಯದ ಮಹಿಳೆಯರು ನಡೆಸಿಕೊಟ್ಟ ಕಾರ‍್ಯಕ್ರಮ ಕೂಡ ರಾಷ್ಟ್ರಮಟ್ಟದ ಪ್ರಶಸ್ತಿ ಬಾಚಿಕೊಂಡಿತು. ಸಾರಂಗ ಎರಡನೇ ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ. ‘ಸಾರಂಗ’ದಲ್ಲಿ ಈಗಾಗಲೇ ೨೫ ಗಂಟೆಯ ಪಾಡ್ದನಗಳ ಸಂಗ್ರಹವಿದೆ. ಇಂತಹ ಸಂಗ್ರಹ ಆಕಾಶವಾಣಿ ಕೇಂದ್ರಗಳಲ್ಲೂ ಇಲ್ಲ. ಅದಕ್ಕೂ ಮುಖ್ಯವಾಗಿ ೩೬೫ ದಿನಗಳ ಕಾಲನೂ ಯಕ್ಷಗಾನದ ಪ್ರಸಾರ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ ೬ರಿಂದ ರಾತ್ರಿ ೧೦ರ ವರೆಗೆ ನಿರಂತರವಾಗಿ ಕೊಂಕಣಿ, ತುಳು, ಕನ್ನಡ, ಬ್ಯಾರಿ, ಇಂಗ್ಲೀಷ್‌ಗಳಲ್ಲಿ ಕಾರ‍್ಯಕ್ರಮಗಳನ್ನು ನೀಡುತ್ತಾ ಅಪಾರ ಶೋತೃಗಳನ್ನು ಹುಟ್ಟುಹಾಕಿರುವ ಸಾರಂಗದ ತಂಡದಲ್ಲಿ ಕಾರ‍್ಯಕ್ರಮ ನಿರ್ಮಾಪಕರಾಗಿ ಅಭಿಷೇಕ್ ಭಂಡಾರಿ, ಎಡ್ವರ್ಡ್ ಲೋಬೋ, ರೋಷನ್ ಕ್ರಾಸ್ತಾ, ಪ್ರಗತಿ ಕಾರ‍್ಯನಿರ್ವಹಣೆ ಮಾಡುತ್ತಿದ್ದಾರೆ. ಫಾ. ವಾಲ್ಟರ್ ಅಂದ್ರಾದೆ ಹಾಗೂ ಫಾ. ಸ್ಟೀಬರ್ಟ್ ಡಿಸಿಲ್ವಾ ಸಾರಂಗದ ಉಸ್ತುವಾರಿ ಹೊತ್ತುಕೊಂಡಿದ್ದಾರೆ.
ಕರಾವಳಿ ಮೀನುಗಾರರ ಸಮೂಹ, ಕೃಷಿಕ ಬಂಧುಗಳಿಗೆ ಮಾಹಿತಿ, ಆರೋಗ್ಯ- ಕಾನೂನು ಕ್ಷೇತ್ರದ ಜತೆಗೆ ವಿದ್ಯಾರ್ಥಿಗಳಿಗೆ ಆಸಕ್ತಿ ನೀಡುವಂತಹ ಕಾರ್ಯಕ್ರಮಗಳು, ರಸ್ತೆ ಸುರಕ್ಷೆಯ ಜತೆಗೆ ಮಳೆ ನೀರು ಕೊಯ್ಲು ಕಾರ್ಯಕ್ರಮಗಳು ಸಾರಂಗದಲ್ಲಿ ಜಾಸ್ತಿಯಾಗಿ ಪ್ರಸಾರವಾಗುತ್ತಿದೆ. ಮಂಗಳೂರು ಸುತ್ತಮುತ್ತಲಿನ ಊರುಗಳ ಜತೆಗೆ ದೂರದ ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ಉಡುಪಿ ಮುಂತಾದ ಪ್ರದೇಶಗಳಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಇತರ ವರ್ಗದ ಜನರು ಸಾರಂಗದಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಸಾರಂಗ ೧೦೭.೮ ಸಮುದಾಯ ಬಾನುಲಿಯ ಉಸ್ತುವಾರಿ ಹೊತ್ತುಕೊಂಡಿರುವ ಫಾ.ವಾಲ್ಟರ್ ಅಂದ್ರಾದೆ ಅವರು. ಕರಾವಳಿಯಲ್ಲಿ ಐದಾರು ಧರ್ಮ, ಭಾಷೆ, ಸಂಸ್ಕೃತಿಯ ಮಂದಿ ಬದುಕುತ್ತಿದ್ದಾರೆ. ಈ ಎಲ್ಲ ಮಂದಿಯನ್ನು ಒಂದು ಎಂಬ ಸಂಕೇತ ರೂಪವಾಗಿ ‘ಸಾರಂಗ’ ಎಂಬ ಹೆಸರನ್ನು ಸೂಚಿಸಲಾಗಿದೆ. ‘ಸಾರಂಗ’ ಎಂದರೆ ಹಲವು ಬಣ್ಣಗಳು ಎಂಬ ಅರ್ಥ ನೀಡುತ್ತದೆ. ವಿವಿಧ ಕಾರ್ಯಕ್ರಮಗಳು ಈ ‘ಸಾರಂಗ’ಕ್ಕೆ ಮತ್ತಷ್ಟೂ ಬಲ ನೀಡಿದೆ ಎನ್ನುವುದು ಕೇಳುವ ಶೋತೃಗಳು ಹೇಳುವ ಮಾತು.

Thursday, March 13, 2014

ಕನ್ನಡ ಚಿತ್ರಕ್ಕೆ ಬಾಲಿವುಡ್ ಟಚ್ ಕಬೀರ್‌ನಲ್ಲಿ ಇಸ್ಮಾಯಿಲ್ ದರ್ಬಾರ್

* ಸ್ಟೀವನ್ ರೇಗೊ, ದಾರಂದಕುಕ್ಕು ಸ್ಯಾಂಡಲ್‌ವುಡ್ ಸಖತ್ ಖುಷಿ ಮೂಡ್‌ನಲ್ಲಿದೆ. ಯಾಕ್ ಅಂತೀರಾ..ಬಾಲಿವುಡ್ ಅಂಗಳದಲ್ಲಿ ಮೆರೆದ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಈಗ ಕನ್ನಡ ಚಿತ್ರವೊಂದಕ್ಕೆ ಸಂಗೀತ ನಿರ್ದೇಶಕರಾಗಿ ಬುಕ್ ಆಗಿದ್ದಾರೆ. ಅಂದಹಾಗೆ ಸ್ಯಾಂಡಲ್‌ವುಡ್ ನಲ್ಲಿ ಇಸ್ಮಾಯಿಲ್ ದರ್ಬಾರ್ ಸಂಗೀತ ನಿರ್ದೇಶನ ಮಾಡುತ್ತಿರುವ ಚಿತ್ರ ಯಾವುದು ಎಂದರೆ ತೀರಾ ಇತ್ತೀಚೆಗೆ ಬಿಗ್ ಬಿ ಅಮಿತಾ‘ ಬಚ್ಚನ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತು ಹರಿದಾಡಿದ ಸಿನಿಮಾ ‘ಕಬೀರ್’ಗಾಗಿ ಇಸ್ಮಾಯಿಲ್ ದರ್ಬಾರ್ ಟ್ಯೂನ್ ಜೋಡಿಸುತ್ತಿದ್ದಾರೆ.
ಈಗಾಗಲೇ ‘ಕಬೀರ್’ ಚಿತ್ರದ ನಿರ್ದೇಶಕ ನರೇಂದ್ರ ಬಾಬು ಅವರು ಇಸ್ಮಾಯಿಲ್ ದರ್ಬಾರ್ ಅವರನ್ನು ಸಂಪರ್ಕ ಸಾಸಿಕೊಂಡು ಚಿತ್ರಕ್ಕೆ ಸಂಗೀತ ನೀಡುವಂತೆ ಕೇಳಿಕೊಂಡಿದ್ದಾರೆ ಎನ್ನುವ ಮಾತಿದೆ. ಇದಕ್ಕೆ ತಕ್ಕಂತೆ ಇಸ್ಮಾಯಿಲ್ ದರ್ಬಾರ್ ಕೂಡ ಸಂಗೀತ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ‘ಕಬೀರ್’ ಚಿತ್ರ ಸಾಕಷ್ಟು ನಿರೀಕ್ಷೆಗಳ ಮಹಾಪೂರವನ್ನೇ ಹುಟ್ಟುಹಾಕಿದೆ. ಒಂದೆಡೆ ಬಿಗ್ ಬಿ ಅಮಿತಾ‘ ಬಚ್ಚನ್ ಕಬೀರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಕನ್ನಡದ ಮೇಷ್ಟ್ರು ಎಂದೇ ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಸಿನಿಮಾ ‘ಅಮೃತ‘ರೆ’ಯಲ್ಲಿ ಬಿಗ್ ಬಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆ ಇದು ಸಂತ. ಕಬೀರ್‌ದಾಸ್ ಮೇಲೆ ಮೂಡಿಬರುತ್ತಿರುವ ಸಿನಿಮಾ ಇದಾಗಿದೆ. ಕಬೀರ್ ಪಾತ್ರದಲ್ಲಿ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಂಡರೆ ಕಬೀರ್‌ರ ಗುರು ರಮಾನಂದ ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಚಿತ್ರೀಕರಣ ಜುಲೈ- ಆಗಸ್ಟ್ ತಿಂಗಳಲ್ಲಿ ಆರಂ‘ವಾಗಲಿದೆ. ಚಿತ್ರದ ಸಂಗೀತದಲ್ಲಿ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಅವರ ಟಚ್ ಇರಲಿದೆ. ಇಸ್ಮಾಯಿಲ್ ಯುಗಾದಿ ಸಮಯದಲ್ಲಿ ಈ ಚಿತ್ರದ ಹಾಡುಗಳಿಗೆ ಟ್ಯೂನ್ ಕೊಡಲಿದ್ದಾರೆ ಎನ್ನುವುದು ಚಿತ್ರತಂಡದ ಮಾಹಿತಿ. ಹಿಂದಿಯ ಖ್ಯಾತ ರಂಗ‘ಮಿಯ ನಾಟಕವಾದ ಬಹೀರ್ ಕರ್ ಬಜಾರ್ ಮೇ’ಯ ಆವತರಣಿಕೆಯಾಗಿದೆ ಎನ್ನುವ ಮಾತು ಕೂಡ ಗಾಂನಗರದಲ್ಲಿ ಓಡಾಡುತ್ತಿದೆ. ಎಲ್ಲಕ್ಕೂ ಮುಖ್ಯವಾಗಿ ಪ್ರಾದೇಶಿಕ ‘ಷೆಗಳ ಸಿನಿಮಾಗಳಲ್ಲಿ ಈ ಇಬ್ಬರು ಬಾಲಿವುಡ್ ಪಡಸಾಲೆಯ ದಿಗ್ಗಜರು ಕಾಣಿಸಿಕೊಳ್ಳಲು ಒಪ್ಪಿಕೊಳ್ಳುತ್ತಿರುವುದು ಹೆಮ್ಮೆಯ ವಿಷ್ಯಾ. ಇವರಿಂದ ‘ಕಬೀರ್’ ಚಿತ್ರದ ಕುರಿತು ಪ್ರೇಕ್ಷಕರ ನಿರೀಕ್ಷೆಯ ಪೊಟ್ಟಣವಂತೂ ಬಿಚ್ಚಿಕೊಂಡಿದೆ.

