Sunday, January 13, 2013
ಮೋಲಿವುಡ್‌ನಲ್ಲಿ ಕಾಳಿದಾಸ
ರೀಲ್ ಗಳ ಜತೆಯಲ್ಲಿ ಸುತ್ತಾಟ ಮಾಡಿಕೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕರು ಎಚ್‌ಡಿ ಫಾರ್ಮೆಟ್‌ಗೆ ಇಳಿದಿರುವುದು ಹೊಸ ತಂತ್ರಜ್ಞಾನದ ಬಳಕೆಯಲ್ಲಿ ಮಲಯಾಳಂ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆ ಕಾಣಿಸಿಕೊಂಡಿದೆ. ಟೋಟಲಿ ಮಲಯಾಳಂ ಚಿತ್ರ ನಗರಿಯಲ್ಲಿ ಎಲ್ಲ ಬದಲಾವಣೆಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಜತೆಯಲ್ಲಿ ಸಿನಿಮಾ ನಗರಿಗೆ ಬರುವ ಹೊಸ ಹುಡುಗರನ್ನು ಬೆನ್ನು ತಟ್ಟುತ್ತಿದ್ದಾರೆ. ಈಗ ಕಾಳಿದಾಸನ್ ಸರದಿ...
* ಸ್ಟೀವನ್ ರೇಗೊ, ದಾರಂದಕುಕ್ಕು
ಮೋಲಿವುಡ್ ಸಿನಿಮಾ ನಗರಿಯಲ್ಲಿ ಈಗ ಹೊಸ ಹವಾ ಎದ್ದು ನಿಂತಿದೆ. ಹೊಸ ನಾಯಕ- ನಾಯಕಿಯರನ್ನು ತಂದು ಸಿನಿಮಾ ಗೆಲ್ಲಿಸುವ ಪ್ರಯತ್ನಗಳು ಸಿಕ್ಕಾಪಟ್ಟೆ ಮೋಲಿವುಡ್ ಸಿನಿಮಾ ಜಗತ್ತಿಲ್ಲಿ ವರ್ಕ್ ಔಟ್ ಆಗುತ್ತಿದೆ. ಹೊಸ ತಂತ್ರಜ್ಞರು, ನಿರ್ದೇಶಕರು ತಮ್ಮದೇ ಆಂಗಲ್‌ನಲ್ಲಿ ಚಿತ್ರ ನಿರ್ಮಾಣ ಮಾಡಿಕೊಂಡು ಗೆದ್ದು ಬರುತ್ತಿರುವ ಉತ್ತಮ ಬೆಳವಣಿಗೆಯೊಂದು ಮೋಲಿವುಡ್ ಸಿನಿಮಾ ಜಗತ್ತಿನಲ್ಲಿ ಕಾಣಿಸಿಕೊಂಡಿದೆ. ಮೋಲಿವುಡ್ ಸಿನಿಮಾ ರಂಗದಲ್ಲಿ ಫ್ಯಾಮಿಲಿ ಬ್ಯುಸಿನೆಸ್‌ಗಳು ಹುಟ್ಟಿಕೊಂಡಿರುವುದು ಹಳೆಯ ನಾಯಕ-ನಾಯಕಿಯರ ಸಿನಿಮಾ ಅವಕಾಶಗಳಿಗೆ ಕತ್ತರಿ ಬೀಳುತ್ತಿದೆ. ಹೊಸ ನಾಯಕ- ನಾಯಕಿಯರಿಗೆ ನೀಡುತ್ತಿರುವ ಮೊದಲ ಮಣೆ ಕೂಡ ಮಲಯಾಳಂ ಚಿತ್ರ ವೀಕ್ಷಕರಿಂದಲೂ ಮನ್ನಣೆ ಸಿಗುತ್ತಿದೆ.
ಅಂದಹಾಗೆ ಇತ್ತೀಚೆಗೆ ಮೋಲಿವುಡ್ ಚಿತ್ರಗಳನ್ನು ಲೋ ಬಜೆಟ್‌ನಿಂದ ಎತ್ತಿಕೊಂಡು ಏಕ್ ದಂ ಹೈ ಬಜೆಟ್ ನತ್ತ ಮುಖ ಮಾಡುತ್ತಿರುವುದು ಕೂಡ ಇತರ ಚಿತ್ರರಂಗದಲ್ಲಿ ಮಲಯಾಳಂ ಚಿತ್ರಗಳು ಕೂಡ ಸ್ಪರ್ಧೆಯಲ್ಲಿ ಹೊಡೆದಾಡುವ ಪ್ರಮೇಯಗಳು ಕಾಣಿಸಿಕೊಂಡಿದೆ. ಈ ಹಿಂದೆ ರೀಲ್ ಗಳ ಜತೆಯಲ್ಲಿ ಸುತ್ತಾಟ ಮಾಡಿಕೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕರು ಎಚ್‌ಡಿ ಫಾರ್ಮೆಟ್‌ಗೆ ಇಳಿದಿರುವುದು ಹೊಸ ತಂತ್ರಜ್ಞಾನದ ಬಳಕೆಯಲ್ಲಿ ಮಲಯಾಳಂ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆ ಕಾಣಿಸಿಕೊಂಡಿದೆ. ಟೋಟಲಿ ಮಲಯಾಳಂ ಚಿತ್ರ ನಗರಿಯಲ್ಲಿ ಎಲ್ಲ ಬದಲಾವಣೆಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಜತೆಯಲ್ಲಿ ಸಿನಿಮಾ ನಗರಿಗೆ ಬರುವ ಹೊಸ ಹುಡುಗರನ್ನು ಬೆನ್ನು ತಟ್ಟುತ್ತಿದ್ದಾರೆ.
