Sunday, January 20, 2013

ಬಾಲಿವುಡ್‌ನ ವಿವೇಕ ಸ್ವಾಮಿ !

ಭಕ್ತಿಯ ಭಾವದ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂಚೂರು ಭಿನ್ನವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ವಿವೇಕ್‌ಗೆ ದೇವರ ಮೇಲೆ ಅಪಾರ ನಂಬಿಕೆ. ಯಾವುದೇ ಕೆಲಸಗಳಲ್ಲೂ ವಿವೇಕ್ ದೇವರನ್ನು ನಂಬಿಕೆ ಇಟ್ಟುಕೊಂಡೇ ಮುಂದುವರಿಯುತ್ತಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಎಂದಾಕ್ಷಣ ಇಲ್ಲಿ ನಂಬಿಕೆ ಎನ್ನುವ ಪದಕ್ಕೆ ಜಾಸ್ತಿ ಅರ್ಥ ಇರುತ್ತದೆ ಎನ್ನೋದು ಬಾಲಿವುಡ್ ಪಂಡಿತರ ಮಾತು. ಇದೇ ನಂಬಿಕೆಯ ಮೇಲೆಯೇ ಬಾಲಿವುಡ್‌ನಲ್ಲಿ ಚಿತ್ರಗಳ ನಿರ್ಮಾಣ, ವಿತರಣೆ, ಸೋಲು- ಗೆಲುವು ಎಲ್ಲವೂ ಲೆಕ್ಕಚಾರಗಳು ನಡೆಯುತ್ತದೆ. ಈ ನಂಬಿಕೆಯ ಜತೆಯಲ್ಲಿ ಬಾಲಿವುಡ್ ನಟ- ನಟಿಯರಿಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ಮುಂಬಯಿಯ ಗಣೇಶೋತ್ಸವದಲ್ಲಿ ಬಾಲಿವುಡ್ ನಟ-ನಟಿಯರು ಹಮ್ಮಿಕೊಳ್ಳುವ ಗಣಪತಿ ಹಬ್ಬದ ಸಂಭ್ರಮ ಕಳೆಕಟ್ಟುತ್ತದೆ. ಆದರೆ ಇಂತಹ ಭಕ್ತಿಯ ಭಾವದ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂಚೂರು ಭಿನ್ನವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ವಿವೇಕ್‌ಗೆ ದೇವರ ಮೇಲೆ ಅಪಾರ ನಂಬಿಕೆ. ಯಾವುದೇ ಕೆಲಸಗಳಲ್ಲೂ ವಿವೇಕ್ ದೇವರನ್ನು ನಂಬಿಕೆ ಇಟ್ಟುಕೊಂಡೇ ಮುಂದುವರಿಯುತ್ತಾರೆ. ಅದರಲ್ಲೂ ದೇಶದಲ್ಲಿರುವ ಎಲ್ಲ ಪುಣ್ಯಕ್ಷೇತ್ರಗಳಿಗೆ ವಿವೇಕ್ ಹೋಗಿ ಬಂದಿದ್ದಾರೆ. ಇಷ್ಟರಲ್ಲೂ ಕೇರಳದಲ್ಲಿರುವ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಎಂದರೆ ವಿವೇಕ್‌ಗೆ ಒಂಚೂರು ಭಕ್ತಿ ಜಾಸ್ತಿ. ಇದೇ ಕಾರಣದಿಂದ ವಿವೇಕ್ ಒಬೆರಾಯ್ ತಪ್ಪದೇ ಕಳೆದ ೧೨ ವರ್ಷಗಳಿಂದ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಈ ಬಾರಿಯ ವಿವೇಕ ದರ್ಶನ ರಹಸ್ಯ ಏನೂ: ತೀರಾ ಇತ್ತೀಚೆಗೆ ಮುಂಬಯಿಯಲ್ಲಿ ವಿವೇಕ್ ಸಹೋದರಿ ಮೇಘನಾ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ ಮತ್ತೊಂದೆಡೆ ಫೆಬ್ರವರಿ ಮಧ್ಯಭಾಗದಲ್ಲಿ ವಿವೇಕ್ ಪತ್ನಿ ಪ್ರಿಯಾಂಕಾ ಕೂಡ ಡೆಲಿವರಿ ಡೇಟ್ ಗಳು ಸನಿಹಕ್ಕೆ ಬಂದು ನಿಂತಿದೆ. ಪ್ರಿಯಾಂಕಾ ಹಾಗೂ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲು ವಿವೇಕ್ ಈ ಬಾರಿ ಶಬರಿಮಲೆಯ ಆಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ ಎನ್ನೋದು ಸಿಕ್ರೇಟ್ ಮಾತು. ಇತ್ತಕಡೆ ಈ ಕುರಿತು ವಿವೇಕ್ ಒಬೆರಾಯ್ ಮಾತ್ರ ಯಾವುದೇ ಮಾತಿಗೆ ತಲೆಯಾಡಿಸುತ್ತಿಲ್ಲ. ದೇವರ ದರ್ಶನವೇ ತನ್ನ ಮೂಲ ಪ್ರಯಾಣದ ಉದ್ದೇಶ . ಈ ಕಾರಣದಿಂದ ನನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಶಬರಿಮಲೆಯ ಯಾತ್ರೆ ಕೈಗೊಳ್ಳುತ್ತಿದ್ದೇನೆ ಎಂದು ವಿವೇಕ್ ಒಬೆರಾಯ್ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಈ ಬಾರಿ ೧೩ ವರ್ಷನೇ ಆಯ್ಯಪ್ಪ ಸ್ವಾಮಿಯ ಭಕ್ತನಾಗಿ ಮಲೆ ಕಡೆಗೆ ಹೋಗಿದ್ದರು. ಅಂದಹಾಗೆ ಅವರು ಪ್ರತಿ ಬಾರಿಯೂ ಮಕರ ಸಂಕ್ರಾಂತಿ ಸಮಯದಲ್ಲಿಯೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ೪೧ ದಿನಗಳ ಕಾಲ ಮಾಲೆ ಧರಿಸುವ ವಿವೇಕ್ ಒಬೆರಾಯ್ ಅಯ್ಯಪ್ಪ ಭಕ್ತನೊಬ್ಬ ಯಾವ ರೀತಿಯ ಕಟ್ಟು ನಿಟ್ಟು ಪಾಲಿಸುತ್ತಾರೋ ಅಷ್ಟೇ ಕಟ್ಟುನಿಟ್ಟಿನ ಬದುಕಿಗೆ ವಿವೇಕ್ ಶರಣಾಗುತ್ತಾರೆ. ಶಬರಿಮಲೆಯ ಕುರಿತು ವಿವೇಕ್ ಒಬೆರಾಯ್ ಈ ರೀತಿ ಹೇಳುತ್ತಾರೆ : ಶಬರಿಮಲೆಯ ಯಾತ್ರೆ ಒಂದು ಮನಸ್ಸಿಗೆ ತೃಪ್ತಿ ನೀಡುವ ಕೇಂದ್ರ. ಮನಸ್ಸೊಂದು ಮೊಬೈಲ್ ಬ್ಯಾಟರಿಯಂತಿರುತ್ತದೆ. ಶಬರಿಮಲೆ ಚಾರ್ಜ್ ಮಾಡುವ ಸ್ಟೇಷನ್‌ನಂತಿರುತ್ತದೆ. ಇಂತಹ ಚಾರ್ಜಿಂಗ್ ಸ್ಟೇಷನ್‌ನಿಂದ ನನ್ನ ಮನಸ್ಸು ಶಾಂತಿಯ ಕಡೆ ಕೇಂದ್ರೀಕೃತವಾಗುತ್ತದೆ. ಧನಾತ್ಮಕ ಚಿಂತನೆಗಳನ್ನು ಜಾಸ್ತಿಯಾಗಿ ಚಿಂತಿಸುವಂತೆ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಈ ವರ್ಷ ಇಡೀ ಯಶಸ್ಸು ನನ್ನ ಕೈಯಲ್ಲಿರುತ್ತದೆ ಎನ್ನುವ ನಂಬಿಕೆ ಬೆಳೆಯುತ್ತದೆ. ಕಪ್ಪು ಬಟ್ಟೆ ಧರಿಸಿಕೊಂಡು ಅಯ್ಯಪ್ಪ ಸ್ವಾಮಿಯ ಯಾತ್ರೆ ಕೈಗೊಳ್ಳುವ ಪರಂಪರೆ ವಿವೇಕ್ ಮುಂದೇನೂ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನೋದು ಅವರ ಮಾತು. (vk lvk published dis articl on 21.01.2013)

No comments:

Post a Comment