Wednesday, December 21, 2011

ಗೃಹಪ್ರವೇಶ ಸೂಪರ್ರೋ ಸೂಪರ್ !




ಇಮ್ಯಾನುವೆಲ್( ಬೈಬಲ್ ಆಧಾರಿತ ಶಬ್ದ) ದೇವರು ಜತೆಗಿದ್ದಾನೆ ಎನ್ನುವ ಅರ್ಥ ನೀಡುವ ದಾರಂದಕುಕ್ಕುವಿನ ನನ್ನ ಮನೆಯ ಗೃಹಪ್ರವೇಶ ಬೊಂಬಾಟಾಗಿ ಡಿ.೧೮ರ ಭಾನುವಾರ ನಡೆದಿದೆ. ಗೃಹಪ್ರವೇಶ ದಿನ ಬಂದವರೆಲ್ಲರೂ ಗೋಡೆಯನ್ನು ನೋಡಿ ನಕ್ಕು ಹೋಗಿದ್ದಾರೆ. ಯಾಕೆ ಅಂತೀರಾ..? ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ತಮ್ಮ ಬ್ಯುಸಿ ಶೆಡ್ಯುಲ್‌ಗಳ ನಡುವೆ ದಾರಂದಕುಕ್ಕುವಿಗೆ ಬಂದು ಒಂದು ಗೋಡೆಗೆ ಮ್ಯೂರಲ್ ಆರ್ಟ್ ಮಾಡಿ ಹೋಗಿದ್ದಾರೆ.
ಈ ರೀತಿಯ ಮ್ಯೂರಲ್ ಆರ್ಟ್ ಇರುವ ಮನೆ ದ.ಕ. ಜಿಲ್ಲೆಯಲ್ಲಿ ಬಿಡಿ. ಇಡೀ ರಾಜ್ಯದಲ್ಲಿ ಸಿಗುವುದು ತೀರಾ ಅಪರೂಪ ಎನ್ನುವುದು ನನ್ನ ನಂಬಿಕೆಯಲ್ಲ ಪ್ರಕಾಶ್ ಶೆಟ್ಟರ ಮಾತು ಕೂಡ ಹೌದು. ಏನೇ ಇರಲಿ ನನ್ನ ಸಹೋದರ ಸೈನ್ಯದಿಂದ ಮನೆಗೆ ರಜೆಯಲ್ಲಿ ಓಡಿ ಬರೋದು, ತಂದೆ ಪುಟ್ಟ ಅಂಗಡಿಯಲ್ಲಿ ವ್ಯಾಪಾರ ಮಾಡಲು ಚೀಟಿ ರೆಡಿ ಮಾಡೋದು, ತಾಯಿ ಅಡುಗೆ ಮನೆಯಲ್ಲಿ ನಿರತರಾಗಿರುವುದು, ಪತ್ರಕರ್ತ ಅನ್ನಿಸಿಕೊಂಡ ನಾನು ಸೋಪಾದ ಮೇಲೆ ಕೂತು ಬರೆಯುವ ಕೆಲಸ ಈ ಮ್ಯೂರಲ್ ಆರ್ಟ್‌ನಲ್ಲಿ ನಡೆದಿದೆ. ಇಂತಹ ಮಜಬೂತಾದ ಸೀನ್ ನೋಡಬೇಕಾದರೆ ಒಂದ್ ಸಾರಿ ನನ್ನ ಮನೆಗೆ ಬಂದು ನೋಡಿ ಅನ್ನೋದು ನನ್ನ ಸಿಂಪಲ್ ರಿಕ್ವೇಸ್ಟ್ ಮಾರಾಯ್ರೆ...

Sunday, December 11, 2011

ಗೆಳೆಯರೇ ಮನೆಗೆ ಬನ್ನಿ...


ಪ್ರೀತಿಯ ಗೆಳೆಯರೇ....
ಪುತ್ತೂರಿನ ದಾರಂದಕುಕ್ಕು ಎಂಬಲ್ಲಿ ಪುಟ್ಟದಾದ ‘ಇಮ್ಯಾನುವೆಲ್’ ಎನ್ನುವ ಮನೆಯೊಂದನ್ನು ಕಟ್ಟಿದ್ದೇವೆ. ಡಿ.೧೮ರಂದು ಈ ಮನೆಯ ಗೃಹಪ್ರವೇಶ ನಡೆಯಲಿದೆ. ಅಂದು ಮಧ್ಯಾಹ್ನ ೧೨ ಗಂಟೆಗೆ ಗೃಹಪ್ರವೇಶ, ಚಿಕ್ಕದಾದ ಕಾರ‍್ಯಕ್ರಮ ಹಾಗೂ ನಂತರ ನಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ನೇಹಿತರಾದ ನೀವು ಪ್ರೀತಿಯಿಂದ ಮನೆಗೆ ಬನ್ನಿ. ನಮ್ಮ ಸಂತೋಷದ ಕ್ಷಣಗಳಲ್ಲಿ ಒಂದು ಭಾಗವಾಗಿ ಎನ್ನುವುದು ನನ್ನ ವಿನಂತಿ.
ನಿಮ್ಮವ
ಸ್ಟೀವನ್ ರೇಗೊ, ದಾರಂದಕುಕ್ಕು

ದಾರಿ ಯಾವುದಯ್ಯಾ:
ಮಂಗಳೂರಿನಿಂದ ಬರುವ ಗೆಳೆಯರು ಪುತ್ತೂರು ಬಸ್‌ನಲ್ಲಿ ಬಂದು ಬೊಳ್ವಾರ್‌ನಲ್ಲಿ ಇಳಿದು ನಂತರ ಉಪ್ಪಿನಂಗಡಿ ಕಡೆ ಹೋಗುವ ಬಸ್ ಹಿಡಿದರೆ ಕೆಮ್ಮಾಯಿ ನಂತರ ಹಾಗೂ ಸೇಡಿಯಾಪು ಮೊದಲು ಸಿಗುವ ಊರು ದಾರಂದಕುಕ್ಕು.
ಮತ್ತೊಂದು ರಸ್ತೆ: ಮಂಗಳೂರಿನಿಂದ ಉಪ್ಪಿನಂಗಡಿಯ ಮೂಲಕ ಬರುವವರು ಪುತ್ತೂರು ಬಸ್ ಹಿಡಿದರೆ ಸೇಡಿಯಾಪುವಿನ ನಂತರದ ಸ್ಟೇಜ್‌ನಲ್ಲಿ ದಾರಂದಕುಕ್ಕು ಕಾಣ ಸಿಗುತ್ತದೆ. ಸ್ವಂತ ವೆಹಿಕಲ್ ಇದ್ದವರು ಮಾಣಿಯಿಂದ ಪೆರ್ನೆಯ ಮೂಲಕ ಸೇಡಿಯಾಪು ಆಗಿ ದಾರಂದಕುಕ್ಕು ಮನೆಗೆ ಬರಬಹುದು.
ದಾರಿಯೇ ಕಾಣದಾದರೆ: ಮೇಲಿನ ರಸ್ತೆಯಲ್ಲಿ ಬರುವಾಗಯಾವುದೇ ಗೊಂದಲಗಳು ಬಂದರೆ ದಯವಿಟ್ಟು ಈ ಸಂಖ್ಯೆಗೆ ಕರೆ ಮಾಡಿ: ೯೯೬೪೦೨೫೯೨೪
ಪ್ರೀತಿಯನ್ನು ಇಟ್ಟುಕೊಂಡು ಬನ್ನಿ

Thursday, December 8, 2011

ಮಾದಕ ಲೋಕದಲ್ಲಿ ಮಕ್ಕಳ ಸೇನೆ !


ಎಳೆವೆಯಲ್ಲೇ ಮಾದಕ ಲೋಕದೊಳಗೆ ಹೊಕ್ಕು, ಅಲ್ಲೇ ಸ್ವಚ್ಛಂದತೆಯನ್ನು ಬಯಸುವ ಮಕ್ಕಳಿಗೆ ಸರಿ ದಾರಿ ತೋರುವ, ಅರಿವು ಮೂಡಿಸುವ ಕೆಲಸ ಕಾರ್ಯ ಜರೂರಾಗಬೇಕಲ್ಲವೇ?.

ಎಥನಾಲ್, ಕೋಡಿನ್, ಬೆನ್‌ಡ್ರಿಲ್ ಹೀಗೆ ನಾನಾ ಬ್ರಾಂಡ್‌ಗಳ ಹೆಸರು ೧೦ ವರ್ಷದ ಕೋಲ್ಕೊತಾ ಮೂಲದ ಬಾಬುಲ್‌ನಿಗೆ ಗೊತ್ತು. ಹಾಗೆಯೇ ಅವನ ಜತೆಯಲ್ಲಿ ಗುಜರಿ ಹೆಕ್ಕಿ ದಿನನಿತ್ಯ ಇಂತಹ ಬ್ರಾಂಡ್ ಐಟಂಗಳ ಹಿಂದೆ ಬೀಳುವ ಪಿಂಕಿ, ಟಾಕಿ, ಮೋನಿ, ಬಲ್ಲು ಎಲ್ಲರಿಗೂ ಗೊತ್ತು. ಎಲ್ಲರೂ ೧೦ ರಿಂದ ೧೫ರ ಆಸುಪಾಸಿನ ಎಳೆಯರು. ಗುಜರಿ ಹೆಕ್ಕಿ ಬಂದ ಆದಾಯದಲ್ಲಿ ಹೆತ್ತವರಿಗೆ ಸ್ವಲ್ಪ ಕೊಟ್ಟು ಉಳಿದ ಹಣವನ್ನು ತಿಂಡಿ-ತಿನಿಸುಗಳಿಗೆ ಸುರಿಯುತ್ತಾರೆ ಎನ್ನುವ ಭ್ರಮೆ ಇಟ್ಟುಕೊಂಡರೆ ಅದು ಸಂಪೂರ್ಣ ತಪ್ಪು. ಎಲ್ಲರೂ ತಂದು ಹಾಕುವುದು ಇದೇ ಐಟಂಗಳ ಮೇಲಂತೆ !
ಎಳೆಯ ವಯಸ್ಸಿನಲ್ಲಿ ಇಂತಹ ಬ್ರಾಂಡ್ ನೇಮ್‌ಗಳು ಯಾಕೆ ಬೇಕಾಗುತ್ತದೆ..? ಎನ್ನುವ ಪ್ರಶ್ನೆ ಎದುರಾದರೇ ಇದಕ್ಕೆ ಉತ್ತರ ಇಲ್ಲಿದೆ. ಪುಟ್ಟ ಪುಟ್ಟ ತೇವ ಕಣ್ಣುಗಳಲ್ಲಿ ಭರ್ತಿಯಾಗಿ ಕನಸು ಕಾಣುವ ಎಳೆಯ ಗೆಳೆಯರು ಈ ಐಟಂಗಳಲ್ಲಿ ಒಂದನ್ನಾದರೂ ತೆಗೆಯದೇ ಹೋದರೆ ರಾತ್ರಿ ನಿದ್ದೆ ಮಾಡೋದಿಲ್ಲ. ರಾತ್ರಿಯೆಲ್ಲ ಚಾಪೆ ತುಂಬಾ ಒದ್ದಾಡುತ್ತಾರೆ. ಅಂತೂ ಇಂತೂ ನಿದ್ರೆ ಬಂದರೂ ಕನವರಿಕೆಯಲ್ಲೂ ಚಡಪಡಿಸುತ್ತಾರೆ ಎನ್ನುವುದು ಬಾಬುಲ್, ಪಿಂಕಿಯ ತಂದೆ ಮೋಹನ್ ದಾಸ್‌ರ ಮಾತು. ವೃತ್ತಿಯಲ್ಲಿ ಡೋಲು ವಾದ್ಯ ತಯಾರಿಸಿಕೊಂಡು ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣ ಹತ್ತಿರದ ಬೀದಿಯಲ್ಲಿ ಕಾಣಸಿಗುತ್ತಾರೆ. ಹೆಚ್ಚು ಹೊತ್ತು ಬೀದಿಯಲ್ಲಿ ಕಂಡರೂ ಹಂಪನಕಟ್ಟೆಯ ಹತ್ತಿರ ಇರುವ ಬಾರ್‌ಗಳಲ್ಲಿ ಇವರಿಗೆ ಅಕೌಂಟ್ ಇದೆ.
ಎಳೆಯರ ಕಾರುಬಾರು:
ಬಾಬುಲ್, ಪಿಂಕಿ, ಟಾಕಿ, ಮೋನಿ, ಬಲ್ಲು ಎಲ್ಲರೂ ಗೆಳೆಯರು. ಬೆಳಗ್ಗೆ ೮ ಗಂಟೆಗೆ ಗುಜರಿ ಹೆಕ್ಕಲು ಹೊರಡುವ ಮೂಲಕ ಇವರ ದಿನಚರಿ ಆರಂಭವಾಗುತ್ತದೆ. ಮನಪಾದ ಕಸದ ತೊಟ್ಟಿಯಿಂದ ಹಿಡಿದು ಬೀದಿ ಬದಿಯಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ಲಕೋಟೆ, ಕಬ್ಬಿಣ ವಸ್ತುಗಳನ್ನು ಹೆಕ್ಕಿಕೊಂಡು ಸಂಜೆ ನಾಲ್ಕರ ಹೊತ್ತಿಗೆ ಬಂದರಿನಲ್ಲಿರುವ ಗುಜರಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.
ವಾರದಲ್ಲಿ ಮೂರು ದಿನ ಇವರು ಗುಜರಿ ಹೆಕ್ಕಲು ಹೋದರೆ ಉಳಿದ ನಾಲ್ಕು ದಿನ ಇವರು ಡೋಲು, ಕೊಳಲು, ಬಲೂನ್‌ಗಳನ್ನು ಮಾರಾಟ ಮಾಡುವ ದಂಧೆಗೆ ಇಳಿಯುತ್ತಾರೆ. ಸಂಜೆ ಹೊತ್ತಿಗೆ ತಮ್ಮ ಹೆತ್ತವರಿಗೆ ಸ್ವಲ್ಪ ಹಣ ಕೊಟ್ಟರೆ ಸಾಕು. ಉಳಿದ ಹಣವನ್ನು ಈ ಮಾರಕ ಮಾದಕ ವ್ಯಸನಗಳಿಗೆ ತಂದು ಸುರಿಯುತ್ತಾರೆ. ಮಂಗಳೂರಿನ ನೆಹರೂ ಮೈದಾನದ ಅಕ್ಕಪಕ್ಕದಲ್ಲಿರುವ ಮರದಡಿಯಲ್ಲಿ, ಇನ್ನೂ ಕೆಲವು ಸಮಯ ಕಾರ್ಪೊರೇಶನ್ ಪಾರ್ಕ್‌ನ ಹಾಸು ಬೆಂಚು, ಪಿವಿಎಸ್ ಹತ್ತಿರದ ಪಾಳುಬಿದ್ದ ಕಟ್ಟಡದಲ್ಲಿ ಇವರ ಮಾದಕ ವ್ಯಸ್ಯನ ಪ್ರತಿನಿತ್ಯ ನಡೆಯುತ್ತಿರುತ್ತದೆ.
ಇಂತಹ ಮಕ್ಕಳು ಅಲೆಮಾರಿ ಸಮುದಾಯಕ್ಕೆ ಸೇರಿರುವ ಕಾರಣ ಒಂದೇ ಕಡೆ ನೆಲೆ ನಿಲ್ಲುವ ಪ್ರಶ್ನೆಯೇ ಇರುವುದಿಲ್ಲ. ಅವರನ್ನು ಹುಡುಕಾಡಿಕೊಂಡು ಸರಿ ದಾರಿಗೆ ತರುವ ಕೆಲಸವನ್ನು ಸ್ವಲ್ಪ ಮಟ್ಟಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಬಹುದು. ಆದರೆ ಅವರಿಗೆ ಈ ಮಕ್ಕಳ ಕುರಿತು ಸ್ವಷ್ಟವಾದ ಮಾಹಿತಿ ಇರುವುದಿಲ್ಲ ಎನ್ನುತ್ತಾರೆ ಮಂಗಳೂರಿನ ಸಾಮಾಜಿಕ ಕಾರ‍್ಯಕರ್ತ ನರೇಶ್.
ಹೆತ್ತವರಿಗೂ ಮಕ್ಕಳ ಚಟುವಟಿಕೆ ಮೇಲೆ ತೀವ್ರ ನಿಗಾ ಇಡಲು ಸಮಯವಿಲ್ಲ. ಜತೆಗೆ ಬೇಕಾಗೂ ಇಲ್ಲ. ಇಂತಹ ವ್ಯವಸ್ಥೆಯಲ್ಲಿ ಮಕ್ಕಳು ತಮಗೆ ಅರಿವಿಲ್ಲದ ಚಟಗಳಿಗೆ ಬಿದ್ದು ತಮ್ಮ ಭವಿಷ್ಯವನ್ನು ಕತ್ತಲೆಗೆ ದೂಡುವ ಸಾಧ್ಯತೆಗಳೇ ಹೆಚ್ಚು. ಮಕ್ಕಳು ಈ ವಿಚಾರಗಳನ್ನು ನೇರವಾಗಿ ಯಾರಲ್ಲೂ ಚರ್ಚಿಸಲು ಹೋಗುವುದಿಲ್ಲ. ತಮ್ಮ ಪಾಲಿಗೆ ತಾವೇ ಇಂತಹ ತಪ್ಪು ದಾರಿಯನ್ನು ಹಾದುಕೊಂಡು ಹೋಗುವಾಗ ಎಚ್ಚರಿಸುವ ಹೊಣೆಗಾರಿಕೆ ಹೆತ್ತವರಿಗೆ ಇದ್ದೇ ಇದೆ ಎನ್ನುತ್ತಾರೆ ಮಂಗಳೂರಿನ ಮಕ್ಕಳ ವೈದ್ಯ ಡಾ. ಸತೀಶ್ ಕುಮಾರ್.
ಮಾದಕ ಮೋಹಕ:
ಎಥನಾಲ್ ಸ್ಪಿರಿಟ್, ಕೋಡಿನ್, ಬೆನ್‌ಡ್ರೀಲ್, ಪ್ರಿಂಟ್ ಸಲ್ಯೂಷನ್, ನೈಟ್ರೋಪೆಟ್, ಒಪಿಯೋಡೋಸ್, ಡೇಝೀಪಾಮ್, ಅಲ್‌ಪ್ರೋಜೋಲಮ್ ಎಲ್ಲವೂ ವೈದ್ಯರ ಶಿಪಾರಸು ಇಲ್ಲದೆ ಔಷಧ ಅಂಗಡಿಯಲ್ಲಿ ಲಭ್ಯವಾಗುವ ಔಷಧಗಳು. ೨ ರೂಪಾಯಿಯಿಂದ ಹಿಡಿದು ೪೦ ರೂ.ವರೆಗೆ ಮಾರುಕಟ್ಟೆಯಲ್ಲಿ ಸುಲಭದಲ್ಲಿ ಸಿಗುತ್ತದೆ. ಮಾದಕತೆಯನ್ನು ಜಾಗೃತ ಮಾಡಲು ಇವು ಬಲು ಪರಿಣಾಮಕಾರಿ ಔಷಧಗಳು.
ಎಥನಾಲ್ ಸ್ಪಿರಿಟ್ ಉಗುರು ಸ್ವಚ್ಪ ಮಾಡಲು ಬಳಸುವ ವಸ್ತು. ಔಷಧದ ಮಾರುಕಟ್ಟೆಯಲ್ಲಿ ೧೦೦ ಎಂಎಲ್‌ನಿಂದ ಹಿಡಿದು ೪೦೦ ಎಂಎಲ್‌ವರೆಗೆ ಬಾಟಲ್‌ನಲ್ಲಿ ಸಿಗುತ್ತದೆ. ಇದನ್ನು ಹೆಚ್ಚಾಗಿ ಆಘ್ರಾಣಿಸುವ ಮೂಲಕ ಮಾದಕತೆಯನ್ನು ಮಕ್ಕಳು ಬೆಳೆಸುತ್ತಾರೆ. ಕೆಲವೊಂದು ಸಲ ಕಿಕ್ ಕಡಿಮೆಯಾಗುತ್ತದೆ ಎಂದಾದರೆ ಅದನ್ನು ಕುಡಿಯುವ ದುಸ್ಸಾಹಸಕ್ಕೂ ಕೈ ಹಾಕುತ್ತಾರೆ.
ಕೋಡಿನ್, ಬೆನ್‌ಡ್ರೀಲ್ ಎಲ್ಲವೂ ಕಾಫ್ ಸಿರಪ್‌ಗಳ ಸಾಲಿನಲ್ಲಿ ಸೇರುವ ಔಷಧದ ಹೆಸರುಗಳು. ಇದರಲ್ಲೂ ಮಾದಕತೆ ಅಡಕವಾಗಿರುತ್ತದೆ. ೫೦-೧೦೦ ಎಂಎಲ್ ಮಾದರಿಯಲ್ಲಿ ದೊರೆಯುವ ಈ ಔಷಧ ೩೦ ರೂ.ನಿಂದ ೫೦ ರೂ. ರೇಜ್‌ನಲ್ಲಿ ಮೆಡಿಕಲ್‌ನಲ್ಲಿ ಲಭ್ಯವಾಗುತ್ತದೆ. ಈ ಔಷಧಗಳನ್ನು ಮಿತಿಮೀರಿ ಸೇವಿಸಿದರೆ ಮಕ್ಕಳಲ್ಲಿ ನರಕ್ಕೆ ಸಂಬಂಸಿದ ಕಾಯಿಲೆಗಳು, ನಿದ್ರಾಹೀನತೆ, ಕರುಳು ಸಂಬಂತ ಕಾಯಿಲೆಗಳು, ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಗಳು ದಟ್ಟವಾಗಿರುತ್ತದೆ.
ಪ್ರಿಂಟ್ ಸಲ್ಯೂಷನ್, ನೈಟ್ರೋಪೆಟ್, ಒಪಿಯೋಡೋಸ್, ಡೇಝೀಪಾಮ್, ಅಲ್‌ಪ್ರೋಜೋಲಮ್ ಔಷಧಗಳನ್ನು ನೋವು ನಿವಾರಕ, ಒತ್ತಡ ನಿವಾರಣೆ, ಫಿಟ್ಸ್ ಸಂಬಂದಿತ ಕಾಯಿಲೆಗಳಿಗೆ ವೈದ್ಯರು ನೀಡುವ ಔಷಧಗಳು. ಆದರೆ ಇದನ್ನು ಕಾಯಿಲೆ ಇಲ್ಲದ ಮಕ್ಕಳು ಸೇವಿಸಲು ಆರಂಭ ಮಾಡಿದರೆ ಅವರ ದೇಹದ ಕಾರ‍್ಯಾಚರಣೆಯಲ್ಲಿ ತೊಡಕು ಕಾಣಿಸಿಕೊಳ್ಳುತ್ತದೆ. ಕೆಲವೊಂದು ಸಲ ಬೇಗನೆ ಪ್ರಾಯಪ್ರಬುದ್ಧತೆಯಾಗು ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯ ನಿರಂಜನ್.
ವಲಸೆ ಸಮುದಾಯದ ಈ ಮಕ್ಕಳಂತೆ ಎಷ್ಟೋ ಮಂದಿ ಮಕ್ಕಳು ಯಾರಿಗೂ ಗೊತ್ತಿಲ್ಲದೆ ಇಂತಹ ವ್ಯಸನಗಳಿಗೆ ಗುರಿಯಾಗಿರುವ ಸಾಧ್ಯತೆಗಳಂತೂ ನಗರದಲ್ಲಿ ಇದ್ದೇ ಇದೆ. ಸಮಾಜದ ಒಳಿತು-ಕೆಡುಕಿನ ಕಲ್ಪನೆಯೂ ಇಲ್ಲದೆ ಬೆಳೆವ ಈ ಎಳೆಯರಿಗೆ ತಮ್ಮ ತಪ್ಪು ದಾರಿಯನ್ನು ಸರಿಪಡಿಸಿಕೊಳ್ಳುವ ಅವಕಾಶವೊಂದನ್ನು ಕಲ್ಪಿಸಲು ನೆರವಾಗುವುದು ಎಲ್ಲರ ಕರ್ತವ್ಯ. ಇಂತಹ ಮಕ್ಕಳ ಹೆತ್ತವರು, ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಜಾಗೃತವಾಗುವ ಅಗತ್ಯವಂತೂ ಇದೆ.

ನನ್ನ ಪತ್ರಿಕೆ ನನ್ನ ಬರಹ-42



(vk daily nk puravani published dis article on 9.12.2011)

Thursday, December 1, 2011

ಬಿ-ಟೌನ್‌ನಲ್ಲಿ ಚಿಂಗಾರಿ ! ಸನ್ನಿ ಸಮೂಹ


ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ಟರ ಕ್ಯಾಂಪ್‌ನಲ್ಲಿ ಹೊಸ ಹುಡುಗಿಯೊಬ್ಬಳು ಮೈ‘ದಾನ’ ಮಾಡಲು ಸಿದ್ಧವಾಗಿ ನಿಂತಿದ್ದಾಳೆ. ಪ್ರಸಿದ್ಧ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಬಿ- ಟೌನ್‌ನಲ್ಲಿ ಮಿಂಚು ಹರಿಸಲು ಬರುತ್ತಿದ್ದಾಳೆ. ಓವರ್ ಟೂ ಸನ್ನಿ....

