Wednesday, August 10, 2011

ಡಿಸೈನಿಗೂ ಕತ್ರಿನಾ !


‘ಮೇರಿ ಬ್ರದರ್ ಕೀ ದುಲ್ಹಾನ್’ನ ವಸ್ತ್ರ ವಿನ್ಯಾಸಕ ರಾಕಿ ಜತೆಯಲ್ಲಿ ಕತ್ರಿನಾ ಡಿಸೈನಿಂಗ್ ಪಾಠಗಳನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಯಶ್ರಾಜ್ ಬ್ಯಾನರ್ನ ಮತ್ತೊಂದು ಚಿತ್ರದಲ್ಲಿ ಕತ್ರಿನಾ ಕೈಫ್ ನಟನೆಯ ಜತೆಗೆ ‘ಕತ್ತರಿ’ನೂ ಹಿಡಿತಾರೆಯಂತೆ !

ಬಾಲಿವುಡ್ ಇಂಡಸ್ಟ್ರಿಯ ಬಾರ್ಬಿ ಡಾಲ್ ಕತ್ರಿನಾ ಕೈಫ್ ಗೊತ್ತಾಲ್ಲ. ಹಿಂದಿ ಬರೋಲ್ಲ ಅಂತಾ ಹೇಳಿಕೊಂಡು ಬರೋಬರಿ ಹತ್ತು ನಿಮಿಷ ಬಿಡದೇ ಹಿಂದಿಯಲ್ಲಿ ಮಾತನಾಡಿ ದಂಗು ಮೂಡಿಸುತ್ತಿದ್ದ ಅದೇ ಹುಡುಗಿ ಇನ್ನೂ ಮುಂದೆ ತನ್ನ ಸಿನ್ಮಾಗಳಲ್ಲಿ ನಟಿಸುವ ಜತೆಯಲ್ಲಿ ತನ್ನ ಪಾತ್ರಗಳಿಗೆ ತಾನೇ ವಸ್ತ್ರವಿನ್ಯಾಸ ಮಾಡುತ್ತೇನೆ ಎಂದು ಕೂತುಬಿಟ್ಟಿದ್ದಾಳೆ.
ಈ ಮೂಲಕ ಇಷ್ಟರವರೆಗೆ ಕತ್ರಿನಾ ಸಿನ್ಮಾಗಳಿಗೆ ಡಿಸೈನ್ ಮಾಡುತ್ತಿದ್ದ ಡಿಸೈನರ್ಗಳಿಗೆ ಕತ್ರಿನಾ ಕತ್ರಿ ಕೊಡುಬಿಟ್ಟಿದ್ದಾಳೆ ಎಂದು ಮುಂಬಯಿ ಗಲ್ಲಿಯಲ್ಲಿ ಮಾತು ಹರಡಿದೆ. ಅಂದಹಾಗೆ ಕತ್ರಿನಾ ಕೈಫ್ ಸಿನ್ಮಾ ಇಂಡಸ್ಟ್ರಿಗೆ ಬರುವ ಮೊದಲು ಲಂಡನ್ನಲ್ಲಿ ಮೊಡೆಲಿಂಗ್ ಮಾಡಿಕೊಂಡಿದ್ದರು. ಬರೀ ೧೪ರ ಹರೆಯದಲ್ಲಿ ರ್ಯಾಂಪ್ ಮೇಲೆ ನಡೆದು ಸಭಿಕರನ್ನು ದಂಗು ಮೂಡಿಸಿದ್ದರು. ಲಂಡನ್ ಫ್ಯಾಶನ್ ವೀಕ್ನಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಮೊಡೆಲಿಂಗ್ ಜತೆಯಲ್ಲಿ ಡಿಸೈನಿಂಗ್ ಫೀಲ್ಡ್ನಲ್ಲೂ ಕೈಯಾಡಿಸಿದ್ದರು.
ಒಂದ್ ಸಾರಿ ರ್ಯಾಂಪ್ ಮೇಲೆ ಬೆಕ್ಕಿನ ಹೆಜ್ಜೆ ಹಾಕುತ್ತಿದ್ದ ಕತ್ರಿನಾ ಲಂಡನ್ ಮೂಲದ ಚಿತ್ರ ನಿರ್ದೇಶಕ ಕಾಜೀದ್ರ ಕಣ್ಣಿಗೆ ಬಿದ್ದು ಬಿಟ್ಟರು. ಅಲ್ಲಿಂದ ‘ಬೂಮ್’ ಚಿತ್ರದ ಮೂಲಕ ಸಿನ್ಮಾ ಇಂಡಸ್ಟ್ರಿಗೆ ಲ್ಯಾಂಡಿಗೆ ಆದರು. ಬಾಲಿವುಡ್ ಸೇರಿದಂತೆ ಕಾಲಿವುಡ್, ಟಾಲಿವುಡ್, ಮೊಲಿವುಡ್ಗಳಲ್ಲೂ ಬೇಡಿಕೆಯ ನಟಿಯಾಗಿ ಕತ್ರಿನಾ ಮಿಂಚಿದ್ದರು. ಈಗ ನಟನೆಯ ಜತೆಯಲ್ಲಿ ತನ್ನ ಪಾತ್ರಗಳಿಗೇ ತಾನೇ ವಸ್ತ್ರ ವಿನ್ಯಾಸಕಿಯಾಗಿ ಆಗಿ ಕತ್ರಿನಾ ಬರುತ್ತಿದ್ದಾಳೆ.
