
ಬಾಲಿವುಡ್‌ನ ಹೈ ಬಜೆಟ್ ಚಿತ್ರ ರಾ.ವನ್‌ನ ಬಿಡುಗಡೆಗೆ ಮೊದಲೇ ಕುತೂಹಲಕಾರಿ ಅಂಶಗಳು ಒನ್ ಆಂಡ್ ಒನ್‌ಲೀ ಲವಲವಿಕೆಗೆ ಸಿಕ್ಕಿ ಬಿಟ್ಟಿದೆ. ರಾ.ವನ್ ಮುಹೂರ್ತದಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೂ ಶಾರೂಕ್ ಹಾಗೂ ಚಿತ್ರ ನಿರ್ದೇಶಕ ಅನುಭವ್ ಸಿನ್ಹಾರಿಗೆ ಜತೆಗೂಡಿದ ಮಂಗಳೂರು ಸಹೋದರರು ಹೇಳಿದ ಮಾತಿದು.
ರಾ.ವನ್ ಇದು ಬಾಲಿವುಡ್‌ನ ಹೈ ಬಜೆಟ್ ಸಿನ್ಮಾ. ಇನ್ನೂ ಕೂಡ ಥಿಯೇಟರ್ ಕಡೆ ಮುಖ ಮಾಡದ ಸಿನ್ಮಾ ಕುರಿತು ಈಗಾಗಲೇ ದೊಡ್ಡ ಹೈಪ್ ಪ್ರೇಕ್ಷಕರ ವಲಯದಲ್ಲಿ ಬಂದು ಬಿಟ್ಟಿದೆ.
ಶಾರೂಖ್ ಖಾನ್‌ರ ಸಿನ್ಮಾ ಬದುಕಿನಲ್ಲಿ ಇದೊಂದು ಮಹತ್ತರ ಚಿತ್ರವಾಗಲಿದೆ ಎನ್ನುವ ಮಾತು ಬಾಲಿವುಡ್ ಪಡಸಾಲೆಯಲ್ಲಿ ಹರಡಿಕೊಂಡು ಬಿಟ್ಟಿದೆ. ಸ್ವಂತ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ಬರುವ ಚಿತ್ರ ಎನ್ನು ಕುತೂಹಲ ಕೂಡ ಬೀಡು ಬಿಟ್ಟಿದೆ.
ಅಂದಹಾಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಬರೋಬರಿ ೩೫ ಕೋಟಿಗೆ ಸ್ಟಾರ್ ಟಿವಿಗೆ ಬಿಕರಿಯಾಗಿದೆ. ಚಿತ್ರದ ಹಾಡೊಂದನ್ನು ಅಮೆರಿಕದ ಖ್ಯಾತ ಸಿಂಗರ್ ಎಕೋನ್ ಹಾಡಿದ್ದಾರೆ. ಈಗಾಗಲೇ ಎಕೋನ್‌ರ ‘ಚಮಕ್ ಚಲ್ಲೋ’ ಹಾಡು ಟಾಫ್ ಟೆನ್ ರೇಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತು ಕೇಕೆ ಹಾಕುತ್ತಿದೆ.
ರಾ.ವನ್ ಕೋಟಿಗಟ್ಟಲೆ ಬಜೆಟ್‌ನ ನಡುವೆ ಕಾಮಿಕ್ಸ್, ವಿಡಿಯೋ ಗೇಮ್ಸ್, ಆನ್‌ಲೈನ್ ಪಬ್ಲಿಸಿಟಿ ಅಂತಾ ಹೇಳಿಕೊಂಡು ಸರಿಸುಮಾರು ೨೦೦ ಕೋಟಿಯ ರಾ.ವನ್ ಭಾರತೀಯ ಚಿತ್ರಲೋಕದಲ್ಲಿ ಹೊಸ ಪತಾಕೆ ಹಾರಿಸುವ ಎಲ್ಲ ನಿರ್ಧಾರವನ್ನು ಮಾಡಿಕೊಂಡು ಬಂದಿದೆ. ಹಿಂದಿ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ಬರುವ ರಾ.ವನ್ ಚಿತ್ರದಲ್ಲಿ ಬಹುತೇಕ ಹಾಲಿವುಡ್ ಚಿತ್ರಗಳ ಟೆಕ್ನಿಷಿಯನ್‌ಗಳು ಕೆಲಸ ಮಾಡಿದ್ದಾರೆ.
