Wednesday, May 4, 2011

ಮ್ಯಾಡಿ ಕಂಗು ಈಗ ಟೂ ಟೂ


ಮೊನ್ನೆ ಮೊನ್ನೆಯಷ್ಟೇ ಕಂಗನಾ ರಾಣವತ್ ಹಾಗೂ ಮಾಧವನ್ಗೆ ಮದುವೆಯಾಗಿದೆ. ಅಷ್ಟರಲ್ಲೇ ಅವರಿಬ್ಬರ ಮಧ್ಯೆ ಬಿರುಕು ಉಂಟಾಗಿದೆ. ಎಷ್ಟರ ಮಟ್ಟಿಗೆಂದರೆ ಮುಂದೆ ಒಟ್ಟೊಟ್ಟಿಗೆ ಸಾಗುವುದಿಲ್ಲ ಎಂಬಷ್ಟು! ಕಂಗನಾ ಹಾಗೂ ಮಾಧವನ್ ಯಾವತ್ತು ಮದುವೆಯಾದರು ಎಂದು ತಲೆಕೆರೆದುಕೊಳ್ಳಬೇಕಿಲ್ಲ. ನಾವು ಹೇಳುತ್ತಿರುವುದು ಅವರ ‘ತನು ವೆಡ್ಸ್ ಮನು’ ಸಿನಿಮಾ ವಿಷಯ. ಮಾಧವನ್ ಹಾಗೂ ಕಂಗನಾ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿತ್ತು. ಆಗ ಇವರಿಬ್ಬರ ಮಧ್ಯೆ ಎಲ್ಲವೂ ಸರಿ ಇತ್ತು. ಆದರೆ ಈಗ ಬಿರುಕು ಉಂಟಾದಂತೆ ಕಂಡು ಬರುತ್ತಿದೆ. ಅದಕ್ಕೆ ಸಾಕ್ಷಿ ‘ನಾನು ಕಂಗನಾ ಜೊತೆ ನಟಿಸುವುದಿಲ್ಲ’ ಎಂದು ಮಾಧವನ್ ಮುಖಕ್ಕೆ ಹೊಡೆದಂತೆ ಹೇಳಿದ್ದು. ರಾಕಾ ರಾವ್ ಹಾಗೂ ವಿನಯ್ ಸಪ್ರೂ ಅವರ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಕ್ಕೆ ಸನ್ನಿ ಡಿಯೋಲ್, ಕಂಗನಾ ಹಾಗೂ ಮಾಧವನ್ ಎಂದು ಆಯ್ಕೆಯಾಗಿತ್ತು. ಆದರೆ, ಈಗ ಮಾಧವನ್ ನೀಡಿರುವ ಹೇಳಿಕೆ ಎಲ್ಲರಿಗೂ ಶಾಕ್ ತಂದಿದೆ. ಮಾಧವನ್ ಈಗ ಆ ಚಿತ್ರದಲ್ಲಿ ನಟಿಸಲು ಒಪ್ಪುತ್ತಿಲ್ಲ. ಅದಕ್ಕೆ ಕಾರಣ ಕಂಗನಾ. ಆಕೆಯಿಂದ ಮಾಧವನ್ಗೆ ಏನೋ ಬೇಸರವಾಗಿದೆ. ಸೋ, ನಾನು ಹೊರಬರುತ್ತೇನೆ ಎಂದಿದ್ದಾನೆ. ಹೌದು, ಕಂಗನಾ ಈಗ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಹಾಟ್ ಬೆಡಗಿ. ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ನಟರ ಟ್ರೆಂಡ್ ಶಿಪ್ ಈಗ ಕಂಗನಾಳಿಗಿದೆ. ಇದರಿಂದ ಆಕೆ ಸಿಕ್ಕಾಪಟ್ಟೆ ಮಾಕು ತೋರಿಸುತ್ತಿದ್ದಾಳೆಂಬುದು ಕೆಲವರ ಅಭಿಪ್ರಾಯ.

No comments:

Post a Comment