ಸಿನಿಮಾ ಕುಟುಂಬದಲ್ಲಿ ಹುಟ್ಟಿದ ನಟ:
ಮೋಲಿವುಡ್ ಸಿನಿಮಾದ ಸೂಪರ್ ಸ್ಟಾರ್ ಮಮ್ಮುಟಿಯ ಪುತ್ರ ದುಲ್‌ವೀಕರ್ ಸಲ್ಮಾನ್ ಕಳೆದ ವರ್ಷವಷ್ಟೇ ಮಲಯಾಳಂ ಸಿನಿಮಾದಲ್ಲಿ ಕಣ್ಣು ಬಿಟ್ಟಿದ್ದರು. ತಮ್ಮ ‘ಸೆಕೆಂಡ್ ಶೋ’ ಚಿತ್ರದ ಮೂಲಕ ಸಾಧಾರಣ ಯಶಸ್ಸು ದಾಖಲಿಸಿಕೊಂಡಿದ್ದರು. ಈ ಬಳಿಕ ಬಂದ ಹಿರಿಯ ನಟ ತಿಲಕನ್‌ರ ಮೊಮ್ಮಗನ ಪಾತ್ರದಲ್ಲಿ ನಟಿಸಿದ ಸಲ್ಮಾನ್ ಚಿತ್ರ ‘ಉಸ್ತಾದ್ ಹೋಟೆಲ್’ ಮಲಯಾಳಂ ಸಿನಿಮಾದ ಬಾಕ್ಸಾಫೀಸ್‌ನಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿತ್ತು. ಇದೇ ರೀತಿಯಲ್ಲಿ ಮಲಯಾಳಂನ ಖ್ಯಾತ ನಟ ಶ್ರೀನಿವಾಸ್ ಅವರ ಪುತ್ರ ವಿನೀದ್ ನಟರಾಗಿ ನಂತರ ನಿರ್ದೇಶಕರಾಗಿ ಹೊರ ಬಂದರು. ಈಗ ಇದೇ ಸಾಲಿನಲ್ಲಿ ಕಾಳಿದಾಸನ್ ಸೇರುವ ಸಾಧ್ಯತೆ ಇದೆ.
ಅಂದಹಾಗೆ ಈ ಕಾಳಿದಾಸನ್ ಬೇರೆ ಯಾರು ಅಲ್ಲ. ಮಲಯಾಳಂನಲ್ಲಿ ಅತ್ತ ಆಕ್ಷನ್ ಗೂ ಸೈ ಇತ್ತ ಹಾಸ್ಯಕ್ಕೂ ಸೈ ಎಂದುಕೊಂಡು ನಿರ್ಮಾಪಕರು ತಮ್ಮ ಸಿನಿಮಾಕ್ಕೆ ಆರಿಸಿಕೊಳ್ಳುತ್ತಿದ್ದ ನಟ ಜಯರಾಮ್ ಅವರ ಪುತ್ರ. ಅಂದಹಾಗೆ ಕಾಳಿದಾಸನ್ ಮಲಯಾಳಂನ ಖ್ಯಾತ ಸಿನಿಮಾ ನಟಿ ಪಾರ್ವತಿಯ ಪುತ್ರ. ಈ ಹಿಂದೆ ಕಾಳಿದಾಸನ್ ಬಾಲ ನಟರಾಗಿ ಮೋಲಿವುಡ್ ಚಿತ್ರರಂಗದಲ್ಲಿ ಕಾಲೂರಿದ್ದರು. ಮಲಯಾಳಂನ ಖ್ಯಾತ ನಿರ್ದೇಶಕ ಸತ್ಯನ್ ಅಂತಿಕಾಡ್ ಅವರ ‘ ಕೊಚ್ಚು ಕೊಚ್ಚು ಸಂತೋಷಗಳ್’ ನಲ್ಲಿ ನಟ ಜಯರಾಮ್ ಅವರ ಪುತ್ರನಾಗಿ ಕಾಳಿದಾಸನ್ ಕಾಣಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.