ಸನ್ನಿ ಲಿಯೋನ್. ಈ ಹೆಸರನ್ನು ಕಾಮನ್ ಮದಿರೆಗೆ ಹೋಲಿಸಿ ನೋಡಿದರೆ ನಶೆ ಇಳಿಯುವುದು ಖಾತ್ರಿ. ಪಡ್ಡೆಗಳ ಪಾಲಿಗಂತೂ ಸನ್ನಿ ಥೇಟ್ ಟಕೀಲಾದಂತಹ ಹಾಟ್ ಡ್ರಿಂಕ್. ಟೋಟಲಿ ಸನ್ನಿ ಲಿಯೋನ್ ಸೀನಿಯರ್ ಸಿಟಿಜನ್‌ನಿಂದ ಹಿಡಿದು ಪಡ್ಡೆ ಹುಡುಗರವರೆಗೂ ಮೈಯಲ್ಲಿ ಬೆಂಕಿ ಹತ್ತಿಸಿ ಬಿಡುವ ಚಿಂಗಾರಿ ಹುಡುಗಿ ! ಇಷ್ಟೆಲ್ಲ ಮಾತುಗಳ ನಡುವೆನೂ ಸನ್ನಿಯ ಇಮೇಜ್ ಕಣ್ಣ ಮುಂದೆ ಬಂದು ನಿಲ್ಲೋದಿಲ್ಲ. ಶಾರ್ಟ್ ಕಟ್ ಅನ್ಸರ್‌ನಲ್ಲಿ ಹೇಳಿ ಬಿಡೋದಾದರೆ ಸನ್ನಿ ನೀಲಿ ಚಿತ್ರಗಳ ರಾಣಿ.
ಸನ್ನಿ ಲಿಯೋನ್‌ಳ ನೀಲಿ ಚಿತ್ರಗಳು ಈಗಲೂ ಟಾಪ್ ರೇಟಿಂಗ್ ಪಟ್ಟಿಯಲ್ಲಿ ಬಂದು ನಿಲ್ಲುತ್ತದೆ. ಸನ್ನಿಯ ದೇಹ ದಂಡನೆಯ ಚಿತ್ರಗಳು ಪಡ್ಡೆ ಹೈಕಳ ಮೊಬೈಲ್‌ನಲ್ಲಿ ಈಗಲೂ ಜೋಪಾನವಾಗಿ ಕೂತು ಬಿಟ್ಟಿವೆ. ಸನ್ನಿ ಎಂದರೆ ಟೋಟಲಿ ಬೆಂಕಿ. ತಾನು ಉರಿದು ಉಳಿದರವಲ್ಲೂ ಬಿಸಿ ಹುಟ್ಟಿಸಿಬಿಡುವ ಸೌಂದರ್ಯವಂತೆ. ಇಂತಹ ಸನ್ನಿ ಲಿಯೋನ್ ಖಾಸಗಿ ಚಾನೆಲ್‌ನ ರಿಯಾಲಿಟಿ ಶೋವಿನಲ್ಲಿ ಸ್ಪರ್ದಿಸುತ್ತಿದ್ದಾಳೆ ಎಂದು ಗೊತ್ತಾದಾಗ ರಿಯಾಲಿಟಿ ಶೋವಿನ ಟಿಆರ್‌ಪಿ ರೇಟ್ ಏಕ್‌ದಂ ಏರಿಕೆ ಕಂಡಿತ್ತು.
ನಡುರಾತ್ರಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋವಿನಲ್ಲಿ ಬರೀ ಸನ್ನಿಯ ಮಜಬೂತ್ ದೃಶ್ಯಗಳೇ ಹೆಚ್ಚಾಗಿದೆ ಎಂದುಕೊಂಡು ಸೀನಿಯರ್ ಸಿಟಿಜನ್ ರಾತ್ರಿ ಟಿವಿ ನೋಡುವ ಚಾಳಿ ಬೆಳೆಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ಹೊರ ಬಂದಿತ್ತು. ಇಂತಹ ಸನ್ನಿ ಲಿಯೋನ್ ಸಿನ್ಮಾಕ್ಕೆ ಬಂದು ನಿಂತರೆ ಹೇಗೆ ಮಾರಾಯ್ರೆ ಎಂದುಕೊಳ್ಳುವಷ್ಟರಲ್ಲಿಯೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಸನ್ನಿಗೆ ಕಾಳು ಹಾಕಿದ್ದಾರೆ. ತಮ್ಮ ಮುಂದಿನ ಚಿತ್ರ ‘ಜಿಸ್ಮ್-೨’ಗಾಗಿ ಸನ್ನಿಯನ್ನು ಕರೆ ತರುವ ಮಾತುಗಳು ಭರ್ಜರಿಯಾಗಿ ನಡೆಯುತ್ತಿದೆ.
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಬಾಲಿವುಡ್ ಸಿನ್ಮಾ ನಗರಿಗೆ ಹೊಸ ಹುಡುಗಿಯರನ್ನು ಕರೆ ತರುವುದರಲ್ಲಿ ಮುಂಚೂಣಿಯಲ್ಲಿರುವ ನಿರ್ದೇಶಕ. ಈ ಹಿಂದೆ ಮರ್ಡರ್‌ಗಾಗಿ ಮಲ್ಲಿಕಾ ಶೆರವಾತ್ ಎನ್ನುವ ಐಟಂ ಬಾಲೆಯನ್ನು ಕರೆ ತಂದಿದ್ದರು. ಅದೇ ಮರ್ಡರ್-೨ ಚಿತ್ರಕ್ಕಾಗಿ ಶ್ರೀಲಂಕಾದ ಹುಡುಗಿ ಜಾಕ್ವೆಲಿನ್ ಪೆರ್ನಾಂಡೀಸ್‌ರನ್ನು ಕರೆ ತಂದಿದ್ದರು. ಅದೇ ‘ಜಿಸ್ಮ್ ’ಚಿತ್ರಕ್ಕೆ ಬಿಪಾಶಾ ಬಸು ಅವರನ್ನು ಕರೆ ತಂದಿದ್ದ ಮಹೇಶ್ ಭಟ್ ‘ಜಿಸ್ಮ್-೨’ಗೆ ಸನ್ನಿ ಲಿಯೋನ್‌ರನ್ನು ಕರೆ ತರುವ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ಮಹೇಶ್ ಭಟ್ ಹೊಸ ಪೀಳಿಗೆಯ ಹುಡುಗಿಯರ ಹುಡುಕಾಡ ಇನ್ನೂ ಕೂಡ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳನ್ನು ಜೀವಂತ ಇರಿಸಿಕೊಂಡಿದ್ದಾರೆ.
ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಹಂಬಲ ಇಟ್ಟುಕೊಂಡಿರುವ ಸನ್ನಿ ಲಿಯೋನ್‌ರನ್ನು ಕರೆ ತರುವ ಪ್ರಯತ್ನ ಈ ಮೊದಲು ಮಹೇಶ್ ಭಟ್ ಮಾಡಿದ್ದರು. ೨೦೦೫ರಲ್ಲಿ ಬಾಲಿವುಡ್‌ನಲ್ಲಿ ಬಂದ ‘ಕಲಿಯುಗ್’ ಚಿತ್ರಕ್ಕಾಗಿ ಸನ್ನಿ ಲಿಯೋನ್ ಜತೆ ಮಾತುಕತೆ ನಡೆದಿತ್ತು. ಆದರೆ ಡೇಟ್ಸ್‌ಗಳ ಕೊರತೆಯಿಂದ ಸನ್ನಿ ಲಿಯೋನ್ ಈ ಚಿತ್ರವನ್ನು ತಿರಸ್ಕರಿಸಿದ್ದರು. ಆದರೆ ೬ ವರ್ಷಗಳ ನಂತರ ಇದೇ ಮಹೇಶ್ ಭಟ್ ಸನ್ನಿ ಲಿಯೋನ್‌ರನ್ನು ಕರೆ ತರುವ ಪ್ರಯತ್ನದಲ್ಲಿ ಜಯಕಂಡಿದ್ದಾರೆ.
ಸನ್ನಿಯನ್ನು ಬರೀ ದೇಹಸಿರಿಗಾಗಿ ‘ಜಿಸ್ಮ್-೨’ಗಾಗಿ ಆಯ್ಕೆ ಮಾಡುತ್ತಿಲ್ಲ. ಸನ್ನಿಯ ಐಕ್ಯೂ ಬಹಳ ಚೆನ್ನಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಇಂತಹ ನಾಯಕಿಯರು ಇಂದಿನ ಬಾಲಿವುಡ್ ಸಿನ್ಮಾಗಳಿಗೆ ಅವಶ್ಯಕವಾಗಿ ಬೇಕಾಗಿದೆ ಎನ್ನೋದು ನಿರ್ದೇಶಕ ಮಹೇಶ್ ಭಟ್ಟರ ಮಾತು. ಅಂದಹಾಗೆ ‘ಜಿಸ್ಮ್-೨’ನಲ್ಲಿ ನಾಯಕನಾಗಿ ಮಹೇಶ್ ಭಟ್ಟರ ಪುತ್ರ ರಾಹುಲ್ ಭಟ್ ಅಭಿನಯಿಸುವ ಸುದ್ದಿಯಿತ್ತು. ಆದರೆ ನಿರ್ದೇಶಕರು ಹೇಳುವಂತೆ ಈ ಬಾರಿ ರಾಹುಲ್‌ನನ್ನು ಚಿತ್ರರಂಗಕ್ಕೆ ಇಳಿಸುತ್ತಿಲ್ಲ. ಹೊಸ ನಾಯಕನ ಹುಡುಕಾಟ ಆರಂಭ ಮಾಡಿದ್ದಾರಂತೆ. ಟೋಟಲಿ ‘ಜಿಸ್ಮ್-೨’ ಸಿನ್ಮಾ ನಿರ್ಮಾಣವಾಗುವ ಮೊದಲೇ ಸನ್ನಿ ಲಿಯೋನ್ ಬೆಂಕಿ ಹತ್ತಿಸಿದ್ದು ನಿಜ. ‘ಜಿಸ್ಮ್-೨’ಬಂದ ನಂತರವೇ ಈ ಬೆಂಕಿ ನಂದೀತು ಅಂತಾ ಕಾಣಿಸುತ್ತೆ ಅಲ್ವಾ..?

Thursday, November 17, 2011

ಪ್ರಾದೇಶಿಕ ಭಾಷೆಗಳ ಚಿತ್ರ ಕನ್ನಡಕ್ಕೆ ಡಬ್ ಆಗಬೇಕು: ಸುಮನ್





ಮೂಲ್ಕಿ- ಹೆಜಮಾಡಿಯ ಹುಡುಗನೊಬ್ಬ ತಮಿಳು, ತೆಲುಗು, ಕನ್ನಡ, ಮಲಯಾಳಂ ಚಿತ್ರರಂಗದ ಘಟಾನುಘಟಿ ನಟರಿಗೆ ಪೈಪೋಟಿ ಕೊಟ್ಟು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಸುಮನ್ ಮಂಗಳೂರಿನ ವಿಕ ಕಚೇರಿಯಲ್ಲಿ ಬಂದು ಒಂದು ತಾಸುಗಳ ಕಾಲ ಹರಟಿದರು.


ಸ್ಟೀವನ್ ರೇಗೊ, ದಾರಂದಕುಕ್ಕು
ವಿಕ ಸುದ್ದಿಲೋಕ ಮಂಗಳೂರು
ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಎನ್ನುವುದು ಸರಿ. ಆದರೆ ರಾಜ್ಯದೊಳಗಿರುವ ಪ್ರಾದೇಶಿಕ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದರೆ ಪ್ರಾದೇಶಿಕ ಚಿತ್ರಗಳು ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದವರು ಪಂಚಭಾಷೆ ಸಿನಿಮಾ ತಾರೆ ಸುಮನ್ ತಲ್ವಾರ್ ಅವರು.
ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ಪ್ರಕಟವಾದ ‘ಲವರ್ ಬಾಯ್ ಸುಮನ್ ಮತ್ತೆ ಟಾಲಿವುಡ್‌ಗೆ ಎಂಟ್ರಿ’ ಎನ್ನುವ ವಿಶೇಷ ವರದಿಯನ್ನು ಗಮನಿಸಿದ ಸುಮನ್ ನೂರಾರು ಕಿ.ಮೀ ದೂರದಲ್ಲಿರುವ ಹೈದರಾಬಾದ್‌ನಿಂದ ತಮ್ಮ ಬ್ಯುಸಿ ಶೆಡ್ಯುಲ್‌ಗಳ ನಡುವೆ ಮಂಗಳೂರಿನ ವಿಕ ಕಚೇರಿಗೆ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿದರು. ಪತ್ರಿಕೆ ಕಟ್ಟುವ ಕೆಲಸದಲ್ಲಿ ತಲ್ಲೀನರಾಗಿದ್ದ ಸಿಬ್ಬಂದಿಗಳ ಜತೆಯಲ್ಲಿ ಬರೋಬರಿ ಒಂದು ತಾಸಿನ ಕಾಲ ಸಿನಿಮಾ, ಭಾಷೆ, ಬದುಕು, ಕರಾವಳಿಯಂತಹ ನಾನಾ ಟಾಪಿಕ್‌ಗಳ ಮೇಲೆ ಸಮನ್ ಮಾತಿಗೆ ಕೂತಿದ್ದರು.
ಇಡೀ ಭಾರತದಲ್ಲಿ ಕರ್ನಾಟಕ ರಾಜ್ಯ ಸಂಪೂರ್ಣ ಭಿನ್ನ . ಇಲ್ಲಿ ಐದಾರು ಭಾಷೆಗಳಿದ್ದರೂ ನಾವೆಲ್ಲರೂ ಒಂದೇ ಎನ್ನುವ ಏಕತೆಯ ಮಂತ್ರವಿದೆ. ಆದರೆ ಉಳಿದ ರಾಜ್ಯಗಳಲ್ಲಿ ಒಂದೇ ಭಾಷೆ, ಭೂಮಿಗಾಗಿ ದಿನನಿತ್ಯ ಹೊಡೆದಾಟ ನಡೆಯುತ್ತದೆ. ಆಂಧ್ರ ಪ್ರದೇಶದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುವ ಹೋರಾಟ ದಿನಲೂ ಕಣ್ಣಾರೆ ನೋಡಿದ್ದೇನೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಡಬ್ ಮಾಡಿದರೆ ಇಲ್ಲಿನ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಬರುತ್ತದೆ ಎನ್ನುವುದು ಸುಮನ್ ಅವರ ಅಭಿಪ್ರಾಯ.
ತುಳು ಸಿನಿಮಾಕ್ಕೆ ರೆಡಿ:
ತುಳು ಸಿನಿಮಾಗಳು ಇತ್ತೀಚೆಗೆ ಹೆಚ್ಚಾಗಿ ಥಿಯೇಟರ್‌ಗಳಿಗೆ ಬರುತ್ತಿದೆ. ಆದರೆ ಗುಣಮಟ್ಟದ ಚಿತ್ರಗಳು ಇಲ್ಲಿ ಮೂಡಿ ಬರಬೇಕು. ಈಗ ನೆರೆಯ ರಾಜ್ಯಗಳ ಸಿನಿಮಾಗಳು ಇಲ್ಲಿನ ಥಿಯೇಟರ್‌ಗಳಿಗೆ ದಾಳಿ ಮಾಡುತ್ತಿರುವುದರಿಂದ ತುಳು ಚಿತ್ರಗಳ ಗುಣಮಟ್ಟ ಬಹಳಷ್ಟು ಸುಧಾರಣೆಯಾಗಬೇಕಾದ ಅವಶ್ಯಕತೆ ಇದೆ. ಸ್ಪರ್ಧೆ ಎನ್ನುವ ವಿಚಾರ ಬರೀ ತುಳು ಸಿನಿಮಾಗಳಿಗೆ ಮಾತ್ರವಲ್ಲ ಎಲ್ಲ ರಂಗಕ್ಕೂ ಮುಟ್ಟಿದೆ. ದೊಡ್ಡ ದೊಡ್ಡ ಬಜೆಟ್‌ಗಳ ಚಿತ್ರಗಳು ತುಳುವಿನಲ್ಲಿ ಬರದೇ ಹೋದರೂ ಚಿಂತಿಲ್ಲ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತುಳುವಿನ ಚಿತ್ರಗಳು ಸದ್ದು ಮಾಡಬೇಕು ಎನ್ನುವುದು ಸುಮನ್‌ರ ಮಾತು.
ತುಳು ಚಿತ್ರದಲ್ಲಿ ನಟಿಸಲು ನಾನು ರೆಡಿ. ಸಂಭಾವನೆ ಕೊಡದೇ ಇದ್ದ್ರೂ ಬೇಸರವಿಲ್ಲ. ಅವರು ಬರೀ ನನ್ನ ಸಿಬ್ಬಂದಿಗಳ ಖರ್ಚು ನೋಡಿದರೆ ಸಾಕು. ಆದರೆ ಚಿತ್ರದಲ್ಲಿ ಒಳ್ಳೆಯ ಸಂದೇಶ ಇರಬೇಕು. ಸಮಾಜದ ಕುರಿತು ಜಾಗೃತಿ ಮೂಡಿಸುವಂತಿರಬೇಕು. ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವಾಗಿದ್ದೂ, ಕಡಿಮೆ ಖರ್ಚಿನಲ್ಲಿ ರಾಷ್ಟ್ರಮಟ್ಟದ ಮನ್ನಣೆ ಸಿಗುವಂತಾಗಬೇಕು. ಅಂತಹ ಚಿತ್ರಗಳಿಗೆ ನಾನು ಖಂಡಿತವಾಗಿಯೂ ಡೇಟ್ಸ್ ಕೊಡುತ್ತೇನೆ ಎನ್ನುತ್ತಾರೆ ಸುಮನ್.
ಸಿನ್ಮಾ ಬದುಕು ಕೊಟ್ಟಿದೆ:
ಕಳೆದ ೩೫ ವರ್ಷಗಳಿಂದ ಸಿನ್ಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲೂ ನಟಿಸಿ ಬಂದಿದ್ದೇನೆ. ಸಿನಿಮಾದಲ್ಲಿ ನಟಿಸುವುದು ಬಿಟ್ಟರೆ ನನಗೆ ಬೇರೆ ಕೆಲಸ ಗೊತ್ತಿಲ್ಲ. ಬಣ್ಣದ ಬದುಕು ನನಗೆ ಬಹಳಷ್ಟು ಕೊಟ್ಟಿದೆ ಹಾಗೂ ಬಹಳಷ್ಟು ಕಿತ್ತುಕೊಂಡಿದೆ. ಆದರೂ ಈ ಏರುಪೇರಿನ ಬದುಕಿನಲ್ಲೂ ನನಗೆ ಬಣ್ಣದ ಲೋಕ ಇಷ್ಟವಾಗಿದೆ ಎನ್ನುವ ಸುಮನ್ ಚಂದ್ರಬಾಬು ನಾಯ್ಡು ಅವರ ಪಕ್ಷದ ಸಿದ್ದಾಂತಗಳು ಬಹಳ ಇಷ್ಟವಾಯಿತು.ಅದಕ್ಕಾಗಿ ಅವರಿಗೆ ಬೆಂಬಲ ಸೂಚಿಸಿದೆ. ಆದರೆ ರಾಜಕಾರಣಕ್ಕಂತೂ ಇಳಿಯುವ ಮಾತು ಸಾಧ್ಯಕ್ಕೆ ಇಲ್ಲ ಎನ್ನುತ್ತಾರೆ.
ತೆಲುಗಿನಲ್ಲಿ ನಾಯಕನಾಗಿ ಇತ್ತೀಚೆಗೆ ಸಿನ್ಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಮರುಜನ್ಮ ಕೊಟ್ಟ ಸಿನಿಮಾ. ಇಡೀ ಸಿನ್ಮಾ ಹಿಸ್ಟರಿಯಲ್ಲಿ ನಾಯಕನಾಗಿ ಅಭಿನಯಿಸಿ ಮತ್ತೆ ವಿಲನ್ ಗೆಟಪ್‌ಗೆ ತಿರುಗಿ ಈಗ ಮತ್ತೆ ನಾಯಕನ ಸ್ಥಾನಕ್ಕೆ ಬರುವುದು ಸುಲಭವಲ್ಲ. ಅದರಲ್ಲೂ ಕರಾವಳಿಯ ಹುಡುಗನೊಬ್ಬ ಬೇರೆ ಸಿನ್ಮಾ ಇಂಡಸ್ಟ್ರಿಯಲ್ಲಿ ಈ ರೀತಿ ಸಾಧನೆಯ ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಬಣ್ಣದ ಜೀವನದಲ್ಲಿ ಇದೆಲ್ಲವೂ ಸಾಧ್ಯವಾಗಿದೆ. ಇದೆಲ್ಲವೂ ಅಭಿಮಾನಿಗಳ ದಯೆ ಹಾಗೂ ದೇವರ ಮೇಲೆ ನಾನಿಟ್ಟ ನಂಬಿಕೆ ಎನ್ನುವುದು ಸುಮನ್‌ರ ಅಂತಾರಾಳದ ಮಾತು.
ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಹತ್ತಾರು ಚಿತ್ರಗಳು ಕೈಯಲ್ಲಿರುವುದರಿಂದ ನನಗೆ ಟೈಮ್ ಸಿಕ್ಕೋದು ಬಹಳ ಕಡಿಮೆ. ನಟನೆ ಜತೆಯಲ್ಲಿ ದೂರ ದೂರದ ಊರುಗಳಿಗೆ ಪ್ರವಾಸ ಮಾಡುವುದರಲ್ಲಿಯೇ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಆದರೂ ಕರಾವಳಿಗೆ ವರ್ಷದಲ್ಲಿ ಒಂದೆರಡು ಬಾರಿ ಭೇಟಿ ಕೊಡುತ್ತೇನೆ. ಇಲ್ಲಿನ ದೇವಸ್ಥಾನ, ನಾಗಬನಗಳಿಗೆ ಭೇಟಿ ಕೊಡದೇ ಹೋದರೆ ಮನಸ್ಸಿನಲ್ಲಿ ಏನೋ ಕಳೆದುಕೊಂಡ ಅನುಭವವಾಗುತ್ತದೆ ಎನ್ನುವ ಮಾತಿನ ಮೂಲಕ ಸುಮನ್ ಚಿಟ್‌ಚಾಟ್‌ಗೆ ಮುಕ್ತಾಯ ಗೀತೆ ಹಾಡಿದರು.

Sunday, November 13, 2011

ಊ..ಲಾ...ಲಾ ‘ಲಹರಿ’


ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ಬಪ್ಪಿ ಲಹರಿಯ ‘ಊ..ಲಾ..ಲಾ’ ಹಾಡು ಈ ವರ್ಷದ ಮೋಸ್ಟ್ ಪಾಪ್ಯುಲರ್ ಹಾಡುಗಳ ಸಾಲಿನಲ್ಲಿ ಸೇರಿಕೊಂಡಿರೋದು ಬಪ್ಪಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಒಂದು ಜೀವಂತ ಪುರಾವೆ.

ಬಪ್ಪಿ ಲಹರಿ ಎಂದರೆ ಥಟ್ ಅಂತಾ.. ಚಿನ್ನದ ಅಂಗಡಿಯ ನೆನಪು ಬಂದು ಬಿಡುತ್ತದೆ. ‘ವಿದ್ ಔಟ್ ಗೋಲ್ಡ್ ಬಪ್ಪಿ ನೋ ಮೋರ್’ ಎನ್ನುವ ಮಾತು ಇಡೀ ಸಿನ್ಮಾ ನಗರಿಗೆ ಗೊತ್ತಿದೆ. ಬಪ್ಪಿಯ ಕೈಯಲ್ಲಿರುವ ಹತ್ತು ಬೆರಳಿಗೂ ಚಿನ್ನದ ಉಂಗುರ, ಕುತ್ತಿಗೆ ತುಂಬಾ ಹಾರದಂತೆ ನೇತಾಡುತ್ತಿರುವ ಚಿನ್ನದ ಸರಗಳು ಎಲ್ಲರನ್ನು ಕೂಲ್ ಮಾಡಲು ಸನ್ ಗ್ಲಾಸ್, ತಲೆ ತುಂಬಾ ಉದ್ದ ಕೂದಲು, ೩೨ ಹಲ್ಲುಗಳು ಈಗಲೂ ಇದೆ ಎನ್ನುವಂತಹ ಒಂದು ಸುಂದರ ನಗು. ಕುರ್ತಾ, ಶೇರ್‌ವಾನಿಯೊಳಗೆ ದಡೂತಿ ದೇಹ ಎಲ್ಲವೂ ಬಪ್ಪಿ ಲಹರಿಯ ಶಾರ್ಟ್ ಇಂಟರ್‌ಡಕ್ಷನ್ ಮಾರ್ಕ್‌ಗಳು.
ಬಪ್ಪಿ ಲಹರಿ ಬಹಳ ಜನರಿಗೆ ಗೊತ್ತಿರುವಂತೆ ಸಿಂಗರ್, ಕಂಪೋಸರ್ ಆಂಡ್ ಆಕ್ಟರ್. ಮೂರರ ಹರೆಯದಲ್ಲಿ ತಬ್ಲಾದ ಜತೆ ಗುದ್ದಾಡಿಕೊಂಡು ಒಳ್ಳೆಯ ಹೆಸರು ಪಡೆದ ಬಪ್ಪಿಯ ಹೆತ್ತವರು ಕೂಡ ಸಂಗೀತದ ಆರಾಧಕರು. ಬರೀ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆಯ ಹೆಸರು ಗಳಿಸಬೇಕೆನ್ನುವುದು ಬಪ್ಪಿ ಬಾಲ್ಯದಿಂದಲೂ ಬೆಳೆಸಿಕೊಂಡು ಬಂದ ಕನಸ್ಸಾಗಿತ್ತು. ಬಪ್ಪಿಯ ತಂದೆಗೆ ಸಿನಿಮಾ ನಗರಿಯಲ್ಲಿ ಒಳ್ಳೆಯ ಹೆಸರಿತ್ತು. ಅದೇ ಬಪ್ಪಿಯ ಸಿನ್ಮಾ ಎಂಟ್ರಿಗೆ ಗ್ರೀನ್ ಕಾರ್ಡ್ ಆಯಿತು.
ಬಪ್ಪಿಯ ಸಂಗೀತವೇ ವಿಚಿತ್ರ ಮಾರಾಯ್ರೆ. ಪಶ್ವಿಮ, ಪೂರ್ವ ದೇಶಗಳ ಸಂಗೀತದ ಪ್ರಭಾವದ ಜತೆಯಲ್ಲಿ ದೇಸಿಯ ಬೀಟ್‌ಗಳನ್ನು ಕೊಟ್ಟು ಕೇಳುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುವ ಸಾಮರ್ಥ್ಯ ಬಪ್ಪಿಯ ಸಂಗೀತ ಹೊಂದಿದೆ. ೧೯ರ ಹರೆಯದಲ್ಲಿ ಬಾಲಿವುಡ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಬಪ್ಪಿಯ ಮೊದಲ ಚಿತ್ರ ಬಂಗಾಳಿ ಎರಡನೇ ಚಿತ್ರ ಹಿಂದಿಯಲ್ಲಿ ಬಂತು. ಆದರೆ ೧೯೭೫ರಲ್ಲಿ ಹಿಂದಿಯಲ್ಲಿ ಬಂದ ತಹೀರ್ ಹುಸೇನ್‌ರ ‘ಝಕ್ಮಿ’ಯಲ್ಲಿ ಬಪ್ಪಿ ಯ ಕಂಪೋಸಿಂಗ್ ಹಾಗೂ ಹಿನ್ನೆಲೆ ಗಾಯನ ಏಕ್‌ದಂ ಅವರಿಗೆ ಸ್ಟಾರ್ ಗಿರಿ ಕಿರೀಟ ಕೊಟ್ಟಿತ್ತು.
ಕ್ರಾಂತಿಕಾರ ಬಪ್ಪಿ:
ಬಪ್ಪಿ ಸಿನ್ಮಾ ಸಂಗೀತದಲ್ಲೊಂದು ಹೊಸ ಕ್ರಾಂತಿಗೆ ನಾಂದಿ ಹಾಡಿದರು. ‘ಚಲ್ತೇ ಚಲ್ತೇ’ ಹಾಗೂ ‘ಸುರಕ್ಷಾ’ ಚಿತ್ರಗಳು ಬಪ್ಪಿ ಸಂಗೀತದಿಂದ ಸೂಪರ್ ಹಿಟ್ಟ ಅನ್ನಿಸಿಕೊಂಡಿತು. ಮತ್ತೇ ಬಪ್ಪಿ ತಿರುಗಿ ನೋಡುವ ತಪ್ಪು ಮಾಡಲಿಲ್ಲ. ಅತೀ ಕಡಿಮೆ ಟೈಮ್‌ನಲ್ಲಿ ಬಪ್ಪಿ ಯುವಜನರ ಆರಾಧಕರಾಗಿ ಒಪ್ಪಿಕೊಂಡರು. ೧೯೮೦ರಲ್ಲಿ ಹಿಂದಿಯಲ್ಲಿ ಬಂದ ‘ಡಿಸ್ಕೋ ಡ್ಯಾನ್ಸರ್’ ಚಿತ್ರದ ‘ಐ ಯ್ಯಾಮ್ ಎ ಡಿಸ್ಕೋ ಡ್ಯಾನ್ಸರ್’ ಬಪ್ಪಿಯ ಮೋಸ್ಟ್ ಡಿಮ್ಯಾಂಡ್ ಹಾಡಾಗಿ ಹೋಯಿತು. ಈ ಬಳಿಕ ಬಪ್ಪಿಯನ್ನು ‘ಡಿಸ್ಕೋ ಕಿಂಗ್’ ಎಂದೇ ಬಾಲಿವುಡ್ ಮಂದಿಗಳು ಕರೆಯಲು ಆರಂಭ ಮಾಡಿದರು.
ಮಹಮ್ಮದ್ ರಫಿ ಹಾಗೂ ಕಿಶೋರ್ ಕುಮಾರ್‌ಗಳ ಜತೆಯಲ್ಲಿ ಬಪ್ಪಿ ಡ್ಯುಯೆಟ್ ಸಾಂಗ್‌ಗಳನ್ನು ಹಾಡಿಸಿದರು. ಆಶಾ ಬೊಂಸ್ಲೆಂ, ಲತಾ ಮಂಗೇಶ್ಕರ್ ಸೇರಿದಂತೆ ಬಪ್ಪಿ ಕೆಲಸ ಮಾಡಿದರು. ಅಲೀಶಾ ಚಿನೋಯ್, ಉಷಾ ಉತ್ತುಪ್‌ರಂತಹ ಗಾಯಕರನ್ನು ಬಪ್ಪಿ ತಮ್ಮ ಗರಡಿಯಲ್ಲಿ ತಯಾರಿಸಿ ಬಾಲಿವುಡ್‌ಗೆ ಬಿಟ್ಟರು. ೧೯೯೦ರಲ್ಲಿ ಪ್ರಕಾಶ್ ಮೆಹ್ರಾ ನಿರ್ದೇಶನದ ‘ದಲಾಲ್’ಚಿತ್ರದ ‘ಗುಟುರ್ ಗುಟುರ್’ ಮಾಸ್ ಹಿಟ್ ಆಗಿ ಬಪ್ಪಿಗೆ ಹೊಸ ಇಮೇಜ್ ಕೊಟ್ಟಿತು.‘ಬಪ್ಪಿ ಮ್ಯಾಜಿಕ್- ದೀ ಅಸಲಿ ಬಾಪ್ ಮಿಕ್ಸ್’ ಬಪ್ಪಿಯ ಆಲ್ಬಂ ಮಸಾಲೆ ದೋಸೆಯಂತೆ ಖರ್ಚಾಗಿ ಹೋಯಿತು.
ಅಂದಹಾಗೆ ಬಪ್ಪಿಯ ಸಂಗೀತದ ಪಯಣ ಈಗಲೂ ಮುಂದುವರಿದೆ. ಇಂದಿಗೂ ಬಪ್ಪಿಯ ಸಂಗೀತ ಎಂದರೆ ಪ್ರೀತಿಸುವ, ಕುಣಿಯುವ, ಆರಾದಿಸುವ ಅಭಿಮಾನಿಗಳಿದ್ದಾರೆ. ಬಪ್ಪಿ ಕೂಡ ಇಂದಿನ ಯುವ ಪೀಳಿಗೆಯ ನಾಡಿಮಿಡಿತವನ್ನು ಹಿಡಿದುಕೊಂಡೇ ಹಾಡುತ್ತಿದ್ದಾರೆ ಎನ್ನೋದೇ ಖುಷಿಯ ವಿಷ್ಯಾ. ದಕ್ಷಿಣ ಭಾರತದ ಖ್ಯಾತ ಐಟಂ ಡ್ಯಾನ್ಸರ್ ಸಿಲ್ಕ್‌ಸ್ಮಿತಾ ಅವರ ಕತೆಯನ್ನು ಇಟ್ಟುಕೊಂಡು ಹೊರಬರುತ್ತಿರುವ ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ಬಪ್ಪಿಯ ‘ಊ ..ಲಾ..ಲಾ’ ಹಾಡು ಈ ವರ್ಷದ ಮೋಸ್ಟ್ ಪಾಪ್ಯುಲರ್ ಹಾಡುಗಳ ಸಾಲಿನಲ್ಲಿ ಸೇರಿಕೊಂಡಿರೋದು ಬಪ್ಪಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಒಂದು ಜೀವಂತ ಪುರಾವೆ ಅಲ್ವಾ..?

ಬಪ್ಪಿಯ ಚಿನ್ನದ ಮೋಹ
ಬಪ್ಪಿ ಲಹರಿಯ ಬಾಲ್ಯದ ಬದುಕು ಅಷ್ಟೊಂದು ಸುಂದರವಾಗಿರಲಿಲ್ಲ. ಕಡುಬಡತನದ ನಡುವೆ ಬಪ್ಪಿಯ ಬಾಲ್ಯ ಅರಳಿತ್ತು. ಒಂದು ಹೊತ್ತಿನ ಊಟಕ್ಕೂ ಬಪ್ಪಿ ಪರದಾಡಿದ್ದಾರೆ ಎನ್ನುವ ಮಾತನ್ನು ಬಪ್ಪಿ ತನ್ನ ಸ್ನೇಹಿತರ ವಲಯದಲ್ಲಿ ಹೇಳಿಕೊಳ್ಳುತ್ತಿದ್ದರಂತೆ. ಆದರೆ ಬಪ್ಪಿ ಸಂಗೀತ ಕ್ಷೇತ್ರದಲ್ಲಿ ನಿಧಾನವಾಗಿ ಬೆಳೆಯುತ್ತಾ ಹೋದಾಗ ಮನೆಯ ಪರಿಸ್ಥಿತಿ ಚೇತರಿಕೆ ಕಂಡಿತ್ತು. ಬದುಕಿನ ಮಟ್ಟ ಒಂದು ಹಂತಕ್ಕೆ ನಿಲ್ಲುವ ಹೊತ್ತಿಗೆ ಚಿನ್ನದ ಆಭರಣಗಳ ಮೇಲೆ ವಿಶೇಷ ಮೋಹ ಇಟ್ಟುಕೊಂಡಿದ್ದ ಅವರ ತಾಯಿ ಬಪ್ಪಿಯನ್ನು ಬಿಟ್ಟು ಹೋದರಂತೆ..! ತಾಯಿ ನೆನಪಿಗಾಗಿ ಬಪ್ಪಿ ಮೈ ತುಂಬಾ ಚಿನ್ನದ ಆಭರಣಗಳನ್ನು ಇಟ್ಟುಕೊಂಡು ಈಗಲೂ ಓಡಾಡುತ್ತಿದ್ದಾರೆ. ಇದೇ ಚಿನ್ನದ ಗಣಿ ಬಪ್ಪಿಯ ಚಿನ್ನದ ಸ್ಟೋರಿ.

ಕಲಿಯುಗದ ಕರ್ಣ
ದಾನ ಧರ್ಮದಲ್ಲೂ ಬಪ್ಪಿ ಎತ್ತಿದ ಕೈ ಖಾಸಗಿ ಚಾನೆಲ್‌ವೊಂದು ಸಂಗೀತ ರಿಯಾಲಿಟಿ ಶೋವನ್ನು ನಡೆಸುತ್ತಿದ್ದಾಗ ಬಪ್ಪಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಯಾವ ವಿದ್ಯಾರ್ಥಿ ಉತ್ತಮವಾಗಿ ಹಾಡಿದನೋ ಅವರಿಗೆ ಬಪ್ಪಿ ಬರೀ ಶಹಬ್ಬಾಸ್ ಹೇಳುವ ಬದಲಾಗಿ ತನ್ನ ಕುತ್ತಿಗೆಯಲ್ಲಿರುವ ಚಿನ್ನದ ಸರಗಳನ್ನೇ ಕಿತ್ತು ಕೊಡುತ್ತಿದ್ದರು. ಹೀಗೆ ಕೊಡುತ್ತಾ ಚಿನ್ನದ ಸರಗಳು ಮುಗಿದು ಹೋಯಿತೋ.. ಅಲ್ಲಿಂದ ಕೈಯಲ್ಲಿದ್ದ ಉಂಗುರಗಳನ್ನು ಕೊಡಲು ಆರಂಭ ಮಾಡಿದರು. ಇದು ಬಪ್ಪಿಯ ದಾನ ಧರ್ಮಗಳಿಗೆ ಒಂದು ಸ್ಯಾಂಪಲ್ ಅಷ್ಟೇ..

Friday, November 11, 2011

ಬದಲಾವಣೆ ನಿಮ್ಮಿಂದ ಸಾಧ್ಯ


ಈ ಕೆಳಗಿನ ಲೇಖನಗಳು ವಿಜಯನೆಕ್ಸ್ಟ್ ಪತ್ರಿಕೆಯಲ್ಲಿ ೧೧.೧೧.೨೦೧೧ ರಂದು ಪ್ರಕಟವಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಮೂರು ವಿಶೇಷ ವ್ಯಕ್ತಿಗಳ ಬಾಲ್ಯದ ಗೆಖೆಯರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ಪತ್ರ ಬರೆದುಕೊಂಡಿದ್ದಾರೆ.


ಪ್ರೀತಿಯ ಸದಾ,
ರಾಜ್ಯದ ಮುಖ್ಯ ಮಂತ್ರಿಯಾಗಿ ಗೆದ್ದುಗೆ ಹಿಡಿದುಕೂತಾಗ ನನಗೆ ಆದ ಸಂತಸಕ್ಕೆ ಪಾರವೇ ಇಲ್ಲ. ಪುತ್ತೂರಿನಲ್ಲಿದ್ದ ಬಹುತೇಕ ನಮ್ಮಿಬ್ಬರ ಸ್ನೇಹಿತ ವಲಯಕ್ಕೆ ಪೋನ್ ಮಾಡಿ ವಿಚಾರ ತಿಳಿಸಿದೆ. ಪುತ್ತೂರಿನಲ್ಲಿರುವ ನಮ್ಮಿಬ್ಬರ ಆರಾಧ್ಯ ದೇವರಾದ ಶ್ರೀಮಹಾಲಿಂಗೇಶ್ವರನಿಗೊಂದು ಧನ್ಯವಾದ ಮನದಲ್ಲಿಯೇ ಸಲ್ಲಿಸಿ ಸಂಭ್ರಮ ಪಟ್ಟೆ. ನೀನು ಮುಖ್ಯಮಂತ್ರಿಯಾಗುವ ವಿಚಾರ ಒಂದು ಮಿರಾಕಲ್ ಎನ್ನುವವರು ಇರಬಹುದು. ಆದರೆ ನಾನು ನಿನ್ನನ್ನು ನೂರಕ್ಕೆ ನೂರರಷ್ಟು ನಂಬುತ್ತೇನೆ.
ನಿನ್ನ ಆರ್ಹತೆ, ಪ್ರಾಮಾಣಿಕತೆ, ಕೆಲಸದ ಮೇಲಿರುವ ನಿಷ್ಠೆ, ಎಲ್ಲಕ್ಕೂ ಮುಖ್ಯವಾಗಿ ಜನರ ಕುರಿತಾಗಿ ನಿನ್ನ ಕಾಳಜಿ ಎಲ್ಲವೂ ನನಗೆ ಬಾಲ್ಯದಿಂದಲೇ ಗೊತ್ತಿತ್ತು ಅಲ್ವಾ..? ಒಂದಲ್ಲ ಒಂದು ದಿನ ನೀನು ಮುಂದೆ ಬಂದು ನಿಲ್ಲುತ್ತೀಯಾ ಎನ್ನುವ ಆತ್ಮವಿಶ್ವಾಸ ನಿನ್ನ ಮೇಲೆ ನನಗಿತ್ತು. ಈ ವಿಶ್ವಾಸದ ಮಾತುಗಳು ನಿನಗೊಬ್ಬನಿಗೆ ಹೇಳಿ ಬಿಟ್ಟರೆ ಎಲ್ಲಿ ವಿನಯನಿಗೆ( ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ) ಬೇಸರವಾಗುತ್ತದೋ ಎಂದು ನಾನು ಸುಮ್ಮನಿದ್ದೆ. ವಿನಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ನೀನು ಬಿಜೆಪಿ ಇಬ್ಬರು ನನಗೆ ಚಡ್ಡಿ ದೋಸ್ತ್‌ಗಳು. ಅದರಲ್ಲೂ ಒಬ್ಬನಿಗೆ ಮಾತ್ರ ನಾನು ಬೆಂಬಲ ಕೊಟ್ಟರೆ ಮತ್ತೊಬ್ಬನಿಗೆ ಅನ್ಯಾಯವಾಗಿ ಬಿಡುತ್ತದೆ ಎನ್ನುವ ಮಾತು ನನ್ನೊಳಗೆ ಬಚ್ಚಿಡುವಂತೆ ಮಾಡಿತು.
ಈ ಎಲ್ಲ ಮಾತುಗಳು ಈಗ ಸರಿಯಲ್ಲ ಅನ್ನಿಸಿ ಬಿಡುತ್ತದೆ. ಆದರೆ ನನಗೆ ಈಗಲೂ ನೆನಪಿದೆ ಸದಾ.. ಕೆಯ್ಯೂರಿನ ಸರಕಾರಿ ಶಾಲೆ, ಐದನೇ ಕ್ಲಾಸಿನಲ್ಲಿ ನಾವಿಬ್ಬರೂ ಕೂರುತ್ತಿದ್ದ ಬೆಂಚು, ನನ್ನ ಎಸ್ಜಿಡಿ ಬೈಕ್‌ನಲ್ಲಿ ಮೈಸೂರಿಗೆ ಪ್ರಯಾಣ ಎಲ್ಲವೂ ನಿನ್ನನ್ನು ನೋಡಿದಾಗ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಕೆಯ್ಯೂರಿನಲ್ಲಿ ನಿನ್ನ ಚಿಕ್ಕಪ್ಪ ಚೆನ್ನಪ್ಪ ಮಾಸ್ಟ್ರು ಮನೆಯಿಂದ ಬರುತ್ತಿದ್ದಾಗ ನಿನ್ನ ಸಹಪಾಟಿಗಳಿಗೆ ನಿನ್ನ ಮೇಲೆ ಸೌಜನ್ಯದ ಭಾವನೆ ಇತ್ತು.
ಆದರೆ ಐದನೇ ಕ್ಲಾಸಿನಲ್ಲಿದ್ದಾಗ ನಿನ್ನ ಚುರುಕುಬುದ್ಧಿ, ಪ್ರಾಮಾಣಿಕತೆ, ವಿನಯವಂತಿಕೆ, ಸದಾ ನಗುವ ನಿನ್ನ ಗುಣ ಎಲ್ಲವೂ ನನಗೆ ಬಹಳವಾಗಿ ಹಿಡಿಸಿತ್ತು. ಯಾರ ಮೇಲೂ ಬೇಸರಪಟ್ಟುಕೊಂಡದ್ದು, ಕೂಗಾಡಿದ್ದು ನಾನು ನೋಡಿಯೇ ಇರಲಿಲ್ಲ ಅಲ್ವಾ..? ಈ ಎಲ್ಲ ವಿಚಾರಗಳಿಂದ ನೀನು ತುಂಬಾನೇ ಭಿನ್ನವಾಗಿ ನಿಲ್ಲುತ್ತಿದ್ದಿ ನಿನ್ನ ಸ್ನೇಹಕ್ಕಾಗಿ ನಾನು ನೀನು ಕೂರುತ್ತಿದ್ದ ಬೆಂಚಿಗೆ ಬಡ್ತಿ ಪಡೆದುಕೊಂಡು ಬಂದಿದ್ದು ನಿನಗೆ ನೆನಪಿರಬಹುದು ಅಲ್ವಾ..? ಶಾಲೆಗೆ ಬರುತ್ತಿದ್ದಾಗ ನೀನು ಹಾಕಿಕೊಂಡು ಬರುತ್ತಿದ್ದ ಶಾಸಿಟೋಪಿ ಕಂಡು ಬಹಳಷ್ಟು ಗೆಳೆಯರು ನಿನ್ನನ್ನು ಶಾಸಿಎಂದು ಕೂಗುತ್ತಿದ್ದಾಗ ನನಗೆ ಬಹಳ ಬೇಸರವಾಗುತ್ತಿತ್ತು. ಆದರೆ ಅವರ ಟೀಕೆಗಳಲ್ಲಿ ನಿನ್ನ ನಗು ಎಲ್ಲವನ್ನು ಮಡಚಿ ಹಾಕುತ್ತಿತ್ತು.
ಸದಾ ನೀನು ಉದ್ದಕ್ಕೆ ಬೆಳೆಯಲು ನನ್ನಲ್ಲಿ ಕೇಳಿದ ಐಡಿಯಾ. ನಾನು ಕೊಟ್ಟ ಸಲಹೆ ಈಗಲೂ ನನಗೆ ಯೋಚಿಸಿದಾಗ ನಗು ಉಕ್ಕಿ ಬರುತ್ತದೆ. ಯಾರೋ ನನಗೆ ಹೇಳಿದ್ರು ಬಾವಿಯಿಂದ ಬಿಂದಿಗೆಯಲ್ಲಿ ನೀರು ಎಳೆದರೆ ಉದ್ದಕ್ಕೆ ಬೆಳೆಯುತ್ತಾರಂತೆ ಅದನ್ನೇ ನಾನು ನಿಗೆ ಹೇಳಿದ್ದೆ. ಅಂದು ನೀನು ಉದ್ದಕ್ಕೆ ಬೆಳೆಯದೇ ಹೋಗಿರಬಹುದು. ಆದರೆ ಈಗ ನೀನು ಬಹಳ ಎತ್ತರಕ್ಕೆ ಬೆಳೆದು ಬಂದಿದ್ದೀಯಾ.. ಒಂದು ಬೇಸರ ನಾನು ಒಂದು ತರಗತಿಯಲ್ಲಿ ಪೇಲ್ ಆಗಿ ನೀನು ಪಾಸಾಗಿ ಮುಂದೆ ಹೋದ ನಂತರ ಮಾತ್ರ ನಾನು ಏಕಾಂಗಿಯಾಗಿ ಉಳಿದೆ. ನೀನು ತರಗತಿಯಿಂದ ತರಗತಿಗೆ ಜಂಪ್ ಆಗುತ್ತಾ ಹೋದೆ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದಾಗ ನಾವಿಬ್ಬರೂ ನನ್ನ ಎಸ್ಜಿಡಿ ಬೈಕ್‌ನಲ್ಲಿ ನಾಲ್ಕಾರು ಸಲ ಮೈಸೂರಿಗೆ ಹೋದ ಟೂರ್ ಈಗಲೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಸುತ್ತಾಟ ಎಂದರೆ ಇಬ್ಬರಿಗೂ ಖುಷಿ. ಪುತ್ತೂರಿನ ಎಲ್ಲ ಮೂಲೆ ಮೂಲೆಗಳಿಗೂ ನನ್ನ ಎಸ್‌ಜ್ಡಿ ಬೈಕ್‌ನಲ್ಲಿ ಸುತ್ತಾಟ ಮಾಡಿಕೊಂಡಿದ್ದ ಆ ದಿನಗಳು ಈಗಲೂ ನೆನಪಿಗೆ ಬರುವುದಿದೆ. ಈಗಲೂ ನೆನಪುಗಳು ತೀವ್ರವಾಗಿ ಕಾಡಿದಾಗ ನಿನಗೆ ಪೋನ್ ಮಾಡಿ ಹೇಳುವುದಿದೆ. ಪುತ್ತೂರಿನಲ್ಲಿ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಸೊರಕೆ ಚುನಾವಣೆಗೆ ನಿಂತಾಗ ನಾನು ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಈ ಕಡೆ ಬಂದು ವಿನಯ್ ಕುಮಾರ್‌ಗೆ ಬೆಂಬಲ ನೀಡಿದ್ದೆ. ಕಾರಣ ನಿನ್ನಂತೆ ಅವನು ಕೂಡ ನನ್ನ ಸ್ನೇಹಿತ.
ಆದರೆ ಪುತ್ತೂರಿನಿಂದ ಬಿಜೆಪಿಯಲ್ಲಿ ನೀನು ಚುನಾವಣೆಗೆ ನಿಂತಾಗ ಇತ್ತ ಕಡೆ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಚುನಾವಣೆಗೆ ನಿಂತುಬಿಟ್ಟಿದ್ದ. ಆಗ ನೀನೇ ಬಂದು ‘ಇಬ್ಬರು ನಿನ್ನ ಸ್ನೇಹಿತರು. ಯಾರಿಗೂ ನೀನು ಚುನಾವಣೆಯಲ್ಲಿ ಬೆಂಬಲ ನೀಡ ಕೂಡದು’ ಎಂದಿದ್ದಿ. ಅಲ್ಲಿಂದ ನಾನು ನೀನು ಹೇಳಿದ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದ್ದೇನೆ. ಗೆಳೆಯ ಸದಾ ನೀನು ಇನ್ನಷ್ಟೂ ಬೆಳೆಯಬೇಕು. ಜತೆಗೆ ರಾಜ್ಯಕ್ಕೂ ನಿನ್ನ ಊರಿಗೆ ಬಹಳ ಕೆಲಸ ಮಾಡಬೇಕು ಅನ್ನೋದು ಗೆಳೆಯನ ಆಶಯ.

ನಿನ್ನ ದೋಸ್ತಿ
ಮುತ್ತಣ್ಣ( ಎನ್. ಮುತ್ತಪ್ಪ ರೈ)
............
ಎನ್. ಮುತ್ತಪ್ಪ ರೈ
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿರುವ ಎನ್. ಮುತ್ತಪ್ಪ ರೈ ಮೂಲತಃ ಪುತ್ತೂರಿನ ಕೆಯ್ಯೂರಿನವರು. ರಿಯಲ್ ಎಸ್ಟೇಟ್, ಕ್ರೀಡೆ, ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ಸದಾ ಕಾಲ ಬ್ಯುಸಿಯಾಗಿ ಇಟ್ಟುಕೊಂಡವರು. ಮುತ್ತಪ್ಪ ರೈ ಕೆಯ್ಯೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸುತ್ತಿದ್ದಾಗ ಡಿ.ವಿ. ಸದಾನಂದ ಗೌಡರು ಒಂದೇ ತರಗತಿಯ ಒಂದೇ ಬೆಂಚಿನಲ್ಲಿ ಇದ್ದವರು. ಮುತ್ತಪ್ಪ ರೈ ಒಂದು ಕ್ಲಾಸಿನಲ್ಲಿ ಪೇಲ್ ಆದ ನಂತರ ಡಿವಿ ರೈ ಅವರನ್ನು ಬಿಟ್ಟು ಮುಂದೆ ಹೋದರು. ಆದರೆ ಅವರ ಸ್ನೇಹ ಈಗಲೂ ಗಟ್ಟಿ ಇದೆ.

ಒಂಚೂರು ಬದಲಾಗಿಲ್ಲ ಕಣೋ...


ಡಿಯರ್ ದೇವಿ,
ಗೆಳೆಯ ಎಂದು ಕರೆದರೆ ನನಗೆ ಏನೋ ಒಂದು ಥರದ ಮುಜುಗರ. ಎಲ್ಲಿ ಹೇಳಬೇಕಾದ ವಿಚಾರಗಳು ಮನಸ್ಸಿನಿಂದ ಮರೆಯಾಗಿ ಹೋಗಿ ಬಿಡುತ್ತದೋ ಎನ್ನುವ ಪುಟ್ಟ ಭಯ ಬಂದು ಬಿಡುತ್ತದೆ. ಅದಕ್ಕಾಗಿಯೇ ನಿನ್ನನ್ನು ನಾನು ‘ಸಹೋದರ’ ಎಂದೇ ಕರೆದು ಬಿಡುತ್ತೇನೆ ಗೆಳೆಯ. ಸೈಂಟ್ ಮೆರೀಸ್‌ನಿಂದ ಹಿಡಿದು ಮಂಗಳೂರಿನ ಸಂತ.ಅಲೋಶಿಯಸ್ ಕಾಲೇಜಿನವರೆಗೂ ನಾವಿಬ್ಬರೂ ಜತೆಯಾಗಿ ವಿದ್ಯಾಭ್ಯಾಸ ಮಾಡಿಕೊಂಡು ಬಂದವರು.
ಅಂದಿನಿಂದ ಇಂದಿನವರೆಗೂ ನೀನು ಒಂಚೂರು ಬದಲಾಗಿಲ್ಲ. ಕಾಲವಂತೂ ಸಾಕಷ್ಟು ಬದಲಾವಣೆಯ ಗಾಳಿಗೆ ಒಗ್ಗಿಕೊಂಡಿದೆ. ಆದರೆ ನಮ್ಮ ಗೆಳೆತನ ಈ ಎಲ್ಲ ಬದಲಾವಣೆಗಳನ್ನು ಮೆಟ್ಟಿ ನಿಂತುಕೊಂಡಿದೆ. ಹಣ, ಗೌರವ ಬಂದ ಕೂಡಲೇ ಬದಲಾಗುವ ಈ ಜಮಾನದಲ್ಲಿ ನೀನು ನಿಜಕ್ಕೂ ಭಿನ್ನ ಅನ್ನೋದು ನನ್ನ ದೃಢ ವಿಶ್ವಾಸ, ಭರವಸೆಯ ಮಾತಿದು. ನೀನು ನಿನ್ನ ಊರು ಕಿನ್ನಿಗೋಳಿಯೇ ಇರಲಿ ದೂರದ ಬೆಂಗಳೂರೇ ಇರಲಿ ಎಲ್ಲೂ ಕಿನ್ನಿಗೋಳಿಯ ಜನರಿಗೆ ಕೊಡುವ ಮರ್ಯಾದೆ, ಸ್ನೇಹಿತರಿಗೆ ಕೊಡುವ ಗೌರವದ ವಿಚಾರದಲ್ಲಿ ಎಂದಿಗೂ ಚ್ಯುತಿ ಬಂದಿಲ್ಲ.
ನನಗೆ ಈಗಲೂ ನೆನಪಿದೆ ಸಹೋದರ. ೪೦ ವರ್ಷಗಳ ಹಿಂದೆ ಸಂತ. ಅಲೋಶಿಯಸ್ ಕಾಲೇಜಿನ ಪುಟ್ಬಾಲ್ ಗ್ರೌಂಡ್‌ನಲ್ಲಿ ನಾನು ಪುಟ್ಬಾಲ್ ಆಡುತ್ತಿದ್ದಾಗ ನೀನು ಗ್ಯಾಲರಿಯಲ್ಲಿ ಕೂತು ಆಟ ನೋಡುತ್ತಿದ್ದೆ. ಪುಟ್ಬಾಲ್‌ಗೆ ಹೆಡ್ ಕೊಡುವ ನೆಪದಲ್ಲಿ ನಾನು ಹೆಡ್ ಕೊಟ್ಟಾಗ ತಪ್ಪಿ ನಾನು ಬಿದ್ದು ಮೂರ್ಚೆ ಹೋದಾಗ ನೀನು ಬಂದು ನೀರು ಕೊಟ್ಟು ಎಚ್ಚರಿಸಿದೆ. ಈ ನೆನಪು ನನಗೆ ಮಾತ್ರ ಇತ್ತು. ಕಾರಣ ಈ ಪುಟ್ಬಾಲ್ ಹೆಡ್‌ನಿಂದಾಗಿ ತಲೆಯ ಹತ್ತಿರ ರಕ್ತ ಹೆಪ್ಪುಗಟ್ಟಿ ತೀವ್ರ ತೊಂದರೆ ನೀಡುತ್ತಿತ್ತು.
ಆದರೆ ನಿನಗೂ ಈ ವಿಚಾರ ಗೊತ್ತಿದೆ ಎನ್ನೋದು ನೀನು ತೀರಾ ಇತ್ತೀಚೆಗೆ ಕಳುಹಿಸಿದ ಇಮೇಲ್ ಮೂಲಕ ಗೊತ್ತಾಯಿತು. ಇಮೇಲ್ ಈಗಲೂ ನನ್ನ ಇನ್‌ಬಾಕ್ಸ್‌ನಲ್ಲಿ ಭದ್ರವಾಗಿ ಕೂತಿದೆ. ನಿನ್ನ ನೆನಪು ಕಾಡಿದಾಗ ಮತ್ತೊಮ್ಮೆ ಅದನ್ನು ಓದಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೇನೆ. ಆಗಾಗ ನಿನ್ನ ಊರಿನ ಮನೆಗೂ ಹೋಗಿ ಶಾರದಾಕ್ಕನ ಪ್ರೇಮಕ್ಕೆ ನಾಲ್ಕು ಮಾತುಗಳನ್ನು ಆಡಿಕೊಂಡು ಬರುತ್ತೇನೆ. ನಿನ್ನ ಸಹೋದರರೆಲ್ಲರೂ ಊರಿನಲ್ಲಿ ಸಿಗುತ್ತಾರೆ. ನೀನು ಮಾತ್ರ ಮೊದಲಿನ ಹಾಗೆ ಸಿಗುತ್ತಿಲ್ಲ. ನನಗೂ ಗೊತ್ತು ಸಹೋದರ ನಿನ್ನ ಕೆಲಸ, ನಿನ್ನನ್ನು ನಂಬಿಕೊಂಡು ಬರುವ ಲಕ್ಷಾಂತರ ಮಂದಿಗೆ ನೀನೊಂದು ದೇವರದೂತ. ಅದೇ ಸಂತೃಪ್ತಿಯಿಂದ ನನಗೆ ನಿನ್ನ ಮೇಲೆ ಗೌರವ, ಹೆಮ್ಮೆ ಬೆಳೆದಿದೆ.
ಬಡವರ ಬಗ್ಗೆ ನಿನಗಿರುವ ಕಾಳಜಿ, ಪ್ರೀತಿ, ಸೇವೆ ಮಾಡುವ ಮನೋಭಾವ ಇನ್ನಷ್ಟೂ ಬೆಳೆಯಲಿ. ಭಾರತದ ಹಳ್ಳಿ ಹಳ್ಳಿಯಲ್ಲಿರುವ ದೀನದಲಿತರ ಸೇವೆಗೆ ನಿಂತ ದೇವರ ದೂತ ನೀನು.. ಇದೆ ಕೆಲಸ ಮುಂದುವರಿಸಿಕೊಂಡು ಹೋಗು. ಮತ್ತೊಂದು ಬದುಕು ಇದೆ ಎನ್ನುವ ಮಾತು ಸತ್ಯವಾದರೆ ನಾನು ಮತ್ತೊಮ್ಮೆ ನಿನ್ನ ಪ್ರೀತಿಯ ಗೆಳೆಯನಾಗಬೇಕು. ಅದು ಕೂಡ ಸಾಧ್ಯವಿಲ್ಲ ಎಂದಾದರೆ ಸಹೋದರನಾಗೋ ಹುಟ್ಟಿ ಬರಬೇಕು ಎನ್ನುವುದು ನನ್ನ ಹೆಬ್ಬಯಕೆ. ಅಂದಹಾಗೆ ಬರೆಯಲು ನಿನ್ನ ಬಗ್ಗೆ ಸ್ನೇಹದ ವಿಚಾರಗಳಿವೆ. ಆದರೆ ಎಲ್ಲವೂ ಬರೆಯಲು ಆಗುತ್ತಿಲ್ಲ. ಎಲ್ಲವೂ ಹೇಳಿಕೊಳ್ಳಲು ಆಗುತ್ತಿಲ್ಲ. ಇರಲಿ ಬಿಡು ಸಹೋದರ ನಿನ್ನ ಸಾಧನೆಯ ಬಗ್ಗೆ ನನಗೆ, ಊರಿಗೆ, ಕಲಿತ ಶಾಲೆಗೆ ಸದಾ ನೆನಪಿರುತ್ತದೆ.

ನಿನ್ನ ಪ್ರೀತಿಯ ಗೆಳೆಯ
ಎಡ್ಡಿ( ಎಡ್ವಿನ್)
..............
ಎಡ್ವಿನ್ ಎನ್. ಡಿ’ಮೆಲ್ಲೊ-
ಮಧ್ಯಪ್ರಾಚ್ಯ ದೇಶದ ಸುಲ್ತಾನ್ ಬೆನ್ ಎಕ್ಸಾ ಗೂಪ್‌ನ ಕಂಪನಿಯೊಂದರಲ್ಲಿ ೩೫ ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡಿ ಈಗ ಪ್ರಸ್ತುತ ಕಿನ್ನಿಗೋಳಿಯಲ್ಲಿ ನಿವೃತ್ತ ಬದುಕು ಕಟ್ಟುತ್ತಿದ್ದಾರೆ. ಮಂಗಳೂರಿನ ಗ್ರಾಹಕ ಮಾಹಿತಿ ಕೇಂದ್ರದಲ್ಲಿ ಹಿರಿಯ ಉಪಾಧ್ಯಕ್ಷರಾಗಿ, ಗ್ರಾಹಕ ಹಕ್ಕುಗಳ ಅನುಷ್ಠಾನ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಮುಖ್ಯಸ್ಥರಾಗಿ ದುಡಿಯುತ್ತಿದ್ದಾರೆ. ಎಡ್ವಿನ್ ಡಿ’ಮೆಲ್ಲೊ ದೇಶದ ಖ್ಯಾತ ಹೃದಯ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ತುಂಬಾ ಹತ್ತಿರದ ಹಾಗೂ ಕುಟುಂಬದ ಸ್ನೇಹಿತ. ಜತೆಗೆ ಸಂತ. ಅಲೋಶಿಯಸ್ ಕಾಲೇಜಿನಲ್ಲಿದ್ದಾಗ ಹಾಸ್ಟೆಲ್‌ನಲ್ಲಿ ರೂಮ್ ಮೇಟ್ ಆಗಿದ್ದವರು.

ಹೊಸ ಪತ್ರಿಕೆ, ಹೊಸ ಹುರುಪು , ಹೊಸ ಯೋಚನೆ


ವಿಜಯ ಕರ್ನಾಟಕದ ಮತ್ತೊಬ್ಬ ಸಹೋದರಪತ್ರಿಕೆ ‘ವಿಜಯ ನೆಕ್ಸ್ಟ್’ ಗಾಗಿ ನಾನು ಈಗ ಬರೆಯಲು ಹೊರಟಿದ್ದೇನೆ. ವಿಜಯ ಕರ್ನಾಟಕದ ಲವಲವಿಕೆಯಲ್ಲಿ ನನಗೆ ಕೊಟ್ಟ ಪ್ರೋತ್ಸಾಹ ಹಾಗೂ ಗೌರವ ಈ ಪತ್ರಿಕೆಯಲ್ಲೂ ಸಿಗುತ್ತದೆ ಎನ್ನುವ ಗ್ಯಾರಂಟಿ ಸಿಕ್ಕಿದ ನಂತರ ಈ ವಾರದಿಂದ ಅದಕ್ಕಾಗಿ ಬರೆದುಕೊಡುತ್ತಿದ್ದೇನೆ.
ಅಂದಹಾಗೆ ಮೊದಲ ವಾರದಲ್ಲಿಯೇ ನನ್ನ ಮೂರು ಲೇಖನಗಳು ಈ ಪತ್ರಿಕೆಯಲ್ಲಿ ಬಂದಿದೆ. ಮಕ್ಕಳ ದಿನಾಚರಣೆಯ ವಿಶೇಷಸಂಚಿಕೆ ‘ವಿಜಯ ನೆಕ್ಸ್ಟ್’ ಒಂದ್ ಸಾರಿ ಓದಿ ನೋಡಿ. ಹೊಸ ವಿಷಯ, ಹೊಸ ಹುರುಪು ನಿಮ್ಮಲ್ಲಿ ಮೂಡುವ ಗ್ಯಾರಂಟಿ ನಾನು ಕೊಡುತ್ತೇನೆ. ಇನ್ನೂ ಮುಂದೆ ವಿಜಯ ಕರ್ನಾಟಕದ ಜತೆಯಲ್ಲಿ ‘ವಿಜಯ ನೆಕ್ಸ್ಟ್’ ವನ್ನು ಕೊಂಡು ಓದಿ.



