Wednesday, February 26, 2014
೫೦ ಸಾವಿರ ಪದಗಳ ತ್ರಿಭಾಷಾ ಶಬ್ದಕೋಶ ಬಂತು !
* ಸ್ಟೀವನ್ ರೇಗೊ, ದಾರಂದಕುಕ್ಕು
ಕೊಂಕಣಿ ಭಾಷಾ ಲೋಕದಲ್ಲಿ ಇದೊಂದು ವಿಶಿಷ್ಟ ಪ್ರಯೋಗ. ಇಂಗ್ಲೀಷ್-ಕನ್ನಡ-ಕೊಂಕಣಿ ಭಾಷಾ ಸಂವಹನ ಸಂಪರ್ಕದಲ್ಲಿ ದೂರಗಾಮಿ ಕ್ರಾಂತಿಯ ನಿರೀಕ್ಷೆ. ಮೂರು ಭಾಷೆಗಳ ಶಬ್ದಕೋಶವೊಂದು ಸಿದ್ಧವಾಗಿದೆ. ಫೆ.೨೬ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣ್‌ನಲ್ಲಿ ಇಂಗ್ಲೀಷ್-ಕನ್ನಡ-ಕೊಂಕಣಿ ಭಾಷೆಯ ಶಬ್ದಕೋಶವೊಂದು ಬಿಡುಗಡೆಯ ಭಾಗ್ಯ ಕಾಣಲಿದೆ.
ನಾಡಿನ ಖ್ಯಾತ ವಿದ್ವಾಂಸ ಹಾಗೂ ಪ್ರವಚನಕಾರ ಫಾ. ಬೇಸಿಲ್ ವಾಸ್ ಹಾಗೂ ಪ್ರಾಧ್ಯಾಪಕ ಸ್ಟೀವನ್ ಕ್ವಾಡ್ರಸ್ ಪೆರ‍್ಮುದೆ ಕಳೆದ ಹಲವು ವರ್ಷಗಳಿಂದ ಸಿದ್ದಪಡಿಸುತ್ತಿದ್ದ ಈ ಅರ್ಥಕೋಶ ಸುಮಾರು ೫೦ ಸಾವಿರ ಇಂಗ್ಲೀಷ್ ಶಬ್ದಗಳಿಗೆ ಕನ್ನಡ ಹಾಗೂ ಕೊಂಕಣಿಯಲ್ಲಿ ಹಲವಾರು ಸಮಾನಾರ್ಥಕ ಹಾಗೂ ಅರ್ಥಸಾಮ್ಯ ಪದಗಳನ್ನು ನೀಡಲಿದೆ. ಸುಮಾರು ೧೫೦೦ ಪುಟಗಳಲ್ಲಿ ಈ ಪುಸ್ತಕ ಬರಲಿದೆ.
ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ದೊಡ್ಡ ಮಟ್ಟಿನ ಕೊಡುಕೊಳು ನಡೆದು ಬಂದಿಲ್ಲ. ಇದಕ್ಕೆ ಕೊಂಕಣಿ ಹಾಗೂ ಕನ್ನಡ ಭಾಷೆಗಳೆರಡನ್ನು ಏಕ ಕಾಲದಲ್ಲಿ ತಿಳಿಯಲು ಪೂರಕವಾಗುವ ಅರ್ಥಕೋಶ ಇನ್ನೂ ಬಾರದಿರುವುದು ಒಂದು ಕಾರಣವಾಗಿರಬಹುದು ಎನ್ನುವುದು ಶಬ್ದಕೋಶದ ರೂವಾರಿ ಪ್ರೊ. ಸ್ಟೀವನ್ ಕ್ವಾಡ್ರಸ್ ಅವರ ಮಾತು.
ಕೊಂಕಣಿಯಲ್ಲಿ ಶಬ್ದಕೋಶದ ಜರ್ನಿ: ಕನ್ನಡ ಭಾಷೆಯಲ್ಲಿ ಆಧುನಿಕ ಅರ್ಥಕೋಶ ಪರಂಪರೆ ರೆವರೆಂಡ್ ಫರ್ಡಿನಂಡ್ ಕಿಟ್ಟಲರಿಂದ ಆರಂಭವಾಗಿ ದೊಡ್ಡ ಮಟ್ಟಿಗೆ ಬೆಳೆದಿದೆ. ಆದರೆ ಕೊಂಕಣಿಯ ಮಟ್ಟಿಗೆ ಅರ್ಥಕೋಶಗಳು ತೃಪ್ತಿಕರ ಮಟ್ಟಿನಲ್ಲಿ ಬೆಳವಣಿಗೆ ಹೊಂದಿಲ್ಲ. ಕೊಂಕಣಿಯನ್ನು ಕನ್ನಡ, ನಾಗರಿ, ರೋಮಿ, ಮಲಯಾಳಿ ಹಾಗೂ ಅರಬ್ಬಿಕ್ ಲಿಪಿಗಳಲ್ಲಿ ಬರೆಯಲಾಗುತ್ತಿದೆ. ಕನ್ನಡ ಲಿಪಿ ಕೊಂಕಣಿ ಸಾಹಿತ್ಯ ಕಳೆದ ೧೫೦ ವರ್ಷಗಳಿಂದ ದೊಡ್ಡ ಮಟ್ಟಿನಲ್ಲಿ ಬೆಳೆದು ಬಂದಿದೆ. ಗೋವಾದಲ್ಲಿ ಹಲವಾರು ಕೊಂಕಣಿ ಅರ್ಥಕೋಶಗಳು ಬೆಳೆದಿದ್ದರೂ ಕರ್ನಾಟಕದಲ್ಲಿ ಈಗಾಗಲೇ ಮೊ. ಆಂಜೆಲೋ ಮಾಫೆ, ಮೊ. ಸಿಲ್ವೆಸ್ಟರ್ ಮಿನೇಜಸ್, ಆಂತೋನಿ ಸಲ್ಡಾನ್ಹಾ, ಸ್ವಾಮಿ ವಲೇರಿಯನ್ ಫೆರ‍್ನಾಂಡಿಸ್, ಮಾಧವ ಪೈ ಹಾಗೂ ಸ್ಟೀವನ್ ಕ್ವಾಡ್ರಸ್ ಅವರ ಆರು ಕೊಂಕಣಿ ಅರ್ಥಕೋಶಗಳು ಮಾತ್ರ ಪ್ರಕಟಗೊಂಡಿವೆ.
ಭರದ ಸಿದ್ಧತೆ: ಮಂಗಳೂರಿನ ಪಥದರ್ಶಿನಿ ಸೇವಾ ಟ್ರಸ್ಟ್ ಒಂದು ನೋಂದಾಯಿತ ಸಾರ್ವಜನಿಕ ಸೇವಾ ಸಂಘಟನೆಯಾಗಿದ್ದು, ಭಾರತ ಸರಕಾರದಿಂದ ಮಾನ್ಯತೆ ಹೊಂದಿದೆ. ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನದ ವ್ಯವಸ್ಥೆ ಮಾಡುವುದು ಇದರ ಮೂಲ ಉದ್ದೇಶವಾಗಿದ್ದು ಈಗಾಗಲೇ ‘ಮಾರ್ಗ’ ಹಾಗೂ ‘ಯಶಸ್ಸ್’ ಎಂಬ ಎರಡು ವೃತ್ತಿ ಮಾರ್ಗದರ್ಶನ ಪುಸ್ತಕಗಳನ್ನು ಈ ಟ್ರಸ್ಟ್‌ನ ವತಿಯಿಂದ ಹೊರಡಿಸಲಾಗುತ್ತಿದೆ. ಇದರ ಅಡಿಯಲ್ಲಿ ಸರಿಸುಮಾರು ೧೪ ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೊಂಕಣಿ ತ್ರಿ ಭಾಷಾ ಶಬ್ದಕೋಶವೊಂದು ಸಿದ್ಧವಾಗಿದೆ. ಕನ್ನಡ ಮಾತೃಭಾಷಿಕರು ಹಾಗೂ ಕರ್ನಾಟಕದ ಕರಾವಳಿಯಲ್ಲಿ ಹಬ್ಬಿರುವ ಕೊಂಕಣಿ ಜನರು ಪರಸ್ಪರ ಕೊಡು-ಕೊಳ್ಳು ಬೆಳೆಸಿಕೊಳ್ಳುವಲ್ಲಿ ಈ ಶಬ್ದಕೋಶ ಮಹತ್ವದ ಪಾತ್ರ ವಹಿಸಲಿದೆ. ಜಾಗತಿಕ ಮಟ್ಟದಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಇದು ದೊಡ್ಡ ಪೂರಕ ಸಾಮಗ್ರಿಯಾಗಲಿದೆ.
......
ಇಂದು ಪಥದರ್ಶಿನಿ ತ್ರಿಭಾಷಾ ಶಬ್ದಕೋಶ ಬಿಡುಗಡೆ
ಪಥದರ್ಶಿನಿ ತ್ರಿಭಾಷಾ ಅರ್ಥಕೋಶ ಫೆ.೨೬ರಂದು ಸಂಜೆ ೬-೦೦ ಗಂಟೆಗೆ ಸರಿಯಾಗಿ ಶಕ್ತಿನಗರದಲ್ಲಿನ ಕೊಂಕಣಿ ಸಂಸ್ಕೃತಿ ಮತ್ತು ಸಂಶೋಧನಾ ಕೇಂದ್ರ ಕಲಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಷಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಜೆ. ಆರ್. ಲೋಬೊ, ಕನ್ನಡದ ಖ್ಯಾತ ಭಾಷಾಶಾಸ್ತ್ರಜ್ಞ ಡಾ. ಕೆ ವಿ ನಾರಾಯಣ, ಕನ್ನಡದ ಹಿರಿಯ ಸಾಹಿತಿ ಡಾ.ನಾ. ಡಿಸೋಜ, ಕಥೆಗಾರ್ತಿ ನಾಡೋಜ ಡಾ ಸಾರಾ ಅಬೂಬಕ್ಕರ್ ಹಾಗೂ ಗೋವಾ ವಿಶ್ವವಿದ್ಯಾಲಯದ ಕೊಂಕಣಿ ವಿಭಾಗ ಮುಖ್ಯಸ್ಥರಾದ ಪ್ರೊ. ಪ್ರಿಯಾದರ್ಶಿನಿ ತಾಡ್‌ಕೊಡ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
.......
vk front page story on 26.02.2014
Tuesday, February 25, 2014
ಕುಡ್ಲದಲ್ಲಿ ಮತ್ತೆ ಬಂತು ಫ್ಯಾಶನ್ ಶೋ ಹವಾ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕುಡ್ಲದ ಫ್ಯಾಶನ್ ಮಾರುಕಟ್ಟೆ ಈಗ ಏಕ್ ದಂ ಚಿಗಿತುಕೊಂಡಿದೆ. ರಂಗೀನ್ ಬಟ್ಟೆ ಹಾಕಿಕೊಂಡು ರ‍್ಯಾಂಪ್ ಮೇಲೆ ನಡೆಯಲು ಮಂಗಳೂರಿನ ಯುವಜನತೆಗೆ ಮತ್ತೊಂದು ಅವಕಾಶ ಒದಗಿ ಬಂದಿದೆ. ಹೌದು. ರೂಪದರ್ಶಿಗಳಿಗೆ ತರಬೇತಿ ನೀಡುತ್ತಿರುವ ಮಂಗಳೂರಿನ ಏಕೈಕ ಸಂಸ್ಥೆ ಫ್ಯಾಶನ್ ಎಬಿಸಿಡಿ ತನ್ನ ಮೂರನೇ ಆವೃತ್ತಿಯ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸ್ಪರ್ಧೆಯನ್ನು ಮಾ.೨ರಂದು ಮೂಡುಬಿದಿರೆಯ ಪಂಡಿತ್ ಹೆಲ್ತ್ ರೆಸಾರ್ಟ್ ಆಂಡ್ ಸ್ಪಾದಲ್ಲಿ ನಡೆಯಲಿದೆ.
ಸದಾ ಕಾಲ ಹೊಸ ಹವಾ ಸೃಷ್ಟಿ ಮಾಡಿಕೊಂಡು ಮುನ್ನುಗ್ಗುತ್ತಿರುವ ಕುಡ್ಲದಲ್ಲಿ ಇಂತಹ ಫ್ಯಾಶನ್ ಪರೇಡ್‌ಗಳು ಯುವಜನತೆಯ ಟೇಸ್ಟ್‌ಗೆ ಲಿಂಕ್ ಆಗುತ್ತಿದೆ ಎನ್ನುವುದು ಕಳೆದ ಎರಡು ಬಾರಿ ಇಂತಹ ಸ್ಪರ್ಧೆಯನ್ನು ಆಯೋಜಿಸಿ ಗೆದ್ದು ಬಂದಿರುವ ಫ್ಯಾಶನ್ ಎಬಿಸಿಡಿಯ ಮುಖ್ಯಸ್ಥರಾದ ಅನುಪಮ ಸುವರ್ಣ ಅವರ ಮಾತು.
ಅವರು ಹೇಳುವಂತೆ ಇಂತಹ ಸ್ಪರ್ಧೆಗಳಿಂದ ಮಂಗಳೂರಿನಲ್ಲಿ ಫ್ಯಾಶನ್ ಹಬ್‌ವೊಂದು ಸೃಷ್ಟಿಯಾಗುತ್ತದೆ. ಹೊಸ ಹೊಸ ರೂಪದರ್ಶಿಗಳು ಫ್ಯಾಶನ್ ಲೋಕಕ್ಕೆ ಎಂಟ್ರಿ ಪಡೆಯುವ ಅವಕಾಶ ಇಲ್ಲಿಂದ ಲಭ್ಯವಾಗುತ್ತದೆ. ಈಗಾಗಲೇ ಫ್ಯಾಶನ್ ಎಬಿಸಿಡಿಯಿಂದ ತರಬೇತಿ ಪಡೆದುಕೊಂಡು ಹೋದವರು ಈಗ ರೂಪದರ್ಶಿಗಳಾಗಿ ರ‍್ಯಾಂಪ್ ಮೇಲೆ ಮೂಡಿ ಮಾಡುತ್ತಿದ್ದಾರೆ ಎನ್ನೋದು ಅವರ ಮಾತು.
ಫ್ಯಾಶನ್ ಏನಿದೆ ಹೊಸತು :
ಫ್ಯಾಶನ್ ಎಬಿಸಿಡಿಯ ಆಯೋಜಿತ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸ್ಪರ್ಧೆಯೇ ಒಂದು ಡಿಫರೆಂಟ್ ಕಲ್ಪನೆ. ಮಂಗಳೂರು ಮೂಲದ ಅದರಲ್ಲೂ ತುಳುನಾಡಿನಲ್ಲಿ ಹುಟ್ಟಿ ನಂತರ ದೇಶ- ವಿದೇಶದಲ್ಲಿರುವ ನಾನಾ ಸುಂದರ ಯುವಕ-ಯುವತಿಯರನ್ನು ಫ್ಯಾಶನ್ ದುನಿಯಾಕ್ಕೆ ಕರೆ ತರುವುದು ಈ ಫ್ಯಾಶನ್ ಶೋನ ಮೂಲ ಉದ್ದೇಶ.