ಐದು ಸಾವಿರ ಹೆರಿಗೆ ಮಾಡಿಸಿದ ಸೂಲಗಿತ್ತಿ ಮುತ್ತಜ್ಜಿ

* ಸ್ಟೀವನ್ ರೇಗೊ, ದಾರಂದಕುಕ್ಕು ಇಂದಿನಂತೆ ಅಂದು ತಂತ್ರಜ್ಞಾನ ಹೇಳಿದಂತೆ ಬೆಳೆದು ಬಂದಿರಲಿಲ್ಲ. ಆಸ್ಪತ್ರೆಗಳಂತೂ ಮಾರು ದೂರ ಇರುತ್ತಿತ್ತು. ಹೆಣ್ಣು ಮಕ್ಕಳಿಗೆ ಹೆರಿಗೆ ನೋವು ಬಂತು ಎಂದಾದರೆ ಮುತ್ತಕ್ಕ ಓಡಿಹೋಗಿ ಹೆರಿಗೆ ಮಾಡಿಸಿ ಪುಣ್ಯ ಕಟ್ಟುಕೊಳ್ಳುತ್ತಿದ್ದರು. ಕಾರ್ಕಳ, ಬೆಳುವಾಯಿ ಸುತ್ತಮುತ್ತ ಕಳೆದ ೬೦ ವರ್ಷಗಳಿಂದ ಮುತ್ತಕ್ಕ ಮಾಡಿಸಿದ ಹೆರಿಗೆಗಳ ಸಂಖ್ಯೆಯೇ ಐದು ಸಾವಿರ ಸಂಖ್ಯೆ ದಾಟಿ ನಿಲ್ಲುತ್ತದೆ. ಹನ್ನೆರಡರ ಹರೆಯದಲ್ಲಿ ಮುತ್ತಕ್ಕ ತನ್ನ ತಾಯಿಯ ಜತೆ ಸೇರಿಕೊಂಡು ಹೆರಿಗೆ ಮಾಡಿಸುವ ಕಾಯಕ ನೆಚ್ಚಿಕೊಂಡರು. ಅಲ್ಲಿಂದ ಈಗಲೂ ಯಾವುದೇ ಪ್ರತಿಫಲ ಅಪೇಕ್ಷೆ ಮಾಡಿಕೊಳ್ಳದೇ ಹೆರಿಗೆ ಮಾಡಿಸುತ್ತಿದ್ದಾರೆ. ಇವರ ಸಾಧನೆಯನ್ನು ಮನಗಂಡು ಕರ್ನಾಟಕ ರಾಜ್ಯ ಸರಕಾರ ೧೯೮೫ರಲ್ಲಿ ಹೆರಿಗೆ ಕಿಟ್ ನೀಡಿ ಪ್ರೋತ್ಸಾಹಿಸಿದೆ. ಎರಡನೇ ತರಗತಿವರೆಗೆ ಓದಿರುವ ಮುತ್ತಜ್ಜಿಗೆ ಎರಡು ಹೆಣ್ಣು ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿದ ಮುತ್ತಜ್ಜಿಗೆ ಈಗ ಭರ್ತಿ ೭೨ ತುಂಬಿದೆ.
‘ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಯಾರಾದರೂ ಬಂದು ನನ್ನ ಮಗಳಿಗೆ ಅಥವಾ ಸೊಸೆಗೆ ಹೆರಿಗೆ ನೋವು ಬರುತ್ತಿದೆ. ದಯವಿಟ್ಟು ಬನ್ನಿ ಎಂದರೆ ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೆ ಬಿಟ್ಟು ತಕ್ಷಣ ಬಂದ ವ್ಯಕ್ತಿಯ ಜತೆಗೆ ಧಾವಿಸುತ್ತಿದ್ದರು ಎಂದು ಮುತ್ತಕ್ಕರನ್ನು ಬಾಲ್ಯದಿಂದಲೂ ಹತ್ತಿರದಿಂದ ಕಂಡು ನೋಡುತ್ತಿದ್ದ ನಿವೃತ್ತ ಅಬಕಾರಿ ಇಲಾಖೆಯ ಅಧಿಕಾರಿಯಾಗಿರುವ ಜಯಕರ ಸಾಲ್ಯಾನ್ ಹೇಳುವ ಮಾತು. ಈಗಿನ ಕಾಲದಂತೆ ಹಿಂದೆ ಹೆಚ್ಚಿನ ವೈದ್ಯರು ಇರಲಿಲ್ಲ. ಊರಿಗೊಬ್ಬ ವೈದ್ಯರು ಇರುವಂತಹ ಕಾಲದಲ್ಲಿ ಮುತ್ತಕ್ಕ ಊರಲ್ಲಿ ಹೆರಿಗೆ ನಿರ್ವಹಿಸುತ್ತಿರುವುದರಿಂದ ಬಹಳಷ್ಟು ವೈದ್ಯರು ಮುತ್ತಕ್ಕ ಮೇಲೆ ಗರಂ ಆಗುತ್ತಿದ್ದರು. ಆದರೂ ಯಾರಾದರೂ ಬಂದು ಹೆರಿಗೆ ನೋವು ಬರುತ್ತಿದೆ ದಯವಿಟ್ಟು ಬನ್ನಿ ಎಂದರೆ ತಕ್ಷಣ ಯಾವ ಫಲಾಫೇಕ್ಷೆ ಇಲ್ಲದೇ ಅವರ ಸಹಾಯಕ್ಕೆ ಹೋಗುತ್ತಿದ್ದರು. ತಾನು ಹೋದ ಕೆಲಸ ದೇವರ ದಯೆಯಿಂದ ಯಾವುದೇ ತೊಂದರೆ ಇಲ್ಲದೆ ನೆರವೇರಿದೆ ಎನ್ನುವ ಖುಷಿ ತುಂಬಿಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಅದರಲ್ಲೂ ಅವರು ಮಾಡಿದ ಯಾವುದೇ ಹೆರಿಗೆ ಕೂಡ ಕಷ್ಟವಾಗಿ ಆಸ್ಪತ್ರೆಯ ದಾರಿ ಹಿಡಿದ ಪ್ರಸಂಗವೇ ಇಲ್ಲ ಎನ್ನುತ್ತಾರೆ ಜಯಕರ ಸಾಲ್ಯಾನ್ ಅವರು. ಮುತ್ತಕ್ಕ ಮಾಡಿದ ಗ್ರಾಮ ಸೇವೆ: ಮುತ್ತಕ್ಕ ಬರೀ ಸೂಲಗಿತ್ತಿ ವೃತ್ತಿಯಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಜನಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರು ಬೆಳುವಾಯಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಅತ್ಯಧಿಕ ಮತಗಳಿಂದ ಗೆದ್ದು ಬಂದು ಜನಸೇವೆ ಮಾಡಿ ಹೆಸರುಗಳಿಸಿದ್ದಾರೆ. ಇವರ ಕೆಲಸವನ್ನು ಗುರುತಿಸಿದ ಬಹಳಷ್ಟು ಸಂಘ- ಸಂಸ್ಥೆಗಳು ಅವರನ್ನು ಕರೆದು ಸನ್ಮಾನಿಸಿದೆ. ಈಗ ಮುತ್ತಜ್ಜಿ ತನ್ನ ವೃತ್ತಿ ಜೀವನದಲ್ಲಿ ಮಕ್ಕಳ ಮೊದಲ ಅಳು ಕೇಳಿದ ಹಾಗೂ ಮೊದಲು ಕೈಯಲ್ಲಿ ಹಿಡಿದ ಖುಷಿಯನ್ನು ಮೆಲುಕು ಹಾಕುತ್ತ ತನ್ನ ಮನೆಯಲ್ಲಿ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.

Tuesday, March 11, 2014

ಡಿಪ್ಸ್ ಜಾಗಕ್ಕೆ ಪಿಂಕಿ ಮಧುರ್ ಕೈಯಲ್ಲಿ ಮೇಡಂ ಜೀ !

* ಸ್ಟೀವನ್ ರೇಗೊ, ದಾರಂದಕುಕ್ಕು ಬಾಲಿವುಡ್‌ನ ರಿಯಾಲಿಟಿ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಮಧುರ್ ಭಂಡಾರ್‌ಕರ್ ಮತ್ತೆ ಎದ್ದು ನಿಂತಿದ್ದಾರೆ. ವಾಸ್ತವ ಕತೆಗಳನ್ನು ತನ್ನ ಚಿತ್ರದಲ್ಲಿ ತುರುಕಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದ ಮಧುರ್ ಈ ಬಾರಿ ತನ್ನ ಕ್ಯಾಂಪ್ ನೊಳಗೆ ಫ್ಯಾಶನ್ ಹುಡುಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಬಿಟ್ಟಿದ್ದಾರೆ.
ಅಂದಹಾಗೆ ಈ ಹಿಂದೆ ರೂಪದರ್ಶಿಯೊಬ್ಬರ ವಾಸ್ತವ ಕತೆಯನ್ನು ಹೆಕ್ಕಿಕೊಂಡು ಚಿತ್ರ ಮಾಡುತ್ತಾರೆ ಎನ್ನುವ ಗುಸುಗುಸು ಇತ್ತು. ಅದಕ್ಕಾಗಿ ಚಿತ್ರಕ್ಕೆ ‘ಕ್ಯಾಲೆಂಡರ್ ಗಲ್ ’ ಎನ್ನುವ ಹೆಸರನ್ನು ಕೂಡ ನೋಂದಣಿ ಮಾಡಿಕೊಂಡಿದ್ದರು. ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಿಕೊಂಡು ಚಿತ್ರದ ಕತೆಯಲ್ಲಿಯೇ ಬ್ಯುಸಿಯಾಗಿ ಉಳಿದು ಹೋಗಿದ್ದರು. ಆದರೆ ಡಿಪ್ಸ್ ಬ್ಯುಸಿ ಶೆಡ್ಯುಲ್‌ಗಳಿಂದ ಕುಗ್ಗಿ ಹೋಗಿರುವ ಮಧುರ್ ಹೊಸ ಕತೆಯೊಂದನ್ನು ಹುಟ್ಟುಹಾಕಿ ಡಿಪ್ಸ್ ಬದಲಿಗೆ ಪಿಂಕಿಯನ್ನು ತನ್ನ ಹೊಸ ಚಿತ್ರದ ನಾಯಕಿಯಾಗಿ ಬುಕ್ ಮಾಡಿದ್ದಾರೆ. ಚಿತ್ರದ ಹೆಸರು ‘ಮೇಡಂಜೀ’ ನಾಯಕಿ ಕರೀನಾ ಕಪೂರ್ ಅವರನ್ನು ಇಟ್ಟುಕೊಂಡು ಬಂದ ‘ಹೀರೋಯಿನ್’ ಚಿತ್ರ ಬಾಕ್ಸಾಫೀಸ್ ನಲ್ಲಿ ಹೆಚ್ಚಿನ ಗಳಿಕೆ ಕೂಡಿ ಹಾಕಲು ವಿಫಲವಾಗಿತ್ತು. ಈ ಬಳಿಕ ಡಿಪ್ಸ್ ಹಾಕಿಕೊಂಡು ‘ಕ್ಯಾಲೆಂಡರ್ ಗಲ್ ’ ಚಿತ್ರದ ಮೂಲಕ ದೊಡ್ಡ ಎಂಟ್ರಿ ಕೊಡುತ್ತೇನೆ ಎಂದು ಮಧುರ್ ಹೇಳಿಕೊಂಡಿದ್ದರು.
ಆದರೆ ‘ಮೇಡಂಜೀ’ ಮೂಲಕ ಬಾಲಿವುಡ್ ಅಂಗಳದಲ್ಲಿ ಲಕ್ ನೋಡಲು ಮತ್ತೆ ಬರುತ್ತಿದ್ದಾರೆ. ನಿರ್ದೇಶಕ ಮಧುರ್ ಭಂಡಾರ್ ಕರ್. ಈಗಾಗಲೇ ‘ಟ್ರಾಫಿಕ್ ಸಿಗ್ನಲ್’, ‘ಪೇಜ್-೩’ ಹಾಗೂ ‘ಚಾಂದಿನಿ ಬಾರ್’ ಮಹಿಳಾ ಪ್ರದಾನ ಸಿನಿಮಾಗಳನ್ನು ಕೊಟ್ಟ ಮಧುರ್ ಹೊಸ ಪ್ರಯತ್ನ ಬಾಲಿವುಡ್ ದುನಿಯಾ ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ಎನ್ನೋದು ಕಾದು ನೋಡಬೇಕು. ಪಿಂಕಿಗೊಂದು ಬೆಸ್ಟ್ ಅವಕಾಶ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಅಂಗಳದಲ್ಲಿ ‘ಗುಂಡೇ’ ಚಿತ್ರದ ಮೂಲಕ ಹೊಸ ಭರವಸೆಯನ್ನು ಹುಟ್ಟುಹಾಕಿರುವ ಜತೆಯಲ್ಲಿ ಕ್ರೀಡಾಪಟು ಮೇರಿ ಕೋಮ್ ಅವರ ಮೇಲೊಂದು ಚಿತ್ರದಲ್ಲಿ ಪಿಂಕಿ ನಟಿಸುತ್ತಿದ್ದಾರೆ. ಜೋಯಾ ಅಕ್ತರ್ ನಿರ್ದೇಶನದ ‘ದಿಲ್ ದಡಕನ್ ದೋ’ ದಲ್ಲೂ ನಟಿಸುತ್ತಿದ್ದಾರೆ. ಮೇಡಂಜೀ ಮುಖ್ಯವಾಗಿ ಇದು ರಾಜಕೀಯ ನಾಯಕಿಯೊಬ್ಬರ ಕತೆಯನ್ನು ಹೊಂದಿದೆ ಎನ್ನುವುದು ಚಿತ್ರ ತಂಡದ ಗುಪ್ತ ಮಾಹಿತಿ. ಐಟಂ ಹುಡುಗಿಯೊಬ್ಬಳು ರಾಜಕಾರಣಿಯಾದ ಕತೆಯನ್ನು ಇಟ್ಟುಕೊಂಡು ಚಿತ್ರ ಬರುತ್ತಿದೆ ಎನ್ನಲಾಗಿದೆ. ಮುಖ್ಯವಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆತ್ಮಕತೆಯನ್ನು ಚಿತ್ರದಲ್ಲಿ ತುರುಕಿಸಲಾಗುತ್ತದೆ ಎನ್ನುವುದು ಮಧುರ್ ಅವರ ಆಪ್ತ ಮೂಲಗಳು ಹೇಳುವ ಮಾತು. ಮಧುರ್ ಅವರ ಫ್ಯಾಶನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಪಿಂಕಿಗೆ ‘ಮೇಡಂಜೀ’ ಚಿತ್ರ ಕೂಡ ದೊಡ್ಡ ಸಕ್ಸಸ್ ತಂದು ಕೊಡುತ್ತದೆಯೇ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿದೆ. ಈ ಹಿಂದೆ ಫ್ಯಾಶನ್ ಚಿತ್ರದ ನಟನೆಗಾಗಿ ಪಿಂಕಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ದಕ್ಕಿತ್ತು. ಎಲ್ಲವೂ ಚಿತ್ರ ಬಂದ ನಂತರವಷ್ಟೇ ಹೇಳಬೇಕು. ...

