Sunday, August 21, 2011

ನಿತ್ಯಾ ಬೆಳದಿಂಗಲು


ನಿತ್ಯಾ ಬರೀ ಕನ್ನಡ ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿ ಹೋಗಿಲ್ಲ. ಮಲಯಾಳಂ, ತೆಲುಗು, ತಮಿಳು ಎಲ್ಲ ಕಡೆ ಹೋಗಿ ಬಂದವಳು. ಹುಡುಗಿಯ ಸರ್ನೇಮ್ ನೋಡಿದರೆ ಮಾತ್ರ ಅವಳು ಮಲಯಾಳಂ ಕುಟ್ಟಿ ಅನ್ನಿಸಿಬಿಡುತ್ತದೆ. ನ್ಯಾಚುರಲಿ ಅವಳು ಕನ್ನಡದ ಕುವರಿ.


ಬೆಳದಿಂಗಲ ಬಟ್ಟಲಲ್ಲಿ ಅದ್ದಿ ತೆಗೆದ ಮುಖ. ಹುಟ್ಟಿನಿಂದ ಪಕ್ಕದಲ್ಲಿ ನಿಂತು ಸಮಾಧಾನಿಸಿದ ನಗು. ಮತ್ತೆ ಮತ್ತೇ ಪ್ರೇಕ್ಷಕನನ್ನು ಕುಕ್ಕಿ ಬಿಡುವ ಕುಡಿ ನೋಟ. ನಮ್ಮನ್ನೇ ಹುಡುಗಿ ಎಂದು ಅಪ್ಪಿಕೊಂಡು ಬಿಡುವ ಮುಗ್ದತೆ. ಯಾವುದೇ ವರ್ಗದ ಪ್ರೇಕ್ಷಕನನ್ನು ಮೋಡಿ ಮಾಡಿ ಬಿಡುವ ಹುಡುಗಿಯ ಬಿಂದಾಸ್ ವ್ಯಕ್ತಿತ್ವ. ಎಲ್ಲವೂ ಜತೆಯಲ್ಲಿ ಕೂತು ನೋಡಬಹುದಾದ ಹುಡುಗಿ ನಿತ್ಯಾ ಮೆನನ್.
ಅವಳು ಒಂದು ಲೆಕ್ಕಚಾರದ ಪ್ರಕಾರ ಕನ್ನಡದ ಹುಡುಗಿ. ಮೆನನ್ ಎಂಬ ಸರ್ನೇಮ್ ಜತೆಗೂಡಿದಾಗ ಮಾತ್ರ ಮಲಯಾಳಂ ಬೆಡಗಿ ಎಂದುಕೊಂಡು ದೂರ ಮಾಡಿಬಿಡಬಹುದು. ಅಂದಹಾಗೆ ನಿತ್ಯಾ ಮೆನನ್ ಕನ್ನಡಿಗರಿಗೆ ತೀರಾ ಪರಿಚಿತ ಮುಖ. ಕರಾವಳಿ ಮೂಲದ ನಿರ್ದೇಶಕ ಕಮ್ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ತಮ್ಮ ಮೊದಲ ಚಿತ್ರ ‘ಸೆವೆನ್ ಓ ಕ್ಲಾಕ್’ನಲ್ಲಿ ನಿತ್ಯಾ ‘ಅನು’ ಪಾತ್ರದಲ್ಲಿ ಗಮನ ಸೆಳೆದಿದ್ದಳು.