ಈ ಸ್ಪರ್ಧೆಯ ಮೂಲಕ ಕರಾವಳಿಯ ಸಂಪ್ರದಾಯ, ಕಲಾಚಾರ ಜತೆಗೆ ಪ್ರವಾಸೋದ್ಯಮಕ್ಕೆ ವಿಶೇಷ ಮನ್ನಣೆ ಒದಗಿಸಿ ಕೊಡುವ ಪ್ರಯತ್ನ ಕೂಡ ಇಲ್ಲಿ ನಡೆಯುತ್ತದೆ. ಅದರಲ್ಲೂ ಇಲ್ಲಿ ವಿಜೇತರಾದವರಿಗೆ ದೇಶದ ಪ್ರತಿಷ್ಠಿತ ಮಿಸ್ ಸೌತ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶಾತಿ ಕೂಡ ಸಿಗಲಿದೆ. ಮಿಸ್ಟರ್ ಮಂಗಳೂರಿನಲ್ಲಿ ವಿಜೇತರಾದವರಿಗೆ ಹೊಸದಿಲ್ಲಿಯಲ್ಲಿ ನಡೆಯುವ ಮಿಸ್ಟರ್ ಇಂಡಿಯಾ ಗ್ಲೋಬಲ್‌ನಲ್ಲಿ ನೇರ ಪ್ರವೇಶ ಪಡೆಯುತ್ತಾರೆ ಎನ್ನುವುದು ಫ್ಯಾಶನ್ ಎಬಿಸಿಡಿಯ ಮುಖ್ಯಸ್ಥರ ಮಾತು. ಮಾ.೨ರಂದು ನಡೆಯಲಿರುವ ಫ್ಯಾಶನ್ ಶೋನಲ್ಲಿ ಮೂರು ಹಂತಗಳ ಸ್ಪರ್ಧೆ ಕಾಣಸಿಗಲಿದೆ.
ಫ್ಯಾಶನ್ ದುನಿಯಾಕ್ಕೆ ಲುಕ್ ತರುವ ಗೆಸ್ಟ್‌ಗಳು:
ಈ ವಿಶೇಷ ಫ್ಯಾಶನ್ ಶೋನಲ್ಲಿ ಮುಂಬಯಿ ಖ್ಯಾತ ಫರ್‌ಸೆಪ್ಟ್ ಗ್ರೂಫ್‌ನ ಮುಖ್ಯಸ್ಥ ಹರೀಂದರ್ ಸಿಂಗ್, ಲ್ಯಾಕ್ಮೆ ಫ್ಯಾಶನ್ ವೀಕ್‌ನ ನಿಕಿತಾ ಪೂಂಜಾ, ಮಿಸ್ ಸೌತ್ ಇಂಡಿಯಾದ ರೂವಾರಿ ಅಜಿತ್ ರವಿ, ದೇಶದ ಖ್ಯಾತ ಫ್ಯಾಶನ್ ಡಿಸೈನರ್ ಆನಂದ್ ಜೀ ಅವರು ಭಾಗವಹಿಸಲಿದ್ದಾರೆ. ಮಿಸ್ ಸೌತ್ ಇಂಡಿಯಾ ಫೇಮ್ ಅಭಿಷಿಕ್ತಾ ಶೆಟ್ಟಿ, ಚಿತ್ರ ನಿರ್ಮಾಪಕ ರಾಜೇಶ್ ಭಟ್, ಮಿಸ್ ಇಂಡಿಯಾ ಫೈನಲಿಸ್ಟ್ ಪ್ರಥ್ವಿ ರಾವ್ ಸೇರಿದಂತೆ ನಾನಾ ಮಂದಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
ಕೋಟ್ ಕಾರ್ನರ್:
‘ಈ ಸ್ಪರ್ಧೆಯ ಮೂಲಕ ಸೌಂದರ್ಯ ಲೋಕದ ಅನಾವರಣ ಮಾಡುವ ಕೆಲಸ ನಡೆಯುತ್ತಿದೆ. ಕರಾವಳಿ ಬರೀ ಆಚಾರ- ವಿಚಾರಗಳ ಜತೆಗೆ ಸೌಂದರ್ಯ ಸ್ಪರ್ಧೆಗಳಿಗೂ ಮನ್ನಣೆ ಸಿಗಬೇಕು’
-ಅನುಪಮ ಸುವರ್ಣ, ಮಿಸ್ ಆಂಡ್ ಮಿಸ್ಟರ್ ಮಂಗಳೂರು ಆಯೋಜಕರು .
ಕೋಟ್ ಕಾರ್ನರ್:
ಮಂಗಳೂರಿನಿಂದ ಐಶ್, ಶಿಲ್ಪಾರಂತಹ ಬೆಡಗಿಯರು ವಿಶ್ವ ಮಟ್ಟದಲ್ಲಿ ಮಿಂಚಿದ್ದಾರೆ. ಮಂಗಳೂರಿನ ಸೌಂದರ್ಯ, ಆಚಾರ- ವಿಚಾರ, ಕಲೆ ಎಲ್ಲವೂ ಇಂಟರ್‌ನ್ಯಾಷನಲ್ ಮಾರುಕಟ್ಟೆಯಲ್ಲಿ ಹೆಸರು ಮಾಡಬೇಕಾದರೆ ಇಂತಹ ಸೌಂದರ್ಯ ಸ್ಫರ್ಧೆಗಳು ನಿಜಕ್ಕೂ ಅನಿವಾರ್ಯ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ.
- ಸಂದೀಪ್ ಮಲಾನಿ, ಬಾಲಿವುಡ್ ಚಿತ್ರ ನಿರ್ದೇಶಕ.
Saturday, February 22, 2014
ಕುಡ್ಲದ ಹುಡುಗಿಗೆ ಟಾಲಿವುಡ್ ಕಾಲ್
* ಸ್ಟೀವನ್ ರೇಗೊ, ದಾರಂದಕುಕ್ಕು
ಸಿನಿಮಾ ರಂಗನೇ ಹಾಗೇ ಅದೊಂದು ರಂಗೀನ್ ದುನಿಯಾ.ಇಲ್ಲಿಗೆ ಬಂದವರು ಕ್ಲಿಕ್ ಆಗೋದು ಅವರ ಅದೃಷ್ಟದಾಟಕ್ಕೆ ಬಿಟ್ಟದ್ದು. ಆದರೆ ಕುಡ್ಲದ ಪೊಣ್ಣು(ಹುಡುಗಿ) ಪೂಜಾ ಹೆಗ್ಡೆ ಮಾತ್ರ ಡಿಫರೆಂಟ್ ಕಾರಣ ಇಷ್ಟೇ ತಮ್ಮ ಕಾಲಿವುಡ್‌ನಲ್ಲಿ ಬಂದ ಮೊದಲ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ ಹುಡುಗಿ ಏಕ್‌ದಂ ಲಗ್ಗೆ ಹಾಕಿರೋದು ಮಾತ್ರ ಟಾಲಿವುಡ್ ರಂಗದಲ್ಲಿ ಎನ್ನೋದು ವಿಶೇಷ. ಟಾಲಿವುಡ್ ಸಿನಿಮಾ ಗಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಎರಡು ಬಿಗ್ ಬಜೆಟ್ ಚಿತ್ರಗಳಿಗೆ ಪೂಜಾ ಹೆಗ್ಡೆ ನಾಯಕಿ ರೋಲ್‌ಗೆ ಸೆಲೆಕ್ಟ್ ಆಗಿ ಬಿಟ್ಟಿದ್ದಾರೆ.
ತೆಲುಗಿನ ವಿಜಯ ಕುಮಾರ್ ಕೊಂಡ ನಿರ್ದೇಶನ ಮಾಡುತ್ತಿರುವ ನಟ ನಾಗಚೈತನ್ಯ ಚಿತ್ರದಲ್ಲಿ ಪೂಜಾ ನಾಯಕಿ. ಅದೇ ರೀತಿಯಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಸೋದರ ಸಂಬಂಧಿ ವರುಣ್ ತೇಜಾ ನಾಯಕನಾಗಿರುವ ನಿರ್ದೇಶಕ ಶ್ರೀಕಾಂತ್ ಅಡಲಾ ಅವರ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ ರೋಲ್‌ಗೆ ಬುಕ್ ಆಗಿದ್ದಾರೆ. ಈ ಎರಡು ಚಿತ್ರಗಳು ಈ ವರ್ಷದ ಕೊನೆ ಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇದರ ಜತೆಯಲ್ಲಿ ಬಾಲಿವುಡ್ ಚಿತ್ರನಗರಿಯಿಂದಲೂ ಪೂಜಾಳಿಗೆ ಕಾಲ್ ಬಂದಿದೆ ಎನ್ನೋದು ಆಪ್ತ ಮೂಲವೊಂದು ಹೇಳುತ್ತಿದೆ.
೨೦೧೦ರಲ್ಲಿ ಕಾಲಿವುಡ್ ಸಿನಿಮಾ ನಗರಿಯಲ್ಲಿ ಬಿಡುಗಡೆ ಕಂಡ ‘ಮೊಗಮೋಡಿ’ಯಲ್ಲಿ ನಟ ಜೀವಾರಿಗೆ ನಾಯಕಿಯಾಗಿ ಕಾಣಿಸಿಕೊಂಡ ಪೂಜಾ ರೂಪದರ್ಶಿಯಾಗಿ ಕೂಡ ಮಿಂಚಿದವರು. ಮೂಲತಃ ಕರಾವಳಿ ಮೂಲದ ಬಂಟರ ಕುಟುಂಬದ ಹುಡುಗಿ ಪೂಜಾ ಒಳ್ಳೆಯ ಭರತ ನಾಟ್ಯ ನೃತ್ಯಪಟು. ೨೦೧೦ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾದಲ್ಲಿ ಸೆಕೆಂಡ್ ರನ್ನರ್ ಆಫ್ ಆಗಿಯೂ ಗುರುತಿಸಿಕೊಂಡ ಪೂಜಾ ಎರಡು ಮೂರು ಸೌಂದರ್ಯ ಸ್ಪರ್ಧೆಯಲ್ಲೂ ಗೆದ್ದು ಬಂದವರು.
‘ಮೊಗಮೋಡಿ’ಯಲ್ಲಿ ಬಬ್ಲಿ ಪಾತ್ರದಲ್ಲಿ ಮಿಂಚಿದ ಪೂಜಾಳಿಗೆ ಕಾಲಿವುಡ್ ಚಿತ್ರನಗರಿಗಿಂತ ಹೆಚ್ಚಾಗಿ ಟಾಲಿವುಡ್ ಸಿನಿಮಾ ಜಗತ್ತೇ ಅವಕಾಶಗಳನ್ನು ಕೊಟ್ಟುಬಿಟ್ಟಿದೆ. ಆದರೆ ಮೊದಲ ಅವಕಾಶ ನೀಡಿದ ಕಾಲಿವುಡ್ ಚಿತ್ರರಂಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಮೊದಲ ಚಿತ್ರದಲ್ಲಿ ನಟ ಜೀವಾ ಹಾಗೂ ಚಿತ್ರದ ನಿರ್ದೇಶಕರು ನೀಡಿದ ಪ್ರೋತ್ಸಾಹವಂತೂ ನನಗೆ ಮರೆಯಲು ಸಾಧ್ಯವಿಲ್ಲ ಎನ್ನುವುದು ಪೂಜಾ ಹೆಗ್ಡೆ ಮಾತು.
ಪೂಜಾ ತೆಲುಗು ಚಿತ್ರಗಳ ಕುರಿತು ಹೇಳುವ ಮಾತು ಹೀಗಿದೆ: ನನಗೆ ಬಾಲಿವುಡ್ ಸಿನಿಮಾ ಜಗತ್ತು ಕೂಡ ಬಹಳ ಇಷ್ಟ. ಆದರೆ ನಾನು ನಟಿಸುತ್ತಿರುವ ಟಾಲಿವುಡ್ ಚಿತ್ರಗಳಲ್ಲಿ ನನಗೊಂದು ಒಳ್ಳೆಯ ಪಾತ್ರಗಳಿವೆ. ಅದಕ್ಕೂ ಮುಖ್ಯವಾಗಿ ಈ ಪಾತ್ರಗಳು ನನ್ನ ನಟನೆಗೆ ಹೆಚ್ಚು ಒತ್ತು ಕೊಡುತ್ತದೆ. ಬರೀ ಗ್ಲ್ಯಾಮರ್‌ಕ್ಕಿಂತ ಹೆಚ್ಚಾಗಿ ನಟನೆಗೆ ಜಾಸ್ತಿ ಮಹತ್ವ ಕೊಡುವ ಚಿತ್ರಗಳಿದ್ದಾರೆ ಒಳ್ಳೆಯದು. ತೆಲುಗು ಚಿತ್ರಗಳಿಗಾಗಿ ತೆಲುಗು ಭಾಷೆಯನ್ನು ಕಲಿಯುತ್ತಿದ್ದೇನೆ. ಸ್ವಲ್ಪ ದಿನಗಳಲ್ಲಿ ಈ ಭಾಷೆಯನ್ನು ಕಲಿತುಕೊಂಡು ಇನ್ನಷ್ಟೂ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಇರಾದೆ ನನ್ನದು.
ಟೋಟಲಿ ಕುಡ್ಲದ ಹುಡುಗಿ ನಟಿ ಅನುಷ್ಕಾ ಶೆಟ್ಟಿಯ ಬಳಿಕ ಮತ್ತೊಬ್ಬರು ಟಾಲಿವುಡ್ ರಂಗದಲ್ಲಿ ಹೊಸ ಭರವಸೆ ಮೂಡಿಸುತ್ತಿರುವುದು ಖುಷಿಯ ವಿಷ್ಯಾ ಅಲ್ವಾ..?
Friday, February 21, 2014
ಬಾಹುಬಲಿ ಪ್ರಭಾಸ್ ಬಾಡಿ!
* ಸ್ಟೀವನ್ ರೇಗೊ, ದಾರಂದಕುಕ್ಕು
ಟಾಲಿವುಡ್ ಸಿನಿಮಾ ಜಗತ್ತು ಈಗ ಒಂದೇ ಮಾತಿಗೆ ಇಳಿದಿದೆ. ಕಾರಣ ಇಷ್ಟೇ ‘ಬಾಹುಬಲಿ’ ಚಿತ್ರದ ಮೇಕಿಂಗ್ ಮಾತು ಒಂದೆಡೆ ಹರಿದಾಡುತ್ತಿದ್ದಾರೆ. ಮತ್ತೊಂದೆಡೆ ಈ ಚಿತ್ರದ ಬಿಡುಗಡೆ ಯಾವಾಗ ಎನ್ನುವ ನಿರೀಕ್ಷೆಗಳು ಮೂಡಿಬರುತ್ತಿದೆ. ಅಂದಹಾಗೆ ಟಾಲಿವುಡ್ ಸಿನಿಮಾ ಜಗತ್ತಿನಲ್ಲಿ ಇದೊಂದು ಬಹುಕೋಟಿ ವೆಚ್ಚದ ಪ್ರಾಜೆಕ್ಟ್ . ಬರೋಬರಿ ೧೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಬರುತ್ತಿರುವ ‘ಬಾಹುಬಲಿ’ಯಲ್ಲಿ ಈಗ ಪ್ರಭಾಸ್ ಬಾಡಿಯದ್ದೇ ಮಾತು.
ಅಂದಹಾಗೆ ೨೦ ಕೆ.ಜಿ. ಇದು ತೆಲುಗು ನಟ ಪ್ರಭಾಸ್ ‘ಬಾಹುಬಲಿ’ ಚಿತ್ರಕ್ಕಾಗಿ ಬೆಳೆಸಿಕೊಂಡ ದೇಹಸಿರಿ. ಬಾಹುಬಲಿಯ ಲೀಡ್ ರೋಲ್‌ನಲ್ಲಿರುವ ಪ್ರಭಾಸ್ ಚಿತ್ರದ ಆರಂಭದಿಂದಲೂ ದೇಹಸಿರಿಯ ಬೆಳವಣಿಗೆಯ ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಇಂದಿನವರೆಗೂ ಟಾಲಿವುಡ್‌ನ ಯಾವುದೇ ನಾಯಕ ನಟರು ಈ ಪಾಟಿ ದೇಹಸಿರಿಯ ಕಡೆ ಗಮನಕೊಟ್ಟಿಲ್ಲ ಎನ್ನುವುದು ಹರಿದಾಡುತ್ತಿರುವ ಮಾತು.
