
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ಟರ ಕ್ಯಾಂಪ್‌ನಲ್ಲಿ ಹೊಸ ಹುಡುಗಿಯೊಬ್ಬಳು ಮೈ‘ದಾನ’ ಮಾಡಲು ಸಿದ್ಧವಾಗಿ ನಿಂತಿದ್ದಾಳೆ. ಪ್ರಸಿದ್ಧ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಬಿ- ಟೌನ್‌ನಲ್ಲಿ ಮಿಂಚು ಹರಿಸಲು ಬರುತ್ತಿದ್ದಾಳೆ. ಓವರ್ ಟೂ ಸನ್ನಿ....
ಸನ್ನಿ ಲಿಯೋನ್. ಈ ಹೆಸರನ್ನು ಕಾಮನ್ ಮದಿರೆಗೆ ಹೋಲಿಸಿ ನೋಡಿದರೆ ನಶೆ ಇಳಿಯುವುದು ಖಾತ್ರಿ. ಪಡ್ಡೆಗಳ ಪಾಲಿಗಂತೂ ಸನ್ನಿ ಥೇಟ್ ಟಕೀಲಾದಂತಹ ಹಾಟ್ ಡ್ರಿಂಕ್. ಟೋಟಲಿ ಸನ್ನಿ ಲಿಯೋನ್ ಸೀನಿಯರ್ ಸಿಟಿಜನ್‌ನಿಂದ ಹಿಡಿದು ಪಡ್ಡೆ ಹುಡುಗರವರೆಗೂ ಮೈಯಲ್ಲಿ ಬೆಂಕಿ ಹತ್ತಿಸಿ ಬಿಡುವ ಚಿಂಗಾರಿ ಹುಡುಗಿ ! ಇಷ್ಟೆಲ್ಲ ಮಾತುಗಳ ನಡುವೆನೂ ಸನ್ನಿಯ ಇಮೇಜ್ ಕಣ್ಣ ಮುಂದೆ ಬಂದು ನಿಲ್ಲೋದಿಲ್ಲ. ಶಾರ್ಟ್ ಕಟ್ ಅನ್ಸರ್‌ನಲ್ಲಿ ಹೇಳಿ ಬಿಡೋದಾದರೆ ಸನ್ನಿ ನೀಲಿ ಚಿತ್ರಗಳ ರಾಣಿ.
ಸನ್ನಿ ಲಿಯೋನ್‌ಳ ನೀಲಿ ಚಿತ್ರಗಳು ಈಗಲೂ ಟಾಪ್ ರೇಟಿಂಗ್ ಪಟ್ಟಿಯಲ್ಲಿ ಬಂದು ನಿಲ್ಲುತ್ತದೆ. ಸನ್ನಿಯ ದೇಹ ದಂಡನೆಯ ಚಿತ್ರಗಳು ಪಡ್ಡೆ ಹೈಕಳ ಮೊಬೈಲ್‌ನಲ್ಲಿ ಈಗಲೂ ಜೋಪಾನವಾಗಿ ಕೂತು ಬಿಟ್ಟಿವೆ. ಸನ್ನಿ ಎಂದರೆ ಟೋಟಲಿ ಬೆಂಕಿ. ತಾನು ಉರಿದು ಉಳಿದರವಲ್ಲೂ ಬಿಸಿ ಹುಟ್ಟಿಸಿಬಿಡುವ ಸೌಂದರ್ಯವಂತೆ. ಇಂತಹ ಸನ್ನಿ ಲಿಯೋನ್ ಖಾಸಗಿ ಚಾನೆಲ್‌ನ ರಿಯಾಲಿಟಿ ಶೋವಿನಲ್ಲಿ ಸ್ಪರ್ದಿಸುತ್ತಿದ್ದಾಳೆ ಎಂದು ಗೊತ್ತಾದಾಗ ರಿಯಾಲಿಟಿ ಶೋವಿನ ಟಿಆರ್‌ಪಿ ರೇಟ್ ಏಕ್‌ದಂ ಏರಿಕೆ ಕಂಡಿತ್ತು.
ನಡುರಾತ್ರಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋವಿನಲ್ಲಿ ಬರೀ ಸನ್ನಿಯ ಮಜಬೂತ್ ದೃಶ್ಯಗಳೇ ಹೆಚ್ಚಾಗಿದೆ ಎಂದುಕೊಂಡು ಸೀನಿಯರ್ ಸಿಟಿಜನ್ ರಾತ್ರಿ ಟಿವಿ ನೋಡುವ ಚಾಳಿ ಬೆಳೆಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ಹೊರ ಬಂದಿತ್ತು. ಇಂತಹ ಸನ್ನಿ ಲಿಯೋನ್ ಸಿನ್ಮಾಕ್ಕೆ ಬಂದು ನಿಂತರೆ ಹೇಗೆ ಮಾರಾಯ್ರೆ ಎಂದುಕೊಳ್ಳುವಷ್ಟರಲ್ಲಿಯೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಸನ್ನಿಗೆ ಕಾಳು ಹಾಕಿದ್ದಾರೆ. ತಮ್ಮ ಮುಂದಿನ ಚಿತ್ರ ‘ಜಿಸ್ಮ್-೨’ಗಾಗಿ ಸನ್ನಿಯನ್ನು ಕರೆ ತರುವ ಮಾತುಗಳು ಭರ್ಜರಿಯಾಗಿ ನಡೆಯುತ್ತಿದೆ.
