Sunday, January 13, 2013

ಬಾಲಿವುಡ್ ಫ್ಯಾಮಿಲಿ ಬಿಸಿನೆಸ್

ಬಾಲಿವುಡ್ ಎಂದಾಕ್ಷಣ ಅಲ್ಲಿ ಬಣ್ಣದ ಕನಸ್ಸುಗಳನ್ನು ಕಾಣುವ, ಮಾರುವ ಕೆಲಸಗಳು ಸಖತ್ ಆಗಿಯೇ ನಡೆಯುತ್ತದೆ. ಅಂದಹಾಗೆ ಈ ವರ್ಷವಂತೂ ಬಾಲಿವುಡ್‌ನ ಹಿರಿಯ ನಟರ ಪುತ್ರ- ಪುತ್ರಿಯರು ಸಖತ್ ಫಿಲ್ಮಿ ಫಾರ್ಮ್ ಗೆ ಬರಲಿದ್ದಾರೆ. ಏನಿದು ಕತೆ ಅಂತೀರಾ.. ಜಸ್ಟ್ ರೀಡ್ ಇಟ್ * ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಎಂದಾಕ್ಷಣ ಅಲ್ಲಿ ಬಣ್ಣದ ಕನಸ್ಸುಗಳನ್ನು ಕಾಣುವ, ಮಾರುವ ಕೆಲಸಗಳು ಸಖತ್ ಆಗಿಯೇ ನಡೆಯುತ್ತದೆ. ಹೊಸ ಹೊಸ ಪ್ರಯೋಗಶೀಲತೆಯ ಜತೆಯಲ್ಲಿ ಇತರ ಭಾಷೆಗಳ ಕಲಬೆರಕೆಯ ಮಾಲುಗಳ ಮೂಲಕ ವಿಶಿಷ್ಟ ಪ್ರಾಡಕ್ಟ್ ಗಳು ಜನ್ಮ ತಾಳುವುದನ್ನು ಇಲ್ಲಿಯೇ ನೋಡಿ ತಿಳಿಯಬೇಕು. ಸಖತ್ ಕಲರ್‌ಫುಲ್ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಬದಲಾವಣೆಯ ಹವಾ ತಾಗಿದೆ. ಎಲ್ಲವೂ ಮೊಡರ್ನ್‌ನಿಟಿಗೆ ತಕ್ಕಂತೆ ಸಿನಿಮಾಗಳು ರಂಗೀನ್ ಆಗಿ ತೆರೆಗೆ ಬಂದು ಅಪ್ಪಳಿಸುತ್ತಿದೆ. ಬದಲಾಗುತ್ತಿರುವ ಬಾಲಿವುಡ್‌ನಲ್ಲಿ ಈಗ ಹೊಸ ಪರ್ವ ಹುಟ್ಟಿಕೊಂಡಿದೆ. ಅಂದಹಾಗೆ ಈ ಬದಲಾವಣೆ ಏನಪ್ಪಾ ಅಂದರೆ ಬಾಲಿವುಡ್ ಅಂಗಳದಲ್ಲಿ ಈಗ ಫ್ಯಾಮಿಲಿ ಬಿಸಿನೆಸ್ ನಡೆಯುತ್ತಿದೆ. ಹೊಸ ವರ್ಷದ ಆರಂಭದಲ್ಲಿಯೇ ಬಾಲಿವುಡ್ ಫ್ಯಾಮಿಲಿಗಳ ಕುಡಿಗಳು ತಮ್ಮ ಬಣ್ಣದ ಬದುಕು ಕಟ್ಟಿಕೊಡಲು ತಯಾರಿಯನ್ನು ತೆರೆಮರೆಯಲ್ಲಿ ನಡೆಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಹೊಸ ವರುಣ: ತೀರಾ ಇತ್ತೀಚೆಗೆ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ಅವರ ಈ ವರ್ಷ ಮೋಸ್ಟ್ ಸಕ್ಸಸ್ ಕಂಡ ಚಿತ್ರ ‘ಸ್ಟುಡೆಂಟ್ ಆಫ್ ದೀ ಇಯರ್’ ನಲ್ಲಿ ಮಿಂಚಿದ ನವತಾರೆ ವರುಣ್ ಧವನ್ ಈ ವರ್ಷ ಏಕ್ತಾ ಕಪೂರ್ ಅವರ ಬ್ಯಾನರ್‌ನಲ್ಲಿ ಮೂಡಿ ಬರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳ ಸಿಗುತ್ತಿತ್ತು. ಈಗ ಈ ಸುದ್ದಿಗೆ ಮತ್ತೊಂದು ಬಂದು ಸೇರಿದೆ. ಅದೇನಪ್ಪಾ ಅಂದರೆ ವರುಣ್ ಧವನ್ ಜತೆಯಲ್ಲಿ ಅವರ ಅಪ್ಪ ನಿರ್ದೇಶಕ ಡೇವಿಡ್ ಧವನ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಚಿತ್ರಕ್ಕೆ ಏಕ್ತಾ ಕಪೂರ್
ಇಟ್ಟಿರುವ ಹೆಸರು ‘ಮೇ ತೇರಾ ಹೀರೋ’ ಎನ್ನುವುದು ಕೇಳಿ ಬಂದ ಮಾತು. ಈ ಕುರಿತು ನಿರ್ದೇಶಕ ಡೇವಿಡ್ ಧವನ್ ಹೇಳುವ ಮಾತು ಹೀಗಿದೆ: ನಾನು ಬಾಲಿವುಡ್‌ನ ಬಹುತೇಕ ಮಂದಿಯ ಜತೆಯಲ್ಲಿ ಕೆಲಸ ಮಾಡಿದ್ದೇನೆ. ಅಮಿತಾಭ್‌ನಿಂದ ಹಿಡಿದು ವಿನೋದ್ ಖನ್ಹಾ, ಗೋವಿಂದ, ಸಲ್ಮಾನ್ ಎಲ್ಲರೂ ನನ್ನ ಕೆಲಸದಲ್ಲಿ ಸಾಥ್ ನೀಡಿದ್ದಾರೆ. ಆದರೆ ವರುಣ್ ಜತೆಯಲ್ಲಿ ಕೆಲಸ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ನಿರ್ಮಾಪಕಿ ಏಕ್ತಾ ಕಪೂರ್ ಬಂದು ಚಿತ್ರದ ಕತೆ ಹೇಳಿದಾಗ ಈ ಚಿತ್ರ ಮಾಡಲೇ ಬೇಕು ಎನ್ನುವ ಹೆಬ್ಬಯಕೆ ಮೂಡಿತು ಎಂದಿದ್ದಾರೆ. ಟಾಲಿವುಡ್‌ನಿಂದ ಬಾಲಿವುಡ್‌ಗೆ ಚಿತ್ರ: ಅಂದಹಾಗೆ ಬಾಲಿವುಡ್‌ನಲ್ಲಿ ತೆರೆ ಕಾಣಲಿರುವ ‘ಮೇ ತೇರಾ ಹೀರೋ’ ಚಿತ್ರ ನಿಜಕ್ಕೂ ತೆಲುಗಿನ ಸೂಪರ್ ಹಿಟ್ ಚಿತ್ರ ‘ಕಂದೀರಿಗಾ’ ದ ಪಡಿಯಚ್ಚು. ಇದನ್ನು ಬಾಲಿವುಡ್ ಶೈಲಿಗೆ ಬದಲಾಯಿಸಿಕೊಂಡು ಧವನ್ ಸಾಹೇಬ್ರು ಚಿತ್ರ ಹೊರತಾರುತ್ತಾರೆ. ಈ ಕುರಿತು ಡೇವಿಡ್ ಧವನ್ ಹೀಗೆ ಹೇಳುತ್ತಾರೆ: ಈ ಚಿತ್ರದ ಬಹುಮುಖ್ಯ ಭಾಗಗಳನ್ನು ಲಂಡನ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಚಿತ್ರವನ್ನು ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ತರುವ ಕೆಲಸ ನಡೆಯುತ್ತದೆ. ಬಾಲಿವುಡ್ ನಲ್ಲಿ ಇದೊಂದು ಉತ್ತಮ ಮನರಂಜನೆಯಿಂದ ಕೂಡಿದ ಚಿತ್ರವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದಿದ್ದಾರೆ. ಶತ್ರು ಪಾಳಯದಲ್ಲಿ ಹೊಸ ಬ್ಯಾನರ್: ಬಾಲಿವುಡ್‌ನ ಹಿರಿಯ ನಟ ಶತ್ರುಘ್ನಾ ಸಿನ್ಹಾ ಅವರ ಪುತ್ರರಾದ ಲವ ಹಾಗೂ ಕುಶ ಜತೆಯಾಗಿ ‘ಶಾಟ್‌ಗನ್’ ಬ್ಯಾನರ್‌ನಡಿಯಲ್ಲಿ ಅವರ ಸಹೋದರಿ ನಟಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಕುಶ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಬ್ಯಾನರ್ ನಿಂದ ಜಾಕಿಶ್ರಾಫ್ ಚಿತ್ರ ಮೇರಾ ದಿಲ್ ಲೇಕೇ ದೇಕೋ ಎನ್ನುವ ಚಿತ್ರವೊಂದು ತೆರೆಗೆ ಬಂದಿತ್ತು. ಈ ಬಳಿಕ ಶಾಟ್‌ಗನ್ ಬ್ಯಾನರ್ ಹೊಸ ಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಯಾವುದೇ ಆಸಕ್ತಿಯನ್ನು ತಾಳಲಿಲ್ಲ. ಈಗ ಸೋನಾಕ್ಷಿಯಿಂದ ಬ್ಯಾನರ್ ಮತ್ತೇ ಜೀವಕಳೆ ಬಂದಿದೆ. ಬ್ಯಾನರ್ ಕುರಿತು ಹಿರಿಯ ನಟ ಶತ್ರು ಹೇಳುವಂತೆ ‘ ಇಬ್ಬರು ಸಹೋದರರ ಜತೆಯಲ್ಲಿ ಸೋನಾಕ್ಷಿ ಕೂಡ ಕೈ ಜೋಡಿಸುವುದರಿಂದ ಬ್ಯಾನರ್ ಮತ್ತೆ ಎದ್ದು ನಿಲ್ಲುತ್ತದೆ. ಅಂದಹಾಗೆ ಮೂವರಿಗೂ ನನ್ನ ಸಹಾಯದ ಅವಶ್ಯಕತೆ ಬೀಳೋದಿಲ್ಲ. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ. ಈ ಹೊಸ ಚಿತ್ರದ ನಡುವೆ ಸೋನಾಕ್ಷಿ ಶಾಹೀದ್ ಕಪೂರ್ ಜತೆಯಲ್ಲಿ ರ‍್ಯಾಂಬೋ ರಾಜಕುಮಾರ್ ಹಾಗೂ ವನ್ಸ್ ಅಪನ್ ಟೈಮ್ ಇನ್ ಮುಂಬಯಿ -೨ ನ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಈ ಬಳಿಕವಷ್ಟೇ ಸೋನಾಕ್ಷಿ ಸಿನ್ಹಾ ಕಾಲ್‌ಶೀಟ್ ಸಿಗೋದು ಈ ಮೂಲಕ ಶತ್ರು ಬ್ಯಾನರ್‌ನ ಚಿತ್ರ ಈ ವರ್ಷವಂತೂ ತೆರೆಗೆ ಬರುವ ಸಾಧ್ಯತೆ ಇಲ್ಲ ಎಂದಾಯಿತು. .... vk lvk published dis article on 10.1.2013) ......

No comments:

Post a Comment