Friday, April 11, 2014

‘ಪಾನಿ’ ಹಿಡಿಯಲು ಹೊರಟ ಶೇಖರ್‌ಕಪೂರ್

* ಸ್ಟೀವನ್ ರೇಗೊ,ದಾರಂದಕುಕ್ಕು ಭಾರತೀಯ ಮೂಲದ ಹಾಲಿವುಡ್ ಫೇಮ ನಿರ್ದೇಶಕ ಶೇಖರ್ ಕಪೂರ್ ಪಾನಿ ಮೇಲೊಂದು ಸಿನ್ಮಾವೊಂದನ್ನು ತೆರೆಗೆ ತರುತ್ತಿದ್ದಾರೆ ಎನ್ನುವ ಮಾತು ಬಹಳ ಹಿಂದೆಯೇ ಚಾಲ್ತಿಯಲ್ಲಿತ್ತು. ಕಳೆದ ಎರಡು ವರ್ಷಗಳಿಂದ ಈ ಸಿನಿಮಾವನ್ನು ಹಿರಿತೆರೆಗೆ ತರುತ್ತಾರೆ ಎಂದು ಪ್ರೇಕ್ಷಕ ಮಹಾಪ್ರಭು ಕೂಡ ಕಾದು ಕೂತಿದ್ದ. ಫೈನಲಿ ಈಗ ಶೇಖರ್ ಕಪೂರ್ ‘ಪಾನಿ’ಯನ್ನು ಆಗಸ್ಟ್ ತಿಂಗಳಿನಿಂದ ಶೂಟಿಂಗ್ ಕೆಲಸವನ್ನು ಮುಂದುವರಿಸಲಿದ್ದಾರೆ. ಪಾನಿ ಚಿತ್ರದ ಕತೆ ಹಾಗೂ ಬಿಗ್ ಬಜೆಟ್‌ನಿಂದಲೇ ಚಿತ್ರ ಮೊದಲಿನಿಂದಲೂ ಸಿನಿಮಾ ಪಡಸಾಲೆಯಲ್ಲಿ ಜೋರಾಗಿ ಸದ್ದು ಮಾಡುತ್ತಿತ್ತು. ಅಂದಹಾಗೆ ಈ ಪಾನಿಗೂ ರಾಜ್ಯದ ಬಿಜಪುರಕ್ಕೂ ಬಹಳ ಹತ್ತಿರದ ನಂಟಿದೆ. ಪಾನಿಯ ನಿರ್ದೇಶಕ ಶೇಖರ್ ಕಪೂರ್ ಈ ಚಿತ್ರವನ್ನು ಹಾಲಿವುಡ್ ಮಟ್ಟದಲ್ಲಿ ತೋರಿಸಲು ಕತೆ ಆಯ್ಕೆ ಮಾಡಿದ್ದು ನೀರಿನ ಸಮಸ್ಯೆಯಿಂದ ಕೆಂಗೆಟ್ಟು ಹೋಗುತ್ತಿರುವ ನಮ್ಮ ರಾಜ್ಯದ ಬಿಜಪುರವನ್ನು ! ಕನ್ನಡದ ವಾಹಿನಿಯೊಂದು ಬಿಜಪುರದ ನೀರಿನ ಸಮಸ್ಯೆಯನ್ನು ಪದೇ ಪದೇ ತೋರಿಸುತ್ತಿzಗ ಶೇಖರ್ ಕಪೂರ್ ಪಾನಿಯ ಕುರಿತು ಜಗತಿಕ ಮಟ್ಟದಲ್ಲಿ ಜಗೃತಿ ಮೂಡಿಸಲು ಸಿನ್ಮಾ ಮಾಡಿದರೆ ಹೇಗೆ ಎಂದು ತಲೆಯನ್ನು ಕೆರೆದುಕೊಂಡರಂತೆ..! ತಕ್ಷಣ ಹೊಳೆದದ್ದು ‘ಪಾನಿ’ ಚಿತ್ರ ಎಂದು ಖುದ್ದು ಶೇಖರ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದರು.
ಕಳೆದ ೧೨ ವರ್ಷಗಳಿಂದ ಇಂತಹ ಕತೆಗಾಗಿ ಹುಡುಕಾಟ ಮಾಡುತ್ತಿz.. ಎಲ್ಲರೂ ಫ್ಯಾಂಟಸಿ ಚಿತ್ರಗಳನ್ನು ನಿರ್ಮಾಣ ಮಾಡಿ ಹಣ ದೋಚುತ್ತಾರೆ. ಆದರೆ ಎಲ್ಲರೂ ಸಮಸ್ಯೆಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಇಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅಗತ್ಯತೆ ಇದೆ. ಅದೇ ಪಾನಿಯ ಸಮ್ಮರಿ. ಬದಲಾಗುತ್ತಿರುವ ಸ್ಟಾರ್‌ಕಾಸ್ಟ್: ‘ಪಾನಿ’ ಚಿತ್ರ ಆರಂಭದಲ್ಲಿ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಹಾಗೂ ಹಾಲಿವುಡ್ ನಟಿ ಕ್ರಿಸ್ಟಿನ್ ಸ್ಟಿವಾರ್ಟ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತಿತ್ತು. ಆದರೆ ಪಾನಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಹೃತಿಕ್ ಜಾಗಕ್ಕೆ ಈಗ ಬಾಲಿವುಡ್ ನವ ನಟ ಸುಶಾಂತ್ ಸಿಂಗ್ ಆಯ್ಕೆಯಾಗಿದ್ದಾರೆ. ಈ ಮೂಲಕ ಹೃತಿಕ್‌ಗೆ ಈ ಸಿನಿಮಾದಿಂದ ಕೈ ಬಿಡಲಾಗಿದೆ. ಪಾನಿ ಆಂಗ್ಲ ಭಾಷೆಯಲ್ಲಿ ಬಿಡುಗಡೆ ಕಂಡ ನಂತರ ಅದನ್ನು ಭಾರತೀಯ ಭಾಷೆಗಳಿಗೆ ಡಬ್ಬಿಂಗ್ ಮಾಡುವ ಯೋಜನೆ ಕೂಡ ಇದೆ ಎಂದು ನಿರ್ದೇಶಕ ಶೇಖರ್ ಕಪೂರ್ ಹೇಳಿಕೊಂಡಿzರೆ. ಪಾನಿ ಯಾಕೆ ಡಿಫರೆಂಟ್: ಪಾನಿಯ ಕುರಿತು ಜಗೃತಿ ಹುಟ್ಟು ಹಾಕುವ ಜತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ ಬರುವುದರಿಂದ ಪಾನಿಗೆ ಇನ್ನಷ್ಟು ಕಿಮ್ಮತ್ತು ಬರಲಿದೆ. ಶೇಖರ ಕಪೂರ್ ಬಹಳ ವರ್ಷಗಳ ನಂತರ ಬಾಲಿವುಡ್ ಹಾಗೂ ಹಾಲಿವುಡ್ ಶೈಲಿಗಳನ್ನು ಮಿಕ್ಸಿಂಗ್ ಮಾಡುತ್ತಿzರೆ. ೩೦ ಮಿಲಿಯ ಖರ್ಚುವೆಚ್ಚದಲ್ಲಿ ಪಾನಿ ಚಿತ್ರ ಸಿದ್ಧವಾಗಲಿದೆ. ಚಿತ್ರದಲ್ಲಿ ಕತೆ ಹಾಗೂ ಹಾಡುಗಳಿಗೆ ಏಕರೂಪದ ಪ್ರಾಮುಖ್ಯತೆ ನೀಡಲಾಗಿದೆ. ಯುರೋಪ್ ದೇಶದ ಬಿಗ್ ಜುವೆಲ್ಲರಿ ಕಂಪನಿ ಈ ಚಿತ್ರಕ್ಕೆ ಹಣ ಹೂಡುವ ಮಾತು ಕೇಳಿಬಂದಿದೆ. ಮತ್ತೊಂದೆಡೆ ಭಾರತದಲ್ಲಿ ಆಡ್‌ಲ್ಯಾಬ್‌ನ ಮನಮೋಹನ್ ಶೆಟ್ಟಿ ಕೂಡ ಕೈ ಜೋಡಿಸುವ ಸಾಧ್ಯತೆ ಇದೆ. ಇಂಗ್ಲೀಷ್ ಹಾಗೂ ಹಿಂದಿ ಎರಡರಲ್ಲೂ ಚಿತ್ರ ಕಾಣಿಸಿಕೊಳ್ಳುವುದರಿಂದ ಚಿತ್ರದಲ್ಲಿ ಬಾಲಿವುಡ್ ನಟ- ನಟಿಯರ ಜತೆಗೆ ಹಾಲಿವುಡ್ ಫೇಮ್‌ನ ನಟ-ನಟಿಯರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಈಗಾಗಲೇ ಎ.ಆರ್. ರೆಹಮಾನ್ ಸಂಗೀತ ಜೋಡಿಸುವ ಕೆಲಸ ಮಾಡಿದ್ದಾರೆ. ಉಳಿದಂತೆ ಚಿತ್ರದ ಬಹುತೇಕ ತಂತ್ರಜ್ಞಾನ ವಿದೇಶದಿಂದಲೇ ಆಮದು ಮಾಡಿಕೊಳ್ಳಲು ಚಿತ್ರತಂಡ ಯೋಜನೆ ರೂಪಿಸಿದೆ. ಟೋಟಲಿ ‘ಪಾನಿ’ಗಾಗಿ ಪ್ರೇಕ್ಷಕ ಮಹಾಪ್ರಭುವಂತೂ ಕಾಯುವ ಪರಿಸ್ಥಿತಿ ಎಲ್ಲಿಯವರೆಗೂ ಮುಂದುವರಿಯಲಿದೆ ಎನ್ನೋದು ಮಾತ್ರ ಚಿತ್ರತಂಡಕ್ಕೆ ಬಿಟ್ಟ ವಿಷ್ಯಾ.

No comments:

Post a Comment