ಬಾಲಿವುಡ್‌ನ ಹೈ ಬಜೆಟ್ ಚಿತ್ರ ರಾ.ವನ್‌ನ ಬಿಡುಗಡೆಗೆ ಮೊದಲೇ ಕುತೂಹಲಕಾರಿ ಅಂಶಗಳು ಒನ್ ಆಂಡ್ ಒನ್‌ಲೀ ಲವಲವಿಕೆಗೆ ಸಿಕ್ಕಿ ಬಿಟ್ಟಿದೆ. ರಾ.ವನ್ ಮುಹೂರ್ತದಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೂ ಶಾರೂಕ್ ಹಾಗೂ ಚಿತ್ರ ನಿರ್ದೇಶಕ ಅನುಭವ್ ಸಿನ್ಹಾರಿಗೆ ಸಾಥ್ ಕೊಟ್ಟ ಮಂಗಳೂರು ಮೂಲ್ಕಿ ಮೂಲದ ಮೂಡು ಮನೆಯ ಪ್ರದೀಪ್ ಜೆ.ಶೆಟ್ಟಿ, ಪ್ರಕಾಶ್ ಜೆ.ಶೆಟ್ಟಿ ಹಾಗೂ ಪ್ರಶಾಂತ್ ಜೆ.ಶೆಟ್ಟಿ ರಾ.ವನ್ ಚಿತ್ರದ ಸಿಕ್ರೇಟ್ಸ್ ಹಾಗೂ ತೀರಾ ಅಪರೂಪದ ಚಿತ್ರಗಳನ್ನು ಲವಲವಿಕೆಯ ಜತೆಯಲ್ಲಿ ಹಂಚಿಕೊಂಡಿದ್ದಾರೆ.
‘ರಾ.ವನ್ ಟೋಟಲಿ ಹಾಲಿವುಡ್ ಮಾದರಿಯ ಚಿತ್ರ. ಬಜೆಟ್, ಸ್ಟೋರಿಲೈನ್, ಮೇಕಿಂಗ್ ವರ್ಶನ್‌ನಿಂದ ಹಿಡಿದು ತಾಂತ್ರಿಕ ವರ್ಗದ ವರೆಗೂ ಎಲ್ಲವೂ ಹಾಲಿವುಡ್ ಫ್ಲೇವರ್ ಕಾಣಿಸಿಕೊಳ್ಳುತ್ತದೆ. ಕಳೆದ ೨೦ ವರ್ಷಗಳಿಂದ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ ಮಾರಾಯ್ರೆ. ಇಂತಹ ವಿಶೇಷ ಅನುಭವ ಈ ಮೊದಲು ಖಂಡಿತ ಆಗಿಲ್ಲ. ಸವಾಲುಗಳ ಜತೆಯಲ್ಲಿ ಕೆಲಸ ಮಾಡೋದು ಸುಲಭವಲ್ಲ ಎನ್ನುತ್ತಾರೆ ಪ್ರಕಾಶ್ ಶೆಟ್ಟಿ.
ಶಾರೂಕ್ ಜತೆಯಲ್ಲಿ ಇದು ಐದನೇ ಮೂವೀ. ಶಾರೂಕ್ ಎಂದರೆ ಅಹಂಕಾರ ಇಲ್ಲದ ಮನುಷ್ಯ.
ಲೈಟ್ಸ್ ಮ್ಯಾನ್‌ಗಳಿರಲಿ ಚಿತ್ರದ ಉಳಿದ ಕಾಸ್ಟ್‌ಗಳಿರಲಿ ಎಲ್ಲರ ಜತೆಯಲ್ಲಿ ಬೆರೆತುಕೊಂಡು ಕೆಲಸ ಮಾಡುತ್ತಾರೆ. ಅನುಭವ್ ನಿರ್ದೇಶಕರಾಗಿ ಬಹಳ ಒಳ್ಳೆಯವರು ಆದರೆ ಟೆಕ್ನಿಕಲಿ ತುಂಬಾ ವೀಕ್. ದೊಡ್ಡ ಬಜೆಟ್ ಚಿತ್ರವನ್ನು ತುಂಬಾ ಉತ್ತಮವಾಗಿ ಪರದೆಗೆ ತಂದುಕೊಟ್ಟಿದ್ದಾರೆ ಎನ್ನೋದು ಹೆಮ್ಮೆಯ ವಿಷ್ಯಾ ಅಂತಾರೆ ಪ್ರಕಾಶ್.
‘ರಾ.ವನ್ ಮಾರ್ಚ್೨೨,೨೦೧೦ರಂದು ಮುಂಬಯಿಯಲ್ಲಿ ಶೂಟಿಂಗ್ ಆರಂಭ ಮಾಡಿತ್ತು. ಮುಂಬಯಿ, ಲೊನಾವಾಲಾ, ಗೋವಾ, ಹೈದರಾಬಾದ್, ಲಂಡನ್ ಹೀಗೆ ಎಲ್ಲ ಕಡೆ ಸುತ್ತಾಡಿಕೊಂಡು ಚಿತ್ರ ಮಾಡಲಾಗಿದೆ. ರಜನೀಕಾಂತ್ ಅಭಿನಯದ ರೊಬೋಟ್ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದಲ್ಲಿ ಒರಿಜಿನಾಲಿಟಿಗೆ ಬಹಳಷ್ಟು ಮಹತ್ವ ಕೊಡಲಾಗಿದೆ. ರೊಬೋಟ್‌ನಲ್ಲಿ ಸೂಪರ್‌ಇನ್ಪೋ ಮಾಡಿ ಚಿತ್ರೀಕರಣ ಮಾಡಿದರೆ ಅದಕ್ಕಿಂತ ಭಿನ್ನವಾಗಿ ರಿಯಾಲಿಟಿಗೆ ತಾಗುವಂತೆ ಚಿತ್ರವನ್ನು ತರಲಾಗಿದೆ. ಕತೆಯಲ್ಲೂ ತುಂಬಾ ಭಿನ್ನತೆಯನ್ನು ಕಾಯ್ದುಕೊಳ್ಳಲಾಗಿದೆ ಎನ್ನೋದು ಪ್ರಕಾಶ್‌ರ ಸಹೋದರ ಪ್ರಶಾಂತ್ ಶೆಟ್ಟಿಯ ಮಾತು.