ಚಿತ್ರ ಸಾಧಾರಣ ಓಟದಿಂದ ನಿತ್ಯಾಳಿಗೆ ಕನ್ನಡದಲ್ಲಿ ಅಂತಹ ದೊಡ್ಡ ಚಾನ್ಸ್ಗಳು ಇರಲಿಲ್ಲ ಅಂದುಕೊಂಡಿರುವಾಗ ಪಕ್ಕದ ಸಿನ್ಮಾ ಇಂಡಸ್ಟ್ರಿ ಮಾತ್ರ ನಿತ್ಯಾಳಿಗೆ ಚಾನ್ಸ್ ಮೇಲೆ ಚಾನ್ಸ್ ಕೊಡುತ್ತಾ ಹೋಯಿತು. ನಿತ್ಯಾ ಬರೀ ಕನ್ನಡ ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿ ಹೋಗಿಲ್ಲ. ಮಲಯಾಳಂ, ತೆಲುಗು, ತಮಿಳು ಎಲ್ಲ ಕಡೆ ಚಿತ್ರಗಳನ್ನು ಮಾಡಿಕೊಂಡು ಶಹಬ್ಬಾಸ್ ಅನ್ನಿಸಿಕೊಂಡಿದ್ದಾಳೆ.
ಕನ್ನಡದ ನಿರ್ದೇಶಕ ಶಿವಮಣಿ ಅವರ ‘ಜೋಶ್’, ವಿ.ಕೆ. ಪ್ರಕಾಶ್ ನಿರ್ದೇಶನದ ‘ಐದ್ ಒಂದ್ಲ ಐದು’ನಲ್ಲೂ ನಿತ್ಯಾ ತನ್ನ ನಟನೆಯ ಮೂಲಕ ದಂಗು ಮೂಡಿಸಿದ್ದರು. ಅದರಲ್ಲೂ ಜೋಶ್ ಚಿತ್ರದ ಅಭಿನಯಕ್ಕಾಗಿ ಫಿಲಂ ಫೇರ್ ಪ್ರಶಸ್ತಿಗೆ ನಾಮಕಿಂತಗೊಂಡಿದ್ದರು. ನಿತ್ಯಾ ನಟನೆಗಿಂತ ಹೆಚ್ಚಾಗಿ ಪತ್ರಕರ್ತೆಯಾಗಲೂ ಇಷ್ಟಪಟ್ಟಿದ್ದರು. ಅದರಲ್ಲೂ ಸಿನಿಮಾಟೋಗ್ರಾಫಿ ಇಂಟೆರೆಸ್ಟಿಂಗ್ ಫೀಲ್ಡ್. ನಿತ್ಯಾ ನಟನೆಯ ಜತೆಗೆ ಹಾಡುವುದರಲ್ಲೂ ಎತ್ತಿದ ಕೈ. ನಿತ್ಯಾ ಮೆನನ್ ಹೇಳಿಕೊಳ್ಳದ ಮಾತುಗಳು ಬಹಳಷ್ಟಿದೆ. ಅದರಲ್ಲೂ ತುಂಬಾ ಸಿಕ್ರೇಟ್ಸ್ ಮಾತುಗಳು ಇಲ್ಲಿವೆ.
ಅಂದಹಾಗೆ ನಿತ್ಯಾ ಮೆನನ್ರಿಗೆ ಚಾಕಲೇಟ್ಗಳೆಂದರೆ ಪಂಚಪ್ರಾಣ. ನಾನಾ ಬ್ರಾಂಡ್ ಚಾಕಲೇಟ್ಗಳನ್ನು ತಂದು ಪ್ರೀಜರ್ನಲ್ಲಿಟ್ಟುಕೊಂಡು ಟೈಮ್ ಸಿಕ್ಕಾಗಲೆಲ್ಲ ಚಾಕಲೇಟ್ ತಿನ್ನುತ್ತಾ ಇರುತ್ತಾರೆ. ಅದರಲ್ಲೂ ಕೆಲವೊಂದು ಬ್ರಾಂಡ್ ಚಾಕಲೇಟ್ಗಳನ್ನು ತನ್ನ ವ್ಯಾನಿಟಿ ಬ್ಯಾಗ್ನಲ್ಲಿ ಸದಾ ಇಟ್ಟಿರುತ್ತಾರೆ. ಮನೆಯಲ್ಲಿ ಅಡುಗೆ ಮಾಡುವುದೆಂದರೆ ನಿತ್ಯಾರಿಗೆ ಇಷ್ಟವಿಲ್ಲ. ಅದಷ್ಟೂ ಹೊರಗಡೆ ಹೋಗಿ ತಿನ್ನೋದು ಎಂದರೆ ಬಹಳ ಖುಷಿ.