ಕೊಂಕಣಿ ಚಿತ್ರದಲ್ಲಿ ಡಿಪ್ಸ್ !

* ಸ್ಟೀವನ್ ರೇಗೊ, ದಾರಂದಕುಕ್ಕು ಎಲ್ಲಿಯ ಕೊಂಕಣಿ ಎಲ್ಲಿಯ ಬಾಲಿವುಡ್ ಟೋಟಲಿ ಎರಡಕ್ಕೂ ಸಂಬಂಧ ಕಟ್ಟಿ ಹೇಳುವುದು ಸುಲಭದ ಮಾತಲ್ಲ. ದೈತ್ಯವಾಗಿ ಬೆಳೆದು ನಿಂತಿರುವ ಬಾಲಿವುಡ್ ಒಂದು ಕಡೆಯಲ್ಲಿ ನಿಂತು ಕೇಕೆ ಹಾಕುತ್ತಿದ್ದಾರೆ. ಮತ್ತೊಂದೆಡೆ ಯಾರಿಗೂ ಗೊತ್ತಿಲ್ಲದೇ ಸಿನಿಮಾಗಳನ್ನು ಮಾಡಿ ಸುಮ್ಮನೆ ಕೂತು ಬಿಡುವ ಕೊಂಕಣಿ ಸಿನಿಮಾ ಇಂಡಸ್ಟ್ರಿ. ಟೋಟಲಿ ಎರಡಕ್ಕೂ ಯಾವುದೇ ಲಿಂಕ್ ಇಲ್ಲವೇ ಇಲ್ಲ. ಆದರೆ ಕೊಂಕಣಿ ಸಿನಿಮಾದಲ್ಲಿ ಬಾಲಿವುಡ್ ಮಂದಿಯೇ ಟೆಂಟ್ ಹಾಕಿ ಕೂರಲು ಕಾರಣ ಏನೂ ಎನ್ನೋದು ಮಾತ್ರ ನಿಜಕ್ಕೂ ಅನ್ಸರ್ ಇಲ್ಲದೇ ಬಿದ್ದುಕೊಂಡಿರುವ ಪ್ರಶ್ನೆ.
ಬಾಲಿವುಡ್ ಪಡಸಾಲೆಯಲ್ಲಿ ಸಧ್ಯಕ್ಕಂತೂ ಭರ್ಜರಿಯಾಗಿ ಚಿತ್ರಗಳ ಮೂಲಕ ಓಡುತ್ತಿರುವ ದೀಪಿಕಾ ಪಡುಕೋಣೆ ಈಗ ಕೊಂಕಣಿ ಚಿತ್ರವೊಂದರಲ್ಲಿ ಲೀಡ್ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆಯ ಮಾತೃಭಾಷೆ ಕೂಡ ಕೊಂಕಣಿಯಾಗಿರೋದು ಕೂಡ ಈ ಚಿತ್ರಕ್ಕೆ ವರದಾನವಾಗಿದೆ. ಅದಕ್ಕೂ ಮುಖ್ಯವಾಗಿ ಬಾಲಿವುಡ್‌ನಲ್ಲಿ ಬ್ಯುಸಿ ನಟಿ ಡಿಪ್ಸ್ ಯಾಕೆ ಕೊಂಕಣಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಬಾಲಿವುಡ್ ನಟ ಸೈಫ್ ಆಲಿಖಾನ್ ಎನ್ನುವುದು ಡಿಪ್ಸ್ ಆಪ್ತರಿಂದ ಹೊರಬಂದ ಮಾತು. ಡಿಪ್ಸ್ ಹಾಗೂ ಸೈಫ್ ಜತೆಯಾಗಿ ಕಾಣಿಸಿಕೊಂಡ ಎಲ್ಲ ಚಿತ್ರದಲ್ಲೂ ಹೋಮಿ ಅದಾಜಾನಿಯಾ ಎನ್ನುವ ಸ್ಕೂಬಾ ಡೈವಿಂಗ್ ಇನ್‌ಸ್ಟ್ರಕ್ಟರ್ ಹೆಸರು ಕೇಳಿಸಿಕೊಳ್ಳುತ್ತದೆ. ಈ ಹಿಂದೆ ಇದೇ ಹೋಮಿಯ ಕಾಕ್‌ಟೇಲ್ ಚಿತ್ರದಲ್ಲಿ ಡಿಪ್ಸ್ ಹಾಗೂ ಸೈಫ್ ಜತೆಯಾಗಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುಖ್ಯವಾಗಿ ಸೈಫ್ ಆಲಿಖಾನ್ ಅವರ ಬಹುತೇಕ ಸಿನಿಮಾಗಳ ಹಿಂದೆ ದುಡಿಯುತ್ತಿರುವ ಹುಡುಗ ಕೂಡ ಇದೇ ಹೋಮಿ. ಈ ಕಾರಣದಿಂದ ಹೋಮಿ ಇಂಗ್ಲೀಷ್ ಹಾಗೂ ಕೊಂಕಣಿ ಎರಡು ಭಾಷೆಯಲ್ಲಿ ಮಾಡುತ್ತಿರುವ ಚಿತ್ರ ‘ಫೈಡಿಂಗ್ ಫನ್ನಿ ಫೆರ್ನಾಂಡೀಸ್’ನ ನಿರ್ಮಾಣ ಜವಾಬ್ದಾರಿಯನ್ನು ಬಾಲಿವುಡ್ ನಟ ಸೈಫ್ ವಹಿಸಿಕೊಂಡಿದ್ದಾರೆ. ಈಗಾಗಲೇ ಗೋವಾದಲ್ಲಿ ಚಿತ್ರೀಕರಣ ಆರಂಭವಾಗಿದೆ. ಗೋವಾದ ಕತೆಯನ್ನು ಇಟ್ಟುಕೊಂಡು ಹೋಮಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಮುಖ್ಯವಾಗಿ ಇದು ಗೋವಾ ಕೊಂಕಣಿಯ ಭಾಷೆಯಲ್ಲಿ ಇರಲಿದೆ ಎನ್ನುವುದು ಹೋಮಿ ಮಾತು. ಡಿಪ್ಸ್ ಜತೆಯಲ್ಲಿ ಅರ್ಜುನ್ ಕಪೂರ್, ನಾಸಿರುದ್ದೀನ್ ಶಾ, ಡಿಂಪಲ್ ಕಪಾಡಿಯಾ, ಪಂಕಜ್ ಕಪೂರ್ ಮೊದಲಾದ ಬಾಲಿವುಡ್ ದಿಗ್ಗಜರ ದಂಡೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಖ್ಯವಾಗಿ ಈ ವರ್ಷದ ಜುಲೈ ತಿಂಗಳ ಕೊನೆಯಲ್ಲಿ ಚಿತ್ರವನ್ನು ತೆರೆಗೆ ಬಿಡುವ ಕುರಿತು ಮಾತುಕತೆ ನಡೆಯುತ್ತಿದೆ. ಗೋವಾದ ಪ್ರಯಾಣದಲ್ಲಿ ಐದು ಪಾತ್ರಗಳ ಜತೆಗೆ ಈ ಚಿತ್ರ ಸಾಗುತ್ತದೆ ಎನ್ನುವ ಮಾಹಿತಿಯನ್ನು ಚಿತ್ರದ ನಿರ್ದೇಶಕ ಹೋಮಿ ಬಿಚ್ಚಿಟ್ಟಿದ್ದಾರೆ. ಗೋವಾದ ಖ್ಯಾತ ನಟ ಕೇವಿನ್ ಡಿಮೆಲ್ಲೋ ಕೂಡ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾಹಿತಿಯನ್ನು ಚಿತ್ರ ತಂಡ ಹೇಳಿಕೊಂಡಿದೆ. ಟೋಟಲಿ ಇಂಗ್ಲೀಷ್ ಹಾಗೂ ಕೊಂಕಣಿ ಎರಡು ಭಾಷೆಯಲ್ಲೂ ಏಕಕಾಲದಲ್ಲಿ ಬಿಡುಗಡೆ ಕಾಣುತ್ತಿರುವ ಚಿತ್ರ ನಿರೀಕ್ಷೆಯ ಪೊಟ್ಟಣವನ್ನು ಪ್ರೇಕ್ಷಕರ ಮುಂದೆ ಇಟ್ಟಿದೆ ಎನ್ನುವ ಮಾತು ಮಾತ್ರ ದಿಟವಾಗುತ್ತಿದೆ.

