Saturday, February 15, 2014
ಪ್ರಿಯಾದರ್ಶನ್ ಬದುಕಿನಲ್ಲಿ ಬಿರುಗಾಳಿ !
* ಸ್ಟೀವನ್ ರೇಗೊ, ದಾರಂದಕುಕ್ಕು
ಇದು ಪಕ್ಕಾ ಪ್ರೇಮಿಗಳಿಬ್ಬರ ಮಾತು. ಯಾಕೋ ಗೊತ್ತಿಲ್ಲ ೨೪ ವರ್ಷದ ಸುಮಧುರ ದಾಂಪತ್ಯ ಗೀತೆಯೇ ಈಗ ಮುಗಿದು ಹೋಗುವ ಹಂತಕ್ಕೆ ಬಂದು ತಲುಪಿದೆಯಾ ಎನ್ನುವ ಸಂದೇಹ ಮೂಡಿಬಂದಿದೆ. ಹೌದು ಇದು ಖ್ಯಾತ ನಿರ್ದೇಶಕ ಪ್ರಿಯಾದರ್ಶನ್ ಹಾಗೂ ಅವರ ಪತ್ನಿ ನಟಿ ಲಿಜಿ ಅವರ ಖಾಸ್‌ಬಾತ್.
ಆದರೆ ಮನೆಯೊಳಗೆ ಇದ್ದ ಈ ಮಾತು ಈಗ ಹೊರ ಪ್ರಪಂಚದಲ್ಲಿ ತೇಲಾಡುತ್ತಿದೆ. ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದು ಮುಟ್ಟಿದ್ದಾರೆ ಎನ್ನುವ ಮಾತು ಮಲಯಾಳಂ ಚಿತ್ರರಂಗದ ಗಲ್ಲಿಯಿಂದ ಹರಿದುಬಂದಿದೆ.
ಪ್ರೇಮಿಗಳ ದಿನದಂದು ಈ ಇಬ್ಬರು ಜತೆಯಾಗಿದ್ದರು.
ಆದರೆ ಇದೇ ಪ್ರೇಮಿಗಳ ದಿನದಂದು ಈ ಇಬ್ಬರು ಬೇರೆಯಾಗುವ ವಿಚಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನುವ ಮಾತು ಬಂದಿದೆ. ಈಗಾಗಲೇ ನಟಿ ಲಿಜಿ ಕಾನೂನು ಮೆಟ್ಟಿಲು ಏರಿಕೊಂಡು ಡೈವೋರ್ಸ್‌ಗೆ ಅರ್ಜಿ ಗುಜರಾಯಿಸಿದ್ದಾರೆ. ಮತ್ತೊಂದೆಡೆ ಪ್ರಿಯಾದರ್ಶನ್ ಕೂಡ ಮಾಧ್ಯಮಗಳಿಂದ ಕಣ್ಣು ತಪ್ಪಿಸಿಕೊಂಡು ಓಡಾಟ ಆರಂಭಿಸಿದ್ದಾರೆ.
ನಟಿ ಲಿಜಿ ಕೂಡ ಮಾಧ್ಯಮದ ಮುಂದೆ ಬಂದು ‘ದಯವಿಟ್ಟು ಇದೊಂದು ಕೌಟುಂಬಿಕ ವಿಚಾರ ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ’ ಎಂದು ಹೇಳಿಕೊಂಡು ಮರೆಯಾಗಿದ್ದಾರೆ. ಮತ್ತೊಂದೆಡೆ ಕೋರ್ಟ್ ಕಟ್ಟಳೆಯಲ್ಲಿ ಇಬ್ಬರಿಗೂ ಬುಲಾವ್ ಬಂದಿದೆ. ಈ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೆಳೆದ ಇಬ್ಬರು ಪ್ರೇಮಿಗಳು ದೂರವಾಗುವ ಕಾಲ ಬಂದಿದೆ ಎನ್ನಲಾಗುತ್ತಿದೆ.
