
ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ಬಪ್ಪಿ ಲಹರಿಯ ‘ಊ..ಲಾ..ಲಾ’ ಹಾಡು ಈ ವರ್ಷದ ಮೋಸ್ಟ್ ಪಾಪ್ಯುಲರ್ ಹಾಡುಗಳ ಸಾಲಿನಲ್ಲಿ ಸೇರಿಕೊಂಡಿರೋದು ಬಪ್ಪಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಒಂದು ಜೀವಂತ ಪುರಾವೆ.
ಬಪ್ಪಿ ಲಹರಿ ಎಂದರೆ ಥಟ್ ಅಂತಾ.. ಚಿನ್ನದ ಅಂಗಡಿಯ ನೆನಪು ಬಂದು ಬಿಡುತ್ತದೆ. ‘ವಿದ್ ಔಟ್ ಗೋಲ್ಡ್ ಬಪ್ಪಿ ನೋ ಮೋರ್’ ಎನ್ನುವ ಮಾತು ಇಡೀ ಸಿನ್ಮಾ ನಗರಿಗೆ ಗೊತ್ತಿದೆ. ಬಪ್ಪಿಯ ಕೈಯಲ್ಲಿರುವ ಹತ್ತು ಬೆರಳಿಗೂ ಚಿನ್ನದ ಉಂಗುರ, ಕುತ್ತಿಗೆ ತುಂಬಾ ಹಾರದಂತೆ ನೇತಾಡುತ್ತಿರುವ ಚಿನ್ನದ ಸರಗಳು ಎಲ್ಲರನ್ನು ಕೂಲ್ ಮಾಡಲು ಸನ್ ಗ್ಲಾಸ್, ತಲೆ ತುಂಬಾ ಉದ್ದ ಕೂದಲು, ೩೨ ಹಲ್ಲುಗಳು ಈಗಲೂ ಇದೆ ಎನ್ನುವಂತಹ ಒಂದು ಸುಂದರ ನಗು. ಕುರ್ತಾ, ಶೇರ್‌ವಾನಿಯೊಳಗೆ ದಡೂತಿ ದೇಹ ಎಲ್ಲವೂ ಬಪ್ಪಿ ಲಹರಿಯ ಶಾರ್ಟ್ ಇಂಟರ್‌ಡಕ್ಷನ್ ಮಾರ್ಕ್‌ಗಳು.
ಬಪ್ಪಿ ಲಹರಿ ಬಹಳ ಜನರಿಗೆ ಗೊತ್ತಿರುವಂತೆ ಸಿಂಗರ್, ಕಂಪೋಸರ್ ಆಂಡ್ ಆಕ್ಟರ್. ಮೂರರ ಹರೆಯದಲ್ಲಿ ತಬ್ಲಾದ ಜತೆ ಗುದ್ದಾಡಿಕೊಂಡು ಒಳ್ಳೆಯ ಹೆಸರು ಪಡೆದ ಬಪ್ಪಿಯ ಹೆತ್ತವರು ಕೂಡ ಸಂಗೀತದ ಆರಾಧಕರು. ಬರೀ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆಯ ಹೆಸರು ಗಳಿಸಬೇಕೆನ್ನುವುದು ಬಪ್ಪಿ ಬಾಲ್ಯದಿಂದಲೂ ಬೆಳೆಸಿಕೊಂಡು ಬಂದ ಕನಸ್ಸಾಗಿತ್ತು. ಬಪ್ಪಿಯ ತಂದೆಗೆ ಸಿನಿಮಾ ನಗರಿಯಲ್ಲಿ ಒಳ್ಳೆಯ ಹೆಸರಿತ್ತು. ಅದೇ ಬಪ್ಪಿಯ ಸಿನ್ಮಾ ಎಂಟ್ರಿಗೆ ಗ್ರೀನ್ ಕಾರ್ಡ್ ಆಯಿತು.