ಗಾಯ ಮಾಡಿಕೊಂಡಿದ್ದು ನೆನಪಿದೆಯಾ..?
ಪ್ರೀತಿಯ ಪಕ್ಕು,
ಬಾಲ್ಯದ ನೆನಪುಗಳು ಈಗಲೂ ಕಚಗುಳಿ ಇಡುತ್ತದೆ. ಪದೇ ಪದೇ ನೆನಪಿಗೆ ಬಂದು ಕಣ್ಣು ತೇವ ಮಾಡಿ ಬಿಡುತ್ತದೆ. ನಾನು ನೀನು ಯಾವಾಗಲೂ ಅಣ್ಣ-ತಮ್ಮಂದಿರಂತೆ ಇರಲಿಲ್ಲ ಅಂತಾ ನಿನಗೂ ಗೊತ್ತು ಅಲ್ವಾ..? ನೀನು ನನ್ನನ್ನು ಯಾವ ರೀತಿಯಲ್ಲಿ ನೋಡಿದ್ದೀಯಾ ಅಂತಾ ಗೊತ್ತಿಲ್ಲ ಮಾರಾಯ. ಆದರೆ ನನಗೆ ನೀನು ಒಬ್ಬ ಒಳ್ಳೆಯ ಸ್ನೇಹಿತ. ಕಷ್ಟ- ಸುಖಗಳನ್ನು ಹಂಚಿಕೊಂಡು ಧೈರ್ಯ ತುಂಬಿ ಕಳುಹಿಸುವ ಒಬ್ಬ ಮಾರ್ಗದರ್ಶಕ. ನಿನ್ನ ಅಂದಿನ- ಇಂದಿನ ಬದುಕು ಎಲ್ಲವೂ ನನಗೆ ಬದುಕು ಕಟ್ಟಲು ಕಾರಣವಾಗಿದೆ.
ಈಗಲೂ ನೆನಪಿಗೆ ಬರುವ ಒಂದು ವಿಷ್ಯಾ ಅಂದ್ರೆ ಕಡೇ ಶಿವಾಲಯದ ಪಾಂಡಿಬೆಟ್ಟುವಿನಲ್ಲಿದ್ದ ನಮ್ಮ ದೊಡ್ಡಮ್ಮನ ಮನೆ. ರಜೆ ಬಂದಾಗ ನಾವಿಬ್ಬರೂ ಅಲ್ಲಿಗೆ ಹೋಗಿ ಪುಟ್ಟ ಕೆರೆಯಲ್ಲಿ ಈಜಾಡಿಕೊಂಡು ಬರುತ್ತಿದ್ದೇವು.. ಮರಕೋತಿ ಆಡಿ ಬಿದ್ದು ಮಾಡಿದ ಗಾಯ, ನೋವಿನಿಂದ ಅತ್ತುಕೊಂಡು ಹೋಗಿದ್ದು, ದೊಡ್ಡಮ್ಮ ಬಂದು ಔಷಧ ಹಚ್ಚಿ ಸಮಾಧಾನ ಮಾಡಿದ್ದು, ಎಲ್ಲವೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅಂದಿನ ಮಕ್ಕಳಾಟಗಳನ್ನು ನೆನಪಿಸಿಕೊಂಡಾಗ ಈಗಲೂ ಜೋರಾದ ನಗು ಬರುತ್ತದೆ.
ತೀರಾ ಇತ್ತೀಚೆಗೆ ಖಾಸಗಿ ಟಿವಿಯಲ್ಲಿ ನಿರ್ದೇಶಕ ನಾಗತಿಹಳ್ಳಿಯ ‘ಬಾನಲ್ಲೆ ಮಧುಚಂದ್ರಕೆ’ ಚಿತ್ರ ನೋಡುತ್ತಿದ್ದೆ. ಆಗ ನೆನಪಿಗೆ ಬಂದದ್ದು ನಿನ್ನ ಮುಖ. ಕಾರಣ ಗೊತ್ತಲ್ಲ ಪಕ್ಕು.. ನಟ ಶಿವರಾಂ ರುದ್ರಭೂಮಿಯಲ್ಲಿ ಕೂತು ಕವನ ಬರೆಯುವ ರೀತಿಯಲ್ಲಿ ನೀನು ಮರದ ಮೇಲೆ ಕೂತು ಕತೆ, ಕವನ ಬರೆದುಕೊಂಡಿದ್ದಿ. ನನಗೆ ಕರಾವಳಿಯ ಗಂಡು ಕಲೆ ಯಕ್ಷಗಾನ ಇಷ್ಟವಾದರೆ ನಿನಗೆ ರಂಗಭೂಮಿಯೇ ಬಹಳ ಇಷ್ಟವಾಗಿತ್ತು.
ನೀನು ಆಯ್ಕೆ ಮಾಡಿಕೊಂಡಿದ್ದ ರಂಗಭೂಮಿ ನಿನಗೆ ಒಂದು ಹೊಸ ವೇದಿಕೆ ಕೊಟ್ಟಿದೆ. ಅದಕ್ಕಿಂತಲೂ ಮುಖ್ಯವಾಗಿ ನೀನು ಪಟ್ಟ ಕಷ್ಟಗಳಿಗೆ ಈಗಲಾದರೂ ಸರಿಯಾದ ಬೆಲೆ ಬಂತಲ್ಲ ಎನ್ನುವ ಖುಷಿ, ಸಂತೃಪ್ತಿ ನಿನಗಿಂತ ಜಾಸ್ತಿ ನನಗಿದೆ. ಈಗಲೂ ಸಿನ್ಮಾ ಥಿಯೇಟರ್‌ಗಳಿಗೆ ಹೋಗಿ ಸಿನ್ಮಾ ನೋಡುವಾಗ ನಿನ್ನ ನೆನಪು ಕಾಡುತ್ತದೆ. ಯಾಕ್ ಅಂತೀಯಾ.. ಮಾರಾಯ..ಲಾಲ್‌ಭಾಗ್‌ನ ಪಕ್ಕದಲ್ಲಿದ್ದ ಉರ್ವಶಿ ಥಿಯೇಟರ್‌ನಲ್ಲಿ ನಾವು ಜತೆಯಾಗಿ ನೋಡುತ್ತಿದ್ದ ಸಿನ್ಮಾಗಳಂತೂ ಲೆಕ್ಕಕ್ಕೆ ಸಿಗಲು ಸಾಧ್ಯವಿಲ್ಲ.
ಒಂದು ಸಾರಿ ಉರ್ವಶಿ ಥಿಯೇಟರ್‌ನಲ್ಲಿ ಡಾ.ರಾಜ್ ಕುಮಾರ್ ಅವರ ‘ಶಂಕರಗುರು’ ಸಿನ್ಮಾ ನೋಡಲು ಟಿಕೆಟ್‌ಗಾಗಿ ಕೌಂಟರ್‌ನಲ್ಲಿ ಮೈಲು ಉದ್ದದ ಸರತಿಯಲ್ಲಿ ನಿಂತು ಸುಸ್ತಾಗಿ ವಾಪಸು ಬಂದು ನಂತರ ಮರುದಿನ ಬೇಗನೆ ಹೋಗಿ ಟಿಕೆಟ್‌ಗಾಗಿ ಕ್ಯೂ ನಿಂತು ‘ಶಂಕರ್‌ಗುರು’ ಸಿನ್ಮಾ ನೋಡಿ ಖುಷಿಪಟ್ಟುಕೊಂಡದ್ದು ಎಲ್ಲವೂ ಕಣ್ಣ ಮುಂದೆ ನಡೆಯುತ್ತಿದೆ ಅಂತಾ ಭಾಸವಾಗುತ್ತಿದೆ. ಲಾಲ್‌ಭಾಗ್‌ನ ಪಕ್ಕದಲ್ಲಿರುವ ನಿನ್ನ ಮನೆಯಲ್ಲಿ ಗೆಳೆಯ ಕಿರಣ್ ಜತೆಯಲ್ಲಿ ನಾವು ಆಡುತ್ತಿದ್ದ ಕೇರಂ ಆಟ. ಈಗ ನನ್ನ ಮಕ್ಕಳ ಜತೆಯಲ್ಲಿ ಆಡುವಾಗ ನೆನಪಿಗೆ ಗೊತ್ತಿಲ್ಲದೇ ಬಂದು ಬಿಡುತ್ತದೆ.
ನೀನು ಈಗ ಸಿನ್ಮಾ ರಂಗದಲ್ಲಿ ಬಹಳಷ್ಟು ಬೆಳೆದು ಬಂದಿದ್ದೀಯಾ.. ಈಗಲೂ ನಿನ್ನ ಊರಿನ ಮೂಲ ಮನೆಗೆ ಬಂದಾಗ ಅದೇ ಮೊದಲಿನ ಪಕ್ಕುವಿನ ರೀತಿಯಲ್ಲಿ ನನಗೆ ನೀನು ಕಾಣಿಸುತ್ತೀಯಾ..! ಅಂದಿಗೂ-ಇಂದಿಗೂ ಬಹಳ ವರ್ಷಗಳು ಉರುಳಿದೆ. ಆದರೆ ಮಾನವೀಯತೆ, ವಿಶ್ವಾಸ, ಪ್ರೀತಿ, ಗೆಳೆಯರ ಜತೆಯಲ್ಲಿ ನಡೆದುಕೊಳ್ಳುವ ನಿನ್ನ ವರ್ತನೆಯಲ್ಲಿ ಎಳ್ಳಷ್ಟೂ ಬದಲಾವಣೆಗಳು ಕಂಡಿಲ್ಲ ಮಾರಾಯ. ಅಂದಹಾಗೆ ಭೇಟಿಯಾಗದೆ ತುಂಬಾ ದಿನಗಳಾಯಿತು ಬಿಡು. ಅಮ್ಮ, ಪ್ರಸಾದ,ಆಶಾ ಎಲ್ಲರೂ ನೆನಪಿಗೆ ಬರುತ್ತಾರೆ. ಈ ಬಾರಿಯ ಕ್ರಿಸ್‌ಮಸ್ ಹಬ್ಬಕ್ಕಂತೂ ನಾನು ನಿಮ್ಮ ಜತೆ ಸೇರುತ್ತೇನೆ. ಎಲ್ಲರೂ ಕೂತು ಹರಟೋಣ..
ಇಂತೀ ನಿನ್ನ
ಉದಯ್

...................
ಅಗರಿ ಉದಯ ಕುಮಾರ್
ದಕ್ಷಿಣ ಭಾರತದ ಖ್ಯಾತ ನಟ ಅಗರಿ ಪ್ರಕಾಶ್ ರೈ(ಪ್ರಕಾಶ್ ರಾಜ್)ಅವರ ದಾಯಾದಿ ಸಹೋದರ. ಜತೆಗೆ ಆಪ್ತ ಗೆಳೆಯ. ಪ್ರಕಾಶ್ ರೈ ನಟನೆಯ ಗೀಳು ಹಿಡಿದುಕೊಂಡು ಚೆನ್ನೈ, ಹೈದರಾಬಾದ್, ಮುಂಬಯಿಯನ್ನು ಸುತ್ತಾಡಿಕೊಂಡು ನಟರಾಗಿದ್ದಾರೆ. ಉದಯ್ ಯಕ್ಷಗಾನವನ್ನು ಹವ್ಯಾಸವಾಗಿ ಇಟ್ಟುಕೊಂಡು ತಮ್ಮದೇ ಹವ್ಯಾಸಿ ಯಕ್ಷಗಾನ ತಂಡ, ಹವ್ಯಾಸಿ ಮಕ್ಕಳ ತಂಡ ಕಟ್ಟಿಕೊಂಡು ಯಕ್ಷಗಾನ ಕಲೆಯನ್ನು ಬೆಳೆಸುತ್ತಿದ್ದಾರೆ. ಬಿ.ಸಿ.ರೋಡ್‌ನಲ್ಲಿ ತಮ್ಮದೇ ಪುಟ್ಟ ಶ್ರೀನಿದಿ ರೋಲಿಂಗ್ ಶೆಟರ್ ಕಂಪನಿ ಇಟ್ಟುಕೊಂಡು ಬದುಕು ಕಟ್ಟುತ್ತಿದ್ದಾರೆ.
.....

ನನ್ನ ಪತ್ರಿಕೆ ನನ್ನ ಬರಹ-34


(vk daily lvk puravani published dis article on 11.11.2011)

Monday, November 7, 2011

ಮದ್ರಾಸಿ ಹುಡುಗನ ಕತೆ ‘ಮಣಿ ’ ಮ್ಯಾಟರ್



ಗೋಪಾಲ ರತ್ನಂ ಸುಬ್ರಹ್ಮಣ್ಯ ಅಯ್ಯರ್ ಎಂದರೆ ಯಾರಿಗೂ ಗೊತ್ತಾಗಲ್ಲ ಸ್ವಾಮಿ. ಶಾರ್ಟ್ ಆಂಡ್ ಸ್ವೀಟಾಗಿ ಮಣಿರತ್ನಂ ಎಂದೇ ಕರೆಯಬೇಕು. ಮದ್ರಾಸಿನ ಹುಡುಗನೊಬ್ಬ ಸಿನ್ಮಾ ಲೋಕವನ್ನು ಶ್ರೀಮಂತ ಮಾಡಿದ ಕತೆ ಇಲ್ಲಿದೆ...


ಭಾರತೀಯ ಚಿತ್ರನಗರಿಯಲ್ಲಿ ಮಣಿ ಎಂದರೆ ಕೇರಾಫ್ ಕ್ರಿಯೇಟಿವಿಟಿ. ಕಳೆದ ೨೮ ವರ್ಷಗಳಿಂದ ಸಿನ್ಮಾ ಲ್ಯಾಂಡ್‌ನಲ್ಲಿ ಬಿದ್ದುಕೊಂಡಿದ್ದರೂ ಕೂಡಾ ಅವರ ಫಿಲ್ಮೋಗ್ರಾಫಿಯಲ್ಲಿರುವ ಸಿನ್ಮಾಗಳ ಸಂಖ್ಯೆ ಬರೀ ಮೂವತ್ತರ ಅಸುಪಾಸು. ಮಣಿಯ ಚಿತ್ರಗಳೆಂದರೆ ಬರೋಬರಿ ವರ್ಷಗಟ್ಟಲೆ ಕಾದು ನಿಲ್ಲಬೇಕಾದ ಅನಿವಾರ್ಯತೆ.
ಚಿತ್ರದ ಪ್ರತಿ ಸ್ಟೇಜ್‌ನಲ್ಲೂ ಮಣಿಯ ಕಾರುಬಾರು ಕಾಣ ಸಿಗೋದು ಗ್ಯಾರಂಟಿ. ಚಿತ್ರ ತೆರೆಗೆ ಬಂದಾಗ ಪ್ರತಿ ಪ್ರೇಮ್‌ನಲ್ಲೂ ಮಣಿಯ ಕೆಲಸ ಪ್ರೇಕ್ಷಕನಿಗೆ ದಂಗು ಮೂಡಿಸಿ ಬಿಡುತ್ತದೆ. ದಟ್ಸ್ ಕಾಲ್ಡ್ ಡೈರೆಕ್ಟರ್ ಮಣಿರತ್ನಂ. ಗೋಪಾಲ ರತ್ನಂ ಸುಬ್ರಹ್ಮಣ್ಯ ಅಯ್ಯರ್ ಇದು ಮಣಿರತ್ನಂರ ಪೂರ್ಣ ನಾಮಧೇಯ.
ಮಣಿಯ ಆರಂಭದ ಕನ್ನಡದ ‘ಪಲ್ಲವಿ ಅನುಪಲ್ಲವಿ’ಯಿಂದ ಹಿಡಿದು ತೀರಾ ಇತ್ತೀಚೆಗೆ ಬಂದು ಡಬ್ಬಾ ಸೇರಿಕೊಂಡ ‘ರಾವಣ್’ ವರೆಗೂ ಚಿತ್ರದಲ್ಲಿ ತಮ್ಮದೇ ಶೈಲಿಯನ್ನು ಆಳವಡಿಸಿಕೊಂಡು ಬಂದವರು.
‘ಮೌನ ರಾಗಂ’ ‘ಗೀತಾಂಜಲಿ’, ‘ಅಂಜಲಿ’, ‘ನಾಯಗನ್’, ‘ದಳಪತಿ’, ‘ರೋಜಾ’, ‘ಬಾಂಬೆ’, ‘ಇರುವರ್’, ‘ದಿಲ್ ಸೇ’, ‘ಕಣ್ಣತ್ತಿಲ್ ಮುತ್ತಂ ಇಟ್ಟಲ್’, ‘ಯುವ’, ‘ಗುರು’, ‘ರಾವಣ್’ ಚಿತ್ರಗಳು ತನ್ನ ವಿಶಿಷ್ಟ ಕತೆಯಿಂದ ಪ್ರೇಕ್ಷಕ ವರ್ಗವನ್ನು ಮಾತ್ರವಲ್ಲ ಪ್ರಶಸ್ತಿಗಳ ಖಜಾನೆಗೆ ಕಣ್ಣು ಹಾಕಿತ್ತು.
ಇಂದಿಗೂ ಮಣಿಯ ಚಿತ್ರಗಳು ಟಿವಿ ತೆರೆಯ ಮೇಲೆ ಮೂಡಿದಾಗ ಚಾನೆಲ್‌ಗಳ ಟಿಆರ್‌ಪಿ ರೇಟ್ ಕೂಡ ರೈಸ್ ಆಗುತ್ತದೆ ಎನ್ನುವ ಮಾತಿದೆ. ದೇಶಭಕ್ತಿಯ ಕಿಚ್ಚು ಹಚ್ಚಲು ಬಂದ ‘ರೋಜಾ’ ಸಿನ್ಮಾ ಪ್ರತಿ ಸ್ವಾತಂತ್ರ್ಯ,ಗಣರಾಜ್ಯ ದಿನ ಟಿವಿಯಲ್ಲಿ ಖಾಯಂ ಆಗಿ ಬಂದು ಬಿಡುತ್ತದೆ. ಹಿಂದೂ-ಮುಸ್ಲಿಂ ಕೋಮು ಸೌಹಾರ್ಧತೆ ಬಗ್ಗೆ ಸಂದೇಶ ಸಾರುವ ‘ಬಾಂಬೆ’ ಸಿನ್ಮಾವನ್ನು ಯಾರು ತಾನೇ ಮರೆಯಲು ಸಾಧ್ಯ. ಅಂದಹಾಗೆ ಮಣಿಯ ಎಲ್ಲ ಚಿತ್ರಗಳು ಸೂಪರ್ ಹಿಟ್ ಆಗಿಲ್ಲ ಅನ್ನೋದು ಕೂಡಾ ಅಷ್ಟೇ ನಿಜ. ಕಾಲಕ್ಕೆ ತಕ್ಕಂತೆ ಮಣಿ ಬದಲಾದರೂ ಕೆಲವೊಂದು ಇನ್ನರ್ ಕಾರಣಗಳಿಂದ ಚಿತ್ರ ಥಿಯೇಟರ್‌ನಲ್ಲಿ ಬಹಳಷ್ಟು ಸದ್ದು ಮಾಡದೇ ಮಣಿಯನ್ನು ಮೂಲೆ ಗುಂಪು ಮಾಡಿ ಹಾಕಿದ್ದು ಕೂಡಾ ಇದೆ.
ಮಣಿಯ ಚಿತ್ರಗಳು ಥಿಯೇಟರ್‌ನಲ್ಲಿ ಸರಿಯಾಗಿ ಕಲೆಕ್ಷನ್ ಆಗದೇ ಇದ್ದಾರೆ ಎಲ್ಲ ತಪ್ಪುಗಳನ್ನು ತಾನೇ ಹೊತ್ತುಕೊಂಡು ಅಜ್ಞಾತ ವಾಸಕ್ಕೆ ತೆರಳಿ ಚಿತ್ರದಲ್ಲಿ ನಡೆದ ತಪ್ಪುಗಳನ್ನು ಅಧ್ಯಯನ ಮಾಡಿ ನಂತರ ಮತ್ತೊಂದು ಚಿತ್ರಕ್ಕೆ ಸ್ಕೆಚ್ ರೆಡಿ ಮಾಡುತ್ತಾರೆ. ಇದು ಮಣಿರತ್ನಂಗೆ ಚಿತ್ರದಿಂದ ಚಿತ್ರಕ್ಕೆ ಇರುವ ಪ್ರೀತಿ.
ಹುಡುಕಾಟದ ಮಣಿ:
ಮಣಿರತ್ನಂ ಚಿತ್ರಗಳಲ್ಲಿ ಕ್ಯಾಮರಾ ವರ್ಕ್‌ಗೆ ಬಹಳಷ್ಟು ಮಹತ್ವ ಇದೆ. ಚಿತ್ರದ ಕತೆ, ಸಂಗೀತ, ಸಂಕಲನ ಹೀಗೆ ಪ್ರತಿಯೊಂದು ಹಂತದಲ್ಲಿ ಮಣಿ ಖುದ್ದಾಗಿ ಫೀಲ್ಡ್‌ಗೆ ಬಂದುಬಿಡುತ್ತಾರೆ. ಮಣಿರತ್ನಂರ ಖಾಸಾ ಚಿತ್ರ ಎಡಿಟರ್ ಸುರೇಶ್ ಅರಸ್ ಹೇಳುವ ಮಾತು ಹೀಗಿದೆ: ಮಣಿ ಸರ್ ಅವರ ಚಿತ್ರಗಳು ಎಡಿಟಿಂಗ್ ಮಾಡಲು ಕೊಂಚ ಕಷ್ಟ. ತಮಗೆ ತೃಪ್ತಿಯಾಗುವ ವರೆಗೂ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಪಕ್ಕದಲ್ಲಿ ಕೂತು ಹೇಳುತ್ತಾರೆ. ಅವರು ಚಿತ್ರವನ್ನು ಬೇಗನೆ ಮುಗಿಸುತ್ತಾರೆ. ಆದರೆ ಎಡಿಟಿಂಗ್ ವಿಚಾರದಲ್ಲಿ ಮಾತ್ರ ಆರು ತಿಂಗಳಿನಿಂದ ವರ್ಷಗಟ್ಟಲೆ ಎಡಿಟರ್ ಡೆಸ್ಕ್‌ನಲ್ಲಿ ಕೂತು ಚಿತ್ರದ ಕಾಪಿಯನ್ನು ತಿದ್ದುತ್ತಾರೆ. ಯಾವುದೇ ನಿರ್ದೇಶಕ ಈ ರೀತಿಯ ಕೆಲಸ ಮಾಡುವುದಿಲ್ಲ. ನಿರ್ದೇಶಕರು ಮಾಡದೇ ಇರುವ ಕೆಲಸವನ್ನು ಮಣಿರತ್ನಂ ಮಾಡುತ್ತಾರೆ. ಈ ಕಾರಣದಿಂದ ಮಣಿರತ್ನಂಗೆ ಚಿತ್ರನಗರಿಯಲ್ಲಿ ಒಳ್ಳೆಯ ಹೆಸರಿದೆ.
ಮಣಿರತ್ನಂ ತಮ್ಮ ಚಿತ್ರದಲ್ಲಿ ಪ್ರತಿಭಾವಂತರಿಗಂತೂ ಬಹಳಷ್ಟು ಅವಕಾಶ ಕೊಟ್ಟೆ ಕೊಡುತ್ತಾರೆ. ಖ್ಯಾತ ಛಾಯಾಗ್ರಾಹಕ ಸಂತೋಷ್ ಶಿವನ್ ಇವರ ಚಿತ್ರಗಳಿಂದಲೇ ಹೊರ ಬಂದ ಪ್ರತಿಭೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ಮಣಿಯ ಗರಡಿಯಲ್ಲಿ ಪಳಗಿಕೊಂಡು ಬಂದವರು. ನಟ ಅರವಿಂದ್ ಸ್ವಾಮಿ, ಕಾರ್ತಿಕ್, ಪ್ರಭು, ನಟಿ ರೇವತಿ ಹೀಗೆ ಪ್ರತಿಭಾವಂತರನ್ನು ಹುಡುಕಿ ಅವರಿಗೊಂದು ಅವಕಾಶ ಕೊಡುವುದರಲ್ಲಿ ಮಣಿರತ್ನಂ ಎತ್ತಿದ ಕೈ. ಈಗಲೂ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡೇ ಬಿಗ್ ಬಜೆಟ್ ಚಿತ್ರವನ್ನು ಮಾಡಿ ಸಕ್ಸಸ್ ಪಾಯಿಂಟ್‌ಗೆ ಸಾಗಿಸುವ ಸಾಮರ್ಥ್ಯ ಮಣಿಗೆ ಸಿದ್ಧಿಸಿದೆ.
ಕನಸು ನುಚ್ಚು ನೂರಾಗುತ್ತಿತ್ತು !
‘ಮದ್ರಾಸ್ ಟಾಕೀಸ್’ ಇದು ಮಣಿರತ್ನಂ ತನ್ನ ಚಿತ್ರಗಳನ್ನು ನಿರ್ಮಾಣ ಮಾಡಲು ಇಟ್ಟುಕೊಂಡ ಪ್ರಾಡಕ್ಷನ್ ಕಂಪನಿ ಹೆಸರು. ೧೯೯೫ರಲ್ಲಿ ಈ ಪ್ರಾಡಕ್ಷನ್ ಕಂಪನಿಯನ್ನು ಮಣಿರತ್ನಂರ ಸಹೋದರರಾದ ಜಿ. ಶ್ರೀನಿವಾಸನ್, ಜಿ. ವೆಂಕಟ್ ನಾರಾಯಣ್ ಹಾಗೂ ಪತ್ನಿ ಸುಹಾಸಿನಿ ಮಣಿರತ್ನಂರ ಜತೆಗೂಡಿ ಕಟ್ಟಿ ಬೆಳೆಸಿದವರು.
ಆದರೆ ಹಿರಿಯ ಸಹೋದರ ಜಿ. ವೆಂಕಟ್ ನಾರಾಯಣ್ ೨೦೦೩ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ೨೦೦೭ರಲ್ಲಿ ಮತ್ತೊಬ್ಬ ಸಹೋದರ ಜಿ. ಶ್ರೀನಿವಾಸನ್ ಕಾರು ಅಪಘಾತದಲ್ಲಿ ಮೃತಪಟ್ಟರು. ಈ ಸಮಯದಲ್ಲಿ ‘ಮದ್ರಾಸ್ ಟಾಕೀಸ್’ ಮುರಿದು ಬೀಳುವುದರಲ್ಲಿ ಇತ್ತು. ಆದರೆ ಮಣಿರತ್ನಂರ ಸಮಯಪ್ರಜ್ಞೆಯಿಂದ ಕಂಪನಿ ಸೇಫ್ ಝೋನ್‌ನಿಗೆ ಬಂದು ನಿಂತಿತ್ತು. ಪತ್ನಿ ಸುಹಾಸಿನಿ ಮಣಿಯ ಎಲ್ಲ ಕೆಲಸದಲ್ಲಿ ಜತೆಗೂಡಿದರು. ಕಂಪನಿ ಮತ್ತೇ ಚೇತರಿಕೆ ಕಂಡುಬಂತು. ಸಹೋದರರನ್ನು ಕಳೆದುಕೊಂಡ ಮಣಿ ಚಿತ್ರ ಮಾಡುವುದಕ್ಕೆ ರೆಡಿಯಾದರು.
ಸಹೋದರರು ಹೋದ ನಂತರ ಉದ್ಯಮಿ ರೂಭಾಯಿ ಅಂಬಾನಿಯ ಬದುಕಿನ ಕತೆಯನ್ನು ಆಧರಿಸಿಕೊಂಡ ‘ಗುರು’ ಚಿತ್ರ ಇದೇ ಪ್ರಾಡಕ್ಷನ್ ಕಂಪನಿಯಲ್ಲಿ ತಯಾರಾಯಿತು. ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತು. ಇದೇ ಜೋಶ್‌ನಿಂದ ‘ರಾವಣ್’ ಚಿತ್ರ ರೆಡಿಯಾಯಿತು. ಆದರೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಇಲ್ಲದೇ ರಾವಣ್ ಮುರಿದು ಬಿದ್ದು ಬಿಟ್ಟಿತು.
ಮಣಿರತ್ನಂ ಈಗ ಸಿನ್ಮಾ ಮಾಡಲು ರೆಡಿಯಾಗಿದ್ದಾರೆ. ನವೀರಾದ ಲವ್ ಸ್ಟೋರಿ ಜತೆಗೆ ಪ್ರಸ್ತುತ ಘಟನೆಯೊಂದನ್ನು ತೋರಿಸಲು ಹೊರಟಿದ್ದಾರೆ. ಶ್ರೀಲಂಕಾದ ನೌಕಾದಳಕ್ಕೆ ಸಿಕ್ಕ ರಾಮೇಶ್ವರದ ಮೀನುಗಾರರ ಸ್ಥಿತಿ-ಗತಿಯ ಮೇಲೆ ಬೆಳಕು ಚೆಲ್ಲುವ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಾರ್ತಿಕ್ ಪುತ್ರ ಗೌತಮ್ ನಾಯಕನಾದರೆ ನಾಯಕಿ ಪಟ್ಟ ಖಾಲಿ ಉಳಿದಿದೆ ಅನ್ನೋದು ಚೆನ್ನೈ ಕಡೆಯಿಂದ ಬಂದ ಸುದ್ದಿ. ಅಂದಹಾಗೆ ಮಣಿರತ್ನಂ ಸೋಲನ್ನು ಗೆಲುವಿನ ರಹದಾರಿ ಎಂದು ಸ್ವೀಕರಿಸಿಕೊಂಡು ಬಂದ ನಿರ್ದೇಶಕ. ಮತ್ತೆ ಸಿನ್ಮಾ ಅಖಾಡಕ್ಕೆ ಇಳಿದು ಗೆದ್ದು ಬರುತ್ತಾರೆ ಎನ್ನುವ ಖಾತರಿಯಂತೂ ಮಣಿಯ ಜತೆಯಲ್ಲಿ ಪ್ರೇಕ್ಷಕನಿಗೂ ಇದೆ.

