
ಬೆಂಗಳೂರುನಂತಹ ಮೆಟ್ರೋ ಸಿಟಿಯಲ್ಲಿ ನಿಂತು ಕರಾವಳಿಯ ನಾನಾ ವೈರೆಟಿಯ ಮೀನು ಹಿಡಿಯುವ ಮೊಗವೀರ ಸಮಾಜವನ್ನು ನೋಡಬಹುದು. ಅರೇ ಇಷ್ಟೆಲ್ಲಾ ನಡೆಯಬೇಕಾದರೆ..ಬೆಂಗಳೂರಿಗೆ ಯಾವಾಗ ಕರಾವಳಿಯ ಸಮುದ್ರ ಬಂತು ಅಂತಾ ಕೇಳಬೇಡಿ ! ಇದೆಲ್ಲ ಸಾಧ್ಯವಾಗಿರೋದು ಮಾತ್ರ ಪ್ರಕಾಶ್ ಶೆಟ್ಟಿಯ ಮ್ಯೂರಲ್ ಆರ್ಟ್ನಿಂದಾಗಿ ಬನ್ನಿ ನೋಡಿ ಬರೋಣ...
ಬೆಂಗಳೂರು ನಂತಹ ಮೆಟ್ರೋ ಸಿಟಿಯಲ್ಲಿ ನಿಂತು ಕರಾವಳಿಯ ನಾನಾ ವೈರೆಟಿಯ ಮೀನು ಹಿಡಿಯುವ ಮೊಗವೀರ ಸಮಾಜವನ್ನು ನೋಡಬಹುದು. ಕರಾವಳಿಯ ಬಂದರಿನೊಳಗೆ ಎಂದಿಗೂ ಕಾಲಿಡದ ಮಂದಿನೂ ಬಂದರಿನಲ್ಲಿ ನಡೆಯುವ ಮೀನಿನ ವ್ಯವಹಾರ ಕಾಣಬಹುದು. ಸ್ಟೇಟ್ ಬ್ಯಾಂಕ್ನ ಮುಂಭಾಗದಲ್ಲಿ ಕೂತು ಮೀನಿಗಾಗಿ ಅರಚಾಡುವ ಗಟ್ಟಿ ಮುಟ್ಟಾದ ಮಹಿಳಾ ಮಣಿಗಳ ದರ್ಶನ ಭಾಗ್ಯ ಬೆಂಗಳೂರಿನಲ್ಲಿಯೇ ಕೂತು ಪಡೆಯಬಹುದು. ಅರೇ ಇಷ್ಟೆಲ್ಲಾ ನಡೆಯಬೇಕಾದರೆ..ಬೆಂಗಳೂರಿಗೆ ಯಾವಾಗ ಕರಾವಳಿಯ ಸಮುದ್ರ ಬಂತು ಅಂತಾ ಕೇಳಬೇಡಿ ! ಇದೆಲ್ಲ ಸಾಧ್ಯವಾಗಿರೋದು ಮಾತ್ರ ಗ್ಯಾರಂಟಿ ಮಾರಾಯ್ರೆ.
ಇಡೀ ಕರಾವಳಿಯ ಪ್ರತಿಷ್ಠಿತ ವಿಚಾರಗಳೆಲ್ಲವೂ ಬೆಂಗಳೂರಿಗೆ ಬಂದು ಮುಟ್ಟಿದೆ. ನವರಾತ್ರಿ ಟೈಮ್ನಲ್ಲಿ ಕರಾವಳಿಯಲ್ಲಿ ಕಾಣಸಿಗುವ ಹುಲಿವೇಷಧಾರಿಗಳು, ನಗರದ ಹಳೇ ಚರ್ಚ್ಗಳಲ್ಲಿ ಒಂದಾದ ಮಿಲಾಗ್ರಿಸ್ ಚರ್ಚ್ನ ಧಾರ್ಮಿಕ ಕಾರ್ಯಗಳು, ಕರಾವಳಿಯ ಕೋಣಗಳ ಕಂಬಳ, ಕೋರಿಕಟ್ಟ(ಕಾಕ್ ಪೈಟ್), ಹಂಪನಕಟ್ಟೆಯ ಬ್ಯುಸಿ ಟ್ರಾಫಿಕ್ ಜಾಮ್, ಬಾವುಟಗುಡ್ಡೆಯಲ್ಲಿರುವ ಪಡ್ಡೆ ಹೈಕಳ ಠಾಗೋರ್ ಪಾರ್ಕ್ ಎಲ್ಲವೂ ಬೆಂಗಳೂರಿನ ಪ್ರೇಜರ್ಟೌನ್ನಲ್ಲಿರುವ ‘ಮಂಗಳೂರು ಪೆರ್ಲ್’ನಲ್ಲಿ ಮೀನು ಪ್ರೈ, ಮಸಾಲ ಅರ್ಡರ್ ಮಾಡುತ್ತಾ ಕಾರ್ಟೂನ್ ಮಜಾ ಉಡಾಯಿಸಬಹುದು.
