Monday, April 7, 2014

ಬಾಲಿವುಡ್ ನಲ್ಲಿ ಮತ್ತೆ ಹೀರೋ ‘ನಿಖಿಲ್’

* ಸ್ಟೀವನ್ ರೇಗೊ, ದಾರಂದಕುಕ್ಕು ಒಂದಲ್ಲ ಎರಡಲ್ಲ ಬರೋಬರಿ ಐದು ಚಿತ್ರಗಳು ಬಾಲಿವುಡ್ ಪಡಸಾಲೆಗೆ ಇಳಿದು ವಾರ ಮುಗಿಯುವುದರೊಳಗೆ ಡಬ್ಬಾ ಪೆಟ್ಟಿಗೆ ಸೇರಿ ಹೋಯಿತು. ಆದರೂ ಸಿನ್ಮಾ ನನ್ನ ಖಯಾಲಿ ಮಾಡಿಯೇ ಸಿದ್ಧ. ಸತತ ಸೋಲು ಗೆಲುವಿನ ಹಾದಿಗೆ ಮುನ್ನುಡಿ ಎಂದುಕೊಂಡು ಈಗಲೂ ಬಾಲಿವುಡ್ ಬಿಡದ ಹುಡುಗ ನಿರ್ದೇಶಕ ನಿಖಿಲ್ ಅಡ್ವಾನಿ. ಈಗ ನಿರ್ದೇಶಕ ಸುಭಾಷ್ ಘಾಯ್ ಅವರ ೧೯೮೩ರ ಬಿಗ್ ಹಿಟ್‘ ಹೀರೋ’ವನ್ನು ಮತ್ತೆ ಹಿರಿತೆರೆಗೆ ತರುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಹಣ ಹಾಕುವವರು ಕೂಡ ಬಾಲಿವುಡ್ ನಟ ಸಲ್ಮಾನ್ ಖಾನ್ ಎನ್ನೋದು ವಿಶೇಷ. ಕಾರಣ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಕಮರ್ಷಿಯಲ್ ಚಿತ್ರವೊಂದಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಹಿಂದೆ ಮಕ್ಕಳ ಚಿತ್ರ ‘ಚಿಲ್ಲರ್ ಪಾರ್ಟಿ’ ಹಾಗೂ ಕತ್ರಿನಾ ಕೈಫ್ ಸಹೋದರಿ ಇಸಾಬೆಲ್ಲ ಕೈಫ್‌ಗಾಗಿ ಇಂಗ್ಲೀಷ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಡಾ.ಕ್ಯಾಬಿ ನಂತರ ಈಗ ‘ ಹೀರೋ’ವಿನಲ್ಲಿ ಸಲ್ಮಾನ್ ಖಾನ್ ನಿರ್ಮಾಪಕರಾಗಿ ಕೂರಲಿದ್ದಾರೆ.
