
Tuesday, February 11, 2014
ಕೋಸ್ಟಲ್‌ವುಡ್‌ನಲ್ಲಿ ‘ಹುಲಿ’ ಓಡಾಟ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾದ ಹಿಸ್ಟರಿ ಪುಟದಲ್ಲಿ ಇದು ಮೊದಲ ಪ್ರಯತ್ನ ಎನ್ನುವುದು ಸಿನಿಮಾ ಗಲ್ಲಿಯಲ್ಲಿ ಓಡಾಡುತ್ತಿರುವ ಪ್ರತಿಯೊಬ್ಬರು ಹೇಳುವ ಮಾತು. ಯಾಕ್ ಅಂತೀರಾ ‘ಹುಲಿ’ಯ ಕತೆಯನ್ನೇ ಇಟ್ಟುಕೊಂಡು ತುಳುವಿನಲ್ಲಿ ಚಿತ್ರವೊಂದು ಹೊರಬರುತ್ತಿದೆ. ಕೋಸ್ಟಲ್‌ವುಡ್ ಸಿನಿಮಾ ಫೀಲ್ಡ್‌ನಲ್ಲಿ ಇಷ್ಟರ ವರೆಗೆ ಬರೀ ಪ್ರೇಮಕತೆ, ಕೌಟುಂಬಿಕ ವಿಚಾರ ಹಾಗೂ ನಾಟಕಗಳ ಕತೆಯನ್ನು ಮೂಲವಾಗಿಟ್ಟುಕೊಂಡು ಚಿತ್ರಗಳು ಹೊರ ಬರುತ್ತಿತ್ತು. ಆದರೆ ಕೋಸ್ಟಲ್ ವುಡ್‌ನಲ್ಲಿ ‘ರೌಡಿಸಂ’ಗೆ ಮುನ್ನುಡಿ ಬರೆದ ಚಿತ್ರವೊಂದು ತೆರೆಗೆ ಬರುವುದು ಅಪರೂಪ.
ಯುವ ನಿರ್ದೇಶಕ ಭರತ್‌ಕೃಷ್ಣ ನಿರ್ದೇಶನದ‘ ಬರ್ಕೆ’ ಸಿನಿಮಾ ಎಲ್ಲವೂ ರೌಡಿಸಂ ಕಥಾ ಹಂದರವನ್ನು ಇಟ್ಟುಕೊಂಡಿರುವ ಚಿತ್ರ. ಮಂಗಳೂರಿನ ‘ಬರ್ಕೆ’ ಎನ್ನುವ ಪ್ರದೇಶ ಈಗಾಗಲೇ ಹುಲಿಗಳಿಗೆ ಖ್ಯಾತಿ ಗಳಿಸಿತ್ತು. ನವರಾತ್ರಿಯ ಸಮಯದಲ್ಲಿ‘ ಬರ್ಕೆ’ಯಲ್ಲಿ ನಾನಾ ಹುಲಿ ವೇಷಧಾರಿಗಳು ತಂಡ ಕಟ್ಟಿಕೊಂಡು ಕರಾವಳಿಯ ಸುತ್ತಮುತ್ತ ಹುಲಿ ಕುಣಿತ ಮಾಮಾಲಿಯಾಗಿತ್ತು.
ಇದೇ ಒಂದೇ ಪಾಯಿಂಟ್ ಇಟ್ಟುಕೊಂಡು ಭರತ್‌ಕೃಷ್ಣ ಹುಲಿಗಳ ಜತೆಯಲ್ಲಿ ಮಂಗಳೂರು ಭೂಗತ ಲೋಕವನ್ನು ಕೂಡ ಟಚ್ ಮಾಡಿದ್ದಾರೆ. ಟೋಟಲಿ ಇಡೀ ಚಿತ್ರದಲ್ಲಿ ಯುವಜನತೆ ಯಾವ ರೀತಿಯಲ್ಲಿ ಭೂಗತ ಲೋಕವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದರ ಜತೆಯಲ್ಲಿ ಚಿತ್ರದ ತುಂಬಾ ಸ್ಪೆಸ್ಪನ್ಸ್ ಹಾಗೂ ಲೋಕಲ್ ಭಾಷೆಯಲ್ಲಿ ಮುದ ನೀಡುವ ಡೈಲಾಗ್‌ಗಳು ಈ ಚಿತ್ರವನ್ನು ಮತ್ತಷ್ಟೂ ಗರಿಬಿಚ್ಚುವಂತೆ ಮಾಡಿದೆ.
ಕರಾವಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಚಿತ್ರೀಕರಿಸಲಾಗಿರುವ ‘ಬರ್ಕೆ’ ಫೆ.೧೪ರಂದು ಕರಾವಳಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಬರ್ಕೆ ಚಿತ್ರದಲ್ಲಿ ಕರಾವಳಿಯ ಹೊಸ ಪ್ರತಿಭೆಗಳಿಗೆ ಮೊದಲ ಮಣೆ ನೀಡಲಾಗಿದೆ. ಈಗಾಗಲೇ ಹತ್ತಾರು ಡಾಕ್ಯುಮೆಂಟರಿಗಳಲ್ಲಿ ಹೆಸರು ಉಳಿಸಿಕೊಂಡ ಭರತ್‌ಕೃಷ್ಣ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಬರುತ್ತಿದ್ದಾರೆ.
ಕೋಟ್ ಕಾರ್ನರ್:
‘ ಇದೊಂದು ಹೊಸ ಪ್ರಯತ್ನ. ವಿನೂತನ ರೀತಿಯ ಸಂಭಾಷಣೆ ಜತೆಗೆ ಡೈಲಾಗ್ ಡೆಲಿವರಿ ಚಿತ್ರದ ಮುಖ್ಯ ಪ್ಲಸ್ ಪಾಯಿಂಟ್ ಎನ್ನಬಹುದು. ಅದಕ್ಕೂ ಮುಖ್ಯವಾಗಿ ಕರಾವಳಿಯ ಸಿನಿಮಾ ಇತಿಹಾಸದಲ್ಲಿ ಯಾರು ಕೂಡ ಮಂಗಳೂರು ಭೂಗತ ಲೋಕವನ್ನು ಟಚ್ ಮಾಡಿರಲಿಲ್ಲ. ಈ ಚಿತ್ರದ ಮೂಲಕ ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಹುಲಿಗಳ ಕುರಿತು ಹೇಳಲಾಗಿದೆ. ಅದಕ್ಕೂ ಮುಖ್ಯವಾಗಿ ರೌಡಿಸಂನ ಕರಾಳ ಮುಖಗಳು ಚಿತ್ರದ ಮೂಲಕ ಅನಾವರಣಗೊಳ್ಳಲಿದೆ.’
- ಭರತ್ ಕೃಷ್ಣ, ಚಿತ್ರದ ನಿರ್ದೇಶಕರು.

Subscribe to:
Post Comments (Atom)
No comments:
Post a Comment