Friday, February 21, 2014
ಬಾಹುಬಲಿ ಪ್ರಭಾಸ್ ಬಾಡಿ!
* ಸ್ಟೀವನ್ ರೇಗೊ, ದಾರಂದಕುಕ್ಕು
ಟಾಲಿವುಡ್ ಸಿನಿಮಾ ಜಗತ್ತು ಈಗ ಒಂದೇ ಮಾತಿಗೆ ಇಳಿದಿದೆ. ಕಾರಣ ಇಷ್ಟೇ ‘ಬಾಹುಬಲಿ’ ಚಿತ್ರದ ಮೇಕಿಂಗ್ ಮಾತು ಒಂದೆಡೆ ಹರಿದಾಡುತ್ತಿದ್ದಾರೆ. ಮತ್ತೊಂದೆಡೆ ಈ ಚಿತ್ರದ ಬಿಡುಗಡೆ ಯಾವಾಗ ಎನ್ನುವ ನಿರೀಕ್ಷೆಗಳು ಮೂಡಿಬರುತ್ತಿದೆ. ಅಂದಹಾಗೆ ಟಾಲಿವುಡ್ ಸಿನಿಮಾ ಜಗತ್ತಿನಲ್ಲಿ ಇದೊಂದು ಬಹುಕೋಟಿ ವೆಚ್ಚದ ಪ್ರಾಜೆಕ್ಟ್ . ಬರೋಬರಿ ೧೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಬರುತ್ತಿರುವ ‘ಬಾಹುಬಲಿ’ಯಲ್ಲಿ ಈಗ ಪ್ರಭಾಸ್ ಬಾಡಿಯದ್ದೇ ಮಾತು.
ಅಂದಹಾಗೆ ೨೦ ಕೆ.ಜಿ. ಇದು ತೆಲುಗು ನಟ ಪ್ರಭಾಸ್ ‘ಬಾಹುಬಲಿ’ ಚಿತ್ರಕ್ಕಾಗಿ ಬೆಳೆಸಿಕೊಂಡ ದೇಹಸಿರಿ. ಬಾಹುಬಲಿಯ ಲೀಡ್ ರೋಲ್‌ನಲ್ಲಿರುವ ಪ್ರಭಾಸ್ ಚಿತ್ರದ ಆರಂಭದಿಂದಲೂ ದೇಹಸಿರಿಯ ಬೆಳವಣಿಗೆಯ ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಇಂದಿನವರೆಗೂ ಟಾಲಿವುಡ್‌ನ ಯಾವುದೇ ನಾಯಕ ನಟರು ಈ ಪಾಟಿ ದೇಹಸಿರಿಯ ಕಡೆ ಗಮನಕೊಟ್ಟಿಲ್ಲ ಎನ್ನುವುದು ಹರಿದಾಡುತ್ತಿರುವ ಮಾತು.
‘ಬಾಹುಬಲಿ’ ಚಿತ್ರಕ್ಕಾಗಿ ಪ್ರಭಾಸ್ ಕಳೆದ ಆರು ತಿಂಗಳುಗಳಿಂದ ವರ್ಕ್ ಔಟ್ ಮಾಡುತ್ತಿದ್ದರು. ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ನಟ ಪ್ರಭಾಸ್ ಭೇಟಿಕೊಟ್ಟಾಗ ಅಲ್ಲಿ ‘ಡಬ್ಲ್ಯೂಡಬ್ಲ್ಯೂಎಫ್’ನ ಕಾರ‍್ಯಕ್ರಮವೊಂದಕ್ಕೆ ಹೋಗಿದ್ದರು. ಯಾವ ರೀತಿಯಲ್ಲಿ ಈ ಪಟುಗಳು ಹೊಡೆದಾಡಿಕೊಳ್ಳುತ್ತಾರೆ.
ಅದರಲ್ಲೂ ಈ ಪಟುಗಳು ಮಾಡುವ ವರ್ಕ್ ಔಟ್ ಎಲ್ಲವೂ ಕಲಿತುಕೊಂಡು ಪ್ರಭಾಸ್ ಭಾರತಕ್ಕೆ ಬಂದರು. ಅಲ್ಲಿಂದ ನಿರಂತರವಾಗಿ ಪ್ರಭಾಸ್ ಅವರ ವರ್ಕ್ ಔಟ್‌ಗಳನ್ನು ತಮ್ಮ ಜಿಮ್‌ನಲ್ಲಿ ಮಾಡಲು ಆರಂಭಿಸಿದರು ಎನ್ನುವುದು ನಟ ಪ್ರಭಾಸ್‌ನ ಆಪ್ತ ಮೂಲಗಳು ಹೇಳುತ್ತಿದೆ.