Wednesday, March 5, 2014

ಕನ್ನಡಕ್ಕೆ ಬಂದ್ರು ಬಾಲಿವುಡ್ ದೊಡ್ಡಣ್ಣ ಕಬೀರ್ ಗುರು ಬಿಗ್ ಬಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸ್ಯಾಂಡಲ್‌ವುಡ್ ಸಖತ್ ಖುಷಿ ಮೂಡ್‌ನಲ್ಲಿದೆ. ಯಾಕ್ ಅಂತೀರಾ..ಬಾಲಿವುಡ್ ಅಂಗಳದ ದಿಗ್ಗಜರೊಬ್ಬರು ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸೂಚನೆಯೊಂದು ಗಾಂಧಿನಗರದ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ. ಹೌದು. ಇದು ಬಾಲಿವುಡ್ ಪಡಸಾಲೆಯ ಬಿಗ್ ಬಿಯ ಮಾತು. ಅಂದಹಾಗೆ ಬಾಲಿವುಡ್‌ನ ಬಿಗ್ ಬಿಗೆ ಕನ್ನಡ ಸಿನಿಮಾ ರಂಗ ಹೊಸತೇನೂ ಅಲ್ಲ.. ಈ ಹಿಂದೆ ಕನ್ನಡದ ಮೇಷ್ಟ್ರು ಎಂದೇ ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಸಿನಿಮಾ ಅಮೃತಧಾರೆಯಲ್ಲಿ ಬಿಗ್ ಬಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲೂ ನಟಿಸಲು ತಾನು ರೆಡಿ ಎನ್ನುವ ಮಾತನ್ನು ಗಟ್ಟಿಯಾಗಿ ಹೇಳಿದ್ದರು.
ಈ ಬಳಿಕ ಬಿಗ್ ಬಿ ಬಾಲಿವುಡ್ ಸಿನಿಮಾಗಳಲ್ಲಿಯೇ ಪೂರ್ತಿ ಮುಳುಗಿ ಹೋಗಿದ್ದರ ಪರಿಣಾಮ ಕನ್ನಡದ ಬಹುತೇಕ ಸಿನಿಮಾ ನಿರ್ದೇಶಕರ ಕೈಗೆ ಬಿಗ್ ಬಿ ಸಿಗಲೇ ಇಲ್ಲ. ಆದರೂ ಕನ್ನಡದ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಬಿಗ್ ಬಿ ಹಿಂದೆ ಬೀಳುವ ಕೆಲಸವನ್ನು ಮಾತ್ರ ಬಿಟ್ಟಿರಲಿಲ್ಲ. ಈಗ ಇಂತಹ ಒಂದು ಅವಕಾಶ ಕನ್ನಡದ ಸಿನಿಮಾ ನಿರ್ದೇಶಕ ನರೇಂದ್ರ ಬಾಬು ಅವರ ಕೈಗೆ ಸಿಕ್ಕಿದೆ. ಅವರು ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರ ‘ಕಬೀರ’ದಲ್ಲಿ ಬಿಗ್ ಬಿ ಕಾಣಿಸಿಕೊಳ್ಳುವ ಮಾತುಗಳು ಕೇಳಿಸಿಕೊಳ್ಳುತ್ತಿದೆ. ಅಂದಹಾಗೆ ಇದು ಸಂತ. ಕಬೀರ್‌ದಾಸ್ ಮೇಲೆ ಮೂಡಿಬರುತ್ತಿರುವ ಸಿನಿಮಾ ಎನ್ನುವ ಮಾತಿದೆ. ಕಬೀರ್ ಪಾತ್ರದಲ್ಲಿ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಂಡರೆ ಕಬೀರ್‌ರ ಗುರು ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಿ ಜತೆ ಶಿವಣ್ಣ ಈ ಹಿಂದೆ ನಟಿಸಿದ್ದರು: ಶಿವರಾಜ್ ಕುಮಾರ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಹಿಂದೆ ಕೂಡ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ದೇಶದ ಖ್ಯಾತ ಜುವೆಲ್ಲರಿ ಕಂಪನಿಯ ಜಾಹೀರಾತಿನಲ್ಲಿ ಶಿವಣ್ಣ ಅವರ ತಂದೆಯ ಪಾತ್ರದಲ್ಲಿ ಬಿಗ್ ಬಿ ಕಾಣಿಸಿಕೊಂಡಿದ್ದರು. ಇಲ್ಲಿ ತಂದೆ- ಮಗನ ಸೂಕ್ಷ್ಮ ಸಂಬಂಧಗಳ ಅನಾವರಣವನ್ನು ಚಿತ್ರಿಸಿಕೊಳ್ಳುವ ಮೂಲಕ ಜಾಹೀರಾತು ಸಖತ್ ವರ್ಕ್ ಔಟ್ ಆಗಿತ್ತು. ಈಗಲೂ ಈ ಜಾಹೀರಾತು ವಾಹಿನಿಗಳಲ್ಲಿ ಓಡಾಡಿಕೊಂಡಿದೆ. ಕನ್ನಡದ ವರನಟ ರಾಜ್ ಕುಮಾರ್ ಕುಟುಂಬದ ಜತೆಯಲ್ಲಿ ಬಿಗ್ ಬಿ ಉತ್ತಮ ಬಾಂಧವ್ಯ ಹೊಂದಿದ್ದರು. ಕನ್ನಡದಲ್ಲಿ ಅಮೃತಧಾರೆಯ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್ ಸಂತ. ಕಬೀರ್ ಅವರ ಜೀವನ ಕತೆಯನ್ನು ಆಧರಿಸಿಕೊಂಡು ಬರುತ್ತಿರುವ ಐತಿಹಾಸಿಕ ಚಿತ್ರವಾದ ‘ಮಹಾತ್ಮ ಕಬೀರ್’ನಲ್ಲಿ ಗುರುವಿನ ಪಾತ್ರದಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮಾತ್ರ ಪ್ರೇಕ್ಷಕರು ತೆರೆಯ ಮೇಲೆ ನೋಡಿ ತಿಳಿಯಬೇಕು. ಟೋಟಲಿ ಪ್ರಾದೇಶಿಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿರುವ ಇಂತಹ ದಿಗ್ಗಜ ನಟರಿಂದ ಸಿನಿಮಾ ರಂಗ ಮತ್ತಷ್ಟೂ ಪ್ರಜ್ವಲಿಸುತ್ತದೆ ಎನ್ನುವ ಮಾತು ಮಾತ್ರ ದಿಟವಗುತ್ತಿದೆ.

Tuesday, March 4, 2014

ಡಿಪ್ಸ್ ಕೋಲಾಕ್ಕೆ ೬ ಕೋಟಿ !

* ಸ್ಟೀವನ್ ರೇಗೊ, ದಾರಂದಕುಕ್ಕು ಯೆಸ್. ದೀಪಿಕಾ ಪಡುಕೋಣೆ ಬಾಲಿವುಡ್ ಅಂಗಳದಲ್ಲಿ ಗೆಲ್ಲುವ ಕುದುರೆ ಎನ್ನುವ ವಿಚಾರದಲ್ಲಿ ಈಗ ಯಾವುದೇ ಸಂದೇಹ ಉಳಿದಿಲ್ಲ. ಯಾಕ್ ಅಂತೀರಾ.. ಕಳೆದ ವರ್ಷದ ಬಹು ದೊಡ್ಡ ಹಿಟ್ ಚಿತ್ರಗಳ ಸಕ್ಸಸ್ ರೇಟ್ ಹಿಂದೆ ದೀಪಿಕಾ ಪಡುಕೋಣೆಯ ಕರಾಮತ್ತು ನಡೆದಿದೆ. ಡಿಪ್ಸ್ ಕಾಣಿಸಿಕೊಂಡ ಎಲ್ಲ ಚಿತ್ರಗಳು ಬಾಕ್ಸಾಫೀಸ್‌ನ ಗಲ್ಲಾ ಪೆಟ್ಟಿಗೆಯಲ್ಲಿ ಹೆಸರು ಉಳಿಸಿಕೊಂಡಿತ್ತು.
ಅದಕ್ಕೂ ಮಿಗಿಲಾಗಿ ಈ ಚಿತ್ರಗಳ ಯಶಸ್ವಿನಿಂದಲೂ ಡಿಪ್ಸ್ ಈ ವರ್ಷದ ಬಹುತೇಕ ಚಿತ್ರಗಳಿಗೆ ಬುಕ್ ಆಗಿರುವ ವಿಷ್ಯಾ ಹೊರ ಬರುತ್ತಿದ್ದಂತೆ ಜಾಹೀರಾತು ಕಂಪನಿಗಳು ಡಿಪ್ಸ್ ಮೇಲೆ ಹಣ ಹೂಡಲು ಮುಂದೆ ಬಂದಿದೆ ಎನ್ನುವ ಸುದ್ದಿ ಹೊರ ಬಂದಿದೆ. ಕಳೆದ ವರ್ಷದ ಹಿಟ್ ಚಿತ್ರಗಳಾದ ‘ಯೇ ಜವಾನಿ ಯೇ ದಿವಾನಿ’ ರೇಸ್ -೨, ‘ಚೆನ್ನೈ ಎಕ್ಸ್‌ಪ್ರೆಸ್’ ಹಾಗೂ ‘ಗೋಲಿಯೋಂಕೀ ರಾಸ್ ಲೀಲಾ ರಾಮ್ ಲೀಲಾ’ ಡಿಪ್ಸ್ ಹಿಟ್ ಲೀಸ್ಟ್‌ನಲ್ಲಿ ಸೇರಿಕೊಂಡಿದೆ. ಈ ಕಾರಣದಿಂದ ಡಿಪ್ಸ್ ಕಳೆದ ವರ್ಷದ ೧೦೦ ಕೋಟಿ ಗಳಿಕೆಯ ಚಿತ್ರಗಳಿಂದ ಈ ವರ್ಷನೂ ತನ್ನ ಛಾಪು ಬಾಲಿವುಡ್ ಅಂಗಳದಲ್ಲಿ ಗಟ್ಟಿ ಮಾಡಿಕೊಂಡಿದ್ದಾರೆ. ಖ್ಯಾತ ಕೋಲಾ ಕಂಪನಿ ತನ್ನ ಜಾಹೀರಾತುಗಳಿಗಾಗಿ ಡಿಪ್ಸ್ ಬ್ರಾಂಡ್ ಅಂಬಾಸೀಡರ್ ಆಗಿ ಬುಕ್ ಮಾಡಿದೆ. ಅಂದಹಾಗೆ ಈ ಜಾಹೀರಾತುಗಳಿಗಾಗಿ ಡಿಪ್ಸ್ ಪಡೆಯುತ್ತಿರುವ ಸಂಭಾವನೆ ಬರೀ ೬ ಕೋಟಿ ರೂಪಾಯಿಗಳು ಎನ್ನುವುದು ಸ್ವಾರಸ್ಯಕರವಾದ ವಿಷ್ಯಾ. ಈಗಾಗಲೇ ಡಿಪ್ಸ್ ಸಿನಿಮಾಗಳ ಮೂಲಕ ಹಣ ಬಾಚುತ್ತಿರುವಂತೆ ಮತ್ತೊಂದು ಕಡೆಯಲ್ಲಿ ಡಿಪ್ಸ್ ಜಾಹೀರಾತಿನಿಂದಲೂ ಹಣ ಬಾಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಕಾರ್ಪೊರೇಟ್ ಪ್ರಾಡಕ್ಟ್‌ಗಳಾದ ಲಕ್ಸ್, ನೆಸ್‌ಕೆಫೇಗಳಲ್ಲಿ ಡಿಪ್ಸ್ ಕಾಣಿಸಿಕೊಂಡಿದ್ದರು. ಈಗ ಕೋಲಾ ಕಂಪನಿಗಳ ನಾನಾ ವೈರೆಟಿ ಬ್ರಾಂಡ್‌ಗಳಲ್ಲೂ ಡಿಪ್ಸ್ ರಾರಾಜಿಸಲಿದ್ದಾರೆ. ಕೋಲಾದ ಒಂದು ವರ್ಷದ ಅವಧಿಯಲ್ಲಿ ಸಿದ್ಧವಾಗುವ ಎಲ್ಲ ಕೋಲಾ ಬ್ರಾಂಡ್‌ಗಳಲ್ಲಿ ಡಿಪ್ಸ್ ಕಾಣಿಸಿಕೊಳ್ಳಬೇಕು ಎನ್ನುವುದು ಕಂಪನಿಯ ಷರತ್ತುಗಳಲ್ಲಿ ಒಂದಾಗಿದೆ. ಅಂದಹಾಗೆ ಕಳೆದ ಎಂಟು ವರ್ಷಗಳಿಂದ ಕೋಲಾ ಕಂಪನಿಗೆ ಐಶ್ವರ್ಯ ರೈ ನಂತರ ಯಾರು ಕೂಡ ಬ್ರಾಂಡ್ ಅಂಬಾಸೀಡರ್‌ಗಳಾಗಿ ಇರಲಿಲ್ಲ. ಈಗ ಕೋಲಾ ಕಂಪನಿ ಡಿಪ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಐಶ್‌ಗೂ ಟಾಂಗ್ ಕೊಟ್ಟಿದ್ದಾರೆ. ಟೋಟಲಿ ಡಿಪ್ಸ್ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಜತೆಗೆ ಜಾಹೀರಾತು ಕಂಪನಿಗಳಿಂದಲೂ ಬಾಚುತ್ತಿರುವ ಶುಭ ಘಳಿಗೆ ಎಷ್ಟು ದಿನಗಳವರೆಗೆ ಮುಂದುವರಿಯುತ್ತದೆ ಎನ್ನೋದು ಒಂದು ಯಕ್ಷ ಪ್ರಶ್ನೆಯಾದರೂ. ಸಧ್ಯಕ್ಕಂತೂ ಬಾಲಿವುಡ್ ಪಡಸಾಲೆಯಲ್ಲಿ ಡಿಪ್ಸ್ ಹಿಂದೆ ಹಾಕುವ ಧೈರ್ಯವಂತ ನಟಿಯರು ಸಿಗುತ್ತಿಲ್ಲ ಎನ್ನುವ ಕೊರಗು ಕೂಡ ಇದೆ. ಒಂದು ವರ್ಷದ ಮಟ್ಟಿಗೆ ಡಿಪ್ಸ್ ಬಾಲಿವುಡ್ ವಿದ್ ಜಾಹೀರಾತುಗಳಲ್ಲಿಯೇ ಬ್ಯುಸಿಯಾಗಿರುತ್ತಾರೆ ಎನ್ನುವ ಮಾತು ಮಾತ್ರ ದಿಟವಾಗಿದೆ.