Monday, October 31, 2011

ಟಾಲಿವುಡ್ಡಿನಲ್ಲಿ ಮತ್ತೆ ನಾಯಕ ಲವರ್ ಬಾಯ್ ಸುಮನ್ !


ಪಂಚಭಾಷೆ ತಾರೆ ಸುಮನ್ ಈ ವಯಸ್ಸಿನಲ್ಲೂ ಲವ್ ಮಾಡಲು ಹೊರಟ್ಟಿದ್ದಾರೆ. ಸುಮನ್‌ಗೆ ಮದುವೆಯಾಗಿದೆ.. ಮುದ್ದಾದ ಮಗಳಿದ್ದಾರೆ. ಆದರೂ ಲವ್ವಾ.. ಮಾರಾಯ್ರೆ ಅಂತೀರಾ..? ಬನ್ನಿ ಸುಮನ್ ಹಾಡು- ಪಾಡು ಇಲ್ಲಿ ಕೇಳಿಬಿಡಿ.

ಪ್ರೀತಿ ಚಿಗೋರೋದು ಗೊತ್ತಿಲ್ಲ. ಮುರುಟಿ ಬೀಳೋದು ಗೊತ್ತಿಲ್ಲ. ವಿಶೇಷ ಅಂದ್ರೆ ಪ್ರೀತಿಗೆ ಯಾವುದೇ ಆರ್ಹತೆ ಎನ್ನುವ ತಡೆಗೋಡೆಗಳಿಲ್ಲ. ಶ್ರೀಮಂತ-ಬಡವ, ವಯಸ್ಸು- ಜಾತಿ ಯಾವುದು ಕೂಡ ಪ್ರೀತಿ ಮಾಡುವವನ ಕಣ್ಣಿಗೆ ಬೀಳೋದಿಲ್ಲ. ಅಲ್ಲಿ ಕಾಣೋದು ಬರೀ ಪ್ರೀತಿ. ಈ ಪ್ರೀತಿಯ ಮಾತನ್ನು ಹೇಳಿದವರು ಬೇರೆ ಯಾರು ಅಲ್ಲ ಅವರೇ ಪಂಚಭಾಷೆ ತಾರೆ ಸುಮನ್ ತಲ್ವಾರ್.

ಅಂದಹಾಗೆ ಸುಮನ್ ಈಸ್ ಎ ಜೆಮ್ ಪರ್ಸನ್ ಎನ್ನುವ ವಿಚಾರ ಇಡೀ ಭಾರತೀಯ ಸಿನ್ಮಾ ಇಂಡಸ್ಟ್ರಿಗೇ ಗೊತ್ತಿದೆ. ಸುಮನ್ ಶ್ರೀಷಾ ಅವರನ್ನು ಮದುವೆಯಾಗಿ ಮುದ್ದಾದ ಮಗಳು ಅಖಿಲಾಚಾ ಪ್ರತ್ಯುಶಾ ಅವರೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಈ ಟೈಮ್‌ನಲ್ಲಿ ಲವ್ವಿ-ಡವ್ವಿನ ಅಂತಾ ಪ್ರಶ್ನೆ ಮಾತ್ರ ಎಸೆಯಲು ಹೋಗಬೇಡಿ. ಸುಮನ್ ತಲ್ವಾರ್ ಲವ್‌ನಲ್ಲಿ ಬೀಳುತ್ತಾರೆ ನಿಜ. ಆದರೆ ಅದು ರಿಯಲ್ ಬದುಕಿನಲ್ಲಿ ಅಲ್ಲ. ರೀಲ್ ಬದುಕಿನಲ್ಲಿ ಸುಮನ್ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಎದ್ದು ಕೂತಿದ್ದಾರೆ. ೫೦ರ ಹರೆಯದಲ್ಲಿ ಸುಮನ್ ಸ್ಪುರದ್ರೂಪಿ ನಟ ಮತ್ತೆ ಹೀರೋವಾಗಿ ರೀಲಾಂಜ್ ಆಗುತ್ತಿದ್ದಾರೆ.

ತೆಲುಗಿನ ಇನ್ನೂ ಹೆಸರಿಟ್ಟಿಲ್ಲದ ಚಿತ್ರದಲ್ಲಿ ಸುಮನ್ ಪಕ್ಕಾ ಲವರ್‌ಬಾಯ್ ಆಗಲು ಹೊರಟ್ಟಿದ್ದಾರೆ. ಇದು ಸುಮನ್ ತಲ್ವಾರ್ ವಿಲನ್ ಗೆಟಪ್‌ನಿಂದ ಹೀರೋ ಗೆಟಪ್‌ಗೆ ಶಿಪ್ಟ್ ಆಗುತ್ತಿರುವ ಚಿತ್ರ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಚಿತ್ರ ಭಾರತೀಯ ಸಿನ್ಮಾ ಇಂಡಸ್ಟ್ರಿಯಲ್ಲಿ ಹೊಸ ರೆಕಾರ್ಡ್ ಬರೆಯಬಹುದಾದ ಚಿತ್ರವಂತೆ. ಇಲ್ಲಿ ಸುಮನ್ ಒಬ್ಬರೇ ಪುರುಷ. ಉಳಿದ ಎಲ್ಲ ಸ್ಟಾರ್ ಕಾಸ್ಟ್‌ಗಳು ಮಹಿಳಾ ಮಣಿಗಳು. ಅದು ನಿರ್ದೇಶಕರಿಂದ ಹಿಡಿದು ಕಟ್ಟಕಡೆಯ ಕಾಸ್ಟ್ಯೂಮ್ ಡಿಸೈನರ್ ವರೆಗೂ ಮಹಿಳೆಯರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಮೊದಲು ತಮಿಳು ಸಿನ್ಮಾದಲ್ಲೊಂದು ನಿರ್ದೇಶಕಿ ರೇವತಿ ಇಂತಹ ಪ್ರಯತ್ನ ಮಾಡಿದ್ದರು. ಅಲ್ಲಿ ಯಾರು ಕೂಡ ಪುರುಷರು ಇರಲಿಲ್ಲ. ಆದರೆ ತೆಲುಗಿನ ಈ ಚಿತ್ರದಲ್ಲಿ ಸುಮನ್ ಇದ್ದಾರೆ. ಈಗ ಈ ಚಿತ್ರ ಕೂಡ ರೆಕಾರ್ಡ್ ಅಬೇಲ್ ಚಿತ್ರವಾಗಲಿದೆ ಎಂಬ ಮಾತು ಬಿಸಿಲು ನಾಡಿನ ಆಂಧ್ರದಿಂದ ಹೊರ ಬಂದ ಮಾಹಿತಿ.ಕಳೆದ ವಾರವಷ್ಟೇ ಚಿತ್ರಕ್ಕೆ ಹೈದರಾಬಾದ್‌ನ ಪ್ರಖ್ಯಾತ ರಾಮನಾಯ್ಡು ಸ್ಟುಡಿಯೋದಲ್ಲಿ ಮುಹೂರ್ತ ಮಾಡಲಾಗಿದೆ.

ಖುದ್ದು ರಾಮನಾಯ್ಡು ಬಂದು ಕ್ಯಾಮೆರಾ ಚಾಲು ಮಾಡಿದ್ದರು. ಆಂಧ್ರದ ನಾನಾ ಕಡೆ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಚಿತ್ರಕ್ಕೆ ತೆಲುಗು ಪ್ರೇಕ್ಷಕರೇ ಹೆಸರು ಸೂಚಿಸಿಬಿಡಿ ಎಂದು ಆಂಧ್ರದ ಬಹುತೇಕ ಮಾಧ್ಯಮಗಳಲ್ಲಿ ಚಿತ್ರ ತಂಡ ಜಾಹೀರಾತು ನೀಡುತ್ತಿದೆ. ವರ್ಷದ ಕೊನೆಯಲ್ಲಿ ಚಿತ್ರವಂತೂ ತೆರೆಗೆ ಬರೋದು ನೂರಕ್ಕೆ ನೂರರಷ್ಟು ಖಚಿತ ಎನ್ನೋದು ಚಿತ್ರ ತಂಡದ ಭರವಸೆಯ ಮಾತು.

ಸುಮನ್ ತಲ್ವಾರ್ ಹೇಳುವಂತೆ: ಚಿತ್ರದಲ್ಲಿ ಎರಡನೇ ಬಾರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅದರಲ್ಲೂ ೫೦ರ ಹರೆಯದಲ್ಲಿ ಲವರ್ ಬಾಯ್ ಪಾತ್ರ. ಪ್ರೀತಿಗೆ ವಯಸ್ಸಿನ ಬ್ಯಾರಿಯರ್ ಇರೋದಿಲ್ಲ ಎಂದುಹೇಳಿಕೊಳ್ಳುವ ಈ ಚಿತ್ರ ಯುವಜನತೆಗೆ ಒಂದು ಹೊಸ ಸಂದೇಶ ಕೊಡುತ್ತದೆ. ನನ್ನ ಪಾಳಿಗೆ ಇದು ಸೆಕೆಂಡ್ ಚಾನ್ಸ್. ಮೊದಲು ತಮಿಳಿನ ‘ಶಿವಾಜಿ’ ಚಿತ್ರದಲ್ಲಿ ಸಿಕ್ಕಿದ ವಿಲನ್ ಪಾತ್ರ ಬಣ್ಣದ ಬದುಕಿಗೆ ಹೊಸ ಟರ್ನಿಂಗ್ ಪಾಯಿಂಟ್ ಕೊಟ್ಟಿತು. ಈ ಚಿತ್ರ ಮತ್ತೊಂದು ಟರ್ನಿಂಗ್ ಪಾಯಿಂಟ್ ಕೊಡುತ್ತದೆ ಎನ್ನೋದು ಅವರ ಭರವಸೆಯ ಮಾತು.

ಅಂದಹಾಗೆ ಸುಮನ್ ತಲ್ವಾರ್ ಈಗಾಗಲೇ ತೆಲುಗಿನಲ್ಲಿ ನೂರಕ್ಕೂ ಅಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು, ಮಲಯಾಳಂ, ಕನ್ನಡ, ಇಂಗ್ಲೀಷ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ನಾಯಕನಾಗಿ ಪ್ರೇಕ್ಷಕರ ಮುಂದೆ ಬಂದ ಸುಮನ್ ತಮ್ಮ ವೃತ್ತಿ ಬದುಕಿನ ಸೆಕೆಂಡ್ ಹಾಫ್‌ನಲ್ಲಿ ವಿಲನ್ ಪಾತ್ರಕ್ಕೆ ಒಗ್ಗಿಕೊಂಡರು. ಈಗ ತಮ್ಮ ಮೂರನೇ ಅವತಾರದಲ್ಲಿ ನಾಯಕರಾಗುತ್ತಿದ್ದಾರೆ.

ತೆಲುಗಿನಲ್ಲಿ ಸೂಪರ್‌ಸ್ಟಾರ್ ಪಟ್ಟಕ್ಕೆ ಒಂದು ಕಾಲದಲ್ಲಿ ಚಿರಂಜೀವಿಯ ಜತೆಯಲ್ಲಿ ತೊಡೆತಟ್ಟಿ ಹೋರಾಡಿದ ಸುಮನ್ ಮಂಗಳೂರಿನ ಮೂಲ್ಕಿ-ಹೆಜಮಾಡಿನವರು. ವರ್ಷದಲ್ಲಿ ಒಂದರೆಡು ಬಾರಿ ತಮ್ಮ ಊರಿಗೆ ಬಂದು ನಾಗ ದೇವರಿಗೆ ಕೈ ಮುಗಿದು ಹೋಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಚಿತ್ರಗಳಲ್ಲಿ ಹೆಚ್ಚೆಚ್ಚು ನಟಿಸಬೇಕೆನ್ನುವ ಮಹಾದಾಸೆ ಹೊತ್ತುಕೊಂಡವರು. ಆದರೆ ಕನ್ನಡ ಸಿನ್ಮಾ ಇಂಡಸ್ಟ್ರಿಯವರು ಮಾತ್ರ ಅವರನ್ನು ಸರಿಯಾಗಿ ಬಳಸಿಕೊಳ್ಳಲೇ ಇಲ್ಲ. ಇದು ಮಹಾ ದುರಂತವೇ ಸರಿ ಅಲ್ವಾ..?

Sunday, October 30, 2011

ನನ್ನ ಪತ್ರಿಕೆ ನನ್ನ ಬರಹ-31



(vk daily nk main page lead story on 31.10.2011)

ಬಾಜಿ ಕಟ್ಟುವ ಬನ್ಸಾಲಿ


ಬಾಜಿರಾವ್ ಹಾಗೂ ಆತನ ಅರ್ಧ ಮುಸ್ಲಿಂ ಪತ್ನಿ ಮಸ್ತಾನಿಯ ಕಥೆಯನ್ನಿಟ್ಟುಕೊಂಡು ಬನ್ಸಾಲಿ ಕಥೆ ಸಿದ್ಧಪಡಿಸಿದ್ದಾರೆ. ಆದರೆ ಕಳೆದ ೭ ವರ್ಷಗಳಿಂದ ಈ ಚಿತ್ರ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಆದರೂ ಚಿತ್ರವಂತೂ ಇನ್ನೂ ತೆರೆಗೆ ಬರುವ ಮಾತು ಕೇಳ್ತಿಲ್ಲಾವಂತೆ.. ಏನ್ ಕತೆ ಅಂತ್ತೀರಾ..?

ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಳೆದ ೭ ವರ್ಷಗಳಿಂದ ಚಿತ್ರದ ಹೆಸರೊಂದು ಬಹಳವಾಗಿ ಕಿವಿಗೆ ಬಡಿಯುತ್ತಿದೆ. ಆದರೆ ಚಿತ್ರವಂತೂ ಈಗಲೂ ತೆರೆಗೆ ಬಂದಿಲ್ಲ ಅನ್ನೋದು ಬೇರೆ ವಿಷ್ಯಾ. ಅಂದಹಾಗೆ ಚಿತ್ರ ‘ಬಾಜಿರಾವ್ ಮಸ್ತಾನಿ’ ಚಿತ್ರವನ್ನು ತೆರೆಗೆ ತರುತ್ತೇನೆ ಎಂದು ಓಡಾಡಿಕೊಂಡಿದ್ದ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಾರೆ ಎಂಬ ಸುದ್ದಿ ಹರಡಿಕೊಂಡಿತ್ತು. ಆದರೆ ಈಗ ಸಲ್ಲುಗೆ ಕಾದು ಸುಸ್ತಾದ, ಬನ್ಸಾಲಿ, ಸಲ್ಮಾನ್‌ನ ಬದ್ಧ ವೈರಿ ಶಾರೂಖ್‌ಗೆ ಗಾಳ ಹಾಕಿದ್ದಾರಂತೆ !
ಬನ್ಸಾಲಿ ೨೦೦೩ರಲ್ಲಿ ಈ ಸಿನಿಮಾವನ್ನು ಘೋಷಿಸುವುದರೊಂದಿಗೆ ಅಂದಿನ ಹಾಟ್ ಜೋಡಿಯಾದ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ನಟಿಸಲಿದ್ದಾರೆಂದೂ ಹೇಳಿದ್ದರು. ಆದರೆ ಯಾರ ಅದೃಷ್ಟ ಕೈ ಕೊಟ್ಟಿತೋ ಗೊತ್ತಿಲ್ಲ, ಸಲ್ಲು-ಐಶು ಜೋಡಿ ಬೇರೆಯಾಗಿ ಬಿಟ್ಟಿತು. ನಂತರ ೨೦೦೫ರಲ್ಲಿ ಕರೀನಾ ಕಪೂರ್ ಹಾಗೂ ಸಲ್ಮಾನ್ ನಟಿಸಲಿದ್ದಾರೆಂಬ ಸುದ್ದಿಯೂ ಬಂತು. ಆದರೆ ಕರೀನಾ ಆ ಆಫರ್‌ನ್ನು ತಿರಸ್ಕರಿಸಿದಳು. ನಂತರ ಮಸ್ತಾನಿ ಪಾತ್ರವನ್ನು ರಾಣಿ ಮುಖರ್ಜಿ ಮಾಡಲಿದ್ದಾಳೆ ಎನ್ನುವುದರೊಂದಿಗೆ ಆ ಸಿನಿಮಾ ಸುದ್ದಿ ತಣ್ಣ ಗಾಯಿತು.
ಆ ಮೇಲೆ ಬನ್ಸಾಲಿ ಸಾಹೇಬ್ರು ‘ಸಾವರಿಯಾ’ ಹಾಗೂ ‘ಗುಜಾರೀಶ್’ ಸಿನಿಮಾಗಳು ಬಂದು ಹೋಯಿತು. ಈಗ ಮತ್ತೆ ‘ಬಾಜಿರಾವ್ ಮಸ್ತಾನಿ’ಗೆ ಜೀವ ಕಳೆ ಬಂದಿದೆ. ಸಲ್ಲು ಕಡೆಯಿಂದ ಈ ಸಿನಿಮಾದ ಕುರಿತು ಯಾವುದೇ ಪ್ರತಿಕ್ರಿಯೆ ಇಲ್ಲದೇ ಬೇಸತ್ತ ಬನ್ಸಾಲಿ ಶಾರೂಖ್‌ಗೆ ಕಥೆ ಹೇಳಲು ಮುಂದಾಗಿದ್ದಾರೆ. ಈಗಾಗಲೇ ಶಾರೂಖ್‌ನನ್ನು ಸಂಪರ್ಕಿಸಿದ್ದಾರಂತೆ. ಅದಕ್ಕೆ ಶಾರುಖ್ ಕಡೆಯಿಂದ ಕೂಡ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ ಎನ್ನೋದು ಆಪ್ತ ಮೂಲವೊಂದರಿಂದ ಬಂದ ಮಾತು.
ಹಾಗೆ ನೋಡಿದರೆ ಶಾರೂಖ್ ಖಾನ್‌ಗೂ, ಬನ್ಸಾಲಿಗೂ ೨೦೦೭ರಲ್ಲೊಮ್ಮೆ ಮನಸ್ತಾಪ ಉಂಟಾಗಿತ್ತು. ಏಕೆಂದರೆ ಬನ್ಸಾಲಿಯವರ ‘ಸಾವರಿಯಾ’ ಹಾಗೂ ಶಾರೂಖ್‌ನ ‘ಓಂ ಶಾಂತಿ ಓಂ’ ಒಂದೇ ದಿನ ಅಂದರೆ ೨೦೦೭ ನವೆಂಬರ್ ೯ರಂದೇ ತೆರೆಗೆ ಬಂದಿತ್ತು. ಆ ಸಮಯದಲ್ಲಿ ಚಿತ್ರವನ್ನು ಮುಂದಕ್ಕುವಂತೆ ಶಾರೂಖ್ ಬನ್ಸಾಲಿಗೆ ಹೇಳಿದರೂ ಅವರು ಕೇಳಲಿಲ್ಲ. ಆ ನಂತರ ಇತ್ತೀಚೆಗೆ ತೆರೆಕಂಡ ‘ಗುಜಾರೀಶ್’ ಸಿನಿಮಾ ಸಮಯದಲ್ಲಿ ಪ್ಯಾಚ್‌ಅಪ್ ಆಯಿತು.
‘ಗುಜಾರೀಶ್’ ಸಿನಿಮಾ ನೋಡಿದ ಶಾರೂಖ್, ಬನ್ಸಾಲಿಯವರನ್ನು ಮನೆಗೆ ಕರೆದು ಬೆನ್ನುತಟ್ಟುವ ಮೂಲಕ ಇಬ್ಬರು ರಾಜಿಯಾಗಿದ್ದರು. ಆ ರಾಜಿಯ ಫಲವೇ ಈ ಸಿನಿಮಾಕ್ಕೆ ನಾಂದಿ ಎನ್ನಲಾಗುತ್ತಿದೆ. ‘ಬಾಜಿರಾವ್ ಮಸ್ತಾನಿ’ ಮರಾಠ ರಾಜನೊಬ್ಬನ ಸ್ಟೋರಿ. ಬಾಜಿರಾವ್ ಹಾಗೂ ಆತನ ಅರ್ಧ ಮುಸ್ಲಿಂ ಪತ್ನಿ ಮಸ್ತಾನಿಯ ಕಥೆಯನ್ನಿಟ್ಟುಕೊಂಡು ಬನ್ಸಾಲಿ ಕಥೆ ಸಿದ್ಧಪಡಿಸಿದ್ದಾರೆ. ಆದರೆ ಈಗ ಚಿತ್ರ ಸರಿಯಾಗಿ ತೆರೆಗೆ ಬರುತ್ತಾ ಎನ್ನೋದು ಡಾಲರ್ ಪ್ರಶ್ನೆಯಾಗಿ ಮುಂದೆ ನಿಂತಿದೆ.

ಪೋಕಿರಿ ಮಹೇಶನ ಹುಡುಗಿ ನಮ್ರತಾ !


ಮಿರಿಮಿರಿ ಮಿನುಗುವ ರ‍್ಯಾಂಪ್ ಮೇಲೆ ಬದುಕು ಕಟ್ಟುವ ಗುರಿಯನ್ನು ಇಟ್ಟುಕೊಂಡು ಬಂದ ನಮ್ರತಾ ಆಕ್ಟಿಂಗ್ ಆಯ್ಕೆ ಮಾಡಿದ್ದೇ ವಿಚಿತ್ರ. ತೆಲುಗಿನ ಪೋಕಿರಿ, ದೂಕುಡು ಚಿತ್ರದ ಪ್ರಿನ್ಸ್ ಮಹೇಶ್ ಬಾಬುಗಾಗಿ ಚಿತ್ರರಂಗವನ್ನು ತೊರೆದು ಸತಿ ಸಾವಿತ್ರಿಯಾಗಲು ಹೊರಟ್ಟಿದ್ದಾರೆ. ಏನ್ ಕತೆ ಅಂತಾ ಕೇಳ್ತೀರಾ..?

ಕೋಲು ಮುಖ. ಯಾರನ್ನೋ ಹುಡುಕಾಟದಲ್ಲಿರುವ ಸುಂದರ ಕಣ್ಣುಗಳು. ತುಟಿ ತುಂಬಿ ಬಿಡದ ನಗು ಎಲ್ಲವೂ ಒಟ್ಟು ಸೇರಿಸಿ ಹೇಳುವುದಾದರೆ ನಮ್ರತಾ ಶಿರೋಡ್ಕರ್ ತಕ್ಕಮಟ್ಟಿಗೆ ಗ್ಲಾಮ್ ಜತೆಯಲ್ಲಿ ದೇಸಿ ತಡ್ಕಾ ಹುಡುಗಿ. ಅಂದಹಾಗೆ ನಮ್ರತಾ ಇಷ್ಟ ಪಟ್ಟುಕೊಂಡು ಸಿನ್ಮಾ ಲ್ಯಾಂಡ್‌ಗೆ ಬಂದವರು ಅಲ್ಲ. ಮಿರಿಮಿರಿ ಮಿನುಗುವ ರ‍್ಯಾಂಪ್ ಮೇಲೆ ಬದುಕು ಕಟ್ಟುವ ಗುರಿಯನ್ನು ಇಟ್ಟುಕೊಂಡು ಬಂದ ನಮ್ರತಾ ಆಕ್ಟಿಂಗ್ ಆಯ್ಕೆ ಮಾಡಿದ್ದೇ ವಿಚಿತ್ರ. ಅಂದಹಾಗೆ ನಮ್ರತಾ ಹೇಳಿಕೊಳ್ಳುವಂತೆ ಆಕ್ಟಿಂಗ್ ಘರಾಣಾದಲ್ಲಿ ಹುಟ್ಟಿ ಬೆಳೆದು ನಿಂತ ಬಾಲೆ.
ಖ್ಯಾತ ಮರಾಠಿ ನಟಿ ಮೀನಾಕ್ಷಿ ಶಿರೋಡ್ಕರ್ ನಾವು ಹೇಳ ಹೊರಟಿರುವ ನಮ್ರತಾರ ಅಜ್ಜಿ. ಮೀನಾಕ್ಷಿ ಬ್ರಹ್ಮಚಾರಿ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಬಂದು ಜೋರಾಗಿ ಹೆಸರು ಮಾಡಿಕೊಂಡಿದ್ದರು. ಜತೆಗೆ ಸ್ವಿಮ್ಮಿಂಗ್ ಸೂಟ್ ಧರಿಸಿ ಈಜು ಕೊಳದಲ್ಲಿ ಮಿಂದು ಬರುವ ತಾಕತ್ತು ತೋರಿಸಿದ ದಿಟ್ಟೆ ನಾಯಕಿಯ ಮೊಮ್ಮಗಳು ಎನ್ನುವ ಕಾರಣಕ್ಕೆ ಸಿನ್ಮಾ ಜಗತ್ತು ನಮ್ರತಾರನ್ನು ಒಂದು ನಾಯಕಿಯಾಗಿ ಕಂಡಿತ್ತು.
೧೯೯೮ರಲ್ಲಿ ಸನ್ಮಾನ್ ಖಾನ್ ಹಾಗೂ ಟ್ವಿಂಕಲ್ ಖನ್ನಾ ನಟಿಸಿದ ಚಿತ್ರ ‘ಜಬ್ ಪ್ಯಾರ್ ಕೈಸೇ ಹೋತಾ ಹೈ’ಯ ಮೂಲಕ ನಮ್ರತಾ ಬಣ್ಣದ ಜಗತ್ತಿಗೆ ಅಬ್ಬೆಕಾಲ್ಟಿಟಳು. ಸಂಜಯ್ ದತ್ ಜತೆಯಲ್ಲಿ ‘ವಾಸ್ತವ್’ ಚಿತ್ರದ ಮೂಲಕ ನಮ್ರತಾ ನಾಯಕಿಯ ಇಮೇಜ್ ಉಳಿಸಿಕೊಂಡರು ಎನ್ನುವುದು ಸಿನ್ಮಾ ವಿಮರ್ಶಕರು ಹೇಳಿಕೊಳ್ಳುವ ಮಾತು. ಯಾಕೋ ಗೊತ್ತಿಲ್ಲ ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಸಿನ್ಮಾ ನಗರಿಯ ಜನ ನಮ್ರತಾರನ್ನು ಬರೀ ಪೋಷಕ ಪಾತ್ರಕ್ಕೆ ಮಾತ್ರ ಸೀಮಿತ ಮಾಡಿಬಿಡುವ ಪರಂಪರೆ ಬೆಳೆಯಿತು. ನಮ್ರತಾ ಎಲ್ಲ ಪೋಷಕ ಪಾತ್ರಗಳಿಗೆ ಜೀವ ತುಂಬಿ ಮಾಡುತ್ತಿರುವುದರಿಂದ ಅಂತಹ ಪಾತ್ರಗಳಿಗೆ ಖಾಯಂ ಗಿರಾಕಿಯಾಗಿ ಹೋದರು.
ಒಂದು ವರ್ಷ ಬಾಲಿವುಡ್‌ನಲ್ಲಿ ಒಂದರ ಹಿಂದೆ ಒಂದು ಚಿತ್ರಗಳನ್ನು ಒಪ್ಪಿಕೊಂಡು ಬಾಲಿವುಡ್‌ನಲ್ಲೂ ಹೇಳಿಕೊಳ್ಳುವಂತಹ ಚಿತ್ರಗಳನ್ನು ಕೊಡದೇ ಅಲ್ಲಿಂದ ಹೊರಬಿದ್ದು ಮಲಯಾಳಂ, ತೆಲುಗು, ತಮಿಳು, ಕನ್ನಡ ಚಿತ್ರಗಳತ್ತ ನಮ್ರತಾ ಗಮನ ಹರಿಯಿತು. ಮಲಯಾಳಂನಲ್ಲಿ ಮಮ್ಮುಟ್ಟಿ, ತೆಲುಗಿನಲ್ಲಿ ಚಿರಂಜೀವಿ, ಕನ್ನಡದಲ್ಲಿ ರವಿಚಂದ್ರನ್, ತಮಿಳಿನಲ್ಲಿ ಕೆಲವೊಂದು ನಾಯಕರ ಜತೆ ಕಾಣಿಸಿಕೊಂಡು ಕೊನೆಗೆ ಬಂದು ಬಿದ್ದದ್ದು ನಟ ಮಹೇಶ್‌ಬಾಬು ಅವರ ತೆಕ್ಕೆಗೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲಿಕ್ಕಿಲ್ಲ.
ಏನಪ್ಪಾ ಕತೆ ಅಂದ್ರೆ ೨೦೦೦ರಲ್ಲಿ ತೆಲುಗಿನಲ್ಲಿ ಬಂದ ‘ವಂಶಿ ’ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ಜತೆಯಲ್ಲಿ ನಮ್ರತಾ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರದ ಮೂಲಕವೇ ಇಬ್ಬರ ನಡುವೆ ಪ್ರೇಮ ಹುಟ್ಟಿತು. ೨೦೦೫ರ ಪೆಬ್ರವರಿಯಲ್ಲಿ ಇಬ್ಬರ ವಿವಾಹ ಕೂಡ ನಡೆದು ಹೋಯಿತು. ಈಗ ನಮ್ರತಾ ಪ್ರಿನ್ಸ್ ಮಹೇಶ್‌ರ ಜತೆ ಪುತ್ರ ಗೌತಮ್ ಕೃಷ್ಣ ಲಾಲನೆ- ಪಾಲನೆ ನೋಡಿಕೊಂಡು ಚಿತ್ರ ನಗರಿಯಿಂದ ಅಡುಗೆ ಮನೆಯಲ್ಲಿ ಸೆಟ್ಲ್ ಆಗಿ ಹೋಗಿದ್ದಾರೆ. ಕಳೆದ ಆರು ವರ್ಷಗಳಿಂದ ನಮ್ರತಾ ಸಿನ್ಮಾ ಲ್ಯಾಂಡ್‌ಗೆ ಸರಿಯಾಗಿ ಮುಖ ಮಾಡಿಲ್ಲ. ಮಾಧ್ಯಮಗಳ ಜತೆಯಲ್ಲೂ ಕಣ್ಣು ಮುಚ್ಚಾಳೆಯಾಡುವ ನಮ್ರತಾ ಪತಿರಾಯ ಪ್ರಿನ್ಸ್ ಮಹೇಶ್ ಬಾಬುರ ಕುರಿತು ಸಿಕ್ರೇಟ್ಸ್ ಮಾತನ್ನು ಮಾಧ್ಯಮವೊಂದರ ಮುಂದೆ ಆಡಿದ್ದಾರೆ. ಓವರ್ ಟೂ ನಮ್ರತಾ ಮೇಡಂ..
ಪೋಕಿರಿ ಹುಡುಗ ಮಹೇಶ:
ತೆಲುಗು ಸಿನ್ಮಾದ ಸೂಪರ್‌ಸ್ಟಾರ್ ಮಹೇಶ್‌ಬಾಬು ತುಂಬಾ ಸಿಂಪಲ್ ಮನುಷ್ಯ ಎನ್ನೋದು ನಮ್ರತಾರ ಮಾತು. ಹೈದರಾಬಾದ್‌ನಲ್ಲಿ ನಡೆಯುವ ಪೇಜ್-೩ ಪಾರ್ಟಿಗಳಂತೂ ಅವರಿಬ್ಬರೂ ಕಾಣಿಸಿಕೊಳ್ಳುವುದು ಕಡಿಮೆ. ಮನೆಯಲ್ಲಿ ಗೌತಮ್ ಜತೆ ಇರೋದು ಇಬ್ಬರಿಗೂ ಬಹಳ ಖುಷಿಯಂತೆ. ಪುತ್ರ ಗೌತಮ್ ಎಂದರೆ ಮಹೇಶ್‌ಬಾಬುವಿಗೆ ಬಹಳ ಇಷ್ಟವಂತೆ. ಗೌತಮ್ ಹೇಳಿದ ಎಲ್ಲ ಮಾತುಗಳನ್ನು ಚಾಚು ತಪ್ಪದೇ ಮಹೇಶ್ ಪಾಲಿಸುತ್ತಾರೆ. ಗೌತಮ್ ಈಗಾಗಲೇ ತಂದೆಯ ಹತ್ತಿರ ಕಾರು ಕೇಳಿದ್ದ ಅದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದರು. ಆದರೆ ನಾನು ಬಂದು ಅಡ್ಡ ನಿಂತು ಬಿಟ್ಟೆ ಎನ್ನೋದು ನಮ್ರತಾರ ಮಾತು.
ಮಹೇಶ್ ಚಿತ್ರ ರಂಗವನ್ನು ಅತೀಯಾಗಿ ಪ್ರೀತಿಸುತ್ತಾರೆ. ಅವರಿಗೆ ಕುಟುಂಬಕ್ಕಿಂತ ಮೊದಲು ಚಿತ್ರರಂಗ. ಅದಕ್ಕಾಗಿ ಈಗಲೂ ತೆಲುಗು ಸಿನ್ಮಾದಲ್ಲಿ ಸೂಪರ್ ಸ್ಟಾರ್ ಆಗಿ ನಿಂತಿದ್ದಾರೆ. ವಿವಾಹಕ್ಕಿಂತ ಮೊದಲು ಮಹೇಶ್‌ರ ಬಣ್ಣದ ಬದುಕು ಏರಿಳಿತಗಳಿಂದ ಕೂಡಿತ್ತು. ಆದರೆ ವಿವಾಹದ ನಂತರ ಯಾವಾಗಲೂ ಹಿಟ್ ಸಿನ್ಮಾಗಳನ್ನೇ ಕೊಡುತ್ತಾ ಹೋದರು ಎನ್ನುವುದು ನಮ್ರತಾ ಮಹೇಶ್‌ರ ಬಾಕ್ಸಾಫೀಸ್ ಹಿಟ್‌ಗಳ ಕುರಿತು ಕೊಡುವ ಸಮಜಾಯಿಸಿ.
ನಮ್ರತಾ ಆಕ್ಟಿಂಗ್ ಫೀಲ್ಡ್‌ಗೆ ಮತ್ತೆ ಬರೋದಿಲ್ಲ ಕಾರಣ ಆಕ್ಟಿಂಗ್ ಹಾಗೂ ಕುಟುಂಬ ಎರಡನ್ನು ಒಟ್ಟಾಗಿ ಸಾಗಿಸುವುದು ತುಂಬಾ ಕಷ್ಟವಂತೆ. ಇತ್ತೀಚಿನ ಬಾಲಿವುಡ್ ನಾಯಕಿಯರ ಬಗ್ಗೆ ನಮ್ರತಾರಿಗೆ ಬಹಳ ಬೇಸರವಿದೆ. ಸರಿಯಾಗಿ ಹಿಂದಿ ಬಾರದ ಹುಡುಗಿಯರು ಬಾಲಿವುಡ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದು ಸರಿಯಲ್ಲ ಎನ್ನೋದು ನಮ್ರತಾ ಮೇಡಂರ ವಾದ. ಟೋಟಲಿ ಮಹೇಶ್‌ಬಾಬು ಜತೆಯಲ್ಲಿ ಸುಖವಾಗಿ ಬದುಕು ಮಾಡುವುದು ಮಾತ್ರ ನನ್ನ ಬದುಕಿನ ಮುಂದಿರುವ ಕನಸ್ಸು ಎನ್ನುವ ನಮ್ರತಾ ಬಣ್ಣದ ನಗರಿಯಲ್ಲಿ ಮಿಂಚೊಂದನ್ನು ತರಲು ಸಾಧ್ಯವಾಗಿಲ್ಲ ಎನ್ನುವ ಕೊರಗು ಯಾವಾಗಲೂ ಜತೆಯಲ್ಲಿ ಇರುತ್ತದೆ ಎನ್ನುವುದನ್ನು ಹೇಳಲು ಮರೆಯುವುದಿಲ್ಲ.

