Thursday, August 11, 2011

ಬೆಲೆ ಬಾಳುವ ‘ಹೀರೋಯಿನ್’


ಬಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ರೊಬೋಟ್ ಚಿತ್ರಕ್ಕಾಗಿ ಐಶ್ವರ್ಯಾ ರೈ ಪಡೆದುಕೊಂಡ ಸಂಭಾವನೆ ೬.೫ ಕೋಟಿ. ಈಗ ಕರೀನಾ ಕಪೂರ್ ‘ಹೀರೋಯಿನ್’ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಬರೀ ೮ ಕೋಟಿಯಂತೆ !

ಹೋದಲ್ಲಿ, ಬಂದಲ್ಲೆಲ್ಲ ಭಾರೀ ಸುದ್ದಿಗೆ ಗ್ರಾಸವಾಗುತ್ತಿರುವ ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ಮದುವೆಮಾಡಿಕೊಳ್ಳಲು ಮನಸ್ಸು ಮಾಡಿ ಅದೆಷ್ಟೋ ದಿನಗಳೇ ಆಗಿವೆ. ಆದರೆ, ಆಗಿರಲಿಲ್ಲ. ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಾ ಅದರ ಶೂಟಿಂಗ್ನಲ್ಲೇ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿತ್ತು ಈ ಜೋಡಿ. ಕೊನೆಗೂ, ಈಗ ತಮ್ಮ ಮದುವೆಗೆ ಮುಹೂರ್ತ ಪಿಕ್ಸ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಕರೀನಾ ಮತ್ತು ಸೈಫ್.
ಅದೂ, ಮುಂದಿನ ವರ್ಷ. ಫೆಬ್ರವರಿಗೆ ನಿಶ್ಚಿತಾರ್ಥ, ಅಕ್ಟೋಬರ್ ಹೊತ್ತಿಗೆ ಮದುವೆ. ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ಅವರ ನಿಶ್ಚಿತಾರ್ಥ ತುಂಬಾ ಅದ್ದೂರಿಯಾಗಿಯೇ ನಡೆಯಲಿದೆ. ಈ ಕುರಿತು, ಎರಡು ಕುಟುಂಬಗಳು ಈಗಾಗಲೇ ಚರ್ಚೆ ನಡೆಸಿದ್ದು ಪೂರ್ವ ತಯಾರಿ ಕಡೆ ಗಮನ ಕೊಟ್ಟಿದ್ದಾರಂತೆ.
ಭೋಪಾಲ್ನಲ್ಲಿ ನಡೆಯಲಿರುವ ಈ ತಾರಾ ಜೋಡಿ ಎಂಗೇಜ್ಮೆಂಟ್ ಗೆ ಬಾಲಿವುಡ್ ಸ್ಟಾರ್ಗಳಷ್ಟೇ ಅಲ್ಲದೇ, ಖಾನ್ತ್ರಯರೂ ಆಗಮಿಸಲಿದ್ದಾರಂತೆ.
ಶಾರುಖ್, ಅಮೀರ್ ಮತ್ತು ಸಲ್ಮಾನ್ ಖಾನ್ ಮೂವರೊಟ್ಟಿಗೂ ಕರೀನಾ ಅಭಿನಯಿಸಿದ್ದಾರೆ. ಹಾಗಾಗಿ, ಈ ಮೂವರನ್ನು ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಫೆಬ್ರವರಿ ೧೪ಕ್ಕೆ ಕರೀನಾ-ಸೈಫ್ ಎಂಗೇಜ್ಮೆಂಟ್ ನಡೆಯಲಿದೆಯಂತೆ. ಪ್ರೇಮಿಗಳ ದಿನವಾಗದಿದ್ದರೆ, ಫೆಬ್ರವರಿ ಅಂತ್ಯಕ್ಕಂತೂ ಗ್ಯಾರಂಟಿ. ಇದು ಮುಗಿದ ಒಂಬತ್ತು ತಿಂಗಳಿಗೆ ಸರಿಯಾಗಿ ಹಸೆಮಣೆಯೇರಲು ಈ ಜೋಡಿ ನಿರ್ಧರಿಸಿದೆ. ಅಷ್ಟರೊಳಗೆ, ತಾವು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಟ್ಟು ‘ವಿರಾಮ’ವಾಗಿ ಹನಿಮೂನ್ಗೆ ರೆಡಿಯಾಗಲು ತಯಾರಿ ನಡೆಸಿದ್ದಾರಂತೆ ಕರೀನಾ.
ಅಂದಹಾಗೆ, ಕರೀನಾ ಮತ್ತು ಸೈಫ್ ಎಂಗೇಜ್ಮೆಂಟ್ಗೆ ೧೫ ದಿನ, ಮದುವೆಗೆ ೧೦ದಿನ ರಜೆ ಘೋಷಿಸಿಕೊಂಡಿದ್ದಾರೆ !