ಸಿನಿಮಾದಲ್ಲಿ ಪುರುಷ ಮಣಿಗಳು

* ಸ್ಟೀವನ್ ರೇಗೊ, ದಾರಂದಕುಕ್ಕು ಇದು ಇಂದಿಗೂ ಅರ್ಥವಾಗದೇ ಉಳಿದ ಪ್ರಶ್ನೆ. ಆದರೆ ಸಿನಿಮಾ ಫೀಲ್ಡ್‌ವಂತೂ ಇದಕ್ಕೆ ಉತ್ತರ ದಕ್ಕಿಸಿಕೊಂಡಿದೆ. ಆದರೆ ಪ್ರೇಕ್ಷಕ ಮಹಾಪ್ರಭುವಂತೂ ಇಂದಿಗೂ ಗೊಂದಲದ ಗೂಡಿನಲ್ಲಿಯೇ ತೇಲುತ್ತಿದ್ದಾನೆ. ಹೌದು. ಇದು ಸಿನಿಮಾ ನಟರು ತಮ್ಮ ಸಿನಿಮಾಗಳಲ್ಲಿ ನಟಿಯರಂತೆ ವೇಷ ಹಾಕಿಕೊಂಡು ಪಾತ್ರ ಮಾಡುವ ಕ್ರೇಜ್ ಕುರಿತಾದ ಮಾತು. ಬಾಲಿವುಡ್ ಇರಲಿ ಕಾಲಿವುಡ್ ಇರಲಿ ಟಾಲಿವುಡ್, ಸ್ಯಾಂಡಲ್‌ವುಡ್ ಎಲ್ಲದರಲ್ಲೂ ನಟರು ನಟಿಯರಂತೆ ವೇಷ ಹಾಕಿಕೊಂಡು ಪಾತ್ರ ಮಾಡುವ ಖಯಾಲಿಯಂತೂ ಮಾಮೂಲಿಯಾಗಿದೆ.
ಈಗ ಸುದ್ದಿಯಾಗಿರೋದು ಮಲಯಾಳಂ ಸ್ಟಾರ್ ನಟ ಪ್ರಥ್ವಿರಾಜ್ . ಅಂದಹಾಗೆ ಪ್ರಥ್ವಿರಾಜ್ ಈ ಹಿಂದಿನ ಗೆಟಪ್‌ಗಿಂತ ಭಿನ್ನ ಹುಡುಗಿ ಯಾಗಿ ಬಣ್ಣ ಹಚ್ಚಿಕೊಂಡಿದ್ದಾರೆ. ತಮಿಳಿನಲ್ಲಿ ತೆರೆಗೆ ಬರಲಿರುವ ಬಿಗ್ ಬಜೆಟ್ ಚಿತ್ರ ‘ಕಾವಿಯಾ ತಲೈವಿವಾನ್’ ನ ಪ್ರಥ್ವಿರಾಜ್ ಟ್ರೈಲರ್ ಈಗಾಗಲೇ ಯೂ ಟ್ಯೂಬ್ ಸಾಮಾಜಿಕ ತಾಣದಲ್ಲಿ ಸಖತ್ ವರ್ಕ್ ಔಟ್ ಆಗಿದೆ. ಅದರಲ್ಲೂ ನಟ ಸಿದ್ಧಾರ್ಥ್ ಕೂಡ ರಾಧೆಯಾಗಿ ಸ್ತ್ರೀ ವೇಷಕ್ಕೆ ಜಾರಿದ್ದಾರೆ. ಇತಿಹಾಸದ ಕತೆಯೊಂದನ್ನು ಆಧರಿಸಿಕೊಂಡು ಬರಲಿರುವ ಈ ಚಿತ್ರವನ್ನು ರಂಗಭೂಮಿಯ ಖ್ಯಾತ ನಿರ್ದೇಶಕ ವಸಂತಬಾಲನ್ ನಿರ್ದೇಶನ ಮಾಡುತ್ತಿದ್ದಾರೆ. ಮಲಯಾಳಂ ನಟಿ ವೇದಿಕಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೧೯೨೦ರಲ್ಲಿ ಮಧುರೈಯ ಖ್ಯಾತ ರಂಗಭೂಮಿ ಕಲಾವಿದ, ಹಾಡುಗಾರ, ನಟ ಕೆ.ಬಿ. ಸುಂದರಬಾಲಾ ಹಾಗೂ ಎಸ್.ಜಿ.ಕಿಟ್ಟಪ್ಪ ಅವರ ಆತ್ಮಕತೆಯನ್ನು ಈ ಚಿತ್ರದಲ್ಲಿ ತರಲಾಗಿದೆ ಎನ್ನೋದು ಚಿತ್ರ ತಂಡದ ಮಾತು. ಟೋಟಲಿ ಸಿನಿಮಾ ಈ ವರ್ಷದ ಅಂತ್ಯದೊಳಗೆ ತೆರೆಗೆ ಅಪ್ಪಳಿಸುವ ಸಾಧ್ಯತೆಯನ್ನು ಚಿತ್ರ ತಂಡ ಹೇಳಿಕೊಂಡು ತಿರುಗಾಡುತ್ತಿದೆ. ನಟರು ನಟಿಯಾರಾಗುವ ಕತೆ ಇಲ್ಲಿದೆ: ಅಂದಹಾಗೆ ನಟರು ಸಿನಿಮಾದಲ್ಲಿ ನಟಿಯರಂತೆ ವೇಷ ಹಾಕಿಕೊಂಡು ಪಾತ್ರ ಮಾಡುವ ಪದ್ಧತಿ ಬಹಳ ಹಳೆಯ ಕಾಲದಿಂದಲೂ ಚಾಲ್ತಿಯಲ್ಲಿತ್ತು. ಮುಖ್ಯವಾಗಿ ಬಾಲಿವುಡ್‌ನಲ್ಲಿ ಮಿಥುನ್ ಚಕ್ರವರ್ತಿ, ಗೋವಿಂದ, ಸಲ್ಮಾನ್ ಖಾನ್, ಸಂಜಯ್ ದತ್ ಸೇರಿದಂತೆ ಬಹುತೇಕ ನಟರು ನಟಿಯರಂತೆ ವೇಷ ಹಾಕಿಕೊಂಡು ಪಾತ್ರ ಮಾಡಿಕೊಂಡು ಸಿನಿಮಾವನ್ನು ಗೆಲ್ಲಿಸಿಬಿಟ್ಟಿದ್ದಾರೆ.
ಅದರಲ್ಲೂ ಮುಖ್ಯವಾಗಿ ಕಮಲ್ ಹಾಸನ್ ‘ಚಾಚಿ ೪೨೦’ಚಿತ್ರದಲ್ಲಿ ಪೂರ್ತಿ ಪ್ರಮಾಣದಲ್ಲಿ ಸ್ತ್ರೀ ವೇಷ ಧಾರಿಯಾಗಿ ಮಿಂಚಿ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿಕೊಂಡಿದ್ದಾರೆ. ಕಾಲಿವುಡ್‌ನಲ್ಲೂ ನಟರಾದ ವಿಜಯ್, ವಿಕ್ರಂ, ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡ ಸ್ತ್ರೀ ಗೆಟಪ್‌ನಲ್ಲಿ ಕಾಣಿಸಿಕೊಂಡು ತಮ್ಮ ಪ್ರೇಕ್ಷಕ ಸಮೂಹಕ್ಕೆ ದಂಗು ಮೂಡಿಸಿದ್ದರು. ಅದೇ ರೀತಿಯಲ್ಲಿ ಸ್ಯಾಂಡಲ್‌ವುಡ್ ಚಿತ್ರನಗರಿಯಲ್ಲಿ ರಾಘವೇಂದ್ರ ರಾಜ್‌ಕುಮಾರ್, ರಾಮ್ ಕುಮಾರ್ ಶರಣ್, ಜಗ್ಗೇಶ್, ವಿಜಯ ರಾಘವೇಂದ್ರ ನಾನಾ ನಟರು ಸ್ತ್ರೀ ವೇಷಧಾರಿಗಳಾಗಿ ಮಿಂಚಿದ್ದಾರೆ. ನಟರು ನಟಿಯಾರಾಗಿ ಬಣ್ಣ ಬದಲಾಯಿಸುವ ಕಾನ್ಸೆಪ್ಟ್‌ಗಳಿಂದ ಕೆಲವೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸಖತ್ ಕಲೆಕ್ಷನ್ ಕಂಡಿದೆ. ಅದಕ್ಕೂ ಮುಖ್ಯವಾಗಿ ಇಂತಹ ಯೋಜನೆಗಳನ್ನೇ ಹಾಕಿಕೊಂಡು ಮತ್ತೇ ಮತ್ತೇ ಸಿನಿಮಾ ಮಾಡುವ ಖಯಾಲಿ ಕೂಡ ನಿಧಾನವಾಗಿ ಸಿನಿಮಾ ರಂಗದಲ್ಲಿ ಬೆಳೆದುಕೊಂಡು ಬರುತ್ತಿದೆ. ಈ ಮೂಲಕ ಸಿನಿಮಾ ಗೆಲ್ಲಿಸಲು ಇದೊಂದು ವಿಶಿಷ್ಟ ಬಗೆಯ ಟೆಕ್ನಿಕ್ ಅನ್ನು ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಕಂಡು ಕೊಳ್ಳುತ್ತಿದ್ದಾರೆ ಎನ್ನುವ ವಿಚಾರವಂತೂ ಪ್ರತಿ ಬಾರಿಯೂ ಬಯಲಾಗುತ್ತಿದೆ. ......