Saturday, October 29, 2011

ಬಾಕ್ಸಾಫೀಸ್‌ನಲ್ಲಿ ಬಿದ್ದು ಹೋದ ರಾ.ವನ್


ಬಾಲಿವುಡ್‌ನ ಈ ವರ್ಷದ ಅತೀ ನಿರೀಕ್ಷಿತ ಚಿತ್ರ ರಾ.ವನ್‌ನಲ್ಲಿ ಪಾಪ್ ಗಾಯಕ್ ಎಕಾನ್ ‘ಚಮಕ್ ಚಲ್ಲೋ ’ ಎಂದು ಹಾಡಿ ಕುಣಿದಿದ್ದು ಎಲ್ಲರಿಗೂ ಗೊತ್ತು. ಆದರೆ ರಾ.ವನ್ ಬಾಕ್ಸಾಫೀಸ್‌ನಲ್ಲಿ ಪಲ್ಟಿ ಹೊಡೆದು ಬಿಡುವ ಭಯದಿಂದ ಶಾರೂಕ್ ಚಿತ್ರದ ಪೋಸ್ಟ್ ರಿಲೀಸ್‌ಗಾಗಿ ಪಾಪ್ ಗಾಯಕಿ ಲೇಡಿ ಗಾಗಾರನ್ನು ಕರೆದುತಂದಿದ್ದಾರೆ. ಏನ್ ಕತೆ ಅಂತಾ ಕೇಳ್ತೀರಾ..?

ಬಾಲಿವುಡ್‌ನಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿದ ಚಿತ್ರ ‘ರಾ.ವನ್’ ಗಲ್ಲಾ ಪೆಟ್ಟಿಗೆಯಲ್ಲಿ ಪಲ್ಟಿ ಹೊಡೆಯುವ ಸೂಚನೆ ಕೊಡುವ ರಿಪೋರ್ಟ್ ಕಾರ್ಡ್‌ವೊಂದು ಮೊದಲ ವಾರದ ಆರಂಭದಲ್ಲಿಯೇ ಬಂದು ಬಿಟ್ಟಿದೆ. ರಾ.ವನ್ ಚಿತ್ರ ನೋಡಿ ಬಂದ ಪ್ರೇಕ್ಷಕರು ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ವಿಷ್ಯಾವಿಲ್ಲ. ಚಿತ್ರದ ತುಂಬಾ ಓಡಾಡುವ ನವೀನ ತಂತ್ರಜ್ಞಾನದ ಮುಂದೆ ಕತೆ ಪೇಲವ ಅನ್ನಿಸಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದ ಚಿತ್ರ ಬರೀ ಮಕ್ಕಳ ವಯಸ್ಸಿಗೆ ಓಕೆ ಅಂದುಬಿಟ್ಟಿದ್ದಾರೆ.
ಆದರೆ ಕೋಟಿ ಕೋಟಿಗೆ ಮಾರಾಟವಾಗಿರುವ ಚಿತ್ರದ ಸ್ಯಾಟಲೈಟ್ ರೈಟ್ಸ್‌ಗಳು, ಹಾಡುಗಳು, ಪ್ರಾಯೋಜಕತ್ವದಿಂದ ಬಂದ ಹಣವೆಲ್ಲ ಚಿತ್ರ ಬಾಕ್ಸಾಫೀಸ್‌ನಲ್ಲಿ ಬೀಳುವ ಮೊದಲೇ ಶಾರೂಖ್ ಬಾಚಿಕೊಂಡಿದ್ದಾರೆ. ಚಿತ್ರ ಬಿಡುಗಡೆ ಕಂಡ ನಂತರ ಚಿತ್ರದ ಪ್ರಮೋಶನ್‌ಗಾಗಿ ರಾ.ವನ್ ಚಿತ್ರದ ಸೂಪರ್ ಹೀರೋಗಳನ್ನು ಹೋಲಿಕೆಯಾಗುವ ಅಟಿಕೆ ಸಾಮಗ್ರಿಗಳನ್ನು ತಂದು ಮಾರುಕಟ್ಟೆಗೆ ಸುರಿದು ಬಿಟ್ಟಿರುವ ಶಾರೂಖ್‌ಗೆ ಈಗ ಚಿತ್ರ ಓಡುತ್ತದೋ ಎನ್ನುವ ಭಯ ಹುಟ್ಟಿದೆ.
ಚಿತ್ರದಲ್ಲಿ ಕರೀನಾ, ಅರ್ಜುನ್ ರಾಂಪಾಲ್ ನಟನೆಯ ವಿಚಾರದಲ್ಲಿ ಬಹಳಷ್ಟು ಸುಧಾರಣೆಯಾಗಿದೆ ಎನ್ನುವ ಅಂಶ ಬೆಳಕಿಗೆ ಬರುವ ಜತೆಯಲ್ಲಿ ಪಾಪ್ ಗಾಯಕ ಎಕಾನ್‌ರ ‘ಚಮಕ್ ಚಲ್ಲೋ’ ಹಾಡೊಂದು ಪದೇ ಪದೇ ಕೇಳುವಂತೆ ಮಾಡುತ್ತಿದೆ. ಶಾರೂಖ್‌ನ ಸೂಪರ್ ಹೀರೋ ಪಾತ್ರ ಮಕ್ಕಳ ವಲಯದಲ್ಲಿ ಬಹಳಷ್ಟು ಕ್ರೇಜ್ ಹುಟ್ಟಿಸಿದೆ. ಚಿತ್ರದಲ್ಲಿ ಒಂದು ಉತ್ತಮ ಕತೆ ಮಿಸ್ ಆಗಿರುವುದು ಕೇವಲ ವಿಡಿಯೋ ಗೇಮ್‌ನಿಂದ ಹೊರ ಬರುವ ಪಾತ್ರದಿಂದ ಚಿತ್ರ ನಡೆಯುವ ವಿಚಾರದಲ್ಲಿ ಪ್ರೇಕ್ಷಕರು ಚಿತ್ರದ ಮೇಲೆ ಮುನಿಸು ತೋರಿಸಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ಶಾರೂಖ್ ಖಾನ್‌ರ ಟೇಬಲ್‌ಗೆ ಬಂದು ಬಿಟ್ಟಿದೆ.
ರೆಡ್‌ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಅತೀ ಹೆಚ್ಚು ೧೭೫ ಕೋಟಿ ರೂ. ಬಜೆಟ್‌ನ ರಾ.ವನ್ ಚಿತ್ರ ಬಿದ್ದು ಹೋಗುವ ಮುನ್ನ ಶಾರೂಖ್ ಬಾಕ್ಸಾಫೀಸ್‌ನಲ್ಲಿ ಚಿತ್ರವನ್ನು ಏನಾದರೂ ಮಾಡಿ ಗೆಲ್ಲಿಸಿ ಬಿಡಬೇಕೆನ್ನುವ ಹಟಕ್ಕೆ ಬಿದ್ದು ಬಿಟ್ಟಿದ್ದಾರೆ. ಅದಕ್ಕಾಗಿ ಚಿತ್ರದ ಪ್ರಮೋಶನ್‌ಗಾಗಿ ಮತ್ತೆ ಕೆಲವು ಕೋಟಿ ರೂ. ಸುರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ಅವರ ಆಪ್ತ ವಲಯದಿಂದ ಬಂದ ಮಾಹಿತಿ. ಎಕಾನ್‌ರ ಹಾಡು ಯಾವ ರೀತಿಯಲ್ಲಿ ರಾ.ವನ್ ಚಿತ್ರದ ಓಟಕ್ಕೆ ನೆರವು ನೀಡುತ್ತಿದೆಯೋ ಅದರಂತೆ ಚಿತ್ರ ಬಿಡುಗಡೆಯ ನಂತರ ಅದರ ಓಡಾಟಕ್ಕೆ ನೆರವು ನೀಡಲು ಇನ್ನೊಬ್ಬ ಪಾಪ್ ಗಾಯಕಿ ಲೇಡಿ ಗಾಗಾರನ್ನು ಹೊತ್ತು ತರುವ ಯೋಜನೆಯೊಂದು ಬಾಲಿವುಡ್‌ನಲ್ಲಿ ನಡೆಯುತ್ತಿದೆ.
ಎಕಾನ್ ಹಾಡಿದ ‘ಚಮಕ್ ಚಲ್ಲೋ’ ಹಾಡನ್ನು ಲೇಡಿ ಗಾಗಾ ಚಿತ್ರ ಬಿಡುಗಡೆಯಾದ ನಂತರ ಹಾಡಲಿದ್ದಾರೆ. ಅದಕ್ಕಾಗಿ ಶಾರೂಖ್ ಹಾಗೂ ಲೇಡಿ ಗಾಗಾ ಒಂದು ಸುತ್ತಿನ ಮಾತುಕತೆಯನ್ನು ಮುಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಸಂಗೀತ ನಿರ್ದೇಶಕರಾದ ವಿಶಾಲ್ ಶೇಖರ್ ಲೇಡಿ ಗಾಗಾರಿಗೆ ಟ್ಯೂನ್‌ವೊಂದನ್ನು ರೆಡಿ ಮಾಡಿಕೊಂಡು ನಿಂತಿದ್ದಾರೆ ಎನ್ನುವ ಸುದ್ದಿ ಹರಡಿಕೊಂಡಿದೆ. ಚಿತ್ರದ ನಿರ್ದೇಶಕ ಅನುಭವ್ ಸಿನ್ಹಾ ಈ ಹಾಡನ್ನು ಚಿತ್ರದಲ್ಲಿ ಸೇರಿಸಿಕೊಳ್ಳುವ ನಿರ್ಧಾರಕ್ಕೂ ಬಂದು ನಿಂತಿದ್ದಾರೆ. ಅಂದಹಾಗೆ ಎರಡು- ಮೂರು ವಾರದಲ್ಲಿ ರಾ.ವನ್ ಚಿತ್ರದ ಪ್ರಮೋಶನಲ್ ಹಾಡಿನಲ್ಲಿ ಲೇಡಿ ಗಾಗಾ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿ ಬೆಳೆದು ನಿಂತಿದೆ. ಆದರೆ ಇಬ್ಬರ ಡೇಟ್ಸ್‌ಗಳು ಹೊಂದಾಣಿಕೆಯಾಗದ ಕಾರಣ ಈ ಹಾಡು ಚಿತ್ರದಲ್ಲಿ ಬರಲು ಕೊಂಚ ಟೈಮ್ ಹಿಡಿಯುವ ಚಾನ್ಸು ಇದೆ ಎನ್ನುವುದು ಅನುಭವ್‌ರ ಮಾತು. ರಾ.ವನ್ ಚಿತ್ರ ಲೇಡಿ ಗಾಗಾರ ಹಾಡಿನ ಮೂಲಕವೇ ಹಿಟ್ ಆಗುತ್ತೋ ಕಾದು ನೋಡಬೇಕು ಅಲ್ವಾ..?

Monday, October 24, 2011

ಕರಾವಳಿಯಲ್ಲಿ ನಂದಿನಿ ಮಾಯ !


ನಂದಿನಿ ಅವಳು ನಮ್ಮವಳು ಎನ್ನದ ಕರಾವಳಿಗರಿಲ್ಲ. ಕನಕಗಿರಿಯಿಂದ ಹಿಡಿದು ಸಸಿಹಿತ್ಲುವಿನ ತನಕ ಅಂಕುಡೊಂಕು ವೈಯಾರದಿಂದ ಓಡಾಡಿಕೊಂಡಿರುವ ನಂದಿನಿ ಭವಿಷ್ಯದ ಪುಟದಲ್ಲಿ ಮರೆಯಾಗಿ ಹೋಗುತ್ತಾಳಾ..? ನಂದಿನಿಯ ಓಡಾಟಕ್ಕೆ ಧಕ್ಕೆ ಮಾಡಿದವರಾರು..? ಈ ಪ್ರಶ್ನೆಗೆ ಉತ್ತರದ ಹುಡುಕಾಟ ಇಲ್ಲಿ ನಡೆದಿದೆ.

ಸರಾಗವಾಗಿ ಹರಿದಾಡುವ ಒಂದು ನದಿ ಹಲವು ನಾಗರಿಕತೆಯ ಉಗಮಕ್ಕೆ ಕಾರಣ ಎನ್ನುವ ಮಾತನ್ನು ಇತಿಹಾಸದ ನೂರಾರು ಪುಟಗಳು ಬಾಯಿ ಬಡಿದುಕೊಂಡು ಹೇಳುತ್ತಿದೆ. ದೇಶದ ಬಹುತೇಕ ನಾಗರಿಕತೆಗಳು ನದಿ ತಟದಲ್ಲಿ ಬೆಳೆದು, ವಿನಾಶ ಹಾದಿಯನ್ನು ಹಿಡಿದುಕೊಂಡ ಉದಾಹರಣೆಗಳಿವೆ. ಇಂತಹವುಗಳ ನಡುವೆ ಕರಾವಳಿಯ ನಂದಿನಿ ಬಂದು ನಿಂತುಬಿಟ್ಟಿದ್ದಾಳೆ. ಕರಾವಳಿಯ ಪುಟ್ಟ ನದಿ ನಂದಿನಿಯ ಅಧ್ಯಾಯ ಕೊನೆಗೊಳ್ಳುತ್ತದೆ ಎನ್ನುವ ಭಯ ಈಗ ದಟ್ಟವಾಗಿ ಹುಟ್ಟಿಕೊಂಡಿದೆ.
ಅಂದಹಾಗೆ ಇಲ್ಲಿ ಒಂದು ಭವ್ಯವಾದ ನಾಗರಿಕತೆ ಎದ್ದು ನಿಂತಿಲ್ಲ. ಆದರೂ ಪ್ರತಿನಿತ್ಯ ಸಾವಿರಾರು ಮಂದಿ ನಂದಿನಿಯ ಕೃಪಾಕಟಾಕ್ಷದಿಂದ ಬದುಕು ಕಟ್ಟುತ್ತಿದ್ದಾರೆ. ನಂದಿನಿ ನದಿ ಕಟೀಲು ದೇವಸ್ಥಾನದ ಉಗಮಕ್ಕೆ ಕಾರಣವಾದರಿಂದ ಅವಳಿಗೊಂದು ಪ್ರತ್ಯೇಕವಾದ ಗೌರವ ಭಾವನೆ ಕರಾವಳಿಗರ ಮನಸ್ಸಿನಲ್ಲಿದೆ.
೪೦ ಕಿ.ಮೀ.. ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ನದಿ ಉಗಮವಾಯಿತು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತಾ ಮೂಚ್ಚುರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಹರಿಯುವ ನಂದಿನಿ ಕಡಲಿಗೆ ಸೇರಿ ಮುಕ್ತಿ ಕಾಣುತ್ತಾಳೆ.
ನಂದಿನಿ ಎಂಬ ಜೀವ ಜಲ:
ಒಂದು ಲೆಕ್ಕಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಬರೋಬರಿ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನಿ ಉದ್ದ ೪೦ ಕಿ.ಮೀ. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ. ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.
ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು,ಗುಂಡಾವು,ನೀರ್‌ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು,ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರಿನ ತಡೆಗೆ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತದೆ.
ಹಾಡು ಮಿಜಾರು ವಿಷ್ಣು ಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನ, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿದೆ.
ಯಾರಿಗೆ ಹೇಳೋದು ಪ್ರಾಬ್ಲಂ:
ಅಂದಹಾಗೆ ನಂದಿನಿಯಲ್ಲಿ ಈಗ ಸಮಸ್ಯೆಗಳು ಕಾಣಲು ಆರಂಭವಾಗಿದೆ. ಪಾವಂಜೆ,ಚಿತ್ರಾಪು, ಕೊಳವೈಲು, ಸಸಿಹಿತ್ಲು, ಮುಂಡ ಸೇರಿದಂತೆ ಕೆಲವು ಭಾಗಗಳಲ್ಲಿ ಅರಣ್ಯ ಇಲಾಖೆಯವರು ನೆಟ್ಟ ಖಾಂಡ್ಲಾ ಗಿಡಗಳು ನದಿಯ ಹರಿವನ್ನು ಬದಲಾಯಿಸಲು ಹೊರಟಿದೆ.
ನದಿಯಲ್ಲಿ ತುಂಬಿಕೊಂಡಿರುವ ಹೂಳು ನದಿಯ ಆಳವನ್ನು ಕಡಿಮೆ ಮಾಡುತ್ತಾ ಬಂದಿದೆ. ನದಿ ಭೂಮಿ ಅತ್ರಿಕ್ರಮಣ ಸಮಸ್ಯೆಯಿಂದ ನಂದಿನಿ ತನ್ನ ಹರಿವಿಕೆಯ ಪಥವನ್ನು ಮುಂಡದಲ್ಲಿ ಬದಲಾಯಿಸಿಕೊಂಡಿದೆ. ನಂದಿನಿಯ ಓಡಾಟದ ಪ್ರದೇಶಗಳಲ್ಲಿ ನದಿಯನ್ನು ಕಟ್ಟಿಹಾಕುವ ಪ್ರಯತ್ನಗಳು ನಿರಂತರವಾಗಿ ಮುಂದುವರಿದರ ಪಲವಾಗಿ ನಂದಿನಿಯ ಭವಿಷ್ಯ ಕತ್ತಲಿನಲ್ಲಿ ಮುಳುಗಿದೆ.
ನದಿ ಭೂಮಿ ಅತಿಕ್ರಮಣ, ಖಾಂಡ್ಲಾ ಗಿಡಗಳ ತೊಂದರೆ, ನದಿಯ ಹೂಳೆತ್ತಲು ಇರುವ ಸಮಸ್ಯೆಗಳು ನಂದಿನಿಯ ಭವಿಷ್ಯ ಮುಂದಿನ ಕೆಲವು ವರ್ಷಗಳಲ್ಲಿ ಮುಗಿದು ಹೋಗುತ್ತದೆ ಎನ್ನುವುದು ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಮಹಾಬಲ ಸಾಲ್ಯಾನ್ ಅವರ ಮಾತು. ಅವರು ಹೇಳುವಂತೆ ‘ ನದಿ ಭೂಮಿ ಅತಿಕ್ರಮಣ ಮಾಡುವ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಮುಂದೆ ದೂರು ಕೊಟ್ಟಿದ್ದೇವೆ. ಖಾಂಡ್ಲಾ ಗಿಡಗಳನ್ನು ತೆಗೆಯುವಂತೆ ಈ ಮೊದಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಆದರೂ ಅರಣ್ಯ ಇಲಾಖೆ ಅದನ್ನು ಗಮನಕ್ಕೆ ತಂದುಕೊಂಡಂತೆ ಇಲ್ಲ. ಈ ಖಾಂಡ್ಲಾದಿಂದ ಅಲ್ಲಿಯೇ ಕಸಕಡ್ಡಿ, ಮಣ್ಣು ಸೇರಿ ಪ್ರತ್ಯೇಕವಾದ ಗುಡ್ಡೆಗಳು ನದಿಯಲ್ಲಿ ನಿರ್ಮಾಣಗೊಂಡಿದೆ. ಇದು ನಂದಿನಿ ನಿರಂತರ ಓಡಾಟಕ್ಕೆ ಬ್ರೇಕ್ ಕೊಟ್ಟಿದೆ ಅನ್ನೋ ದು ಅವರ ಮಾತು.
ಹೂಳು ನಂದಿನಿಯಲ್ಲಿ ಸಧ್ಯಕ್ಕೆ ಉದ್ಭವಿಸಿರುವ ಸಮಸ್ಯೆ. ಈ ಹೂಳಿನಿಂದ ನಂದಿನಿಯ ಆಳ ಕಡಿಮೆಯಾಗುತ್ತಿದ್ದಂತೆ ನದಿಯಲ್ಲಿ ಓಡುವ ನೀರು ಅಕ್ಕಪಕ್ಕದ ಕೃಷಿ ಭೂಮಿಯಲ್ಲಿ ಓಡುತ್ತಿದೆ. ಬೇಸಿಗೆಯಲ್ಲಿ ನಂದಿನಿ ಬರ ಪೀಡಿತಳಂತೆ ಕಂಡರೆ ಮಳೆಗಾಲದಲ್ಲಿ ಉಕ್ಕಿಬಿಕ್ಕಿ ಹರಿಯುತ್ತಾಳೆ. ನಂದಿನಿ ಉಕ್ಕಿ ಹರಿಯುವುದರಿಂದ ಅಕ್ಕಪಕ್ಕದ ಕೃಷಿ ಭೂಮಿಯಲ್ಲಿ ನೀರು ತುಂಬಿಕೊಳ್ಳುತ್ತದೆ.
ಸರಕಾರಿ ಲೆಕ್ಕಚಾರದ ಪ್ರಕಾರ ನದಿಯ ಹೂಳೆತ್ತಲು ಯಾವುದೇ ಅನುದಾನವಿಲ್ಲ. ಆದರೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನದಿಯ ಹೂಳೆತ್ತಲು ಅವಕಾಶವಿದೆ. ಆದರೆ ಸಂಬಳದ ಆಧಾರದಲ್ಲಿ ಯೋಜನೆ ನಡೆಯುವುದರಿಂದ ಯಾರು ಕೂಡ ಮುಂದೆ ಬರಲು ಒಪ್ಪುತ್ತಿಲ್ಲ. ಜಿಲ್ಲೆಯ ನದಿಗಳಲ್ಲಿರುವ ಹೂಳನ್ನು ತೆಗೆಯಲು ಪ್ರತ್ಯೇಕವಾದ ಅನುದಾನವೊಂದನ್ನು ಸರಕಾರ ಇಟ್ಟಿರಬೇಕು ಎನ್ನೋದು ಮಹಾಬಲ ಸಾಲ್ಯಾನ್‌ರ ಅಭಿಮತ.
ಇದು ಬರೀ ನಂದಿನಿಯ ಎಂಡ್ ಪಾಯಿಂಟ್ ಮಾತು. ಆದರೆ ನದಿಯ ಆರಂಭದಲ್ಲೂ ಸಮಸ್ಯೆಗಳಿವೆ. ಕಟೀಲಿನ ಮೂಲಕ ಹರಿಯುವ ನಂದಿನಿಯಲ್ಲಿ ಅಪಾರ ಪ್ರಮಾಣದಲ್ಲಿ ಹೋಟೆಲ್ ತ್ಯಾಜ್ಯಗಳನ್ನು ಬಿಡಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಳೆಯ ದೇವರ ಪೋಟೋಗಳ ಸಮೇತ, ಪ್ಲಾಸ್ಟಿಕ್ ಲಕೋಟೆಗಳನ್ನು ತಂದು ನೀರಿನಲ್ಲಿ ಬಿಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕಟೀಲಿನಲ್ಲಿ ನಂದಿನಿಯ ಹೂಳೆತ್ತುವ ಸಂದರ್ಭ ಈ ತ್ಯಾಜ್ಯಗಳು ಕಾಣಿಸಿಕೊಂಡಿತ್ತು !
ಕೇಳ್ರೋಪ್ಪೋ ನದಿ ಪುರಾಣ
ಭೂಮಿಯಲ್ಲಿ ಹನ್ನೆರಡು ವರ್ಷಗಳ ಕಾಲ ಭೀಕರ ಬರಗಾಲ. ಎಲ್ಲೆಲ್ಲೂ ಜನರ ಹಾಹಾಕಾರ. ಇದರಿಂದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿಕೊಂಡು ಕಾಮಧೇನುವನ್ನು ತರಲು ದೇವಲೋಕಕ್ಕೆ ಪ್ರಯಾಣ ಬೆಳೆಸಿದ. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನು ವರುಣಲೋಕಕ್ಕೆ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನಿಯನ್ನು ಕಳುಹಿಸಿಕೊಡುವುದಾಗಿ ಹೇಳಿಕೊಂಡನು. ಅದರಂತೆ ನಂದಿನಿಯನ್ನು ಕರೆದು, ‘ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು’ ಎಂದನು.
ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ ಜಾಬಾಲಿ ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು ಎನ್ನುವ ಕತೆಯೊಂದು ಪುರಾಣದಲ್ಲಿ ಓಡಾಡಿಕೊಂಡಿದೆ.
ನಂದಿನಿಯಿಂದ ಕರೆಂಟು !
ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲದ ಸುತ್ತಲೂ ಹರಿಯುವ ನಂದಿನಿ ನದಿಯಲ್ಲಿ ೨೫ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯೊಂದು ಸುದ್ದಿಯಲ್ಲಿದೆ. ನಂದಿನಿ ಹತ್ತು ತಿಂಗಳ ಮಟ್ಟಿಗೆ ಸರಾಗವಾಗಿ ಹರಿಯುವ ಕಾರಣ ಕಟೀಲು ದೇವಸ್ಥಾನಕ್ಕೆ ವಿದ್ಯುತ್ ಪೂರೈಕೆ ಮಾಡಬಹುದು ಎನ್ನೋದು ಜಿ.ಕೆ. ರತ್ನಾಕರ್ ಅವರ ಹೇಳಿಕೆ. ಈಗಾಗಲೇ ೨೭೭ ಕಡೆಗಳಲ್ಲಿ ಜಲ ವಿದ್ಯುತ್ ಘಟಕಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಹೇಳುವಂತೆ ಸುಮಾರು ನೂರು ಮೀಟರ್ ದೂರದಲ್ಲಿರುವ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪ್ ಮೂಲಕ ವೇಗವಾಗಿ ಹರಿಸಿದರೆ ೪ತಿಂಗಳ ಕಾಲ ಒಂದು ಮೆಗಾವ್ಯಾಟ್‌ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ ೩-೪ ಕಿಂಡಿಗಳಲ್ಲಿ ಟರ್ಬನೈರ್‌ನಿಂದ ನೂರು ಕೆವಿಯಷ್ಟು ವಿದ್ಯುತ್‌ನ್ನು ಆರು ತಿಂಗಳ ಕಾಲ ನಿರಂತರವಾಗಿ ಪಡೆಯಬಹುದು.

