

ಕಾಲಿವುಡ್, ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸಿನ್ಮಾ ರಂಗದಲ್ಲಿ ಒಂದೇ ರೀತಿಯ ಪ್ಯಾನ್ ಕ್ಲಬ್ಗಳನ್ನು ಕ್ರಿಯೇಟ್ ಮಾಡಿಕೊಂಡಿರುವ ನಿಶಾ ಕೊತಾರಿ ಸಧ್ಯಕ್ಕೆ ತಮಿಳಿನ ಇನ್ನೂ ಹೆಸರಿಡದ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನೋದು ಮಾತು.
ಬಾಲಿವುಡ್ನ ಗ್ಲಾಮರ್ ಡಾಲ್ ನಿಶಾ ಕೊತಾರಿ ಈಗ ಸುದ್ದಿಯ ಅಂಗಣದಲ್ಲಿ ಬಂದು ನಿಂತಿದ್ದಾಳೆ. ಕೈಯಲ್ಲಿ ಸರಿಯಾದ ಚಿತ್ರಗಳಿಲ್ಲದಿದ್ದರೂ ನಿಶಾ ಕೊತಾರಿ ತುಂಬಾನೇ ಬ್ಯುಸಿ ಅಂತೆ. ಇತ್ತೀಚೆಗೆ ಬಾಲಿವುಡ್ನಲ್ಲಿ ತೆರೆಕಂಡು ಸುದ್ದಿಯಾಗದ ‘ಬಿನ್ ಬುಲೆಯೇ ಬರಾತಿ’ ನಂತ್ರ ನಿಶಾ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ ಎನ್ನೋದು ಅವರ ಆಪ್ತ ವಲಯದಿಂದ ಬಂದ ಮಾತು. ಇತ್ತೀಚೆಗೆ ಕಂಪನಿಯೊಂದರ ಬ್ರಾಂಡ್ ಅಂಬಾಸೀಡರ್ ಆಗಿ ಮಂಗಳೂರಿಗೆ ಬಂದ ನಿಶಾ ಕೊತಾರಿ ಮಾತನಾಡಿದ್ದೆಲ್ಲ ಕಂಪನಿಯ ಪ್ರಾಡಕ್ಟ್ಗಳ ಬಗ್ಗೆಯಾದರೂ ತನ್ನ ವೃತ್ತಿಯ ಕುರಿತು ಇಲ್ಲಿನ ಆಪ್ತರಲ್ಲಿ ಬಿಚ್ಚುಮಾತನಾಡಿದಳು ಎನ್ನುವ ಮಾಹಿತಿಯನ್ನು ಲವಲವಿಕೆ ಹುಡುಕಿ ತೆಗೆದಿದೆ.
ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ರಾಮ್ಗೋಪಾಲ್ ವರ್ಮರ ಕ್ಯಾಂಪ್ನಲ್ಲಿ ಭರ್ಜರಿಯಾಗಿ ಎಂಟ್ರಿಕೊಟ್ಟ ನಾಯಕಿಯಾರ ಸಾಲಿನಲ್ಲಿ ನಿಶಾ ಕೊತಾರಿ ಕೂಡ ಕಾಣಸಿಗುತ್ತಾರೆ. ಬಂಗಾಳದ ನಿಶಾ ಕೊತಾರಿಯ ಒರಿಜಿನಲ್ ಹೆಸರು ಪ್ರಿಯಾಂಕಾ ಕೊತಾರಿ ಯಾಕೋ ಆರ್ಜಿವಿಗೆ ಈ ಹೆಸರು ಅಷ್ಟಾಗಿ ಹಿಡಿಸಲಿಲ್ಲ ಎಂಬ ಕಾರಣಕ್ಕೆ ಆರ್ಜಿವಿ ಪ್ರಿಯಾಂಕಾವನ್ನು ‘ನಿಶಾ’ ಎಂದು ಬದಲಾಯಿಸಿ ಬಿಟ್ಟರು. ಆರ್ಜಿವಿಯ ‘ಜೇಮ್ಸ್’ ‘ಸರಕಾರ್’ ಹಾಗೂ ಅಗ್ಯಾತ್ ನಲ್ಲಿ ನಿಶಾ ಕೊತಾರಿಗೆ ಲೀಡ್ ರೋಲ್ ಕೂಡ ಸಿಕ್ಕಿತ್ತು. ಈಗಲೂ ಆರ್ಜಿವಿಯ ಪೋಸ್ಟ್ ಪ್ರಾಡಕ್ಷನ್ ಕಂಪನಿಯಲ್ಲಿ ‘ರಕ್ತಚರಿತ್ರ-೩’ ಹಾಗೂ ’ಅಗ್ಯಾತ್-೨’ನಲ್ಲೂ ನಿಶಾ ಕೊತಾರಿಗೆ ಲೀಡ್ ರೋಲ್ ಇದೆ ಎನ್ನೋದು ನಿಶಾರ ಮಾತು. ಆದರೆ ಆರ್ಜಿವಿ ಈ ಚಿತ್ರಗಳನ್ನು ಸಧ್ಯಕ್ಕಂತೂ ತೆರೆಯ ಮೇಲೆ ತರುವ ಯಾವುದೇ ಸೂಚನೆ ನೀಡಿಲ್ಲ ಎನ್ನೋದು ಬಾಲಿವುಡ್ ಪಂಡಿತರ ಮಾತು.
ಕಾಲಿವುಡ್, ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸಿನ್ಮಾ ರಂಗದಲ್ಲಿ ಒಂದೇ ರೀತಿಯ ಪ್ಯಾನ್ ಕ್ಲಬ್ಗಳನ್ನು ಕ್ರಿಯೇಟ್ ಮಾಡಿಕೊಂಡಿರುವ ನಿಶಾ ಕೊತಾರಿ ಸಧ್ಯಕ್ಕೆ ತಮಿಳಿನ ಇನ್ನೂ ಹೆಸರಿಡದ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನೋದು ಮಾತು. ಬಾಲಿವುಡ್ನಲ್ಲಿ ನಾಯಕಿ ಪಟ್ಟದಲ್ಲಿದ್ದ ನಿಶಾ ಕೊತಾರಿ ಏಕ್ದಂ ಪಕ್ಕದ ಸಿನ್ಮಾ ರಂಗದ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲು ಕಾರಣ ಏನೂ ಅಂತಾ ಕ್ವಶನ್ ಮಾಡಿದ್ರೆ ಬಾಲಿವುಡ್ನಲ್ಲಿ ದೊಡ್ಡ ದೊಡ್ಡ ನಾಯಕಿಯರು ಐಟಂ ಸಾಂಗ್ನಲ್ಲಿ ಕುಣಿಯಬೇಕು ಎಂದುಕೊಂಡು ಸಿನ್ಮಾ ರಂಗದ ಬಾಗಿಲು ತಟ್ಟುತ್ತಾರೆ. ನಾನೇಕೆ ಕುಣಿಯಬಾರದು ಎನ್ನೋದು ನಿಶಾರ ಮಾತು.
ಕೈತುಂಬಾ ಸಿನ್ಮಾಗಳು ಇಲ್ಲ ಎನ್ನುವ ಕಾರಣಕ್ಕೆ ನಿಶಾ ಕೊತಾರಿ ಐಟಂ ಸಾಂಗಿಗೂ ಕುಣಿಯಬೇಕು ಎನ್ನುವ ಮನಸ್ಸು ಮಾಡಿದ್ದಾಳೆ ಎಂಬ ಮಾತು ಕೂಡ ಸಿನ್ಮಾ ರಂಗದಲ್ಲಿ ಗರಿಬಿಚ್ಚಿಕೊಂಡು ಓಡಾಡುತ್ತಿದೆ. ಹಾಗಾದರೆ ನಿಶಾ ಸಿನ್ಮಾಗಳು ಇಲ್ಲದೇ ಇದ್ದಾಗ ಏನ್ ಮಾಡ್ತಾಳೆ ಅಂತಾ ಕೇಳಿದ್ರೆ ದೇಶ- ವಿದೇಶಕ್ಕೆ ಟೂರ್ ಹೋಗೋದು ಜತೆಗಿಷ್ಟು ಕಂಪನಿಗಳ ಬ್ರಾಂಡ್ ಅಂಬಾಸೀಡರ್ ಆಗಿ ಕಾಲ ಕಳೆಯವುದು ಅಂತಾರೆ. ಕನ್ನಡದಲ್ಲಿ ‘ರಾಜ್’ ದೀ ಶೋ ಮ್ಯಾನ್ ನಂತರ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಇರಾದೆ ಇದೆಯಾ ಎಂದು ಕೇಳಿದ್ರೆ ನಿರ್ಮಾಪಕರು ಬರುತ್ತಾರೆ. ಆದರೆ ಸಿನ್ಮಾ ಸ್ಟೋರಿ ಲೈನ್, ಪಾತ್ರಗಳು ನನಗೆ ಬಹುಮುಖ್ಯ ಚಿತ್ರಗಳ ಆಯ್ಕೆ ವಿಚಾರದಲ್ಲಿ ಬಹಳಷ್ಟು ಚ್ಯುಸಿಯಾಗಿರಲು ಬಯಸುತ್ತೇನೆ ಎನ್ನುವುದು ನಿಶಾ ಕೊತಾರಿಯ ಬಲಿತ ಮಾತು.
ಖಾಸಗಿ ಚಾನೆಲ್ವೊಂದರ ರಿಯಾಲಿಟಿ ಶೋವಿನಲ್ಲೂ ನಿಶಾ ಕೊತಾರಿ ಕಾಣಿಸಿಕೊಳ್ಳುವ ಕುರಿತು ಮಾತು ಹರಡಿತ್ತು. ಅದರ ಕತೆ ಏನಾಯಿತು ಅಂತಾ ಕೇಳಿದ್ರೆ.. ರಿಯಾಲಿಟಿಯಲ್ಲಿ ಜಾಸ್ತಿ ಬಿಚ್ಚುಡುಗೆಯ ಕುರಿತು ಒಪ್ಪಂದವಾಗಿತ್ತು. ಇದು ಯಾಕೋ ಸರಿ ಬಂದಿಲ್ಲ. ಗ್ಲಾಮರ್ ಇರೋದು ಬಿಚ್ಚುವಿಕೆಯಲ್ಲಿ ಅಲ್ಲ ಎಂಬುವುದು ನಿಶಾ ಕೊತಾರಿಯ ಗ್ಲಾಮರ್ ಮಾತು. ಟೋಟಲಿ ಸಿನ್ಮಾ ಇಲ್ಲದೇ ಹೋದರೂ ತಾನು ಬ್ಯುಸಿ ಲೈಪ್ನಲ್ಲಿ ಬದುಕುತ್ತಿದ್ದೇನೆ ಎಂಬ ನಿಶಾರ ಮಾತು ಬಹಳಷ್ಟು ಸಿನಿಮಾ ನಟ-ನಟಿಯರಿಗೆ ಅನ್ವಯಿಸುವಂತಿದೆ ಅಲ್ವಾ..?
…….
ಚಿತ್ರಗಳು: ಜಿ.ಕೆ.ಹೆಗಡೆ.................
No comments:
Post a Comment