ಸಿನಿಮಾ ಇನ್ ಪಾಲಿಟಿಕಲ್ ವಾರ್

* ಸ್ಟೀವನ್ ರೇಗೊ, ದಾರಂದಕುಕ್ಕು ಬಣ್ಣದ ನಗರಿಗೂ ರಾಜಕೀಯಕ್ಕೂ ತೀರಾ ಹತ್ತಿರದ ನಂಟಿದೆ ಎನ್ನೋದು ಇತಿಹಾಸವೇ ಬಾಯಿಬಿಟ್ಟುಕೊಂಡು ಹೇಳುತ್ತಿದೆ. ಬಣ್ಣದ ನಗರಿಯಲ್ಲಿ ಸಲ್ಲುವ ಬಹುತೇಕ ಮಂದಿ ರಾಜಕೀಯಕ್ಕೂ ಸಲ್ಲುತ್ತಾರೆ ಎನ್ನುವ ಮಾತಿಗೆ ಈಗಾಗಲೇ ನೂರು ಶೇಕಡಾದಷ್ಟು ಮತ ಸಿಕ್ಕಿದೆ. ಈಗ ಇಂತಹ ಒಂದು ರಾಜಕೀಯ ಅಖಾಡಕ್ಕೆ ಇಳಿಯಲು ಸಿದ್ಧತೆಯೊಂದು ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿದೆ ಎನ್ನುವ ಗುಸುಗುಸು ತೆರೆ ಮರೆಯಲ್ಲಿ ಕೇಳಿಸಿಕೊಳ್ಳುತ್ತಿದೆ. ಹೌದು. ಇದು ಬಾಲಿವುಡ್ ನಟಿ ಪ್ರೀತಿ ಝಿಂಟಾ ಮೇಡಂ ಅವರ ಮಾತು. ಬಾಲಿವುಡ್ ಅಂಗಳದಲ್ಲಿ ಸರಿಯಾಗಿ ನೆಲೆ ಸಿಕ್ಕಲು ಒದ್ದಾಟ ಮಾಡಿಕೊಂಡೇ ಬದುಕು ಕಟ್ಟಿದ ದಿಟ್ಟೆಯೊಬ್ಬರ ಕತೆ. ಪ್ರೀತಿ ಝಿಂಟಾ ಈಗ ಸಕ್ರೀಯ ರಾಜಕಾರಣದಲ್ಲಿ ಮುಳುಗಲಿದ್ದಾರೆ ಎನ್ನುವುದು ಸಿಕ್ಕಿರುವ ಬ್ರೇಕಿಂಗ್ ನ್ಯೂಸ್.
ಅಂದಹಾಗೆ ಸಿನಿಮಾ ಬಿಟ್ಟು ನಂತರ ಐಪಿಎಲ್ ಕ್ರಿಕೆಟ್‌ನಲ್ಲಿ ಸದ್ದು ಮಾಡಿರುವ ಹುಡುಗಿ ಪ್ರೀತಿ ಯಾಕೆ ಏಕ್‌ದಂ ರಾಜಕಾರಣಕ್ಕೆ ಇಳಿದು ಹೋದಳು ಎನ್ನುವ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿಲ್ಲ. ಆದರೆ ರಾಜಕಾರಣಕ್ಕೆ ಬರುವ ವಿಚಾರವಂತೂ ಗ್ಯಾರಂಟಿಯಾಗಿದೆ. ಬಿಜೆಪಿಯಿಂದ ಪ್ರೀತಿಗೆ ಟಿಕೇಟ್: ಬಾಲಿವುಡ್ ಚಿಗರೆ ಪ್ರೀತಿ ಝಿಂಟಾ ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟ್ ಪಡೆದುಕೊಂಡು ಅಖಾಡಕ್ಕೆ ಇಳಿಯುತ್ತಾರೆ. ಮುಂಬಯಿಯ ನಾರ್ತ್ ಸೆಂಟ್ರಲ್‌ನಿಂದ ಪ್ರೀತಿ ಇಳಿಯುವ ಸಾಧ್ಯತೆಗಳು ದಟ್ಟವಾಗಿದೆ. ಅಂದಹಾಗೆ ಈ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಇಳಿಯುವರು ಪ್ರಿಯಾ ದತ್.
ನಟ ಸಂಜಯ್ ದತ್ ಅವರ ಸಹೋದರಿ ಹಾಗೂ ಸುನೀತ್ ದತ್ ಅವರ ಪುತ್ರಿ ಪ್ರಿಯಾ ದತ್ ವಿರುದ್ಧ ಪ್ರೀತಿ ಝಿಂಟಾ ತೊಳ್ಬಲ ಪ್ರದರ್ಶನಕ್ಕೆ ಇಳಿಯುತ್ತಾರೆ. ಇದರ ಹಿಂದೆ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಕೆಲಸ ಮಾಡಿದ್ದಾರೆ. ಅಂದಹಾಗೆ ಪ್ರೀತಿಗೂ ರೂಡಿಗೂ ಎಲ್ಲಿಯ ಸಂಬಂಧ ಎಂದು ಕೇಳುವ ಮೊದಲು ಜಸ್ಟ್ ಒಂದ್ ಸಾರಿ ನಿಂತು ಬಿಡಿ. ಯಾಕ್ ಅಂದ್ರೆ ಇಬ್ಬರು ತೀರಾ ಹತ್ತಿರದ ಸಂಬಂಧಿಗಳು. ಅದಕ್ಕೂ ಮೊದಲು ಬಿಜೆಪಿ ಪಾಳೆಯದಲ್ಲಿ ಈ ಹಿಂದೆ ಕೂಡ ಪ್ರೀತಿಯ ಹೆಸರು ಕೇಳಿಸಿಕೊಂಡಿತ್ತು. ಆದರೆ ಸಿನಿಮಾ, ಕ್ರಿಕೆಟ್ ಎಂದೇ ಉಸಿರಾಡುತ್ತಿದ್ದ ಪ್ರೀತಿ ಝಿಂಟಾಳಿಗೆ ಈ ಹಿಂದಿನ ಆಫರ್ ಅಷ್ಟಾಗಿ ಹಿಡಿಸಲಿಲ್ಲ. ಈಗ ಸಿನಿಮಾನೂ ಇಲ್ಲ ಇತ್ತ ಕ್ರಿಕೆಟ್‌ನಲ್ಲೂ ಹೆಚ್ಚೇನೂ ಮಾಡಲಾಗುವುದಿಲ್ಲ ಎನ್ನುವ ಕಾರಣಕ್ಕೆ ಪ್ರೀತಿ ರಾಜಕಾರಣಕ್ಕೆ ಇಳಿಯಲು ಏಕ್‌ದಂ ತಯಾರಿ ನಡೆಸಿದ್ದಾರೆ ಎನ್ನುವ ಮಾತಿದೆ. ಆಂಧ್ರದಲ್ಲಿ ಹೊಸ ಪಕ್ಷ ಉದಯ: ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ ಸಿನಿಮಾಗಳಲ್ಲಿ ಬ್ಯುಸಿ ಇರುವ ಜತೆಗೆ ರಾಜಕಾರಣಕ್ಕೂ ಇಳಿಯುವ ಸೂಚನೆ ಕೊಟ್ಟಿದ್ದಾರೆ. ಈ ಹಿಂದೆ ತನ್ನ ಸಹೋದರನ ಪ್ರಜಾರಾಜ್ಯಂನಲ್ಲಿ ಸಕ್ರೀಯ ರಾಜಕಾರಣಕ್ಕೆ ಇಳಿದ ಪವನ್ ಕಲ್ಯಾಣ್ ತನ್ನದೇ ಸ್ವಂತ ರಾಜಕೀಯ ಪಕ್ಷ ಕಟ್ಟುವ ಯೋಚನೆ ಮಾಡುತ್ತಿದ್ದಾರೆ ಎನ್ನೋದು ಈಗ ಬಂದಿರುವ ಲೇಟೆಸ್ಟ್ ಸುದ್ದಿ. ಪಕ್ಷದ ಹೆಸರು ಹಾಗೂ ಚಿಹ್ನೆಯ ಕುರಿತು ಯಾವುದೇ ಮಾಹಿತಿ ಸಿಗದೇ ಹೋದರೂ ಕೂಡ ಪಕ್ಷ ಕಟ್ಟುವ ಕೆಲಸವಂತೂ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನೋದು ಹೊರ ಬಂದ ಮಾಹಿತಿ. ಬರುವ ಲೋಕಸಭೆ ಚುನಾವಣೆಯಲ್ಲಿ ಪವನ್ ಈ ಪಕ್ಷದಿಂದಲೇ ಕಣಕ್ಕೆ ಇಳಿಯುತ್ತಾರೆ ಎನ್ನೋದು ಅವರ ಆಪ್ತ ವಲಯ ಹೇಳಿಕೊಳ್ಳುತ್ತಿರುವ ಮಾತು. ಅದಕ್ಕಾಗಿ ಪವನ್ ಕಲ್ಯಾಣ್ ನಟಿಸುತ್ತಿರುವ ಎರಡು ಚಿತ್ರಗಳನ್ನು ಲೋಕಸಭೆ ಚುನಾವಣೆಯ ಬಳಿಕವಷ್ಟೇ ಚಿತ್ರೀಕರಣ ನಡೆಸಬೇಕು ಎನ್ನುವ ಪತ್ರವನ್ನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಪವನ್ ಕಲ್ಯಾಣ್ ನೀಡಿದ್ದಾರೆ ಎನ್ನುವ ಮಾಹಿತಿ ಇದೆ. ಟೋಟಲಿ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ಇಬ್ಬರು ನಟರು ಸಕ್ರೀಯ ರಾಜಕಾರಣಕ್ಕೆ ಇಳಿಯುವ ಸೂಚನೆಯನ್ನು ಚುನಾವಣೆ ಘೋಷಣೆಯಾಗುವ ಮೊದಲೇ ನೀಡಿದ್ದಾರೆ. ಈ ಮೂಲಕ ಬಣ್ಣದ ನಗರಿಯ ರಂಗು ರಾಜಕಾರಣದಲ್ಲೂ ಕಾಣಿಸಿಕೊಳ್ಳುವ ಮಾತು ಒಪ್ಪಲೇ ಬೇಕಾಗುತ್ತದೆ. ಅದಕ್ಕೂ ಮುಖ್ಯವಾಗಿ ದೇಶದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮೊದಲು ಅದೆಷ್ಟೋ ನಟ, ನಟಿಯರು ಈ ರಾಜಕಾರಣಕ್ಕೆ ಇಳಿಯುತ್ತಾರೋ ಎನ್ನುವುದು ಪ್ರೇಕ್ಷಕ ಮಹಾಪ್ರಭು ಕಾದು ಕೂರಬೇಕಾಗುತ್ತದೆ.