ನನ್ನ ಪತ್ರಿಕೆ ನನ್ನ ಬರಹ-29



(vk daily lvk puravani published dis article on 24.10.2011)

Friday, October 21, 2011

ರೇಗೊ ಬಾಲ್ಕನಿಯಲ್ಲಿ ಮೇಕಿಂಗ್ ಆಫ್ ರಾ.ವನ್


ಬಾಲಿವುಡ್‌ನ ಹೈ ಬಜೆಟ್ ಚಿತ್ರ ರಾ.ವನ್‌ನ ಬಿಡುಗಡೆಗೆ ಮೊದಲೇ ಕುತೂಹಲಕಾರಿ ಅಂಶಗಳು ಒನ್ ಆಂಡ್ ಒನ್‌ಲೀ ಲವಲವಿಕೆಗೆ ಸಿಕ್ಕಿ ಬಿಟ್ಟಿದೆ. ರಾ.ವನ್ ಮುಹೂರ್ತದಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೂ ಶಾರೂಕ್ ಹಾಗೂ ಚಿತ್ರ ನಿರ್ದೇಶಕ ಅನುಭವ್ ಸಿನ್ಹಾರಿಗೆ ಜತೆಗೂಡಿದ ಮಂಗಳೂರು ಸಹೋದರರು ಹೇಳಿದ ಮಾತಿದು.

ರಾ.ವನ್ ಇದು ಬಾಲಿವುಡ್‌ನ ಹೈ ಬಜೆಟ್ ಸಿನ್ಮಾ. ಇನ್ನೂ ಕೂಡ ಥಿಯೇಟರ್ ಕಡೆ ಮುಖ ಮಾಡದ ಸಿನ್ಮಾ ಕುರಿತು ಈಗಾಗಲೇ ದೊಡ್ಡ ಹೈಪ್ ಪ್ರೇಕ್ಷಕರ ವಲಯದಲ್ಲಿ ಬಂದು ಬಿಟ್ಟಿದೆ.
ಶಾರೂಖ್ ಖಾನ್‌ರ ಸಿನ್ಮಾ ಬದುಕಿನಲ್ಲಿ ಇದೊಂದು ಮಹತ್ತರ ಚಿತ್ರವಾಗಲಿದೆ ಎನ್ನುವ ಮಾತು ಬಾಲಿವುಡ್ ಪಡಸಾಲೆಯಲ್ಲಿ ಹರಡಿಕೊಂಡು ಬಿಟ್ಟಿದೆ. ಸ್ವಂತ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ಬರುವ ಚಿತ್ರ ಎನ್ನು ಕುತೂಹಲ ಕೂಡ ಬೀಡು ಬಿಟ್ಟಿದೆ.
ಅಂದಹಾಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಬರೋಬರಿ ೩೫ ಕೋಟಿಗೆ ಸ್ಟಾರ್ ಟಿವಿಗೆ ಬಿಕರಿಯಾಗಿದೆ. ಚಿತ್ರದ ಹಾಡೊಂದನ್ನು ಅಮೆರಿಕದ ಖ್ಯಾತ ಸಿಂಗರ್ ಎಕೋನ್ ಹಾಡಿದ್ದಾರೆ. ಈಗಾಗಲೇ ಎಕೋನ್‌ರ ‘ಚಮಕ್ ಚಲ್ಲೋ’ ಹಾಡು ಟಾಫ್ ಟೆನ್ ರೇಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತು ಕೇಕೆ ಹಾಕುತ್ತಿದೆ.
ರಾ.ವನ್ ಕೋಟಿಗಟ್ಟಲೆ ಬಜೆಟ್‌ನ ನಡುವೆ ಕಾಮಿಕ್ಸ್, ವಿಡಿಯೋ ಗೇಮ್ಸ್, ಆನ್‌ಲೈನ್ ಪಬ್ಲಿಸಿಟಿ ಅಂತಾ ಹೇಳಿಕೊಂಡು ಸರಿಸುಮಾರು ೨೦೦ ಕೋಟಿಯ ರಾ.ವನ್ ಭಾರತೀಯ ಚಿತ್ರಲೋಕದಲ್ಲಿ ಹೊಸ ಪತಾಕೆ ಹಾರಿಸುವ ಎಲ್ಲ ನಿರ್ಧಾರವನ್ನು ಮಾಡಿಕೊಂಡು ಬಂದಿದೆ. ಹಿಂದಿ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ಬರುವ ರಾ.ವನ್ ಚಿತ್ರದಲ್ಲಿ ಬಹುತೇಕ ಹಾಲಿವುಡ್ ಚಿತ್ರಗಳ ಟೆಕ್ನಿಷಿಯನ್‌ಗಳು ಕೆಲಸ ಮಾಡಿದ್ದಾರೆ.
ಬಾಲಿವುಡ್‌ನ ಹೈ ಬಜೆಟ್ ಚಿತ್ರ ರಾ.ವನ್‌ನ ಬಿಡುಗಡೆಗೆ ಮೊದಲೇ ಕುತೂಹಲಕಾರಿ ಅಂಶಗಳು ಒನ್ ಆಂಡ್ ಒನ್‌ಲೀ ಲವಲವಿಕೆಗೆ ಸಿಕ್ಕಿ ಬಿಟ್ಟಿದೆ. ರಾ.ವನ್ ಮುಹೂರ್ತದಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೂ ಶಾರೂಕ್ ಹಾಗೂ ಚಿತ್ರ ನಿರ್ದೇಶಕ ಅನುಭವ್ ಸಿನ್ಹಾರಿಗೆ ಸಾಥ್ ಕೊಟ್ಟ ಮಂಗಳೂರು ಮೂಲ್ಕಿ ಮೂಲದ ಮೂಡು ಮನೆಯ ಪ್ರದೀಪ್ ಜೆ.ಶೆಟ್ಟಿ, ಪ್ರಕಾಶ್ ಜೆ.ಶೆಟ್ಟಿ ಹಾಗೂ ಪ್ರಶಾಂತ್ ಜೆ.ಶೆಟ್ಟಿ ರಾ.ವನ್ ಚಿತ್ರದ ಸಿಕ್ರೇಟ್ಸ್ ಹಾಗೂ ತೀರಾ ಅಪರೂಪದ ಚಿತ್ರಗಳನ್ನು ಲವಲವಿಕೆಯ ಜತೆಯಲ್ಲಿ ಹಂಚಿಕೊಂಡಿದ್ದಾರೆ.
‘ರಾ.ವನ್ ಟೋಟಲಿ ಹಾಲಿವುಡ್ ಮಾದರಿಯ ಚಿತ್ರ. ಬಜೆಟ್, ಸ್ಟೋರಿಲೈನ್, ಮೇಕಿಂಗ್ ವರ್ಶನ್‌ನಿಂದ ಹಿಡಿದು ತಾಂತ್ರಿಕ ವರ್ಗದ ವರೆಗೂ ಎಲ್ಲವೂ ಹಾಲಿವುಡ್ ಫ್ಲೇವರ್ ಕಾಣಿಸಿಕೊಳ್ಳುತ್ತದೆ. ಕಳೆದ ೨೦ ವರ್ಷಗಳಿಂದ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ ಮಾರಾಯ್ರೆ. ಇಂತಹ ವಿಶೇಷ ಅನುಭವ ಈ ಮೊದಲು ಖಂಡಿತ ಆಗಿಲ್ಲ. ಸವಾಲುಗಳ ಜತೆಯಲ್ಲಿ ಕೆಲಸ ಮಾಡೋದು ಸುಲಭವಲ್ಲ ಎನ್ನುತ್ತಾರೆ ಪ್ರಕಾಶ್ ಶೆಟ್ಟಿ.
ಶಾರೂಕ್ ಜತೆಯಲ್ಲಿ ಇದು ಐದನೇ ಮೂವೀ. ಶಾರೂಕ್ ಎಂದರೆ ಅಹಂಕಾರ ಇಲ್ಲದ ಮನುಷ್ಯ.
ಲೈಟ್ಸ್ ಮ್ಯಾನ್‌ಗಳಿರಲಿ ಚಿತ್ರದ ಉಳಿದ ಕಾಸ್ಟ್‌ಗಳಿರಲಿ ಎಲ್ಲರ ಜತೆಯಲ್ಲಿ ಬೆರೆತುಕೊಂಡು ಕೆಲಸ ಮಾಡುತ್ತಾರೆ. ಅನುಭವ್ ನಿರ್ದೇಶಕರಾಗಿ ಬಹಳ ಒಳ್ಳೆಯವರು ಆದರೆ ಟೆಕ್ನಿಕಲಿ ತುಂಬಾ ವೀಕ್. ದೊಡ್ಡ ಬಜೆಟ್ ಚಿತ್ರವನ್ನು ತುಂಬಾ ಉತ್ತಮವಾಗಿ ಪರದೆಗೆ ತಂದುಕೊಟ್ಟಿದ್ದಾರೆ ಎನ್ನೋದು ಹೆಮ್ಮೆಯ ವಿಷ್ಯಾ ಅಂತಾರೆ ಪ್ರಕಾಶ್.
‘ರಾ.ವನ್ ಮಾರ್ಚ್೨೨,೨೦೧೦ರಂದು ಮುಂಬಯಿಯಲ್ಲಿ ಶೂಟಿಂಗ್ ಆರಂಭ ಮಾಡಿತ್ತು. ಮುಂಬಯಿ, ಲೊನಾವಾಲಾ, ಗೋವಾ, ಹೈದರಾಬಾದ್, ಲಂಡನ್ ಹೀಗೆ ಎಲ್ಲ ಕಡೆ ಸುತ್ತಾಡಿಕೊಂಡು ಚಿತ್ರ ಮಾಡಲಾಗಿದೆ. ರಜನೀಕಾಂತ್ ಅಭಿನಯದ ರೊಬೋಟ್ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದಲ್ಲಿ ಒರಿಜಿನಾಲಿಟಿಗೆ ಬಹಳಷ್ಟು ಮಹತ್ವ ಕೊಡಲಾಗಿದೆ. ರೊಬೋಟ್‌ನಲ್ಲಿ ಸೂಪರ್‌ಇನ್ಪೋ ಮಾಡಿ ಚಿತ್ರೀಕರಣ ಮಾಡಿದರೆ ಅದಕ್ಕಿಂತ ಭಿನ್ನವಾಗಿ ರಿಯಾಲಿಟಿಗೆ ತಾಗುವಂತೆ ಚಿತ್ರವನ್ನು ತರಲಾಗಿದೆ. ಕತೆಯಲ್ಲೂ ತುಂಬಾ ಭಿನ್ನತೆಯನ್ನು ಕಾಯ್ದುಕೊಳ್ಳಲಾಗಿದೆ ಎನ್ನೋದು ಪ್ರಕಾಶ್‌ರ ಸಹೋದರ ಪ್ರಶಾಂತ್ ಶೆಟ್ಟಿಯ ಮಾತು.
‘ರಾ.ವನ್‌ನಲ್ಲಿ ಶಾರೂಕ್ ಹಾಗೂ ಅರ್ಜುನ್ ರಾಂಪಾಲ್‌ಗಾಗಿ ವಿದೇಶದಿಂದ ತಂದ ೭ ಬಾಡಿ ಶೂಟ್‌ಗೆ ಬರೋಬರಿ ೧೭ ಕೋಟಿ ಖರ್ಚು ಮಾಡಲಾಗಿದೆ. ಈ ಬಾಡಿಶೂಟ್‌ಗಳು ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗೆ ಬಾಡಿ ಶೂಟ್ ಮಾಡಿಕೊಡುತ್ತಿದ್ದ ಕಂಪನಿಯಿಂದ ತರಿಸಲಾಗಿತ್ತು. ಅದರಲ್ಲೂ ಅದರ ಮೈನ್‌ಟೈನ್ ಮಾಡಲು ಮೂವರು ಸಹಾಯಕರಿದ್ದರು. ಅವರಿಗೆ ದಿನವೊಂದಕ್ಕೆ ೫೦ ಸಾವಿರ ಖರ್ಚು ಮಾಡಲಾಗುತ್ತಿತ್ತು. ಖರ್ಚಿನ ವಿಚಾರಲ್ಲಿ ರಾ.ವನ್ ಹಾಲಿವುಡ್ ಚಿತ್ರಗಳನ್ನೇ ಮೀರಿಸುವಂತಿದೆ ಎನ್ನೋದು ಮತ್ತೊಬ್ಬ ಸಹೋದರ ಪ್ರದೀಪ್ ಶೆಟ್ಟಿಯ ಮಾತು.
‘ಚಿತ್ರದ ಪ್ರಮುಖ ಭಾಗವೊಂದರಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ ರಜನೀಕಾಂತ್ ಸೇರಿದಂತೆ ಸಂಜಯ್ ದತ್ ಹಾಗೂ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಶಾರೂಕ್ ಚಿತ್ರದಲ್ಲಿ ಜೀ-ವನ್ ಎನ್ನುವ ವಿಡಿಯೋ ಗೇಮ್ ತಯಾರಿಸುವ ವ್ಯಕ್ತಿ. ತನ್ನ ಮಗನ ದೃಷ್ಟಿಯಲ್ಲಿ ಶಾರೂಕ್ ಹೀರೋ ಆಗಲು ಹೋಗಿ ವಿಡಿಯೋ ಗೇಮ್‌ವೊಂದನ್ನು ತಯಾರಿಸುತ್ತಾನೆ. ಅದರಲ್ಲಿ ಅರ್ಜುನ್ ರಾಂಪಾಲ್ ರಾ-ವನ್ ಎನ್ನುವ ವಿಲನ್ ಆಗಿ ಬಂದರೆ ಇತ್ತಕಡೆ ಶಾರೂಕ್ ಜೀ-ವನ್ ಆಗಿ ಬರುತ್ತಾನೆ. ಇದರ ನಡುವೆ ನಡೆಯುವ ಸನ್ನಿವೇಶಗಳು, ಕ್ಲೈಮಾಕ್ಸ್ ಸೀನ್‌ಗಳು ನೋಡಲು ಥಿಯೇಟರ್‌ಗೆ ಹೋಗಬೇಕು ಎನ್ನೋದು ಪ್ರಕಾಶ್ ಶೆಟ್ಟಿಯ ಮಾತು.
ಅಂದಹಾಗೆ ರಾ-ವನ್ ಇದೇ ಅಕ್ಟೋಬರ್ ಅಂತ್ಯದೊಳಗೆ ನಿಮ್ಮ ನೆಚ್ಚಿನ ಥಿಯೇಟರ್ ಮಂದಿರಗಳಿಗೆ ದಾಳಿ ಮಾಡಲಿದೆ. ೩ಡಿಯಲ್ಲೂ ಚಿತ್ರ ಕೆಲವೊಂದು ಥಿಯೇಟರ್‌ಗಳಿಗೆ ಬರಲಿದೆ. ಹಾಡುಗಳು ಈಗಾಗಲೇ ಸೂಪರ್ರೋ ಅಂತಾ ಹೇಳಿಕೊಂಡು ಆಗಿದೆ. ಇನ್ನೂಳಿದಂತೆ ಚಿತ್ರ ನೋಡಿಕೊಂಡು ಬನ್ನಿ ಮತ್ತೇ ನೀವೇ ಹೇಳ್ತೀರಾ ರಾ.ವನ್ ಈಸ್ ಎ ಬಿಗ್ ವನ್ ಅಂತಾ..!

Thursday, October 20, 2011

ನನ್ನ ಪತ್ರಿಕೆ ನನ್ನ ಬರಹ-29



( vk daily nammakaravali published dis article on 18.10.2011)

ನೀರು ಕಂಡರೆ ಊರಿಗೆ ಭೀತಿ !


ಮನುಕುಲದ ಜೀವಜಲ ಎಂದೇ ಬಿಂಬಿತ ನೀರು ಕಂಡರೆ ಸಸಿಹಿತ್ಲುವಿನ ಒಂದು ಭಾಗವೇ ತಲ್ಲಣಗೊಳ್ಳುತ್ತದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಭತ್ತದ ಪೈರೇ ಈ ನೀರನ್ನು ಕಂಡು ಕೆಂಪು ಬಣ್ಣಕ್ಕೆ ತಿರುಗಿ ಬೀಳುತ್ತದೆ. ಇದೇನಪ್ಪಾ ನೀರಿನ ಕತೆ ಅಂತಾ ಕೇಳ್ತೀರಾ..?
ಒಂದಲ್ಲ ಎರಡಲ್ಲ ಬರೋಬರಿ ೮ ವರ್ಷಗಳಿಂದ ರೈತರು ನೀರಿಗೆ ಹೆದರಿಕೊಂಡು ಬದುಕು ಕಟ್ಟುತ್ತಿದ್ದಾರೆ. ಯಾಕೋ ಗೊತ್ತಿಲ್ಲ ಎಕರೆಗಟ್ಟಲೆ ಕೃಷಿ ಭೂಮಿ ಈ ನೀರಿನಿಂದ ಹೆದರಿ ಕೂತಿದೆ. ಅರೇ..ಮನುಕುಲದ ಜೀವಜಲ ಎಂದೇ ಬಿಂಬಿತ ನೀರು ಕಂಡರೆ ಸಸಿಹಿತ್ಲುವಿನ ಒಂದು ಭಾಗವೇ ತಲ್ಲಣಗೊಳ್ಳುತ್ತದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಭತ್ತದ ಪೈರೇ ಈ ನೀರನ್ನು ಕಂಡು ಕೆಂಪು ಬಣ್ಣಕ್ಕೆ ತಿರುಗಿ ಬೀಳುತ್ತದೆ.
ಇದು ಕಾಸ್ಮೋಪಾಲಿಟನ್ ಸಿಟಿಯ ನಡುವೆ ಎದುರಿಸಿರು ಬಿಟ್ಟುಕೊಂಡು ಬದುಕು ದೂಡುತ್ತಿರುವ ಸಹಿಹಿತ್ಲು ಬಳಿಯ ಮೂಡುಕೊಪ್ಲ, ಕದಿಕೆ, ಮುಂಡ ಅಸುಪಾಸಿನ ಪ್ರದೇಶದಲ್ಲಿರುವ ರೈತರ ಪ್ರತಿ ವರ್ಷದ ಗೋಳು. ಇದೆಲ್ಲವೂ ಸರಾಗವಾಗಿ ಹರಿದುಹೋಗುತ್ತಿರುವ ನಂದಿನಿ ನದಿಯ ಉಪ್ಪು ನೀರಿನ ಕಾಟ. ಮೂಲ್ಕಿ- ಮೂಡುಬಿದರೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಳೆಯಂಗಡಿ ಗ್ರಾಮಪಂಚಾಯಿತಿಯೊಳಗೆ ಇರುವ ಈ ಊರಿಗೆ ಉಪ್ಪು ನೀರೇ ಭೂಲೋಕದಲ್ಲಿ ನರಕ ನಿರ್ಮಾಣ ಮಾಡಿಬಿಟ್ಟಿದೆ.
ವರ್ಷಕ್ಕೆ ಆರಾಮವಾಗಿ ನೂರು ಮುಡಿಯಷ್ಟು ಬೆಳೆ ತೆಗೆದು ಮೀಸೆ ತಿರುವುತ್ತಿದ್ದ ರೈತರು ಈ ನೀರಿನ ಶಾಪಕ್ಕೆ ತತ್ತರಗೊಂಡಿದ್ದಾರೆ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಏದುರಿಸಿರು ಬಿಡುತ್ತಾ ನಲ್ಲಿ ನೀರಿನ ಮುಂದೆ ನಿಲ್ಲಬೇಕಾದ ಅನಿವಾರ್ಯತೆಯೊಂದು ಈ ಪುಟ್ಟ ಊರಿನಲ್ಲಿ ಉದ್ಬವವಾಗಿ ಬಹಳ ವರ್ಷಗಳೇ ಸಂದಿದೆ. ನೂರು ಮುಡಿಗಿಂತ ಜಾಗದಲ್ಲಿ ಈಗ ಒಂದು ಮುಡಿ ತೆಗೆಯಲು ಕೂಡಾ ವಿಪಲರಾಗಿದ್ದಾರೆ.
ಉಪ್ಪು ನೀರಿಗೆ ನೂರಾರು ತೆಂಗಿನ ಮರಗಳು ಸದ್ದಿಲ್ಲದೇ ಮುದುಡಿ ಕೂತಿದೆ. ೨೦ಕ್ಕಿಂತ ಹೆಚ್ಚು ರೈತರು ಉಪ್ಪು ನೀರಿನ ಕಾಟದಿಂದ ದಿನಾಲೂ ಕಣ್ಣೀರು ಸುರಿಸುತ್ತಿದ್ದಾರೆ. ಅದರಲ್ಲೂ ಸಸಿಹಿತ್ಲುವಿನ ಅಗ್ಗಿದಕಳಿಯ, ಕದಿಕೆ ಮುಂತಾದ ಪ್ರದೇಶಗಳಲ್ಲಿ ಪ್ರತಿ ವರ್ಷ ಉಪ್ಪುನೀರು ಕಾರುಬಾರು ಮಾಡಿಕೊಂಡು ಬರುತ್ತಿದೆ.
ಬೆಳೆ ನಾಶವಾಯಿತು ಎಂದು ಕೊಂಡು ಇಲಾಖೆಗೆ ಕಡೆ ಮುಖ ಮಾಡಿದರೆ ಇಲಾಖೆಗಳು ರೈತರಿಗೆ ಎಕರೆಗೆ ೬೦೦ರಿಂದ ೮೦೦ ರೂ.ಗಳ ಪರಿಹಾರ ಮಾತ್ರ ನೀಡುತ್ತಿವೆ. ಅದೆಲ್ಲ ಪರಿಹಾರ ಪಡೆಯಲು ಇಲಾಖೆಗೆ ಹತ್ತು ಸಾರಿ ಸುತ್ತಾಡಿಕೊಂಡು ಬಂದರೆ ಮುಗಿದು ಹೋಗುತ್ತದೆ ಎನ್ನುವುದು ಸಸಿಹಿತ್ಲು ನಿವಾಸಿ ರಾಮದಾಸ್‌ರ ಅನುಭವದ ಮಾತು.
ಶಾಂಭವಿ, ನಂದಿನಿ ನದಿಗಳೆರಡು ಸಸಿಹಿತ್ಲುವಿನಲ್ಲಿ ಹರಿದು ಹೋಗುತ್ತಿದೆ. ಟೂರಿಸಂಗೆ ಹೇಳಿ ಮಾಡಿಸಿದ ಸ್ಥಳ. ಆದರೆ ಈ ಉಪ್ಪು ನೀರು ಮಾತ್ರ ಕೆಲವೊಂದು ಗದ್ದೆ, ಮನೆಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕೆಲ್ಲ ಪರಿಹಾರ ಕೊಡುತ್ತೇವೆ ಎಂದು ಬಹಳಷ್ಟು ಜನಪ್ರತಿನಿದಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅನುದಾನನೂ ಸರಕಾರದಿಂದ ಬಂದಿದೆ. ಆದರೆ ಜನರ ಕಷ್ಟ ಮಾತ್ರ ಕೊನೆಯಾಗಿಲ್ಲ ಎನ್ನುತ್ತಾರೆ ಮೂಡುಕೊಪ್ಲ ನಿವಾಸಿ ಜಯಣ್ಣ.
ಯಾರಿಗೇಳೋಣ ನಮ್ ಪ್ರಾಬ್ಲಂ:
ಸುರತ್ಕಲ್- ಕುಂದಾಪುರ ಚತುಷ್ಪಥ ಕಾಮಗಾರಿ ಯೋಜನೆ ಸಂದರ್ಭ ನಂದಿನಿ ನದಿಗೆ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿತ್ತು. ಇದು ಕೂಡಾ ಈ ಸಮಸ್ಯೆ ತೀವ್ರವಾಗಲು ಕಾರಣ ಎನ್ನುವುದು ಸಸಿಹಿತ್ಲುವಿನ ಸ್ಥಳೀಯರ ಅಭಿಪ್ರಾಯ.
ನಂದಿನಿ ನದಿಯ ಹೊಳೆತ್ತುವ ಕೆಲಸ ಬಹಳ ವರ್ಷಗಳಿಂದ ನಡೆದೇ ಇಲ್ಲ. ನಂದಿನಿ ನದಿಯೇ ಮುಂದೊಂದು ದಿನ ಮಾಯವಾಗಿ ಬಿಡುವ ಸಾಧ್ಯತೆ ಇದೆ. ಅದರಲ್ಲೂ ನದಿಯ ಬದಿಯಲ್ಲಿ ನೆಟ್ಟ ಖಾಂಡ್ಲಾವನಗಳಲ್ಲಿ ನದಿಗಳಿಗೆ ಎಸೆದ ತ್ಯಾಜ್ಯಗಳು ಸೇರಿಕೊಂಡು ಗುಡ್ಡವಾಗಿ ಬೆಳೆದು ನೀರೆಲ್ಲವೂ ಗದ್ದೆ, ಬಾವಿಗಳಿಗೆ ಹೋಗಿ ಬೀಳುತ್ತದೆ ಎನ್ನುತ್ತಾರೆ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಮಹಾಬಲ ಸಾಲ್ಯಾನ್.
ಉಪ್ಪು ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರದೇಶಗಳ ಕುಡಿಯುವ ನೀರಿಗಾಗಿ ತುಂಬೆಯಿಂದ ಮುಕ್ಕಾದ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕೆಲವೊಂದು ಭಾಗಗಳಿಗೆ ಉಪ್ಪು ನೀರಿನ ಸಮಸ್ಯೆ ತೀವ್ರವಾಗಿದೆ. ನದಿ ಭಾಗವನ್ನು ಬಹಳಷ್ಟು ಜನರು ಆಕ್ರಮಿಸಿಕೊಂಡು ಕೃಷಿ ಮಾಡಿದ್ದರಿಂದ ನಂದಿನಿ ನದಿಯ ವಿಸ್ತಾರ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಮಹಾಬಲರು.
ಪದೇ ಪದೇ ಈ ಸಮಸ್ಯೆ ಕಾಣಿಸಿಕೊಂಡಾಗ ಇಲ್ಲಿನ ರೈತರು ಜನಪ್ರತಿನಿದಿಗಳಿಗೆ ಮೊರೆ ಹೋಗುತ್ತಾರೆ. ಆದರೆ ಈ ಮೊರೆ ಆಳುವ ದೊರೆಗಳಿಗೆ ಕೇಳಿಸಿಕೊಳ್ಳುವುದೇ ಇಲ್ಲ. ಚುನಾವಣೆ ಬಂದಾಗ ಈ ಊರಿನ ಜನರ ಸಮಸ್ಯೆ ಕೇಳಲು ಮಾತ್ರ ಜನಪ್ರತಿನಿಽಗಳು ಹಾಜರಾಗುತ್ತಾರೆ ಎನ್ನುತ್ತಾರೆ ಮೂಡುಕೊಪ್ಲ ನಿವಾಸಿ ಗಣೇಶ್ ಸನಿಲ್‌ರ ಮಾತು.
ಇಲ್ಲಿನ ರಕ್ತೇಶ್ವರಿ ದೈವಸ್ಥಾನ ಬಳಿ ಸುಮಾರು ೨-೩ಫರ್ಲಾಂಗ್ ಉದ್ದಕ್ಕೆ ನಂದಿನಿ ನದಿಗೆ ತಡೆಗೋಡೆ ನಿರ್ಮಿಸಿದಲ್ಲಿ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕೊಡಲು ಸಾಧ್ಯ ಎನ್ನುತ್ತಾರೆ ಮೂಡುಕೊಪ್ಲ ಕೃಷಿಕ ರಮೇಶ್ ಸನಿಲ್. ಪ್ರಕೃತಿ ಮಾನವನ ನಡುವಿನ ಹೊಡೆದಾಟದಲ್ಲಿ ಕೊನೆಗೂ ಪ್ರಕೃತಿ ಮೇಲುಗೈ ಸಾದಿಸಿಕೊಂಡು ತನ್ನ ಪರಾಕ್ರಮ ಮೆರೆದು ನಿಂತಿದೆ ಎನ್ನುವುದಕ್ಕೆ ಈ ಊಪ್ಪು ನೀರಿನ ಊರೇ ಸಾಕ್ಷಾತ್ ಉದಾಹರಣೆ ಅಲ್ವಾ..?