ಇದು ಮ್ಯೂರಲ್ ಕಾರ್ಟೂನ್. ದೇವಾಲಯದಲ್ಲಿರುವ ಮ್ಯೂರಲ್ ಪೈಟಿಂಗ್ಸ್(ಗೋಡೆ ಮೇಲಿನ ರಚನೆ)ನಂತೆ ಇದೊಂದು ಹೊಸ ಪ್ರಯೋಗ. ಭಾರತದಲ್ಲಂತೂ ತುಂಬಾನೇ ಅಪರೂಪದ ಆರ್ಟ್ ಎಂದೇ ಕರೆಯಲಾಗುತ್ತದೆ. ಇಡೀ ಭಾರತದಲ್ಲಿ ಮಂಗಳೂರು ಮೂಲದ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಮಾತ್ರ ಇಂತಹ ಮ್ಯೂರಲ್ ಕಾರ್ಟೂನ್ಗಳ ಹಿಂದೆ ಬಿದ್ದಿದ್ದಾರೆ.
ಅಂದಹಾಗೆ ಕರ್ನಾಟಕದಲ್ಲಂತೂ ಇಂತಹ ಮ್ಯೂರಲ್ ಆರ್ಟ್ ಜಸ್ಟ್ ಸೆಕೆಂಡ್. ಮಂಗಳೂರಿನ ಪಬ್ವೊಂದರಲ್ಲಿ ಇಂತಹ ಕಾರ್ಟೂನ್ಗಳು ಗೋಡೆಯನ್ನು ಆಲಂಕರಿಸಿದ್ದು ಮಾತ್ರವಲ್ಲ ಪೆಗ್ ಏರಿಸುವವರನ್ನು ಕಾರ್ಟೂನ್ ಮೂಲಕ ನಶೆ ಏರಿಸಿದ ಪ್ರಸಂಗಗಳು ನಡೆದಿವೆ. ಈಗ ಬೆಂಗಳೂರಿನ ‘ಮಂಗಳೂರು ಪೆರ್ಲ್’ನಲ್ಲಿ ಸುಮಾರು ೧೩೦ಅಡಿ ಉದ್ದ ಹಾಗೂ ೩ ಅಡಿ ಎತ್ತರದಲ್ಲಿ ಈ ಮ್ಯೂರಲ್ ಕಾರ್ಟೂನ್ಗಳನ್ನು ಕಾಣಬಹುದು.
ಒಂದು ಲೆಕ್ಕಚಾರದ ಪ್ರಕಾರ ರಾಜ್ಯದಲ್ಲಿ ಮ್ಯೂರಲ್ ಕಾರ್ಟೂನ್ಗಳಿಗೆ ಜೀವಕೊಡುವ ಪ್ರಕಾಶ್ ಶೆಟ್ಟಿ ಹೇಳುವಂತೆ ಬಹುಶಃ ದೇಶದ ಯಾವೊಬ್ಬ ವ್ಯಂಗ್ಯ ಚಿತ್ರಕಾರನೂ ಗೋಡೆಯ ಮೇಲೆ ಬೃಹತ್ ಆಕಾರದಲ್ಲಿ ಸ್ವಯಂ ಆಗಿ ಕಾರ್ಟೂನ್ ರಚಿಸಿಲ್ಲ. ಈ ಡಿಜಿಟಲ್ ಯುಗದಲ್ಲಿ ಕಲಾವಿದರು ಬೃಹತ್ ರಚನೆಯ ಕಷ್ಟ ತೆಗೆದುಕೊಳ್ಳಬೇಕಾಗಿಲ್ಲ. ಆದರೆ ನಾನೀಲ್ಲಿ ಒರಿಜಿನಲ್ ಆರ್ಟ್ಗೆ ಅದರದ್ದೇ ಆದ ಮಹತ್ವ ಇರುವುದರಿಂದ ಈ ರೀತಿಯ ಪ್ರಯೋಗಕ್ಕೆ ಇಳಿದಿದ್ದೇನೆ ಎನ್ನುತ್ತಾರೆ ಅವರು.