‘ಬಾಹುಬಲಿ’ ಚಿತ್ರಕ್ಕಾಗಿ ಪ್ರಭಾಸ್ ಕಳೆದ ಆರು ತಿಂಗಳುಗಳಿಂದ ವರ್ಕ್ ಔಟ್ ಮಾಡುತ್ತಿದ್ದರು. ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ನಟ ಪ್ರಭಾಸ್ ಭೇಟಿಕೊಟ್ಟಾಗ ಅಲ್ಲಿ ‘ಡಬ್ಲ್ಯೂಡಬ್ಲ್ಯೂಎಫ್’ನ ಕಾರ‍್ಯಕ್ರಮವೊಂದಕ್ಕೆ ಹೋಗಿದ್ದರು. ಯಾವ ರೀತಿಯಲ್ಲಿ ಈ ಪಟುಗಳು ಹೊಡೆದಾಡಿಕೊಳ್ಳುತ್ತಾರೆ.
ಅದರಲ್ಲೂ ಈ ಪಟುಗಳು ಮಾಡುವ ವರ್ಕ್ ಔಟ್ ಎಲ್ಲವೂ ಕಲಿತುಕೊಂಡು ಪ್ರಭಾಸ್ ಭಾರತಕ್ಕೆ ಬಂದರು. ಅಲ್ಲಿಂದ ನಿರಂತರವಾಗಿ ಪ್ರಭಾಸ್ ಅವರ ವರ್ಕ್ ಔಟ್‌ಗಳನ್ನು ತಮ್ಮ ಜಿಮ್‌ನಲ್ಲಿ ಮಾಡಲು ಆರಂಭಿಸಿದರು ಎನ್ನುವುದು ನಟ ಪ್ರಭಾಸ್‌ನ ಆಪ್ತ ಮೂಲಗಳು ಹೇಳುತ್ತಿದೆ.
ಬಾಡಿಗಾಗಿ ಮನೆ ಬದಲಾಯಿಸಿದ ಪ್ರಭಾಸ್:
ನಟ ಪ್ರಭಾಸ್ ಈ ಹಿಂದೆ ಇದ್ದ ಮನೆಯನ್ನು ಈಗ ಬದಲಾಯಿಸಿಕೊಂಡಿದ್ದಾರೆ. ೧.೫ ಕೋಟಿ ರೂಪಾಯಿ ವೆಚ್ಚದ ನೂತನ ಮನೆಯೊಂದಕ್ಕೆ ಶಿಫ್ಟ್ ಆಗಿರುವ ಪ್ರಭಾಸ್ ಮನೆ ಬದಲಾವಣೆಯ ಹಿಂದೆ ಇರುವ ರಹಸ್ಯ ಇಷ್ಟೇ.. ತನ್ನ ಹಿಂದಿನ ಮನೆಯಲ್ಲಿ ಬೇಕಾದ ರೀತಿಯ ಜಿಮ್ ವ್ಯವಸ್ಥೆ ಇರಲಿಲ್ಲ.
ಅದಕ್ಕಾಗಿ ಬರೀ ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ಕಾರಣಕ್ಕೆ ಮನೆ ಬದಲಾಯಿಸಿಕೊಂಡಿದ್ದಾರೆ. ಬರೀ ಮನೆ ಬದಲಾವಣೆಯ ಜತೆಗೆ ಹೊಸದಾದ ಜಿಮ್‌ವೊಂದನ್ನು ಕಟ್ಟಿ ಬೆಳೆಸಿದ್ದಾರೆ ಎನ್ನುವ ಮಾಹಿತಿ ಕೂಡ ಹೊರಬಂದಿದೆ. ಈಗಾಗಲೇ ಟಾಲಿವುಡ್‌ನ ನಟ ಮಹೇಶ್ ಬಾಬು ಹಾಗೂ ಬಾಲಿವುಡ್ ನಟ ಹೃತಿಕ್ ರೋಷನ್ ಭಾರತೀಯ ಫಿಟ್ನ್‌ನೆಸ್ ಟ್ರೈನರ್ ಅನ್ನು ನೇಮಕ ಮಾಡಿಕೊಂಡಿರುವ ವಿಷ್ಯಾ ಎಲ್ಲರಿಗೂ ಗೊತ್ತು. ಆದರೆ ಪ್ರಭಾಸ್ ಮಾತ್ರ ಭಾರತೀಯರ‍್ನನು ಬಿಟ್ಟು ವಿದೇಶಿ ಟ್ರೈನರ್ ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ.
ದಿನದ ಆರು ಗಂಟೆಗಳ ಕಾಲ ಜಿಮ್‌ನಲ್ಲಿರುವ ಪ್ರಭಾಸ್ ದಿನವೊಂದಕ್ಕೆ ೪೦ ಅರೆಬೆಂದ ಮೊಟ್ಟೆಗಳನ್ನು ತಿನ್ನುತ್ತಾ ವರ್ಕ್ ಔಟ್ ಮಾಡುತ್ತಿದ್ದಾರೆ. ಇದರ ಜತೆಗೆ ಊಟದಲ್ಲೂ ಸಾಕಷ್ಟು ಕಾಳಜಿ ಹೊತ್ತುಕೊಂಡಿರುವ ಪ್ರಭಾಸ್ ಬಾಹುಬಲಿ ಚಿತ್ರವೊಂದಕ್ಕೆ ಮಾಡುತ್ತಿರುವ ವರ್ಕ್ ಔಟ್‌ಗಳಂತೂ ನಿಜಕ್ಕೂ ಚಿತ್ರದ ಕುರಿತು ಪ್ರಭಾಸ್ ಹೊತ್ತುಕೊಂಡಿರುವ ಕಾಳಜಿ ಅವರಿಗೆ ಬರುತ್ತದೆ.
Wednesday, February 19, 2014
ಆಮೀರ್ ಹೇಳ ಹೊರಟ ಸತ್ಯ
* ಸ್ಟೀವನ್ ರೇಗೊ, ದಾರಂದಕುಕ್ಕು
ಅದೊಂದು ಬೆಟ್ಟದಷ್ಟು ನಿರೀಕ್ಷೆ. ಯಾವುದೋ ಒಂದು ಸಮಸ್ಯೆಗೆ ಆತನಿಂದಲೇ ಪರಿಹಾರ ಸಿಗುತ್ತದೆ ಎನ್ನುವ ಭಾವನೆ. ಎಲ್ಲದರ ಜತೆಗೆ ಬೇಗನೆ ನಿಮ್ಮ ಮುಂದೆ ಹಾಜರಾಗಿ ಬಿಡುತ್ತೇನೆ ಎನ್ನುವ ಧೈರ್ಯದ ಮಾತುಗಳು. ಅಂದಹಾಗೆ ಬಾಲಿವುಡ್ ನಟ ಆಮೀರ್ ಖಾನ್ ಮತ್ತೆ ಬರುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀರಾ ಇತ್ತೀಚೆಗೆ ಧೂಮ್-೩ಯ ಮೂಲಕ ಹಿರಿತೆರೆಯಲ್ಲಿ ಮಿಂಚಿದ ಪರಿಯಲ್ಲೇ ಕಿರಿತೆರೆಯಲ್ಲೂ ಕಮಾಲ್ ಮಾಡುತ್ತಾರೆ ಎನ್ನುವ ಸತ್ಯ ಈಗ ಹೊರ ಬರುತ್ತಿದೆ. ಹೌದು. ಇದು ಆಮೀರ್ ಖಾನ್ ಖಾಸಗಿ ವಾಹಿನಿಯಲ್ಲಿ ನಡೆಸಿಕೊಡಲಿರುವ ‘ಸತ್ಯಮೇವ ಜಯತೇ’ ಕಾರ‍್ಯಕ್ರಮದ ಮಾತು.
ಆಮೀರ್ ಖಾನ್ ಈ ಮೊದಲು ಖಾಸಗಿ ವಾಹಿನಿಯಲ್ಲಿ ನಡೆಸಿಕೊಟ್ಟ ‘ಸತ್ಯಮೇವ ಜಯತೇ’ ಕಿರಿ ತೆರೆಯಲ್ಲಿ ಹೊಸ ಸಂಚಲನ ಮಾಡಿತ್ತು. ಅದಕ್ಕೂ ಮುಖ್ಯವಾಗಿ ನಮ್ಮ- ನಿಮ್ಮ ನಡುವಿನಲ್ಲೇ ಇದ್ದ ಸಮಸ್ಯೆಗಳನ್ನು ಮನಮುಟ್ಟುವಂತೆ ಆಮೀರ್ ನಿರೂಪಣೆ ಮಾಡಿ ಸಮಸ್ಯೆಗಳನ್ನು ಪರಿಹಾರದ ಹಂತಕ್ಕೆ ತಂದು ನಿಲ್ಲಿಸುತ್ತಿದ್ದ ಪರಿಯನ್ನು ನೋಡಿದ ಪ್ರೇಕ್ಷಕ ಮಹಾಶಯ ಕೂಡ ಬೆರಗಾಗಿ ಹೋಗಿದ್ದ ಎನ್ನುವುದು ಬಟಬಯಲಾದ ಸತ್ಯ.
ಸಮಾಜದಲ್ಲಿ ನಡೆಯುತ್ತಿದ್ದ ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮಕ್ಕಳ ಮೇಲಿನ ಹಿಂ, ಆತ್ಯಾಚಾರ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ತಂದ ಆಮೀರ್ ಈ ಬಾರಿ ಏನೂ ತರುತ್ತಿದ್ದಾರೆ ಎನ್ನುವ ಕುತುಹೂಲ ಪ್ರತಿಯೊಬ್ಬ ಪ್ರೇಕ್ಷಕನ ಮನದಲ್ಲಿ ಮೂಡಿದೆ.
ಮಾರ್ಚ್ ೨ರಿಂದ ಖಾಸಗಿ ವಾಹಿನಿಯಲ್ಲಿ ಮೂಡಿಬರಲಿರುವ ‘ಸತ್ಯಮೇವ ಜಯತೇ’ ಬರೀ ಐದು ಎಪಿಸೋಡುಗಳಲ್ಲಿಯೇ ತನ್ನ ಅಂತಿಮ ಗೀತೆಯನ್ನು ಹಾಡಲಾಗುತ್ತದೆ ಎನ್ನುವುದು ಈಗ ಹೊರಬರುತ್ತಿರುವ ಸತ್ಯ.ಅಂದರೆ ಒಂದು ತಿಂಗಳ ಮಟ್ಟಿಗೆ ಆಮೀರ್ ಖಾನ್ ತನ್ನ ಕಾರ‍್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಂದಹಾಗೆ ೧೩ ಎಪಿಸೋಡುಗಳನ್ನು ಈಗಾಗಲೇ ಸತ್ಯಮೇವ ಜಯತೇ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಮೊದಲ ಸರಣಿಯಲ್ಲಿ ೫ ಎಪಿಸೋಡುಗಳು ಪ್ರಸಾರವಾಗಲಿದೆ. ಉಳಿದ ೮ ಎಪಿಸೋಡುಗಳನ್ನು ನಂತರ ಪ್ರಸಾರ ಮಾಡುವ ಯೋಜನೆ ಇದೆ .
ದೇಶದ ಕಾಳಜಿ ಹೊತ್ತ ಆಮೀರ್:
ಆಮೀರ್ ಖಾನ್ ಈ ಬಾರಿ ಬರೀ ಐದು ಎಪಿಸೋಡು(ಸಂಚಿಕೆ)ಗಳಲ್ಲಿ ಕೊನೆಗೊಳಿಸಲಿರುವ ‘ಸತ್ಯಮೇವ ಜಯತೇ’ಯಲ್ಲಿ ಏನಿದೆ ಎನ್ನುವುದು ಖುದ್ದು ಆಮೀರ್ ‘ಸತ್ಯಮೇವ ಜಯತೇ’ಯ ಜಾಹೀರಾತುಗಳಲ್ಲಿಯೇ ಬಿಚ್ಚಿಟ್ಟಿದ್ದಾರೆ. ಹೌದು. ‘ಜೀನೇ ದೇಶ್ ಕೀ ಫಿಕರ್ ಹೈ’(ಯಾರಿಗೆ ದೇಶದ ಕುರಿತು ಕಾಳಜಿ ಇದೆ) ಎನ್ನುವ ಮೂಲಕ ದೇಶದ ಕುರಿತು ಕಾಳಜಿ ಪಡುವಂತಹ ಸರಣಿಗಳನ್ನೇ ಕೊಡುತ್ತಾರೆ ಎನ್ನೋದು ಕಾರ‍್ಯಕ್ರಮದ ಸಿಕ್ರೇಟ್. ಒಂದೆರಡು ತಿಂಗಳಲ್ಲಿ ಬರುವ ಮಹಾ ಚುನಾವಣೆ, ಭ್ರಷ್ಟಾಚಾರ, ಮತದಾನ, ದೇಶದ ಪ್ರಗತಿ ಹೀಗೆ ಎರಡು ಮೂರು ಕಾನ್ಸೆಪ್ಟ್‌ಗಳನ್ನು ಹೊತ್ತುಕೊಂಡು ಆಮೀರ್ ಸತ್ಯಮೇವ ಜಯತೇಯ ಕಣಕ್ಕೆ ಇಳಿಯಲಿದ್ದಾರೆ ಎನ್ನೋದು ಹೊರಬಂದ ಮಾತು. ಟೋಟಲಿ ಆಮೀರ್ ಖಾನ್ ನಡೆಸುವ ‘ಸತ್ಯಮೇವ ಜಯತೇ’ ನಿಜಕ್ಕೂ ನೋಡಲು ಪ್ರೇಕ್ಷಕ ವರ್ಗವಂತೂ ತುದಿಕಾಲಲ್ಲಿ ನಿಂತಿರೋದು ಗ್ಯಾರಂಟಿಯಾಗಿದೆ.
....
Tuesday, February 18, 2014
ಕನ್ನಡಕ್ಕೊಬ್ಬ ಬಂದ ಹೊಸ ಹುಡ್ಗ
* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಿನ್ಮಾ ಫೀಲ್ಡ್‌ನಲ್ಲಿ ಬೌಲಿಂಗ್, ಬ್ಯಾಟಿಂಗ್ ಮಾಡಲು ಹೊಸ ಹುಡ್ಗನೊಬ್ಬ ಎಂಟ್ರಿಯಾಗಿದ್ದಾನೆ. ಹೊಸತನ ಬಯಸುವ ಈ ಸಿನಿಮಾ ಬದುಕಿನಲ್ಲಿ ಹುಡುಗ ಬದಲಾವಣೆಯನ್ನು ಹೊತ್ತು ತರುತ್ತಾನೆ ಎನ್ನೋದು ಅವನ ಸುತ್ತಮುತ್ತ ಇರುವವರ ಮಾತು. ಕಾರಣ ಇಷ್ಟೇ ಸ್ಪುರದ್ರೂಪಿ ಹುಡುಗ ಬರೀ ನೋಡಲು ಮಾತ್ರ ಸಖತ್ ಆಗಿಲ್ಲ. ಬದಲಾಗಿ ಸಿಕ್ಸ್ ಪ್ಯಾಕ್ ಎನ್ನುವ ಕಾನ್ಸೆಪ್ಟ್‌ನಲ್ಲೂ ಹುಡುಗ ಮಿಂಚಿದ್ದಾನೆ.