ಬಾಲಿವುಡ್ನ ದೊಡ್ಡ ಬ್ಯಾನರ್ ಯಶ್ರಾಜ್ ಅಡಿಯಲ್ಲಿ ಬರುತ್ತಿರುವ ಶಾರೂಕ್ ಖಾನ್ ಅಭಿನಯದ ಚಿತ್ರದಲ್ಲಿ ಕತ್ರಿನಾ ವಸ್ತ್ರ ವಿನ್ಯಾಸದ ಕೆಲಸಕ್ಕೂ ರೆಡಿಯಾಗಿದ್ದಾಳೆ. ಈಗಾಗಲೇ ಬಿಡುಗಡೆಯ ಹಾದಿಯಲ್ಲಿರುವ ‘ಮೇರಿ ಬ್ರದರ್ ಕೀ ದುಲ್ಹಾನ್’ನ ವಸ್ತ್ರ ವಿನ್ಯಾಸಕ ರಾಕಿ ಜತೆಯಲ್ಲಿ ಕತ್ರಿನಾ ಡಿಸೈನಿಂಗ್ ಪಾಠಗಳನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಜತೆಯಲ್ಲಿ ಕ್ಲೋತ್ ಡಿಸೈನಿಂಗ್ಗೆ ಬೇಕಾದ ಅರ್ಧದಷ್ಟೂ ಬಟ್ಟೆಗಳನ್ನು ತನ್ನ ಮನೆಯಲ್ಲಿ ತಂದು ಹಾಕಿದ್ದಾರೆ.
ಡಿಸೈನರ್ ರಾಕಿಯ ನೆರವು ಕತ್ರಿನಾ ಫುಲ್ ಜೋಶ್ನಿಂದ ಯಶ್ರಾಜ್ ಬ್ಯಾನರ್ನ ಮತ್ತೊಂದು ಚಿತ್ರಕ್ಕೆ ತಾನೇ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತೇನೆಂದು ಯಶ್ರಾಜ್ ಬ್ಯಾನರ್ನ ಆದಿತ್ಯ ಚೋಪ್ರಾರಲ್ಲಿ ವಿನಂತಿಸಿಕೊಂಡಿದ್ದಾಳೆ. ಚಿತ್ರದ ನಿರ್ಮಾಪಕ ಆದಿತ್ಯನೂ ಕತ್ರಿನಾರ ಬಯಕೆಗೆ ಓಕೆ ಎಂದಿದ್ದಾರೆ. ಈ ಮೂಲಕ ಕತ್ರಿನಾ ಬಾಲಿವುಡ್ ಸಿನ್ಮಾ ಇಂಡಸ್ಟ್ರಿಯ ಮೊದಲ ನಟಿ ಕಮ್ ಫ್ಯಾಶನ್ ಡಿಸೈನರ್ ಎನ್ನಿಸಿಕೊಂಡಿದ್ದಾರೆ.
‘ನಾನು ಬಾಲ್ಯದಿಂದಲೂ ಫ್ಯಾಶನ್ ಲೋಕವನ್ನು ಬಹಳ ಇಷ್ಟಪಡುತ್ತಿದ್ದೆ. ರ್ಯಾಂಪ್ ಮೇಲೆ ನಾನಾ ಡಿಸೈನರ್ಗಳ ಡಿಸೈನ್ಡ್ ಬಟ್ಟೆಗಳನ್ನು ಹಾಕುತ್ತಾ ನಡೆಯುತ್ತಿದ್ದಾಗ ನಾನು ಕೂಡ ಫ್ಯಾಶನ್ ಡಿಸೈನರ್ ಆಗಬೇಕೆಂದು ಕನಸ್ಸು ಕಾಣುತ್ತಿದೆ. ನಟನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳದಿದ್ದಾರೆ ಒಳ್ಳೆಯ ಫ್ಯಾಶನ್ ಡಿಸೈನರ್ ಆಗುತ್ತಿದ್ದೆ . ಯಶ್ರಾಜ್ರ ಮತ್ತೊಂದು ಚಿತ್ರದಲ್ಲಿ ನನ್ನ ಪಾತ್ರಗಳಿಗೆ ನಾನೇ ಡಿಸೈನ್ ಮಾಡುತ್ತಿದ್ದೇನೆ ಎಂದು ಕತ್ರಿನಾ ಕೈಫ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
‘ಜಿಂದಿಗಿ ನಾ ಮಿಲೇಗಿ ದುಬಾರಾ’ ಹಾಗೂ ‘ಮೇರಿ ಬ್ರದರ್ ಕೀ ದುಲ್ಹಾನ್’ ಚಿತ್ರದಲ್ಲಿ ಕತ್ರಿನಾ ಕೈಫ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಬಟ್ಟೆಗಳ ಕುರಿತು ತುಂಬಾ ಸಿರೀಯಸ್ ಆಗಿದ್ದಾರೆ ಎಂಬ ಸೂಚನೆ ಈ ಚಿತ್ರಗಳ ಮೂಲಕ ನೀಡಿದ್ದಾರೆ. ದೇಶಿ ಉಡುಪುಗಳ ಜತೆಯಲ್ಲಿ ವಿದೇಶಿ ಬಟ್ಟೆಗಳ ಮಿಶ್ರಣದಲ್ಲಿ ಮೂಡುವ ಬಟ್ಟೆಗಳನ್ನು ಜಾಸ್ತಿ ಲೈಕ್ ಮಾಡುವ ಕತ್ರಿನಾ ತಾನು ನಟಿಸುವ ಮುಂದಿನ ಎಲ್ಲ ಚಿತ್ರಗಳಿಗೂ ಡಿಸೈನಿಂಗ್ ಮಾಡುತ್ತಾರಾ ಎನ್ನುವುದು ಮಾತ್ರ ಇನ್ನೂ ಕೂಡ ಗೊತ್ತಾಗಿಲ್ಲ.

No comments:

Post a Comment