ಬಪ್ಪಿಯ ಸಂಗೀತವೇ ವಿಚಿತ್ರ ಮಾರಾಯ್ರೆ. ಪಶ್ವಿಮ, ಪೂರ್ವ ದೇಶಗಳ ಸಂಗೀತದ ಪ್ರಭಾವದ ಜತೆಯಲ್ಲಿ ದೇಸಿಯ ಬೀಟ್‌ಗಳನ್ನು ಕೊಟ್ಟು ಕೇಳುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುವ ಸಾಮರ್ಥ್ಯ ಬಪ್ಪಿಯ ಸಂಗೀತ ಹೊಂದಿದೆ. ೧೯ರ ಹರೆಯದಲ್ಲಿ ಬಾಲಿವುಡ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಬಪ್ಪಿಯ ಮೊದಲ ಚಿತ್ರ ಬಂಗಾಳಿ ಎರಡನೇ ಚಿತ್ರ ಹಿಂದಿಯಲ್ಲಿ ಬಂತು. ಆದರೆ ೧೯೭೫ರಲ್ಲಿ ಹಿಂದಿಯಲ್ಲಿ ಬಂದ ತಹೀರ್ ಹುಸೇನ್‌ರ ‘ಝಕ್ಮಿ’ಯಲ್ಲಿ ಬಪ್ಪಿ ಯ ಕಂಪೋಸಿಂಗ್ ಹಾಗೂ ಹಿನ್ನೆಲೆ ಗಾಯನ ಏಕ್‌ದಂ ಅವರಿಗೆ ಸ್ಟಾರ್ ಗಿರಿ ಕಿರೀಟ ಕೊಟ್ಟಿತ್ತು.
ಕ್ರಾಂತಿಕಾರ ಬಪ್ಪಿ:
ಬಪ್ಪಿ ಸಿನ್ಮಾ ಸಂಗೀತದಲ್ಲೊಂದು ಹೊಸ ಕ್ರಾಂತಿಗೆ ನಾಂದಿ ಹಾಡಿದರು. ‘ಚಲ್ತೇ ಚಲ್ತೇ’ ಹಾಗೂ ‘ಸುರಕ್ಷಾ’ ಚಿತ್ರಗಳು ಬಪ್ಪಿ ಸಂಗೀತದಿಂದ ಸೂಪರ್ ಹಿಟ್ಟ ಅನ್ನಿಸಿಕೊಂಡಿತು. ಮತ್ತೇ ಬಪ್ಪಿ ತಿರುಗಿ ನೋಡುವ ತಪ್ಪು ಮಾಡಲಿಲ್ಲ. ಅತೀ ಕಡಿಮೆ ಟೈಮ್‌ನಲ್ಲಿ ಬಪ್ಪಿ ಯುವಜನರ ಆರಾಧಕರಾಗಿ ಒಪ್ಪಿಕೊಂಡರು. ೧೯೮೦ರಲ್ಲಿ ಹಿಂದಿಯಲ್ಲಿ ಬಂದ ‘ಡಿಸ್ಕೋ ಡ್ಯಾನ್ಸರ್’ ಚಿತ್ರದ ‘ಐ ಯ್ಯಾಮ್ ಎ ಡಿಸ್ಕೋ ಡ್ಯಾನ್ಸರ್’ ಬಪ್ಪಿಯ ಮೋಸ್ಟ್ ಡಿಮ್ಯಾಂಡ್ ಹಾಡಾಗಿ ಹೋಯಿತು. ಈ ಬಳಿಕ ಬಪ್ಪಿಯನ್ನು ‘ಡಿಸ್ಕೋ ಕಿಂಗ್’ ಎಂದೇ ಬಾಲಿವುಡ್ ಮಂದಿಗಳು ಕರೆಯಲು ಆರಂಭ ಮಾಡಿದರು.
