Tuesday, May 3, 2011

ಅಮಲು ಅಮಲು ....


ರೀಮೇಕ್ನಲ್ಲೂ ‘ಒರಿಜಿನಾಲಿಟಿ’ ತೋರಿಸುವ ಒಂದು ಪ್ರಯತ್ನಕ್ಕೆ ನಿರ್ಮಾಪಕ ಕೆ.ಮಂಜು ಮುಂದಾಗಿದ್ದಾರೆ. ಅದು ತಮ್ಮ ‘ಮೈನಾ’ ರೀಮೇಕ್ ಚಿತ್ರದಲ್ಲಿ. ಒಂದರ ಮೇಲೊಂದರಂತೆ ರೀಮೇಕ್ ಸಿನಿಮಾಗಳನ್ನು ಮಾಡುತ್ತಿರುವ ಕೆ.ಮಂಜು ಅವರ ಹೊಸ ವೆಂಚರ್ ‘ಮೈನಾ’ ರೀಮೇಕ್. ಈಗ ಆ ರೀಮೇಕ್ ನಲ್ಲಿ ಒಂಚೂರು ಒರಿಜಿನಾಲಿಟಿ ಇರಲೆಂದು ಮೂಲ ಚಿತ್ರದ ನಿರ್ದೇಶಕ ಹಾಗೂ ನಾಯಕಿಯನ್ನೇ ಇಲ್ಲಿಗೂ ಕರೆತರುತ್ತಿದೆ. ಪ್ರಭು ಸೊಲೋಮನ್ ಈ ಚಿತ್ರದ ನಿರ್ದೇಶಕರು. ಅಮಲಾ ಪಾಲ್ ನಾಯಕಿ. ಈಗ ಈ ಇಬ್ಬರೂ ಮತ್ತೊಮ್ಮೆ ಕನ್ನಡ ಅವತರಣಿಕೆಯಲ್ಲಿ ಜೊತೆಯಾಗುತ್ತಿದ್ದಾರೆ. ನಾಯಕಿಯ ಆಯ್ಕೆ ವಿಷಯವನ್ನು ಮಂಜು ನಿರಾಕರಿಸುತ್ತಾರಾದರೂ ಮೂಲಗಳ ಪ್ರಕಾರ ಆಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಅಂದಹಾಗೆ, ನಿರ್ದೇಶಕ ಪ್ರಭು ಅವರಿಗೆ ಕನ್ನಡದಲ್ಲಿ ಇದು ಎರಡನೇ ಸಿನಿಮಾ. ೨೦೦೧ರಲ್ಲಿ ರವಿಚಂದ್ರನ್ ಅವರ ‘ಉಸಿರೇ’ ಸಿನಿಮಾವನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ರಾಕ್ಲೈನ್ ವೆಂಕಟೇಶ್ ಆಯೋಜಿಸಿದ್ದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ
ಆಗಮಿಸಿದ್ದ ಪ್ರಭು, ‘ಅಲ್ಲಿ ಹೇಗೆ ಮೈನಾ ಮಾಡಿದೆನೋ ಅದೇ ರೀತಿ ಇಲ್ಲೂ ಮಾಡುತ್ತೇನೆ. ಆದರೆ ಕನ್ನಡದ ನೆಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆಗಳಿರುತ್ತವೆ. ಈಗಾಗಲೇ ನಾಯಕ ಗಣೇಶ್ ಅವರ ಜೊತೆಯೂ ಚರ್ಚಿಸಿದ್ದೇನೆ’ ಎಂದರು. ಇದಕ್ಕೆ ಪೂರಕವಾಗಿ ಆಗ ತಾನೇ ರಾಕ್ಲೈನ್ ಅವರ ಕಾರ್ಯಕ್ರಮಕ್ಕೆ ಆಗಮಿಸಿದ ಗಣೇಶ್, ನಿರ್ದೇಶಕ ಪ್ರಭು ಅವರನ್ನು ಕಂಡ ಕೂಡಲೇ ಅವರನ್ನು ಕರೆದುಕೊಂಡು ಹೋಗಿ ಮತ್ತೆ ಚರ್ಚಿಸತೊಡಗಿದರು. ಚಿತ್ರ ಮೇ ೨೩ ರಂದು ಸೆಟ್ಟೇರಲಿದೆ. ನಂತರ ನಿರಂತರ ಶೂಟಿಂಗ್. ನಿರ್ಮಾಪಕ ಮಂಜು ಅವರ ಸ್ಟೈಲೇ ಹಾಗೇ. ಅವರು ಒಂದರ ಹಿಂದೊಂದು ಸಿನಿಮಾಗಳಿಗೆ ಮುಹೂರ್ತ ಮಾಡಿ ಸಿನಿಮಾಗಳನ್ನು ‘ಸ್ಟಾಕ್’ ಮಾಡುತ್ತಿರುತ್ತಾರೆ. ಸದ್ಯ ಅವರ ‘ಶಿಕಾರಿ’, ‘ಜಾಲಿಬಾಯ್’, ‘ಹ್ಯಾಪಿ’ ಚಿತ್ರಗಳು ತೆರೆಗೆ
ಸಿದಟಛಿವಾಗಿವೆ. ‘ಗಾಡ್ಫಾದರ್’ಗೆ ಮೊನ್ನೆಯಷ್ಟೇ ಮುಹೂರ್ತ ನಡೆದಿದೆ. ಈಗ ‘ಮೈನಾ’ ಸರದಿ.

No comments:

Post a Comment