ಕುಡ್ಲದಲ್ಲಿ ಮಿಂಚು ಹರಿಸಿದ ಫ್ಯಾಶನ್ ದುನಿಯಾ

* ಸ್ಟೀವನ್ ರೇಗೊ, ದಾರಂದಕುಕ್ಕು ಮಿರಿಮಿರಿ ಮಿನುಗುವ ಬೆಳಕು. ಜತೆ ಜತೆಗೆ ಲೈಟ್ ಮ್ಯೂಸಿಕ್. ಟೋಟಲಿ ರ‍್ಯಾಂಪ್ ಮೇಲೆ ನಡೆಯುವ ಮಂದಿಗೆ ಒಂದು ಹುಮ್ಮಸ್ಸು ತಮಗೆ ಗೊತ್ತಿಲ್ಲದೇ ಬೆಳೆದು ಬರುತ್ತದೆ. ಹೌದು. ಇದು ಫ್ಯಾಶನ್ ಎಬಿಸಿಡಿಯ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಮೂರನೇ ಸರಣಿಯ ಅಂತಿಮ ಪಯಣದ ಜಸ್ಟ್ ಹೊಳಪಿನ ಮಾತು.
ಕುಡ್ಲದ ಮಂದಿಗೆ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ತೀರಾ ಹೊಸತು. ಇಲ್ಲಿಯ ಸೌಂದರ್ಯವನ್ನು ವೇದಿಕೆಯ ಮೇಲೆ ತಂದು ಕೂರಿಸುವಲ್ಲಿ ಮಂಗಳೂರಿನ ಫ್ಯಾಶನ್ ಎಬಿಸಿಡಿ ಸಂಸ್ಥೆಯವರು ಪಡುವ ಪರಿಶ್ರಮದ ಫಲವೇ ಇಂದಿನ ಸೌಂದರ್ಯ ಸ್ಪರ್ಧೆಗಳೇ ಸಾಕ್ಷಿ. ದೂರ ದೂರದ ಊರುಗಳಲ್ಲಿ ನಡೆಯುವ ಫ್ಯಾಶನ್ ಪರೇಡ್‌ಗಳನ್ನು ನೋಡು ನೋಡುತ್ತಾ ಇರುವ ಕುಡ್ಲದ ಮಂದಿಗೆ ಇದೊಂದು ವಿಶೇಷ ಅನುಭವ. ಭಾನುವಾರ ಮೂಡುಬಿದಿರೆಯ ಪಂಡಿತ್ ಹೆಲ್ತ್ ರೆಸಾರ್ಟ್‌ನ ಭವ್ಯ ಸ್ಟೇಜ್ ಮೇಲೆ ೧೪ಯುವ ಮೊಡೆಲ್‌ಗಳು ಹಾಗೂ ೧೭ ರೂಪದರ್ಶಿಗಳು ರ‍್ಯಾಂಪ್ ಮೇಲೆ ನಡೆದು ಸೌಂದರ್ಯ ಲಹರಿಗೆ ಸಾಥ್ ಕೊಟ್ಟರು. ವೆಸ್ಟರ್ನ್ ಹಾಗೂ ಶಾಸ್ತ್ರೀಯ ಸಂಗೀತದ ಹದವಾದ ಮಿಶ್ರಣದಲ್ಲಿ ಮೂಡಿ ಬರುತ್ತಿದ್ದ ಹಾಡುಗಳ ತಾಳ ಮೊಡೆಲ್‌ಗಳ ಕ್ಯಾಟ್‌ವಾಕ್‌ಗೆ ಸಾಥ್ ಕೊಡುವಂತಿತ್ತು. ಮೂರು ಹಂತಗಳಲ್ಲಿ ನಡೆದ ಈ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ಹಂತದಲ್ಲಿ ೧೨ ಹಾಗೂ ಮೂರನೇ ಹಂತದಲ್ಲಿ ೬ರಂತೆ ಕೊನೆಗೆ ಮೂವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಈ ಸೌಂದರ್ಯ ಸ್ಪರ್ಧೆಯ ಹೈಲೇಟ್‌ಗಳಲ್ಲಿ ಒಂದಾಗಿದೆ. ಈ ಬಾರಿ ಸಖತ್ ಡಿಫರೆಂಟ್: ಫ್ಯಾಶನ್ ಎಬಿಸಿಡಿಯ ಆಯೋಜಿತ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸ್ಪರ್ಧೆಯೇ ಒಂದು ಡಿಫರೆಂಟ್ ಕಲ್ಪನೆ. ಮಂಗಳೂರು ಮೂಲದ ಅದರಲ್ಲೂ ತುಳುನಾಡಿನಲ್ಲಿ ಹುಟ್ಟಿ ನಂತರ ದೇಶ- ವಿದೇಶದಲ್ಲಿರುವ ನಾನಾ ಸುಂದರ ಯುವಕ-ಯುವತಿಯರನ್ನು ಫ್ಯಾಶನ್ ದುನಿಯಾಕ್ಕೆ ಕರೆ ತರುವುದು ಈ ಫ್ಯಾಶನ್ ಶೋನ ಮೂಲ ಉದ್ದೇಶ. ಈ ಸ್ಪರ್ಧೆಯ ಮೂಲಕ ಕರಾವಳಿಯ ಸಂಪ್ರದಾಯ, ಕಲಾಚಾರ ಜತೆಗೆ ಪ್ರವಾಸೋದ್ಯಮಕ್ಕೆ ವಿಶೇಷ ಮನ್ನಣೆ ಒದಗಿಸಿ ಕೊಡುವ ಪ್ರಯತ್ನ ಕೂಡ ಇಲ್ಲಿ ನಡೆಯುತ್ತದೆ. ಅದರಲ್ಲೂ ಇಲ್ಲಿ ವಿಜೇತರಾದವರಿಗೆ ದೇಶದ ಪ್ರತಿಷ್ಠಿತ ಮಿಸ್ ಸೌತ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶಾತಿ ಕೂಡ ಸಿಗಲಿದೆ.
ಮಿಸ್ಟರ್ ಮಂಗಳೂರಿನಲ್ಲಿ ವಿಜೇತರಾದವರಿಗೆ ಹೊಸದಿಲ್ಲಿಯಲ್ಲಿ ನಡೆಯುವ ಮಿಸ್ಟರ್ ಇಂಡಿಯಾ ಗ್ಲೋಬಲ್‌ನಲ್ಲಿ ನೇರ ಪ್ರವೇಶ ಪಡೆಯುತ್ತಾರೆ. ಮುಖ್ಯವಾಗಿ ಸಿನಿಮಾದಲ್ಲಿ ನಟನೆ, ನಾನಾ ಕಂಪನಿಗಳ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸೀಡರ್ ಆಗುವ ಯೋಗ ಕೂಡ ಲಭ್ಯವಾಗಲಿದೆ ಎನ್ನುವುದು ಫ್ಯಾಶನ್ ಎಬಿಸಿಡಿ ಸಂಸ್ಥೆಯವರು ಹೇಳುವ ಮಾತು. ಮಿಸ್ ಆಂಡ್ ಮಿಸ್ಟರ್ ಮಂಗಳೂರು ಗೆದ್ದವರು: ಮಂಗಳೂರಿನಲ್ಲಿ ನಡೆಯುತ್ತಿರುವ ಮೂರನೇ ಸರಣಿಯ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸರಣಿಯಲ್ಲಿ ಈ ಬಾರಿಯ ವಿಜೇತರಾದ ಮಿಸ್ ಮಂಗಳೂರು ಫಾಹಿಮ್ ಪಾತಿಮಾ ಅದೇ ರೀತಿಯಲ್ಲಿ ಮಿಸ್ ಮಂಗಳೂರು ಫಸ್ಟ್ ರನ್ನರ್ ಆಫ್ ಅವಿನ್ ದಿವ್ಯಾ ವಾಸ್, ಸೆಕೆಂಡ್ ರನ್ನರ್ ಆಫ್ ವರುಣಾ ಸಂಪತ್ ಆಯ್ಕೆಯಾದರು. ಮಿಸ್ಟರ್ ಮಂಗಳೂರಿನಲ್ಲಿ ಪುನೀತ್ ಜಯದೇವ್ ವಿನ್ನರ್ ಆಗಿ ಮೂಡಿಬಂದರು. ಉಳಿದಂತೆ ಫಸ್ಟ್ ರನ್ನರ್ ಆಫ್ ವಿಕಾಸ್ ಪುತ್ರನ್, ಸೆಕೆಂಡ್ ರನ್ನರ್ ಆಫ್ ಆಗಿ ಸನಾಂ ಅಮೀನ್ ಆಯ್ಕೆಯಾದರು. ಫ್ಯಾಶನ್ ದುನಿಯಾಕ್ಕೆ ಲುಕ್ ತಂದ ಗೆಸ್ಟ್‌ಗಳು: ಈ ವಿಶೇಷ ಫ್ಯಾಶನ್ ಶೋನಲ್ಲಿ ಮುಂಬಯಿ ಖ್ಯಾತ ಫರ್‌ಸೆಫ್ಟ್ ಗ್ರೂಫ್‌ನ ಮುಖ್ಯಸ್ಥ ಹರೀಂದರ್ ಸಿಂಗ್, ಲ್ಯಾಕ್ಮೆ ಫ್ಯಾಶನ್ ವೀಕ್‌ನ ನಿಕಿತಾ ಪೂಂಜಾ, ಮಿಸ್ ಸೌತ್ ಇಂಡಿಯಾದ ರೂವಾರಿ ಅಜಿತ್ ರವಿ, ಸಿನಿಮಾ ನಿರ್ಮಾಪಕ ರಾಜೇಶ್ ಭಟ್,ಮಹಾರಾಷ್ಟ್ರದ ಡಿಜಿಪಿ ಶ್ರೀದೇವಿ ಗೋಯಲ್, ಮಿಸ್ ಇಂಡಿಯಾ ಫೈನಲಿಸ್ಟ್ ಪ್ರಥ್ವಿ ರಾವ್, ಡಾ. ಶಿಲ್ಪಾ ಶೆಟ್ಟಿ ನಾಯಕ್, ಡಾ. ಸ್ವಪ್ನಾ ಧನಂಜಯ್, ಚಿತ್ರ ನಿರ್ದೇಶಕ ಸಂದೀಪ್ ಮಲಾನಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಹದಿನಾಲ್ಕು ವರ್ಷದ ನಂತ್ರ ಬಂದ್ರು