ಮತ್ತೊಂದು ವಿಷಯ ಏನಪ್ಪಾ ಅಂದ್ರೆ ಐಶ್ವರ್ಯಾ ರೈ ತಾಯಿಯಾಗುವ ಖುಷಿಯಲ್ಲಿ ಬಿಟ್ಟುಹೋದ ‘ಹೀರೋಯಿನ್’ ಪಟ್ಟಕ್ಕೆ ಕರೀನಾ ಕಪೂರ್ ಎಂಟ್ರಿ ಕೊಟ್ಟಿದ್ದಾರೆ ಎನ್ನೋದು ತುಂಬಾ ಓಲ್ಡ್ ನ್ಯೂಸ್ ಅಲ್ವಾ..? ಈಗ ಬಂದಿರುವ ಗರಂ ಗರಂ ಸುದ್ದಿಯೆಂದರೆ ಮಧುರ್ ಭಂಡಾರ್ ಕರ್ ನಿರ್ದೇಶನದ ಈ ಚಿತ್ರಕ್ಕೆ ಕರೀನಾ ಬರೋಬ್ಬರಿ ಎಂಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.
ಅದರಲ್ಲೂ ಮೊದಲು ೧೦ ಕೋಟಿಯ ಮಾತುಕತೆ ನಡೆದಿತ್ತು. ಯುಟಿವಿ ಬ್ಯಾನರ್ನ ನಿರ್ಮಾಪಕ ದೊರೆಗಳು ಈಗ ೮ ಕೋಟಿ ಕೊಡುತ್ತೇವೆ ಉಳಿದ ಹಣವನ್ನು ಚಿತ್ರ ಬಿಡುಗಡೆಯ ಟೈಮ್ನಲ್ಲಿ ಕೊಟ್ಟು ಬಿಡುತ್ತೇವೆಂದು ಒಪ್ಪಂದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಕರೀನಾನೂ ಓಕೆ ಎಂದುಕೊಂಡು ೮ ಕೋಟಿ ಪಡೆದುಕೊಂಡಿದ್ದಾರೆ. ಆ ಮೂಲಕ, ಬಾಲಿವುಡ್ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ‘ಹೀರೋಯಿನ್’ ಆಗಿ ಹೊರಹೊಮ್ಮಿದ್ದಾರೆ ಕರೀನಾ.
ಅಂದಹಾಗೆ ಮಧುರ್ ಭಂಡಾರ್ಕರ್ ಅವರ ‘ಹೀರೋಯಿನ್’ಚಿತ್ರಕ್ಕೆ ಐಶ್ ನಂತರ ನಾಯಕಿಯ ಪಟ್ಟ ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್ಗೆ ಒಳಿದಿತ್ತು. ಆದರೆ ಪ್ರಿಯಾಂಕಾ ಮಧುರ್ ಅವರ ‘ಫ್ಯಾಶನ್’ ಚಿತ್ರದಲ್ಲಿ ನಟಿಸಿರುವುದರಿಂದ ಇದೇ ರೀತಿಯ ಕತೆ ಹೊಂದಿರುವ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲು ಇಷ್ಟ ಪಡಲಿಲ್ಲ. ಉಳಿದಂತೆ ವಿದ್ಯಾ ಬಾಲನ್ ಏಕ್ತಾ ಕಪೂರ್ ಬ್ಯಾನರ್ನ ‘ಡರ್ಟಿ ಪಿಕ್ಚರ್’ನಲ್ಲಿ ಫುಲ್ ಬ್ಯುಸಿಯಾಗಿರುವುದರಿಂದ ಈ ಚಿತ್ರ ಕರೀನಾರ ಪಾಲಿಗೆ ಒಳಿದಿತ್ತು.
ಮಧುರ್ ಭಂಡಾರ್ ಕರ್ಗೂ ಕರೀನಾ ಈ ಚಿತ್ರಕ್ಕೆ ಸರಿಯಾದ ನಟಿ ಎಂದೇ ಚಿತ್ರದ ಕಥೆಯನ್ನು ರಚಿಸಿಕೊಂಡಿದ್ದರಂತೆ ! ಕರೀನಾ ಈಗಾಗಲೇ ‘ಬಾಡಿಗಾರ್ಡ್’ ‘ಏಜೆಂಟ್ ವಿನೋದ್’ ಮತ್ತು ‘ಒನ್ಸ್ ಆಫನ್ ಟೈಮ್ ಇನ್ ಮುಂಬಯಿ-೨’ಯಲ್ಲಿ ಬ್ಯುಸಿ ಇರುವ ನಟಿ. ಮಧುರ್ ಹೇಳಿದ ಕೂಡಲೇ ಚಿತ್ರಕ್ಕೆ ನಾನೇ ಹೀರೋಯಿನ್ ಆಗ್ತೀನಿ ಎಂದು ಕರೀನಾ ಒಪ್ಪಿಗೆ ಕೊಟ್ಟಿದ್ದರಂತೆ.
ಅಲ್ಲಿಗೆ, ಕರೀನಾ ಮದುವೆ ಖರ್ಚಿನ ಬಗ್ಗೆ ಅವರಪ್ಪ ತಲೆ ಕೆಡಿಸಿಕೊಳ್ಳವಂತಿಲ್ಲ ಬಿಡಿ. ಝೀರೋ ಸೈಜ್ ‘ಹೀರೋಯಿನ್’ನ ಸಂಭಾವನೆಯನ್ನೇ ಇಲ್ಲಿ ವ್ಯಯಿಸಿದರಾಯಿತು ಎನ್ನುವ ಮಾತುಗಳು ಮುಂಬಯಿಯ ಗಲ್ಲಿಯಲ್ಲಿ ಠಪೋರಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರಂತೆ !

ಬಾಲಿವುಡ್ನಲ್ಲಿ ಬಿಗ್ ಸಂಭಾವನೆ

* ಶಂಕರ್ ನಿರ್ದೇಶನದ ರಜನಿಕಾಂತ್ ಅಭಿನಯದ ‘ರೊಬೋಟ್’ ಚಿತ್ರಕ್ಕಾಗಿ ಐಶ್ವರ್ಯಾ ರೈ ಬಚ್ಚನ್ ಪಡೆದುಕೊಂಡ ಸಂಭಾವನೆ ೬.೫ ಕೋಟಿ ರೂಪಾಯಿ.
* ಹ್ಯಾರಿ ಬೇವಾಜಾ ಅವರ ‘ಲವ್ ಸ್ಟೋರಿ-೨೦೫೦’ಯ ನಟನೆಗಾಗಿ ಪ್ರಿಯಾಂಕಾ ಚೋಪ್ರಾ ೧.೫ ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.
* ದೀಪಕ್ ಚೋಪ್ರಾ ನಿರ್ದೇಶನದ ‘ಹೇ ಜಿದಾಂಗೀ ಹೈ ಪ್ಯಾರ್ ಕೇ’ಯಲ್ಲಿ ಪ್ರೀತಿ ಜಿಂಟಾ ಹತ್ತು ವರ್ಷಗಳ ಹಿಂದೆ ಪಡೆದುಕೊಂಡ ಸಂಭಾವನೆ ೯೧ ಲಕ್ಷ. ಇದೇ ಚಿತ್ರಕ್ಕೆ ಕರೀನಾರ ಆಯ್ಕೆ ಕೂಡ ನಡೆದಿತ್ತು. ಹೊಸ ಮುಖ ಎಂಬ ಕಾರಣಕ್ಕೆ ಕರೀನಾ ಚಿತ್ರದಿಂದ ಹೊರಗೆ ಉಳಿದಿದ್ದರು.

No comments:

Post a Comment