ಅಂದಹಾಗೆ ವಿಜೇಶ್ ಶೆಟ್ಟಿ. ಕಡಲ ತಡಿಯ ಊರು ಪುತ್ತೂರಿನಿಂದ ಹೊರ ಬಂದ ಪ್ರತಿಭೆ. ರಂಗಭೂಮಿಯ ಜತೆಗೆ ವಿಶೇಷ ವ್ಯಾಮೋಹ ಇಟ್ಟುಕೊಂಡಿರುವ ಹುಡುಗ ಅವಕಾಶಕ್ಕಾಗಿ ಬಾಗಿಲು ಬಡಿಯಲು ಆರಂಭಿಸಿದ್ದು ಸ್ಯಾಂಡಲ್‌ವುಡ್ ಸಿನಿಮಾ ಇಂಡಸ್ಟ್ರಿಯನ್ನು ಎನ್ನುವುದು ವಿಶೇಷ. ತುಳುನಾಡಿನಲ್ಲಿ ಅಬ್ಬರದಲ್ಲಿ ಬೆಳೆಯುತ್ತಿರುವ ಕೋಸ್ಟಲ್‌ವುಡ್ ಸಿನಿಮಾಗಳನ್ನು ಬಿಟ್ಟು ಏಕ್‌ದಂ ಸ್ಯಾಂಡಲ್‌ವುಡ್ ಕಡೆ ದೃಷ್ಟಿ ಹಾಕಿದಾಗಲೇ ಹುಡುಗ ಬೆಳೆಯುವ ಲಕ್ಷಣಗಳು ಗೋಚರವಾಗುತ್ತಿದೆ.
ಕೋಸ್ಟಲ್‌ವುಡ್‌ನಲ್ಲಿ ಎರಡು- ಮೂರು ಸಿನಿಮಾಗಳಿಗೆ ನಾಯಕನಾಗಿ ಬುಕ್ ಆಗಿದ್ದ ಹುಡುಗ ವಿಜೇಶ್ ಶೆಟ್ಟಿ ಈಗ ಕನ್ನಡದಲ್ಲಿ ಬರುತ್ತಿರುವ ತ್ರಿಕೋನ ಪ್ರೇಮಕತೆಯ ಹಂದರವಿರುವ ‘ನಾನು ಹೇಮಂತ್ ಅವಳು ಸೇವಂತಿ’ ಚಿತ್ರದ ಲೀಡ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಚಿತ್ರದ ೯೦ ಭಾಗ ಚಿತ್ರೀಕರಣ ಮುಗಿಸಿಕೊಂಡು ಚಿತ್ರಗಳ ಹಾಡುಗಳ ಚಿತ್ರೀಕರಣಕ್ಕಾಗಿ ಕಾಯುತ್ತಿದೆ. ನಿರ್ದೇಶಕ ಸುಧಾಕರ ಬನ್ನಂಜೆಯ ಜತೆಯಲ್ಲಿ ಇತರ ಗೆಳೆಯರು ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಈ ಚಿತ್ರ ಹೊಸ ಮಾದರಿಯಲ್ಲಿ ಪ್ರೇಮ ಕತೆಯನ್ನು ಹೆಣೆಯಲಾಗಿದೆ ಎನ್ನುವುದು ವಿಜೇಶ್ ಮಾತು.
ತನ್ನ ಪಾತ್ರಕ್ಕೆ ಈ ಚಿತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಇಡೀ ಕತೆಯೇ ನನ್ನ ಪಾತ್ರದ ಮೂಲಕ ಆರಂಭವಾಗುವುದರಿಂದ ಈ ಚಿತ್ರದಿಂದ ಹೆಚ್ಚಿನ ನಿರೀಕ್ಷೆ ಇದೆ. ಮುಖ್ಯವಾಗಿ ಹೊಸಬರ ತಂಡ ಇರುವ ಕಾರಣ ಚಿತ್ರದಲ್ಲಿ ಹೆಚ್ಚಿನ ಲವಲವಿಕೆ ಹಾಗೂ ಕತೆಯಲ್ಲೂ ವಿಭಿನ್ನತೆಯನ್ನು ಹೆಣೆಯಲಾಗಿದೆ ಎನ್ನುವುದು ವಿಜೇಶ್ ಶೆಟ್ಟಿಯ ಮಾತು.
ಫಿಟ್ನೇಸ್ ಟ್ರೈನರ್ ನಟನೆಗೆ ಇಳಿದ ಕತೆ:
ಪುತ್ತೂರಿನಲ್ಲಿ ತನ್ನದೇ ಫಿಟ್ನೇಸ್ ಸೆಂಟರ್ ಇಟ್ಟುಕೊಂಡಿರುವ ವಿಜೇಶ್ ಶೆಟ್ಟಿಗೆ ಬಾಡಿ ಫಿಟ್ನೇಸ್‌ನಲ್ಲಿಯೇ ಆಸಕ್ತಿ ಹೆಚ್ಚು. ಹೆಚ್ಚು ಸಮಯ ಜಿಮ್‌ನಲ್ಲಿಯೇ ಕಳೆಯುವ ವಿಜೇಶ್‌ಗೆ ನಟನೆ ಗೀಳು ಬಂದದ್ದು ಮಾತ್ರ ವಿಶೇಷ. ಫಿಟ್ನೇಸ್ ತನ್ನದೇ ವೃತ್ತಿ ಎಂದುಕೊಂಡು ಬೆಳೆಯುತ್ತಿದ್ದಾಗ ನಟನೆ ಒಂದು -ಶನ್ ರೀತಿಯಲ್ಲಿ ಕಾಣಿಸಿಕೊಂಡಿತು ಎನ್ನುವುದು ವಿಜೇಶ್ ಮಾತು.
ಬೆಂಗಳೂರಿನಲ್ಲಿದ್ದಾಗ ಅಭಿನಯ ತರಂಗದಲ್ಲಿ ನಟನೆಯ ಕುರಿತು ಕೋರ್ಸ್ ಮಾಡಿಕೊಂಡು ಹೊರಬಂದ ಹುಡುಗ ನಂತರ ಮೊಡೆಲಿಂಗ್, ಡ್ರಾಮಾ, ಶಾರ್ಟ್ ಮೂವಿಗಳಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ನಟನೆಯ ಜತೆಗೆ ಫಿಟ್ನೇಸ್ ಸೆಂಟರ್‌ಗಳನ್ನು ರಾಜ್ಯದ ತುಂಬಾ ತೆರೆಯಬೇಕು ಎನ್ನುವ ಕನಸ್ಸು ಹೊತ್ತುಕೊಂಡಿರುವ ವಿಜೇಶ್ ಶೆಟ್ಟಿಗೆ ನಟನೆಯಲ್ಲೂ ಮುಂದುವರಿಯಬೇಕು ಎನ್ನುವ ಹಂಬಲವಿದೆ. ಟೋಟಲಿ ಬಹಳ ವರ್ಷಗಳ ನಂತರ ಕರಾವಳಿಯ ಹುಡುಗನೊಬ್ಬ ನಾಯಕನಾಗಿ ಸ್ಯಾಂಡಲ್‌ವುಡ್ ಸಿನ್ಮಾ ಫೀಲ್ಡ್‌ಗೆ ಇಳಿದುಬಿಟ್ಟಿದ್ದಾರೆ. ಅವರ ಮುಂದಿನ ಆಟ ಸಿನಿಮಾ ಥಿಯೇಟರ್‌ಗೆ ಬಂದ ನಂತರವೇ ತಿಳಿಯಬೇಕು.
Monday, February 17, 2014
ಬಾಲಿವುಡ್ ನೋ ಮ್ಯಾರೇಜ್ ನಟಿಯರು
* ಸ್ಟೀವನ್ ರೇಗೊ, ದಾರಂದಕುಕ್ಕು
ಹೆಸರು, ಹಣ ಹೀಗೆ ಸೂಪರ್ ಬದುಕಿಗೆ ಲಯಾಕ್ ಎನ್ನುವಂತಹ ಎಲ್ಲ ಐಟಂಗಳು ಇದ್ದರೂ ಕೂಡ ಅವರಿಗೆ ಮದುವೆಯೊಂದು ಬೇಡ. ಯಾಕೋ ಗೊತ್ತಿಲ್ಲ. ಬಾಲಿವುಡ್ ಪಡಸಾಲೆಯಲ್ಲಿ ಮಿಂಚಿದ ಕೆಲವೊಂದು ನಟಿಯರು ಮದುವೆಯ ಬಗ್ಗೆ ಎಂದಿಗೂ ಯೋಚನೆಯೇ ಮಾಡಿಕೊಂಡಿಲ್ಲ ಎನ್ನುವುದೇ ಸ್ವಾರಸ್ಯ ಮಾತು. ಅಷ್ಟಕ್ಕೂ ಬಾಲಿವುಡ್ ಅಂಗಳದ ಏಣಿ ಏರಿದ ಹುಡುಗಿಯರು ಯಾಕೆ ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎನ್ನುವುದಕ್ಕೆ ಯಾವುದೇ ಉತ್ತರವಿಲ್ಲ. ನೋ ಮ್ಯಾರೇಜ್ ಕಾರ್ಡ್ ಎನ್ನುವುದೇ ಅವರ ಬದುಕಿನ ಮಂತ್ರ.
ಅಂದಹಾಗೆ ಬಾಲಿವುಡ್ ಪಡಸಾಲೆಯಲ್ಲಿರುವ ಇಂತಹ ನಾಯಕಿಯರು ಯಾರು ಅಂತೀರಾ..?ನಟಿ ತಬು, ಸುಶ್ಮಿತಾ ಸೇನ್, ರಾಣಿ ಮುಖರ್ಜಿ, ಪ್ರೀತಿ ಝಿಂಟಾ, ಬಿಪಾಸ ಬಸು, ಪ್ರಿಯಾಂಕಾ ಚೋಪ್ರಾ. ಇದೇ ಕೆಲವು ಹೆಸರುಗಳಲ್ಲ.. ಇನ್ನಷ್ಟೂ ಹೆಸರುಗಳು ಬಾಲಿವುಡ್ ಅಂಗಳದಲ್ಲಿ ಕಾಣ ಸಿಗುತ್ತದೆ. ಆದರೆ ಇವರು ಮಾತ್ರ ಬಾಲಿವುಡ್ ಅಂಗಳದಲ್ಲಿ ಬೆಳೆದವರು ಹಾಗೂ ಉಳಿದವರ ಸಾಲಿನಲ್ಲಿ ಸಿಗುವವರು.
ತಬು: ಬಾಲಿವುಡ್ ಶಾಲೆಯಲ್ಲಿ ಇವರ ಹೆಸರು ಆಗಾಗ ಕೇಳಿಸಿಕೊಳ್ಳುತ್ತಿದೆ. ಅವರು ತಮ್ಮ ನಟನೆಗಾಗಿ ಎರಡು ಬಾರಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಆಪ್- ಬೀಟ್ ಪಾತ್ರಗಳಿಂದಾಗಲೇ ಗುರುತಿಸಿಕೊಂಡ ತಬು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಣೆ ಒಳ್ಳೆಯ ಹೆಸರುಗಳಿಸಿಕೊಂಡಿದ್ದಾರೆ. ೪೨ರ ಹರೆಯದ ತಬು ಈಗಲೂ ವಿವಾಹದ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ.
ಸುಶ್ಮಿತಾ ಸೇನ್: ೯೪ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ತಲೆ ಮೇಲೆ ಮೂಡಿಸಿಕೊಂಡಾಗ ಸುಶ್ಮಿತಾ ಸೇನ್ ಹಲವು ಯುವಕರು ಫಿದಾ ಆಗಿದ್ದರು. ರಣದೀಪ್ ಹೂಡಾ ಜತೆಯಲ್ಲಿ ಒಂದು ಬ್ರೇಕ್ ಆಪ್ ಮ್ಯಾಟರ್ ಬಿಟ್ಟರೆ ಸೇನ್ ಗಾಸಿಪ್ ಲೋಕದಲ್ಲಿ ಕಾಣಿಸಿಕೊಂಡಿದ್ದು ಬಹಳ ವಿರಳ. ಕೆಲವೊಮ್ಮೆ ನಿರ್ದೇಶಕ ವಿಕ್ರಂ ಭಟ್ಟರ ಹೆಸರಿನ ಜತೆಯಲ್ಲಿ ತಾಳೆ ಹಾಕಿಕೊಂಡ ಸೇನ್ ಎರಡು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ.
ಬಿಪಾಸ ಬಸು: ಬಾಲಿವುಡ್ ಅಂಗಳದ ಕೃಷ್ಣ ಸುಂದರಿ ಬಿಪಾಸ ಬಸು ನಟ ಜಾನ್ ಅಬ್ರಾಹಂ ಜತೆಗಿನ ಒಂದು ಬ್ರೇಕ್ ಆಪ್‌ನಿಂದಾಗಿ ಮದುವೆಯ ಮೇಲಿನ ವ್ಯಾಮೋಹವನ್ನೇ ಬಿಟ್ಟು ಬಿಟ್ಟಿದ್ದಾರೆ. ೩೩ರ ಹರೆಯದ ಬಸು ತಮ್ಮದೇ ಪ್ರಾಡಕ್ಟ್ ಎಂಡೋರೇಸ್‌ಮೆಂಟ್, -ಶನ್ ವೀಕ್, ಬ್ರಾಂಡ್ -ಕಸ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆದರೆ ಈಗ ನಟ ಹರ್ಮನ್ ಬೇವಾಜಾ ಜತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಗಟ್ಟಿಯಾಗಿ ಕೇಳಿಸಿಕೊಳ್ಳುತ್ತಿದೆ.
ಪ್ರಿಯಾಂಕಾ ಚೋಪ್ರಾ: ಮಿಸ್ ವರ್ಲ್ಡ್ ಹಾಗೂ ಮಿಸ್ ಇಂಡಿಯಾ ಎರಡು ಕಿರೀಟಗಳನ್ನು ಬಾಚಿಕೊಂಡ ಗ್ಲ್ಯಾಮ್ ಡೀವಾ ಪ್ರಿಯಾಂಕಾ ಚೋಪ್ರಾ ನಟನೆ ಜತೆಯಲ್ಲಿ ಹಾಡುಗಾರಿಕೆಯಲ್ಲೂ ಸಖತ್ ಮಿಂಚಿದ್ದಾರೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಜತೆಗೆ ಪ್ರೇಕ್ಷಕರನ್ನು ಮೋಡಿ ಮಾಡುವ ತಾಕತ್ತು ಪ್ರಿಯಾಂಕಾಳಿಗೆ ಇದೆ ಎನ್ನೋದು ಬಾಲಿವುಡ್ ಅಂಗಳದಲ್ಲಿರುವ ಮಾತು. ‘ಇನ್ ಮೈ ಸಿಟಿ’ ಮ್ಯೂಸಿಕಲ್ ಆಲ್ಬಂನ ಪಾಸಿಟಿವ್ ವೇವ್‌ನಿಂದಾಗಿ ಚೋಪ್ರಾ ಬತ್ತಳಿಕೆಯಿಂದ ಇನ್ನಷ್ಟೂ ಮ್ಯೂಸಿಕಲ್ ಆಲ್ಬಂ ಹೊರ ಬರುವ ಸಾಧ್ಯತೆ ದಟ್ಟವಾಗಿದೆ. ೩೧ರ ಹರೆಯ ಚೋಪ್ರಾ ಮೇರಿ ಕೋಮ್ ಅವರ ಆತ್ಮಕತೆಯಲ್ಲಿ ನಟಿಸುತ್ತಿದ್ದಾರೆ. ಆದರೆ ಮದುವೆ ಎನ್ನುವ ಸಂಬಂಧದಿಂದ ದೂರಕ್ಕೆ ಉಳಿದುಬಿಟ್ಟಿದ್ದಾರೆ.