ಅಂದಹಾಗೆ ಈ ಹಿಂದಿನ ಘಾಯ್ ಅವರ ‘ಹೀರೋ’ ಚಿತ್ರದಲ್ಲಿ ಜಾಕೀ ಶ್ರಾಫ್ ಪಾತ್ರವನ್ನು ನಿಖಿಲ್ ಚಿತ್ರದಲ್ಲಿ ಸೂರಜ್ ಪಾಂಚೋಲಿ ಮಾಡುತ್ತಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಮಾಡುತ್ತಿದ್ದಾರೆ. ಬಾಲಿವುಡ್ ನಟರಾದ ಗೋವಿಂದ, ವಿನೋದ್ ಖನ್ನಾಹಾಗೂ ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್ ಕೂಡ ಬಣ್ಣ ಹಾಕುವ ಯೋಜನೆ ಇದೆ. ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಟೋಟಲಿ ‘ಹೀರೋ’ ಮತ್ತೆ ಪ್ರೇಕ್ಷಕರ ಮುಂದೆ ಕಮಾಲ್ ಮಾಡಿದರೆ ಬಾಲಿವುಡ್ ಅಂಗಳದಲ್ಲಿ ನಿಖಿಲ್ ಅಡ್ವಾನಿ ಭವಿಷ್ಯ ಶೈನ್ ಆಗುವುದು ಗ್ಯಾರಂಟಿಯಾಗುತ್ತದೆ. ಬಾಲಿವುಡ್‌ನಲ್ಲಿ ಸೋಲುವ ಹುಡುಗ: ನಿಖಿಲ್ ಅಡ್ವಾನಿ ಎಂಬ ಹುಡುಗನ ಕತೆ ಮಾತ್ರ ಎಲ್ಲೂ ಕೇಳಿಸಲು ಸಿಗೋಲ್ಲ. ನಿಖಿಲ್ ಅಡ್ವಾನಿ ನಿಜಕ್ಕೂ ಲಕ್ಕಿಬಾಯ್. ಬಾಲಿವುಡ್ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್‌ನ ಅಡಿಯಲ್ಲಿ ‘ಕುಚ್ ಕುಚ್ ಹೋತಾ ಹೈ’, ‘ಕಬೀ ಕುಷಿ ಕಬೀ ಗಮ್’ನಂತಹ ಚಿತ್ರಗಳಿಗೆ ಸಹ ನಿರ್ದೇಶಕನ ಸ್ಥಾನದಲ್ಲಿ ಕೂತು ಕೆಲಸ ಮಾಡುವ ಅವಕಾಶ ನಿಖಿಲ್‌ಗೆ ಒಳಿದಿತ್ತು. ಆದರೆ ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಬಂದ ‘ಕಲ್ ಹೋ ನಾ ಹೋ’ ತನ್ನ ನಿರ್ದೇಶನದ ಚಿತ್ರ ಬಾಲಿವುಡ್‌ನಲ್ಲಿ ಯಾರ್ರಾ ಬಿರ್ರಿ ಹಿಟ್ ಅನ್ನಿಸಿಕೊಂಡಿದ್ದೆ ತಡ ನಿಖಿಲ್ ಒಂದೇ ಬಾರಿ ಸ್ಟಾರ್ ನಿರ್ದೇಶಕನ ಪಟ್ಟಕ್ಕೆ ಸೂಟೇಬಲ್ ವ್ಯಕ್ತಿ ಅನ್ನಿಸಿಕೊಂಡರು. ಆದರೆ ಯಾಕೋ ಗೊತ್ತಿಲ್ಲ . ನಿಖಿಲ್ ನಂತರ ನಿರ್ದೇಶನ ಮಾಡಿದ ‘ಸಲಾಂ-ಇ- ಈಷ್ಕ್’ ದೊಡ್ಡ ಸ್ಟಾರ್ ನಟರ ದಂಡೇ ಇತ್ತು. ಬರೋಬರಿ ಎರಡು ವಾರಗಳ ಓಟ ಆರಂಭ ಮಾಡುತ್ತಿದ್ದಾಗಲೇ ಥಿಯೇಟರ್‌ಗೆ ಪ್ರೇಕ್ಷಕ ಮಾತ್ರ ಬರಲಿಲ್ಲ ಎಂದುಕೊಂಡು ಚಿತ್ರ ಅಲ್ಲಿಂದ ಥಿಯೇಟರ್ ಮಾಲೀಕರು ಸಿನ್ಮಾವನ್ನು ಎತ್ತಿಬಿಟ್ಟ್ರು. ೨೦೦೯ರಲ್ಲಿ ಮತ್ತೊಂದು ಪ್ರಯತ್ನ ಮಾಡಿಬಿಡೋಣ ಎಂದುಕೊಂಡು ಅಕ್ಷಯ್ ಕುಮಾರ್ ಹಾಗೂ ದೀಪಿಕಾ ಪಡುಕೋಣೆ ಇರುವ ‘ಚಾಂದಿನಿ ಚೌಕ್ ಟು ಚೈನಾ’ ಚಿತ್ರ ನಿರ್ದೇಶನ ಮಾಡಿಬಿಟ್ಟ್ರು ನಿಖಿಲ್ ಅಲ್ಲೂ ಗೆಲುವು ಕೈ ಕೊಟ್ಟಿತ್ತು. ಎರಡು ವರ್ಷಗಳ ನಂತರ ಮತ್ತೊಂದು ಚಿತ್ರ ‘ಪಾಟಿಯಾಲ ಹೌಸ್’ ಬಂತು. ಅಕ್ಷಯ್ ಕುಮಾರ್ ಈ ಕಾಲದಲ್ಲಿ ಓಡುವ ಕುದುರೆ ಎಂದೇ ಪರಿಗಣಿಸಲಾಗಿತ್ತು. ಅಂತಹ ನಟನ ಜತೆಯಲ್ಲಿ ಅನುಷ್ಕಾ ಶರ್ಮ ನಟಿಸಿದರೂ ಚಿತ್ರ ಆರಂಭದಲ್ಲಿಯೇ ಮುಗ್ಗರಿಸಿ ಬಿತ್ತು. ಅಲ್ಲೂ ಯಶಸ್ಸು ಎಂಬ ಮಂತ್ರ ನಿಖಿಲ್ ಅಡ್ವಾನಿಗೆ ಪಠಿಸಲು ಸಿಗಲೇ ಇಲ್ಲ. ನಿಖಿಲ್ ಅಡ್ವಾನಿ ಬಾಲಿವುಡ್ ಮಂದಿಗೆ ಮಾತ್ರ ಐರಾನ್‌ಲೆಗ್‌ಯಾಗಿ ಉಳಿದು ಹೋದರು. ತೀರಾ ಇತ್ತೀಚೆಗೆ ಬಾಲಿವುಡ್‌ನಲ್ಲಿ ಬಂದ ‘ಡಿ- ಡೇ’ ಚಿತ್ರ ಬಾಲಿವುಡ್‌ನ ಥೀಮ್ ಪಾಯಿಂಟ್‌ಗೂ ತೀರಾ ಭಿನ್ನವಾಗಿತ್ತು. ಆದರೆ ಪ್ರೇಕ್ಷಕರನ್ನು ಸೆಳೆಯಲು ಮಾತ್ರ ವಿಫಲವಾಯಿತು. ಸ್ಟಾರ್ ನಟರಾದ ಅರ್ಜುನ್ ರಾಂಪಾಲ್, ರಿಶಿ ಕಪೂರ್, ಇರ್ಫಾನ್ ಖಾನ್, ಹ್ಯೂಮಾ ಖುರೇಶಿ, ಶ್ರುತಿ ಹಾಸನ್ ನಂತವರು ಕೂಡ ಚಿತ್ರವನ್ನು ಗೆಲ್ಲಿಸುವಲ್ಲಿ ವಿಫಲರಾದರು. ತಮ್ಮ ಯಾವುದೇ ಚಿತ್ರ ಕೈ ಕೊಟ್ಟರೆ ನಿಖಿಲ್ ಅಡ್ವಾನಿ ಏನೂ ಮಾಡುತ್ತಾರೆ ಗೊತ್ತಾ? ಮತ್ತೊಂದು ಬಾಲಿವುಡ್ ಚಿತ್ರ ಮಾಡಿ ದಂಗು ಮೂಡಿಸುತ್ತಾರೆಯಂತೆ ! ಇದು ಖುದ್ದು ನಿಖಿಲ್ ತಮ್ಮ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದ ಮಾತು. ಅದೇ ಕಣ್ರಿ ಸೋಲುವ ಹುಡುಗ ಮತ್ತೆ ಮತ್ತೆ ಕನಸ್ಸುಗಳ ಮೂಲಕ ಗೆಲ್ಲಲು ಹೊರಟಿರೋದು ಗಮನಿಸಬೇಕಾದ ವಿಷ್ಯಾ.

No comments:

Post a Comment