(vk daily nammakaravali front page article published on 18.10.2011)

Saturday, October 15, 2011

ನನ್ನ ಪತ್ರಿಕೆ ನನ್ನ ಬರಹ-28



(vk daily lvk puravani published dis article on 15.10.2011)

ಉಜ್ವಾಡಿನಲ್ಲಿ ಪ್ರೇಕ್ಷಕನಿಗೆ ಕತ್ತಲು


ಚಿತ್ರ ವಿಮರ್ಶೆ
ಚೌಕಟ್ಟಿನಲ್ಲಿ ನಿಲ್ಲದ ಕತೆ, ಪದೇ ಪದೇ ಕಾಣಿಸಿಕೊಳ್ಳುವ ಕ್ಲೋಸಫ್ ಶಾಟ್‌ಗಳು,ಅನಗತ್ಯವಾಗಿ ತುರುಕಿಸಲಾಗಿರುವ ಹಾಡು ಚಿತ್ರದ ಓಡಾಟಕ್ಕೆ ಅಲ್ಲಲ್ಲಿ ಬ್ರೇಕ್‌ಕೊಟ್ಟು ಪ್ರೇಕ್ಷಕನಿಗೆ ವಿಚಿತ್ರ ಸಂಕಟಕ್ಕೆ ದೂಡುವ ಉಜ್ವಾಡು ಕೊಂಕಣಿ ಪ್ರೇಕ್ಷಕರ ನಿರೀಕ್ಷಿತ ಮಟ್ಟವನ್ನು ತಲುಪಲೇ ಇಲ್ಲ. ಕಳೆದ ೩೫ ವರ್ಷಗಳಿಂದ ಜಿಎಸ್‌ಬಿ ಕೊಂಕಣಿ ಸಮುದಾಯದಲ್ಲಿ ಚಿತ್ರಗಳಿಲ್ಲದೇ ಬರದ ಪರಿಸ್ಥಿತಿಯಲ್ಲಿ ನೀರಿನ ಒರತೆಯಂತೆ ಬಂದು ನಿಂತ ಉಜ್ವಾಡು ಪ್ರೇಕ್ಷಕರ ಮುಂದೆ ಬರೀ ಡಾಕ್ಯುಮೆಂಟರಿ ಚಿತ್ರದಂತೆ ಭಾಸವಾಗುತ್ತಿದೆ.
ಉಜ್ವಾಡು(ಬೆಳಕು) ಎನ್ನುವ ಆಶ್ರಮದ ಕತೆಯ ಜತೆಯಲ್ಲಿ ಥಳಕು ಹಾಕುವ ಜಿಎಸ್‌ಬಿ ಸಮುದಾಯದ ಸಂಸ್ಕೃತಿ, ಆಚಾರ- ವಿಚಾರ, ಬಾಳಿಗರ ಹೋಟೆಲ್, ಹೋಳಿ ಹಬ್ಬವನ್ನು ಅಲ್ಲಲ್ಲಿ ತುರುಕಿಸಲಾದರೂ ಎಲ್ಲವನ್ನು ಸಮರ್ಥವಾಗಿ ಎಳೆದುಕೊಂಡು ಹೋಗಲು ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ಬಹುತೇಕವಾಗಿ ವಿಫಲವಾಗಿದ್ದಾರೆ. ಚಿತ್ರದಲ್ಲಿ ಘಟಾನುಘಟಿ ನಟ- ನಟಿಯರು, ತಂತ್ರಜ್ಞರು ಇದ್ದರೂ ಸಮರ್ಥವಾಗಿ ಚಿನ್ನಾ ಬಳಸಿಕೊಳ್ಳಲೇ ಇಲ್ಲ ಎನ್ನುತ್ತದೆ ಉಜ್ವಾಡು ಚಿತ್ರ.
ಮಲಯಾಳಂನ ಖ್ಯಾತ ಛಾಯಾಗ್ರಾಹಕ ಉತ್ಪಲ್ ನಾಯನಾರ್ ಅವರ ಕ್ಯಾಮೆರಾವರ್ಕ್ ಚಿತ್ರದಲ್ಲಿ ಸಾಕಷ್ಟು ವರ್ಕ್ ಔಟ್ ಆಗಿದೆ ಎಂದುಕೊಳ್ಳುವ ಮೊದಲೇ ಚಿತ್ರದಲ್ಲಿ ತುಂಬಾ ಕ್ಲೋಸಫ್ ಶಾಟ್‌ಗಳು ಓಡಾಡಿಕೊಂಡು ಛಾಯಾಗ್ರಾಹಕನ ಕೆಲಸವನ್ನು ಡಲ್ ಮಾಡುತ್ತದೆ. ಜಯಂತ್ ಕಾಯ್ಕಿಣಿಯ ‘ರಂಗ ಪಂಚಮಿ’ ಹಾಡು ಚಿತ್ರದಲ್ಲಿ ಕೇಳಲು ಕೊಂಚ ಇಂಪು ಅನ್ನಿಸುತ್ತದೆ. ಸಂಗೀತ ನಿರ್ದೇಶಕ ವಿ. ಮನೋಹರ್ ಕೆಲಸ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಚಿತ್ರಕ್ಕೆ ಕತೆ ಜೀವಾಳ ಎಂದುಕೊಂಡು ಬಂದ ಪ್ರೇಕ್ಷಕರಿಗೆ ಏನೂ ಸಿಗದಿದ್ದರೂ ಗಜ್ಜು( ಗಜಾನನ) ಎನ್ನುವ ಬಾಲಪ್ರತಿಭೆ ಬಹಳ ಹತ್ತಿರವಾಗುತ್ತದೆ. ಹಿರಿಯ ಚಿತ್ರ ನಟ ಸದಾಶಿವ್ ಬ್ರಹ್ಮಾವರ್ , ಉಮಾಶ್ರೀ, ನೀತು ತಕ್ಕ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಿರುತೆರೆ ನಟ ಶಿವಧ್ವಜ್ ನಟನೆಯನ್ನು ಮರೆತು ಕೂತವರಂತೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಾಸರಗೋಡು ಚಿನ್ನಾ ಚಿತ್ರವನ್ನು ಇನ್ನಷ್ಟೂ ಉತ್ತಮವಾಗಿ ತೆರೆಗೆ ತರಬಹುದಿತ್ತು ಎನ್ನುವ ಅಶಯ ಭಾವನೆ ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನಿಗೆ ಕಾಡದೇ ಇರದು. ಆದರೂ ಕೊಂಕಣಿ ಚಿತ್ರ ಬೆಳೆಯಬೇಕು ಎನ್ನುವ ಉದ್ದೇಶದಿಂದ ಮಾತ್ರ ಥಿಯೇಟರ್‌ಗೆ ಹೋದರೆ ಚಿತ್ರ ಸೂಪರ್ ಕ್ಲಾಸ್ ಎನ್ನುವುದರಲ್ಲಿ ಯಾವುದೇ ಡೌಟ್ ಉಳಿಯೋಲ್ಲ.

Thursday, October 13, 2011

ಚಿನ್ನಾ ಕ್ಯಾಂಪ್‌ನಲ್ಲಿ ಉಜ್ವಾಡು !


ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಚಿತ್ರ ಅ.೧೪ ರಂದು ಬಿಡುಗಡೆಯಾಗುತ್ತಿದೆ. ೩೨ ವರ್ಷಗಳ ನಂತರ ಕೋಸ್ಟಲ್‌ವುಡ್‌ನಲ್ಲಿ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಬರುತ್ತಿರುವ ಚಿತ್ರ ಇದಾಗಲಿದೆ. ಕರಾವಳಿಯಲ್ಲಿ ‘ಅಸಲ್’ ಚಿತ್ರದ ಸೂಪರ್ ಓಟ.. ಉಜ್ವಾಡು ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿ ಈಗ ಮತ್ತೆ ಚೇತರಿಕೆ ಕಾಣಿಸಿಕೊಂಡಿದೆ. ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ‘ಒರಿಯರ್ದೊರಿ ಅಸಲ್’ನ ಸೂಪರ್ ಕಲೆಕ್ಷನ್ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ. ಕರಾವಳಿಯ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಸಿನ್ಮಾ ಅ.೧೪ರಂದು ಕರಾವಳಿಯ ಥಿಯೇಟರ್‌ಗಳಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಬಹಳ ಕಡಿಮೆ ಟೈಮ್‌ನಲ್ಲಿ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಕೊಂಡು ಭರ್ಜರಿಯಾಗಿ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎನ್ನೋದು ರಂಗಭೂಮಿ ನಿರ್ದೇಶಕ ಕಾಸರಗೋಡು ಚಿನ್ನಾರ ಮಾತು.
ಅಂದಹಾಗೆ ‘ಉಜ್ವಾಡು’ ಎಂದರೆ ಕೊಂಕಣಿ ಭಾಷೆಯಲ್ಲಿ ‘ಬೆಳಕು’ ಎಂದರ್ಥ. ಕೊಂಕಣಿಯಲ್ಲಿ ಅದರಲ್ಲೂ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಚಿನ್ನಾ ನಿರ್ದೇಶನದ ‘ಉಜ್ವಾಡು ’ ಮೂರನೇ ಚಿತ್ರ. ಅದು ಕೂಡ ೩೨ ವರ್ಷಗಳ ನಂತರ ಈ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿರೋದು ಎನ್ನೋದು ಗಮನಿಸಬೇಕಾದ ವಿಷ್ಯಾ. ಕಾಸರಗೋಡು ಚಿನ್ನಾ ನಿರ್ದೇಶನದಲ್ಲಿ ‘ಉಜ್ವಾಡು’ ಮೂಡಿ ಬರುತ್ತಿರುವುದರಿಂದ ನಿರೀಕ್ಷೆಗಳ ಮೂಟೆ ಜಾಸ್ತಿಯಾಗಿದೆ ಎನ್ನೋದು ಕರಾವಳಿಯಲ್ಲಿ ಓಡಾಡಿಕೊಂಡಿರುವ ಮಾತು.
ಚಿನ್ನಾ ಟಾಕಿಂಗ್:
‘ಉಜ್ವಾಡು’ ಚಿತ್ರದಲ್ಲಿ ಕತೆಯಿಲ್ಲ. ಅರೇ.. ಕತೆ ಇಲ್ಲದ ಚಿತ್ರ ಉಂಟಾ ಮಾರಾಯ್ರೆ ಎಂದರೆ ಚಿನ್ನಾ ಚಿತ್ರದ ಕುರಿತು ಹೇಳುವುದಿಷ್ಟು : ಚಿತ್ರದಲ್ಲಿ ಕತೆ ಇಲ್ಲ ನಿಜ. ಆದರೆ ಅಲ್ಲಿ ಜಿಎಸ್‌ಬಿ ಕೊಂಕಣಿ ಸಮುದಾಯದ ಹೋಳಿ ಹಬ್ಬ, ಜಾತ್ರೋತ್ಸವ, ಚೂಡಿ ಪೂಜೆ, ಜತೆಗೆ ಇಡೀ ಸಮುದಾಯದ ಸಂಸ್ಕೃತಿ, ಸಾಹಿತ್ಯ, ಭಜನ್ , ಬಾಳಿಗರ ಹೋಟೆಲ್, ವೃದ್ಧಾಶ್ರಮ, ಕೂಡು ಕುಟುಂಬ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಲಿದೆ. ‘ಚಿತ್ರ ಸಂಪೂರ್ಣವಾಗಿ ಕೊಂಕಣಿ ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡಿರುವುದರಿಂದ ಚಿತ್ರದ ಬಜೆಟ್ ಅಸುಪಾಸು ೪೦ ಲಕ್ಷ ರೂ. ತಲುಪಿದೆ. ‘ಉಜ್ವಾಡು’ ಚಿತ್ರ ಅಸಲ್ ಚಿತ್ರದಂತೆ ಸೂಪರ್ ಹಿಟ್ ಆಗುತ್ತದೆ ಎನ್ನುವುದಕ್ಕೂ ಮುಖ್ಯವಾಗಿ ಇಲ್ಲಿ ಬರೀ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ’ ಎನ್ನೋದು ಕಾಸರಗೋಡು ಚಿನ್ನಾರ ಮಾತು.
‘ಕಳೆದ ೪೦ ವರ್ಷಗಳ ಸುದೀರ್ಘ ರಂಗಭೂಮಿಯ ಅನುಭವ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಮೊದಲು ಮಾತೃಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಬೇಕು ಎನ್ನೋದು ನನ್ನ ಕನಸ್ಸಾಗಿತ್ತು. ಅದಕ್ಕಾಗಿ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಕೊಂಕಣಿಗೆ ಸೀಮಿತ ಮಾರುಕಟ್ಟೆ ಇದೆ ಎಂಬ ವಿಚಾರ ಗೊತ್ತಿದೆ. ಆದರೂ ಈ ಸೀಮಿತ ಮಾರುಕಟ್ಟೆಯಲ್ಲಿ ಚಿತ್ರ ಓಡಿಸುತ್ತೇನೆ’ ಎನ್ನೋದು ಕಾಸರಗೋಡು ಚಿನ್ನಾ ಅವರ ಮಾತು.
ಚಿತ್ರವನ್ನು ಆರಂಭದಲ್ಲಿ ಕರಾವಳಿಯಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ನಂತರ ಉಳಿದ ಭಾಗಗಳಲ್ಲೂ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ‘ಉಜ್ವಾಡು’ ಚಿತ್ರ ಬರೀ ಒಂದು ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡಿಲ್ಲ. ಎಲ್ಲ ಸಮುದಾಯದ ಜನರು ಬಂದು ಸಿನ್ಮಾ ನೋಡಬೇಕು. ಅದಕ್ಕಾಗಿ ಎಲ್ಲರಿಗೂ ಸಂದೇಶ ತಲುಪುವಂತೆ ಚಿತ್ರ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಚಿತ್ರದ ಆಡಿಯೋ ಭರ್ಜರಿಯಾಗಿ ಮಾರಾಟವಾಗಿದೆ. ಇನ್ನೂ ಕೂಡ ಆಡಿಯೋಗಾಗಿ ಬೇಡಿಕೆ ಬಂದಿದೆ ಎನ್ನುವುದು ಕಾಸರಗೋಡು ಚಿನ್ನಾರ ಮಾತು.
ಉಜ್ವಾಡು ಹುಡುಕಾಟದಲ್ಲಿ:
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ಹಿರಿಯ ನಟಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ೮೪ರ ಹರೆಯದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ, ಗ್ಲಾಮರ್ ನಟಿ ನೀತು ಸೇರಿದಂತೆ ಶಶಿಭೂಷಣ್ ಕಿಣಿ, ಓಂ ಗಣೇಶ್, ಪ್ರಕಾಶ್ ಶೆಣೈ, ಪೂರ್ಣಿಮಾ ಹಾಗೂ ಕರಾವಳಿಯ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಾಕಿದ್ದಾರೆ. ಚಿತ್ರ ಕಾರ್ಕಳ, ಮಂಗಳೂರಿನ ಅಸುಪಾಸು ಚಿತ್ರೀಕರಣವಾಗಿದೆ. ಅತಿಥಿ ಪಾತ್ರದಲ್ಲಿ ಪತ್ರಕರ್ತೆ ಸಂಧ್ಯಾ ಪೈ ಹಾಗೂ ಪ್ರಮೀಳಾ ನೇಸರ್ಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಇದಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಕಾಸರಗೋಡು ಚಿನ್ನಾ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಬರಹಗಾರ ಗೋಪಾಲಕೃಷ್ಣ ಪೈ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಹಾಡುಗಳನ್ನು ಭದ್ರಗಿರಿ ಅಚ್ಚುತದಾಸ್ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ವಿ. ಮನೋಹರ್ ಸಂಗೀತ ನೀಡಿದ್ದಾರೆ. ಅದರಲ್ಲೂ ಕಾಯ್ಕಿಣಿ ಬರೆದ ಹಾಡು ‘ರಂಗ ರಂಗ ರಂಗ ಪಂಚಮಿ’ ಕೊಂಕಣಿ ಭಾಷೆಯಲ್ಲಿ ಬರೆದ ಆರಂಭದ ಕವನವಂತೆ, ಕಲಾ ನಿರ್ದೇಶಕರಾಗಿ ಶಶಿಧರ ಅಡಪ, ಛಾಯಾಗ್ರಹಣದಲ್ಲಿ ಉತ್ಪಲ್ ನಾಯನಾರ್, ಸಂಕಲನದಲ್ಲಿ ಸುರೇಶ್ ಅರಸ್ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಬೆಂಗಳೂರು ಉದ್ಯಮಿ ಕೆ.ಜೆ. ಧನಂಜಯ ಹಾಗೂ ಚಿನ್ನಾರ ಸಹೋದರಿ ಅನುರಾಧ ಪಡಿಯಾರ್ ಹಣ ಹಾಕಿದ್ದಾರೆ. ಮಿತ್ರ ಮಿಡಿಯಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ . ಅಂದಹಾಗೆ ಇಷ್ಟರವರೆಗೆ ಸಿನ್ಮಾದಲ್ಲಿದ್ದ ಕಮರ್ಷಿಯಲ್, ಕಲಾಆಧರಿತ ಚಿತ್ರಗಳೆನ್ನುವ ಪರಿಕಲ್ಪನೆಯನ್ನು ಬದಿಗೊತ್ತಿ ಭಿನ್ನವಾದ ಸಂಸ್ಕೃತಿ ಆಧರಿತ ಚಿತ್ರವಾಗಿ ‘ಉಜ್ವಾಡು’ ಬರುತ್ತಿರೋದು ಗಮನಿಸಿಕೊಳ್ಳಬೇಕಾದ ವಿಚಾರ.

ಅಸಲ್ ಮಾತು ಅಸಲಿ ಟಾಕ್ ವಿದ್ ಕೊಡಿಯಾಲ್‌ಬೈಲ್


ಕರಾವಳಿಯ ಮನೆ- ಮನಗಳಲ್ಲಿ ಈಗ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್‌ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ಅಸಲ್ ಚಿತ್ರಕ್ಕೆ ನೀಡಿದೆ. ನೂರು ದಿನಗಳನ್ನು ಪೂರೈಸಿಕೊಂಡು ನೂರವೈತ್ತು ದಿನಗಳತ್ತ ಮೈಗೆದರಿಕೊಂಡು ಓಡಲಾರಂಭಿಸಿದೆ.

ಅಸಲ್ ಸೂಪರ್ರೋ ಸೂಪರ್.. ಮಾರಾಯ್ರೆ. ಇದು ಥಿಯೇಟರ್‌ನಲ್ಲಿ ಒರಿಯರ್ದೊರಿ ಅಸಲ್ ಸಿನ್ಮಾವನ್ನು ೧೪ ಬಾರಿ ನೋಡಿಕೊಂಡು ಹೊರಬಂದ ವಿಠಲ ಸಾಹೇಬ್ರ ಗಟ್ಟಿ ಮಾತು. ಅಸಲ್ ಚಿತ್ರವಿರುವ ನಗರದ ಥಿಯೇಟರ್‌ಗಳಲ್ಲಿ ಈಗಲೂ ಹೌಸ್‌ಪುಲ್ ನೇಮ್‌ಪ್ಲೇಟ್ ತೂಕಾಡಿಸಿದ್ದು ಕಾಣಬಹುದು. ಅಸಲ್ ನೂರು ದಿನ ಓಟ ಮುಗಿಸಿಕೊಂಡು ನೂರೈವತ್ತು ದಿನಗಳತ್ತ ಕಣ್ಣು ಹಾಕಿದರೂ, ಪ್ರೇಕ್ಷಕ ಮಾತ್ರ ಅಸಲ್ ಚಿತ್ರವನ್ನು ಆರಂಭದಲ್ಲಿ ನೋಡಿದ ಜೋಶ್‌ನಂತೆ ನೋಡುತ್ತಿದ್ದಾನೆ ಎನ್ನುತ್ತಾರೆ ನಗರದ ಜ್ಯೋತಿ ಥಿಯೇಟರ್‌ನ ಕೌಂಟರ್‌ನಲ್ಲಿ ಕೂತು ಟಿಕೇಟ್ ಹರಿದುಕೊಡುತ್ತಿರುವ ರಂಜಿತ್.
ಇದು ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿಯೇ ಅತೀ ದೊಡ್ಡ ರೆಕಾರ್ಡ್. ನಲವತ್ತು ವರ್ಷಗಳ ತುಳು ಸಿನ್ಮಾ ಲ್ಯಾಂಡ್‌ನಲ್ಲಿ ಈಗ ‘ಒರಿಯರ್ದೊರಿ ಅಸಲ್’ ಹೊಸ ಮೈಲ್ ಸ್ಟೋನ್ ನೆಟ್ಟಿದೆ. ೨೫ ವರ್ಷಗಳ ಹಿಂದೆ ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿದ ತುಳು ನಾಟಕ ‘ಒರಿಯರ್ದೊರಿ ಅಸಲ್’ ಈಗ ಹಿರಿತೆರೆಯ ಮೇಲೆ ರಾಕೆಟ್ ವೇಗದಲ್ಲಿ ಓಡುತ್ತಿದೆ. ಕರಾವಳಿಯ ಪ್ರತಿಭಾವಂತ ರಂಗಭೂಮಿ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಈ ತುಳು ಸಿನ್ಮಾದ ಮೂಲಕ ಹೊಸ ಮಾರ್ಕೆಟ್ ಕ್ರಿಯೇಟ್ ಮಾಡಿದ್ದಾರೆ.
ವಿಜಯಣ್ಣ ಮುಟ್ಟಿದ್ದು ಎಲ್ಲವೂ ಸಕ್ಸಸ್ ಕಂಡಿದೆ ಎನ್ನೋದು ಅವರ ಆಪ್ತ ವಲಯದ ಮಾತು. ಅವರ ಕಂಪನಿಯಿಂದ ಹೊರಬಂದ ಎಲ್ಲ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿದೆ. ಸಾಮಾಜಿಕ ಕಾಳಜಿ ಜತೆಯಲ್ಲಿ ಹಾಸ್ಯದ ಲೇಪವನ್ನು ಸೇರಿಸಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುವ ವಿಚಾರದಲ್ಲಿ ಕರಾವಳಿಯ ನಾಟಕ ಪ್ರಿಯರಿಗೆ ವಿಜಯ್ ಕುಮಾರ್ ಎ ವನ್ ಬ್ರ್ಯಾಂಡ್. ಅದರಲ್ಲೂ ‘ಅಸಲ್’ ಇಡೀ ತುಳು ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲು ಹಾಕಿದ ನಾಟಕ. ಈ ಯಶಸ್ವಿನಿಂದ ಕರಾವಳಿಯಲ್ಲಿ ತುಳು ನಾಟಕ ಮಾಡುವ ಉಮೇದು ಹುಟ್ಟಿಕೊಂಡಿತು.
ಒಮ್ಮೆ ಕುಟುಂಬದ ಜತೆಯಲ್ಲಿ ಸಿನ್ಮಾ ಥಿಯೇಟರ್‌ಗಳಿಗೆ ಹೋಗಿ ಬಂದವರು ಗೆಳೆಯರ, ಸ್ನೇಹಿತೆಯರ, ಅಕ್ಕಪಕ್ಕದವರ ಒತ್ತಾಯಕ್ಕೆ ಮಣಿದು ಸಿನ್ಮಾ ನೋಡಿಕೊಂಡು ಬಂದು ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ಕೈಗೆ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್. ಅಂದಹಾಗೆ ಅಕ್ಟೋಬರ್ ೨೧ರಂದು ಮುಂಬಯಿ, ಪುಣೆಯಲ್ಲೂ ಸಿನ್ಮಾವನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಮಧ್ಯ ಪ್ರಾಚ್ಯದೇಶಗಳಲ್ಲಿಯೂ ಚಿತ್ರವನ್ನು ಥಿಯೇಟರ್‌ಗೆ ಇಳಿಸಬೇಕು ಎನ್ನೋದು ವಿಜಯ್‌ಕುಮಾರ್ ಕೊಡಿಯಾಲ್ ಬೈಲ್‌ರ ತಲೆಯಲ್ಲಿ ಓಡುತ್ತಿರುವ ಮಾಸ್ಟರ್ ಪ್ಲಾನ್.
ಅಸಲ್ ಮೋಲಿವುಡ್ ಎಂಟ್ರಿ:
‘ಒರಿಯರ್ದೊರಿ ಅಸಲ್’ ಚಿತ್ರವನ್ನು ಮಲಯಾಳಂನ ನಿರ್ದೇಶಕರೊಬ್ಬರು ರಿಮೇಕ್ ಮಾಡಲು ಕೇಳಿದ್ದರು. ಆದರೆ ಕೋಸ್ಟಲ್‌ವುಡ್‌ನಲ್ಲಿ ಅಸಲ್ ಕಂಡ ಸಕ್ಸಸ್ ಹಾಗೂ ಬೇರೆ ಸಿನ್ಮಾ ಉದ್ದಿಮೆಯಲ್ಲಿ ಸಕ್ಸಸ್ ಪಾಯಿಂಟ್‌ಗಳು ಬೇರೆ ಬೇರೆಯಾಗಿರುತ್ತದೆ. ಅದರಲ್ಲೂ ಬೇರೆ ಭಾಷೆಯಲ್ಲೂ ನಾನೇ ಅಸಲ್ ಚಿತ್ರವನ್ನು ನಿರ್ದೇಶನ ಮಾಡಬೇಕು ಎನ್ನೋದು ನನ್ನ ಕನಸ್ಸು ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್.
‘ಅಸಲ್’ ಚಿತ್ರದ ನಂತರ ಕೋಸ್ಟಲ್‌ವುಡ್‌ನಲ್ಲಿ ಹನ್ನೆರಡು ಚಿತ್ರಗಳು ಮುಹೂರ್ತ ಮಾಡಿಕೊಂಡಿದೆ. ಅದು ಅಸಲ್ ಹಿಟ್ ಆಗಿದೆ ಎನ್ನುವುದಕ್ಕೆ ತುಳು ಸಿನ್ಮಾ ಇಂಡಸ್ಟ್ರಿ ಕೊಟ್ಟ ಉದಾಹರಣೆ. ಅಸಲ್ ಬರೀ ಓಡಿದ್ದಲ್ಲ ..ಅದು ತಟಸ್ಥವಾಗಿ ನಿಂತು ಹೋದ ತುಳು ಸಿನ್ಮಾ ಇಂಡಸ್ಟ್ರಿಯನ್ನು ಓಡಿಸಿದೆ ಎನ್ನುವುದು ವಿಜಯಣ್ಣನ ಅಸಲಿ ಮಾತು.
ಅಸಲ್ ವಾಟ್ ನೆಕ್ಸ್ಟ್:
ಬಹುತೇಕ ಮಂದಿ ‘ಅಸಲ್’ ನಂತರ ಮತ್ತೊಂದು ತುಳು ಸಿನ್ಮಾ ಮಾಡುತ್ತೇನೆ ಎನ್ನುವ ಸುದ್ಧಿ ಹಬ್ಬಿದೆ. ನಿಜಕ್ಕೂ ಅಸಲ್ ಚಿತ್ರವನ್ನು ಇಡೀ ವರ್ಷ ಕರಾವಳಿ ಸೇರಿದಂತೆ ಮುಂಬಯಿ, ಮಧ್ಯಪ್ರಾಚ್ಯ ದೇಶಗಳ ಉದ್ದಗಲಕ್ಕೂ ಓಡಿಸಿದ ನಂತರವೇ ಮತ್ತೊಂದು ಚಿತ್ರವನ್ನು ಮಾಡಬೇಕು ಎನ್ನೋದು ನನ್ನ ಅಲೋಚನೆ. ಸಧ್ಯಕ್ಕೆ ಅಸಲ್‌ನ ಓಡಾಟದಲ್ಲಿ ಬ್ಯುಸಿ. ಇನ್ನೂಳಿದ ಟೈಮ್‌ನಲ್ಲಿ ತುಳು ರಂಗಭೂಮಿಗೆ ಹೊಸ ನಾಟಕ ‘ಅಜ್ಜೇರ್’ ತರಬೇಕು.
ಅಜ್ಜೇರ್’ ಕತೆ ಪಾತ್ರವರ್ಗ ಎಲ್ಲವೂ ಸಿದ್ಧವಾಗಿದೆ. ಸಧ್ಯಕ್ಕೆ ಅದನ್ನು ಬಿಡುಗಡೆ ಮಾಡುವ ಯೋಚನೆ ಮಾಡುತ್ತಿದ್ದೇನೆ. ನಂತರ ನನ್ನ ಹಳೆಯ ನಾಟಕವೊಂದನ್ನು ಮತ್ತೊಂದು ತುಳು ಚಿತ್ರರಂಗಕ್ಕೆ ಸಿದ್ಧ ಮಾಡುತ್ತಿದ್ದೇನೆ. ಎಲ್ಲವೂ ಸರಿಯಾಗಿದ್ದಾರೆ ಬರುವ ವರ್ಷದಲ್ಲಿಯೇ ಮತ್ತೊಂದು ಚಿತ್ರವನ್ನು ಪ್ರೇಕ್ಷಕರಿಗೆ ಕೊಡುತ್ತೇನೆ ಎನ್ನುತ್ತಾರೆ ವಿಜಯ್ ಕುಮಾರ್.
ತುಳು ಚಿತ್ರವನ್ನು ಸಾಟಲೈಟ್ ಚಾನೆಲ್‌ನವರು ಖರೀದಿ ಮಾಡೋದು ಬಹಳ ಕಡಿಮೆ. ಅಂತೂ ಇಂತೂ ಅವಾರ್ಡ್ ಬಂದರಂತೂ ಸರಕಾರದ ಅನದಲ್ಲಿರುವ ಚಾನೆಲ್‌ಗಳು ತುಳು ಚಿತ್ರವನ್ನು ಖರೀದಿ ಮಾಡುತ್ತಾರೆ. ಆದರೆ ‘ಅಸಲ್’ನ ಟಿವಿ ಹಕ್ಕುಗಳನ್ನು ಪಡೆಯಲು ಕೆಲವು ಖಾಸಗಿ ಚಾನೆಲ್‌ಗಳು ಮುಂದೆ ಬಂದಿದೆಯಂತೆ. ಆದರೆ, ಒಳ್ಳೆಯ ಬೆಲೆಗಾಗಿ ಕೊಡಿಯಾಲ್‌ಬೈಲ್ ಎದುರು ನೋಡುತ್ತಿದ್ದಾರೆ. ವಾರದೊಳಗೆ ಎತ್ತಂಗಡಿಯಾಗುವ ಸಿನಿಮಾಗಳ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗುವಾಗ ‘ಅಸಲ್’ ಜನ ಮೆಚ್ಚಿದ ಚಿತ್ರ. ಅದರಲ್ಲೂ ನೂರು ದಿನ ಭರ್ಜರಿಯಾಗಿ ಓಡಿದ ಚಿತ್ರ. ಸೋ. ವಿಜಯ್ ಕುಮಾರ್ ಅವರ ಕಾಯುವಿಕೆಗೆ ಅರ್ಥವಿದೆ ಅನ್ನಿಸೋಲ್ವ..?