ಇಮ್ಯಾನುವೆಲ್( ಬೈಬಲ್ ಆಧಾರಿತ ಶಬ್ದ) ದೇವರು ಜತೆಗಿದ್ದಾನೆ ಎನ್ನುವ ಅರ್ಥ ನೀಡುವ ದಾರಂದಕುಕ್ಕುವಿನ ನನ್ನ ಮನೆಯ ಗೃಹಪ್ರವೇಶ ಬೊಂಬಾಟಾಗಿ ಡಿ.೧೮ರ ಭಾನುವಾರ ನಡೆದಿದೆ. ಗೃಹಪ್ರವೇಶ ದಿನ ಬಂದವರೆಲ್ಲರೂ ಗೋಡೆಯನ್ನು ನೋಡಿ ನಕ್ಕು ಹೋಗಿದ್ದಾರೆ. ಯಾಕೆ ಅಂತೀರಾ..? ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ತಮ್ಮ ಬ್ಯುಸಿ ಶೆಡ್ಯುಲ್‌ಗಳ ನಡುವೆ ದಾರಂದಕುಕ್ಕುವಿಗೆ ಬಂದು ಒಂದು ಗೋಡೆಗೆ ಮ್ಯೂರಲ್ ಆರ್ಟ್ ಮಾಡಿ ಹೋಗಿದ್ದಾರೆ.
ಈ ರೀತಿಯ ಮ್ಯೂರಲ್ ಆರ್ಟ್ ಇರುವ ಮನೆ ದ.ಕ. ಜಿಲ್ಲೆಯಲ್ಲಿ ಬಿಡಿ. ಇಡೀ ರಾಜ್ಯದಲ್ಲಿ ಸಿಗುವುದು ತೀರಾ ಅಪರೂಪ ಎನ್ನುವುದು ನನ್ನ ನಂಬಿಕೆಯಲ್ಲ ಪ್ರಕಾಶ್ ಶೆಟ್ಟರ ಮಾತು ಕೂಡ ಹೌದು. ಏನೇ ಇರಲಿ ನನ್ನ ಸಹೋದರ ಸೈನ್ಯದಿಂದ ಮನೆಗೆ ರಜೆಯಲ್ಲಿ ಓಡಿ ಬರೋದು, ತಂದೆ ಪುಟ್ಟ ಅಂಗಡಿಯಲ್ಲಿ ವ್ಯಾಪಾರ ಮಾಡಲು ಚೀಟಿ ರೆಡಿ ಮಾಡೋದು, ತಾಯಿ ಅಡುಗೆ ಮನೆಯಲ್ಲಿ ನಿರತರಾಗಿರುವುದು, ಪತ್ರಕರ್ತ ಅನ್ನಿಸಿಕೊಂಡ ನಾನು ಸೋಪಾದ ಮೇಲೆ ಕೂತು ಬರೆಯುವ ಕೆಲಸ ಈ ಮ್ಯೂರಲ್ ಆರ್ಟ್‌ನಲ್ಲಿ ನಡೆದಿದೆ. ಇಂತಹ ಮಜಬೂತಾದ ಸೀನ್ ನೋಡಬೇಕಾದರೆ ಒಂದ್ ಸಾರಿ ನನ್ನ ಮನೆಗೆ ಬಂದು ನೋಡಿ ಅನ್ನೋದು ನನ್ನ ಸಿಂಪಲ್ ರಿಕ್ವೇಸ್ಟ್ ಮಾರಾಯ್ರೆ...
a man ಇಮ್ಯಾನುವೆಲ್ ಇದ್ದಾನೆ. ದೇವರು ನಿಮ್ಮ ಮನೆ, ಮನ ಚೆನ್ನಾಗಿ ಇಟ್ಟಿರಲಿ
ReplyDelete