ಮೋಲಿವುಡ್ ಅಡ್ಡಾದಲ್ಲಿ ಪುತ್ರರ ಪೈಪೋಟಿ:
ಈ ವರ್ಷ ಮೋಲಿವುಡ್ ಚಿತ್ರರಂಗದಲ್ಲಿ ಅಂದುಕೊಂಡಂತೆ ಎಲ್ಲವೂ ನಡೆದರೆ ನಾಯಕ ನಟರ ಪುತ್ರರ ನಡುವೆ ಏಕ್‌ದಂ ಪೈಪೋಟಿ ಕಾಣಿಸಿಕೊಳ್ಳಲಿದೆ. ಒಂದೆಡೆ ಮಮ್ಮುಟಿಯ ಪುತ್ರ ಸಲ್ಮಾನ್‌ನ ಚಿತ್ರವೊಂದು ಬಿಡುಗಡೆಯ ಹಾದಿ ಕಾಯುತ್ತಿದೆ. ಮತ್ತೊಂದೆಡೆ ಶ್ರೀನಿವಾಸ್ ಪುತ್ರ ವಿನೀದ್ ಚಿತ್ರವೊಂದು ಥಿಯೇಟರ್ ಬಾಗಿಲಲ್ಲಿ ನಿಂತಿದೆ. ಮಲಯಾಳಂನ ಸೂಪರ್ ಸ್ಟಾರ್‌ರಲ್ಲಿ ಒಬ್ಬರಾದ ಮೋಹನ್ ಲಾಲ್ ಪುತ್ರ ಪ್ರಣವ್ ಕೂಡ ಮೋಲಿವುಡ್ ನಲ್ಲಿ ಬಣ್ಣದ ಬದುಕು ಕಟ್ಟಿಕೊಳ್ಳುವ ಸಾಹಸಕ್ಕೆ ಇಳಿಯಲಿದ್ದಾರೆ. ಇವರ ಜತೆಯಲ್ಲಿ ಜಯರಾಮ್ ಪುತ್ರ ಕಾಳಿದಾಸನ್ ಕೂಡ ಒಳ್ಳೆಯ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಇವರೆಲ್ಲರೂ ಈ ವರ್ಷದಲ್ಲಿ ಮಲಯಾಳಂ ಸಿನಿಮಾದ ಮುಕುಟ ಮಣಿಗಳಾಗುತ್ತಾರೆ ಎನ್ನೋದು ಸಿನಿಮಾ ನಗರಿಯ ಮಾತು. ಆದರೆ ಕಾಳಿದಾಸನ್ ಕುರಿತಾಗಿ ಅವರ ತಂದೆ ನಟ ಜಯರಾಮ್ ಹೇಳುವಂತೆ: ನಾವು ಮಗನ ಶಿಕ್ಷಣದ ಕುರಿತು ಹೆಚ್ಚಾಗಿ ಯೋಚಿಸುತ್ತಿದ್ದೇವೆ. ಚೆನ್ನೈಯಲ್ಲಿ ಅವನ ಶಿಕ್ಷಣ ಅಂತಿಮ ಹಂತದಲ್ಲಿದೆ. ಬರೀ ಶಿಕ್ಷಣ ಕಡೆ ಕಾಳಿ ಗಮನಕೊಟ್ಟರೆ ಸಾಕು ಎನ್ನೋದು ನಮ್ಮ ಹೆಬ್ಬಯಕೆ. ಅವಸರದಿಂದ ಸಿನಿಮಾ ನಗರಿಗೆ ಬರೋದು ಬೇಡ ಎನ್ನುವ ಸಲಹೆಯನ್ನು ನಾನು ಕಾಳಿಗೆ ನೀಡುತ್ತಾ ಬಂದಿದ್ದೇನೆ ಎಂದು ಜಯರಾಮ್ ಎಂದಿದ್ದಾರೆ. ಆದರೆ ಮಲಯಾಳಂ ಸಿನಿಮಾ ನಗರಿ ಈ ಹುಡುಗರಿಗಂತೂ ಕಾದು ನಿಂತಿದೆ ಎನ್ನುವ ಮಾತು ಹೊರ ಬಂದಿದೆ. ಅದರಲ್ಲೂ ಕಾಳಿದಾಸನ್ ತಂದೆಯಂತೆ ಎಲ್ಲ ಕಡೆಯಲ್ಲೂ ಸಲ್ಲುವ ಪಾತ್ರವಾಗುತ್ತಾರೆ ಎನ್ನೋದು ಮಲಯಾಳಂ ಸಿನಿ ಪ್ರೇಕ್ಷಕರ ಗಟ್ಟಿಮಾತು.
....
vk lvk published dis article.
Subscribe to:
Post Comments (Atom)
No comments:
Post a Comment