* ಸ್ಟೀವನ್ ರೇಗೊ, ದಾರಂದಕುಕ್ಕು ಒಂದಲ್ಲ ಎರಡಲ್ಲ ಹದಿನಾಲ್ಕು ವರ್ಷ ದೂರ ಇರೋದು ಅಂದ್ರೆ ಸುಮ್ಮನೆನಾ..? ನೋ ಚಾನ್ಸ್ ಇಷ್ಟು ದೊಡ್ಡ ಗ್ಯಾಪ್ ಎನ್ನೋದು ಬಾಯಿ ಮಾತಿನಲ್ಲಿ ವ್ಯಾಖ್ಯೆನಾ ನೀಡಲು ಸಾಧ್ಯವಿಲ್ಲ. ಆದರೆ ಇದು ಸತ್ಯ. ಹದಿನಾಲ್ಕು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ ಎನ್ನೋದೇ ಬಹಳ ಖುಷಿ. ಹೌದು.
ಬಾಲಿವುಡ್ ಚಿತ್ರ ‘ಘಾತ್’ ಹಾಗೂ ‘ದಿಲ್ ಪೇ ಮತ್ ಲೇ ಯಾರ್’ ಚಿತ್ರಗಳಲ್ಲಿ ಈ ಜೋಡಿ ಜತೆಯಾಗಿ ಕಾಣಿಸಿಕೊಂಡಿತ್ತು. ಈಗ ಮತ್ತೆ ಒಂದಾಗುವ ಸೂಚನೆ ನೀಡಿದ್ದಾರೆ. ಅಂದಹಾಗೆ ಅವರಿಬ್ಬರು ಯಾರು ಅಂತೀರಾ.. ಮನೋಜ್ ಬಾಜಪೇಯಿ ಹಾಗೂ ತಬು ವಿಕ್ರಂ ಮಲ್ಹೋತ್ರಾ ಹಾಗೂ ನೀರಜ್ ಪಾಂಡೆಯ ಜತೆಯಾಗಿ ತರಲಿರುವ ಚಿತ್ರವೊಂದಕ್ಕೆ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ರಂಗಭೂಮಿಯ ನೀರು ಕುಡಿದು ಬೆಳೆದ ಮನೋಜ್ ಬಾಜ್‌ಪೇಯಿ ಹಾಗೂ ತಬು ಕೆಮಿಸ್ಟ್ರಿ ಈ ಹಿಂದಿನ ಎರಡು ಚಿತ್ರಗಳಲ್ಲಿ ಸಖತ್ ಆಗಿ ವರ್ಕ್ ಔಟ್ ಆಗಿತ್ತು. ಅದರಲ್ಲೂ ಮುಖ್ಯವಾಗಿ ಈ ಹೊಸ ಚಿತ್ರ ‘ಸೈಕಲಾಜಿಕಲ್ ಥ್ರಿಲ್ಲರ್’ ಆಗಿದೆ. ಇಂತಹ ಚಿತ್ರಗಳಲ್ಲಿ ಪಾತ್ರ ಮಾಡೋದು ಎಂದರೆ ಮನೋಜ್‌ಗೆ ಎಲ್ಲಿಲ್ಲದ ಖುಷಿ. ಇದೇ ಖುಷಿಯಿಂದ ಈ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನೋದು ನಿರ್ಮಾಪಕರ ಮಾತು. ಈ ಸೈಕಲಾಜಿಕಲ್ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಮನೋಜ್ ಅಭಯಂಕರ್. ಈಗಾಗಲೇ ಬಾಲಿವುಡ್‌ನ ಖ್ಯಾತ ನಾಮ ನಿರ್ದೇಶಕರ ಕೈ ಕೆಳಗೆ ದುಡಿದ ವ್ಯಕ್ತಿ. ಅದರಲ್ಲೂ ‘ಅಕ್ಸ್’ ನ ಓಂ ಪ್ರಕಾಶ್ ಮೆಹ್ರಾ, ಸ್ಪೆಶಲ್ ಚಬ್ಬೀಸ್‌ನ ನಿರಜ್ ಜತೆಯಲ್ಲಿ ಮನೋಜ್ ಕೆಲಸದ ಅನುಭವ ಪಡೆದುಕೊಂಡಿದ್ದವರು.
ಈಗಾಗಲೇ ‘ಸಾತ್ ಉಚ್ಚಾಯಿ’ ಚಿತ್ರವನ್ನು ಒಂದು ಹಂತಕ್ಕೆ ತಂದು ಮುಟ್ಟಿಸಿದ್ದಾರೆ. ಈಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಇದರ ಜತೆಗೆ ನಿರ್ಮಾಪಕ ಸಂಜಯ್ ಗುಪ್ತಾ ಅವರ ಮುಂಬಯಿ ಬೇಸ್ಡ್ ಅಪರಾಧ ಜಗತ್ತಿನ ಅರುಣ್ ಗಾವ್ಲಿಯ ಚಿತ್ರದ ಕತೆಯನ್ನು ಮನೋಜ್ ಸಿದ್ಧ ಪಡಿಸುತ್ತಿದ್ದಾರೆ ಎನ್ನುವ ಮಾತಿದೆ. ಟೋಟಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಮನೋಜ್ ಬಾಜಪೇಯಿ ಹಾಗೂ ತಬು ಮತ್ತೆ ಜತೆಗೂಡುತ್ತಿದ್ದಾರೆ ಎನ್ನೋದು ಪ್ರೇಕ್ಷಕರಿಗೆ ಖುಷಿ ಪಡುವ ವಿಷ್ಯಾ.

ಪಿಂಕಿ ಕೈಯಲ್ಲಿ ಹರ್ಲಿ ಡೇವಿಡ್‌ಸನ್ ಬೈಕ್ !

*ಸ್ಟೀವನ್ ರೇಗೊ, ದಾರಂದಕುಕ್ಕು ಬಾಲಿವುಡ್ ಸಿನಿಮಾ ರಂಗದಲ್ಲಿ ಗಟ್ಟಿತನದ ಮಾತು ಬರೀ ನಟರಿಂದ ಮಾತ್ರ ಬರೋದು ಎನ್ನುವ ಟಾಕ್ ಇತ್ತು. ಆದರೆ ಇವರ ಮುಂದೆ ಬಾಲಿವುಡ್ ನಟಿಯರು ಸುಮ್ಮನೆಯಾಗುತ್ತಿದ್ದರು. ಆದರೆ ಪ್ರಸೆಂಟ್ ಕಂಡೀಷನ್‌ನಲ್ಲಿ ಹೇಳುವುದಾದರೆ ಬಾಲಿವುಡ್ ನಟರ ಮುಂದೆ ನಟಿಯರು ತೊಡೆ ತಟ್ಟಿಕೊಂಡು ಮುಂದೆ ಬಂದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿಸಿಕೊಂಡು ಬಂದಿದೆ.
ಅಂದಹಾಗೆ ಏನಪ್ಪಾ ವಿಷ್ಯಾ ಅಂದ್ರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಮೇರಿಕ ಮೂಲದ ಹರ್ಲಿ ಡೇವಿಡ್‌ಸನ್ ಬೈಕ್ ಖರೀದಿ ಮಾಡಿದ್ದಾರೆ. ಅರೇ ಅಮೆರಿಕದ ಈ ದುಬಾರಿ ಬೈಕ್ ಖರೀದಿ ಮಾಡುವಲ್ಲಿ ಪಿಂಕಿ ಯಾಕೆ ಇಷ್ಟೊಂದು ಆಸಕ್ತಿ ಬೆಳೆಸಿಕೊಂಡರು ಎನ್ನುವ ಕುತೂಹಲದಿಂದ ಕಣ್ಣು ಮಿಟುಕಿಸಿದಾಗ ಎದುರಿಗೆ ಬಂದ ಸತ್ಯ ಏನಪ್ಪಾ ಅಂದ್ರೆ...ಖಾಸಗಿ ವಾಹಿನಿಯಲ್ಲಿ ಈ ಹಿಂದೆ ಬಂದ ‘ಕತ್ರೋ ಕೇ ಕಿಲಾಡಿ-೩’ಯ ಚಿತ್ರೀಕರಣದ ಸಮಯದಲ್ಲಿ ಪಿಂಕಿ ಹರ್ಲಿ ಡೇವಿಡ್‌ಸನ್ ಬೈಕ್ ಮೇಲೆ ಬರುವ ಸನ್ನಿವೇಶವನ್ನು ಚಿತ್ರೀಕರಿಸಲಾಗಿತ್ತು. ಆದರೆ ಪಿಂಕಿ ಈ ಸಮಯದಲ್ಲಿ ಬರೀ ಹೆದರಿಕೊಂಡಿದ್ದರು. ಆದರೂ ಧೈರ್ಯವಾಗಿ ಈ ಬೈಕ್ ಮೇಲೆ ಕೂತು ಹರ್ಲಿ ಡೇವಿಡ್‌ಸನ್ ಬಿಡುವಾಗ ಎಲ್ಲರೂ ಚಪ್ಪಾಳೆ ತಟ್ಟಿದರಂತೆ. ಈ ಬಳಿಕ ಪಿಂಕಿ ಪ್ರತಿ ಬಾರಿಯೂ ಇಂತಹ ಬೈಕ್ ಖರೀದಿ ಮಾಡಿಕೊಂಡು ಬಿಡಬೇಕು ಎನ್ನುವುದು ಬಯಕೆಯಾಗಿತ್ತು ಎನ್ನುವುದು ಪಿಂಕಿ ತನ್ನ ಆಪ್ತ ಮೂಲಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರಂತೆ. ಈಗ ಇಂತಹ ಹರ್ಲಿ ಡೇವಿಡ್‌ಸನ್ ಬೈಕ್ ಮೂಲಕ ಚಿತ್ರೀಕರಣಕ್ಕೆ ಬರಬೇಕು ಎನ್ನುವ ಆಸೆ ಕೂಡ ಪಿಂಕಿಗೆ ಬಂದಿದೆ. ಮುಂಬಯಿಯ ಬ್ಯುಸಿ ಟ್ರಾಫಿಕ್‌ನಲ್ಲಿ ಪಿಂಕಿ ಹೇಗೆ ಹರ್ಲಿ ಡೇವಿಡ್‌ಸನ್ ಬೈಕ್ ಬಿಡುತ್ತಾರೆ ಎನ್ನುವ ಕುತೂಹಲ ಬಹಳ ಮಂದಿಗೆ ಬಂದಿದೆ. ಅದಕ್ಕೆ ಪಿಂಕಿಯೇ ಉತ್ತರ ನೀಡಬೇಕು ಅಲ್ವಾ...
ಅಂದಹಾಗೆ ಹರ್ಲಿ ಡೇವಿಡ್‌ಸನ್ ಬೈಕ್ ಕುರಿತ ಮಾತು ಹೀಗಿದೆ: ಅಮೆರಿಕದ ದೈತ್ಯಬೈಕುಗಳ ಸಂಸ್ಥೆ ಹರ್ಲೆ ಡೇವಿಡ್ ಸನ್ ಬೈಕ್ ಪ್ರಪಂಚದಲ್ಲಿ ಒಂದು ಶತಮಾನಕ್ಕೂ ಅಧಿಕ ಅನುಭವವುಳ್ಳ ಸಂಸ್ಥೆ . ಇದರಡಿಯಲ್ಲಿ ಒಟ್ಟು ೧೨ ಮಾದರಿ ಬೈಕುಗಳು ಸದ್ಯ ಭಾರತದ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೊಸದಿಲ್ಲಿ, ಮುಂಬಯಿ, ಚಂಡೀಗಢ, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಅಧಿಕೃತ ಡೀಲರ್ ಷೋರೂಂಗಳನ್ನು ಸಂಸ್ಥೆ ಆರಂಭಿಸಿದೆ. ಹರ್ಲೆ ಡೇವಿಡ್ ಸನ್ ಮೋಟರ್ ಸೈಕಲ್ ಕುಟುಂಬದ ಹೊಸ ಮಾದರಿಗಳಾದ ಸ್ಫೋರ್ಟ್ ಸ್ಟರ್, ಡೈನಾ, ವಿಆರ್ ಎಸ್ಸಿ, ಸಾಫ್ಟ್ ಟೈಲ್ ಮತ್ತು ಟೂರಿಂಗ್ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಬೆಲೆ ಸುಮಾರು ರೂ.೬,೯೫,೦೦೦ ರಿಂದ ರೂ. ೩೪,೯೫,೦೦೦ ಇದೆ. ಸುಮಾರು ೮೮೩ ಸಿಸಿ ಇಂದ ೧೮೦೩ ಸಿಸಿ ಸಾಮರ್ಥ್ಯದ ಬೈಕುಗಳನ್ನು ಭಾರತಕ್ಕೆ ಪರಿಚಯಿಸಲಾಗಿದೆ ಎನ್ನುವುದು ಹರ್ಲೆ ಡೇವಿಡ್‌ಸನ್ ಸಂಸ್ಥೆಯ ಮೂಲದ ಮಾಹಿತಿ.