
ಜೇಮ್ಸ್ ಬಾಂಡ್ ಚಿತ್ರಗಳ ಸ್ಪೆಷಾಲಿಟಿ ಅದು. ಒಂದೊಂದು ಚಿತ್ರವೂ ಒಂದೊಂದು ದೇಶದಲ್ಲಿ ನಿರ್ಮಾಣವಾಗುತ್ತದೆ. ಹಾಗಾಗಿಯೇ ಪ್ರತಿ ಬಾಂಡ್ ಚಿತ್ರದಲ್ಲೂ ವಿಭಿನ್ನವಾದ ಪರಿಸರ, ಲೊಕೇಶನ್ ಕಾಣೋದಕ್ಕೆ ಸಾಧ್ಯ. ಅದೆಷ್ಟೋ ದೇಶಗಳನ್ನು ಸುತ್ತಿರುವ ಬಾಂಡ್, ಭಾರತಕ್ಕೂ ಒಮ್ಮೆ ಬಂದಿದ್ದ. ೧೯೮೩ರಲ್ಲಿ ಬಿಡುಗಡೆಯಾದ ‘ಆಕ್ಟೋಪುಸ್ಸಿ’ ಚಿತ್ರದಲ್ಲಿ ಬಾಂಡ್ ಭಾರತಕ್ಕೆ ಬಂದಿದ್ದ. ಇಲ್ಲಿನ ಜಯಪುರ, ಉದಯಪುರದಲ್ಲಿ ಓಡಾಡಿದ್ದ, ಹೊಡೆದಾಡಿದ್ದ. ಇಲ್ಲಿನ ಸುಂದರ ತರುಣಿಯರನ್ನು ರೊಮ್ಯಾನ್ಸ್ ಮಾಡಿದ್ದ. ಈಗ ಬಾಂಡ್ ಮತ್ತೊಮ್ಮೆ ಭಾರತಕ್ಕೆ ಬರುತ್ತಿದ್ದಾನೆ. ಬಾಂಡ್ ಸೀರೀಸ್ನ ೨೩ನೇ ಚಿತ್ರವಾದ ‘ಬಾಂಡ್ ೨೩’ರ ಚಿತ್ರೀರಣ ಮುಂಬೈ ಹಾಗೂ ಗೋವಾದ ಸುಂದರ ತಾಣ ಗಳಲ್ಲಿ ಚಿತ್ರೀಕರಣವಾಗಲಿದೆಯಂತೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬಾಂಡ್ ಹಾಗೂ ಚಿತ್ರತಂಡ ಭಾರತಕ್ಕೆ ಬರಲಿದೆ. ಸುಮಾರು ಒಂದು ತಿಂಗಳ ಕಾಲ ಇಲ್ಲಿನ ವಿವಿಧ ಲೊಕೇಶನ್ಗಳಲ್ಲಿ ಸತತ ಚಿತ್ರೀಕರಣ ನಡೆಯಲಿದೆ. ಇತ್ತೀಚೆಗೆ ಆ ಚಿತ್ರದ ನಿರ್ದೇಶಕರಾದ ಸ್ಯಾಮ್ ಮೆಂಡಸ್ ಮುಂಬೈಗೆ ಬಂದು ಲೊಕೇಶನ್ ನೋಡಿ ಹೋಗಿದ್ದಾರಂತೆ. ಬರವಣಿಗೆ ಕೆಲಸವೆಲ್ಲಾ ಮುಗಿದ ನಂತರ ಬಂದು ಚಿತ್ರೀಕರಣ ಮುಗಿಸಿಕೊಂಡು ಹೋಗಲಿದ್ದಾರಂತೆ. ಅಲ್ಲಿಗೆ ಬಾಂಡ್ ಮತ್ತೊಮ್ಮೆ ಭಾರತಕ್ಕೆ ಬರುವುದು ಖಾತ್ರಿಯಾಗಿದೆ. ಕಳೆದ ಬಾರಿ ಬಂದಾಗ, ಕಾಮಿಡಿ,
ಚೇಸಿಂಗ್ ದೃಶ್ಯಗಳನ್ನು ತೋರಿಸುವ ಭರಾಟೆಯಲ್ಲಿ ಭಾರತದ ಬಡತನ, ಇಲ್ಲಿನ ಪರಿಸರ ತೋರಿಸಿ ಭಾರತೀಯರ ಪಾಲಿಗೆ ವಿಲನ್ ಆಗಿದ್ದ. ಈಗ ಭಾರತದ ಪರಿಸರ ಸಾಕಷ್ಟು ಬದಲಾಗಿದೆ. ಈ ಬಾರಿ ಬಾಂಡ್ ಕಣ್ಣಲ್ಲಿ ಭಾರತ ಹೇಗೆ ಕಾಣುತ್ತದೋ, ನೋಡಬೇಕು.
No comments:
Post a Comment