ಪ್ರೀತಿ ಝಿಂಟಾ: ಬಾಲಿವುಡ್ ಅಂಗಳದ ಚಿಗರೆ ಪ್ರೀತಿ ಝಿಂಟಾ ಚಿತ್ರಗಳ ನಟನೆಯ ಜತೆಯಲ್ಲಿ ಐಪಿಎಲ್ ತಂಡದ ಉಸ್ತುವಾರಿಯಲ್ಲೂ ಕೈಯಾಡಿಸಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್‌ನ ಮೂಲಕ ಬಾಲಿವುಡ್ ನಲ್ಲಿ ಹೊಸ ಹೊಸ ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಝಿಂಟಾ ಉದ್ಯಮಿ ನೆಸ್ ವಾಡಿಯಾ ಜತೆ ಲೀವಿಂಗ್ ಲೈ-ನಲ್ಲಿ ಕಾಲದೂಡುತ್ತಿದ್ದಾರೆ. ೩೮ ಹರೆಯದ ಪ್ರೀತಿ ಝಿಂಟಾ ಮದುವೆ ಬೇಡವೇ ಬೇಡ ಎನ್ನುವುದು ಅವರ ಮಾತು.
ರಾಣಿ ಮುಖರ್ಜಿ: ತನ್ನ ಪ್ರಬುದ್ಧ ನಟನೆಯ ಮೂಲಕವೇ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಕತ್ತು ಇರುವ ನಟಿಯರ ಸಾಲಿನಲ್ಲಿ ರಾಣಿ ಮುಖರ್ಜಿಯ ಹೆಸರು ನಿಲುಕಾಡುತ್ತದೆ. ಬಾಲಿವುಡ್ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಜತೆಗಿನ ಆ-ರ್‌ಗಳು ರಾಣಿಯನ್ನು ಪದೇ ಪದೇ ಮಾಧ್ಯಮಗಳು ಕೆಣಕುತ್ತಿದ್ದವು. ೩೦ ದಾಟಿದರೂ ಮದುವೆಯ ಬಗ್ಗೆ ರಾಣಿ ನೋ ಎನ್ನೋದು ಜಾಸ್ತಿ.
Saturday, February 15, 2014
ಪ್ರಿಯಾದರ್ಶನ್ ಬದುಕಿನಲ್ಲಿ ಬಿರುಗಾಳಿ !
* ಸ್ಟೀವನ್ ರೇಗೊ, ದಾರಂದಕುಕ್ಕು
ಇದು ಪಕ್ಕಾ ಪ್ರೇಮಿಗಳಿಬ್ಬರ ಮಾತು. ಯಾಕೋ ಗೊತ್ತಿಲ್ಲ ೨೪ ವರ್ಷದ ಸುಮಧುರ ದಾಂಪತ್ಯ ಗೀತೆಯೇ ಈಗ ಮುಗಿದು ಹೋಗುವ ಹಂತಕ್ಕೆ ಬಂದು ತಲುಪಿದೆಯಾ ಎನ್ನುವ ಸಂದೇಹ ಮೂಡಿಬಂದಿದೆ. ಹೌದು ಇದು ಖ್ಯಾತ ನಿರ್ದೇಶಕ ಪ್ರಿಯಾದರ್ಶನ್ ಹಾಗೂ ಅವರ ಪತ್ನಿ ನಟಿ ಲಿಜಿ ಅವರ ಖಾಸ್‌ಬಾತ್.
ಆದರೆ ಮನೆಯೊಳಗೆ ಇದ್ದ ಈ ಮಾತು ಈಗ ಹೊರ ಪ್ರಪಂಚದಲ್ಲಿ ತೇಲಾಡುತ್ತಿದೆ. ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದು ಮುಟ್ಟಿದ್ದಾರೆ ಎನ್ನುವ ಮಾತು ಮಲಯಾಳಂ ಚಿತ್ರರಂಗದ ಗಲ್ಲಿಯಿಂದ ಹರಿದುಬಂದಿದೆ.
ಪ್ರೇಮಿಗಳ ದಿನದಂದು ಈ ಇಬ್ಬರು ಜತೆಯಾಗಿದ್ದರು.
ಆದರೆ ಇದೇ ಪ್ರೇಮಿಗಳ ದಿನದಂದು ಈ ಇಬ್ಬರು ಬೇರೆಯಾಗುವ ವಿಚಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನುವ ಮಾತು ಬಂದಿದೆ. ಈಗಾಗಲೇ ನಟಿ ಲಿಜಿ ಕಾನೂನು ಮೆಟ್ಟಿಲು ಏರಿಕೊಂಡು ಡೈವೋರ್ಸ್‌ಗೆ ಅರ್ಜಿ ಗುಜರಾಯಿಸಿದ್ದಾರೆ. ಮತ್ತೊಂದೆಡೆ ಪ್ರಿಯಾದರ್ಶನ್ ಕೂಡ ಮಾಧ್ಯಮಗಳಿಂದ ಕಣ್ಣು ತಪ್ಪಿಸಿಕೊಂಡು ಓಡಾಟ ಆರಂಭಿಸಿದ್ದಾರೆ.
ನಟಿ ಲಿಜಿ ಕೂಡ ಮಾಧ್ಯಮದ ಮುಂದೆ ಬಂದು ‘ದಯವಿಟ್ಟು ಇದೊಂದು ಕೌಟುಂಬಿಕ ವಿಚಾರ ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ’ ಎಂದು ಹೇಳಿಕೊಂಡು ಮರೆಯಾಗಿದ್ದಾರೆ. ಮತ್ತೊಂದೆಡೆ ಕೋರ್ಟ್ ಕಟ್ಟಳೆಯಲ್ಲಿ ಇಬ್ಬರಿಗೂ ಬುಲಾವ್ ಬಂದಿದೆ. ಈ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೆಳೆದ ಇಬ್ಬರು ಪ್ರೇಮಿಗಳು ದೂರವಾಗುವ ಕಾಲ ಬಂದಿದೆ ಎನ್ನಲಾಗುತ್ತಿದೆ.
ಪ್ರಿಯಾ ಬದುಕಿನಲ್ಲಿ ಲಿಜಿಯಾಟ:
೧೯೮೪ರಲ್ಲಿ ಮಲಯಾಳಂನ ‘ಅಲಾರಿಯಂ’ ಚಿತ್ರವೊಂದರಿಂದ ಹೊರ ಬಂದ ನಟಿ ಲಿಜಿ ತಿರುವನಂತಪುರದಲ್ಲಿ ಚಿತ್ರವೊಂದರ ಸೆಟ್‌ನಲ್ಲಿ ಪ್ರಿಯಾದರ್ಶನ್‌ಗೆ ಭೇಟಿಯಾಗುತ್ತಾರೆ. ಈ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಇಲ್ಲಿಂದ ಇಬ್ಬರ ಸಿನಿ ಬದುಕು ಕೂಡ ಆರಂಭವಾಗುತ್ತದೆ. ನಿರ್ದೇಶಕ ಪ್ರಿಯಾದರ್ಶನ್ ನಿರ್ದೇಶನ ಮಾಡಿದ ೨೨ ಚಿತ್ರಗಳಲ್ಲಿ ಲಿಜಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ೧೯೯೦ರಲ್ಲಿ ಇಬ್ಬರು ವಿವಾಹ ಬಂಧನದಲ್ಲಿ ಬಂಽಯಾಗುತ್ತಾರೆ.
ಈ ಬಳಿಕ ಲಿಜಿ ತನ್ನ ಸಿನಿಮಾ ಬದುಕಿನ ಹೆಸರನ್ನು ಲಕ್ಷ್ಮಿ ಎಂದು ಬದಲಾಯಿಸಿಕೊಂಡರು. ಇಬ್ಬರಿಗೆ ಕಲ್ಯಾಣಿ ಹಾಗೂ ಸಿದ್ದಾರ್ಥ್ ಎನ್ನುವ ಮಕ್ಕಳಿದ್ದಾರೆ. ಇಬ್ಬರು ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿಯೇ ನೆಲೆ ನಿಂತಿದ್ದಾರೆ. ಪ್ರಿಯಾ ಬದುಕಿನಲ್ಲಿ ಲಿಜಿ ಬಹಳ ಮುಖ್ಯವಾದ ಪಾತ್ರವಹಿಸಿದ್ದಾರೆ. ಎರಡು ಕಂಪನಿಗಳ ಮಾಲೀಕರಾಗಿರುವ ಲಿಜಿ ಸಿಸಿಎಲ್‌ನಲ್ಲೂ ತಮ್ಮ ಆಸ್ತಿತ್ವವನ್ನು ಇಟ್ಟುಕೊಂಡಿದ್ದರು.
ಈ ಎಲ್ಲವೂಗಳ ನಡುವೆ ಇಬ್ಬರು ಬೇರೆಯಾಗಲು ಇರುವ ಕಾರಣ ಏನೂ ಎನ್ನೋದು ಇಬ್ಬರು ಎಲ್ಲಿಯೂ ಹೇಳಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಆದರೆ ಚಿತ್ರರಂಗದ ಮಾಹಿತಿಯ ಪ್ರಕಾರ ನಾಯಕಿ ನಟಿಯೊಬ್ಬಳು ಇಬ್ಬರ ನಡುವೆ ವಿರಸ ಮೂಡಲು ಕಾರಣ ಎನ್ನಲಾಗುತ್ತಿದೆ. ನಿಜಕ್ಕೂ ಇಬ್ಬರ ನಡುವೆ ನಡೆದದ್ದು ಏನೂ ಎನ್ನೋದು ಮುಂಬರುವ ದಿನಗಳೇ ಹೇಳಬೇಕು.
Tuesday, February 11, 2014
‘ನಿರೆಲ್’ ಚಿತ್ರಕ್ಕೆ ದುಬಾಯಿ ಮಾರ್ಕೆಟ್ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ಲ್ಯಾಂಡ್ ಏಕ್‌ದಂ ಎದ್ದು ಕೂತಿದೆ. ವರ್ಷವಿಡೀ ಚಿತ್ರೀಕರಣ ಮಾಡಿಕೊಂಡು ಚಿತ್ರ ಮಂದಿರಕ್ಕೆ ನುಗ್ಗಲು ರೆಡಿಯಾದ ಹತ್ತಕ್ಕೂ ಅಧಿಕ ಚಿತ್ರಗಳ ಜತೆ ಜತೆಗೆ ಭರ್ಜರಿ ವೆಚ್ಚದಲ್ಲಿ ನಿರ್ಮಾಣವಾದ ‘ನಿರೆಲ್’( ನೆರಳು) ತುಳು ಚಿತ್ರ ಮೊದಲ ಬಾರಿಗೆ ದುಬಾಯಿಯ ಸಿನಿಮಾ ಮಂದಿರದಲ್ಲಿ ಪ್ರದರ್ಶನ ಕಾಣುವ ಯೋಗ್ಯತೆಯನ್ನು ಗಳಿಸಿಕೊಂಡಿದೆ. ಅಂದಹಾಗೆ ನಿರೆಲ್ ಚಿತ್ರ ತನ್ನ ಮೇಕಿಂಗ್‌ಗಾಗಿಯೇ ಈ ಹಿಂದೆ ಬಹಳ ಸುದ್ದಿಯಾಗಿತ್ತು.
ಇಡೀ ಚಿತ್ರವೇ ದುಬಾಯಿಯಲ್ಲಿ ಚಿತ್ರೀಕರಣಗೊಂಡಿದ್ದು ಮಾತ್ರವಲ್ಲ ಅದಕ್ಕೂ ಮುಖ್ಯವಾಗಿ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾದ ರಮೇಶ್ ಅರವಿಂದ್ ಕೂಡ ಈ ಚಿತ್ರದಲ್ಲಿ ಪಾತ್ರ ಮಾಡುವ ಮೂಲಕ ತುಳು ಸಿನಿಮಾದಲ್ಲಿ ಕನ್ನಡದ ನಟರ ಆಗಮನಕ್ಕೆ ಮುನ್ನುಡಿ ಬರೆದು ಹಾಕಿದ್ದರು. ಕರಾವಳಿಯಲ್ಲಿ ಬೆಳೆದ ನಟ- ನಟಿಯರನ್ನು ಸೇರಿಸಿಕೊಂಡು ದುಬಾಯಿಯಲ್ಲಿ ಸೇರಿಸಿಕೊಂಡು ಚಿತ್ರ ಮಾಡಿದ್ದು ‘ನಿರೆಲ್’ನ ವಿಶೇಷತೆಗಳಲ್ಲಿ ಒಂದಾಗಿದೆ.
ಕೆಲಸದ ಜತೆಯಲ್ಲಿ ಚಿತ್ರ ಮಾಡಿದರು:
ಕರಾವಳಿಯಲ್ಲಿ ಹುಟ್ಟಿ ಬೆಳೆದ ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಚಿತ್ರ ಮಾಡುವ ಕನಸ್ಸು ಕಂಡರು. ಬರೀ ಕನಸ್ಸಿನ ಜತೆಯಲ್ಲಿ ದುಬಾಯಿಯಲ್ಲಿ ವಾಸವಾಗಿರುವ ಕರಾವಳಿ ಮೂಲದ ಶೋಧನ್ ಪ್ರಸಾದ್ ಚಿತ್ರ ನಿರ್ಮಾಣ ಮಾಡುವ ಯೋಜನೆಗೆ ಬೆಂಬಲ ಕೊಟ್ಟಾಗ ‘ನಿರೆಲ್’ ಸಿನಿಮಾ ಹುಟ್ಟಿಬಂತು ಎನ್ನುತ್ತದೆ ನಿರೆಲ್ ಚಿತ್ರದ ಹಿಂದಿನ ಕತೆ. ಹೀಗೆ ವಾರವಿಡೀ ದುಡಿದು ಉಳಿದ ವೀಕೇಂಡ್ ದಿನಗಳಲ್ಲಿ ಈ ಯುವಕರು ಸಿನಿಮಾಕ್ಕೆ ಇಳಿದರು. ಅದುವೇ ಈಗ ಸಿನಿಮಾ ಆಗಿ ಮುಂದೆ ನಿಂತಿದೆ,
ಕೋಸ್ಟಲ್‌ವುಡ್ ಸಿನಿಮಾ ಇತಿಹಾಸದಲ್ಲಿಯೇ ನಿರೆಲ್ ಚಿತ್ರ ಅನೇಕ ರೀತಿಯಲ್ಲಿ ದಾಖಲೆಗಳನ್ನು ಒತ್ತಿದೆ. ಮೊದಲ ಅಂತಾರಾಷ್ಟ್ರೀಯ ಮಟ್ಟದ ತುಳು ಚಿತ್ರ ಎನ್ನುವ ಹೆಗ್ಗಳಿಕೆ ಒಂದೆಡೆಯಾದರೆ ಮೊದಲ ಬಾರಿಗೆ ಕನ್ನಡದ ನಟರೊಬ್ಬರನ್ನು ತಂದು ತುಳು ಸಿನಿಮಾಕ್ಕೆ ತಂದು ನಟಿಸುವಂತೆ ಮಾಡಿದ್ದು ಕೂಡ ಒಂದು ದಾಖಲೆ. ಅದರಲ್ಲೂ ನಾನಾ ಭಾಷೆಗಳ ಚಿತ್ರಗಳ ನಡುವೆ ದುಬಾಯಿಯಲ್ಲಿ ಸಿನಿಮಾ ತೆರೆ ಕಾಣುತ್ತಿರುವುದು ಕೂಡ ಒಂದು ದಾಖಲೆಯಾಗಿ ನಿಂತಿದೆ.