ಮಹಮ್ಮದ್ ರಫಿ ಹಾಗೂ ಕಿಶೋರ್ ಕುಮಾರ್‌ಗಳ ಜತೆಯಲ್ಲಿ ಬಪ್ಪಿ ಡ್ಯುಯೆಟ್ ಸಾಂಗ್‌ಗಳನ್ನು ಹಾಡಿಸಿದರು. ಆಶಾ ಬೊಂಸ್ಲೆಂ, ಲತಾ ಮಂಗೇಶ್ಕರ್ ಸೇರಿದಂತೆ ಬಪ್ಪಿ ಕೆಲಸ ಮಾಡಿದರು. ಅಲೀಶಾ ಚಿನೋಯ್, ಉಷಾ ಉತ್ತುಪ್‌ರಂತಹ ಗಾಯಕರನ್ನು ಬಪ್ಪಿ ತಮ್ಮ ಗರಡಿಯಲ್ಲಿ ತಯಾರಿಸಿ ಬಾಲಿವುಡ್‌ಗೆ ಬಿಟ್ಟರು. ೧೯೯೦ರಲ್ಲಿ ಪ್ರಕಾಶ್ ಮೆಹ್ರಾ ನಿರ್ದೇಶನದ ‘ದಲಾಲ್’ಚಿತ್ರದ ‘ಗುಟುರ್ ಗುಟುರ್’ ಮಾಸ್ ಹಿಟ್ ಆಗಿ ಬಪ್ಪಿಗೆ ಹೊಸ ಇಮೇಜ್ ಕೊಟ್ಟಿತು.‘ಬಪ್ಪಿ ಮ್ಯಾಜಿಕ್- ದೀ ಅಸಲಿ ಬಾಪ್ ಮಿಕ್ಸ್’ ಬಪ್ಪಿಯ ಆಲ್ಬಂ ಮಸಾಲೆ ದೋಸೆಯಂತೆ ಖರ್ಚಾಗಿ ಹೋಯಿತು.
ಅಂದಹಾಗೆ ಬಪ್ಪಿಯ ಸಂಗೀತದ ಪಯಣ ಈಗಲೂ ಮುಂದುವರಿದೆ. ಇಂದಿಗೂ ಬಪ್ಪಿಯ ಸಂಗೀತ ಎಂದರೆ ಪ್ರೀತಿಸುವ, ಕುಣಿಯುವ, ಆರಾದಿಸುವ ಅಭಿಮಾನಿಗಳಿದ್ದಾರೆ. ಬಪ್ಪಿ ಕೂಡ ಇಂದಿನ ಯುವ ಪೀಳಿಗೆಯ ನಾಡಿಮಿಡಿತವನ್ನು ಹಿಡಿದುಕೊಂಡೇ ಹಾಡುತ್ತಿದ್ದಾರೆ ಎನ್ನೋದೇ ಖುಷಿಯ ವಿಷ್ಯಾ. ದಕ್ಷಿಣ ಭಾರತದ ಖ್ಯಾತ ಐಟಂ ಡ್ಯಾನ್ಸರ್ ಸಿಲ್ಕ್‌ಸ್ಮಿತಾ ಅವರ ಕತೆಯನ್ನು ಇಟ್ಟುಕೊಂಡು ಹೊರಬರುತ್ತಿರುವ ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ಬಪ್ಪಿಯ ‘ಊ ..ಲಾ..ಲಾ’ ಹಾಡು ಈ ವರ್ಷದ ಮೋಸ್ಟ್ ಪಾಪ್ಯುಲರ್ ಹಾಡುಗಳ ಸಾಲಿನಲ್ಲಿ ಸೇರಿಕೊಂಡಿರೋದು ಬಪ್ಪಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಒಂದು ಜೀವಂತ ಪುರಾವೆ ಅಲ್ವಾ..?
