

ಯಶಸ್ಸು ಎಂಬ ಮಂತ್ರ ನಿಖಿಲ್ ಅಡ್ವಾನಿಗೆ ಮಾಡಿದ ಮೂರು ಚಿತ್ರಗಳಲ್ಲಿ ಪಠಿಸಲು ಸಿಗಲೇ ಇಲ್ಲ. ಆದರೂ ಮತ್ತೆ ಫೀನಿಕ್ಸ್ ಹಕ್ಕಿಯಂತೆ ‘ಡೆಲ್ಲಿ ಸಫಾರಿ’ಯಲ್ಲಿ ಬರುತ್ತಿದ್ದಾರೆ.
ಒಂದಲ್ಲ ಎರಡಲ್ಲ ಬರೋಬರಿ ಮೂರು ಚಿತ್ರಗಳು ಬಾಲಿವುಡ್ ಪಡಸಾಲೆಗೆ ಇಳಿದು ವಾರ ಮುಗಿಯುವುದರೊಳಗೆ ಡಬ್ಬಾ ಪೆಟ್ಟಿಗೆ ಸೇರಿ ಹೋಯಿತು. ಆದರೂ ಸಿನ್ಮಾ ನನ್ನ ಖಯಾಲಿ ಮಾಡಿಯೇ ಸಿದ್ಧ. ಸತತ ಸೋಲು ಗೆಲುವಿನ ಹಾದಿಗೆ ಮುನ್ನುಡಿ ಎಂದುಕೊಂಡು ಈಗಲೂ ಬಾಲಿವುಡ್ ಬಿಡದ ಹುಡುಗ ನಿರ್ದೇಶಕ ನಿಖಿಲ್ ಅಡ್ವಾನಿ.
ಈಗ ಯಾಕೋ ೩ಡಿ ಸಿನ್ಮಾ ಇಟ್ಟುಕೊಂಡು ಮುಂಬಯಿಗೆ ಮತ್ತೆ ಬಂದು ನಿಂತಿದ್ದಾರೆ. ಚಿತ್ರ ಬಾಕ್ಸಾಫೀಸ್ನಲ್ಲಿ ಗೆಲುತ್ತಾ ಇಲ್ಲವೇ ಮಕಾಡೆ ಬಿದ್ದು ನರಳುತ್ತಾ ಎನ್ನುವುದು ಕಾದು ನೋಡಬಹುದು. ಆದರೆ ನಿಖಿಲ್ ಅಡ್ವಾನಿ ಎಂಬ ಹುಡುಗನ ಕತೆ ಮಾತ್ರ ಎಲ್ಲೂ ಕೇಳಿಸಲು ಸಿಗೋಲ್ಲ. ನಿಖಿಲ್ ಅಡ್ವಾನಿ ನಿಜಕ್ಕೂ ಲಕ್ಕಿಬಾಯ್. ಬಾಲಿವುಡ್ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ನ ಅಡಿಯಲ್ಲಿ ‘ಕುಚ್ ಕುಚ್ ಹೋತಾ ಹೈ’, ‘ಕಬೀ ಕುಷಿ ಕಬೀ ಗಮ್’ನಂತಹ ಚಿತ್ರಗಳಿಗೆ ಸಹ ನಿರ್ದೇಶಕನ ಸ್ಥಾನದಲ್ಲಿ ಕೂತು ಕೆಲಸ ಮಾಡುವ ಅವಕಾಶ ನಿಖಿಲ್ಗೆ ಒಳಿದಿತ್ತು.
ಆದರೆ ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಬಂದ ‘ಕಲ್ ಹೋ ನಾ ಹೋ’ ತನ್ನ ನಿರ್ದೇಶನದ ಚಿತ್ರ ಬಾಲಿವುಡ್ನಲ್ಲಿ ಯಾರ್ರಾ ಬಿರ್ರಿ ಹಿಟ್ ಅನ್ನಿಸಿಕೊಂಡಿದ್ದೆ ತಡ ನಿಖಿಲ್ ಒಂದೇ ಬಾರಿ ಸ್ಟಾರ್ ನಿರ್ದೇಶಕನ ಪಟ್ಟಕ್ಕೆ ಸೂಟೇಬಲ್ ವ್ಯಕ್ತಿ ಅನ್ನಿಸಿಕೊಂಡರು.