ಪ್ರತಿಭಾವಂತ ಹುಡುಗನ ಕೈಚಳಕ:
‘ನಿರೆಲ್’ ಚಿತ್ರ ಎಂದಾಕ್ಷಣ ಚಿತ್ರದ ನಿರ್ದೇಶಕ ರಂಜೀತ್ ಬಜಪೆ ಹೆಸರು ಮೊದಲು ಕಾಣಿಸಿಕೊಳ್ಳುತ್ತದೆ. ಮೂಲತಃ ಮಂಗಳೂರಿನ ಬಜಪೆಯ ಯುವಕನೊಬ್ಬ ದುಬಾಯಿ ಕೇಬಲ್ ಕಂಪನಿಯಲ್ಲಿ ಪ್ಲಾನ್ನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಹುಟ್ಟಿಕೊಂಡ ಕತೆಯೇ ಈ ನಿರೆಲ್ ಚಿತ್ರಕ್ಕೆ ಷರಾ ಬರೆಯಿತು. ನಿರೆಲ್ ಚಿತ್ರದ ನಿರ್ದೇಶಕ ರಂಜೀತ್ ಬಜಪೆ ಸಿನಿಮಾ ಲ್ಯಾಂಡ್‌ಗೆ ಬಂದ ಕತೆಯನ್ನು ಈ ರೀತಿ ಹೇಳುತ್ತಾರೆ:
ನನ್ನ ತಂದೆಯವರು ಯಕ್ಷಗಾನ ಪ್ರಿಯರಾಗಿದ್ದರು. ಅವರೊಂದಿಗೆ ಆಕಾಶವಾಣಿಯಲ್ಲಿ ಪ್ರತಿ ಬುಧವಾರ ಪ್ರಸಾರವಾಗುವ ಯಕ್ಷಗಾನ ಕೇಳುತ್ತಿದ್ದೆ. ಅಷ್ಟೇ ಅಲ್ಲದೆ ನನ್ನ ಅಣ್ಣ ನಾಟಕದಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡುತ್ತಿದ್ದರು. ಇವೆಲ್ಲ ನನ್ನಲ್ಲಿ ಕಲೆಯ ಬಗ್ಗೆ ಅಭಿರುಚಿ ಬೆಳೆಸಿತು. ಮೊದಲಿನಿಂದಲೂ ಚಲನ ಚಿತ್ರಗಳ ಬಗ್ಗೆ ಅತೀವ ಆಸಕ್ತಿ ಇತ್ತು. ಆದರೆ ಚಲನ ಚಿತ್ರ ನಿರ್ದೇಶಕನಾಗುವೆ ಎಂದು ಯಾವತ್ತು ಕನಸು ಕಂಡಿರಲಿಲ್ಲ. ಕನ್ನಡ ಚಿತ್ರ ರಂಗದ ಬಗೆ ಅತೀವ ಅಭಿಮಾನ ಇತ್ತು. ಕನ್ನಡದ ಯೋಗರಾಜ್ ಭಟ್, ಪವನ್ ಕುಮಾರ್, ಸೂರಿ ಇವರ ಚಿತ್ರಗಳು ನನಗೆ ಪ್ರೇರಣೆ ನೀಡಿತು.
ದುಬಾಯಿ ಗೆ ಬಂದ ನಂತರ ಇಲ್ಲಿ ಗೆಳೆಯರ ಜೊತೆ ಸೇರಿ ಕನ್ನಡ ಮತ್ತು ತುಳು ವಿಡಿಯೋ ಆಲ್ಬಂ ಮಾಡಲು ಪ್ರಾರಂಭಿಸಿದೆ. ಫೇಸ್ ಬುಕ್ ಮೂಲಕ ಕೆಲವು ಸಮಾನ ಮನಸ್ಕ ಗೆಳೆಯರ ಪರಿಚಯವೂ ಅಯಿತು. ಹೀಗೆ ಚಲನ ಚಿತ್ರ ನಿರ್ದೇಶಕನಾಗ ಬೇಕೆಂಬ ತುಡಿತ ಪ್ರಾರಂಭವಾಯಿತು.
ದುಬಾಯಿಯಲ್ಲಿ ನಮ್ಮ ತುಳುವೆರ್ ಸಂಘಟನೆಯು ‘ತುಳು ಪರ್ಬ’ ಆಯೋಜಿಸಿದ್ದಾಗ, ನನ್ನ ಗೆಳೆಯರಾದ ಸಾನ್ ಪೂಜಾರಿ, ರಜನೀಶ್ ಅಮೀನ್ ಮತ್ತು ಸಚಿನ್ ಪಡೀಲ್ ಸೇರಿ ಒಂದು ಕಿರು ಚಿತ್ರ ಮಾಡಲು ಯೋಚಿಸಿದ್ದೆವು, ಅದಕ್ಕೆ ಶೋಧನ ಪ್ರಸಾದ್ ಇವರ ಬೆಂಬಲವೂ ಇತ್ತು. ಗೆಳೆಯ ಸಾನ್ ಪೂಜಾರಿ ಇವರ ಒತ್ತಾಸೆಯೇ, ಕಿರು ಚಿತ್ರದ ಯೋಜನೆ ಪೂರ್ಣ ಪ್ರಮಾಣದ ಚಲನ ಚಿತ್ರ ಮಾಡಲು ಪ್ರೇರೇಪಿಸಿತು. ಹಾಗೆ ನಿರೆಲ್ ಸಿದ್ಧವಾಯಿತು ಎನ್ನುವುದು ರಂಜೀತ್ ಅವರ ಮಾತು. ಟೋಟಲಿ ತುಳುವಿನಲ್ಲೂ ಮೊದಲ ಬಾರಿಗೆ ಬಿಗ್ ಬಜೆಟ್ ಚಿತ್ರದ ಜತೆಯಲ್ಲಿ ದುಬಾಯಿ ಮಾರುಕಟ್ಟೆಯಲ್ಲೂ ತುಳು ಭಾಷೆಯೊಂದು ಲಗ್ಗೆ ಹಾಕಿದೆ ಎನ್ನುವ ಹೆಮ್ಮೆ ಕೂಡ ಬಗಲಿಗೆ ನಿಂತಿದೆ.
ಕೋಟ್ ಕಾರ್ನರ್
‘ನಿರೆಲ್‌ನ ಫಲಿತಾಂಶದ ಬಗ್ಗೆ ತುಂಬಾ ಆತ್ಮ ವಿಶ್ವಾಸ ಇದೆ. ತುಳುವರು ಗುಣಮಟ್ಟಕ್ಕೆ ಯಾವುತ್ತೂ ಬೆಲೆ ಕೊಡುತ್ತಾರೆ. ಪ್ರಾಮಾಣಿಕರಾಗಿ ಈ ಚಿತ್ರ ಮಾಡಿದ್ದೇವೆ. ಈ ಚಿತ್ರದ ಫಲಿತಾಂಶ ಚಿತ್ರರಂಗದಲ್ಲಿ ಬದಲಾವಣೆಗೆ ನಾಂದಿಯಾಗುತ್ತದೆ ಎಂದು ನಂಬಿಕೆ ಇದೆ’
- ರಂಜೀತ್ ಬಜಪೆ, ನಿರೆಲ್ ಚಿತ್ರದ ನಿರ್ದೇಶಕ.
............
ಕೋಸ್ಟಲ್‌ವುಡ್‌ನಲ್ಲಿ ‘ಹುಲಿ’ ಓಡಾಟ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾದ ಹಿಸ್ಟರಿ ಪುಟದಲ್ಲಿ ಇದು ಮೊದಲ ಪ್ರಯತ್ನ ಎನ್ನುವುದು ಸಿನಿಮಾ ಗಲ್ಲಿಯಲ್ಲಿ ಓಡಾಡುತ್ತಿರುವ ಪ್ರತಿಯೊಬ್ಬರು ಹೇಳುವ ಮಾತು. ಯಾಕ್ ಅಂತೀರಾ ‘ಹುಲಿ’ಯ ಕತೆಯನ್ನೇ ಇಟ್ಟುಕೊಂಡು ತುಳುವಿನಲ್ಲಿ ಚಿತ್ರವೊಂದು ಹೊರಬರುತ್ತಿದೆ. ಕೋಸ್ಟಲ್‌ವುಡ್ ಸಿನಿಮಾ ಫೀಲ್ಡ್‌ನಲ್ಲಿ ಇಷ್ಟರ ವರೆಗೆ ಬರೀ ಪ್ರೇಮಕತೆ, ಕೌಟುಂಬಿಕ ವಿಚಾರ ಹಾಗೂ ನಾಟಕಗಳ ಕತೆಯನ್ನು ಮೂಲವಾಗಿಟ್ಟುಕೊಂಡು ಚಿತ್ರಗಳು ಹೊರ ಬರುತ್ತಿತ್ತು. ಆದರೆ ಕೋಸ್ಟಲ್ ವುಡ್‌ನಲ್ಲಿ ‘ರೌಡಿಸಂ’ಗೆ ಮುನ್ನುಡಿ ಬರೆದ ಚಿತ್ರವೊಂದು ತೆರೆಗೆ ಬರುವುದು ಅಪರೂಪ.
ಯುವ ನಿರ್ದೇಶಕ ಭರತ್‌ಕೃಷ್ಣ ನಿರ್ದೇಶನದ‘ ಬರ್ಕೆ’ ಸಿನಿಮಾ ಎಲ್ಲವೂ ರೌಡಿಸಂ ಕಥಾ ಹಂದರವನ್ನು ಇಟ್ಟುಕೊಂಡಿರುವ ಚಿತ್ರ. ಮಂಗಳೂರಿನ ‘ಬರ್ಕೆ’ ಎನ್ನುವ ಪ್ರದೇಶ ಈಗಾಗಲೇ ಹುಲಿಗಳಿಗೆ ಖ್ಯಾತಿ ಗಳಿಸಿತ್ತು. ನವರಾತ್ರಿಯ ಸಮಯದಲ್ಲಿ‘ ಬರ್ಕೆ’ಯಲ್ಲಿ ನಾನಾ ಹುಲಿ ವೇಷಧಾರಿಗಳು ತಂಡ ಕಟ್ಟಿಕೊಂಡು ಕರಾವಳಿಯ ಸುತ್ತಮುತ್ತ ಹುಲಿ ಕುಣಿತ ಮಾಮಾಲಿಯಾಗಿತ್ತು.
ಇದೇ ಒಂದೇ ಪಾಯಿಂಟ್ ಇಟ್ಟುಕೊಂಡು ಭರತ್‌ಕೃಷ್ಣ ಹುಲಿಗಳ ಜತೆಯಲ್ಲಿ ಮಂಗಳೂರು ಭೂಗತ ಲೋಕವನ್ನು ಕೂಡ ಟಚ್ ಮಾಡಿದ್ದಾರೆ. ಟೋಟಲಿ ಇಡೀ ಚಿತ್ರದಲ್ಲಿ ಯುವಜನತೆ ಯಾವ ರೀತಿಯಲ್ಲಿ ಭೂಗತ ಲೋಕವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದರ ಜತೆಯಲ್ಲಿ ಚಿತ್ರದ ತುಂಬಾ ಸ್ಪೆಸ್ಪನ್ಸ್ ಹಾಗೂ ಲೋಕಲ್ ಭಾಷೆಯಲ್ಲಿ ಮುದ ನೀಡುವ ಡೈಲಾಗ್‌ಗಳು ಈ ಚಿತ್ರವನ್ನು ಮತ್ತಷ್ಟೂ ಗರಿಬಿಚ್ಚುವಂತೆ ಮಾಡಿದೆ.
ಕರಾವಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಚಿತ್ರೀಕರಿಸಲಾಗಿರುವ ‘ಬರ್ಕೆ’ ಫೆ.೧೪ರಂದು ಕರಾವಳಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಬರ್ಕೆ ಚಿತ್ರದಲ್ಲಿ ಕರಾವಳಿಯ ಹೊಸ ಪ್ರತಿಭೆಗಳಿಗೆ ಮೊದಲ ಮಣೆ ನೀಡಲಾಗಿದೆ. ಈಗಾಗಲೇ ಹತ್ತಾರು ಡಾಕ್ಯುಮೆಂಟರಿಗಳಲ್ಲಿ ಹೆಸರು ಉಳಿಸಿಕೊಂಡ ಭರತ್‌ಕೃಷ್ಣ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಬರುತ್ತಿದ್ದಾರೆ.
ಕೋಟ್ ಕಾರ್ನರ್:
‘ ಇದೊಂದು ಹೊಸ ಪ್ರಯತ್ನ. ವಿನೂತನ ರೀತಿಯ ಸಂಭಾಷಣೆ ಜತೆಗೆ ಡೈಲಾಗ್ ಡೆಲಿವರಿ ಚಿತ್ರದ ಮುಖ್ಯ ಪ್ಲಸ್ ಪಾಯಿಂಟ್ ಎನ್ನಬಹುದು. ಅದಕ್ಕೂ ಮುಖ್ಯವಾಗಿ ಕರಾವಳಿಯ ಸಿನಿಮಾ ಇತಿಹಾಸದಲ್ಲಿ ಯಾರು ಕೂಡ ಮಂಗಳೂರು ಭೂಗತ ಲೋಕವನ್ನು ಟಚ್ ಮಾಡಿರಲಿಲ್ಲ. ಈ ಚಿತ್ರದ ಮೂಲಕ ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಹುಲಿಗಳ ಕುರಿತು ಹೇಳಲಾಗಿದೆ. ಅದಕ್ಕೂ ಮುಖ್ಯವಾಗಿ ರೌಡಿಸಂನ ಕರಾಳ ಮುಖಗಳು ಚಿತ್ರದ ಮೂಲಕ ಅನಾವರಣಗೊಳ್ಳಲಿದೆ.’
- ಭರತ್ ಕೃಷ್ಣ, ಚಿತ್ರದ ನಿರ್ದೇಶಕರು.

Friday, February 7, 2014
ಕುಡ್ಲದ ಕಡಲತೀರಕ್ಕೆ ನಟರ ಠಿಕಾಣಿ !
* ಸ್ಟೀವನ್ ರೇಗೊ, ದಾರಂದಕುಕ್ಕು
ಒಂದೆಡೆ ಕೋಸ್ಟಲ್‌ವುಡ್ ಸಿನಿಮಾ ನಗರಿ ಗರಿ ಬಿಚ್ಚಿಕೊಳ್ಳುತ್ತಿದ್ದಂತೆ ಮತ್ತೊಂದು ಕಡೆ ಕರಾವಳಿ ಪ್ರವಾಸಿ ತಾಣಗಳು ಇತರ ಭಾಷೆಗಳ ಸಿನಿಮಾ ಲೋಕದ ಮಂದಿ ಕಣ್ಣು ಹಾಕಿ ಕೂತಿದ್ದಾರೆ ಎನ್ನುವ ಮಾಹಿತಿ ಕುಡ್ಲದಲ್ಲಿ ಕಾಣ ಸಿಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕನ್ನಡದ ಸಿನಿಮಾ ಮಂದಿಯ ಜತೆಗೆ ಮಲಯಾಳಂ ಸಿನಿಮಾ ನಿರ್ದೇಶಕರು ಕೂಡ ಕರಾವಳಿಯ ಪ್ರವಾಸಿ ತಾಣಗಳು ಮೆಚ್ಚುಗೆಯಾಗುತ್ತಿದೆ.