ಟೈಮ್ ಸಿಕ್ಕಾಗಲೆಲ್ಲ ಓದುವುದು, ಫ್ರೆಂಡ್ಸ್ಗಳ ಜತೆಯಲ್ಲಿ ಲಾಂಗ್ ಟೂರ್ ಹೋಗೋದು ನಿತ್ಯಾರಿಗೆ ಬಹಳ ಇಷ್ಟ ಎನ್ನೋದು ಅವರ ಆಪ್ತ ವಲಯದ ಮಾತು. ಕಲಾತ್ಮಕ ಚಿತ್ರಗಳ ನಡುವಿನಲ್ಲಿ ಆಗಾಗ ಕಮರ್ಷಿಯಲ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಆದರೆ ವಿಶೇಷವಾಗಿ ಗ್ಲಾಮರ್ ಹಾಗೂ ಎಕ್ಸ್ಫೋಸಿಂಗ್ ವಿಚಾರದಲ್ಲಿ ನಿತ್ಯಾ ಕಟ್ಟುನಿಟ್ಟು. ಆಫ್ಬೀಟ್ ಮೂವಿಗಳೇ ಓಕೆ ಎಂದು ಬಿಡುವ ನಿತ್ಯಾ ಕತೆ, ಪಾತ್ರಕ್ಕೆ ಜಾಸ್ತಿ ಮಹತ್ವ ಕೊಡುತ್ತಾರೆ.
ಬದುಕು ಬಹಳಷ್ಟು ಹೇಳಿಕೊಟ್ಟಿದೆ. ಅಲ್ಲಿನ ಮೌಲ್ಯಯುತವಾದ ಪಾಠಗಳು ತನಗೆ ದಾರಿ ದೀಪವೆಂದು ಬಹಳಷ್ಟು ಸಲ ನಿತ್ಯಾ ತನ್ನ ಸ್ನೇಹಿತರ ವರ್ಗದಲ್ಲಿ ಹೇಳಿಕೊಳ್ಳುತ್ತಾ ಇರುತ್ತಾರಂತೆ! ಅಂದಹಾಗೆ ನಿತ್ಯಾ ಮೆನನ್ ಪಾಲಿಗೆ ನಾಯಕನೆಂದರೆ ಹೇಗಿರಬೇಕು ಗೊತ್ತಾ..? ಮಾನವ ಸಂಬಂಧಗಳಿಗೆ ರೆಸ್ಪೆಕ್ಟ್ ಕೊಡುವಂತಹ ಮನೋಭಾವ ಹೊಂದಿರಬೇಕು. ಬದುಕಿನ ಸವಾಲುಗಳನ್ನು ಎದುರಿಸುವ ಎದೆಗಾರಿಕೆ ಇರಬೇಕು ಎನ್ನೋದು ಅವರ ಟ್ವಿಟ್ಟರ್ ಮಾತು.
ನಿತ್ಯಾ ಮೆನನ್ ಸೆಕ್ಸಿ ಇಮೇಜ್ನಿಂದ ಕೂಲ್ ಹುಡುಗಿ ಎನ್ನಿಸಿಕೊಳ್ಳಲು ಜಾಸ್ತಿ ಬಯಸುತ್ತಾರೆ. ಅದಕ್ಕಾಗಿ ಬಿಂದಾಸ್ ವ್ಯಕ್ತಿತ್ವ ರೂಪಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಾಳೆ ಇರುತ್ತಾರೆ ಎನ್ನೋದು ಅವರ ಗೆಳೆಯರ ಮಾತು. ಟೋಟಲಿ ನಿತ್ಯಾ ಮೆನನ್ ಕನ್ನಡಕ್ಕಿಂತ ಜಾಸ್ತಿಯಾಗಿ ಉಳಿದ ಸಿನ್ಮಾ ಫೀಲ್ಡ್ನಲ್ಲಿ ಕಾಣಿಸಿಕೊಳ್ಳುವುದು ಬೇಡಿಕೆ ಇರುವ ನಟಿಮಣಿ ಎನ್ನುವ ವಿಚಾರಕ್ಕೆ ಪುಷ್ಠಿ ನೀಡುವಂತಿದೆ ಅಲ್ವಾ..?

No comments:

Post a Comment