ಆದರೆ ಯಾಕೋ ಗೊತ್ತಿಲ್ಲ . ನಿಖಿಲ್ ನಂತರ ನಿರ್ದೇಶನ ಮಾಡಿದ ‘ಸಲಾಂ-ಇ- ಈಷ್ಕ್’ ದೊಡ್ಡ ಸ್ಟಾರ್ ನಟರ ದಂಡೇ ಇತ್ತು. ಬರೋಬರಿ ಎರಡು ವಾರಗಳ ಓಟ ಆರಂಭ ಮಾಡುತ್ತಿದ್ದಾಗಲೇ ಥಿಯೇಟರ್ಗೆ ಪ್ರೇಕ್ಷಕ ಮಾತ್ರ ಬರಲಿಲ್ಲ ಎಂದುಕೊಂಡು ಚಿತ್ರ ಅಲ್ಲಿಂದ ಥಿಯೇಟರ್ ಮಾಲೀಕರು ಸಿನ್ಮಾವನ್ನು ಎತ್ತಿಬಿಟ್ಟ್ರು. ೨೦೦೯ರಲ್ಲಿ ಮತ್ತೊಂದು ಪ್ರಯತ್ನ ಮಾಡಿಬಿಡೋಣ ಎಂದುಕೊಂಡು ಅಕ್ಷಯ್ ಕುಮಾರ್ ಹಾಗೂ ದೀಪಿಕಾ ಪಡುಕೋಣೆ ಇರುವ ‘ಚಾಂದಿನಿ ಚೌಕ್ ಟು ಚೈನಾ’ ಚಿತ್ರ ನಿರ್ದೇಶನ ಮಾಡಿಬಿಟ್ಟ್ರು ನಿಖಿಲ್ ಅಲ್ಲೂ ಗೆಲುವು ಕೈ ಕೊಟ್ಟಿತ್ತು.
ಎರಡು ವರ್ಷಗಳ ನಂತರ ಮತ್ತೊಂದು ಚಿತ್ರ ‘ಪಾಟಿಯಾಲ ಹೌಸ್’ ಬಂತು. ಅಕ್ಷಯ್ ಕುಮಾರ್ ಈ ಕಾಲದಲ್ಲಿ ಓಡುವ ಕುದುರೆ ಎಂದೇ ಪರಿಗಣಿಸಲಾಗಿತ್ತು. ಅಂತಹ ನಟನ ಜತೆಯಲ್ಲಿ ಅನುಷ್ಕಾ ಶರ್ಮ ನಟಿಸಿದರೂ ಚಿತ್ರ ಆರಂಭದಲ್ಲಿಯೇ ಮುಗ್ಗರಿಸಿ ಬಿತ್ತು. ಅಲ್ಲೂ ಯಶಸ್ಸು ಎಂಬ ಮಂತ್ರ ನಿಖಿಲ್ ಅಡ್ವಾನಿಗೆ ಪಠಿಸಲು ಸಿಗಲೇ ಇಲ್ಲ. ನಿಖಿಲ್ ಅಡ್ವಾನಿ ಬಾಲಿವುಡ್ ಮಂದಿಗೆ ಮಾತ್ರ ಐರಾನ್ಲೆಗ್ಯಾಗಿ ಉಳಿದು ಹೋದರು.