‘ರಾ.ವನ್‌ನಲ್ಲಿ ಶಾರೂಕ್ ಹಾಗೂ ಅರ್ಜುನ್ ರಾಂಪಾಲ್‌ಗಾಗಿ ವಿದೇಶದಿಂದ ತಂದ ೭ ಬಾಡಿ ಶೂಟ್‌ಗೆ ಬರೋಬರಿ ೧೭ ಕೋಟಿ ಖರ್ಚು ಮಾಡಲಾಗಿದೆ. ಈ ಬಾಡಿಶೂಟ್‌ಗಳು ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗೆ ಬಾಡಿ ಶೂಟ್ ಮಾಡಿಕೊಡುತ್ತಿದ್ದ ಕಂಪನಿಯಿಂದ ತರಿಸಲಾಗಿತ್ತು. ಅದರಲ್ಲೂ ಅದರ ಮೈನ್‌ಟೈನ್ ಮಾಡಲು ಮೂವರು ಸಹಾಯಕರಿದ್ದರು. ಅವರಿಗೆ ದಿನವೊಂದಕ್ಕೆ ೫೦ ಸಾವಿರ ಖರ್ಚು ಮಾಡಲಾಗುತ್ತಿತ್ತು. ಖರ್ಚಿನ ವಿಚಾರಲ್ಲಿ ರಾ.ವನ್ ಹಾಲಿವುಡ್ ಚಿತ್ರಗಳನ್ನೇ ಮೀರಿಸುವಂತಿದೆ ಎನ್ನೋದು ಮತ್ತೊಬ್ಬ ಸಹೋದರ ಪ್ರದೀಪ್ ಶೆಟ್ಟಿಯ ಮಾತು.
‘ಚಿತ್ರದ ಪ್ರಮುಖ ಭಾಗವೊಂದರಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ ರಜನೀಕಾಂತ್ ಸೇರಿದಂತೆ ಸಂಜಯ್ ದತ್ ಹಾಗೂ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಶಾರೂಕ್ ಚಿತ್ರದಲ್ಲಿ ಜೀ-ವನ್ ಎನ್ನುವ ವಿಡಿಯೋ ಗೇಮ್ ತಯಾರಿಸುವ ವ್ಯಕ್ತಿ. ತನ್ನ ಮಗನ ದೃಷ್ಟಿಯಲ್ಲಿ ಶಾರೂಕ್ ಹೀರೋ ಆಗಲು ಹೋಗಿ ವಿಡಿಯೋ ಗೇಮ್‌ವೊಂದನ್ನು ತಯಾರಿಸುತ್ತಾನೆ. ಅದರಲ್ಲಿ ಅರ್ಜುನ್ ರಾಂಪಾಲ್ ರಾ-ವನ್ ಎನ್ನುವ ವಿಲನ್ ಆಗಿ ಬಂದರೆ ಇತ್ತಕಡೆ ಶಾರೂಕ್ ಜೀ-ವನ್ ಆಗಿ ಬರುತ್ತಾನೆ. ಇದರ ನಡುವೆ ನಡೆಯುವ ಸನ್ನಿವೇಶಗಳು, ಕ್ಲೈಮಾಕ್ಸ್ ಸೀನ್‌ಗಳು ನೋಡಲು ಥಿಯೇಟರ್‌ಗೆ ಹೋಗಬೇಕು ಎನ್ನೋದು ಪ್ರಕಾಶ್ ಶೆಟ್ಟಿಯ ಮಾತು.
ಅಂದಹಾಗೆ ರಾ-ವನ್ ಇದೇ ಅಕ್ಟೋಬರ್ ಅಂತ್ಯದೊಳಗೆ ನಿಮ್ಮ ನೆಚ್ಚಿನ ಥಿಯೇಟರ್ ಮಂದಿರಗಳಿಗೆ ದಾಳಿ ಮಾಡಲಿದೆ. ೩ಡಿಯಲ್ಲೂ ಚಿತ್ರ ಕೆಲವೊಂದು ಥಿಯೇಟರ್‌ಗಳಿಗೆ ಬರಲಿದೆ. ಹಾಡುಗಳು ಈಗಾಗಲೇ ಸೂಪರ್ರೋ ಅಂತಾ ಹೇಳಿಕೊಂಡು ಆಗಿದೆ. ಇನ್ನೂಳಿದಂತೆ ಚಿತ್ರ ನೋಡಿಕೊಂಡು ಬನ್ನಿ ಮತ್ತೇ ನೀವೇ ಹೇಳ್ತೀರಾ ರಾ.ವನ್ ಈಸ್ ಎ ಬಿಗ್ ವನ್ ಅಂತಾ..!
No comments:
Post a Comment