ಬಾಡಿಗಾಗಿ ಮನೆ ಬದಲಾಯಿಸಿದ ಪ್ರಭಾಸ್:
ನಟ ಪ್ರಭಾಸ್ ಈ ಹಿಂದೆ ಇದ್ದ ಮನೆಯನ್ನು ಈಗ ಬದಲಾಯಿಸಿಕೊಂಡಿದ್ದಾರೆ. ೧.೫ ಕೋಟಿ ರೂಪಾಯಿ ವೆಚ್ಚದ ನೂತನ ಮನೆಯೊಂದಕ್ಕೆ ಶಿಫ್ಟ್ ಆಗಿರುವ ಪ್ರಭಾಸ್ ಮನೆ ಬದಲಾವಣೆಯ ಹಿಂದೆ ಇರುವ ರಹಸ್ಯ ಇಷ್ಟೇ.. ತನ್ನ ಹಿಂದಿನ ಮನೆಯಲ್ಲಿ ಬೇಕಾದ ರೀತಿಯ ಜಿಮ್ ವ್ಯವಸ್ಥೆ ಇರಲಿಲ್ಲ.
ಅದಕ್ಕಾಗಿ ಬರೀ ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ಕಾರಣಕ್ಕೆ ಮನೆ ಬದಲಾಯಿಸಿಕೊಂಡಿದ್ದಾರೆ. ಬರೀ ಮನೆ ಬದಲಾವಣೆಯ ಜತೆಗೆ ಹೊಸದಾದ ಜಿಮ್‌ವೊಂದನ್ನು ಕಟ್ಟಿ ಬೆಳೆಸಿದ್ದಾರೆ ಎನ್ನುವ ಮಾಹಿತಿ ಕೂಡ ಹೊರಬಂದಿದೆ. ಈಗಾಗಲೇ ಟಾಲಿವುಡ್‌ನ ನಟ ಮಹೇಶ್ ಬಾಬು ಹಾಗೂ ಬಾಲಿವುಡ್ ನಟ ಹೃತಿಕ್ ರೋಷನ್ ಭಾರತೀಯ ಫಿಟ್ನ್‌ನೆಸ್ ಟ್ರೈನರ್ ಅನ್ನು ನೇಮಕ ಮಾಡಿಕೊಂಡಿರುವ ವಿಷ್ಯಾ ಎಲ್ಲರಿಗೂ ಗೊತ್ತು. ಆದರೆ ಪ್ರಭಾಸ್ ಮಾತ್ರ ಭಾರತೀಯರ‍್ನನು ಬಿಟ್ಟು ವಿದೇಶಿ ಟ್ರೈನರ್ ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ.
ದಿನದ ಆರು ಗಂಟೆಗಳ ಕಾಲ ಜಿಮ್‌ನಲ್ಲಿರುವ ಪ್ರಭಾಸ್ ದಿನವೊಂದಕ್ಕೆ ೪೦ ಅರೆಬೆಂದ ಮೊಟ್ಟೆಗಳನ್ನು ತಿನ್ನುತ್ತಾ ವರ್ಕ್ ಔಟ್ ಮಾಡುತ್ತಿದ್ದಾರೆ. ಇದರ ಜತೆಗೆ ಊಟದಲ್ಲೂ ಸಾಕಷ್ಟು ಕಾಳಜಿ ಹೊತ್ತುಕೊಂಡಿರುವ ಪ್ರಭಾಸ್ ಬಾಹುಬಲಿ ಚಿತ್ರವೊಂದಕ್ಕೆ ಮಾಡುತ್ತಿರುವ ವರ್ಕ್ ಔಟ್‌ಗಳಂತೂ ನಿಜಕ್ಕೂ ಚಿತ್ರದ ಕುರಿತು ಪ್ರಭಾಸ್ ಹೊತ್ತುಕೊಂಡಿರುವ ಕಾಳಜಿ ಅವರಿಗೆ ಬರುತ್ತದೆ.
Subscribe to:
Post Comments (Atom)
No comments:
Post a Comment