ಡೆಲ್ಲಿಗೆ ಸಫಾರಿ:
೨೦೦೮ರಲ್ಲಿ ಬಾಲಿವುಡ್ ಇಂಡಸ್ಟ್ರಿಯೇ ೩ಡಿ ಸಿನ್ಮಾಗಳಿಗೆ ಕೈ ಹಾಕದ ಟೈಮ್ನಲ್ಲಿ ನಿಖಿಲ್ ‘ಡೆಲ್ಲಿ ಸಫಾರಿ’ ಎನ್ನುವ ೩ಡಿ ಚಿತ್ರ ನಿರ್ಮಾಣ, ನಿರ್ದೇಶನ ಮಾಡುವ ಕನಸ್ಸು ಕಂಡಿದ್ದರು. ೨೦೦೮ರಲ್ಲಿ ಆರಂಭವಾದ ‘ಡೆಲ್ಲಿ ಸಫಾರಿ’ ಚಿತ್ರ ನಿರ್ಮಾಣ ಕಾರ್ಯ ಈಗ ಪೂರ್ತಿಯಾಗಿದೆ. ಆಗಸ್ಟ್ ತಿಂಗಳ ಕೊನೆ ಭಾಗದಲ್ಲಿ ‘ಡೆಲ್ಲಿ ಸಫಾರಿ’ ಸಿನ್ಮಾ ಥಿಯೇಟರ್ಗಳಿಗೆ ಏಕ್ದಂ ನುಗ್ಗಲಿದೆ. ಒಂದು ಲೆಕ್ಕಚಾರದ ಪ್ರಕಾರ ಭಾರತೀಯ ಸಿನ್ಮಾ ಇಂಡಸ್ಟ್ರಿಯಲ್ಲಿಯೇ ೩ಡಿ ಸಿನ್ಮಾ ನಿರ್ದೇಶನ ಮಾಡುತ್ತಿರೋದು ನಿಖಿಲ್ ಅಡ್ವಾನಿ ಮೊದಲಿಗರು.
ಚಿತ್ರದ ಪ್ರಮುಖ ಪಾತ್ರಗಳಿಗೆ ಬಾಲಿವುಡ್ನ ಸ್ಟಾರ್ ನಟರಾದ ಅಕ್ಷಯ್ ಖನ್ನಾ, ಗೋವಿಂದ, ಸುನಿಲ್ ಶೆಟ್ಟಿ, ಬೊಮ್ಮನ್ ಇರಾನಿ, ಉರ್ಮಿಳಾ ಮಾಂತೋಡ್ಕರ್ ಧ್ವನಿಗೂಡಿಸಿದ್ದಾರೆ. ಪರಿಸರ ನಾಶದ ಕುರಿತಾಗಿ ಬೋರಿವಿಲಿಯ ಅರಣ್ಯದಲ್ಲಿರುವ ೫ ಪ್ರಾಣಿಗಳು ಮುಂಬಯಿಯಿಂದ ದಿಲ್ಲಿಯಲ್ಲಿರುವ ರಾಜಕಾರಣಿಗಳಿಗೆ ಪರಿಸರ ನಾಶದ ಕುರಿತಾಗಿ ಮನವಿ ಕೊಡುವ ಸಾರಾಂಶ ಹೊಂದಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಶಂಕರ್-ಎಸಾನ್- ಲಾಯ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಮೀರ್ ಲೇಖನಿಯಿಂದ ಒಳ್ಳೆಯ ಹಾಡುಗಳು ಮೂಡಿದೆ.
ಆದರೆ ಇಂತಹ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಾರಾ..? ನಿಖಿಲ್ ಈ ಚಿತ್ರದ ಮೂಲಕವಾದರೂ ಗೆದ್ದು ಬರುತ್ತಾರಾ..? ಎಂಬ ಪ್ರಶ್ನೆಗಳ ಮೂಟೆ ಚಿತ್ರ ನೋಡುವ ಎಲ್ಲರಲ್ಲೂ ಇದೆ. ಆದರೆ ಈ ಚಿತ್ರ ಕೈ ಕೊಟ್ಟರೆ ನಿಖಿಲ್ ಅಡ್ವಾನಿ ಏನೂ ಮಾಡುತ್ತಾರೆ ಗೊತ್ತಾ? ಮತ್ತೊಂದು ಬಾಲಿವುಡ್ ಚಿತ್ರ ಮಾಡಿ ದಂಗು ಮೂಡಿಸುತ್ತಾರೆಯಂತೆ ! ಇದು ಖುದ್ದು ನಿಖಿಲ್ ತಮ್ಮ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದ ಮಾತು. ಅದೇ ಕಣ್ರಿ ಸೋಲುವ ಹುಡುಗ ಮತ್ತೆ ಮತ್ತೆ ಕನಸ್ಸುಗಳ ಮೂಲಕ ಗೆಲ್ಲಲು ಹೊರಟಿರೋದು ಗಮನಿಸಬೇಕಾದ ವಿಷ್ಯಾ.
No comments:
Post a Comment