ಪ್ರಿಯಾ ಬದುಕಿನಲ್ಲಿ ಲಿಜಿಯಾಟ:
೧೯೮೪ರಲ್ಲಿ ಮಲಯಾಳಂನ ‘ಅಲಾರಿಯಂ’ ಚಿತ್ರವೊಂದರಿಂದ ಹೊರ ಬಂದ ನಟಿ ಲಿಜಿ ತಿರುವನಂತಪುರದಲ್ಲಿ ಚಿತ್ರವೊಂದರ ಸೆಟ್‌ನಲ್ಲಿ ಪ್ರಿಯಾದರ್ಶನ್‌ಗೆ ಭೇಟಿಯಾಗುತ್ತಾರೆ. ಈ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಇಲ್ಲಿಂದ ಇಬ್ಬರ ಸಿನಿ ಬದುಕು ಕೂಡ ಆರಂಭವಾಗುತ್ತದೆ. ನಿರ್ದೇಶಕ ಪ್ರಿಯಾದರ್ಶನ್ ನಿರ್ದೇಶನ ಮಾಡಿದ ೨೨ ಚಿತ್ರಗಳಲ್ಲಿ ಲಿಜಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ೧೯೯೦ರಲ್ಲಿ ಇಬ್ಬರು ವಿವಾಹ ಬಂಧನದಲ್ಲಿ ಬಂಽಯಾಗುತ್ತಾರೆ.
ಈ ಬಳಿಕ ಲಿಜಿ ತನ್ನ ಸಿನಿಮಾ ಬದುಕಿನ ಹೆಸರನ್ನು ಲಕ್ಷ್ಮಿ ಎಂದು ಬದಲಾಯಿಸಿಕೊಂಡರು. ಇಬ್ಬರಿಗೆ ಕಲ್ಯಾಣಿ ಹಾಗೂ ಸಿದ್ದಾರ್ಥ್ ಎನ್ನುವ ಮಕ್ಕಳಿದ್ದಾರೆ. ಇಬ್ಬರು ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿಯೇ ನೆಲೆ ನಿಂತಿದ್ದಾರೆ. ಪ್ರಿಯಾ ಬದುಕಿನಲ್ಲಿ ಲಿಜಿ ಬಹಳ ಮುಖ್ಯವಾದ ಪಾತ್ರವಹಿಸಿದ್ದಾರೆ. ಎರಡು ಕಂಪನಿಗಳ ಮಾಲೀಕರಾಗಿರುವ ಲಿಜಿ ಸಿಸಿಎಲ್‌ನಲ್ಲೂ ತಮ್ಮ ಆಸ್ತಿತ್ವವನ್ನು ಇಟ್ಟುಕೊಂಡಿದ್ದರು.
ಈ ಎಲ್ಲವೂಗಳ ನಡುವೆ ಇಬ್ಬರು ಬೇರೆಯಾಗಲು ಇರುವ ಕಾರಣ ಏನೂ ಎನ್ನೋದು ಇಬ್ಬರು ಎಲ್ಲಿಯೂ ಹೇಳಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಆದರೆ ಚಿತ್ರರಂಗದ ಮಾಹಿತಿಯ ಪ್ರಕಾರ ನಾಯಕಿ ನಟಿಯೊಬ್ಬಳು ಇಬ್ಬರ ನಡುವೆ ವಿರಸ ಮೂಡಲು ಕಾರಣ ಎನ್ನಲಾಗುತ್ತಿದೆ. ನಿಜಕ್ಕೂ ಇಬ್ಬರ ನಡುವೆ ನಡೆದದ್ದು ಏನೂ ಎನ್ನೋದು ಮುಂಬರುವ ದಿನಗಳೇ ಹೇಳಬೇಕು.
Subscribe to:
Post Comments (Atom)
No comments:
Post a Comment