ಕಳೆದ ಒಂದು ವಾರದಿಂದ ಮಲಯಾಳಂ ನಟ ಮೋಹನ್ ಲಾಲ್ ತನ್ನ ಚಿತ್ರವೊಂದಕ್ಕೆ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಬೆವರು ಇಳಿಸಿಕೊಳ್ಳುತ್ತಿದ್ದಾರೆ. ಕೇರಳದ ಬಾಣಸಿಗನ ಕತೆಯನ್ನು ಆಧರಿಸಿಕೊಂಡು ಬರುತ್ತಿರುವ ‘ರಸಂ’ ಚಿತ್ರಕ್ಕಾಗಿ ನಿರ್ದೇಶಕ ರಾಜೀವ್ ನಾಥ್ ಜತೆಗೆ ಮೋಹನ್ ಲಾಲ್ ಕರಾವಳಿಯಲ್ಲಿ ಓಡಾಡುತ್ತಿದ್ದಾರೆ. ಮತ್ತೊಂದೆಡೆಯಲ್ಲಿ ಮಮ್ಮುಟ್ಟಿ ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ‘ ಮಂಗ್ಲೀಸ್’ ಚಿತ್ರಕ್ಕೆ ಕರಾವಳಿಯ ತಾಣವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
‘ಮಂಗ್ಲೀಸ್’ ಚಿತ್ರದಲ್ಲಿ ನಟ ಮಮ್ಮುಟ್ಟಿ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಚಿತ್ರತಂಡ ಕರಾವಳಿಯ ಮೀನುಗಾರಿಕೆ ಪ್ರದೇಶಗಳಲ್ಲಿ ಕ್ಯಾಮೆರಾ ಹೊಂದಿಸಿಕೊಳ್ಳಲು ವರ್ಕ್ ಔಟ್ ಮಾಡಿಕೊಳ್ಳುತ್ತಿದೆ. ‘ಮಂಗ್ಲೀಸ್’ ಚಿತ್ರವನ್ನು ಮಲಯಾಳಂನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಸಲಾಂ ಬಾಪು ಮಾಡುತ್ತಿದ್ದಾರೆ. ಕರಾವಳಿಯ ಮೀನುಗಾರಿಕೆ ಹಾಗೂ ಬೀಚ್‌ಗಳಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ನಡೆಯಲಿದೆ.
ಇದರ ಜತೆಯಲ್ಲಿ ಕಳೆದ ವರ್ಷ ಹಿಂದಿಯಲ್ಲಿ ಬಂದ ‘ಡೇವಿಡ್’ ಚಿತ್ರದ ಬಹುಭಾಗ ಕರಾವಳಿಯಲ್ಲಿ ಚಿತ್ರೀಕರಣವಾಗಿತ್ತು. ಚಿತ್ರದ ನಾಯಕ ನಟ ಚಿಯನ್ ವಿಕ್ರಂ ಹಾಗೂ ಬಾಲಿವುಡ್ ನಟಿ ತಬು ಕರಾವಳಿ ತೀರದಲ್ಲಿ ಹದಿನೈದು ದಿನಗಳ ಕಾಲ ತಂಗಿದ್ದರು. ಕನ್ನಡದ ೧೫ ಚಿತ್ರಗಳಲ್ಲಿ ೨ರಿಂದ ೩ ಚಿತ್ರಗಳು ಕರಾವಳಿಯ ಪ್ರವಾಸಿ ತಾಣಗಳನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ.
ಕರಾವಳಿ ಪ್ರವಾಸಿ ತಾಣ ಯಾಕೆ ಇಷ್ಟ:
ಕರಾವಳಿಯಲ್ಲಿರುವ ಪ್ರವಾಸಿ ತಾಣಗಳು ಸಿನಿಮಾ ಮಂದಿಗೆ ಬೇಕಾದ ರೀತಿಯಲ್ಲಿ ಸಿಗುತ್ತದೆ. ಚಿತ್ರೀಕರಣಕ್ಕೆ ಜಾಸ್ತಿ ಒದ್ದಾಟ ನಡೆಸುವ ಅನಿವಾರ್ಯತೆ ಇರೋದಿಲ್ಲ. ಎಲ್ಲವೂ ರೆಡಿಮೇಡ್ ಆಗಿ ಕರಾವಳಿಯಲ್ಲಿ ಸಿಗುತ್ತದೆ ಎನ್ನುವುದು ‘ಚೆಲ್ಲಾಪಿಳ್ಳಿ’ ಚಿತ್ರದ ನಿರ್ದೇಶಕ ಸಾಯಿಕೃಷ್ಣ ಹೇಳುವ ಮಾತು.
ಅವರು ಈ ಹಿಂದೆ ‘ಚೆಲ್ಲಾಪಿಳ್ಳಿ’ಯ ಮುಕ್ಕಾಲು ಭಾಗವನ್ನು ಕರಾವಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದರು. ಕರಾವಳಿಯ ಬಹುಮುಖ್ಯ ರಂಗಭೂಮಿ ಕಲಾವಿದರನ್ನೇ ಬಳಸಿಕೊಂಡು ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದಿದ್ದರು.
‘ಕರಾವಳಿ ಪ್ರವಾಸಿ ತಾಣಗಳು ಎಲ್ಲರಿಗೂ ಇಷ್ಟವಾಗುತ್ತದೆ. ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡಬೇಕಾದರೆ ಕರಾವಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಗಾಟ, ವಸತಿ, ಚಿತ್ರೀಕರಣಕ್ಕೆ ಬೇಕಾದ ವಸ್ತುಗಳು ಶೀಘ್ರದಲ್ಲಿ ಲಭ್ಯವಾಗುವ ತಾಣ ಎಂದೇ ಪರಿಗಣಿಸಬಹುದು ಎನ್ನುತ್ತಾರೆ ಖ್ಯಾತ ಕ್ಯಾಮೆರಾಮನ್ ರಾಮದಾಸ್ ಸಸಿಹಿತ್ಲು ಅವರು. ಈಗಾಗಲೇ ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ದುಡಿದಿರುವ ರಾಮದಾಸ್ ತಮ್ಮಲ್ಲಿಗೆ ಬರುವ ಚಿತ್ರ ನಿರ್ದೇಶಕರಿಗೆ ಕರಾವಳಿಯ ಪ್ರವಾಸಿ ತಾಣಗಳನ್ನೇ ಚಿತ್ರಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ೪೦ಕ್ಕೂ ಅಧಿಕ ಚಿತ್ರಗಳು ಕರಾವಳಿಯ ನಾನಾ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣವಾಗುತ್ತಿದೆ. ಇದು ಕರಾವಳಿಯ ಗತ್ತನ್ನು ಎತ್ತಿ ಹಿಡಿಯುತ್ತಿದೆ.


Thursday, February 6, 2014
ಕುಡ್ಲದ ಬೆಡಗಿಗೆ ಲಾಲ್ ರಸಂ
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್ ವುಡ್ ಸಿನಿಮಾ ನಗರಿಗೆ ಸಿಹಿ ಸುದ್ದಿಯೊಂದು ರವಾನೆಯಾಗಿದೆ. ಅದೇನಪ್ಪಾ ಅಂದರೆ ಕೋಸ್ಟಲ್‌ವುಡ್ ಸಿನಿಮಾ ಇತಿಹಾಸದಲ್ಲಿಯೇ ಅತೀ ಹೆಚ್ಚು ಬಜೆಟ್ ಹೊತ್ತುಕೊಂಡು ಬರುತ್ತಿರುವ ದುಬಾಯಿಯಲ್ಲಿ ನಿರ್ಮಾಣವಾದ ‘ನಿರೆಲ್’(ನೆರಳು) ಚಿತ್ರದ ಲೀಡ್ ನಾಯಕಿ ವರುಣ ಶೆಟ್ಟಿಗೆ ಮಲಯಾಳಂ ಭಾಷೆಯಿಂದ ಆಫರ್ ಬಂದಿದೆ. ಅದು ಕೂಡ ಮಲಯಾಳಂನ ಸ್ಟಾರ್ ನಟರಾದ ಮೋಹನ್ ಲಾಲ್ ಹಾಗೂ ಇಂದ್ರಜೀತ್ ನಟಿಸುತ್ತಿರುವ ‘ರಸಂ’ ಚಿತ್ರದಲ್ಲಿ ವರುಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೇರಳದ ಬಾಣಸಿಗರೊಬ್ಬರ ಕತೆಯನ್ನು ಹೊತ್ತುಕೊಂಡು ಬರುತ್ತಿರುವ ‘ರಸಂ’ಗಾಗಿ ಕೇರಳ ಸೇರಿದಂತೆ ನಾನಾ ಕಡೆ ಹೊಸ ನಾಯಕಿಗೆ ಶೋಧ ಕಾರ‍್ಯ ಆರಂಭವಾಗಿತ್ತು. ಅದರಲ್ಲೂ ಚಿತ್ರದ ಕತೆಗೆ ಒಪ್ಪುವಂತಹ ನಾಯಕಿಯ ಅಗತ್ಯ ಇದೆ ಎಂದುಕೊಂಡು ರಸಂ ಚಿತ್ರದ ನಿರ್ದೇಶಕ ರಾಜೀವ್ ನಾಥ್ ಕೊನೆಗೆ ದುಬಾಯಿ ಕಡೆಗೆ ಕಣ್ಣು ಹಾಕಿದರು. ಇದೇ ಸಮಯದಲ್ಲಿ ‘ನಿರೆಲ್’ ಚಿತ್ರದಿಂದ ಕ್ಲಿಕ್ ಆಗಿರುವ ಹುಡುಗಿ ವರುಣ ಕಣ್ಣಿಗೆ ಬಿದ್ದರು ಎನ್ನುತ್ತಿದ್ದಾರೆ ರಸಂ ಚಿತ್ರತಂಡ.
‘ರಸಂ’ ಚಿತ್ರದಲ್ಲಿ ವರುಣ ಶೆಟ್ಟಿ ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದಾರೆ.ದುಬಾಯಿಯಲ್ಲಿ ನೃತ್ಯಗಾರ್ತಿಯಾಗಿ ಚಿತ್ರದೊಳಗೆ ವರುಣ ಎಂಟ್ರಿ ಪಡೆಯುತ್ತಾರೆ. ಅವರು ದೇವನ್(ನಡುಮುಡಿ ವೇಣು) ಅವರ ಪುತ್ರಿಯಾಗಿ ಇಂದ್ರಜೀತ್ ಅವರನ್ನು ವಿವಾಹವಾಗುತ್ತಾರೆ. ದೇವನ್ ಅವರ ಸ್ನೇಹಿತರಾಗಿ ಮೋಹನ್ ಲಾಲ್ ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರದ ನಿರ್ದೇಶಕ ರಾಜೀವ್ ನಾಥ್ ಹೇಳುತ್ತಾರೆ. ಈಗಾಗಲೇ ಚಿತ್ರದ ಮುಹೂರ್ತ ನಡೆದು ತಿರುವನಂತಪುರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಹಾಡಿಗೆ ಸರಿಸುಮಾರು ೨೫೦ ನೃತ್ಯಗಾರ್ತಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಬಹುಭಾಗ ಕತಾರ್, ದುಬಾಯಿ ಹಾಗೂ ಕೇರಳದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುವುದು ಚಿತ್ರತಂಡದ ಮಾತು.
ಅಂದಹಾಗೆ ವರುಣ ಶೆಟ್ಟಿ ಮೂಲತಃ ಪಡುಬಿದ್ರಿಯ ಹುಡುಗಿ. ತೀರಾ ಇತ್ತೀಚೆಗೆ ಎಂಬಿಎ ಶಿಕ್ಷಣ ಮುಗಿಸಿಕೊಂಡು ದುಬಾಯಿಯಲ್ಲಿ ಹೆತ್ತವರ ಜತೆಗೆ ವಾಸವಾಗಿದ್ದಾರೆ.ಅದರಲ್ಲೂ ಸಿನಿಮಾದ ಕುರಿತು ಅತೀವ ಆಸಕ್ತಿ ಹೊತ್ತುಕೊಂಡಿರುವ ವರುಣ ಫ್ಯಾಶನ್ ಲೋಕದಲ್ಲೂ ಸಾಕಷ್ಟು ಗುರುತಿಸಿಕೊಂಡಿದ್ದಾರೆ.ಓದುವುದರ ಜತೆಯಲ್ಲಿ ಶಾಪಿಂಗ್ ಮಾಡುವುದು ಎಂದರೆ ವರುಣ ಶೆಟ್ಟಿಗೆ ಹೆಚ್ಚು ಇಷ್ಟ.
ನಿರೆಲ್‌ನಲ್ಲಿ ಬಂತು ಅವಕಾಶ:
ದುಬಾಯಿಯಲ್ಲಿ ಚಿತ್ರೀಕರಣಗೊಂಡು ಫೆ.೧೪ರಂದು ಪ್ರೇಮಿಗಳ ದಿನದಂದು ದುಬಾಯಿಯಲ್ಲೇ ತೆರೆಗೆ ಬರುತ್ತಿರುವ ‘ನಿರೆಲ್’ ಚಿತ್ರದಲ್ಲಿ ವರುಣ ಶೆಟ್ಟಿಗೆ ಬಹುಮುಖ್ಯವಾದ ಪಾತ್ರವಿದೆ. ಗೆಳೆತನ ಹಾಗೂ ಸಂಬಂಧಗಳ ಸುತ್ತ ನಡೆಯುವ ನಿರೆಲ್ ಚಿತ್ರವನ್ನು ಮಂಗಳೂರು ಮೂಲದ ರಂಜೀತ್ ಬಜಪೆ ನಿರ್ದೇಶನ ಮಾಡುತ್ತಿದ್ದಾರೆ. ಕೋಸ್ಟಲ್‌ವುಡ್ ಸಿನಿಮಾ ನಗರಿಯಲ್ಲೇ ‘ನಿರೆಲ್’ ಚಿತ್ರ ಬಹು ವೆಚ್ಚದಾಗಿದೆ ಎನ್ನುವುದು ನಿರ್ಮಾಪಕರ ಮಾತು. ಚಿತ್ರದ ಮುಕ್ಕಾಲು ಭಾಗ ದುಬಾಯಿಯಲ್ಲಿ ಚಿತ್ರೀಕರಣಗೊಂಡಿರುವ ನಿರೆಲ್‌ನಲ್ಲಿ ಕನ್ನಡದ ನಟ ರಮೇಶ್ ಅರವಿಂದ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
Wednesday, February 5, 2014
ಸುಮನ್ ಗೆ ಬಾಲಿವುಡ್ ಟಿಕೆಟ್
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್‌ನಲ್ಲಿ ‘ಗಬ್ಬರ್’ಅಬ್ಬರಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗುತ್ತಿದೆ. ಈಗಾಗಲೇ ಮೂರು ಭಾಷೆಯಲ್ಲಿ ಭರ್ಜರಿಯಾಗಿ ಖಾತೆ ತೆರೆದ ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಕ್ರಿಶ್ ಬಾಲಿವುಡ್ ಅಂಗಳದಲ್ಲಿ ತಂದು ಕೂರಿಸಿದ್ದಾರೆ. ಅಂದಹಾಗೆ ಯಾವುದು ಈ ಚಿತ್ರ ಎನ್ನುವ ಡೌಟ್ ಬಂದರೆ ೨೦೦೨ರಲ್ಲಿ ತಮಿಳಿನಲ್ಲಿ ವಿಜಯಕಾಂತ್ ನಟಿಸಿದ ‘ರಾಮಣ್ಣ’ ಚಿತ್ರವೇ ಹಿಂದಿಯಲ್ಲಿ ಬರುತ್ತಿರುವ ‘ಗಬ್ಬರ್’ಎನ್ನುವುದು ಮಾಹಿತಿ. ಈ ಚಿತ್ರದ ಮೂಲಕ ಪಂಚಭಾಷೆ ತಾರೆ ಸುಮನ್ ಬಾಲಿವುಡ್ ಅಂಗಳಕ್ಕೆ ಅಧಿಕೃತವಾಗಿ ಟಿಕೆಟ್ ಪಡೆದುಕೊಂಡಿದ್ದಾರೆ.