‘ನಾನು ಮೂಲತಃ ಮಂಗಳೂರಿನ ಕ್ಯಾಥೋಲಿಕ್ ಸಮುದಾಯದಿಂದ ಬಂದವ. ನನಗೆ ಹುಟ್ಟಿ ಬೆಳೆದ ಮಂಗಳೂರು ಇಡೀಯಾಗಿ ನನ್ನ ಹೋಟೆಲ್ನಲ್ಲಿ ತೋರಿಸಬೇಕು ಎನ್ನುವ ಕನಸ್ಸಿತ್ತು. ಪ್ರಕಾಶ್ ಶೆಟ್ಟಿ ಇಂತಹ ಮ್ಯೂರಲ್ ಕಾರ್ಟೂನ್ಗಳಿಗೆ ತುಂಬಾನೇ ಪೇಮಸ್ ಎನ್ನುವ ವಿಚಾರ ಗೊತ್ತಾದ ಕೂಡಲೇ ಅವರನ್ನು ಸಂಪರ್ಕಿಸಿ ಕಾರ್ಟೂನ್ಸ್ ಬಿಡಿಸಲು ಹೇಳಿದೆ. ಅವರು ಬ್ಯುಸಿ ಶೆಡ್ಯುಲ್ ಮಧ್ಯೆನೂ ಬಂದು ಕಾರ್ಟೂನ್ಸ್ ಬಿಡಿಸಿದ್ದಾರೆ. ಹೋಟೆಲ್ಗೆ ಭೇಟಿ ನೀಡುವವರು ಇದನ್ನು ನೋಡಿ ಮನಸ್ಸು ಪೂರ್ತಿ ನಗಲಿ ಎನ್ನುವುದು ನನ್ನ ಉದ್ದೇಶ’ ಎನ್ನುತ್ತಾರೆ ಮಂಗಳೂರು ಪೆರ್ಲ್ ಮಾಲೀಕ ಸ್ಟೀವನ್ ಪಿಂಟೋ.
ಬೆಂಗಳೂರಿನ ನೂರಾರು ಹೋಟೆಲ್ಗಳ ನಡುವೆ ‘ಮಂಗಳೂರು ಪೆರ್ಲ್’ ತನ್ನ ಕ್ರೇಜಿ ಐಡಿಯಾದಿಂದ ಡಿಪರೆಂಟ್ ಇಮೇಜ್ ಕ್ರಿಯೇಟ್ ಮಾಡಿದೆ ಎನ್ನುವುದು ಗಮನಿಸಬೇಕಾದ ವಿಷ್ಯಾ. ಟೋಟಲಿ ಪ್ರಕಾಶ್ ಶೆಟ್ಟರು ಕ್ಯಾನ್ವಾಸ್ ಬಿಟ್ಟು ಗೋಡೆಗಳಿಗೆ ಜೋರಾಗಿ ಅಂಟಿಬಿಟ್ಟಿದ್ದಾರೆ ಎನ್ನಬಹುದು ಅಲ್ವಾ..? ಸೊರಗಿ ಹೋಗುತ್ತಿರುವ ವ್ಯಂಗ್ಯಚಿತ್ರಕಲೆಯನ್ನು ಶೆಟ್ಟರು ಈ ರೀತಿ ಬಳಸುತ್ತಿರುವುದರಂದ ಅದರ ಮೌಲ್ಯ ಹೆಚ್ಚಾಗುತ್ತಿದೆ ಎಂಬುದಕ್ಕೆ ಯಾವುದೇ ಡೌಟ್ ಉಳಿದಿಲ್ಲ.
No comments:
Post a Comment