Sunday, January 13, 2013

ಸ್ಟೀವನ್ ರೇಗೊಗೆ ಪತ್ರಿಕೋದ್ಯಮ ಪ್ರಶಸ್ತಿ

ಮಂಗಳೂರು: ಮೆಗಾ ಮೀಡಿಯಾ ನ್ಯೂಸ್ ತನ್ನ ಹತ್ತನೇ ವರ್ಷದ ಸವಿನೆನಪಿಗಾಗಿ ನೀಡುವ ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಗೆ ಮಂಗಳೂರು ವಿಜಯ ಕರ್ನಾಟಕ ದಿನ ಪತ್ರಿಕೆ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ ದಾರಂದಕುಕ್ಕು ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕದ ನಮ್ಮ ಕರಾವಳಿಯಲ್ಲಿ ಬಂದ ‘ಕತ್ತಲಲ್ಲಿ ಮೂಡಿಬಂತು ಬೆಳಕು !’ ಲೇಖನ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ಐದುಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಸನ್ಮಾನಿತ ಗೌರವಾದರಗಳನ್ನೊಳಗೊಂಡಿದೆ. ಸ್ಟೀವನ್ ರೇಗೊ ಅವರ ಗ್ರಾಮೀಣ ಪತ್ರಿಕೋದ್ಯಮಕ್ಕೆ ಈ ಹಿಂದೆ ಕಿನ್ನಿಗೋಳಿಯ ಕಡಂದಲೆ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ‍್ಯನಿರತರ ಪತ್ರಕರ್ತರ ಸಂಘದ ಪ.ಗೋ ಪ್ರಶಸ್ತಿಗಳು ಸಿಕ್ಕಿದೆ. ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ಅವರ ಸುಪತ್ರ.

No comments:

Post a Comment