Wednesday, February 5, 2014
ಸುಮನ್ ಗೆ ಬಾಲಿವುಡ್ ಟಿಕೆಟ್
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್‌ನಲ್ಲಿ ‘ಗಬ್ಬರ್’ಅಬ್ಬರಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗುತ್ತಿದೆ. ಈಗಾಗಲೇ ಮೂರು ಭಾಷೆಯಲ್ಲಿ ಭರ್ಜರಿಯಾಗಿ ಖಾತೆ ತೆರೆದ ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಕ್ರಿಶ್ ಬಾಲಿವುಡ್ ಅಂಗಳದಲ್ಲಿ ತಂದು ಕೂರಿಸಿದ್ದಾರೆ. ಅಂದಹಾಗೆ ಯಾವುದು ಈ ಚಿತ್ರ ಎನ್ನುವ ಡೌಟ್ ಬಂದರೆ ೨೦೦೨ರಲ್ಲಿ ತಮಿಳಿನಲ್ಲಿ ವಿಜಯಕಾಂತ್ ನಟಿಸಿದ ‘ರಾಮಣ್ಣ’ ಚಿತ್ರವೇ ಹಿಂದಿಯಲ್ಲಿ ಬರುತ್ತಿರುವ ‘ಗಬ್ಬರ್’ಎನ್ನುವುದು ಮಾಹಿತಿ. ಈ ಚಿತ್ರದ ಮೂಲಕ ಪಂಚಭಾಷೆ ತಾರೆ ಸುಮನ್ ಬಾಲಿವುಡ್ ಅಂಗಳಕ್ಕೆ ಅಧಿಕೃತವಾಗಿ ಟಿಕೆಟ್ ಪಡೆದುಕೊಂಡಿದ್ದಾರೆ.
ಈ ಹಿಂದೆ ಈ ಚಿತ್ರಕ್ಕೆ ಖ್ಯಾತ ನಟ ಪ್ರಕಾಶ್ ರಾಜ್ ಹಾಗೂ ಸೋನು ಸೂದ್ ಆಯ್ಕೆಯಾಗಿದ್ದರು. ತೆಲುಗಿನ ಚಿತ್ರವೊಂದನ್ನು ನೋಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸುಮನ್ ತಮ್ಮ ಚಿತ್ರದಲ್ಲಿ ನಟಿಸಬೇಕು ಎಂದು ಪಟ್ಟು ಹಿಡಿದರು. ಇದೇ ಕಾರಣದಿಂದ ಸುಮನ್ ‘ಗಬ್ಬರ್’ ಚಿತ್ರ ತಂಡದಲ್ಲಿ ಸೇರುವ ಚಾನ್ಸ್ ಗಿಟ್ಟಿಸಿಕೊಂಡರು ಎನ್ನುತ್ತದೆ ಚಿತ್ರದ ತಂಡ. ‘ಗಬ್ಬರ್’ ಚಿತ್ರದಲ್ಲಿ ಅಕ್ಷಯ್ ಕುಮಾರ್, ಶ್ರುತಿಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸುಮನ್ ಚಿತ್ರದಲ್ಲಿ ನೆಗೆಟೀವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಕರೀನಾ ಕಪೂರ್ ಚಿತ್ರದ ಮುಖ್ಯ ಭಾಗವೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಸಿಗುತ್ತಾರೆ.
೭೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಗಬ್ಬರ್’ ಚಿತ್ರ ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಮಾಡಬೇಕಾಗಿತ್ತು. ಆದರೆ ಮುರುಗದಾಸ್ ತನ್ನದೇ ಚಿತ್ರವೊಂದರಲ್ಲಿ ಬ್ಯುಸಿಯಾಗಿರುವ ಕಾರಣ ತೆಲುಗಿನ ನಿರ್ದೇಶಕ ಕ್ರಿಶ್ ಹೆಗಲಿಗೆ ಜವಾಬ್ದಾರಿ ಬಂದು ಬಿದ್ದಿದೆ. ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಣ ಹಾಕುವ ಕೆಲಸ ಹೊತ್ತುಕೊಂಡಿದ್ದಾರೆ.
ನಟ ಸುಮನ್ ‘ಗಬ್ಬರ್’ ಕುರಿತು ಹೇಳುವುದು ಹೀಗೆ: ಗಬ್ಬರ್ ಚಿತ್ರದಲ್ಲಿ ಒಳ್ಳೆಯ ಪಾತ್ರ. ಮುಖ್ಯ ಪಾತ್ರದ ಜತೆಯಲ್ಲಿಯೇ ನನ್ನ ಪಾತ್ರ ಸಾಗುತ್ತದೆ. ನಿರ್ದೇಶಕ ಕ್ರಿಶ್ ಜತೆಗೆ ಈ ಹಿಂದೆ ತೆಲುಗಿನ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದೆ. ನನ್ನ ಗೆಳೆಯನ ವಿವಾಹದ ದಿನವೇ ನನಗೆ ಈ ಅವಕಾಶ ಬಂದಿರುವುದು ನನಗೆ ಅತೀವ ಸಂತೋಷವಾಗಿದೆ.
ಅಂದಹಾಗೆ ನಟ ಸುಮನ್ ಬಾಲಿವುಡ್ ಚಿತ್ರದ ಜತೆ ತೆಲುಗಿನ ಬಹುಕೋಟಿ ವೆಚ್ಚದ ‘ರುದ್ರಮ್ಮ ದೇವಿ’, ನಟ ಬಾಲಕೃಷ್ಣ ಜತೆಗೆ ‘ಲೆಜೇಂಡ್’ ಹಾಗೂ ನಟ ನಾಗಚೈತನ್ಯ ಜತೆಯಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಮಿಳು ಹಾಗೂ ಕನ್ನಡ ಚಿತ್ರಕ್ಕೆ ಸುಮನ್ ಬುಕ್ ಆಗಿದ್ದಾರೆ. ಟೋಟಲಿ ಸುಮನ್ ಪಾಲಿಗೆ ಈ ವರ್ಷ ವರವಾಗುವ ಸಾಧ್ಯತೆಗಳೇ ಜಾಸ್ತಿ.
Subscribe to:
Post Comments (Atom)
No comments:
Post a Comment