ಈ ಹಿಂದೆ ಈ ಚಿತ್ರಕ್ಕೆ ಖ್ಯಾತ ನಟ ಪ್ರಕಾಶ್ ರಾಜ್ ಹಾಗೂ ಸೋನು ಸೂದ್ ಆಯ್ಕೆಯಾಗಿದ್ದರು. ತೆಲುಗಿನ ಚಿತ್ರವೊಂದನ್ನು ನೋಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸುಮನ್ ತಮ್ಮ ಚಿತ್ರದಲ್ಲಿ ನಟಿಸಬೇಕು ಎಂದು ಪಟ್ಟು ಹಿಡಿದರು. ಇದೇ ಕಾರಣದಿಂದ ಸುಮನ್ ‘ಗಬ್ಬರ್’ ಚಿತ್ರ ತಂಡದಲ್ಲಿ ಸೇರುವ ಚಾನ್ಸ್ ಗಿಟ್ಟಿಸಿಕೊಂಡರು ಎನ್ನುತ್ತದೆ ಚಿತ್ರದ ತಂಡ. ‘ಗಬ್ಬರ್’ ಚಿತ್ರದಲ್ಲಿ ಅಕ್ಷಯ್ ಕುಮಾರ್, ಶ್ರುತಿಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸುಮನ್ ಚಿತ್ರದಲ್ಲಿ ನೆಗೆಟೀವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಕರೀನಾ ಕಪೂರ್ ಚಿತ್ರದ ಮುಖ್ಯ ಭಾಗವೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಸಿಗುತ್ತಾರೆ.
೭೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಗಬ್ಬರ್’ ಚಿತ್ರ ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಮಾಡಬೇಕಾಗಿತ್ತು. ಆದರೆ ಮುರುಗದಾಸ್ ತನ್ನದೇ ಚಿತ್ರವೊಂದರಲ್ಲಿ ಬ್ಯುಸಿಯಾಗಿರುವ ಕಾರಣ ತೆಲುಗಿನ ನಿರ್ದೇಶಕ ಕ್ರಿಶ್ ಹೆಗಲಿಗೆ ಜವಾಬ್ದಾರಿ ಬಂದು ಬಿದ್ದಿದೆ. ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಣ ಹಾಕುವ ಕೆಲಸ ಹೊತ್ತುಕೊಂಡಿದ್ದಾರೆ.
ನಟ ಸುಮನ್ ‘ಗಬ್ಬರ್’ ಕುರಿತು ಹೇಳುವುದು ಹೀಗೆ: ಗಬ್ಬರ್ ಚಿತ್ರದಲ್ಲಿ ಒಳ್ಳೆಯ ಪಾತ್ರ. ಮುಖ್ಯ ಪಾತ್ರದ ಜತೆಯಲ್ಲಿಯೇ ನನ್ನ ಪಾತ್ರ ಸಾಗುತ್ತದೆ. ನಿರ್ದೇಶಕ ಕ್ರಿಶ್ ಜತೆಗೆ ಈ ಹಿಂದೆ ತೆಲುಗಿನ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದೆ. ನನ್ನ ಗೆಳೆಯನ ವಿವಾಹದ ದಿನವೇ ನನಗೆ ಈ ಅವಕಾಶ ಬಂದಿರುವುದು ನನಗೆ ಅತೀವ ಸಂತೋಷವಾಗಿದೆ.
ಅಂದಹಾಗೆ ನಟ ಸುಮನ್ ಬಾಲಿವುಡ್ ಚಿತ್ರದ ಜತೆ ತೆಲುಗಿನ ಬಹುಕೋಟಿ ವೆಚ್ಚದ ‘ರುದ್ರಮ್ಮ ದೇವಿ’, ನಟ ಬಾಲಕೃಷ್ಣ ಜತೆಗೆ ‘ಲೆಜೇಂಡ್’ ಹಾಗೂ ನಟ ನಾಗಚೈತನ್ಯ ಜತೆಯಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಮಿಳು ಹಾಗೂ ಕನ್ನಡ ಚಿತ್ರಕ್ಕೆ ಸುಮನ್ ಬುಕ್ ಆಗಿದ್ದಾರೆ. ಟೋಟಲಿ ಸುಮನ್ ಪಾಲಿಗೆ ಈ ವರ್ಷ ವರವಾಗುವ ಸಾಧ್ಯತೆಗಳೇ ಜಾಸ್ತಿ.
Tuesday, February 4, 2014
ಕೋಸ್ಟಲ್‌ವುಡ್‌ನಲ್ಲಿ ಮನೋಹರ ಆಟಕ್ಕೆ ಬ್ರೇಕ್
ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ನಗರಿ ಏಕ್‌ದಂ ಕಿಕ್ ಏರಿಸಿಕೊಳ್ಳುತ್ತಿದೆ. ಕಳೆದ ವರ್ಷದ ಕೊನೆಯಲ್ಲಿಯೇ ಸರಿಸುಮಾರು ೪೦ಕ್ಕೂ ಅಧಿಕ ಸಿನಿಮಾಗಳು ನೋಂದಣಿಯಾಗಿತ್ತು.ಈ ಬಾರಿ ಮತ್ತೆ ಹೊಸ ಸಿನಿಮಾಗಳು ನೋಂದಣಿಗಾಗಿ ಕಾದು ಕೂತಿದೆ. ಕೋಸ್ಟಲ್‌ವುಡ್‌ನಲ್ಲಿ ಒಳ್ಳೆಯ ಪೈಪೋಟಿಯ ಜತೆಗೆ ಗುಣ ಮಟ್ಟದ ಚಿತ್ರಗಳು ಬರುವ ಸಾಧ್ಯತೆಗಳು ಈ ಬಾರಿ ದಟ್ಟವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ತಿಂಗಳಿಗೆ ಒಂದರಂತೆ ತುಳು ಸಿನಿಮಾಗಳು ಥಿಯೇಟರ್‌ನ ಮುಂದೆ ಬರಲು ದೊಂಬಾಲು ಬಿದ್ದಿದೆ. ಇದರ ನಡುವೆ ಕೋಸ್ಟಲ್‌ವುಡ್‌ನಲ್ಲಿ ಮತ್ತೊಂದು ಬಿರುಗಾಳಿಯೊಂದು ಎದ್ದು ಕೂತಿದೆ.
ಕನ್ನಡದ ಸಂಗೀತ ನಿರ್ದೇಶಕ ವಿ.ಮನೋಹರ್ ತುಳು ಚಿತ್ರ ‘ಚಾಳಿಪೋಲಿ’ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇಡೀ ಚಿತ್ರ ತಂಡವೇ ವಿ.ಮನೋಹರ್ ತುಳು ಚಿತ್ರಕ್ಕೆ ಬರುತ್ತಾರೆ ಎನ್ನುವ ಸುದ್ದಿಯನ್ನು ಸುನಾಮಿಯಂತೆ ಎಬ್ಬಿಸಿ ಕೂತಿದ್ದರು. ಚಿತ್ರದ ಕತೆಯಿಂದ ಹಿಡಿದು ಚಿತ್ರ ತಾರಾಗಣ ಎಲ್ಲವನ್ನು ಆಯ್ಕೆ ಮಾಡುವ ವರೆಗೂ ವಿ. ಮನೋಹರ್ ನಿರ್ದೇಶಕರಾಗಿಯೇ ಉಳಿದು ಬಿಟ್ಟಿದ್ದರು. ಯಾಕೋ ‘ಚಾಳಿಪೋಲಿ’ ಚಿತ್ರದ ಚಿತ್ರೀಕರಣ ಆರಂಭ ಮಾಡಬೇಕು ಎನ್ನುವಷ್ಟರಲ್ಲಿ ವಿ.ಮನೋಹರ್ ಅವರ ನಿರ್ದೇಶಕನ ಸ್ಥಾನಕ್ಕೆ ಸಂಕಟ ಬಂದಿದೆ. ಅವರ ಜಾಗಕ್ಕೆ ಈಗ ಹೊಸ ಹೆಸರು ಕೇಳಿ ಬಂದಿದೆ.
‘ಚಾಳಿಪೋಲಿ’ಯ ಕತೆ ಬರೆದವರಲ್ಲಿ ಒಬ್ಬರಾದ ಕಾವೂರಿನ ವೀರೇಂದ್ರ ಶೆಟ್ಟಿ. ಚಿತ್ರದ ಸೂತ್ರಧಾರನಾಗುವ ಚಾನ್ಸ್ ಸಿಕ್ಕಿದೆ ಎನ್ನುವುದು ಚಿತ್ರ ತಂಡದ ಗುಪ್ತ ಮಾಹಿತಿ. ಈ ಹಿಂದೆ ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ವಿ.ಮನೋಹರ್ ಬರೀ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಹಾಗೂ ಸಂಗೀತ ನಿರ್ದೇಶಕರಾಗಿ ಉಳಿದುಬಿಟ್ಟಿದ್ದಾರೆ. ಕನ್ನಡದ ನಿರ್ದೇಶಕರೊಬ್ಬರು ತುಳು ಸಿನಿಮಾಕ್ಕೆ ಬರುವ ಕ್ಷಣಕ್ಕೆ ಮುಹೂರ್ತ ಕೂಡಿಬಂದಿಲ್ಲ ಎನ್ನುವುದು ಈ ಮೂಲಕ ಸ್ವಷ್ಟವಾಗುತ್ತಿದೆ.
ಚಾಳಿಪೋಲಿಯಲ್ಲಿ ಕಿರಿಕ್ ಆಯಿತಾ..?
ತುಳು ಸಿನಿಮಾಗಳು ಒಂದರ ಹಿಂದೆ ಒಂದರಂತೆ ನೋಂದಣಿಯಾಗುತ್ತಿದ್ದಾಗ ‘ಚಾಳಿಪೋಲಿ’ ಎನ್ನುವ ಟೈಟಲ್ ಕಾರ್ಡ್ ಏಕ್‌ದಂ ರಿಜಿಸ್ಟ್ರಾರ್ ಆಯಿತು. ಚಿತ್ರದಲ್ಲಿ ಹೊಸ ಕಲಾವಿದರು ಹಾಗೂ ಹೊಸ ಕತೆ ಇಟ್ಟುಕೊಂಡೇ ಸಿನಿಮಾ ಮಾಡಲಾಗುತ್ತಿದೆ ಎಂದೇ ಚಿತ್ರದ ನಿರ್ಮಾಪಕರು ಹೇಳಿಕೊಂಡು ಬಂದಿದ್ದರು. ಅದರಂತೆ ಸಿನಿಮಾದ ಕುರಿತು ಸಹಜವಾಗಿಯೇ ಕೋಸ್ಟಲ್‌ವುಡ್‌ನಲ್ಲಿ ನಿರೀಕ್ಷೆಗಳಿತ್ತು. ಚಿತ್ರಕ್ಕೆ ಖ್ಯಾತನಾಮರನ್ನು ಹುಡುಕಿಕೊಂಡು ತಂದುಕೂರಿಸುವ ಕೆಲಸಗಳು ಭರದಿಂದ ನಡೆಯುತ್ತಾ ಸಾಗುತ್ತಿತ್ತು. ಇದೇ ಸಮಯದಲ್ಲಿ ವಿ. ಮನೋಹರ್ ನಿರ್ದೇಶಕರಾಗಿ ಮಾಡುವ ಕೆಲಸ ನಡೆಯಿತು.
ಕನ್ನಡ ಸಂಗೀತ ನಿರ್ದೇಶಕ ವಿ.ಮನೋಹರ್ ಹೇಳುವಂತೆ ‘ ಚಾಳಿಪೋಲಿ ಚಿತ್ರ ತಂಡದ ಜತೆಗೆ ಯಾವುದೇ ಗೊಂದಲಗಳಿಲ್ಲ. ನನಗೆ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋವೊಂದಕ್ಕೆ ಜಡ್ಜ್ ಆಗಿ ಬುಕ್ ಮಾಡಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾನು ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಬೇಕಾಗಿದೆ.ಅದಕ್ಕೂ ಮುಖ್ಯವಾಗಿ ಚಿತ್ರಕ್ಕೆ ನಾನೇ ಸಂಗೀತ ನಿರ್ದೇಶಕ. ಈಗಾಗಲೇ ಹಿನ್ನೆಲೆ ಸಂಗೀತ ನೀಡಿದ್ದೇನೆ. ೫ ಹಾಡುಗಳಿಗೆ ಟ್ಯೂನ್ ಕಳಿಸಿಕೊಟ್ಟಿದ್ದೇನೆ. ತುಳು ಸಿನಿಮಾ ಮಾಡುವಾಗ ಮಂಗಳೂರಿನಲ್ಲೇ ಇರಬೇಕಾಗುತ್ತದೆ. ಚಿತ್ರಕ್ಕೆ ನ್ಯಾಯ ಒದಗಿಸಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ನಾನೇ ನಿರ್ದೇಶಕನ ಸ್ಥಾನದಿಂದ ಕಿತ್ತು ಹಾಕಿ ಎಂದು ನಿರ್ಮಾಪಕರಿಗೆ ಹೇಳಿದ್ದೆ ಅದರಂತೆ ಅವರು ಮಾಡಿದ್ದಾರೆ ಎನ್ನುತ್ತಾರೆ ಅವರು.
ಆದರೆ ಮತ್ತೊಂದು ಮೂಲದ ಪ್ರಕಾರ ‘ಚಾಳಿಪೋಲಿ’ಯಲ್ಲಿ ಮನೋಹರ್ ಮೂಲ ಕತೆಯಲ್ಲಿ ಬದಲಾವಣೆ ಮಾಡುವ ಮೂಲಕ ಚಿತ್ರದ ಬಜೆಟ್ ಏರಿಸಿದ್ದಾರೆ ಎನ್ನುವ ಆಧಾರದಲ್ಲಿ ಚಿತ್ರದ ನಿರ್ದೇಶಕನ ಸ್ಥಾನದಿಂದ ವಂಚಿತನಾಗಬೇಕಾಯಿತು ಎನ್ನುವ ಮಾತು ಕೂಡ ಕೋಸ್ಟಲ್‌ವುಡ್ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ. ಯಾವುದು ಸತ್ಯ ಯಾವುದು ಮಿಥ್ಯ ಎನ್ನುವ ಪ್ರಶ್ನೆ ಮಾತ್ರ ಬಾಕಿ ಉಳಿದಿದೆ.
ತುಳುವಿಗೆ ಬರುತ್ತಾರಾ ಮನೋಹರ್?:
ಮೂಲತಃ ಪುತ್ತೂರಿನ ವಿಟ್ಲ ನಿವಾಸಿಯಾದ ವಿ.ಮನೋಹರ್ ಬೆಳೆದದ್ದು ಎಲ್ಲವೂ ಕನ್ನಡದಲ್ಲಿ ಎನ್ನುವುದು ಚಿತ್ರ ರಸಿಕರಿಗೆ ಗೊತ್ತಿರುವ ವಿಚಾರ. ಆದರೆ ತುಳುವಿನ ಚಿತ್ರಗಳಿಗೆ ಹಾಡು ಬರೆದುಕೊಡುವ ಜತೆಗೆ ಸಂಗೀತ ನೀಡುವ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿರುವ ಮನೋಹರ್ ತುಳು ಚಿತ್ರವನ್ನು ನಿರ್ಮಾಣ, ನಿರ್ದೇಶನ ಮಾಡುವ ಕೆಲಸಕ್ಕೆ ಎಂದಿಗೂ ಕೈ ಹಾಕಿಲ್ಲ. ಈಗ ಬಂದ ಅವಕಾಶವನ್ನು ಕೂಡ ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ. ಈ ಮೂಲಕ ಮನೋಹರ್ ತುಳು ಸಿನಿಮಾಕ್ಕೆ ಬರುವ ವಿಚಾರ ಸಧ್ಯಕ್ಕಂತೂ ಬ್ರೇಕ್ ಬಿದ್ದಿದೆ.

Subscribe to:
Posts (Atom)