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಬಾಲಿವುಡ್ ಸಿನ್ಮಾ ನಗರಿಗೆ ಹೊಸ ಹುಡುಗಿಯರನ್ನು ಕರೆ ತರುವುದರಲ್ಲಿ ಮುಂಚೂಣಿಯಲ್ಲಿರುವ ನಿರ್ದೇಶಕ. ಈ ಹಿಂದೆ ಮರ್ಡರ್‌ಗಾಗಿ ಮಲ್ಲಿಕಾ ಶೆರವಾತ್ ಎನ್ನುವ ಐಟಂ ಬಾಲೆಯನ್ನು ಕರೆ ತಂದಿದ್ದರು. ಅದೇ ಮರ್ಡರ್-೨ ಚಿತ್ರಕ್ಕಾಗಿ ಶ್ರೀಲಂಕಾದ ಹುಡುಗಿ ಜಾಕ್ವೆಲಿನ್ ಪೆರ್ನಾಂಡೀಸ್‌ರನ್ನು ಕರೆ ತಂದಿದ್ದರು. ಅದೇ ‘ಜಿಸ್ಮ್ ’ಚಿತ್ರಕ್ಕೆ ಬಿಪಾಶಾ ಬಸು ಅವರನ್ನು ಕರೆ ತಂದಿದ್ದ ಮಹೇಶ್ ಭಟ್ ‘ಜಿಸ್ಮ್-೨’ಗೆ ಸನ್ನಿ ಲಿಯೋನ್‌ರನ್ನು ಕರೆ ತರುವ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ಮಹೇಶ್ ಭಟ್ ಹೊಸ ಪೀಳಿಗೆಯ ಹುಡುಗಿಯರ ಹುಡುಕಾಡ ಇನ್ನೂ ಕೂಡ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳನ್ನು ಜೀವಂತ ಇರಿಸಿಕೊಂಡಿದ್ದಾರೆ.
ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಹಂಬಲ ಇಟ್ಟುಕೊಂಡಿರುವ ಸನ್ನಿ ಲಿಯೋನ್‌ರನ್ನು ಕರೆ ತರುವ ಪ್ರಯತ್ನ ಈ ಮೊದಲು ಮಹೇಶ್ ಭಟ್ ಮಾಡಿದ್ದರು. ೨೦೦೫ರಲ್ಲಿ ಬಾಲಿವುಡ್‌ನಲ್ಲಿ ಬಂದ ‘ಕಲಿಯುಗ್’ ಚಿತ್ರಕ್ಕಾಗಿ ಸನ್ನಿ ಲಿಯೋನ್ ಜತೆ ಮಾತುಕತೆ ನಡೆದಿತ್ತು. ಆದರೆ ಡೇಟ್ಸ್‌ಗಳ ಕೊರತೆಯಿಂದ ಸನ್ನಿ ಲಿಯೋನ್ ಈ ಚಿತ್ರವನ್ನು ತಿರಸ್ಕರಿಸಿದ್ದರು. ಆದರೆ ೬ ವರ್ಷಗಳ ನಂತರ ಇದೇ ಮಹೇಶ್ ಭಟ್ ಸನ್ನಿ ಲಿಯೋನ್‌ರನ್ನು ಕರೆ ತರುವ ಪ್ರಯತ್ನದಲ್ಲಿ ಜಯಕಂಡಿದ್ದಾರೆ.
ಸನ್ನಿಯನ್ನು ಬರೀ ದೇಹಸಿರಿಗಾಗಿ ‘ಜಿಸ್ಮ್-೨’ಗಾಗಿ ಆಯ್ಕೆ ಮಾಡುತ್ತಿಲ್ಲ. ಸನ್ನಿಯ ಐಕ್ಯೂ ಬಹಳ ಚೆನ್ನಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಇಂತಹ ನಾಯಕಿಯರು ಇಂದಿನ ಬಾಲಿವುಡ್ ಸಿನ್ಮಾಗಳಿಗೆ ಅವಶ್ಯಕವಾಗಿ ಬೇಕಾಗಿದೆ ಎನ್ನೋದು ನಿರ್ದೇಶಕ ಮಹೇಶ್ ಭಟ್ಟರ ಮಾತು. ಅಂದಹಾಗೆ ‘ಜಿಸ್ಮ್-೨’ನಲ್ಲಿ ನಾಯಕನಾಗಿ ಮಹೇಶ್ ಭಟ್ಟರ ಪುತ್ರ ರಾಹುಲ್ ಭಟ್ ಅಭಿನಯಿಸುವ ಸುದ್ದಿಯಿತ್ತು. ಆದರೆ ನಿರ್ದೇಶಕರು ಹೇಳುವಂತೆ ಈ ಬಾರಿ ರಾಹುಲ್‌ನನ್ನು ಚಿತ್ರರಂಗಕ್ಕೆ ಇಳಿಸುತ್ತಿಲ್ಲ. ಹೊಸ ನಾಯಕನ ಹುಡುಕಾಟ ಆರಂಭ ಮಾಡಿದ್ದಾರಂತೆ. ಟೋಟಲಿ ‘ಜಿಸ್ಮ್-೨’ ಸಿನ್ಮಾ ನಿರ್ಮಾಣವಾಗುವ ಮೊದಲೇ ಸನ್ನಿ ಲಿಯೋನ್ ಬೆಂಕಿ ಹತ್ತಿಸಿದ್ದು ನಿಜ. ‘ಜಿಸ್ಮ್-೨’ಬಂದ ನಂತರವೇ ಈ ಬೆಂಕಿ ನಂದೀತು ಅಂತಾ ಕಾಣಿಸುತ್ತೆ ಅಲ್ವಾ..?
No comments:
Post a Comment