
ಸಾಯಿಪ್ರಕಾಶ್. ಈ ಹೆಸರು ಕೇಳಿದೊಡನೆ ಹಾಗೊಮ್ಮೆ ಭಕ್ತಿ ಪ್ರಧಾನ ಚಿತ್ರಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ. ಸೆಂಟಿಮೆಂಟ್ ಹಾಗು ಭಕ್ತಿ ಪ್ರಧಾನ ಚಿತ್ರಗಳಿಗೂ ಸಾಯಿಪ್ರಕಾಶ್ ಅವರಿಗೂ ಅವಿನಾಭಾವ ಸಂಬಂಧವಿದೆ. ಆ ಕಾರಣಕ್ಕೋ ಏನೋ, ಸಾಯಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರಗಳ ಪೈಕಿ ಹೆಚ್ಚು ಭಕ್ತಿಪ್ರಧಾನ ಮತ್ತು ಸೆಂಟಿಮೆಂಟ್ ಚಿತ್ರಗಳೇ ಕಾಣಸಿಗುತ್ತವೆ. ಈ ಪ್ರಾಕಾರದ ಚಿತ್ರಗಳು ಎಂದಾಕ್ಷಣ ಸಾಯಿಪ್ರಕಾಶ್ ಹೆಸರು ಮೊದಲ ಸಾಲಲ್ಲೇ ಕಂಡುಬರುತ್ತದೆ ಇದು ನಿಜ ಕೂಡ. ಇತ್ತೀಚೆಗಷ್ಟೇ ‘ಶ್ರೀ ನಾಗಶಕ್ತಿ’ ಎಂಬ ಭಕ್ತಿ ಪ್ರಧಾನ ಚಿತ್ರ ನಿರ್ದೇಶಿಸಿದ್ದ ಸಾಯಿಪ್ರಕಾಶ್, ಇದೀಗ ಮತ್ತೊಂದು ಅಂಥದ್ದೇ ಭಕ್ತಿಪ್ರಧಾನವುಳ್ಳ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲು ಅಣಿಯಾಗುತ್ತಿದ್ದಾರೆ ಅವರು. ಅಂದಹಾಗೆ, ಆ ಚಿತ್ರಕ್ಕೆ ‘ಶ್ರೀ ದುರ್ಗಾಪರಮೇಶ್ವರಿ’ ಎಂದು ನಾಮಕರಣ ಮಾಡಲಾಗಿದೆ. ಚಂದ್ರಿಕಾ ಈ ಚಿತ್ರದ ನಿರ್ಮಾಪಕರು. ಚಿತ್ರ ದಲ್ಲಿ ಮುಖ್ಯ ಪಾತ್ರಧಾರಿಯಾಗಿ ಚಂದ್ರಿಕಾ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಇನ್ನು, ಶಶಿಕುಮಾರ್ ಅವರಿಗೆ ಇಲ್ಲೊಂದು ಪ್ರಮುಖ ಪಾತ್ರವಿದೆಯಂತೆ. ಉಳಿದಂತೆ ‘ಶ್ರೀನಾಗಶಕ್ತಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಲಾವಿದರು ಇಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂಬುದು ನಿರ್ದೇಶಕ ಸಾಯಿಪ್ರಕಾಶ್ ಅಂಬೋಣ. ‘ಇದು ಭಕ್ತಿ ಪ್ರಧಾನ ಚಿತ್ರ. ದುರ್ಗಾಪರಮೇಶ್ವರಿ ಚರಿತ್ರೆಯ ಒಂದು ಭಾಗವನ್ನು
ಚಿತ್ರದ ರೂಪದಲ್ಲಿ ತೋರಿಸಲಾಗುತ್ತಿದೆ. ಸಿನಿಮಾದಲ್ಲಿ ಅಗತ್ಯವಿದ್ದ ಕಡೆ ಮಾತ್ರ ಗ್ರಾμಕ್ಸ್ ಬಳಸಲಾಗುತ್ತದೆ. ಎಲ್ಲಿ , ಹೇಗೆ ಚಿತ್ರೀಕರಿಸಬೇಕು ಎಂಬ ಕುರಿತು ಈಗಷ್ಟೇ ಚರ್ಚೆ ನಡೆಯುತ್ತಿದೆ. ‘ಶ್ರೀ ನಾಗಶಕ್ತಿ’ ಚಿತ್ರದಲ್ಲಿ ದುಡಿದ ತಂತ್ರಜ್ಞರೇ ಇಲ್ಲೂ ನನ್ನೊಂದಿಗೆ ಜತೆಯಾಗುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ನನ್ನದು. ಉಳಿದಂತೆ ಗೋಟೂರಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಸದ್ಯಕ್ಕೆ, ‘ಶ್ರೀ ಆದಿಚುಂಚನಗಿರಿ ಕ್ಷೇತ್ರ’ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಆದಿಚುಂಚನಗಿರಿ
ಶ್ರೀಗಳ ಕುರಿತಾದ ಒಂದಷ್ಟು ಪುಸ್ತಕಗಳನ್ನು ತರಿಸಿಕೊಂಡು ಕೆಲ ಅಂಶಗಳನ್ನು ಹೆಕ್ಕಿ, ಚಿತ್ರಕಥೆಗೆ ಅಳವಡಿಸಿಕೊಳ್ಳಲಾಗುತ್ತಿದೆ. ಇನ್ನು, ‘ಶ್ರೀ ದುರ್ಗಾಪರಮೇಶ್ವರಿ’ ಚಿತ್ರ ಈ ತಿಂಗಳ ಮೂರನೇ ವಾರದಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನುತ್ತಾರೆ ನಿರ್ದೇಶಕರು.
No comments:
Post a Comment