ಬಪ್ಪಿಯ ಚಿನ್ನದ ಮೋಹ
ಬಪ್ಪಿ ಲಹರಿಯ ಬಾಲ್ಯದ ಬದುಕು ಅಷ್ಟೊಂದು ಸುಂದರವಾಗಿರಲಿಲ್ಲ. ಕಡುಬಡತನದ ನಡುವೆ ಬಪ್ಪಿಯ ಬಾಲ್ಯ ಅರಳಿತ್ತು. ಒಂದು ಹೊತ್ತಿನ ಊಟಕ್ಕೂ ಬಪ್ಪಿ ಪರದಾಡಿದ್ದಾರೆ ಎನ್ನುವ ಮಾತನ್ನು ಬಪ್ಪಿ ತನ್ನ ಸ್ನೇಹಿತರ ವಲಯದಲ್ಲಿ ಹೇಳಿಕೊಳ್ಳುತ್ತಿದ್ದರಂತೆ. ಆದರೆ ಬಪ್ಪಿ ಸಂಗೀತ ಕ್ಷೇತ್ರದಲ್ಲಿ ನಿಧಾನವಾಗಿ ಬೆಳೆಯುತ್ತಾ ಹೋದಾಗ ಮನೆಯ ಪರಿಸ್ಥಿತಿ ಚೇತರಿಕೆ ಕಂಡಿತ್ತು. ಬದುಕಿನ ಮಟ್ಟ ಒಂದು ಹಂತಕ್ಕೆ ನಿಲ್ಲುವ ಹೊತ್ತಿಗೆ ಚಿನ್ನದ ಆಭರಣಗಳ ಮೇಲೆ ವಿಶೇಷ ಮೋಹ ಇಟ್ಟುಕೊಂಡಿದ್ದ ಅವರ ತಾಯಿ ಬಪ್ಪಿಯನ್ನು ಬಿಟ್ಟು ಹೋದರಂತೆ..! ತಾಯಿ ನೆನಪಿಗಾಗಿ ಬಪ್ಪಿ ಮೈ ತುಂಬಾ ಚಿನ್ನದ ಆಭರಣಗಳನ್ನು ಇಟ್ಟುಕೊಂಡು ಈಗಲೂ ಓಡಾಡುತ್ತಿದ್ದಾರೆ. ಇದೇ ಚಿನ್ನದ ಗಣಿ ಬಪ್ಪಿಯ ಚಿನ್ನದ ಸ್ಟೋರಿ.
ಕಲಿಯುಗದ ಕರ್ಣ
ದಾನ ಧರ್ಮದಲ್ಲೂ ಬಪ್ಪಿ ಎತ್ತಿದ ಕೈ ಖಾಸಗಿ ಚಾನೆಲ್‌ವೊಂದು ಸಂಗೀತ ರಿಯಾಲಿಟಿ ಶೋವನ್ನು ನಡೆಸುತ್ತಿದ್ದಾಗ ಬಪ್ಪಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಯಾವ ವಿದ್ಯಾರ್ಥಿ ಉತ್ತಮವಾಗಿ ಹಾಡಿದನೋ ಅವರಿಗೆ ಬಪ್ಪಿ ಬರೀ ಶಹಬ್ಬಾಸ್ ಹೇಳುವ ಬದಲಾಗಿ ತನ್ನ ಕುತ್ತಿಗೆಯಲ್ಲಿರುವ ಚಿನ್ನದ ಸರಗಳನ್ನೇ ಕಿತ್ತು ಕೊಡುತ್ತಿದ್ದರು. ಹೀಗೆ ಕೊಡುತ್ತಾ ಚಿನ್ನದ ಸರಗಳು ಮುಗಿದು ಹೋಯಿತೋ.. ಅಲ್ಲಿಂದ ಕೈಯಲ್ಲಿದ್ದ ಉಂಗುರಗಳನ್ನು ಕೊಡಲು ಆರಂಭ ಮಾಡಿದರು. ಇದು ಬಪ್ಪಿಯ ದಾನ ಧರ್ಮಗಳಿಗೆ ಒಂದು ಸ್ಯಾಂಪಲ್ ಅಷ್ಟೇ..
No comments:
Post a Comment